Showing posts with label chloroform ಕವಿತೆಯೋ coffee ಕವಿತೆಯೋ ?. Show all posts
Showing posts with label chloroform ಕವಿತೆಯೋ coffee ಕವಿತೆಯೋ ?. Show all posts

Thursday, February 14, 2008

ಬರಬಾರದೇ ?

ನಾನು : ಇವತ್ತು ಒಂದು ಕವನ ಬರೀಬೇಕು ಅಂತ ಅಂದುಕೊಂಡಿದಿನಿ.

Z : ಓದುಗರೇ ಒಂದು ಮುನ್ನೆಚ್ಚರಿಕೆ. amrutaanjan, aspirin, ನೀರು ಇವು ಮೂರನ್ನೂ ನಿಮ್ಮ ಬಳಿ ಇಟ್ಟುಕೊಳ್ಳದೇ ಖಂಡಿತ ಮುಂದಕ್ಕೆ ಓದಬೇಡಿ !!ಆಮೇಲೆ ನಾನು warn ಮಾಡಲಿಲ್ಲ ಅಂತ ಬೈಬೇಡಿ !!

ನಾನು : you are such a cynic !! ಜೀವನದಲ್ಲಿ first time, ಅದೂ valentine's day ದಿನ ಕವನ ಬರಿಬೇಕು ಅಂತ ಅನ್ನಿಸಿತಪ್ಪ....try ಮಾಡೋದ್ರಲ್ಲಿ ಏನ್ ತಪ್ಪು ?

Z : ನಿಮ್ಮಂಥ head ruled people ಗೆಲ್ಲಾ ಆಗೊಲ್ಲ ಕವನ ಕವಿತೆ ಬರೆಯೋದು ಎಲ್ಲ !! ಅದಕ್ಕೆ ಹೃದಯ ಬೇಕು ಹೃದಯ !! ನೀನೋ...ಹೃದಯದ ಯೋಚನೆಗೆಳಿಗೆ 7 lever navtal lock ಹಾಕಿದ್ದೀಯ.ಭಾವನೆಗಿಂತ ನಿನಗೆ ಕರ್ತವ್ಯ ಮುಖ್ಯ. Heart is an organ that pumps blood. Dont make it think ...It strains it !! ಅಂತೆಲ್ಲ ವಾದಿಸುವವಳು. ತೊಂದ್ರೆ ತಗೋಬೇಡ...ನಿನ್ನ ಕೈಯಲ್ಲಿ ಕವನ ಬರೆಯೋಕೆ ಆಗೊಲ್ಲ. ಪ್ರೀತಿ ಪ್ರೇಮ ಪ್ರಣಯದ ಬಗ್ಗೆ ಅಂತೂ...chance-ಏ ಇಲ್ಲ !!!

ನಾನು : ಆಯ್ತಾ ? ಮುಗಿತಾ ? ಇನ್ನು ನಿಶ್ಶಬ್ದ. ಇವತ್ತು ಬೀಗ ತೆಗಿತಿನಿ. ನೋಡೋಣ ಅದು ಏನಾಗತ್ತೋ !

ಹೊಂಗಿರಣ ನೀ ಬಾರದೇ
ಈ ಮನಕಮಲವು ಅರಳದು.
ವರಶಿಲ್ಪಿ ನೀ ಉಳಿಯಿಡದೇ
ಈ ಕಲ್ಲು ಶಿಲೆ ಆಗದು.

ನಿನ್ನ ದೃಷ್ಟಿ ಬೀಳದೇ
ನನ್ನ ಬದುಕು ವ್ಯರ್ಥವು.
ನಿನ್ನ ಒಲುಮೆಯಿಂದಲೇ
ಬಾಳಿಗೊಂದು ಅರ್ಥವು.

ನನ್ನೀ ಪ್ರೀತಿ ಲತೆಗೆ
ನೀನೆ ತಾನೆ ಆಸರೆ ?
ಇನ್ನೆಷ್ಟು ದಿನ ನಾನಾಗಲಿ
ಕಹಿ ವಿರಹದ ಕೈಸೆರೆ ?

ಕಾದಿದೆ ನನ್ನ ಮನದಾಗಸ
ಶಿಖಿ ನಿನ್ನ ಬೆಳದಿಂಗಳಿಗೆ !
ನಿನ್ನ ದರ್ಶನ ಭಾಗ್ಯವದು
ಎಂದುಂಟೋ ಈ ಕಂಗಳಿಗೆ ?

ಬಸವಳಿದು ಹೋದೆ ನಾನು
ನಿನ್ನ ಮೊಗವ ನೋಡದೇ..
ಉಸಿರು ಉಡುಗಿ ಹೋಗುವ ಮುನ್ನ
ಒಮ್ಮೆಯಾದರೂ ಬರಬಾರದೇ ?

ಜಿಂದಗಿ ??? ಜಿಂದಗಿ ?? ...ಮಾತಾಡದೇ ಎಲ್ಲೋ ತಪ್ಪಿಸಿಕೊಂಡಿದ್ದಾಳೆ ಕಳ್ಳಿ!!ಅವಳು ಸಾವರಿಸಿಕೊಂಡು ಬರುವ ವರೆಗೂ...line on hold !

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...