ಓದುಗರು ಈ ಮೊದಲ ಮೂರು ಭಾಗಗಳನ್ನು ಓದಿದ ನಂತರ ಈ ಪೋಸ್ಟನ್ನು ಓದಬೇಕಾಗಿ ಪ್ರಾರ್ಥಿಸುತ್ತೇನೆ.
ತಾಯಮ್ಮ - ೧
ತಾಯಮ್ಮ - ೨
ತಾಯಮ್ಮ- ೩
*************
Z : ಈಗ ಏನಾಯ್ತು ?
ನಾನು : ಜಯಂತಿ ಒಂದು ವಾರ ಹೇಳದೇ ಕೇಳದೇ ಚಕ್ಕರ್ ಕೊಟ್ಟಳು. ಅಮ್ಮ ಇನ್ನೊಬ್ಬ ಕೆಲಸದವಳು ರಾಧ ಅನ್ನುವವಳನ್ನು ಕೆಲಸಕ್ಕೆ ಸೇರಿಸಿಕೊಂಡರು. ಅವಳಿಗೆ ಮನೆ ಕೆಲಸ ಮಾಡಿ ಅನುಭವವೇ ಇಲ್ಲ. ನಾವೇ ಎಲ್ಲಾ ಹೇಳಿಕೊಡಬೇಕಾಯ್ತು.
Z : ದೇವಾ !
ನಾನು : ಇನ್ನೇನ್ ಮಾಡೋದು ಹೇಳು. ಅವಳು ಬಾಲ್ಯ ವಿವಾಹದ ಮತ್ತೊಂದು ಎಕ್ಸಾಂಪಲ್ಲು. ಗಂಡ ಅಪ್ರತಿಮ ಕುಡುಕ. ಇಪ್ಪತ್ತೊಂದನೇ ಶತಮಾನದ ಮಾದರಿ ಹೆಣ್ಣಾಗಿ ಬದುಕಲಿಚ್ಛಿಸಿದ ಇವಳು ಗಂಡನನ್ನು ಬಿಟ್ಟು ಬೇರೆ ಮನೆ ಮಾಡಿದ್ದಳು. ಅವ ಅಲ್ಲಿಗೆ ದಿನಾ ರಾತ್ರಿ ಕುಡಿದು ಬಂದು ರಂಪ ಮಾಡುತ್ತಿದ್ದ. ಕಷ್ಟ ಎಂದು ಹೇಳಿಕೊಂಡಳಲ್ಲ ಎಂದು ನಾವು ಸ್ವಲ್ಪ ಜಾಸ್ತಿ ಸಂಬಳ ಕೊಡಲು ರೆಡಿಯಾದೆವು.
Z :ಹ್ಮ್ಮ್ಮ್....
ನಾನು : ಒಂದು ವಾರ ಎಲ್ಲಾ ನೆಟ್ಟಗಿತ್ತು. ಆಮೇಲೆ ನನಗೆ ಡಾಮೆಕ್ಸ್ ಫೆನಾಯಿಲೇ ಬೇಕು...ಗುಂಜೆಲ್ಲಾ ಆಗಲ್ಲ, ಸ್ಕಾಚ್ ಬ್ರೈಟೇ ಆಗ್ಬೇಕು, ಬಟ್ಟೆಗೆ ಸರ್ಫೇ ಆಗ್ಬೇಕು ಅಂತೆಲ್ಲಾ ಕ್ಯಾತೆ ತೆಗೆದಳು. ಅಮ್ಮನ ಕಣ್ಣು ಕೆಂಪಾಯ್ತಾದರೂ, ಅವರಿಗೆ ಹುಶಾರು ತಪ್ಪಿದರೆ ಮನೆ ದಿಕ್ಕು ತಪ್ಪುತ್ತದೆ ಎಂಬ ಒಂದೇ ಕಾರಣದಿಂದ ಎಲ್ಲವನ್ನು ತಂದದ್ದಾಯ್ತು. ಸ್ವತಃ ಸ್ವಯಂ ಸಾಕ್ಷಾತ್ ನಾನೇ ಸೂಪರ್ ಮಾರ್ಕೆಟ್ಟಿಗೆ ಹೋಗಿ ಎಲ್ಲಾ ತಂದೆ.
Z : ಆಮೇಲೆ ?
ನಾನು : ಕೆಲಸದಲ್ಲಿ ಒಂದು ಚೂರು ಅಚ್ಚುಕಟ್ಟಿರಲಿಲ್ಲವಾದ್ದರಿಂದ ಅಮ್ಮನ ಕೋಪ ನೆತ್ತಿಗೇರಿತು. ಒಂದೇ ವಾರದಲ್ಲಿ ಅರ್ಧ ಕೆ. ಜಿ ಸರ್ಫು ಖಾಲಿಯಾಗಿದ್ದಕ್ಕೆ ನಾನು ಸಿಡಿಮಿಡಿ ಅಂದೆ. ದಿನಕ್ಕೊಂದು ಸಬೀನಾ ಪ್ಯಾಕೆಟ್ಟು ಖರ್ಚಾಗುತ್ತಿತ್ತು. ಪಾತ್ರೆಯ ಫಳ ಫಳ ಅಷ್ಟಕ್ಕಷ್ಟೇ. ಡಾಮೆಕ್ಸ್ ಫೆನಾಯಿಲಿನ ಅಲರ್ಜಿಯಿಂದ ಅಮ್ಮನ ಗಂಟಲು ಕಟ್ಟಿ ಎರಡು ಸಂಗೀತ ಕಾರ್ಯಕ್ರಮ ಕ್ಯಾನ್ಸೆಲ್ ಮಾಡುವ ಮಟ್ತಿಗೆ ಹೋಗಿತ್ತು. ಕೊನೆಗೆ ಹೇಗೋ ಮ್ಯಾನೇಜ್ ಮಾಡಿದರು. ಅಷ್ಟೇ ಅಲ್ಲದೇ ಇವಳು ಪಾತ್ರೆಗಳೆಲ್ಲವನ್ನು ಜಜ್ಜಿ ಹಾಕಿದ್ದಳು. ತವರು ಮನೆಯ ಪಾತ್ರೆ, ಇಪ್ಪತ್ನಾಲ್ಕು ವರ್ಷದಿಂದ ನೆಟ್ಟಗಿದ್ದವು ಸೊಟ್ಟಗಾದವಲ್ಲ ಎಂದು ಅಮ್ಮ ಅಜ್ಜಿಗೆ ದಾವಣಗೆರೆಗೆ ಫೋನ್ ಮಾಡಿ ಗೋಳು ಹೇಳಿಕೊಂಡರು. ಅಜ್ಜಿ ಕೊಟ್ಟಿದ್ದ ಆರು ದೊಡ್ಡ ಲೋಟದ ಸೆಟ್ಟಿನಲ್ಲಿ ಐದು ನಾಪತ್ತೆ. ಮತ್ತೂ, ಅಣ್ಣ ತಂದಿದ್ದ ಜರ್ಮನ್ ಕಂಪನಿಯ ಚಾಕು ಕೂಡಾ ಅವಳು ಕದ್ದಿದ್ದಳು. ಬೇರೆ ಹೊಸ ಚಾಕು ತರಲು ಅಣ್ಣನಿಗೆ ಟೈಂ ಇರಲಿಲ್ಲ. ನಾನೇ ಹೋಗಿ ತಂದಿದ್ದಾಯ್ತು. ಅದನ್ನು ಪಳಗಿಸಲು ನಮಗೆ ಕಷ್ಟ ಆಯ್ತು. ಇತ್ತ ಇವಳು ನಾವು ಇವಳ ಕಳ್ಳತನವನ್ನು ಹಿಡಿಯುತ್ತೇವೆ ಎಂದು ಭಯ ಪಟ್ಟು ಒಂದು ವಾರ ಚಕ್ಕರ್ ಹಾಕಿದಳು. Princess of the ocean ಆದ ನಾನು ಮತ್ತೆ ಎಂದಿನಂತೆ Queen of kitchen ಆಗಿ, ಪಾತ್ರೆ ಮತ್ತು ಕಸ ಗುಡಿಸಿ ಸಾರಿಸಿ ಎಲ್ಲ ನೋಡಿಕೊಂಡಿದ್ದಾಯ್ತು. ಇದು ಸಾಲದು ಅಂತ ಹದಿನೈದು ವರ್ಷಗಳ ನಮ್ಮ ಐ ಎಫ್ ಬಿ ವಾಶಿಂಗ್ ಮಷೀನು ಕೆಟ್ಟು ಹಾಳಾಗಿ ಹೋಯ್ತು.
Z : ರಾಮಾ !
ನಾನು : ಅಮ್ಮನಿಗೆ ನಾನು ಕೆಲಸ ಮಾಡಿದರೆ ಪಿಎಚ್.ಡಿ ಗೆ ಓದಲಿಕ್ಕಾಗುವುದಿಲ್ಲ ಅಂತ ಬೇಜಾರು. ಕೆಲಸ ಮಾಡಲು ಹೋಗಿ ಅವರಿಗೆ ಹುಶಾರು ತಪ್ಪುತ್ತಿತ್ತು. ಅವರಿಗೆ ಹುಶಾರು ತಪ್ಪುವುದನ್ನು ತಪ್ಪಿಸಲು ನಾನು ಕೆಲಸ ಮಾಡುತ್ತಿದ್ದೆನಾದ್ದರಿಂದ ಓದು, ಬ್ಲಾಗಿಂಗ್ ಹಾಗೂ ಆರ್ಕುಟ್ಟಿಂಗ್ ಮೂರಕ್ಕು ಕತ್ತರಿ ಬಿತ್ತು. ನಮ್ಮ ಪೀಕಲಾಟ ನೋಡಲಾಗದೇ ಈ ಸರ್ತಿ ಅಣ್ಣನ ತಾಳ್ಮೆ ಮಿತಿ ಮೀರಿತು.ಅದಕ್ಕೆ ಅವರು ನಮ್ಮಿಬ್ಬರನ್ನು ಕರೆದು "ಅಡಿಗೆ ನೀನು ಮಾಡು, ಮಿಕ್ಕಿದ್ದೆಲ್ಲಾ ಲಕ್ಷ್ಮೀ ನೋಡ್ಕೊಳ್ಳಲಿ. ವೀಕೆಂಡ್ ನಲ್ಲಿ ಎಲ್ಲ ಕೆಲ್ಸ ಅಪರ್ಣ ನೋಡಿಕೊಳ್ಳತಕ್ಕದ್ದು. ನನ್ನ ಮತ್ತು ನಿನ್ನ ಬಟ್ಟೆ ಡ್ರೈ ಕ್ಲೀನ್ ಗೆ ಕಳಿಸೋಣ. ಮಕ್ಕಳು ಅವರ ಬಟ್ಟೆಯನ್ನು ಅವರವರೇ ಒಗೆದುಕೊಳ್ಳತಕ್ಕದ್ದು" ಎಂದು ಅಪ್ಪಣೆ ಮಾಡಿದರು.
Z : ಉಫ್ !!!!!!!
ನಾನು : ಬಟ್ಟೆ ಒಗೆಯುವುದನ್ನು ನಾನು ಎಂಜಾಯ್ ಮಾಡುತ್ತಿದ್ದೆ. ಸ್ಕೂಲಿನಲ್ಲಿದ್ದಾಗ ನಮ್ಮ ಬಟ್ಟೆ ನಾನೇ ಒಗೆಯುತ್ತಿದ್ದೆ. ಬಟ್ಟೆ, ಶೂಸು, ಲಂಚ್ ಬಾಸ್ಕೆಟ್ಟು ಎಲ್ಲಾ...ನನಗೇನು ತೊಂದರೆ ಆಗಲಿಲ್ಲ. ಕಷ್ಟಕ್ಕೆ ಸಿಕ್ಕಿದ್ದು ಅಪರ್ಣ. ಅವಳಿಗೆ ಬಟ್ಟೆ ಒಗೆದು ಗೊತ್ತಿಲ್ಲ. "ಈಗಲಾದರೂ ಕಲ್ತ್ಕೋ " ಅಂತ ನಿರ್ದಾಕ್ಷಿಣ್ಯವಾಗಿ ನಾನು ಅಪ್ಪಣೆ ಮಾಡಿದೆ.
Z : ಹೆ ಹೆ...
ನಾನು : ರಾಧಾ ಒಂದು ವಾರದ ನಂತರ ಮನೆಯ ಮುಂದೆ ಪ್ರತ್ಯಕ್ಷವಾಗಿ " ಅಮ್ಮ...ಕ್ಷಮಿಸಿ, ಮನೆಯಲ್ಲಿ ಕಷ್ಟ..." ಎಂದು ಪ್ರವರ ಊದತೊಡಗಿದಳು. ಅಮ್ಮ ಮೊದಲೇ ಪಾತ್ರೆಗಳ ಶೋಚನೀಯ ಸ್ಥಿತಿ ಕಂಡು, ತಮ್ಮ ಅತಿಪ್ರೀತಿಯ ಚಾಕು ಮತ್ತು ಲೋಟ ಕಳೆದುಕೊಂಡು ಹೈರಾಣಾಗಿದ್ದರು. ಅಣ್ಣ ಕೂಡಾ ಅವಳ ದುಡ್ಡು ಚುಕ್ತಾ ಮಾಡಿ ಅವಳನ್ನು ಕಳಿಸಿಬಿಡಬೇಕೆಂದು ಆಜ್ಞೆ ಮಾಡಿದ್ದರು. ಅವಳು ಯಥಾಪ್ರಕಾರ ಗೋಳಾಡಿದಳು. ಆದರೆ ಅಮ್ಮ ನಂಬಲಿಲ್ಲ. ನಮ್ಮ ಮನೆಯಲ್ಲಿ ಮಾತ್ರವಲ್ಲದೇ ಎದುರು ಮನೆ, ಪಕ್ಕದ ಮನೆಯವರೂ ಇವಳ ಕೆಲಸದ ಬಗ್ಗೆ ಅಪಸ್ವರ ಎತ್ತಿದ್ದರು. ಅವಳ ಕಲ್ಯಾಣ ಗುಣಗಳ ಪರಿಚಯ ಎಲ್ಲರಿಗೂ ಆಗಿತ್ತು. ಜಾಸ್ತಿ ಸಂಬಳ ಕೊಟ್ಟು ಚೆನ್ನಾಗಿ ಕೆಲಸ ಮಾಡದ ಕೆಲಸದವರಿಗಿಂತಾ ನಾವೇ ಹೇಗೋ ಮಾಡಿಕೊಳ್ಳುವುದು ಸರಿಯೆಂದು ಗೇಟ್ ಮೀಟಿಂಗ್ ನಲ್ಲಿ ಇವರೆಲ್ಲ ನಿರ್ಧರಿಸಿದ್ದರು.
Z : ಗೇಟ್ ಮೀಟಿಂಗ್ ನಡೆಯುತ್ತಿದ್ದಾಗ ತಾವೇನು ಮಾಡುತ್ತಿದ್ದಿರಿ ?
ನಾನು : ಪಾತ್ರೆ ತೊಳೆಯುತ್ತಿದ್ದೆ.
Z : ಮುಂದೆ ?
ನಾನು : ಅವಳನ್ನು ಓಡಿಸಿದ್ದಾಯ್ತು. ಮಾರನೇ ದಿನ ಬೆಳಿಗ್ಗೆ ನಮ್ಮ ಕಾರ್ ಡ್ರೈವರ್ ಒಂದು ಆಶ್ಚರ್ಯಕರ ಸುದ್ದಿ ತಂದ. ತಾಯಮ್ಮ ಡಾಕ್ಟರ್ ಆಂಟಿ ಮನೆಗೆ ಬಂದಿದ್ದಾರೆ ಅಂತ !
ನಾನು ಆಂಟಿ ಮನೆಗೆ ಶರವೇಗದಲ್ಲಿ ಓಡಿದೆ. ಆದರೆ ತಾಯಮ್ಮ ಅಷ್ಟೊತ್ತಿಗಾಗಲೇ ಹೊರಟು ಹೋಗಿದ್ದರು. ಅವರು ನಾಳೆ ಬಂದರೆ ನಮ್ಮ ಮನೆಗೆ ದಯವಿಟ್ಟು ಕಳಿಸಿಕೊಡಿ ಎಂದು ಬೇಡಿಕೊಂಡೆ. ಅವರು ಖಂಡಿತಾ ಕಳಿಸುವೆವು ಅಂದರು.
Z : ವಾಹ್ !
ನಾನು : ಮಾರನೆಯ ದಿನ ತಾಯಮ್ಮ ಪ್ರತ್ಯಕ್ಷ ! ನಾವು " ಏನ್ ತಾಯಮ್ಮ, ನೀನು ಕೆಲಸಕ್ಕೆ ಮತ್ತೆ ಬರುತ್ತಿದ್ದೀಯ ಅಂತ ಹೇಳೋದಲ್ವಾ? " ಅಂತ ಕೇಳಿದೆವು. ಅದಕ್ಕೆ ಅವರು " ಬೇರೆ ಕೆಲ್ಸದವರ ಹೊಟ್ಟೆ ಹೊಡೆಯಕ್ಕೆ ನಂಗೆ ಇಷ್ಟಾ ಇರ್ಲಿಲ್ಲ " ಅಂತ ಅಂದರು. ನಾವು " ಅಯ್ಯೋ ತಾಯಮ್ಮ ! ಒಂದು ಮಾತು ಹೇಳೋದಲ್ವ ? ನಾವು ನಿಮ್ಮನ್ನೇ ಇಟ್ಕೋತಿದ್ವಿ" ಎಂಡು ಹಳೆಯ ಕೆಲಸಗಾರರ ಮಹತ್ಸಾಧನೆಗಳನ್ನ ವರ್ಣಿಸಿದೆವು. ಅವರು ಸಿಕ್ಕಾಪಟ್ಟೆ ಬೇಜಾರ್ ಮಾಡಿಕೊಂಡರು.
Z : ಅವರು ಹೇಗಿದ್ದಾರೆ ಈಗ ?
ನಾನು : ಕೇಳ್ಬೇಡ. ಕೆಲ್ಸ ಮಾಡದೇ ಇದ್ದ್ರೆ ಕೂಳಿಲ್ಲ ಅನ್ನೋ ಅಸಹಾಯಕತೆಗೆ ಪಾಪ ಹೇಗೋ ಸುಧಾರ್ಸ್ಕೊಂಡೀದಾರೆ... ಗಂಡ ಫ್ಯಾಕ್ಟರಿಲಿ ಬಿದ್ದು ಮಂದಿಯ ಚಿಪ್ಪು ಮುರಿದಿದೆ. ಆಪರೇಷನ್ ಗೆ ದುಡ್ಡಿಲ್ಲ. ಚೀಟಿಯ ದುಡ್ಡನ್ನ ಮಗನ ಕಾಲೇಜಿಗೆ, ಒಡವೆಗೆ ಇಟ್ಟಿದ್ದ ದುಡ್ಡನ್ನ ಮಗಳ ಹೈ ಸ್ಕೂಲಿಗೆ ಮತ್ತು ಹಳ್ಳಿಯ ಗೇಯ್ಮೆಯ ಪಾಲಲ್ಲಿ ಬಂದ ದುಡ್ಡಲ್ಲಿ ಅವರು ಆಪರೇಶನ್ ಮಾಡಿಸಿಸೊಂಡು ಔಷಧಿ ಖರ್ಚಿಗೆ ನಾವು ಕೊಟ್ಟ ದುಡ್ಡು ಬಳಸಿದ್ದಾರೆ. ಗಂಡನ ಆಪರೇಶನ್ ಗೆ ದುಡ್ಡಿಲ್ಲ ಅಂದಾಗ ನಾವೆಲ್ಲಾ ಮತ್ತೆ ಒಂದೊಂದು ಸಾವಿರ ರುಪಾಯಿ ದುಡ್ಡು ಕೊಟ್ಟು ಆಪರೇಷನ್ ಗೆ ಕಳಿಸಿದೆವು. ಡಾಕ್ಟರ್ ಆಂಟಿ ಬೌರಿಂಗ್ ಆಸ್ಪತ್ರೆಯ ವೈದ್ಯರ ಪರಿಚಯ ಮಾಡಿಸಿದರು. ಆಪರೇಶನ್ ಗೆ ಪೈಸ ತೆಗೆದುಕೊಳ್ಳಲಿಲ್ಲ ವೈದ್ಯರು. ಆದರೆ ಕ್ಲೀನರ್, ವಾರ್ಡ್ ಬಾಯ್ ಗಳ ಲಂಚಕ್ಕೆ ಹಣ ಹೊಂದಿಸಲು ಇವರು ಸುಸ್ತಾಗಿ ಹೋದರಂತೆ. ಬಡವರ ರಕ್ತ ಹೀರುವ ಇಂಥಾ ಆಸ್ಪತ್ರೆಯ ಸಿಬ್ಬಂದಿ ವರ್ಗಕ್ಕೆ ತಾಯಮ್ಮ ಧಿಕ್ಕಾರ ಕೂಗಿ ಬಂದಿದ್ದಾರೆ. ದೇವರಂಥಾ ವೈದ್ಯರಿದ್ದರೂ ಇಂತಹ ಅಮಾನವೀಯ ವರ್ತನೆಯುಳ್ಳ ಸಿಬ್ಬಂದಿವರ್ಗದ ಮೇಲೆ ತಾಯಮ್ಮ ಕೆಂಡಕಾರಿ ಬಂದಿದ್ದಾರೆ.
Z : what a pity !
ನಾನು : Exactly ! ನೋಡು, ಎಂಥೆಂಥಾ ಆಶ್ವಾಸನೆಗಳನ್ನ ಕೊಡ್ತಾರೆ ರಾಜಕಾರಿಣಿಗಳು...ಸಚಿವರು, ಅಧಿಕಾರಿಗಳು ಎಲ್ಲ...ಗವರ್ನಮೆಂತ್ ಆಸ್ಪತ್ರೆಗಲಲ್ಲಿ ಕನಿಷ್ಟಮಟ್ಟದ ಶುಚಿತ್ವವನ್ನು ಕಾಪಾಡಲು ಅಧಿಕಾರಿಗಳಿಗೆ ಸಾಧ್ಯವಿಲ್ಲವೇ ? ತಾಯಮ್ಮ ಹೀಗೆ ಕೇಳಿದರು ನನ್ನನ್ನ- "ಅಲ್ಲವ್ವಾ...ಅವ್ರುಗಳ್ ಮನೇನ ಪಳಪಳ ಅಂತ ಹೊಳೆಯೋ ಹಾಗೆ ಇಟ್ಕೋತಾರಲ್ಲ...ಅವ್ರು ದುಡ್ಯೋ ಜಾಗನೂ ಅಂಗೇ ಇರ್ಬೆಕಲ್ವ್ರಾ ? ಏನ್ ಓದಿ ಏನ್ ಪ್ರಯೋಜ್ನ ಏನ್ ಔಶ್ದ ಹಾಕ್ ಏನ್ ಉಪ್ಯೋಗ ಜಾಗನೇ ಕಿಲೀನಾಗಿಲ್ಲಾ ಅಂದ್ರ?" ನಾನು ಏನೂ ಉತ್ತರಿಸಲಾಗದೇ ಸುಮ್ಮನಿದ್ದೆ.
Z : ಛೆ!
ನಾನು : ಈಗ ತಾಯಮ್ಮನ ಗಂಡ ಮನೆಗೆ ಬಂದಿದ್ದಾರೆ. ನಮಗೆ ನಾಳೆ ಬರಕ್ಕೆ ಆಗತ್ತೆ ಅಥ್ವಾ ಆಗಲ್ಲ ಅನ್ನೋದನ್ನ ಮೊದಲೇ ತಿಳಿಸುತ್ತಾರೆ. ಮೊದಲಿನಂತೆ ಅವರಿಗೆ ಹೆಚ್ಚು ಕೆಲಸ ಮಾಡಕ್ಕೆ ಆಗಲ್ಲ ಆದ್ದರಿಂದ ನಮ್ಮ ಬಟ್ಟೆಗಳನ್ನು ನಾವೇ ಒಗೆಯುತ್ತಿದ್ದೇವೆ. ಅವರಿಗೆ ಸ್ವಲ್ಪವೇ ಬಟ್ಟೆ ಹಾಕಲಾಗತ್ತೆ. ಅವರು ಮೂರೇ ಮೂರು ಮನೆಗಳನ್ನು ಒಪ್ಪಿಕೊಂಡು, ಕಾಯಿಯ ಅಂಗಡಿ ಕೂಡಾ ನಡೆಸುವ ಯೋಜನೆ ಹಾಕಿದ್ದಾರೆ. ಗಂಡನಿಗೆ ಇನ್ನು ಮುಂದೆ ನಡೆಯುವುದು ಕಷ್ಟ ಆಗುತ್ತದೆಯಾದ್ದರಿಂದ ಕುಳಿತು ಮಾಡಲು ಈ ವ್ಯಾಪಾರ ಸರಿ ಎಂದು ನಮ್ಮೊಡನೆ ಹೇಳಿಕೊಂಡರು. ಅವರು ಮನೆಯ ಕೆಲಸಕ್ಕೆ ವಾಪಸ್ ಬಂದರಲ್ಲಾ...ನಮಗೆ ಅದೇ ಸಂತೋಷ.
Z :True.
ನಾನು : ಇದು ತಾಯಮ್ಮನ ಕಥೆ. ಲಕ್ಷಕ್ಕೊಬ್ಬರು ಇಂಥಾ ಕೆಲ್ಸದವರು ಸಿಕ್ಕೋದು ಅನ್ನಿಸತ್ತೆ. ನಾವು ಅದೃಷ್ತವಂತರು. ಅಲ್ವಾ ?
Z :ಹು.
ಜೀವನದೊಂದಿಗಿನ ನಮ್ಮ ಮಾತು lifetime ! ಇದರಲ್ಲಿ incoming -ಊ free outgoing -ಊ free !
ನನ್ನ ज़िंदगीಯೊಂದಿಗಿನ nonstop ಗುಸುಗುಸುವನ್ನು ಇಲ್ಲಿ ಬಿಚ್ಚಿಟ್ಟಿದ್ದೇನೆ.
Showing posts with label stories form the past. Show all posts

Saturday, November 22, 2008
Thursday, July 24, 2008
ತಾಯಮ್ಮ- ೩
ನಾನು : ಹಾ....ಎಲ್ಲಿದ್ದೆ ಕಥೆ ಲಿ ?
Z : ಅದೇ...ತಾಯಮ್ಮ ಬೇರೆ ಕೆಲ್ಸದವಳನ್ನ ಕರ್ಕೊಂಡು ಬರ್ತಿನಿ ಅಂದಿದ್ದು.
ನಾನು : ಹಾ...ಯೆಸ್. ಅವರು ಹೋದ ರಾತ್ರಿ ಮಾತಾಮಣಿಯರು ಹೈ ಕಮಾಂಡ್ ಬಳಿ ತಾಯಮ್ಮನ ಪುರಾಣವನ್ನು ಎಪಿಸೋಡ್ ಬೈ ಎಪಿಸೋಡ್ ಹೇಳಿ ತಾಯಮ್ಮನಿಗೆ ದುಡ್ಡು ಕೊಡಲು ದುಡ್ಡು sanction ಮಾಡಿ ಎಂದು ಕೇಳಿದರು. ಹೈ ಕಮಾಂಡ್ ಊಟ ಮಾಡುವಾಗ ಯೋಚನೆ ಮಾಡಿ, ಬೇರೆ ಕೆಲ್ಸದವಳು ತಾಯಮ್ಮನ ಸಂಬಳಕ್ಕೆ ಕೆಲಸ ಮಾಡುವುದಾದರೆ ಇಟ್ಕೊಳ್ಳಬೇಕೆಂಡು ಆಜ್ಞೆ ಮಾಡಿತು. ನಾರಿಮಣಿಯರು ನಿರಾಕರಿಸಲಿಲ್ಲ. ತಾಯಮ್ಮನ ಐದು ಸಾವಿರ ರೆಡಿಯಾಯಿತು.
Z : oho...ಆಮೇಲೆ ?
ನಾನು : ಮಾರನೆಯ ದಿನ ತಾಯಮ್ಮನೊಂದಿಗೆ ವಯಸ್ಸಾದ ಹೆಂಗಸೊಬ್ಬಳು ಬಂದಳು. she must be in her mid 50's. ಅವಳ ಹೆಸರು ಅಲಮೇಲು ಅಂತ. ತಮಿಳಿನವಳು. ಕನ್ನಡ ಅರ್ಥ ಮಾಡಿಕೊಳ್ಳಬಲ್ಲಳು...ಆದ್ರೆ ಕನ್ನಡ ಮಾತಾಡಳು. ನಮ್ಮ ಅಮ್ಮನಿಗೆ ತಮಿಳು ಮಾತಾಡಲು ಬರದು. ಅರ್ಥ ಮಾಡಿಕೊಳ್ಳಬಲ್ಲರು. ತಾಯಮ್ಮ ಇವಳು ನಿಮ್ಮ ಮನೆಗೆ ಸರಿಯಾದವರೆಂದರು. ಅದೇ ಸಮಯಕ್ಕೆ ನಾನು ಲ್ಯಾಬ್ ಇರಲಿಲ್ಲವಾದ್ದರಿಂದ ಮನೆಗೆ ಬಂದೆ. ಅಮ್ಮನ ಕನ್ನಡ ಪ್ರಶ್ನೆ ಮತ್ತು ಅವರ ತಮಿಳಿನ ಉತ್ತರ ನಡಿಯುತ್ತಿತ್ತು. ಇಬ್ಬರು ಸರೀಗಿದ್ದಾರೆಂದು ನನಗನ್ನಿಸಿತು. ಒಳಗೇ ನಕ್ಕೆ. ಸರಿ ಬಂದ ದಿನವೇ ಇವರು ಕೆಲ್ಸ ಮಾಡಲು ಶುರು ಮಾಡಿದರು.
Z : ಸದ್ಯ...
ನಾನು : wait wait....there is more to come. ತಾಯಮ್ಮ ಆವತ್ತೇ ಅಸ್ಪತ್ರೆಗೆ ಸೇರಿದರೆಂದು ಫೋನ್ ಬಂದಿತು. ನಾವೆಲ್ಲ ಅವಳ ಕ್ಷಿಪ್ರ ಚೇತರಿಕೆಗೆ ಪ್ರಾರ್ಥನೆ ಮಾಡಿದೆವು. ಅಲಮೇಲು ನಮ್ಮ ಮನೆಯಲ್ಲಿ ಒಂದು ತಿಂಗಳು ಒಂದು ದಿನವೂ ತಪ್ಪಿಸದೇ ಬರುತ್ತಿದ್ದರು. ಆದರೆ ಅವರು ತಾಯಮ್ಮನಷ್ಟು ಚೆನ್ನಾಗಿ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿರಲಿಲ್ಲ. ಹೇಳಿ ಹೇಳಿ ಮಾಡಿಸಬೇಕಿತ್ತು. ವಯಸ್ಸಾದವರೆಂದು ನಾವೂ ಮೆಲ್ಲಗೇ ಹೇಳಿ ಹೇಳಿ ಮಾಡಿಸುತ್ತಿದ್ದೆವು.
ನಮ್ಮಮ್ಮ ಬೆಳಿಗ್ಗೆ ಒಂದು ದಿನ ಎಲ್ಲೋ ಹೋಗಬೇಕಿತ್ತು. ಎದುರು ಮನೆಯಲ್ಲಿ ಕೀ ಕೊಟ್ಟು ಅಲಮೇಲು ಕೈಲಿ ಪಾತ್ರೆ ತೊಳಿಸಿ, ಕಸ ನಾನೆ ಗುಡಿಸಿ ಮನೆ ಸಾರಿಸಿದ್ದೇನೆ. ಹಿತ್ತಲಲ್ಲೇ ಪಾತ್ರೆ ಇದೆ..ಪಾತ್ರೆ ತೊಳಿಸಿಬಿಡಿ ಸಾಕು ಎಂದು ಹೇಳಿ ಹೋಗಿದ್ದರು. ಎದುರು ಮನೆಯವರೂ ಹಾಗೆಯೇ ಮಾಡಿಸಿದ್ದರು. ಆದರೆ ಯಾವುದೋ ಮಾಯೆಯಲ್ಲಿ ಪಾತ್ರೆಗಳು ಕೆಲವು, ಎರಡು ಸೌಟು ನಾಪತ್ತೆಯಾಗಿದ್ದವು. ನಮಗದು ತಿಳಿದಿದ್ದು ಮೂರು ದಿನ ಆದಮೇಲೆ...ಯಾಕಂದರೆ ನಮ್ಮಮ್ಮ ಅದನ್ನ ನೋಟೀಸ್ ಮಾಡಿದ್ದೇ ಆವತ್ತು. ಅಲಮೇಲು ಅಂದಿನಿಂದ ಕೆಲಸಕ್ಕೇ ಬಂದಿರಲಿಲ್ಲ. ಅವರಿಗೆ ಅಸ್ಥಮಾ ತೊಂದರೆ ಇದ್ದಿದ್ದು ಆವತ್ತು ಹೇಳಿದ್ದರು. ಆದರೆ ನಾನು ಏನು ಮಾಡಿರೂ ತಪ್ಪಿಸುವುದಿಲ್ಲ ಎಂದು ಹೇಳಿದ್ದರು ಸಹ. ಸರಿ ನಮ್ಮಮ್ಮ ಪಾತ್ರೆ ಹೋದಮೇಲೆ ನಮಗೆ ರೆಡ್ ಅಲೆರ್ಟ್ ಕೊಟ್ಟರು..ನಮ್ಮ earrings, hangings ಎಲ್ಲಾ ಸರಿಗಿದಿಯಾ ಚೆಕ್ ಮಾಡಿಕೊಳ್ಳೀ ಅಂತ. ನಮಗೆ ಗಾಬರಿಯಾಯ್ತು. ಎಲ್ಲ ಕೂಲಂಕುಷವಾಗಿ ನೋಡಿದೆವು. ನೆಟ್ಟಗಿದ್ದವು. ಅಮ್ಮನದ್ದೂ ಸರಿಗಿದ್ದವು. ಪಾತ್ರೆ ಗಾಯಬ್ಬಾದ ದಿನದಂದೇ ನಾವು ಹುಷಾರಾದೆವು. ಎಲ್ಲ artificial ವೊಡವೆಗಳನ್ನು ಮೊದಲು mirror wardrobe ನಲ್ಲಿ ಇಡುತ್ತಿದ್ದವರು ಈಗ ತಿಜೋರಿಯಲ್ಲಿಡಲಾರಂಭಿಸಿದೆವು. ಆದರೆ, ಅಲಮೇಲು ನಾಪತ್ತೆ.
Z : sad !
ನಾನು : yes ! ತಾಯಮ್ಮನ ಮನೆ ಗೊತ್ತಿಲ್ಲ, ಆಪರೇಷನ್ ಆದ ದಿನ ಆಪರೇಷನ್ ಸಕ್ಸೆಸ್ಸ್ ಅಂತ ಫೋನ್ ಮಾಡಿದ್ದ ಅವರ ಮಗ. ಊರಿಗೆ ಹೊರಟರೇನೋ...ಏನೂ ಗೊತ್ತಿಲ್ಲ. ಬೇರೆ ಕೆಲಸದವಳಿಲ್ಲ, ನನಗೆ ಇಂಟರ್ನಲ್ಸ್, ತಂಗಿಗೆ ಹತ್ತನೇ ಕ್ಲಾಸಿನ ಫೈನಲ್ ಪರೀಕ್ಷೆ. ಅಮ್ಮನೇ ಪಾಪ ಎಲ್ಲ ಕೆಲ್ಸ ಮಾಡಿಕೊಳ್ಳುತ್ತಿದ್ದರು. ನಾವು ಅಸಹಾಯಕರಾಗಿದ್ದೆವು.
Z : ಕಷ್ಟಗಳು ಒಟ್ಟೊಟ್ಟಿಗೇ ಬರೋದು....ಅಮೇಲೆ ?
ನಾನು : ಹು ! ಹೀಗೆ ಒಂದು ತಿಂಗಳು ಕಳೇಯಿತು. ಜೂನ್ ನಲ್ಲಿ ಒಂದು ದಿನ ಹಿಂದಿನ ರಸ್ತೆಯ ಮನೆಯವರು ಒಬ್ಬರು ಮತ್ತೊಬ್ಬ ಕೆಲಸದವರನ್ನು ಹುಡುಕಿ ಕೊಟ್ಟರು. ಅವರು ವಿಪರೀತ ಚಿಕ್ಕವರು. ಅವರ ತಾಯಿಗೆ ಐದು ಜನ ಹೆಣ್ಣು ಮಕ್ಕಳು. ಇವರಿಗೆ ೧೪ ವರ್ಷಕ್ಕೇ ಮದುವೆ, ವಯಸ್ಸು ಇಪ್ಪತ್ತು...ಮೂರು ಮಕ್ಕಳು. ಒಂದೂ ಆರೋಗ್ಯದಿಂದಿಲ್ಲ. ಒಂದು ದಿನ ಬಂದರೆ ಇನ್ನೊಂದು ದಿನ ಮಗುವಿಗೆ ಹುಷಾರಿಲ್ಲವೆಂದು ನಾಪತ್ತೆ. ನಾವೇ ಅವರ ತಂಗಿಯರಿಗೆ, ಅವರಿಗೆ ನಮ್ಮ ಹಳೆಯ ಬಟ್ಟೆ, ಸೀರೆ ಮುಂತಾದವುಗಳನ್ನು ಕೊಟ್ಟೆವು. ಮಳೆಗಾಲ, ಹಾಕಿಕೊಳ್ಳಲಿ ಅಂತ. ಕೆಲಸ super ಆದರೆ attendance irregular :( . ನಾವು ದಿನಾ ಹತ್ತುವರೆವರೆಗೂ ಕಾಯುವುದು, ಅವರು ಬರಲಿಲ್ಲವೆಂದರೆ ನಾನು ಪಾತ್ರೆ ತೊಳೆದು, ಗುಡಿಸಿ ಸಾರಿಸಿ ಮಾಡುವುದು...ಇಷ್ಟು ನನ್ನ ರೊಟೀನು ಸದ್ಯಕ್ಕೆ. ಆದ್ದರಿಂದ ಟೈಮ್ ಪಾಸ್ ಆಗುತ್ತಿದೆ...ಕೆಲ್ಸದಲ್ಲಿ.
Z : hmm....
ನಾನು : ಇದಲ್ಲದೇ ಇನ್ನೊಂದು ತೊಂದರೆ ಇದೆ. ಈ ಹೊಸ ಕೆಲಸದವರ, (ಅವರ ಹೆಸರು ಜಯಂತಿ) ತಂಗಿಯರು ಇನ್ನೂ ಚಿಕ್ಕ ಮಕ್ಕಳು. ಇವರು ಬರಲಾಗದಿದ್ದರೆ ಅವರನ್ನು ಕಳಿಸುತ್ತಾರೆ. We are strictly against child labor. ಇವರ ಕೈಲಿ ಏನು ಕೆಲಸ ಮಾಡಿಸುವುದು ? ಹೇಗೆ ಮಾಡಿಸುವುದು ? ಪುಟ್ಟ ಪುಟ್ಟ ಕೈಗಳು, ಕೈಯಲ್ಲಿ ಪೆನ್ಸಿಲ್ಲು ಹಿಡಿಯಬೇಕಾದವು ಪಾತ್ರೆ ತೊಳೆಯುವ ಗುಂಜನ್ನು ಹಿಡಿಯುವುದನ್ನು ನೋಡಿದರೆ ಯಾರಿಗೆ ಏನನ್ನಿಸತ್ತೋ ಬಿಡತ್ತೋ...ನನಗಂತೂ ಸಂಕಟವಾಗುತ್ತದೆ. ಯಾಕಂದರೆ ನನಗೆ ಅವರಿಗಿಂತ ಸ್ವಲ್ಪವೇ ದೊಡ್ಡ ತಂಗಿಯಿದ್ದಾಳೆ. ನಾವು ಸುಮ್ಮನೆ ಕೂರುವುದು, ನಮಗಿಂತ ಚಿಕ್ಕ ಚಿಣ್ಣರು ಅವರು ದುಡಿಯುವುದು ಎಷ್ಟು ಸರಿ ಹೇಳು ? ಶಾಲೆಗೆ ರಜೆ ಹಾಕಿ ಕೆಲಸ ಮಾಡಿ ನಾವು ಕೊಡುವ ಹತ್ತು ರುಪಾಯಿಯನ್ನು ಆಸೆಗಣ್ಣಿನಿಂದ ನೋಡುವ ಅವರ ಅಸಹಾಯಕತೆ ನನ್ನನ್ನು ಹತಾಶಗೊಳಿಸುತ್ತದೆ Z ....
Z : ನಿಜ...ತುಂಬಾ ನಿಜ.
ನಾನು : ಆದ್ದರಿಂದಲೆ ನಾನು ಅವರು ಬಂದರೆ ಕೆಲಸ ಮಾಡಲೇ ಬೇಡಿ ಎಂದು ಹೇಳಿದೆ. ಆದರೆ ಅವರು ಇಲ್ಲ ನಾವು ಮಾಡಿಯೇ ಮಾಡುತ್ತೇವೆಂದು ಹಠ ಹಿಡಿದರು. ಗುಡಿಸಿ ಸಾರಿಸಿ ಮಾಡಿಸದೆ, ಬರೀ ಪಾತ್ರೆ ತೊಳೆಯಿರೆಂದು ಹೇಳಿದೆ. ಬೆಂಗಳೂರಿನಲ್ಲಿ ಹಣವನ್ನು ನೀರಿನಂತೆ ಚೆಲ್ಲುವ ಜನರೊಂದು ಕಡೆ, ಪುಡಿಗಾಸಿಗೂ ಹೋರಾಡಿ, ಆಕಾಶಕ್ಕೆ ಕೈಚಾಚಿ, ಬೊಗಸೆಯಲ್ಲಿ ಸಿಕ್ಕಷ್ಟನ್ನು ಬಚ್ಚಿಟ್ಟು ಮುಚ್ಚಿಟ್ಟು ಕಾಪಾಡುವ ಜನ ಇನ್ನೊಂದು ಕಡೆ, ಇಂಥವರೆಲ್ಲರ ಮಧ್ಯ ಕಿಂಕರ್ತವ್ಯಮೂಢಳಾದ ನಾನು !
ನನಗೆ ಕೆಲ್ಸ ಮಾಡಲು ಗೊತ್ತಿಲ್ಲ ಅಂತ ಏನಲ್ಲ. ಆದರೆ ಮಾಡಲು ಸಮಯ ಸಿಕ್ಕಿರಲಿಲ್ಲ ಅಷ್ಟೆ. ಆದ್ದರಿಂದ, ಇವೆಲ್ಲ ಗಲಾಟೆ ಯಿಂದ ನಮ್ಮ ಮನೆ ಹದಗೆಟ್ಟು ಹಣ್ಣಾದ ಮೇಲೆ, ನಾನು ಮನೆಯಲ್ಲಿರುವ ತನಕ ( ಕೆಲ್ಸ/ph.D position ಸಿಗುವ ವರೆಗೂ) ನಾನೆ ಕೆಲಸ ಮಾಡುವೆನೆಂದು ಹೇಳಿದ್ದೇನೆ. ಟೈಮ್ ಪಾಸ್ ಆದ ಹಾಗೂ ಆಯ್ತು. ಕೆಲಸದ recapitulation ಕೂಡಾ ಆಯ್ತು.
Z : good...
ನಾನು : thanks. ಆದರೂ...ನನಗೆ ತಾಯಮ್ಮನ ನೆನಪು ಬಂದೇ ಬರುತ್ತದೆ. ಯಾಕೆ ಗೊತ್ತಾ ? ನಮ್ಮಿಬ್ಬರ ನಡುವೆ ಒಂದು funny conversation ನಡೆದಿತ್ತು ಒಂದು ದಿನ. ಹೇಳುತ್ತೇನೆ ಕೇಳು :
ತಾಯಮ್ಮ ಕಸ ಗುಡಿಸುತ್ತಿದ್ದರು. ನಾನು ಓದಿಕೊಳ್ಳುತ್ತಿದ್ದೆ. ಬಂದದ್ದೇ ಕೇಳಿದರು-
" ಅಮ್ಮಾವ್ರೆ, ನೀವು ಎಸ್ಸೆಸ್ಸೆಲ್ಸಿ ಆದ್ಮ್ಯಾಕೆ ಏಟ್ ವರ್ಷ ಓದೀರಿ ?"
ನಾನು : " ಏಳು ವರ್ಷ"
ಅವರು: " ಈ ವರ್ಸ ಆದ್ಮ್ಯಾಕೆ ಮುಗಿತದಾ ? "
ನಾನು : " ಇಲ್ಲ ತಾಯಮ್ಮ, ಇನ್ನೂ ಏಳು ವರ್ಷ ಓದಬೇಕು "
ಅವರು : ಯಾಕೆ ?
ನಾನು : ಅದು ಹಾಗೇ ತಾಯಮ್ಮ...ನಮಗಿಷ್ಟ ಆದ ವಿಷಯ ನ ಚೆನ್ನಾಗಿ ತಿಳ್ಕೋ ಬೇಕಲ್ಲ...ಅದಕ್ಕೆ.
ಅವರು : ಕಡೆ ಮನೆ ಡಾಕ್ಟರಮ್ಮ ಏಟ್ ವರ್ಸ ಓದವ್ರೆ ಎಸ್ಸೆಸೆಲ್ಸಿ ಆದ್ಮೆಲೆ ?
ನಾನು : ಹತ್ತು ವರ್ಷ.
ಅವರು : ಯಪ್ಪಾ ಸಿವನೆ ! ಇರ್ಲಿ ಬುಡಿ...ನೀವ್ ಏನ್ ಮಾಡ್ತಿರಿ ಇನ್ನು ಯೊಳ್ ವರ್ಸ ಓದ್ಮ್ಯಾಕೆ ?
ನಾನು : ಮನೆಯಲ್ಲಿರ್ತಿನಿ ತಾಯಮ್ಮ...
ಅವರು : ಅದೆಂಥದ್ದು ಅಮ್ಮಾವ್ರೆ ಈಟ್ ವರ್ಷ ಓದ್ಮ್ಯಾಕೆ ಮನೆಲಿದ್ಗೊಂಡು ? ಈ ಪುರುಸಾರ್ಥಕ್ಕೆ ಬರೀ ಎಸ್ಸೆಸೆಲ್ಸಿ ಮಾಡಿದ್ರೆ ಸಾಕಿರ್ತಿಲಿಲ್ವಾ ? ಸುಮ್ನಿರಿ ನೀವು ಅಮಾವ್ರೆ...ಸೌಟ್ ಎಲ್ಲ ಎಣ್ಣ್ ಮಕ್ಕಳು ಇಡಿಯೋದೇಯಾ ತಗಳಿ.. ಗಂಡಾ ಮನೆ ಮಕ್ಕಳು ಎಲ್ಲ ಮಾಡ್ಕಳಿ ಯಾರು ಬೇಡಾ ಅನ್ನಾಕಿಲ್ಲ. ಆದ್ರೆ ನೀವ್ ಮನೆಲಿ ಮಾತ್ರ ಇರ್ಬ್ಯಾಡಿ ನೋಡಿ... ಎಲ್ಲೆಲ್ಲೊ ಓಗ್ ಏನೋ ಸಮ್ಸೋದನೆ ಎಲ್ಲ ಮಾಡವ್ರಂತೆ ನೀವು ? ಮನೆಲಿದ್ರೆ ನಿಮ್ಮಂಥವರು ಅದ್ಯಾವ್ ನ್ಯಾಯ ಅಂತಿನಿ... ಆಕಡೆ ಮನೆ ಇಂಜಿನೀರಮ್ಮ ಈಗ ಓಗ್ತಿಲ್ವಾ ಕೆಲ್ಸಕ್ಕೆ ? ಮಕ್ಕಳನ್ನ ಸಾಲೆಗೆ ಬಿಟ್ಟು ? ಏಟ್ ಓದಿದಾರೆ ಅಂತೀರಾ ಅವ್ರುನೂ ...ಅವ್ರ ಮನೆಲೂ ಬರೀ ಪುಸ್ತಕಾನೆಯಾ...ನಾನ್ ಈಗ ಅವ್ರ ಮನೆಲಿ ಕೆಲ್ಸ ಮಾಡ್ಕಂಡ್ ಇಲಾ ? ನೀವ್ ಎಲ್ಲೇ ಇರಿ ಬೆಂಗ್ಳೂರ್ ನಾಗೆ...ನಾನ್ ಬಂದ್ ಮಾಡ್ಕೊಟ್ಟ್ ಓಯ್ತಿನಿ ಕೆಲ್ಸಾ ನ...ಮಗೀನ ನೋಡ್ಕೊಳ್ಳೊಕೆ ನಿಮ್ಮಮ್ಮ ಇಲ್ವಾ ? ನೀವೇನ್ ಈಟ್ ಒದು ಬರ್ಹ ಮಾಡೀ ಮನೆಯಾಕ್ ಮುದುರ್ಕಂಡಿರದು..ಹಾ ? ನಾನ್ ಯೋಳ್ತಿನಿ ಕೇಳಿ... ಓಗಿ ಓರ್ಗೆ ದುಡಿರಿ ಅತ್ತ್ಲಾಗೆ !
ನಾನು ಆವತ್ತೆಲ್ಲಾ ನಕ್ಕಿದ್ದೂ ನಕ್ಕಿದ್ದೇ ! ನನ್ನ ಮದುವೆ, ಮಕ್ಕಳ ಬಗ್ಗೆಯೂ ತಾಯಮ್ಮ ಯೋಚಿಸಿದ್ದರು ಆಗಲೇ ! ತಾಯಮ್ಮ ನನಗೆ ಆರ್ಡರ್ ಮಾಡಿದರೋ, ಅಥವಾ ಅವರ ಕೆಲಸ ಖಾಯಮ್ ಮಾಡಿಕೊಂಡರೋ ನನಗಿನ್ನೂ ತಿಳಿಯದ ವಿಷಯ !
Z : :) :) :) .....ಆದರೆ ಅವರ concern ನ ಮೆಚ್ಚಬೇಕು ನೋಡು !
ನಾನು : ನಿಜ ನಿಜ. ಅವರು ಒಂದು ನಿಯಮ ಮಾಡಿದ್ದರು...ಬಿಸಾಕಬೇಕಿದ್ದ ಪೇಪರ್ಗಳನ್ನೆಲ್ಲ ಹರಿದು ಹಾಕಿ, ಇಲಾಂದ್ರೆ ನಾನು ಎಲ್ಲಾ ನಿಮ್ಮ ಟೇಬಲ್ ಮೇಲೆ ಮತ್ತೆ ಎತ್ತಿಟ್ಟು ಹೋಗುವೆ ಅಂತ. ಇಂದು ನನಗೆ ಪೇಪರ್ ಹರಿಯುವಾಗಲೆಲ್ಲಾ ತಾಯಮ್ಮನದೇ ನೆನಪು. ಅವರು ಸದ್ಯ ಎಲ್ಲಿದ್ದಾರೋ, ಹೇಗಿದ್ದಾರೋ...ಕ್ಷೇಮದಿಂದ ಇರಲಿ, ಬೇಗ ಗುಣವಾಗಲಿ ಎಂದಷ್ಟೇ ಪ್ರಾರ್ಥನೆ ಸದ್ಯೋಜಾತನಲ್ಲಿ. ಆದಷ್ಟು ಬೇಗ ಅವರು ಕೆಲಸಕ್ಕೆ ಬರಲಿ ಅಂತ ಆಸೆ.
Z : hmm.....same here.

Wednesday, July 23, 2008
ತಾಯಮ್ಮ- ೨
ನಾನು : ಎಲ್ಲಿಗೆ ನಿಲ್ಲಿಸಿದ್ದೆ ಕಥೆ ನ ಮೊನ್ನೆ ?
Z : ತಾಯಮ್ಮ ಬಯಾಪ್ಸಿ ಗೆ ಒಪ್ಪಿದ್ದು.
ನಾನು : ಹಾ.....ಕರೆಕ್ಟ್. ತಾಯಮ್ಮ ಮೂರು ದಿನಗಳ ಅಧಿಕೃತ ರಜೆ ಘೋಷಿಸಿ ಹೋಗಿ ಬಯಾಪ್ಸಿ ಮಾಡಿಸಿಕೊಂಡು ಬಂದರು. ರೆಪೋರ್ಟ್ ಬರಲು ಎರಡು ದಿನವಾಯ್ತು. ಆ ಶನಿವಾರ ನನಗೆ ಯಾವುದೋ ಹಬ್ಬದ ಪ್ರಯುಕ್ತ ರಜೆ ಇತ್ತು. ತಾಯಮ್ಮ ಓಡೋಡಿ ಹೆದರಿ ನಲುಗಿ ನಮ್ಮ ಮನೆಗೆ ಬಂದರು. ಬಂದದ್ದೇ " ಅಮ್ಮಾವ್ರೆ, ವೊಟ್ಟೆಯಲ್ಲಿ ಗಡ್ಡೆ ಇದೆಯಂತೆ...ಆಪರೇಷನ್ ಮಾಡಿಸಿಕೊಳ್ಳಬೇಕಂತೆ...ಹತ್ತು ಸಾವಿರವಾಗ್ತದಂತೆ, ಆದಷ್ಟು ಬೇಗ ಮಾಡಿಸಿಕೊಳ್ಳದಿದ್ದರೆ ನಾ ಬದ್ಕಕ್ಕಿಲ್ವಂತೆ..ಆರು ತಿಂಗಳು ಮನೆಯಾಗೆ ಬಿದ್ಕಂಡಿರ್ಬೇಕಂತೆ, ಭಾರ ಎತ್ತೋಹಾಗಿಲ್ವಂತೆ, ಜಾಸ್ತಿ ನಡಿಯೋ ಹಾಗಿಲ್ವಂತೆ ...ಕೈ ಕಾಲೇ ಕಟ್ಟಾಕ್ಬಿಟ್ಟ್ರಲ್ಲ ಹೊಟ್ಟೆ ಕುಯ್ದು !? ದುಡ್ಡು ಎಲ್ಲಿಂದ ತರದು ? ಕೆಲ್ಸ ಮಾಡ್ದೆ ಎಂಗ್ ಜೀವನ ಸಾಗ್ಸೋದು ? ಆಗಕ್ಕಿಲ್ಲ...ಏನ್ ಮಾಡೊದು ? " ಎಂದು ಒಂದೇ ಉಸಿರಿನಲ್ಲಿ ಆತಂಕ ವ್ಯಕ್ತಪಡಿಸಿದರು.
ಈಗ ಯೋಚನೆ ಮಾಡುವ ಸರದಿ ನಮ್ಮದಾಗಿತ್ತು. ತಾಯಮ್ಮನಿಗೆ ನಾನು ಸಾಂತ್ವನ ಹೇಳುವೆ, ದೊಡ್ದವರೆಲ್ಲ ದುಂಡು ಮೇಜಿನ ಪರಿಷತ್ತು ನಡಿಸಿ ಎಂದು ನಾರೀಮಣಿಯರನ್ನು ನೆರೆಮನೆಗೆ ಓಡಿಸಿ, ನಾನು ತಾಯಮ್ಮನನ್ನು ಸಂತೈಸಲು ಅನುವಾದೆ. ತಾಯಮ್ಮ ಕೊರಗುತ್ತಲೇ ಇದ್ದರು, " ದುಡ್ಡಿಲ್ಲ,ಕೆಲ್ಸ ಮಾಡ್ದೆ ಇದ್ರೆ ಏನ್ ಗತಿ, ಸಾಲ ಬೇರೆ ಅಷ್ಟೋಂದು... ಬದುಕಿ ಏನಾಗ್ಬೇಕಾಗೈತೆ...." ಅಂತೆಲ್ಲ. ನಾನಂದೆ-
"ತಾಯಮ್ಮ, ನಮ್ಮಮ್ಮ ನಮಗಾಗಿ ಬದುಕುತ್ತಿರುವ ಹಾಗೆ ನೀವು ನಿಮ್ಮ ಮಕ್ಕಳಿಗಾಗಿ ಬದುಕಬೇಕು. ಪಾಪ...ಚಿಕ್ಕವು ಇನ್ನು. ನೀವೇ ಹೊಟೋದ್ರೆ ಅವರ ಗತಿಯೇನು ? ಏನೋ ಚೆನ್ನಾಗಿ ಓದ್ಕೊಂಡು, ಆಟ ಗೀಟ ಆಡ್ಕೊಂಡ್ ಇದಾವೆ. ನೀವ್ ಹೊಟೋದ್ರೆ ಅವಕ್ಕೆ ಕೂಲಿ ನಾಲಿ ಬಿಟ್ಟರೆ ಬೇರೆ ಗತಿಯಿಲ್ಲ. ಅನ್ಯಾಯ ಅವುಗಳ ಭವಿಷ್ಯ ಹಾಳಾಗೋಗತ್ವೆ. ನೀವು ನಿಮ್ಮ ಮನೆ ಕಡೆ ಗಮನ ಕೊಡಿ. ನೀವು ಆರು ತಿಂಗಳು ಕೆಲಸ ಮಾಡಬಾರದು ಅಂದಿದ್ದಾರೆ ತಾನೆ , ನಿಮ್ಮ ಯಜಮಾನರಿಗೆ ಹೇಳಿ ಸಲ್ಪ ಜಾಸ್ತಿ ಹೊತ್ತು ದಿನಸಿ ಅಂಗಡಿಯಲ್ಲಿ ದುಡಿಯೋಕೆ...ಸಂಬಳ ಜಾಸ್ತಿಯಾಗತ್ತೆ. ದುಡ್ಡಿಗೆ ದೊಡ್ಡವರು ಏನೋ ಪರಿಹಾರ ಹೇಳ್ತಾರೆ. ಇನ್ನು ಆರು ತಿಂಗಳ ಮಟ್ಟಿಗೆ ನಮ್ಮೆಲ್ಲರ ಮನೆಗೆ ಇನ್ನೊಬ್ಬ ನಂಬಿಕಸ್ಥ ಕೆಲಸದವಳನ್ನು ಗೊತ್ತು ಮಾಡಿ. ಆಗಾಗ ನಿಮ್ಮ ಮಗನ ಕೈಲಿ ಫೋನ್ ಮಾಡಿಸಿ ಯೋಗಕ್ಷೇಮ ಹೇಳಿ . ಚೆನ್ನಾಗಿ ರೆಸ್ಟ್ ತಗೊಳ್ಳೀ...ಆಮೇಲೆ ನೋಡಿ ಜಿಂಕೆ ಮರಿ ಥರ ಓಡಾಡಬಹುದು. ಆಪರೇಷನ್ ಆದ ತಕ್ಷಣ ನೀವೇನಾದ್ರು ಕಿತ್ತೂರು ರಾಣಿ ಚೆನ್ನಮ್ಮನ ಥರ ಕೆಲ್ಸಕ್ಕೆ ಬಂದ್ರಿ....ಚೂರೂ ಪಾರೂ ಆರೋಗ್ಯ ನೂ ಹದಗೆಟ್ಟು ನೀವು ಕಂಗಾಲಾಗಿ ಹೋಗ್ತೀರಿ. ನನ್ನ ಮಾತು ಕೇಳಿ ತಾಯಮ್ಮ. ಡಾಕ್ಟರ್ ಆಂಟಿ ಆಸ್ಪತ್ರೆ ಲಿ ಇರೋದ್ರಿಂದ್ಲೇ ನಿಮಗೆ ಇಷ್ಟು ಕಡಿಮೆ ದುಡ್ಡಲ್ಲಿ ಆಪರೇಷನ್ ಆಗ್ತಿರೋದು. ಇಲ್ಲಾಂದ್ರೆ ಒಂದು ಲಕ್ಷದ ವರೆಗೂ ಬರತ್ತೆ ದೊಡ್ಡಾಸ್ಪತ್ರೆಗಳಲ್ಲಿ. ಆಗತ್ತ ನಿಮ್ ಕೈಲಿ ತೂಗ್ಸಕ್ಕೆ ? ನೋಡಿ, ಅವರು ಹೇಳಿದಾಗೆ ಕೇಳಿ . ಇದೇ ವಾರದಲ್ಲಿ ಹೋಗಿ ಆಸ್ಪತ್ರೆಗೆ ಸೇರ್ಕೊಳ್ಳೀ...ಖಂಡಿತಾ ನಿಮ್ಗೇನೂ ಆಗಲ್ಲ. ಧೈರ್ಯವಾಗಿರಿ...ದೇವರಿದ್ದಾನೆ."
ನಾನೀಥರ ಮಾತಾಡಿದ್ದನ್ನು ಕೇಳಿ ತಾಯಮ್ಮನ ಕಣ್ಣಲ್ಲಿ ಮೋಡಕವಿದ ವಾತಾವರಣ. ಆದ್ರೂ ಅವರು ಅಳಲಿಲ್ಲ. ನನ್ನ ಮಾತು ಅವರ ಮನಸ್ಸನ್ನು ಮುಟ್ಟಿದೆ ಎಂದು ತೋರಿಸಲು ಅವರು ಕೆಲಕಾಲ ಸುಮ್ಮನಿದ್ದರು. ನಂತರ ಏನೋ ಭಯಗೊಂಡಂತಾಗಿ, " ಅಮ್ಮಾ...ಆಪರೇಸನ್ ಮಾಡವಾಗ ಮತ್ತ್ ಬರ್ಸೋ ಔಸ್ಧ ಕೊಡೊವಾಗ ಜಾಸ್ತಿಕೊಟ್ಟು ಪಿರಾನಾ ನೇ ಒಂಟೋದ್ರೆ ? "
Z : ಓಹ್ ಪಾಪ ! anesthesia ಅಂದ್ರೆ ಭಯ ಅನ್ಸತ್ತೆ.
ನಾನು : naturally. ಸಿರಿಂಜು ನೋಡಿದರೇನೇ ಸೈರನ್ನ್ ಹಾಕುವ ತಾಯಮ್ಮ ಇನ್ನು anesthesia ಗೆ ಹೆದರದೇ ಇರ್ತಾರ ? ನಾನಂದೆ- "ಯಾರಿಗೆ ಯೆಷ್ಟ್ ಮತ್ತ್ ಬರ್ಸೋ ಔಷಧಿ ಕೊಡ್ಬೇಕು ಅಂತ ಅವರಿಗೆ ಗೊತ್ತಿರತ್ತೇ ತಾಯಮ್ಮ. ಅದನ್ನೇ ಓದಿ ತಿಳ್ಕೊಂಡಿರ್ತಾರೆ .ಪ್ರಾಣ ಹೋಗಲ್ಲ, ಹೆದರಬೇಡಿ. ಆಪರೇಷನ್ ಆದ ಒಂದೆರಡು ಘಂಟೆಗಳಲ್ಲಿ ಎಚ್ಚರ ಆಗತ್ತೆ. ಮುಖ್ಯ ನೀವು ಧೈರ್ಯಗೆಡಬಾರದು.ಆಪರೇಷನ್ ಮುಂಚೆ ಅತ್ತು ಕರ್ದು, ಕೊನೆ ಸರ್ತಿ ನೋಡ್ಬಿಡಿ, ಆಸೆ ಎಲ್ಲ ತೀರ್ಸ್ಬಿಡಿ ಅಂತೆಲ್ಲ ಡೈಲಾಗ್ ಹೊಡಿಬೇಡಿ. ಅದ್ರಿಂದ ಮನಸ್ಸಿನ ಮೇಲೆ ಪರಿಣಾಮ ಬೀರತ್ತೆ. ಶಾಂತವಾಗಿ ಈಶ್ವರನ್ನ ನೆನೆಸಿಕೊಳ್ಳಿ. ನಿಮ್ಮ ಗ್ರಾಮದೇವತೆ ಮದ್ದೂರಮ್ಮ ದೇವರಿಗೆ ಹರಸಿಕೊಳ್ಳಿ. ಕಾಪಾಡ್ತಾರೆ ಇಬ್ರು. ಆಯ್ತಾ ? ಆಮೇಲೆ ಇದೇ ವಾರ ಆಪರೇಷನ್ ಮಾಡ್ಸಿಕೊಳ್ಳೋ ಹಾಗಿದ್ರೆ ಎರಡು ದಿನ ಮುಂಚೆ ನಮಗೆ ಫೋನ್ ಮಾಡಿ ತಿಳಿಸಿ ."
ಸಮಾಧಾನವಾಯ್ತು ಅನ್ಸತ್ತೆ ಅವರಿಗೆ. ತಲೆಯಲ್ಲಾಡಿಸಿ ಸಮ್ಮತಿಸಿದರು. ಆದ್ರು ಅವರಿಗೆ ಔಷಧಿ ಚಿಂತೆ. ನಾನು ಡಾಕ್ಟರ್ ಆಂಟಿ ಅದಕ್ಕೂ ವ್ಯವಸ್ಥೆ ಮಾಡುತ್ತಾರೆ ಎಂದು ಹೇಳಿ ಸಮಾಧಾನಗೊಳಿಸಿದೆ. ಅಷ್ಟೊತ್ತಿಗೆ ಹಿರಿಯರ ದುಂಡು ಮೇಜಿನ ಪರಿಷತ್ತು ಮುಗಿದಿತ್ತು. ತಾಯಮ್ಮ ಒಟ್ಟು ಐದು ಮನೆಗಳಲ್ಲಿ ಕೆಲಸ ಮಾಡುತ್ತಿದ್ದರು. ಎಲ್ಲರೂ ತಲಾ ಒಂದೊಂದು ಸಾವಿರ ರುಪಾಯಿ ಕೊಡಲು ಮುಂದಾದರು. ಮಿಕ್ಕೈದು ಸಾವಿರಕ್ಕೆ ಅವರ ಯಜಮಾನರು ವ್ಯವಸ್ಥೆಮಾಡಬೇಕೆಂದೂ, ಅದಾಗಲಿಲ್ಲವೆಂದರೆ ಮುಂದೆ ಯೋಚನೆ ಮಾಡಬೇಕೆಂಬುದು ನಿರ್ಧಾರವಾಯಿತು.ಸಂಬಳದಲ್ಲಿ ಸದ್ಯಕ್ಕೆ ಹಿಡಿಯುವುದಿಲ್ಲ, ಕಂತು ಕಂತಾಗಿ ಆದಾಗ ತೀರಿಸು ಎಂದು ಎಲ್ಲರೂ ಹೇಳಿದರು. ಆದರೆ ತಾಯಮ್ಮ ನೀವು ಸಂಬಳದಲ್ಲಿ ದುಡ್ಡು ಹಿಡಿದುಕೊಳ್ಳುವುದಾದರೆ ಮಾತ್ರ ದುಡ್ಡು ತೆಗೆದುಕೊಳ್ಳುವುದಾಗಿ ಹೇಳಿದರು. ನಾನು ಅವರ ಸ್ವಭಿಮಾನ ಕಂಡು ಬೆರಗಾದೆ.ನನ್ನ ದೃಷ್ಟಿಯಲ್ಲಿ ತಾಯಮ್ಮ ಬಹಳ ಉನ್ನತಸ್ಥಾನ ತಲುಪಿದರು. ಎಲ್ಲರೂ ಒಪ್ಪಿದರು. ತಾಯಮ್ಮ ಕೃತಜ್ಞತಾಪೂರ್ವಕವಾಗಿ ಅತ್ತು ಕಣ್ಣೀರಿಟ್ಟರು. ಮೆಗಾಸೀರಿಯಲ್ಲು ನೋಡಿ ಅತ್ತು ಅತ್ತು ಪಳಗಿದ್ದ ತಾಯಂದಿರೂ ಕಣ್ಣೀರ ಕೋಡಿಯನ್ನು ಸಮೃದ್ಧವಾಗಿಯೇ ಹರಿಸಿದರು.
Z : i see.... ಆಮೇಲೆ ?
ನಾನು : ಆಮೇಲೆ ಇನ್ನೇನು ? ತಾಯಮ್ಮ ಇನ್ನು ಮಾರನೇ ದಿನವೇ ಬಂದು ದುಡ್ಡು ತೆಗೆದುಕೊಳ್ಳುವುದಾಗಿ ಹೇಳಿ, ಮಾರನೇ ದಿನವೇ substitute ಕೆಲಸದವಳನ್ನ ಹುಡುಕಿ ತರುತ್ತೇನೆಂದು ಭಾಷೆಯಿತ್ತರು. ಮಹಿಳೆಯರು, ಆ ಕೆಲಸದವಳು ನಿನ್ನಂತೆಯೇ ನಂಬಿಕಸ್ಥಳಾಗಿರಬೇಕೆಂದು ತಾಕೀತು ಮಾಡೀದರು. ಯಾಕಂದರೆ ಕೆಲವರು ತಾಯಮ್ಮನಿಗೆ ಅವರ ಮನೆಯ ಬೀಗ ಕೊಟ್ಟು ಕೆಲಸಕ್ಕೆ ಹೋಗುತ್ತಿದ್ದರು.ತಾಯಮ್ಮ ಮನೆಯ ಕೆಲಸವೆಲ್ಲ ಮಾಡಿ ನಂತರ ಬೀಗ ಹಾಕಿ ಅವರ ಬಳಿಯೇ ಇಟ್ಟುಕೊಂಡಿರುತ್ತಿದ್ದರು. ಆದ್ದರಿಂದ ತಾಯಮ್ಮನ ಬಿಟ್ಟು ಬೇರೆ ಯಾರನ್ನೂ ನಂಬಲು ಮಾತಾಮಣಿಯರು ತಯಾರಿರಲಿಲ್ಲ. ಪರಿಸ್ಥಿತಿಯ ಗಾಢತೆಯನ್ನು ಅರಿತ ತಾಯಮ್ಮ ಅಂಥಾ ಮನೆಯವರಿಗೆ ಕೆಲಸದವಳನ್ನು ಅವರೇ ಹುಡುಕಿಕೊಳ್ಳಬೇಕೆಂದು ಬೇಡಿಕೊಂಡರು. ಯಾಕಂದರೆ ಹೊಸೊಬ್ಬರಿಗೆ ಬೀಗ ಕೊಡಲು ಸ್ವಯಂ ತಾಯಮ್ಮನೂ ಹಿಂಜರಿಯುತ್ತಿದ್ದರು. ಮೂರು ಮನೆಯ ಬೀಗ ತಾಯಮ್ಮನ ಸುಪರ್ದಿಯಲ್ಲಿದ್ದವು. ಅವರೆಲ್ಲರೂ ಬೇರೆ ವ್ಯವಸ್ಥೆ ಮಾಡಿಕೊಳ್ಳಲು ನಿರ್ಧರಿಸಿದರು. ನಮ್ಮ ಮನೆ ಮತ್ತು ನಮ್ಮ ಎದಿರು ಮನೆಗೆ ಕೆಲಸದವಳನ್ನು ತರುವ ಜವಾಬ್ದಾರಿ ತಾಯಮ್ಮ ಹೊತ್ತರು. ನನ್ನ ಪ್ರಾಬ್ಲೆಮ್ ಸಾಲ್ವ್ ಆಯ್ತೆಂದು ನಾನು ಸಂತೋಷ ಪಟ್ಟೆ. ಆದರೂ ಅಮ್ಮ ಹೊಸೊಬ್ಬಳು ಬರ್ತಾರೆ, ಮನೆ ಕಡೆ ನಿಗಾ ಇರಲಿ, ವಸ್ತುಗಳು ಭದ್ರ ಎಂದು ಕಿವಿಮಾತು ಹೇಳಿದರು. ಆದರ್ಶ ಮಕ್ಕಳಂತೆ ನಾನು ಮತ್ತು ನನ್ನ ತಂಗಿ ಆ ಕಿವಿಮಾತನ್ನು ಈ ಕಿವಿಯಲ್ಲಿ ಕೇಳಿ ಆ ಕಿವಿಯಲ್ಲಿ ಹೊರಹಾಕಿದೆವು.
Z : so far so good. ಆಮೇಲೆ ?
ನಾನು : ಈಗ ಪಾತ್ರೆ ತೊಳೆಯುವುದಿದೆ. ನಾಳೆ continue ಮಾಡುವೆ.
line on hold.

Monday, July 21, 2008
ತಾಯಮ್ಮ- ೧
ನಾನು : ಅದು ಯಾವ ಘಳಿಗೆಯಲ್ಲಿ ನನಗೆ ಒಂದು ಚೂರು ಕೆಲ್ಸ ಇಲ್ಲ ಅಂತ ಹೇಳಿದೆನೋ...ಈಗ ಒಂದು ಚೂರೂ ಬಿಡುವು ಸಿಗದಷ್ಟು ಕೆಲ್ಸ ಮಾಡುವ ಹಾಗಾಗಿದೆ !
Z : ಯಾಕೇ ? ಏನಾಯ್ತು ?
ನಾನು : ತಾಯಮ್ಮ ....ಅದೇನಮ್ಮ ಮನೆಯ ಕೆಲ್ಸದವರು....
Z : ಹುಷಾರಾಗಿದ್ದಾರೆ ತಾನೆ ? ಪಾಪ ಅವರಿಗೆ ಏನಾಯ್ತು ?
ನಾನು : ಅದೊಂದು ದೊಡ್ದ ಕಥೆ.
Z : ಹೇಳಿಬಿಡು, ಕೇಳುತ್ತೇನೆ.
ನಾನು : ಹೋದ ವರ್ಷ ಡಿಸೆಂಬರ್ ವರೆಗೂ ಏನೂ ತೊಂದರೆ ಇರಲಿಲ್ಲ. ಜನವರಿ ತಿಂಗಳ ಕೊನೆಯಲ್ಲಿ ಅಚಾನಕ್ಕಾಗಿ ತಾಯಮ್ಮ ಒಂದು ದಿನ ಕೆಲಸಕ್ಕೆ ಬರಲಿಲ್ಲ. ಏಳು ವರ್ಷದಿಂದ ಒಂದು ದಿನವೂ ತಪ್ಪಿಸದೆ, ಮದುವೆ ಮುಂಜಿ ಮುಂತಾದ ಸಮಾರಂಭಗಳಿದ್ದರೂ ಕೆಲ್ಸ ಮುಗಿಸಿಕೊಂಡೆ ಹೋಗುತ್ತಿದ್ದ ತಾಯಮ್ಮ ಗಾಯಬ್ಬಾಗಿದ್ದು ನಮಗೆ ಭಯ ತರಿಸಿತು. ಅವರಿದ್ದ ಮನೆಯ ಯಜಮಾನ ರಾತ್ರೋ ರಾತ್ರಿ ಗಲಾಟೆ ತೆಗೆದು ಅವರನ್ನು ಓಡಿಸಿದನೋ, ಅವರಿಗೆ ಹುಷಾರಿರಲಿಲ್ಲವೋ, ಮಕ್ಕಳು ಶಾಲೆಗೆ ಹೋಗುವಾಗ ಏನಾದರೂ ಅಪಘಾತವಾಯಿತೋ, ಊರಿನಲ್ಲಿದ್ದ ಅವರ ಅತ್ತೆ ಮಾವಂದಿರು ಸೀರಿಯಸ್ಸಾದರೋ, ....ಹೀಗೆ ನಮಗೆ ಯೋಚನೆಗಳು ಅಲೆಯಲೆಯಾಗಿ ಹುಟ್ಟಿಬಂದು ತಲೆಕೊಳವನ್ನು ರಾಡಿಯಾಗಿಸಿದವು. ಯೋಚನೆಯಲ್ಲಿದ್ದುಕೊಂಡೇ ಅಮ್ಮ ಕಷ್ಟ ಪಟ್ಟು ಪಾತ್ರೆ ತೊಳೆದುಕೊಂಡರು. ನನಗೆ ಕಾಲೇಜು, ತಂಗಿ ಹತ್ತನೇ ಕ್ಲಾಸು.ಅಮ್ಮ, ನಮ್ಮನ್ನ ಮಾತಾಡಿಸಲೇ ಬೇಡವೆಂದು ನಾವು ಹೇಳಿಬಿಟ್ಟಿದ್ದೆವು. ಅಮ್ಮ ಅವರ ಸಂಗೀತ ಕಚೇರಿಗಳ ಕಡೆಗೂ ಗಮನ ಹರಿಸಬೇಕಿತ್ತು. ತಾಯಮ್ಮ ದಿನಗಳ ಗಟ್ಟಲೆ ನಾಪತ್ತೆಯಾದರೆ ಗತಿಯೇನೆಂಬುದು ಡೈನಿಂಗ್ ಟೇಬಲ್ ಮೇಲಿನ ಬಿಸಿ ಬಿಸಿ ಚರ್ಚೆಯಾಯಿತು.
ಅಮ್ಮನಿಗೆ ಪಾತ್ರೆ ತೊಳೆಯುವುದು ಕೆಲವು ಮುಖ್ಯ ಕಾರಣಗಳಿಂದ ಅಸಾಧ್ಯ. ಅಮ್ಮ ಹಾಗಂತ ಸುಮ್ಮನಿರುವ ಪೈಕಿ ಅಲ್ಲ...ತೊಳೆದು ಒದ್ದಾಡುತ್ತಾರೆ. ಜೋಶ್ ಅಲ್ಲಿ ಕೆಲಸ ಮಾಡಿ ನಂತರ ಸುಸ್ತಾದರೆ ಮನೆ ಅಲ್ಲೋಲ ಕಲ್ಲೋಲವಾಗುತ್ತದೆ ಎಂಬುದು ನಮಗೆ ಗೊತ್ತಿತ್ತು. ಬೆಳಗ್ಗೆ ಅಮ್ಮ ಎಬ್ಬಿಸದಿದ್ದರೆ ನಮಗೆ ಎಚ್ಚರವಾಗುವುದೇ ಇಲ್ಲ..ಯಾರು ಎಷ್ಟೇ ಜೋರಾದ ಅಲಾರಮ್ ಇಟ್ಟರೂ ಅದು ಅಮ್ಮನ ಕೂಗಿನ ಮುಂದೆ ಏನೇನೂ ಇಲ್ಲ. ಅಪರ್ಣನಿಗೆ ಊಟ ಶಾತಾಯ ಗತಾಯ ಸ್ಕೂಲಿಗೆ ಆಗಲೇ ಬೇಕು. ಅಮ್ಮನ ಮೇಲೆ ಅಷ್ಟು dependent ನಾವು. ಹೀಗಿರುವಾಗ ಅಮ್ಮ ಸುಸ್ತಾದರೆ ನಮ್ಮ ಗತಿಯೇನು ಎಂಬುದು ನಮ್ಮ ದೊಡ್ದ ಸಮಸ್ಯೆಯಾಯಿತು.
ನಾನೊಂದು ನಿರ್ಧಾರಕ್ಕೆ ಬಂದೆ. ಲೈಬ್ರರಿಯಲ್ಲಿ ಸಾಯಂಕಾಲ ಕೂತು ಓದುವ ಬದಲು ಬೇಕಿದ್ದನ್ನು ಜೆರಾಕ್ಸ್ ಮಾಡಿಸಿಡುವುದು. ಮನೆಗೆ ಬಂದು ಅಮ್ಮನಿಗೆ ಸಹಾಯ ಮಾಡಿ ನಂತರ ಓದುವುದೆಂದು ನಿರ್ಧರಿಸಿ ಅಮ್ಮನಿಗೆ ನಾನು ಸಾಯಂಕಾಲ ಬಂದ ತಕ್ಷಣ ಪಾತ್ರೆ ತೊಳೆಯುವುದಾಗಿ ಹೇಳಿದೆ. ಇದೊಂದು ತಾತ್ಕಾಲಿಕ ಪರಿಹಾರವಾಗಿ ಗೋಚರಿಸಿತು.ಥಟ್ಟನೆ ಒಪ್ಪಿದರು.
ಮಾರನೆಯ ದಿನ ತಾಯಮ್ಮ ನಾನು ಕಾಲೇಜಿಗೆ ಹೋದಾಗ ಪ್ರತ್ಯಕ್ಷಳಾಗಿದ್ದಾಳೆ. ಹಿಂದಿನ ದಿನ ಬೆಳಿಗ್ಗೆ ವಿಪರೀತ ಹೊಟ್ಟೆನೋವು ಬಂದು ನೋವು ತಾಳಲಾಗದೇ ಆಸ್ಪತ್ರೆಗೆ ದೌಡಾಯಿಸಿದ್ದಾಳೆ. ಅದೂ ಗವರ್ನಮೆಂಟ್ ಆಸ್ಪತ್ರೆ, ಬನಶಂಕರಿ ಎರಡನೇ ಸ್ಟೇಜಿನಲ್ಲಿರುವಂಥದ್ದು. ಯಾಕಂದರೆ, ಅಲ್ಲಿಯ ಡಾಕ್ಟರು ನಮ್ಮನೆಯ ಬೀದಿಯ ಕಡೆಯ ಮನೆಯ ನಿವಾಸಿ. ಇವಳು ಆ ಮನೆಯಲ್ಲೂ ಕೆಲ್ಸ ಮಾಡೂತ್ತಾಳೆ...ದುಡ್ದು ಕಡಿಮೆಯಾಗತ್ತೆ ಅಂತ ಹೋಗಿದ್ದಾಳೆ. ಅವರು ಇವಳ ಸ್ಥಿತಿ ನೋಡಿ ಬಯಾಪ್ಸಿ ಗೆ ಬರೆದುಕೊಟ್ಟಿದ್ದಾರೆ. ಸೂಜಿಯೆಂದರೆ ಮೈಲಿದೂರ ಓಡುವ ತಾಯಮ್ಮ ನಾನು ಹೀಗೆ ಸಾಯುತ್ತೇನೆ, ಚುಚ್ಚಿಸಿಕೊಳ್ಳುವುದಿಲ್ಲ ಎಂದು ಭೀಷ್ಮಪ್ರತಿಜ್ಞೆ ಮಾಡಿ ಮಾರನೆಯ ದಿನ ಯಮಯಾತನಾ ಸದೃಶ ನೋವಲ್ಲಿಯೂ ಕೆಲಸಕ್ಕೆ ಬಂದಿದ್ದಾಳೆ.
Z : ಛೆ ! ಬಯಾಪ್ಸಿ ಏನ್ ಮಹಾ ? ಏನೂ ತೊಂದರೆಯಾಗಲ್ಲ ಅಲ್ಲವಾ ?
ನಾನು : ಅದು ನನಗೆ ಗೊತ್ತು, ನಿನಗೆ ಗೊತ್ತು, ಡಾಕ್ಟರ್ ಆಂಟಿಗೆ ಗೊತ್ತು. ಹೆಬ್ಬೆಟ್ಟು ತಾಯಮ್ಮನಿಗೆ ಏನ್ ಗೊತ್ತು ?
Z : right ! ಆಮೇಲೆ ?
ನಾನು : ರಸ್ತೆಯ ಮನೆಯೊಡತಿಯರೆಲ್ಲ ತುರ್ತು ಸಭೆ ಕರೆದು, ತಾಯಮ್ಮನ್ನು ಕೂರಿಸಿ shift ನಲ್ಲಿ ಧೈರ್ಯ ಹೇಳಲು ಪ್ರಯತ್ನಿಸಿದ್ದಾರೆ. ದುಡ್ದು ನಾವು ಕೊಡುವೆವೆಂದೂ, ಬಯಾಪ್ಸಿಯ ಬಗ್ಗೆ ಭಯ ಬೇಡವೆಂಡು ತರತರಹ ರೀತಿಯಲ್ಲಿ ಧೈರ್ಯ ಹೇಳಲು ಪ್ರಯತ್ನಿಸಿದ್ದಾರೆ. ಆದರೆ ತಾಯಮ್ಮ, ಈಗಾಗಲೆ ಮನೆಗೆ ಭೋಗ್ಯಕ್ಕೆ ತೆಗೆದುಕೊಳ್ಳಲು ಮಾಡಿರುವ ಸಾಲವೇ ತೀರಿಲ್ಲ, ಇನ್ನು ಮತ್ತೆ ಸಾಲ ಮಾಡುವುದಿಲ್ಲ , ತನಗೆ ಆಪರೇಷನ್ ಅಂದರೆ ಪ್ರಾಣಭಯವಿರುವ ಕಾರಣ ತಾನೇನು ಮಾಡಿದರೂ ಆಪರೇಷನ್ ಮಾಡಿಸಿಕೊಳ್ಳುವುದಿಲ್ಲ ವೆಂದು ಬಿಕ್ಕಿ ಬಿಕ್ಕಿ ಅತ್ತು ಹೋಗಿದ್ದಾಳೆ. ಇದಾದದ್ದು ಒಂದು ಶನಿವಾರದಂದು.
ಶನಿವಾರ ರಾತ್ರಿ ನಮ್ಮಮ್ಮ ಕಥೆಯನ್ನ ನನಗೆ ಸವಿವರವಾಗಿ ತಿಳಿಸಿದರು. ತಾಯಮ್ಮನಿಗೆ ನನ್ನ ಕಂಡರೆ ವಿಷೇಷ ಪ್ರೀತಿ. ನನ್ನ book rack ನೋಡಿ ನಾನು ಮಹಾಬುದ್ಧಿವಂತಳೆಂದುಕೊಂಡಿದ್ದಾರೆ. ಬೀದಿಯ ಬುದ್ಧಿಜೀವಿಗಳು ಒಂದು ಉಪಾಯ ಮಾಡಿದರು. ನನ್ನ ಕೈಲಿ ಹೇಳಿಸಿ ನೋಡಲು sketch ಹಾಕಿದರು . ನಾನೂ ಸರಿ try ಮಾಡುವ ಎಂದು ಒಪ್ಪಿಕೊಂಡೆ.
ಭಾನುವಾರ ತಾಯಮ್ಮ ಎಂದಿನಂತೆ ಬಂದರು. ಮುಖದಲ್ಲಿ ರೋಗ ಲಕ್ಷಣ ಎದ್ದುಕಾಣುತ್ತಿತ್ತು.
ನಾನು : ಏನು ತಾಯಮ್ಮ...ಹೇಗಿದ್ದೀರಿ ?
ತಾಯಮ್ಮ : ಪರ್ವಾಗಿಲ್ಲ...ಮಾತ್ರೆ ತಿಂದು ಸಲ್ಪ ಗೆಲ್ವಾಗಿದ್ದೀನಿ ಅಮ್ಮಾವ್ರೆ....
ನಾನು : ಡಾಕ್ಟರ್ ಆಂಟಿ ಬರೆದುಕೊಟ್ಟ ಹಾಗೆ ಬಯಾಪ್ಸಿ ಮಾಡಿಸಿಕೊಳ್ಳಿ.
ಅವರು : ಆಗಕ್ಕಿಲ್ಲ ಅಮ್ಮೌ...ಆಗಕ್ಕಿಲ್ಲ. ಹೊಟ್ಟೆ ಕುಯ್ದ್ರೆ ನೋವಾಗಲ್ವ ? ನಂಗೆ ಮೊದ್ಲೇ ಆಸ್ಪತ್ರೆ ವಾಸ್ನೆ ಆಗಕ್ಕಿಲ್ಲ. ವುಟ್ಟ್ದಾಗಿಂದ ನಾನು ಆಸ್ಪತ್ರೆ ಗೆಲ್ಲ ಓದವ್ಳೇ ಅಲ್ಲ...ಹೆರಿಗೇ ನೂ ಸೂಲ್ಗಿತ್ತೀರೆ ಮಾಡವ್ರೆ ನಮ್ಮೂರ್ನಾಗೆ... ಈಗ್ ಎಂಗ್ ಓಗ್ಲಿ ಯೋಳೀ...ಆಗಕ್ಕಿಲ್ಲ ತಗಳಿ ! ಇಂಗೆ ಒಂಟೋಓಓಓಗ್ಲಿ ಪಿರಾನ.
ನಾನು ಬರುತ್ತಿದ್ದ ನಗುವನ್ನ ಕಷ್ಟ ಪಟ್ಟು ತಡೆದೆ. ನಾನಂದೆ,
"ತಾಯಮ್ಮ...ಹೊಟ್ಟೆ ಕುಯ್ಯಬೇಕೋ ಇಲ್ವೋ ಅಂತ ನೋಡೊಕೆ ನೆ ಈ ಬಯಾಪ್ಸಿ ಮಾಡೊದು...ಸುಮ್ ಸುಮ್ನೆ ಹೊಟ್ಟೆ ಕುಯ್ಯೋಕೆ ನೀವೇನು ನೀವು ತಿನ್ನೋ ಕೋಳಿಯೋ ಅಥವ ನಾವು ತಿನ್ನೋ ಕುಂಬಳಕಾಯೋ ? ಗೊತ್ತಿರೋ ಡಾಕ್ಟರ್ರೇ ಇರೋವಾಗ ಎಂಥಾ ಭಯ ? ನರ್ಸ್ ಗಳೆಲ್ಲ ಚೆನ್ನಾಗ್ ನೋಡ್ಕೋತಾರೆ ಡಾಕ್ಟರ್ ಭಯದಿಂದ. ಹೆದ್ರುಕೋಬೇಡಿ.. ಏನಾಗಲ್ಲ...ಮೊದ್ಲು ಊರಿಗೆ ಟೆಲಿಗ್ರಾಂ ಕಳಿಸಿ ನಿಮ್ಮ ವಾರಗಿತ್ತಿಯನ್ನೋ ಯಾರಾರ್ನು ಕರ್ಸ್ಕೊಳ್ಳಿ. ಒಬ್ಬರೆ ಆಸ್ಪತ್ರೆಗೆಲ್ಲ ಹೋಗ್ಬೇಡಿ. ಹೋಗಿ ಬೇಗ ಬಯಾಪ್ಸಿ ಮಾಡಿಸಿ.... ಹೀಗೆ ನರಳಬೇಡಿ.
ಆಆಆಆಅಂ೦೦೦೦೦೦೦೦ ಅಂದರು ತಾಯಮ್ಮ...ಜ್ಞಾನೋದಯವಾದಂತೆ. ಪುಳಕ್ಕಂತ ಒಂದು ಡೌಟು ಬಂದು ನನ್ನನ್ನ ಮತ್ತೆ ಕೇಳಿದರು -
"ಅಲ್ಲಾ.....ಹೊಟ್ತೆ ಕುಯ್ದೇ ಇದ್ರೆ ಏನಾಗದೆ ಒಳಾಗೆ ಅಂತ ಎಂಗ್ಗೊತಾಯ್ತದೆ ?"
ನನಗೆ ಬಯಾಪ್ಸಿ ಬಗ್ಗೆ ಏನೂ ಗೊತ್ತಿರಲಿಲ್ಲ...ಇವರಿಗೆ ಹೇಗೆ ಹೇಳದು ? ನನ್ನ ಮಾನದ ಪ್ರಶ್ನೆ! ಸರಿ ನಾನಂದೆ -
"ಏನಿಲ್ಲ ತಾಯಮ್ಮ, ಕುಯ್ಯದೇ ನೋಡುವ ಹಾಗೆ ಈಗ ಬೇಕಾದಷ್ಟು ಮೆಷಿನ್ನುಗಳನ್ನ ಈಗ ಕಂಡುಹಿಡಿದಿದ್ದಾರೆ. ಅದಕ್ಕೆ ಕುಯ್ಯದೇ ನೋಡಿ ತಿಳಿದುಕೊಳ್ಳಬಹುದು."
ಅವರು : "ಟಿವಿ ನೋಡಿ ಮಗು ಇಂಗದೇ ಅಂತ ಬಸುರಿಗಳಿಗಳಿಗೆ ತೋರ್ಸ್ತವ್ರಲ್ಲ..ಅಂಗಾ ?"
ನಾನು : "ಹೂ...ಒಂಥರಾ ಹಂಗೇ..."
Z : ultrasound scanning ಹಾಗೂ biopsy ಯನ್ನ ಎಷ್ಟು ಚೆನ್ನಾಗಿ confuse ಮಾಡ್ಕೊಂಡಿದಾರೆ ನೋಡು !
ನಾನು : ಹೂ....ಮತ್ತೆ ತಾಯಮ್ಮ ತಮ್ಮ questionnaire ತೆಗೆದರು. ನಾನು ಸರ್ವಜ್ಞೆ ಅಂದುಕೊಂಡು.
ತಾಯಮ್ಮ : ಅಲ್ಲ ಅಮ್ಮಾವ್ರೆ, ಈಗ ವೊಟ್ಟೇಲಿ ಏನಾದ್ರು ಅದೆ ಅಂದ್ರೆ ಕುಯ್ಯದೇ ತೆಗ್ಯಕ್ಕಾಗಕ್ಕಿಲ್ವಾ ? ನೀವು ಟಿವಿ ನೋಡ್ಕೊಂಡು ಅಮೇರಿಕದಲ್ಲಿರೋ ನಿಮ್ಮ ದೊಡ್ಡಪ್ಪನ ಜೊತೆ ಮಾತಾಡ್ತಿರಾ ಫೋನಿಲ್ಲದೇ ....ಅಂಗೇ ತೆಗ್ಯಕ್ಕಾಗಕ್ಕಿಲ್ವಾ ?
Z : excellent mess up of monitor with web cam and scanner ! uhahahaha !!!
ನಾನು : ನಗು ! ನಾನು ಅಲ್ಲಿ ಇವರಿಗೆ ಹೇಗಪ್ಪಾ ಹೇಳದು ಅಂತ ಯೋಚನೆಮಾಡುತ್ತಿದ್ದರೆ....
ಸರಿ, ನಾನಂದೆ,
ನಾವು ಮಾತಾಡೋದು ಬೇರೆ ಟಿವಿ, ಇದು ಬೇರೆ ಟಿವಿ ತಾಯಮ್ಮ...ಹಂಗೆಲ್ಲ ತೆಗ್ಯಕ್ಕಾಲ್ಲ, ಸಣ್ಣದಿದ್ದರೆ ಮಾತ್ರೆಯಲ್ಲೇ ಕರಗಿಸುತ್ತಾರೆ....ನೀವು ಹೋಗಿ ಬನ್ನಿ...ಗಾಬರಿಯಾಗಬೇಡಿ...ನಿಮಗೆ ಸೂಜಿ ಚುಚ್ಚಲ್ಲ.
ಅವರು : ಏನೋ ನೀವ್ ಯೋಳ್ತಿದೀರಾ ಅಂತ ಎದೆ ಗಟ್ಟಿಮಾಡ್ಕಂಡ್ ಓಯ್ತಿವ್ನಿ....ನಮ್ಮೂರ್ನಾಗೆ ಪಟೆಲ್ರ ಮೊಬೈಲ್ ಗೆ ಮಗನ ಕೈಲಿ ಫೋನ್ ಮಾಡ್ಸಿ ಕರ್ಸ್ಕೊತಿನಿ ವಾರ್ಗಿತ್ತೀನ.... ನಾನ್ ಈಟ್ ದಿನ ಜೀವಾ ತೇಯ್ದಿವ್ನಿ...ಈಗ ಅವ್ರೂ ಸಲ್ಪ ತೇಯ್ಲಿ ಅತ್ಲಾಗೆ....
ಅಂತೂ ಆಸ್ಪತ್ರೆಗೆ ಹೋಗಲು ಗಟ್ಟಿ ಮನಸ್ಸು ಮಾಡಿದರಲ್ಲ, ಸದ್ಯ ಅಂದುಕೊಂಡೆ. ಮುಗಿಯಿತಪ್ಪಾ ರಗಳೆ ಅಂದರೆ ಮತ್ತೆ ಶುರುವಾಯ್ತು ಅವರ ಪ್ರಶ್ನಾವಳಿ.
"ಅಲ್ಲಾ ಅಮ್ಮಾವ್ರೆ....ಇದೆಂಥದ್ದು ಮಾತ್ರೆ...ಡುಮ್ಮಕ್ಕೆ ? ಏನಕ್ಕೆ ತಗಬೇಕು ಅಂತ ಗೊತ್ತಿಲ್ಲ....ಏಟ್ ದುಡ್ಡು ಅಂತೀರಿ ...ಇನ್ನೂರು ರುಪಾಯಿ ಬರೀ ಮಾತ್ರೆ ಗೇ ಆಗ್ ಓಯ್ತ್ ತಗಳಿ....ಇದು ನೋಡಿ ಏನಕ್ಕೆ "ಅಂತ ಎಂದು ತಂದಿದ್ದ ಮಾತ್ರೆಗಳು, ಪ್ರಿಸ್ಚ್ರಿಪ್ಷನ್ನು ನನ್ನ ಮುಂದಿಟ್ಟರು.
ನಾನು ನೋಡಿದೆ. ನಿಶ್ಶಕ್ತಿಗೆ ಗೆ ಆ ಮಾತ್ರೆಗಳು ಅಂತ ಗೊತ್ತಾಯ್ತು. ಇನ್ನು ಬಿ ಕಾಂಪ್ಲೆಕ್ಸ್ ಮಾತ್ರೆಗಳು..ವಿಟಮಿನ್ ಕೊರತೆಗೆ. ರಕ್ತಹೀನತೆಗೊಂದಿಷ್ಟು. ಇದನ್ನೆಲ್ಲಾ ಹೇಗೆ ಹೇಳೋದಿವರಿಗೆ ? ದುಡಿದು ಹಣ್ಣಗಾದರೂ, ಉಪವಾಸ ಮಾಡಿದರು ತಾನು ಗಟ್ಟಗಿತ್ತಿ ಅನ್ನೋ ಅಚಲವಾದನಂಬಿಕೆ ಇವರಿಗೆ. ಇದನ್ನೆಲ್ಲ ನಾನು ಹೇಳಿದರೆ ಇವರು ನಂಬೋ ಪೈಕಿಯಲ್ಲ." ಎಂಟೆಂಟು ಮನೆಲಿ ಡುಡಿತಿನಿ..ನಂಗೆಂಥದ್ದು ನಿಶ್ಶಕ್ತಿ ಇವ್ರ ಮನೆಯಾಳಾಗ...ವೋಗಿ ನಾನ್ ವೋಗಕ್ಕಿಲ್ಲ...ಸುಳ್ಳು ಯೋಳಿ ದುಡ್ದ್ ತಿಂತಾರೆ ಬಡ್ಡಿಮಕ್ಳು ! ಕಾಲ ಕೆಟ್ಟೋಗದೆ ! ಸುಮ್ಸುಮ್ನೆ ವೊಟ್ಟೆ ಕುಯ್ತಾರೆ ನೋಡಿ...ನಂಗೊತ್ತು ಎಲ್ಲಾ ! ಟಮೇಟೋ ಮನೇಲಿ ಬೆಳೆದು ತಿಂತಿವಿ, ರಕ್ತ ಇಲ್ವಂತೆ....ಏನ್ ಕಂಡವ್ರೆ ಅಂತ ? ಇನ್ನು ಈ ಡುಮ್ಮು ಮಾತ್ರೆ...ಗಂಟ್ಲಲ್ಲಿ ಇಳಿಯದೇಲ್ಲಾ ಅನ್ನತ್ತೆ...ಯೆಂಗ್ ತಿನ್ನೋದವ್ವಾ ? ನಾನ್ ಓಗಕ್ಕಿಲ್ಲ...ಮಾತ್ರೆ ನೂ ತಗಳಾಕ್ಕಿಲ್ಲಾ " ಅಂತೆಲ್ಲ ಉಲ್ಟಾ ಹೊಡಿದರೆ ಏನ್ ಗತಿ ? ನಾನಂದೆ-
ವಯಸ್ಸು ನಲ್ವತ್ತಾಯ್ತಲ್ಲ ತಾಯಮ್ಮ....ದೇಹದಲ್ಲಿ ಬದಲಾವಣೆ ಆಗಕ್ಕೆ ಶುರುವಾಗತ್ತೆ...ನಿಮ್ಗೂ ಗೊತ್ತಿದೆ ಅಲ್ವಾ ? ಅದು ತೊಂದ್ರೆ ಕೊಡದೇ ಇರ್ಲಿ ಅಂತ ಇಷ್ಟ್ ಮಾತ್ರೆ ಕೊಟ್ಟಿದ್ದಾರೆ.
ಓ............ ಅಂಗೆ ! ಈಗ್ ಏನೋ ಒಂಥರಾ ಧೈರ್ಯ ಬರ್ತಿದೆ....ಏನೂ ಆಗಲ್ಲ ಅಂತೀರಾ ?
ನಾನು : ಏನೂ ಆಗಲ್ಲ !
ಅವರ ರೋಗಪೀಡಿತ ಮುಖದಲ್ಲಿ ಎಲ್ಲೋ ಸಮಾಧಾನದ ನಗುವೊಂದು ಮಿಂಚಿ ಮಾಯವಾಯ್ತು. ನಾಳೇ ಕೆಲಸಕ್ಕೆ ಬರಬೇಡಿ, ಇಂಡು ಕೆಲಸ ಮಾಡಬೇಡಿ ಎಂದು ಹೇಳಿಯೇ ಕಳಿಸಿದೆವು. ತಾಯಮ್ಮ ಡಾಕ್ಟರ್ ಬಳಿ ಹೊರಡಲನುವಾದರು.
Z : ಒಳ್ಳೇ ತಾಯಮ್ಮ ! ಆಮೇಲೆ ? ಮಾಡಿಸಿದರಾ ಬಯಾಪ್ಸಿ ? ಏನ್ ಬಂತು ರೆಪೋರ್ಟ್ ?
ನಾನು : ಈಗ ನಂಗೆ ಸಲ್ಪ ಕೆಲ್ಸ ಇದೆ. second round ಪಾತ್ರೆ ತೊಳಿಬೇಕು. ನಾಳೆ ಕಥೆ ಮುಂದುವರಿಸುವೆ.

Wednesday, June 11, 2008
Annie, ಪಿಂಟೂ ಮತ್ತು ನಾವು part 3
Z : ಬರಬೇಕು...ದಯಮಾಡಿಸಬೇಕು ಮಹಾಪ್ರಳಯಾಂತಕಿ ಕ್ಷೀರಸಮುದ್ರರಾಜತನೆಯವರು...ನಮ್ಮ ಮೇಲೆ ತಮ್ಮ ಕೃಪಾದೃಷ್ಟಿಯನ್ನು ಹಾಯಿಸಿ ನಮ್ಮನ್ನು ಪಾವನನ್ನಾಗಿಸಬೇಕು !
ನಾನು :(ಸ್ವಗತ) : ಇಷ್ಟೋಂದ್ ಹೊಗಳ್ತಿರೋದನ್ನ ನೋಡಿದ್ರೆ ಏನೋ ಆಗಿದೆ ಅಂತ ನನ್ನ intuition ಹೇಳ್ತಿದೆ. Z ಗೆ ನನ್ನಿಂದ ಏನೋ ಆಗಬೇಕಿದೆ mostly.
ನಿಮ್ಮ ಹೊಗಳಿಕೆಯಿಂದ ನಮ್ಮನ್ನು ಅಟ್ಟಕ್ಕೇರಿಸುವ ಅವಶ್ಯಕತೆ ಇಲ್ಲ...come to the point !
Z : ಮೂಡ್ ಸರಿ ಇದ್ದಂತಿಲ್ಲ ಮೇಡಮ್ ದು...ಶಾಂತಚಿತ್ತರಾಗಬೇಕೆಂದು ಮನವಿ.
ನಾನು : ಡಬ್ಬಾ, ಡಕೋಟಾ, ದಟ್ಟ ದರಿದ್ರ , crap, ಖಟಾರ, hopeless-ಅತೀತ, ಬೆದರುಬೊಂಬೆ ಸದೃಶ question paper ಗಳನ್ನ answer ಮಾಡಿದ್ರೆ ಯಾರ mood ತಾನೆ ಶಾಂತವಾಗಿರತ್ತೆ ?
Z : ಶಾಂತಿಯಿರಲಿ ರಾಜಕುಮಾರಿಯವರೇ...ತಲೆಇರುವಂಥವರು ತಾವು. ಅಲ್ಲಲ್ಲ...ಸಾಕ್ಷಾತ್ ತಲೆಯೇ ತಾವು. ಮೂಗಿನವರೆಗೂ ಇಳಿದು ಅದರ ತುದಿಗೆ ಕೋಪ ತರಿಸಿಕೊಳ್ಳಬಾರದೆಂದು ಬೇಡಿಕೆ.
ನಾನು : ಸಾಕ್ ಸುಮ್ನೆ ಇರೆ hopeless fellow ! ಸಾಯ್ತಾಯಿದಿನಿ ನಾನಿಲ್ಲಿ...ಬೇಕಂತ್ಲೇ hopeless paper ಗಳನ್ನ
set ಮಾಡೀ ಕಾಡ್ಸಿದಾರೆ ನಮ್ನ ! ಅಷ್ಟರ ಮಧ್ಯ...ನಿಂದ್ ಬೇರೆ...
Z : dont worry ಮಾಡ್ಕೊಳ್ಳೀ...ನೀವಿನ್ನು ಸತ್ತಿಲ್ಲಾ...ಯಾಕಂದ್ರೆ ನಾನಿನ್ನೂ ಬದ್ಕಿದಿನಿ.
ನಾನು : ಓಹೋ...ಇನ್ನು ಬದ್ಕಿದಿರೋ....ಗೊತ್ತಿರ್ಲಿಲ್ಲ.
Z : ತಲೆಯ ಮೇಲಿನ bulb ಇನ switch ಅನ್ನು ಕೃಪೆ ತೋರಿ on ಮಾಡ್ಕೊಳ್ಳಿ.
ನಾನು : ಬೇಡಾ.....ನಂಗೆ ಕೋಪ ತರಿಸ್ಬೇಡಾ !!!!!!!!!!!!!!!!!!!!!!!!!!!!!!!!!!!!!
Z : ಕೋಪವೆಂಬುದನರ್ಥ ಸಾಧನ
ಕೋಪವೇ ಸಂಸಾರ ಬಂಧನ
ಕೋಪದಿಂದಿಹಪರದ ಸುಕೃತವು ಲಯವನೈದುವುದು
ಕೋಪವನು ವರ್ಜಿಸಲು ಬೇಹುದು
ಕೋಪವುಳ್ಳವಳಾವಳಾಗಲಿ
ಕಾಕು"ಮತಿ"ಯು ಇಹಪರಕೆ ಚಿತ್ತೈಸೆಂದಳಾ ಜಿಂದಗೀ.....
ನಾನು : !!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!
Z : original ಇಂತಿದೆ:
ಕೋಪವೆಂಬುದನರ್ಥ ಸಾಧನ
ಕೋಪವೇ ಸಂಸಾರ ಬಂಧನ
ಕೋಪದಿಂದಿಹಪರದ ಸುಕೃತವು ಲಯವನೈದುವುದು
ಕೋಪವನು ವರ್ಜಿಸಲು ಬೇಹುದು
ಕೋಪವುಳ್ಳವನಾವನಾಗಲಿ
ಕಾಪುರುಷನಿಹಪರಕೆ ಚಿತ್ತೈಸೆಂದನಾ ವಿದುರ
ಗಾಬರಿಯಾಗಬೇಡಿ... anti - ಗಾಬರಿfication formula ಇರುವ syrup ಅನ್ನು ಕಂಡುಹಿಡಿದವರೇ ಈ ರೀತಿ ಗಾಬರಿಯಾದರೆ ಹೇಗೆ ? ಒಂದೆರಡು ಬಾಟಲ್ಲು ಗಂಟಲಿಗೆ ಸುರಿದುಕೊಳ್ಳುವಂಥವರಾಗಿ .....
ನಾನು : what ??????????
Z : ನಾನು ಹೇಳಿದ್ದು ಎರಡು ಬಾಟಲ್ಲು anti ಗಾಬರಿfication syrup ಸುರಿದುಕೊಳ್ಳೀ ಅಂತ.....ಅಪಾರ್ಥ ಕೂಡದು. ಈಗ ವಿಷಯಕ್ಕೆ ಬರಲಿಚ್ಛಿಸುತ್ತೇನೆ.
ನಾನು : ಬಲಗಾಲಿಟ್ಟು ಬಂದು tell-ಉವಂಥವಳಾಗು girl-ಏ.....
Z : Annie ಮತ್ತು ಪಿಂಟು ನನ್ನನ್ನು target ಮಾಡಿ ಹೀನಾ ಮಾನ ಬೈದಿದ್ದಾರೆ.....ನಿಮ್ಮನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ ಎಂದು ಹೇಳಲು ನನಗೆ ಖಂಡಿತಾ ಸಂತೋಷವಾಗುತ್ತಿಲ್ಲ.
ನಾನು : ಸರಿ.
Z : !!!!!!!!!!!!!!!!!!!!!!!!!!!!!!!!!!!!!
ನಾನು : ಈಗ ತಾವು ಒಂದೆರಡು ಬಾಟಲ್ಲು ಸುರಿದುಕೊಳ್ಳುವುದು.
Z : ಕರ್ಮಕಾಂಡ ! ಎಲಾ ವಿಧಿಯೇ !
ವಿಧಿ ವಿಪರೀತ, ವಿಧಿಯಾಘಾತ ವಿಧಿವಿಲಾಸವಿದು ಇದೇನಹಾ ...... head ruled ಆದರೂ ನನ್ನನ್ನ ಬಂದು ಕಾಪಾಡುತಾಳೇ ಎಂದುಕೊಂಡಿದ್ದರೆ ಹೀಗಾಯಿತೇ ? ನಾನು ಎಲ್ಲಿ , ಯಾರ ಬಳಿ ನನ್ನ ಅಳಲಿನ borewell ತೋಡಲಿ ?
ನಾನು : ಬೇರೆ ಗ್ರಹಗಳ ಮೇಲೆ try ಮಾಡು....ಭೂಮಿಮೇಲೆ ಜಾಗ ಇಲ್ಲ ಮತ್ತು ಭೂಮಿ ಮೇಲಿನ ಜನರ ತಲೆಯೆಲ್ಲಾ ಆಗಲೇ ತೂತು ಬಿದ್ದು ಹೋಗಿದೆ. ಯಾಕಂತೆ annie ಪಿಂಟು ಬೈದಿದ್ದು ?
Z : ಆವರ ಬೈಗುಳ ಮತ್ತು ಅದಕ್ಕೆ ನನ್ನ ಮರುಪ್ರಶ್ನೆಯನ್ನು ಒಮ್ಮೆ ಅವಗಾಹಿಸುವುದು.
ನಾನು : ಒಹ್ ಹೋ....ಸಖತ್ ರಾದ್ಧಾಂತವಾಗಿದೆ. ಎಲ್ಲಿಯವರಿಬ್ಬರೂ ?
Z : annie wardrobe ನಲ್ಲಿ.... ಪಿಂಟು curtain rod ಮೇಲೆ.
ನಾನು : ಕರಿ ಅವರನ್ನ.
[enter annie and pintu]
ನಾನು : ಎನ್ರೋ ಇದು ?
annie : ನಮ್ಮ ಕೋಪ.
ನಾನು : Z... ಆ ಪದ್ಯ ನ ಇವರ ಕಿವಿಯಲ್ಲಿ ಓದು ತುತ್ತೂರಿ ಥರ.
Z : ಕೋಪವೆಂಬುದು.........
ಪಿಂಟು : ಇದೆಲ್ಲ ಆಗಲ್ಲ head ruled. ನಮಗೆ ನ್ಯಾಯ ಬೇಕು.
ನಾನು : ಸರಿ...ಶಿಸ್ತುಬದ್ಧ ವಿಚಾರಣೆ ನಡೆದ ಮೇಲೆ ನ್ಯಾಯ ಧರ್ಮ ಎಲ್ಲ ತೀರ್ಮಾನ ಮಾಡಲಾಗತ್ತೆ. Z ....Lewis Carroll ಅವರ Alice in wonderland ಪುಸ್ತಕ ತಗೊಂಡು ಬಾ.
ಪ್ರಮಾಣ ಮಾಡಿ ಇಬ್ಬರು : truth ಅನ್ನೇ speakಕುತ್ತೇವೆ....truth ಅನ್ನಲ್ಲದೇ ಬೇರೇನು speakಕುವುದಿಲ್ಲ...ನಾವು speakಕುವುದೆಲ್ಲಾ truth -ಏ. Z....ನೀನು ಪ್ರಮಾಣ ಮಾಡು.
annie : head ruled...Z ನಮ್ಮನ್ನ ಮರೆತಿದ್ದಾಳೆ.
Z : ಶುದ್ಧ ಸುಳ್ಳು.
ನಾನು : Z...ಗಲಾಟೆ ಮಾಡ್ಬೇಡಾ...ಅವರನ್ನ ಮಾತಾಡೋಕೆ ಬಿಡು.
annie : ನೋಡು head ruled....ನಮ್ಮನ್ನ ನೋಡದೇ ಇಲ್ಲ ಇವಳು ಈಚೀಚೆಗೆ. ನಮಗೆ ಸಿಕ್ಕಾಪಟ್ಟೆ ಕೋಪ ಬಂದಿದೆ ಮತ್ತೆ ಬೇಜಾರೂ ಆಗಿದೆ. glorified ದಿಕ್ಕಿಲ್ಲದವರಾಗೋಗಿದ್ದೇವೆ ನಾವು. ಚಿಕ್ಕ ವಯಸ್ಸಿನಲ್ಲೇ ಚೆನ್ನಾಗಿತ್ತು...ಈಗ...who will listen to us ? who will talk to us... ಬೊಂಬೆಗಳಿಗೂ ವೃದ್ಧಾಶ್ರಮ ಇರ್ಬೇಕು ಅಂತ ನಾನು ಸರ್ಕಾರಕ್ಕೆ ಆಗ್ರಹ ಪಡಿಸುತ್ತೇನೆ.
ನಾನು : ಸರ್ಕಾರನೆಲ್ಲ ತರ್ಬೇಡಾ....ಈಗ್ ಏನ್ problem ? ಊಟ ತಿಂಡಿ ಸರೀಗೆ ಸಿಗ್ತಿಲ್ವಾ ? ಅಥವಾ ನಿಮ್ಮ ಬೇಡಿಕೆಗಳನ್ನು ಪೂರೈಸಿಲ್ವಾ ?
ಪಿಂಟು : ಊಟ ತಿಂಡಿ ಸದ್ಯ ...ಸಿಗ್ತಿದೆ. but gossip ಎಲ್ಲಾ ಮಿಸ್ ಆಗ್ತಿದೆ. ಯಾಕಂದ್ರೆ ಎಲ್ಲ ಹಿರಣ್ಮಯಿ ಹತ್ತಿರ ನೇ ಹೋಗ್ತಿವೆ...ನಮ್ ಹತ್ರ ಏನು ಬರ್ತಿಲ್ಲ.
ನಾನು : ಓಹೋ....ಹಿರಣ್ಮಯಿ ಗೆ competitionನ್ನಾ ? ಇದು j factor. ಇವಾಗ ವಿಷಯ ಗೊತ್ತಾಯ್ತು.
Z : yes yes yes !! ಸರೀಗೆ ಅಂದೆ ನೋಡು ನೀನು head ruled....ನಂದೇನು ತಪ್ಪಿಲ್ಲ.
ನಾನು : excuse me....judgement ಕೊಡಕ್ಕೆ ತಾವ್ಯಾರು ? if you dont know....ನಿಮ್ಮ ವಿಚಾರಣೆ ಇನ್ನು ಶುರು ನೇ ಆಗಿಲ್ಲ...so ಹಾಗೆ ಸುಮ್ಮನೆ silent ಆಗಿ ತೆಪ್ಪಗೆ ಇರಿ.
Z : ok. sorry.
ನಾನು : ಅದ್ ಏನ್ ಹುಚ್ಚೋ ನಿಮ್ಗಳಿಗೆ gossip ದು ? ಹಾ ? ಏನ್ ಮನೆ ಕಟ್ಟ್ತೀರಾ ಅದ್ನ ಇಟ್ಕೊಂಡು ? ಹಿರಣ್ಮಯಿ ಹೊಸಬ್ಬಳು ಪಾಪ...ಅವಳನ್ನ ಒಬ್ಬಳೇ ಬಿಟ್ಟೂ ನಾವೆಲ್ಲ ಗುಂಪು ಕಟ್ಟ್ಕೊಂಡ್ ಗುಸುಗುಸು ಅಂದ್ರೆ ಅವಳಿಗೆ ಬೇಜಾರ್ ಆಗಲ್ವಾ ? ನೋಡಿ....ಹಿರಣ್ಮಯಿಯ ಮೇಲಿನ ಕೋಪಾನ ನೀವು Z ಮೇಲೆ ತೀರಿಸ್ಕೊಳ್ಳೊಕೆ ಈ ಥರ ಬೈದ್ರೆ what ಅರ್ಥ ? ಅವಳು ಮಾನ ನಷ್ಟ ಮೊಕದ್ದಮೆ ಏನಾದ್ರು ಹಾಕಿದ್ದಿದ್ರೆ ನಿಮ್ ಮೇಲೆ ? ಏನ್ ಮಾಡ್ತಿದ್ದ್ರಿ ?
annie : head ruled !!! Dont give ideas !!!
ನಾನು : that was a possibility annie....good it didnt happen. ಬಂದಿರೋ ಹೊಸಬ್ರನ್ನ ಈ ಥರ isolate ಮಾಡಿ ಹಿಂದೆ ಗೊಣಗದು ತಪ್ಪು.
ಪಿಂಟು : judgement ನಮ್ಗೆ ಉಲ್ಟಾನೆ !!! ನೀನಂತೂ ನಮ್ಮ ಹತ್ರ ಬರದೇ ಇಲ್ಲ...ನಮ್ಮ ಮೇಲೆ ಒಂದು ಚೂರು ಪ್ರೀತಿ ಇಲ್ಲ ನಿಂಗೆ....ನಿನ್ನಿಂದ Z ಕೆಟ್ಟಳು. ನಮ್ಮನ್ನ ಮರೆತಳು.
ನಾನು : hey ಬೈಬೇಡ್ರೋ ನಮ್ಮಿಬ್ರನ್ನ ! we are not at fault.
annie : defend yourselves.
ನಾನು : ನಿಮ್ಮನ್ನ ಅಮ್ಮ ಕೆಲ್ಸದವರ ಮನೆಗೆ ಕಳಿಸ್ತಿನಿ ಅಂತ ಹೇಳ್ದಾಗ ನಿಮ್ಮನ್ನ ಕಾಪಾಡಿದ್ದು ಯಾರು ?
annie : Z.
ನಾನು : last moment ನಲ್ಲಿ ಅಮ್ಮ suitcase check ಮಾಡದೇ ಇದ್ದಿದ್ದ್ರೆ ನಿಮ್ಮಿಬ್ಬರನ್ನು IISc ಗೆ ನನ್ನೊಂದಿಗೆ parcel ಮಾಡುವ ಭೀಕರವಾದ sketch ಹಾಕಿದ್ದು ಯಾರು ?
ಪಿಂಟು :Z again.
ನಾನು : annie ಗೆ plastic surgery ಮಾಡಿದ್ದು ಯಾರು ?
ಪಿಂಟು : head ruled.
ನಾನು : ನಿಮಗೆ wardrobe ಏ safe ಜಾಗ ಅಂತ suggest ಮಾಡಿದ್ದು ಯಾರು ?
annie : head ruled.
ನಾನು : ಮತ್ತೆ ? ನಾವ್ ಮರ್ತಿದ್ದೀವಾ ನಿಮ್ನಾ ? ಹಾ ? ಸ್ಪೀಕಿ ಇವಾಗ !
annie ಮತ್ತು ಪಿಂಟು: sorry !!!!!!!!!!!!!!!!!!!!!!!!!!!!!!!!!!!!!!!!!!!!!!!
ನಾನು : ನಮ್ಮಿಬ್ಬರಿಗೆ ಮಾತ್ರ ಅಲ್ಲ...ಹಿರಣ್ಮಯಿ ಗೂ ಕೇಳಿ. no ditto-ing !!!
annie ಮತ್ತು ಪಿಂಟು : we are sorry hiranmayi.... let us be friends.
ನಾನು : yes ಅಂದಿದ್ದಾಳೆ ಅವಳು.
Z : ನಾನು acquitted ಆ ? without interrogation ?
ನಾನು : ಈ case ನಲ್ಲಿ ನೀನು acquitted -ಉ...ಯಾಕಂದ್ರೆ ಮರುಪ್ರಶ್ನೆಯಲ್ಲಿ ನಿನ್ನ points strong ಆಗಿದೆ. ಆದ್ರೆ ಇನ್ನೊಂದು case ಗೆ ನಿನ್ನನ್ನ ವಿಚಾರ್ಸ್ಕೋಬೇಕಾಗಿದೆ ನಾನು.
Z : ನಾನು ತಪ್ಪನ್ನು ಒಪ್ಪಿಕೊಳ್ಳುತ್ತೇನೆ head ruled.... I didn't mean to do it....it just happened.... sorry....very sorry...extremely sorry !!!!
ನಾನು : Z , remember one thing. fools repeat the same mistake...wise make new mistakes. you choose what you want to be. ನಾನು ಹೇಳೋದು ಇಷ್ಟೆ.
annie : judgement please !!!
ನಾನು : case 1: Z acquitted. annie and pintu....both of you.....100 ಭಸ್ಕಿ ಹೊಡೆಯಕ್ಕದ್ದು....for J factor !
case 2: Z ಗೆ ಗೃಹಬಂಧನವನ್ನು ಅನಿರ್ದಿಷ್ಟ ಕಾಲಾವಧಿಯವರೆಗೆ ವಿಸ್ತರಿಸಲಾಗಿದೆ.
Z : ಕ್ಷಮೆ ಇಲ್ವಾ?
ನಾನು : don't even think about it.
Z : i accept. ಆದ್ರೆ phone ಮಾಡದು ನಿಲ್ಲಿಸಬೇಡಾ.... pleeeeaaaaaaaaaassssssssssssssseeeeeeeeeee !!!!!!!!!!!!!!!!!!!!!!!!!!!!!!!!!!!!!!!!!!!!!!
ನಾನು : ok.
Line on hold.

Monday, May 12, 2008
Annie, ಪಿಂಟೂ ಮತ್ತು ನಾವು part 2
Annie : ಪಿಂಟೂ...ಸಿಕ್ಕಾಕೊಂಡ್ವಿ !!!
ಪಿಂಟು : don't worry...z can be managed...
Annie : ನೀನೆ ಮಾತಾಡು...ನಾನು ಈಗ ಮೌನಾನ ಆಶ್ರಯಿಸುವೆ !!
Z : ಹೂ....ಹೇಳಿ ಏನ್ ಗುಸುಗುಸು ಅದು ?
ಪಿಂಟು :(ಸ್ವಗತ) ಕಳ್ಳಿ annie.... ನಡು ನೀರಲ್ಲಿ ಕೈಬಿಟ್ಟಳು ನನ್ನ !!
ಏನಿಲ್ಲ z....ಹಾಗೇ ಸುಮ್ಮನೆ ಹರಟೆ ಹೊಡಿತಿದ್ವಿ.... time pass ಗೆ...
Z : time pass ಗೆ ನನ್ನ ತೇಜೋವಧೆ ಮಾಡ್ತಿದ್ದೀರಾ ? hopeless fellows !!! ನನಗೆ ಎಲ್ಲಾ ಕೇಳಿಸಿತು !! ನನ್ನ ಬೈಬೇಕು ಅಂತ ಆಸೆ ಇದ್ರೆ ಮುಂದೆ ಬಂದು ಬೈಯಿರಿ..ಈ ಥರ ಬೆನ್ನ ಹಿಂದೆ ಚೂರಿ ಹಾಕಿ ನೀವು ಮನುಷ್ಯರೇ ಆಗೋದ್ರಲ್ಲೊ !!! ಛೆ ಛೆ ಛೆ ಛೆ.....ಘನ ಘೋರ ಭೀಕರವಾದ ಅನ್ಯಾಯ !!!
ಪಿಂಟು : ಶಾಂತಿ ಶಾಂತಿ ಶಾಂತಿ !!! ನಾವ್ ನಿನ್ನ ಬೈತಿರ್ಲಿಲ್ಲಪ್ಪ !! ಸುಮ್ನೆ ಹಾಗೆ .....
Z : ....ಉಗಿತಿದ್ದಿರಿ....hopeless fellow ಅಂತ ! ಪಿಂಟು..ಕಡೆಗೂ ತೋರ್ಸ್ಬಿಟ್ಟ್ಯಲ್ಲ ನಿನ್ನ ಕೋತಿ ಬುದ್ಧಿನ !! ಹಾ !!! ನಾನು ಏನ್ ಅನ್ಯಾಯ ಮಾಡಿದ್ನೋ ನಿಂಗೆ ? head ruled ಗೆ ಒಂದಕ್ಷರ ನೂ ಬೈದೆ ನನ್ನೇ target ಮಾಡಿದ್ದೀಯಲ್ಲೊ !!!
ಪಿಂಟು : head ruled ನಮಗೆ ಮೊದ್ಲೇ ಹೇಳಿಬಿಟ್ಟಿದ್ದಳು...ನಾನಿನ್ನು ನಿಮ್ಮ ಬಗ್ಗೆ concentrate ಮಾಡೊಕಾಗಲ್ಲ ಕಣ್ರಪ್ಪ...ಸಿಕ್ಕ್ ಸಿಕ್ಕಾಪಟ್ಟೆ ಕೆಲ್ಸ ಇರತ್ತೆ ನಂಗೆ ಇನ್ಮೇಂದ...ಏನಿದ್ರು Z ನೋಡ್ಕೋತಾಳೆ ನಿಮ್ಮನ್ನ ಅಂತ. ನೀನಿದ್ದೀಯಲ್ಲ...ನೋಡ್ಕೋತಿನಿ ಅಂತ ರಾಜಕೀಯ ಆಶ್ವಾಸನೆ ಕೊಟ್ಟು ನಮಗೆ ಮೋಸ ಮಾಡಿದ್ದೀಯ !!
Z : ಇಲ್ಲಾ ಕಣೋ...ನನ್ನ ಮಾತು ಕೇಳು. ಪ್ಲೀಸ್ !!! ನಾನೇನು ಬೇಕು ಅಂತ ನಿಮ್ಮಿಂದ ದೂರ ಆಗಿಲ್ಲ ಆಯ್ತ...ನಿಮ್ ಹತ್ರ volume ಗಟ್ಟಲೆ ವಿಷಯಗಳನ್ನ ಹೇಳೋದಿದೆ. ಆದ್ರೆ ನಾನು head ruled ಕಡೆ ಸಲ್ಪ ಗಮನ ಕೊಡ್ಬೇಕು. ಅವಳು ಪಾಪ ಪ್ರಪಂಚದ ಜೊತೆಗೆ ಇರ್ತಾಳೇ ದಿನಾಗ್ಲು....ನನ್ನನ್ನ ಮತ್ತು ನನ್ನ innocence ನ protect ಮಾಡೋಕೆ ಅವಳ್ಲು ಸಖತ್ tough ಆಗಿರ್ತಾಳೆ....ನಾನು ಅವಳ ಉಪಕಾರಕ್ಕೆ ಪ್ರತ್ಯುಪಕಾರ ಮಾಡೋದು ಬೇಡ್ವಾ ?ಅವಳ daily experiences ನೆಲ್ಲ emotional background ನಲ್ಲಿ scan ಮಾಡ್ಲೇಬೇಕು. ನೀವು ನನ್ನ confidants ಹೇಗೋ ಹಾಗೇ ನಾನವಳ confidant. ಒಮ್ಮೊಮ್ಮೆ ಅವಳ friends emotional ಆಗೋದ್ರೆ ಅವರ ತಕ್ಕ ಹಾಗೆ ಸ್ಪಂದಿಸಲು ಲೋಕಕ್ಕೆ ಗೊತ್ತಾಗದಿರುವ ಹಾಗೆ ನಾನವಳನ್ನ replace ಮಾಡಬೇಕು. ಲಕ್ಷ್ಮಿ ಅವಳು ಹೊರಗೆ...ಒಳಗೆ ನಾವಿಬ್ರು...ನಮ್ಮಿಬ್ಬರ switch overs ಲಕ್ಷ್ಮಿಯ image ನ hamper ಮಾಡ್ಬಾರ್ದು....ಎಷ್ಟ್ ಕಷ್ಟ ಗೊತ್ತಾ ಇದು....ಇಷ್ಟೆಲ್ಲಾ ಇರ್ಬೇಕಾದ್ರೆ ನೀವ್ ನಮ್ಮನ್ನ ಅರ್ಥ ಮಾಡ್ಕೊಳ್ಳದೇ ಈಥರ ಆರೋಪ ಪಟ್ಟಿ ನ ಸಲ್ಲಿಸ್ತೀರಾ ? ಇರ್ಲಿ ಇರ್ಲಿ...head ruled ಬರ್ಲಿ , ಅವಳೇ ಸರಿ ನಿಮ್ಗೆ ಪಾಠ ಕಲ್ಸಕ್ಕೆ. ನಾನಿದರ ಬಗ್ಗೆ ಹೆಚ್ಚು ಮಾತಾಡದಿರುವುದೇ ಒಳ್ಳೆಯದು.
annie : ಎಲ್ಲ್ ಹಾಳಾಗೋಗಿದಾಳೇ ಅವಳು ?
ಪಿಂಟು : ಸದ್ಯ ಮಾತಾಡಿದಳು annie. go ahead and ವಿಚಾರ್ಸ್ಕೋ-fy annie !
Z : ಆಹ !! ತಾವೂ ಬಂದ್ರೋ....ಮಾತಿಗೆ ? annie -ಜಿ ....head ruled ಗೆ preparatory exams ನಡಿತಿದೆ. ನಾಳೆ ಇಂದ ಶುರುವಾಗಬೇಕಿದ್ದ ಪರೀಕ್ಷೆ ಸದ್ಯೋಜಾತನ ಮಹತ್ಕೃಪೆ ಇಂದ ಶುಕ್ರವಾರಕ್ಕೆ postpone ಆಗಿದೆ. ಅದಕ್ಕೆ ಅವಳು ಇವತ್ತು ರಾತ್ರಿ terrace ಮೇಲೆ ಕೂತು astrophysics ಓದುವ sketch ನ ತಲೆ ಲಿ ತಯಾರಿಸುತ್ತಿದ್ದಾಳೆ. ಆದ್ದರಿಂದ preparatory exams ಮತ್ತು ಅದಾದ ತತ್ಕ್ಷಣ ಆರಂಭವಾಗುವ pracs, final theory ಮತ್ತು pracs ಮುಗಿಯುವ ತನಕ (june 22nd) ರ ವರೆಗೂ ಅವಳು ನಿಮಗೆ ಮತ್ತು ಬ್ಲಾಗ್ ಪ್ರಪಂಚದಲ್ಲಿ ಕಾಣಸಿಗುವುದಿಲ್ಲ . ನೀನು ಅವಳನ್ನು ವಿಚಾರಿಸಿಕೊಳ್ಳೊ idea ಇಟ್ಟುಕೊಂಡಿದ್ದರೆ june 22 nd ತನಕ ಕಾಯಿ. ಆಮೇಲೆ ಯಾರು ಯಾರನ್ನ ವಿಚಾರ್ಸ್ಕೋತಾರೆ ಅಂತ ಗೊತ್ತಾಗತ್ತೆ. ನಾನು ಅಷ್ಟೇ...ಅವಳಿಗೆ support ಆಗಿ ಸದ್ಯೋಜಾತನ ಕಡೆಯಿಂದ depute ಆಗಿರೋದ್ರಿಂದ ನಿನಗೂ ಸಿಗುವುದಿಲ್ಲ ಮತ್ತು ಬ್ಲಾಗಿಸಲೂ ಸಾಧ್ಯವಿಲ್ಲ !
annie ಮತ್ತು ಪಿಂಟು : ok !
Z : ಏನ್ ಕಾಲ ಬಂತಪ್ಪ ಸದ್ಯೋಜಾತ ! ಬೊಂಬೆಗಳೂ ok ಅನ್ನೋ ಹಾಗೆ ಆಗೋಯ್ತಲ್ಲ !! ಕಾಲಾಯ ತಸ್ಮೈ ನಮಃ !! ನಿಮ್ಮಿಬ್ಬರನ್ನು ಸರಿಯಾಗಿ ವಿಚಾರಿಸಿಕೊಳ್ಳಲು ಬರ್ತಾಳೆ head ruled , ಜೊತೆಗೆ ನಾನೂ... on june 22nd. ಅಲ್ಲಿ ವರೆಗೂ ....

Wednesday, May 7, 2008
Annie, ಪಿಂಟೂ, ಮತ್ತು ನಾವು-part 1
Z : ಇಷ್ಟು ದಿನ ನಾನೂ head ruled ಇಬ್ಬರೇ ಮಾತಾಡಿದಿವಿ. ಒಂದು ವಾರದಿಂದ head ruled campus recruitment ನಲ್ಲಿ ಸಖತ್ busy ಆಗೋಗಿದಾಳೆ ಪಾಪ. ನನಗೆ chocolate ಕೊಡಿಸದೇ ಕಾಡಿಸ್ತಿದಾಳೆ !! ಮೊನ್ನೆ ನಮ್ಮ ಪ್ರಾಣ ಸ್ನೇಹಿತರು, ನಿಜವಾದ ಬಂಧುಗಳಾದ annie ಮತ್ತು ಪಿಂಟು ಇಬ್ಬರೂ ಗುಸುಗುಸು ಅಂತಿದ್ರು ನಮ್ಮ wardrobe ನಲ್ಲಿ, ನಮ್ಮ ಬಗ್ಗೆ. ನಾನದನ್ನ ಕದ್ದು ಕೇಳಿಸಿಕೊಂಡೆ. ನಮಗೆ ತಿಳಿಬಾರ್ದು ಅಂತ ಇದ್ದರು, but ನನಗೆ ಗೊತ್ತಿದೆ ಅಂತ ಅವರಿಗೆ ಗೊತ್ತಿಲ್ಲ. head ruled ಬರ್ಲಿ....ಇದನ್ನ ಓದ್ಲಿ , ಆಮೇಲೆ ಏನ್ ಮಾಡ್ಬೇಕು ಅಂತ ಅವಳೆ decide ಮಾಡ್ಲಿ .ತಲೆ ಅವಳಿಗೆ ತಾನೇ ಇರದು ? ಉಪಯೋಗಿಸಲಿ. ಇಷ್ಟು ದಿನ head ruled ಕುಟ್ಟಿದ್ದಳು....ಇವತ್ತು ನಾನು, Z ಕುಟ್ಟುತ್ತಿದ್ದೀನಿ.

ಇವನ ಹೆಸರು ಪಿಂಟು.
ಮೊನ್ನೆಯ ದಿನ ನಾನು chocolate less ಆಗಿ, head ruled ನ " ಲೇ please ಲೇ...ನೀನು full busy ಆಗೋಕೆ ಮುಂಚೆ ಒಂದೆ ಒಂದು chocolate ಕೊಡ್ಸು ಅಂತ ಒಂದು SMS ಕಳಿಸಿದೆ. no reply. ಹೊಸ bedsheet ತೆಗೆಯಲು wardrobe ತೆಗಿಯಣಾ ಅಂತ handle ಹಿಡ್ಕೊಂಡೆ...ಒಳಗಿಂದ ಪಿಸು ಪಿಸು ಮಾತಿನ ಶಬ್ದ !! curiosity ತಡಿಯಕ್ಕಾಗ್ಲಿಲ್ಲ .ಗಮನ ಇಟ್ಟು ಅದು ಯಾರ ಮಾತು ಅಂತ ಪತ್ತೆ ಹಚ್ಚಲು ಯತ್ನಿಸಿದೆ. ಆಗ full josh ನಲ್ಲಿ ಪಿಂಟು ಅಳಲು ತೋಡಿಕೊಳ್ಳುತ್ತಿದ್ದ .
ಪಿಂಟು : ...... ನಮ್ಮನ ಮರ್ತೇಬಿಟ್ಟಿದ್ದಾರೆ ಇಬ್ರು...head ruled + z. ಅಲ್ಲ...ನೀನು 22 ವರ್ಷದಿಂದ and ನಾನು 16 ವರ್ಷದಿಂದ ಅವರಿಬ್ಬರ ಜೊತೆಗೆ ಇದ್ದೀವಿ. ನನಗಿಂತ ನಿಂಗೆ ಚೆನ್ನಾಗಿ ಇವ್ರಿಬ್ರು ಗೊತ್ತಲ್ವ annie ? ಹೀಗೆಂದೂ ಮಾಡೋರಲ್ಲ ಇವ್ರು....ಏನಾಗೊಯ್ತು ???
annie : head ruled ನ ಬಿಡು...ಅವಳು ಯಾವಾಗ್ಲು busy. ಆದರೆ z ಗೆ ಏನ್ ಆಯ್ತು ? ಇತ್ತೀಚೆಗೆ ?
wait......blogging ಶುರು ಮಾಡಿದ್ಮೆಲೆ ಇವ್ರಿಬ್ರು ಹೀಗಾಗಿರದು. ಅಲ್ಲಿ ತಂಕ ನೆಟ್ಟಗಿದ್ದರು.
ಪಿಂಟು : valid point annie. blogging ಶುರುವಾದಮೇಲೆ ನಮ್ಮನ್ನ ನೋಡೋದು ಕಮ್ಮಿಯಾಗಿದೆ. ಇವಿಬ್ಬರೆ ಗುಸುಗುಸು ಅಂತಿರ್ತಾರೆ ಹೊರ್ತು ನಮ್ಮನ್ನ include ಮಾಡ್ಕೊಳ್ಳೋದನ್ನ ಮರ್ತಿದ್ದಾರೆ. ಮತ್ತೆ ನಮ್ಮ ಜೊತೆಗೆ competition ಮಾಡೊಕೆ ಹಿರಣ್ಮಯಿ ಅಂತ ಒಂದು ನೋಕಿಯ ಫೋನ್ ಬಂದಿದೆ. ಫೋಟೊ ತೆಗಿತಿರ್ತಾಳೆ...ಇಲ್ಲ ಮಾತಾಡ್ತಿರ್ತಾಳೆ...ಇಲ್ಲಾ SMS ಕುಟ್ಟ್ತಿರ್ತಾಳೆ. ನಮಗೆ courtesy ಗೆ ಅಂತ ಒಂದು Hi ಬೇಡ್ವಾ ಇವರಿಬ್ರಿಂದ ! ನಿನ್ನ wardrobe ನಲ್ಲಿ...ನನ್ನ curtain rod ಮೇಲೆ ಇರೋ ಹಾಗೆ ಮಾಡಿದ್ದೇ ಈ ಹಿರಣ್ಮಯಿ !!!! ನೋಡು...ಅವಳನ್ನ ಪಕ್ಕದಲ್ಲಿ ಮಲಗಿಸಿಕೊಂಡು ಮಲಗುತ್ತಾಳೆ ಈಗ.... ಬೆಳಗ್ಗೆ ಎದ್ದು ದೇವರ ಫೋಟೋ ನೋಡಿ ನಮಸ್ಕಾರ ಮಾಡಿ...Hi annie...Hi pints !! good morning !! ಅಂತ ಹೇಳೋರು...ಈಗ ... good morning hiranmayi !!!
annie : ಹೂ.....ನಾನೂ notice ಮಾಡಿದೆ....22 years.... ನನ್ನ ಜಾಗನ ಯಾರಿಗೂ ಬಿಟ್ಟು ಕೊಟ್ಟಿರಲಿಲ್ಲ....and 16 years ಇಂದ ನೀನು....ನಮ್ಮಿಬ್ಬರನ್ನು ಓಡಿಸ್ಬಿಟ್ಟಳಲ್ಲ...ಹಿರಣ್ಮಯಿಗೆ ಧಿಕ್ಕಾರ !!
Z :(ಸ್ವಗತ) ಆಹ....ಬೊಂಬೆಗಳಿಗೂ ಅರಿಷಡ್ವರ್ಗಗಳೇ ? ಸದ್ಯೋಜಾತ !!!
annie : ಜಗಳ, ಊಟ, ಪಾಠ ತರಲೆಗಳು ಅಮ್ಮ ಆದ ತಕ್ಷಣ ನನಗೇ ವರದಿಯಾಗುತ್ತಿತ್ತು. ಜಿಂದಗಿ ಮೊದಲು ಸ್ಕೂಲಿಗೆ ಹೋದಾಗ ಅತ್ತಿದ್ದು.....ಆಮೇಲೆ ಬೀನ ಟೀಚರ್ ಅವಳನ್ನ ಚೆನ್ನಾಗಿ ಮಾತಾಡ್ಸಿದ್ರು ಅಂತ ಮನೆಗೆ ಬರಲ್ಲ ಅಂತ ಗಲಾಟೆ ಮಾಡಿ, ಕೊನೆಗೆ ಬೀನಾ ಟೀಚರ್ ಹೇಳಿದ್ಮೇಲೆ lollipop ಕೊಡ್ಸ್ತಿನಿ ಅಂತ...lollipop ಬಾಯಿಗಿಟ್ಟ ಮೇಲೆ ಸ್ಕೂಲಿಂದ ಕಾಲುತೆಗೆದಿದ್ದು ಅವಳು!! ಇದು ನನಗೇ ತಿಳಿದಿದ್ದು ಮೊದಲು.
Z : head ruled inflluence u ಜಾಸ್ತಿ ಇವಕ್ಕೆ...ಭಯಂಕರವಾದ ನೆನಪಿನ ಶಕ್ತಿ !!
ಪಿಂಟು : ಹೌದ ? ನಾನ್ ಬಂದಿದ್ದು ಸಲ್ಪ late -ಉ....ಇದು ಗೊತ್ತಿರ್ಲಿಲ್ಲ. ನಾನು ಹೊಸ್ದಾಗಿ ಬಂದಾಗ ಜಿಂದಗಿ ನನ್ನ ಕೈಲಿ cake ಕತ್ತರಿಸಿ birthday party ಮಾಡಿದ್ದಳು. ನೀನು ಇದ್ದೆ ಅಲ್ಲ ಆಗ. remember ? ಮಂಚದ ಮೇಲೆ ಇವರಿಬ್ರು, ನೀನು, ಮಧ್ಯ ದಿಂಬು, ಆಮೇಲೆ ನಾನು ...ಜಾಗನೇ ಸಾಲ್ತಿರ್ಲಿಲ್ಲ ಅಪ್ಪ ಅಮ್ಮಂಗೆ ಮಲಗಕ್ಕೆ....ನಮ್ಮನ್ನ ಎಷ್ಟೇ ಗೊತ್ತಿಲ್ದೇ ಇರೋ ಹಾಗೆ ಮಂಚದಿಂದ ಸೋಫಾಗೆ transfer ಮಾಡಿದರೂ, ಇವರಿಬ್ಬರಿಗೂ ಗೊತ್ತಾಗಿ, ಎದ್ದು, ಗಲಾಟೆ ಮಾಡಿ, ಕಿರ್ಚಾಡಿ, ವಾಪಸ್ ಯಥಾಸ್ಥಾನಕ್ಕೆ ಬರೋ ತಂಕ ಮಲಗ್ತಿರ್ಲಿಲ್ಲ... head ruled ದು ಏನ್ ಹಠ ಅಲ್ವಾ ? ನೀವು ಮಲಗಬೇಕು, ನಾನೂ ಮಲಗಬೇಕು...ಹಾಗೇ ಅವರೂ ಮಲಗಬೇಕಲ್ವ ? rules are rules ಅಲ್ವಾ ಅಪ್ಪ ? ಅಂತ ನಿದ್ದೆಗಣ್ಣಲ್ಲೇ question ಕೇಳೋಳು !
annie : ಹು...ಸಖತ್ ಹಠ...Z ಏನು ಕಮ್ಮಿ ಇಲ್ಲ.... ಇವರಿಬ್ಬರೂ two opposites ಆದ್ರೂ ಹಠದ ವಿಷಯ ಬಂದಾಗ each other ಗೆ full support !!
ಪಿಂಟು : ಕರೆಕ್ಟು ....
Annie : ಇವರ ಬಳಿ ಇದ್ದ kitchen set ಗೆ ಯಾರಾದ್ರೂ ಬೇರೆಯವರು ಕೈ ಹಾಕೋ ಧೈರ್ಯ ಮಾಡ್ಲಿ ? ಅಷ್ಟೇ !! ಒಂದೇ ಸಲ ಅವರನ್ನ ಓಡಿಸೋರು....ಇನ್ನೊಮ್ಮೆ ಅವರನ್ನ ಆಟಕ್ಕೇ ಕರೀತಿರ್ಲಿಲ್ಲ !!
ಅಮ್ಮ ಕಡಲೇಬೀಜ, ಬೆಲ್ಲ, ಹುರಿಗಡಲೆ ಆಟಕ್ಕೆ + ತಿನ್ನಕ್ಕೆ ಕೊಡೋ ತಂಕ ಅವರ ಸೆರಗು ಬಿಟ್ಟಿದ್ರೆ ಕೇಳು ಇವರಿಬ್ರು ? ಕೊಂಕಳಲ್ಲಿ ನಾನ್ ಬೇರೆ ! ತಮಾಷೆ ನೋಡಕ್ಕೆ. head ruled ಕಟ್ಟೆ ನೆ ಹತ್ತಿಬಿಡೋಳು...ಕಾಟ ತಡೀಲಾರ್ದೆ ಕೊಟ್ಟು ಓಡ್ಸೋರು ಅಮ್ಮ ಇವರನ್ನ....ಆಮೇಲೆ ಇವರು ಮಾಡೊ ಹೊಸ ರುಚಿಗೆಲ್ಲಾ ನಾನೇ ಬಕ್ರಿ ! ಚೆನ್ನಾಗಿರ್ತಿತ್ತು ಅಂತ ಇಟ್ಕೋ...
ಪಿಂಟು : ಹು...ನಾನು ಸೇರ್ಕೊಂಡೆ ಅಲ್ಲ ಬಕ್ರ ಪಾರ್ಟಿಗೆ ಆಮೇಲೆ...
Annie : ನಮ್ಮಿಬ್ಬರಿಗೂ ಸ್ನಾನ ಮಾಡಿಸೋಳು ಪಾಪ everyday... school ಗೆ ಲೇಟ್ ಆಗತ್ತೆ ಅಂತ ಅಮ್ಮ ತಕ ತಕ ಕುಣಿತಿದ್ದರೂ ಒಂದು ಚೊಂಬೂ ಕಮ್ಮಿಯಾಗದಂತೆ ಸ್ನಾನ ಆಗ್ತಿತ್ತು ನಮ್ಗೆ....college ಗೆ ಬಂದ ಮೇಲೆ ಈ ಕೆಲ್ಸಾ ನ ಅಮ್ಮಂಗೆ ಒಪ್ಸಿದ್ಲು head ruled ..ಆಮೇಲೆ ಕ್ರಮೇಣ ನಾವು wardrobe ಪಾಲಾದ್ವಿ !
ಪಿಂಟು : yeah !! remember .... ಕಾಲೇಜಿಗೆ first time ಹೋದಾಗ Z ಬಂದಿದ್ದೆ first ಹೇಳಿದ್ದೇನು ? pints...take my word....you are the cutest....annie, headruled and I stand no chance although !!
ಆಮೇಲೆ, head ruled decided to leave Z at home for the rest of college life. ಅದೊಂದು ಒಳ್ಳೇ ಕೆಲ್ಸ ಮಾಡಿದ್ಲು ನೋಡು ಅವಳು... Z ನ ಹೊರಗೆ ಬಿಟ್ಟ್ರೆ ಕ್ರೌರ್ಯ, ಮೋಸ, ವಂಚನೆ ಎಲ್ಲ ತಡಿಯೋ ಶಕ್ತಿ ಇಲ್ಲ ಇವಳಿಗೆ ಅಂತ...Z ಹಠ ಹಿಡಿದರೂ ಇವಳೂ ಹಠ ಹಿಡಿದು ಇವತ್ತಿನ ವರೆಗೂ ಅವಳನ್ನ ಮನೆಯಿಂದ ಆಚೆಗೆ ಬಿಟ್ಟಿದ್ರೆ ಕೇಳು ? ಅವಳಿಗೆ ಗೊತ್ತಿತ್ತು...Z ಸೋಂಬೇರಿ..... ಕೆಲ್ಸ ಗಿಲ್ಸ... determination-nu....goal - ...target -u .... ಸಾಧನೆ...ಇವೆಲ್ಲ allergy ಅಂತ ! and ಸಖತ್ childish -ಉ Z ಅಂತ . inductive effect ಸಖತ್ತಾಗಿ reduce ಮಾಡಿದ್ಲು head ruled . ಜಿಂದಗಿ ಯಾವಾಗ್ಲು ಹಾಡ್ ಕೇಳ್ತಿರ್ತಾಳೇ...ಹಾಡ್ ಹೇಳ್ತಿರ್ತಾಳೆ... head ruled ಮೇಲಿನ ಕೋಪಕ್ಕೆ ಕೆಲ್ಸ ಮಾಡದೆ ಸಿಗೋ ಬರೋ ಕಥೆ ಪುಸ್ತಕ ಎಲ್ಲಾ ಓದ್ತಾಳೆ !
annie : ನೋಡು... Z ಗೆ ನಮ್ಮ ನೆನ್ಪೇ ಇಲ್ಲ . ಬರೀ ಕಥೆ ಪುಸ್ತಕ... harry potter ಆಯ್ತು... hitchhikers guide ಆಯ್ತು....ಪೂಚಂತೇ ಆಯ್ತು... ಎಸ್ ಎಲ್ ಭೈರಪ್ಪ ಲೇಟೆಸ್ಟು...ಇವಳು ಓದಿ head ruled ಕೈಲೂ ಮತ್ತೆ ಓದಿಸ್ತಾಳೆ ! ಕಥೆ ನಮ್ಗೂ ಹೇಳಿದ್ರೆ ಇವಳ ಗಂಟೇನು ಹೋಗತ್ತೇ ಅಂತ ! head ruled ವಾಸಿ..ಅವಳು ನಮಗೆ every day homework ಮಾಡ್ತಾ science u maths u ಪಾಠ ಮಾಡೋಳು...ಕೆಲವೊಮ್ಮೆ social-u... ನಿದ್ದೆಲಿ ಒಬ್ಬಳು formula/ tables ಕನವರಿಸಿದರೆ ಇನ್ನೊಬ್ಳು ಕಥೆ ಕನವರಿಸೋಳು....ಈಗ ನಮ್ಮನ್ನ ಹೊರಗೆ ದಬ್ಬಿ ಇವೆಲ್ಲದರಿಂದ ವಂಚಿಸಿದ್ದಾರೆ ಇಬ್ರು......ಮನೇಲಿದ್ರೂ ನಮ್ಮನ್ನ ನೋಡ್ಕೊಳ್ಳದೇ ಇರೋ Z ಗೆ ಕ್ಷಮೆ ಇಲ್ಲ...
Z : ತಂದ್ರು ನನ್ ಕುತ್ತಿಗೆ ಗೆ ಎಲ್ಲ... ಇಂಥಾ opportunity ನ miss ಮಾಡ್ಕೊತಾಳ head ruled ಉ...ಎಲ್ಲಾರ್ ಕೋಪಾ ನೂ ಸೇರ್ಸಿ ತೀರ್ಸ್ಕೋತಾಳೆ ನನ್ಮೇಲೆ !!! ಕರ್ಮಕಾಂಡ...ಬಾಗಿಲು ತೆಗೆದು ಉಗಿಲಾ ಇವರಿಬ್ಬರಿಗೂ...ಅಥ್ವಾ ಪೂರ್ತಿ ಕಥೆ ಕೇಳಿಸಿಕೊಳ್ಳಲಾ ? ಅದೇ ಸರಿ...ಅದ್ ಏನ್ ಏನ್ ಹೇಳ್ತಾರೋ ಕೇಳ್ಬಿಡಣ...ಆಮೇಲೆ ನೋಡ್ಕೋತಿನಿ ಇವರನ್ನ....
ಪಿಂಟು : you are lucky....you stay in wardrobe... ನನ್ನನ್ನ.... curtain rod ಗೆ ನೇತಾಕಿದಾರೆ ನೋಡು ಇವರಿಬ್ಬರೂ... hopeless fellows !.... ಅಳು ಉಕ್ಕಿ ಉಕ್ಕಿ ಬರ್ತಿದೆ...ನೆನ್ನೆ...ನೆನ್ನೆ.... ಅಮ್ಮ ನನ್ನ ಪಾಡು ನೋಡಲಾಗದೇ ನಿನ್ ಹತ್ರ ಕರ್ಕೊಂಡ್ ಬಂದ್ರು...ಒಳ್ಳೆ ಜಾಗ ಸಿಕ್ತಲ್ಲ...ಸುಧಾರ್ಸ್ಕೊಳ್ಳೋಣ ಅಂತ ಒಂದು ದಿನ full ನಿದ್ದೆ ಮಾಡಿದೆ...ನೀನು ಮಲ್ಗಿದ್ದೆ....ಪಾಪ ನಿಂಗೂ ತೂಕಡಿಸೋದು ಬಿಟ್ಟ್ರೆ ಇನ್ನೇನ್ ಕೆಲ್ಸಾ? no gossips to brew...no issues to talk.... life - ಏ ಕೆಟ್ಟೊಯ್ತು ನೋಡು ನಮ್ದು....
Z : gossip ಬೇಕಾ ? ಕರ್ಮಕಾಂಡ !! ಇಲ್ಲಾ....ಇನ್ನಾಗಲ್ಲ...ತೆಗಿತಿನಿ door ನ.
ಕ್ರೀಈಈಈಕ್ !!!
ಏನ್ ವಟಗುಟ್ಟುತ್ತಿದ್ದೀರಿ ಇಬ್ರೂ......???
(ಸಶೇಷ)

Subscribe to:
Posts (Atom)
ಉತ್ತರಾಯಣ ೩
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ನಾನು : There is always a next time. Z : ಹೌದಾ ? ನಾನು : ಹೌದು. Z : ಪ್ರತೀ ಸಲವೂ ಹೀಗೆ ಆದರೆ ಗತಿಯೇನು ? ನಾನು : ಅದಕ್ಕೆ ನಿನ್ನ pessimistic ಅಂತ ಬೈಯ್ಯ...
-
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಬ್ಲಾಗಿನ ಹುಟ್ಟು ಹಬ್ಬ ಮತ್ತು ಹೊಸ ವರ್ಷ ಯಾವಾಗ್ಲು ಒಟ್ಟಿಗೆ ಬರತ್ತೆ. ಆದರೆ, ಮತ್ತೆ ಅದೇ flash back ಗೆ ಹೋಗಿ, ಅದೇ ...
-
Z : ಏನಿದು....ಈ ಲೆವೆಲ್ ನಲ್ಲಿ ಊರೂರು ತಿರುಗುತ್ತಿದ್ದೀಯ ? ನಾನು : ಊರೂರಲ್ಲ....ಊರು ಮಾತ್ರ. ಜಲೇಬಿನಾಡಿನ ರಾಜಧಾನಿ ಜಲೇಬಿ-ಚೆನ್ನೈ ಗೆ. Z : ಯಾತಕ್ಕೆ ? ನಾನು :...