Showing posts with label celebrations. Show all posts
Showing posts with label celebrations. Show all posts

Saturday, January 1, 2011

ಮೂರು ವರ್ಷ....and still calling ! :)

ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಬ್ಲಾಗಿನ ಹುಟ್ಟು ಹಬ್ಬ ಮತ್ತು ಹೊಸ ವರ್ಷ ಯಾವಾಗ್ಲು ಒಟ್ಟಿಗೆ ಬರತ್ತೆ. ಆದರೆ, ಮತ್ತೆ ಅದೇ flash back ಗೆ ಹೋಗಿ, ಅದೇ ಕಥೆಯನ್ನ ಹೇಳಿ ನಿಮ್ಮನ್ನ ಬೋರ್ ಹೊಡೆಸಲ್ಲ. ನೀವೆಲ್ಲ ಬುದ್ಧಿವಂತರು. Call history ತೆಗೆದು ನೋಡಿ ಈ ಬ್ಲಾಗ್ ಹೇಗೆ ಹುಟ್ಟಿತು ಅನ್ನೋದನ್ನ ಓದ್ಕೋತಿರಾ :)

ಹೌದು, ಇವತ್ತಿಗೆ ಮೂರು ವರ್ಷ ಆಗೋಯ್ತು ಈ ಬ್ಲಾಗ್ ಆರಂಭ ಆಗಿ. ಮೂರು ವರ್ಷಗಳಲ್ಲಿ ಬ್ಲಾಗ್ ಲೋಕದಿಂದ ನಾನು ಬಹಳಷ್ಟು ಒಳ್ಳೆ ಗೆಳೆಯರನ್ನು ಪಡೆದಿದ್ದೇನೆ.ನನ್ನ ಈ non stop  ವಟವಟವನ್ನ ನೀವು ಪಾಪ ಬಹಳ ಉತ್ಸಾಹದಿಂದ, ಶ್ರದ್ಧೆಯಿಂದ, ಪ್ರೀತಿಯಿಂದ, ಅಭಿಮಾನದಿಂದ ಕೇಳುತ್ತಾ ಬರುತ್ತಿದ್ದೀರ. ಡೊಂಟ್ ವರಿ ಮಾಡ್ಕೊಳಿ, ಈ ವಟ ವಟ ಈ ವರ್ಷವೂ ಮುಂದುವರಿಯಲಿದೆ,on one condition: ನೀವು ಹೀಗೆ ಈ ಬ್ಲಾಗ್ ಓದೋದರ ಬಗ್ಗೆ ಉತ್ಸಾಹ, ಶ್ರದ್ಧೆ ಮತ್ತು ಪ್ರೀತಿ ನ ಮುಂದುವರಿಸಿದರೆ ಮಾತ್ರ ! :)

ಈ ಬ್ಲಾಗಿನ ಕಟ್ಟಾ ಅಭಿಮಾನಿ ವರ್ಗ ಈ ಬ್ಲಾಗು ನಿಯತವಾಗಿ ಅಪ್ಡೇಟ್ ಆಗ್ತಿಲ್ಲ ಅನ್ನೋದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇದರ ಬಗ್ಗೆ ಸ್ವತಃ ಸ್ವಯಂ ಸಾಕ್ಷಾತ್ ನನಗೇ ಬೇಜಾರಿದೆ.I don't want reasons, I want results ಅಂತ ಸದಾ ಕಾಲ ಶಂಖ ಊದುವ ನಾನು, ಇಂದು ಬ್ಲಾಗ್ ಅಪ್ಡೇಟ್ ಆಗದಿರುವುದಕ್ಕೆ ನಿಮಗೆ ಕಾರಣ ಹೇಳಬೇಕೋ ಬೇಡವೋ ತಿಳಿಯದೇ ಪರದಾಡುತ್ತಿದ್ದೇನೆ. ಆದರೂ, ನೀವೆಲ್ಲಾ ನನ್ನನ್ನ ಅರ್ಥ ಮಾಡ್ಕೊತಿರಾ ಅನ್ನೋದರ ಬಗ್ಗೆ ದೃಢವಾದ ನಂಬಿಕೆ ಇದೆ ಆದ್ದರಿಂದ, ಕಾರಣಗಳನ್ನು ನಿಮ್ಮ ಮುಂದೆ ಇಡಬಯಸುತ್ತೇನೆ.

೧. ದಿನ ಬೆಳಗಾದರೆ ಕಾಲೇಜು, ಪಾಠ, ಮತ್ತು ನನ್ನ ಲ್ಯಾಬು, ಎಮ್.ಫಿಲ್ ಪ್ರಾಜೆಕ್ಟು, ಅದಕ್ಕಾಗಿ ಜೆ.ಸಿ.ರಸ್ತೆ ಮತ್ತು ಜಯನಗರ ಮೂರನೇ ಬ್ಲಾಕಿನ ನಡುವಿನ ಅವ್ಯಾಹತ ಓಡಾಟ."ನಾವೂ ಇದೇ ರಸ್ತೆಗಳಲ್ಲಿ ಓಡಾಡೋದು.ಅದರಲ್ಲಿ ಏನು ವಿಶೇಷ" ಅಂತ ನೀವು ಕಮೆಂಟೋ ಮುಂಚೆ ದಯವಿಟ್ಟು ನನ್ನ ಮಾತನ್ನ ಪೂರ್ತಿ ಕೇಳಿ. ನಿಮಗೆ ಆಫೀಸಲ್ಲಿ ಫ್ರೀ ಟೈಂ ಸಿಗಬಹುದು, ಆದರೆ ನನಗೆ ಕಾಲೇಜಲ್ಲಿ ಟೈಂ ಸಿಕ್ತಿಲ್ಲ.ಸಾಲದ್ದಕ್ಕೆ ಶನಿವಾರ ಭಾನುವಾರಗಳು ನಾನು ರಿಸರ್ಚ್ ಲ್ಯಾಬ್ನಲ್ಲಿ ವಾಸ್ತವ್ಯ  ಹೂಡಿರುವ ಕಾರಣ, ವೀಕೆಂಡ್ ಬರುವುದೂ ಗೊತ್ತಾಗುತ್ತಿಲ್ಲ, ಹೋಗುವುದೂ ಗೊತ್ತಾಗುತ್ತಿಲ್ಲ. ಟೈಂ ಇಲ್ಲ ಅನ್ನೋರನ್ನ ನಂಬಬೇಡಿ ಅಂತ ಹಿರಿಯರು ಅಪ್ಪಣೆ ಕೊಡಿಸಿರುವರಾದರೂ, ನನ್ನ ಮಟ್ಟಿಗೆ, ಬ್ಲಾಗಲು ನನಗೆ ಟೈಂ ಇಲ್ಲದಿರುವುದು ನನ್ನ ಜೀವನದ ಸಧ್ಯದ ಮಹಾದುರಂತಗಳಲ್ಲೊಂದು. 

೨. ಹಿಂದೆಲ್ಲಾ ರಾತ್ರಿ ಒಂದಕ್ಕೆ ಮಲಗಿ ಬೆಳಿಗ್ಗೆ ಎಂಟಕ್ಕೆ ಏಳುತ್ತಿದ್ದೆ. ಈಗ ಒಂಭತ್ತುವರೆಗೆ ಪಾಚ್ಕೊತಿದಿನಿ. ಯಾಕಂದ್ರೆ, earth  polarity ಬದಲಾದರೂ, Land to water mass ratio interchange  ಆದರೂ ನಾನು ಬೆಳಿಗ್ಗೆ ಎಂಟು ಹದಿನೈದರೊಳಗೆ ಕಾಲೇಜಲ್ಲಿರಬೇಕು. ಆದ್ದರಿಂದ ಸೂರ್ಯ ಯಾವಾಗ ಹುಟ್ಟುತ್ತಾನೋ, ನಾನು ಆಗಲೇ ಏಳಬೇಕು :(

೩. ನನ್ನ ಎಮ್.ಫಿಲ್ ಒಂದು ವರ್ಷಕ್ಕೆ ಪರಿಸಮಾಪ್ತಿಯಾಗದೇ ಇನ್ನೂ ಮೂರು ತಿಂಗಳು ಮುಂದೂಡಲ್ಪಟ್ಟಿದೆ.ಕಾರಣ ಮೂರು ಬಾರಿ experiments  ಮಾಡಿದರೂ ಸರಿಯಾಗಿ ಬರದೇ ಕೈಕೊಟ್ಟ ನನ್ನ samples.ಮತ್ತು, ಮಹಾ ಭಾರತಕ್ಕೆ ಮತ್ತು ಕಾಳಿದಾಸನ ಮಹಾಕಾವ್ಯಕ್ಕೆ competition  ಕೊಡುವ ರೀತಿಯಲ್ಲಿ ನನ್ನ ಥೀಸಿಸ್ ಇರಬೇಕು ಎಂದು ನನ್ನ ಗುರುಗಳು ಆಜ್ಞೆ ಮಾಡಿದ್ದಾರೆ. ಆ ಮಹಾಕಾವ್ಯದ ರಚನೆಗೆ ಇರೋ ಟೈಂ ಎಲ್ಲಾ ಮೀಸಲಿಡಬೇಕಾಗಿದೆ.ಇಷ್ಟು ತಿಂಗಳುಗಳಿಂದ ತಿನುಕಾಡಿ ಒಂದು ಅಧ್ಯಾಯ ಬರ್ದಿದಿನಿ, ಮಿಕ್ಕಿದ್ದಕ್ಕೆ ಗಣೇಶ ಮತ್ತು ಕಾಳಿದಾಸನ ಅನುಗ್ರಹ ಮತ್ತು ಸಹಾಯಕ್ಕೆ ವೈಟಿಂಗು.

ಹಿಂಗೆಲ್ಲಾ ಆಗೋಗಿರೋದ್ರಿಂದ, ನನಗೆ ಬ್ಲಾಗಲು ಆಗುತ್ತಿಲ್ಲ ಮತ್ತು ಎಲ್ಲರ ಬ್ಲಾಗುಗಳಿಗೆ ನನ್ನ ಭೇಟಿ ಆಲ್ಮೋಸ್ಟ್ ನಿಂತುಹೋಗಿದೆ. ಬಜ್ ನಲ್ಲಿ ಕಂಡದ್ದನ್ನಷ್ಟೇ ಓದುವ ಹಾಗಾಗಿದೆ. ಹಾಗಾಗಿ, ಬ್ಲಾಗಿಗೆ ಬಂದು ಕಮೆಂಟಿಸಲು ಸಾಧ್ಯವಾಗಿಲ್ಲ.ಇದಕ್ಕೆ ಸಹಬ್ಲಾಗಿಗರಲ್ಲಿ ಕ್ಷಮೆಯಾಚಿಸುತ್ತಿದ್ದೇನೆ.

ಆದರೂ ಈ ವರ್ಷದ ಹೈಲೈಟ್ಸ್ ಕೊಟ್ಟುಬಿಡುತ್ತೇನೆ. ಡೀಟೈಲಾಗಿ ಖಂಡಿತಾ ಏಪ್ರಿಲ್ ತಿಂಗಳಿನಿಂದ ಬ್ಲಾಗುತ್ತೇನೆ. ಫೂಲ್ ಮಾಡ್ತಿಲ್ಲ, ಪ್ರಾಮಿಸ್ ಮಾಡ್ತಿದಿನಿ. :)

೧. ಉತ್ತರಾಯಣ. ಸಕ್ಕತ್ತಾಗಿತ್ತು ಟೂರು. ಇದರ ಪ್ರತಿಯೊಂದು ಡೀಟೈಲ್ ಖಂಡಿತಾ ಬ್ಲಾಗುತ್ತೇನೆ.

೨. ಕೆಲವು ವಿಜ್ಞಾನದ ವರ್ಕ್ ಶಾಪುಗಳಿಗೆ ಹೋಗಿದ್ದೆ. ಒಳ್ಳೇ ಅನುಭವ.

೩.ಡಿಸೆಂಬರ್ ನಲ್ಲಿ ಮತ್ತೆ ಜಲೇಬಿನಾಡಿಗೆ ಮೂರುದಿನಗಳ ಪ್ರವಾಸ. ಅದರದ್ದೂ ಬ್ಲಾಗ್ ಬರಲಿದೆ, ಕಾಯಬೇಕಾಗಿ ಪ್ರಾರ್ಥನೆ.

೪. ಶನಿವಾರ ಭಾನುವಾರಗಳನ್ನೂ ಬಿಡದೆ, ರಜಾದಿನಗಳಲ್ಲಿಯೂ ಬೆಳಗಿಂದ ಸಾಯಂಕಾಲ ನಾನು ಲ್ಯಾಬ್ ವಾಸ್ತವ್ಯ ಹೂಡಿರುವುದರಿಂದ ರಿಸರ್ಚ್ ಲ್ಯಾಬಿನಿಂದ ನನ್ನನ್ನು ಓಡಿಸಲು ಉತ್ಸುಕನಾಗಿದ್ದಾನೆ ನಮ್ಮ ಲ್ಯಾಬಿನ ವಾಚ್ಮಾನ್ !

೫.ಅಡುಗೆ ಮನೆಗೆ ಹೋಗದೆ, ಅಡುಗೆ ಮಾಡದೇ, ಅಮ್ಮನ ಹತ್ತಿರ 2010 ರಲ್ಲಿ ಸರಿಸುಮಾರು ಒಂದು ಲಕ್ಷ ಸರ್ತಿ ಬೈಸಿಕೊಂಡಿದ್ದೇನೆ. ಮನೆಯ ಕೆಲಸಗಳ ಕಡೆಗೆ ಗಮನ ಕೊಡದಿರುವ,ಮತ್ತು ಸದಾ ಕಾಲ ಮಹಾಕಾವ್ಯ ರಚನೆಯಲ್ಲಿ ತಲ್ಲೀನಳಾಗಿ ಮಿಕ್ಕೆಲ್ಲದ್ದಕ್ಕೆ ವಿದಾಯ ಹೇಳಿರುವ ಕಾರಣ ಅಮ್ಮ ನನ್ನನ್ನು ಮನೆಯಿಂದ ಓಡಿಸಲು ಹವಣಿಸುತ್ತಿದ್ದಾರೆ. ;)

೬.ಸುಶ್ರುತನ ಕೈಲಿ ಮಾಡಿಸಿದ ಕ್ಯಾರಟ್ ಸಾರಿನ experiment work  ಆಗಿದೆ.

೫.Anchor stich kit. ಏನ್ ಚೆನ್ನಾಗಿದೆ ಗೊತ್ತಾ ಅದು ! ಒಂದು ಕಿಟ್ಟಲ್ಲಿ ಎರಡು ಟ್ವೀಟಿ ಮರಿಗಳಿರುವ ಚಿತ್ರವನ್ನು cross stich ನಲ್ಲಿ ಹಾಕಿ, ಅದನ್ನ ಫ್ರೇಮ್ ಮಾಡಿಸಿದೆ. ಅದೇ ಜೋಷಿನಲ್ಲಿ, ಈಗ ಜಿಂಕೆ ಮರಿಯನ್ನು stich ಮಾಡುತ್ತಿದ್ದೇನೆ. ಮಜಾ ಬರ್ತಿದೆ :)

೬.ಪಾನಿ ಪುರಿ ಮತ್ತು ಐಸ್ ಕ್ರೀಮ್ ನ  ಸ್ನೇಹಿತರೊಟ್ಟಿಗೆ ಹಿಂದಿನಂತೆ ನಿಧಾನಕ್ಕೆ ಚಪ್ಪರಿಸಿಕೊಂಡು ತಿನ್ನಕ್ಕೆ ಆಗಿಲ್ಲ :(  ಜಯನಗರದಂತಹಾ ಜಯನಗಕ್ಕೆ ಪ್ರತಿದಿನ ಹೋದರೂ ಪಾನಿಪುರಿ ತಿನ್ನಲಾಗದ ನನ್ನ ದೌರ್ಭಾಗ್ಯವನ್ನು ವರ್ಣಿಸಲು ಪದಗಳಿಲ್ಲ.ಮೈಯಾಸ್ ಗೆ ಮಾತ್ರ ವಿಸಿಟ್ಟು ಕೊಡುತ್ತಿದ್ದೇನೆ ಅಷ್ಟೇ.

೭.ಹೊಸ ಫೋನ್. ನಮ್ಮಪ್ಪ ಗಿಫ್ಟ್ ಮಾಡಿದ್ರು ನನ್ನ ಹುಟ್ಟುಹಬ್ಬಕ್ಕೆ. Nokia X6. ಫೋನ್ ಸಕತ್ತಾಗಿದೆ.ಆದರೆ ಅದಕ್ಕೆ ಒಗ್ಗಲು ನನಗಿನ್ನೂ ಸಮಯ ಬೇಕಾಗಿದೆ. ಸಿಕ್ಕಾಪಟ್ಟೆ ಯೋಚನೆ ಮಾಡಿ, ಫೋನಿಗೆ ಪ್ರಿಯಂವದಾ ಅಂತ ನಾಮಕರಣ ಮಾಡಿದೆ. ಹಿರಣ್ಮಯಿಯನ್ನು ನನ್ನ ತಂಗಿಗೆ ಹಸ್ತಾಂತರಿಸಿದೆ.

ಇಷ್ಟು ೨೦೧೦ ಮುಖ್ಯಾಂಶಗಳು. ಈ ವರ್ಷ ಎಮ್.ಫಿಲ್ ಮುಗಿಯತ್ತೆ. ವಟವಟಕ್ಕೆ, ಗುಸುಗುಸುವಿಗೆ ನನ್ನ ಸಮಯ ಮಿಸಲಿರತ್ತೆ.2011  ಬಗ್ಗೆ ಸಿಕ್ಕಾಪಟ್ಟೆ ಆಸೆ, ಭರವಸೆ ಇಟ್ಟುಕೊಂಡಿದ್ದೇನೆ. ನೀವು ಇಟ್ಕೊಂಡಿರ್ತಿರ. ಇಟ್ಕೊಂಡಿಲ್ಲಾಂದ್ರೆ ಇಟ್ಕೊಳ್ಳಕ್ಕೆ ಶುರು ಮಾಡಿ. ನಮ್ಮ ನಿಮ್ಮೆಲ್ಲರ ಜೀವನದ ಎಲ್ಲ ಆಸೆಗಳು ಈಡೇರಲಿ, ಭರವಸೆ ಬತ್ತದಿರಲಿ ಅಂತ ಆಶಿಸುತ್ತೇನೆ .Wish you all a very happy 2011!

Friday, January 1, 2010

ಎರಡು ವರ್ಷ ಆಗೋಯ್ತು !

ಡಿಸೆಂಬರ್ ಮೂವತ್ತೊಂದು ೨೦೦೭ ರಾತ್ರಿ ಸುಮಾರು ಇದೇ ಹೊತ್ತು. ನಾವೇಕೆ ಹೀಗೆ ಬ್ಲಾಗ್ ನಲ್ಲಿ ನಾನು ಹೊಸವರ್ಷದ ಆಗಮನ ಎಂಬ ಲೇಖನವನ್ನು ಬರೆಯುತ್ತಿದ್ದೆ. ಜೊತೆಜೊತೆಗೇ ಬ್ಲಾಗಿಗರೊಡನೆ ಯಾಹೂನಲ್ಲಿ ಕಾನ್ಫರೆನ್ಸು. ನಾನು ಬ್ಲಾಗ್ ಪ್ರಪಂಚಕ್ಕೆ ಕಾಲಿಟ್ಟು ಕೇವಲ ಎರಡು ವರೆ ತಿಂಗಳಾಗಿದ್ದವು ಅಷ್ಟೇ. ಎಲ್ಲರ ಬ್ಲಾಗುಗಳನ್ನುಸ್ಥೂಲವಾಗಿ ಅವಲೋಕಿಸುತ್ತಿದ್ದೆ. ಆಗ ಅದೇನೋಪಾ, ನನಗೆ ಒಂದು ವಿಚಿತ್ರ ಭಾವನೆ ಕಾಡತೊಡಗಿತು. ಎಲ್ಲರೂ ಬ್ಲಾಗನ್ನು ಭಾವನೆಗಳ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಬಿಂಬಿಸಿದ್ದರು. ನಾನು ಅದುವರೆಗೂ ತಲೆಗೆ ಮಾತ್ರ ಕೆಲಸ ಕೊಟ್ಟಿದ್ದೆ. ಭಾವನೆಗಳ ಬಗ್ಗೆ ಯೋಚನೆ ಮಾಡಿರಲಿಲ್ಲ. ನಾವೇಕೆ ಹೀಗೆಯಲ್ಲಿ ಭಾವನೆಗಳ ಬಗ್ಗೆ ಬರೆಯಲು ಅದ್ಯಾಕೋ ಸರಿಬರಲಿಲ್ಲ. ಭಾವನೆಗಳನ್ನು ಹೇಗೆಲ್ಲಾ ವ್ಯಕ್ತಪಡಿಸಬಹುದು ಎಂದು ಯೋಚನೆ ಮಾಡಿದೆ. ಆಗಲೇ ನನ್ನ ಮೊಬೈಲ್ ಫೋನು ರಿಂಗಣಿಸಿ - ಹ್ಯಾಪಿ ನ್ಯೂ ಇಯರ್ ಮೆಸೇಜ್ ಒಂದನ್ನು ತಂದಿಟ್ಟಿತು. ಆಗಲೇ ನನಗನ್ನಿಸಿದ್ದು, ಭಾವನೆಯನ್ನ ಒಬ್ಬ ವ್ಯಕ್ತಿಯಂತೆ ಪರಿಗಣಿಸಿ, ಭಾವನೆಗಳೊಟ್ಟಿಗೆ ಫೋನ್ ನಲ್ಲಿ ಮಾತಾಡಿದರೆ ಹೇಗೆ ? ರೂಪ ತದ್ರೂಪು ನನ್ನದೇ, ಆದರೆ ಗುಣದಲ್ಲಿ ನನಗಿಂತಾ ಸಂಪೂರ್ಣ ಭಿನ್ನ.ನನಗೆ ನಿಜವಾಗಿಯೂ ಏನನ್ನಿಸತ್ತೆ, ನಾನು ಭಾವಜೀವಿಯಾಗಿರಬಲ್ಲೆನೆ ? ಅಂತ ಫೋನ್ ನಲ್ಲಿ ನನಗೇ ಗೊತ್ತಾದರೆ ಹೇಗಿರತ್ತೆ?! ಒಂದೇ situation ಗೆ ನಾನು ಯಾವ್ಯಾವ ರೀತಿಯಲ್ಲಿ ಪ್ರತಿಕ್ರಯಿಸಬಲ್ಲೆ ? ನನ್ನ ವಿಸ್ತೃತ ರೂಪಕ್ಕೆ ಬ್ಲಾಗಿನಲ್ಲಿ ಏಕೆ ಅವಕಾಶ ಕಲ್ಪಿಸಬಾರದು ಅನಿಸಿತು.ಇದ್ದಿದ್ದರಲ್ಲಿ ಇದು ಒಂದು ಬ್ಲಾಗಿರಲಿ, ಯಾರಿಗೂ ಹೇಳೋಣು ಬ್ಯಾಡ ಅಂತ ಬ್ಲಾಗ್ ಒಂದನ್ನು ರೆಜಿಸ್ಟರ್ ಮಾಡಲು ಹೊರಟೆ. ತಾಪತ್ರಯ ಶುರುವಾಗಿದ್ದು ಅಲ್ಲಿಯೇ. ಹೆಸರೇನಿಡೋದು ?! ಮೂರು ಚುಕ್ಕಿ...ಉಹು. ಮನಸ್ಸು...not available. ಮಾನಸ-Already registered.ಹುಚ್ಚು ಮನಸ್ಸು...ಉಹು ! ಕನ್ನಡದಲ್ಲಿ ಬ್ಲಾಗ್ ಮಾಡಲು ಕನ್ನಡದಲ್ಲೇ ಪದಗಳು ಸಿಗಲಿಲ್ಲ :(

ನೀವ್ಯಾರು ನನ್ನ ಬೈಯಲ್ಲ ಅಂತ ಭಾಷೆ ಕೊಟ್ಟರೆ ಮಾತ್ರ ನಾನು ನಿಜ ಹೇಳ್ತಿನಿ. ನನ್ನ ಅತ್ಯಂತ ಪ್ರಿಯವಾದ ಭಾಷೆಗಳಲ್ಲಿ ಪ್ರಥಮ ಸ್ಥಾನ ಕನ್ನಡಕ್ಕೆ ಲಭಿಸಿದರೆ, ಎರಡನೆಯದು ಹಿಂದಿಗೆ ! ನಾನು ಹಿಂದಿಯನ್ನು ಎಷ್ಟು ಇಷ್ಟ ಪಡುತ್ತೇನೆಂದರೆ ನಾನು ಖಾಸಗಿ ಡೈರಿಯನ್ನು ಕೂಡಾ ಹಿಂದಿಯಲ್ಲೇ ಬರೆಯುತ್ತಿದ್ದೆ !ಹಾಗಾಗಿ ನಾನು ನನ್ನ ಈ ಹೊಸ ಬ್ಲಾಗಿನ ಹೆಸರಿಗೆ ಮೊದಲನೆಯ ಪದವನ್ನು ಹಿಂದಿಯಲ್ಲಿ ಇಟ್ಟೆ. ಮೊಬೈಲ್ ಫೋನಿನ concept ಇತ್ತು ಆದ್ದರಿಂದ ಎರಡನೆಯ ಪದ ಆಂಗ್ಲದಲ್ಲೇ ಇರಬೇಕಾಗಿತ್ತು. ನಾನು ಫೋನ್ ಮಾಡುವಂತಿದ್ದಿದ್ದರೆ ಚೆನ್ನಾಗಿರ್ತಿತ್ತೇನೊ, ಆದರೆ ನಾವಿವುರುದೇ ಜೀವನದ ಮರ್ಜಿಯಲ್ಲಲ್ಲವೇ ? ಇಷ್ಟೆಲ್ಲಾ ಆಧ್ಯಾತ್ಮ ಯಾಕೆ ಹೊಳೆಯಿತೋ ಗೊತ್ತಿಲ್ಲ, ಇದು ಜೀವನವೇ ಫೋನ್ ಮಾಡಿ ಅದೇ ಕಟ್ ಮಾಡಬೇಕಾದ call ಅನ್ನಿಸಿ ಇದಕ್ಕೆ ज़िंदगी Calling ಅಂತ ಹೆಸರಿಟ್ಟೆ. ಮಾತಿಲ್ಲದೇ ಬ್ಲಾಗರ್ ಈ ಬ್ಲಾಗನ್ನು ರಿಜಿಸ್ಟರ್ ಮಾಡಿಕೊಂಡಿತು.

ನಾನು ಮಾತನ್ನು ಆರಂಭಿಸಬೇಕಿತ್ತು. ನನಗೆ ಮಾತಾಡಲು ಸಾಮಾನ್ಯವಾಗಿ ಕಷ್ಟ ಆಗಲ್ಲ, ಆದ್ರೆ ನನ್ನೊಟ್ಟಿಗೇ ನಾನೆಂದೂ ಮಾತಾಡಿರಲಿಲ್ಲ ! ಹಾಗೂ ಹೀಗೂ ಒಂದು ಪೋಸ್ಟ್ ಬರೆದೆ. ಪೋಸ್ಟನ್ನು ಪಬ್ಲಿಷ್ ಕೂಡಾ ಮಾಡಿಬಿಟ್ಟೆ.

ಕಾನ್ಫರೆನ್ಸಲ್ಲಿ ಬರಿ "ಹು, ಸರಿ, ಆಯ್ತು" ಮತ್ತು ಸ್ಮೈಲಿಗಳನ್ನು ಮಾತ್ರ ಹಾಕುತ್ತಿದ್ದೆ. ಗುರುಸ್ವರೂಪ ಅರುಣರಿಗೆ ಮೊದಲು ಪಿಂಗಿ " ಗುರುಗಳೇ-ಇದು ನನ್ನ ಹೊಸಾ ಬ್ಲಾಗು. ನೋಡಿ. ಚೆನ್ನಾಗಿಲ್ಲ ಅಂದ್ರೆ ಡಿಲೀಟ್ ಮಾಡಿಬಿಡುತ್ತೇನೆ ಈಗಲೇ !" ಅಂದೆ. ಬ್ಲಾಗ್ ಓದಿ ಗುರುಗಳು-"ಈ ಬ್ಲಾಗ್ ನ ಡಿಲೀಟ್ ಮಾಡಿದ್ರೆ, ನನ್ನ ಹತ್ತಿರ ಮಾತಾಡ್ಬೇಡ ನೀನು !" ಎಂದುಬಿಟ್ಟರು. ನನಗಿದು ಹೊಗಳಿಕೆಯೋ ಬೈಗುಳವೋ, ಆಜ್ಞೆಯೋ ಆಗ ಗೊತ್ತಾಗಲಿಲ್ಲ.ಪಟಾಕಿ ಶಬ್ದದ ನಡುವೆ ಹೊಸವರ್ಷ ಬಂದಾಗಿತ್ತು, ಜೊತೆಗೆ ನನ್ನ ಹೊಸ ಬ್ಲಾಗೂ !

ಸಿಕ್ಕಾಪಟ್ಟೆ ಭಯದಿಂದ ಮಿಕ್ಕೆಲ್ಲಾ ಯಾಹೂ ಮಿತ್ರರಿಗೆ ಲಿಂಕಿಸಿದೆ. ಕಾನ್ಫರೆನ್ಸಲ್ಲಿ ಚಪ್ಪಾಳೆಗಳ ಸುರಿಮಳೆಯಾದವು. ಆಗ ಗುರುಗಳ ಮಾತು ಅರ್ಥ ಆಯ್ತು ನಂಗೆ ! ಸಧ್ಯ ಇದು ಡಿಲೀಟನೀಯ ಬ್ಲಾಗಲ್ಲಪ್ಪಾ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟು ಅಂದಿನಿಂದ ಮಾತಡಲು ಶುರು ಮಾಡಿದ Z ಇಂದಿಗೂ ಮಾತಾಡುತ್ತಿದ್ದಾಳೆ. ಎರಡು ವರ್ಷ ಇದನ್ನ ಕೇಳಿಸಿಕೊಂಡು ನಿಮ್ಮ ಕಿವಿಗಳು ತೂತಾಗಿಲ್ಲದಿರುವುದನ್ನು ಕಂಡು head ruled ಆಶ್ಚರ್ಯ ಪಟ್ಟಿದ್ದಾಳೆ.ಯಾಕಂದರೆ listeners ಸಂಖ್ಯೆ ಇತ್ತೀಚೆಗೆ ದಿನಕ್ಕೆ ನೂರು ತಲುಪುತ್ತಿದೆ !ನಿಮ್ಮ ಪ್ರೋತ್ಸಾಹ ಕಂಡು ನಾವಿಬ್ಬರೂ ಮೂಕರಾಗಿದ್ದೇವೆ. ಹಾಗಂತ ಮಾತು ನಿಲ್ಲಿಸಿದರೆ ಎಲ್ಲರೂ ನಮ್ಮನ್ನು ಬೈಯ್ಯುತ್ತಾರೆಂಬ ಭಯದಲ್ಲಿ ನಾವು ಮೂಕರಾಗಿದ್ದೇವೆ ಎಂದು ಬಾಯ್ಬಿಟ್ಟು ಹೇಳುತ್ತಿದ್ದೇವೆ !

ಈ ನಮ್ಮ ಗುಸುಗುಸುವಿನಲ್ಲಿ ನಿಮಗೇನು ಹಿಡಿಸಿತೋ ನಮಗೆ ಖಂಡಿತಾ ಅರ್ಥವಾಗುತ್ತಿಲ್ಲ ! ದಯವಿಟ್ಟು ಅದನ್ನ ನಮ್ಮೊಟ್ಟಿಗೆ ಹಂಚಿಕೊಳ್ಳಿ . ಅದೇನೇನು ಘನಕಾರ್ಯ ಗಳನ್ನು ಸಾಧಿಸಿದ್ದೇವೆ ನಾವು ಎರಡು ವರ್ಷದಲ್ಲಿ ಅಂತ ತಾವೇ ದಯಮಾಡಿ ನಮಗೆ ತಿಳಿಸಿಕೊಡಿ.

೨೦೦೯ ನನ್ನ ನೆಚ್ಚಿನ ಗಾಯಕ ಅಶ್ವಥ್ ಮತ್ತು ನೆಚ್ಚಿನ ನಟ ವಿಷ್ಣುವರ್ಧನ್ ಅವರ ಸಾವಿನಿಂದ ಬಹಳ ದುಃಖಕರ ಅಂತ್ಯವನ್ನು ಕಂಡಿದೆ. ಹಾಲು ಬೆಳಕನೀವ ಹುಣ್ಣಿಮೆ ಚಂದ್ರನಿಗೆ ಇನ್ನೇನು ಹತ್ತು ನಿಮಿಷಕ್ಕೆ ಗ್ರಹಣ ಹಿಡಿಯಲಿದೆ. ಆದರೆ ದುಃಖ, ಗ್ರಹಣ ಎಲ್ಲವೂ ಕ್ಷಣಿಕವಷ್ಟೇ. ಮುಂಬರುವ ಬೆಳಕು ಎಲ್ಲರಿಗೂ ಶಾಂತಿ, ಸುಖ, ಸಮೃದ್ಧಿ, ನೆಮ್ಮದಿಗಳನ್ನು ತರಲಿ ಎಂದು ಆಶಿಸುತ್ತೇನೆ.

Thursday, May 14, 2009

ಒಮ್ಮೊಮ್ಮೆ ಹೀಗೂ ಆಗುವುದು...

Z : ಈಗ ಏನ್ ಮಹಾ ಆಗೋಯ್ತು ಅಂತ ನೀನ್ ಈಥರ ತಲೆ ಕೆಡಿಸಿಕೊಂಡಿದ್ಯಾ ?

ನಾನು : ಏನ್ ಆಗಿಲ್ಲ ಅಂತ ಕೇಳು.

Z : ಏನ್ ಆಗಿಲ್ಲ ?

ನಾನು : ನನ್ನ ತಲೆ ಢಂ ಅಂತ ಒಡೆದು ಚೂರೊಂದು ಆಗಿಲ್ಲ ನೋಡು...

Z : ಓಕೆ....

ನಾನು : ಥುತ್ ! ಈ ಸಮಯದಲ್ಲಿ ಓಕೆ ಪ್ರಯೋಗ ಮಾಡ್ತ್ಯಲ್ಲಾ...ಮನುಷ್ಯಳಾ ನೀನು ?

Z : Have no doubts.

ನಾನು : Have no doubt that you are definitely not human ?

Z : ನಾನು ಮನುಷ್ಯಳೇ...

ನಾನು : I have my own doubts !

Z : Good, you at least own doubts !

ನಾನು : ನೋಡು...ಮೊದ್ಲೆ ನನ್ನ ಮೂಡ್ ಸರಿ ಇಲ್ಲ...

Z : ಯಾಕೆ ಸರಿ ಇಲ್ಲ ಅಂತ ಗೊತ್ತಾದ್ರೆ ತಾನೆ ನಾವ್ ಏನಾದ್ರು ಹೇಳಕ್ಕೆ ಆಗೋದು ?

ನಾನು : ನನಗೆ ಒಂದು ಪ್ರಶ್ನೆ ಸಿಕ್ಕಪಟ್ಟೆ ಕಾಡ್ತಿದೆ.

Z : ನೀನು ಯಾವಾಗ ಉದ್ಧಾರ ಆಗ್ತ್ಯಾ ಅನ್ನೋ ಪ್ರಶ್ನೆ ನ ? ನಾನು ಈಗ್ಲೆ ಉತ್ತರ ಕೊಡ್ತಿನಿ ತಗೊ...ನೀನು ಉದ್ಧಾರ ಆಗಕ್ಕೆ ಮಿನಿಮಮ್ 20 x 10^6 ಜನ್ಮ ಆಗತ್ತೆ.

ನಾನು : x-( x-( x-(

Z : ಬುಸುಗುಡು...ಹಾವಿನ ಥರ ! ಈಗ ಏನಾಯ್ತು ಅಂತ ಹೇಳು.

ನಾನು : ಜೀವನದಲ್ಲಿ ಏನು ಮುಖ್ಯ ?

Z : ನೆಮ್ಮದಿ.

ನಾನು : food, clothing and shelter ಅಲ್ವಾ ?

Z : ಅದು ದೇಹಕ್ಕೆ. ಆತ್ಮಕ್ಕೆ ಆನಂದ ಮುಖ್ಯ.

ನಾನು : ನೀನು ಇದೇ ಟೈಮಲ್ಲಿ ಫಿಲಾಸಫಿ ಪಾಠ ಮಾಡ್ಬೇಕಾ ನಂಗೆ ?

Z : ಅರೆರೆ...ನಿಂಗೆ ಹೆಂಗೆ ಗೊತ್ತಯ್ತು ? moreover, I just started with introduction..

ನಾನು : ಅಲ್ಲಿಗೆ full stop ಇಡು. ನನಗೆ ಟೈಮಿಲ್ಲ !

Z : ಓಕೆ. ಜೀವನಕ್ಕೆ ಮುಖ್ಯ The above mentioned and not to forget, money.

ನಾನು : ???

Z : :-) :-) :-) ನಾನು ಮಾತಾಡಲ್ಲ...ನಾನು ಬಾಯಿ ತೆಗೆದ್ರೆ ನೀನು " no gyan please !" ಅಂತ್ಯಾ !

ಇರ್ಲಿ. ಏನಾಯ್ತು ಈಗ ?

ನಾನು : ಈಗ ನಾನು ರಿಸರ್ಚಿಗೆ ಹೋಗಲೋ...ಕೆಲಸಕ್ಕೆ ಸೇರಲೋ ಅನ್ನೋದೆ ದೊಡ್ಡ ಪ್ರಶ್ನೆ ಆಗೋಗಿದೆ. ಜೀವನದಲ್ಲಿ the above four ಜೊತೆಗೆ choose ಮಾಡೋದು ability ಕೂಡಾ ಮುಖ್ಯ. ಏನಂತೀಯಾ ?

Z : ಹೂಂ....

ನಾನು : ಈಗ ನನಗೆ ನನ್ನ ನಿರ್ಧಾರವನ್ನ ಖಡಾಖಂಡಿತವಾಗಿ ತೆಗೆದುಕೊಳ್ಳುವ ಸಮಯ ಬಂದಿದೆ. ಎಕ್ಸಾಮುಗಳ ರಿಸಲ್ಟು ಬರದೇ, ಒಂದಾದ ಮೇಲೊಂದು ಬರುತ್ತಿರುವ ಕೆಲಸದ appointment orders ನನ್ನ ಆತಂಕ ಹೆಚ್ಚಿಸುತ್ತಿವೆ. ಒಂದು ವಾರಕ್ಕಿಂತ ಹೆಚ್ಚಿಗೆ ಟೈಮಿಲ್ಲ ! ರಿಸರ್ಚಿನ ರಿಸಲ್ಟಿಗೆ ಕಾದರೆ ಕೆಲಸ ಇಲ್ಲ. ಕೆಲ್ಸಕ್ಕೆ ಹೋದರೆ ರಿಸರ್ಚಿಗೆ ಬರಲಾಗುವುದಿಲ್ಲ !

Z : tough.

ನಾನು : ಇನ್ನೇನ್ ಮತ್ತೆ ! ನಾನು ಯೋಚನೆ ಮಾಡಿ ಮಾಡಿ ಒಂದು ನಿರ್ಧಾರಕ್ಕೆ ಬಂದಿದಿನಿ...

Z : ಬಾ...

ನಾನು : ಏನಪ್ಪಾ ಅಂದ್ರೆ - ರಿಸರ್ಚಿಲ್ಲದೇ ಬರಿ ಹಣಕ್ಕೋಸ್ಕರ ದುಡಿಯೋಕಿಂತ, ರಿಸರ್ಚಿಗೆ ಪ್ರೋತ್ಸಾಹ ಕೊಡುವ ಕೆಲಸಕ್ಕೆ ಸೇರ್ಕೊಳ್ಳೋದು ವಾಸಿ ಅಂತ.

Z : ಭೇಷ್...ಕೆಟ್ಟಿರೋ ತಲೆ ಕೂಡಾ ಒಳ್ಳೆ decisions ತೆಗೆದುಕೊಳ್ಳಬಹುದು ಅಂತ ಇವತ್ತು ಗೊತ್ತಾಯ್ತು ನೋಡು !

ನಾನು : ಸುಮ್ನಿದ್ರೆ ಸರಿ ನೀನು !

Z : ಹೆಹೆ...just joking ! ನೋಡು, at the end of everything, you should not regret what you did.

ನಾನು : I dont think I will regret anything. Decision making is a tough task, but not impossible.

Z : ಹೌದು. ಈಗ, ಸುಮ್ನೆ ಇದ್ಬಿಡು. ಮತ್ತೆ ಇದೇ ವಿಷ್ಯ ನ ಯೋಚನೆ ಮಾಡಿ, ಆಮೇಲೆ "ಹಿಂಗ್ ಮಾಡಿದ್ರೆ ಹೆಂಗೆ ?" ಅಂತ ನನ್ನ ಬಂದು ಕೇಳಬೇಡ !

ನಾನು : ಗ್ರ್ರ್ರ್ರ್ರ್ರ್ರ್ರ್ರ್ !!!

Z : ನೀನು ಎಷ್ಟೇ ಕೂಗಿದರೂ, ತಿಪ್ಪರ್ಲಾಗ ಹಾಕಿದರೂ, ಇದಕ್ಕಿಂತಾ suitable and feasible solution ಸಿಕ್ಕಲ್ಲ, ತಿಳ್ಕೋ !

ನಾನು :ಹಂಗಂತಿಯಾ ?

Z : ಯೆಸ್.

ನಾನು : ಓಕೆ.ಇಷ್ಟರ ಮಧ್ಯದಲ್ಲಿ ಒಂದು ವಿಷಯ ಹೇಳೋದೇ ಮರ್ತೋಗಿತ್ತು. ಇದು ನಮ್ಮಿಬ್ಬರ 75th phone call-u.I dont know whether we should celebrate or not.

Z : Recession period ಈಗ. ಆದ್ದರಿಂದ, ಸುಮ್ನೆ ಇದ್ದುಬಿಡೋಣ. ಅಪ್ಪಿ ತಪ್ಪಿ ಏನಾದ್ರೂ century ಆದರೆ, ಆಗ ಯೋಚನೆ ಮಾಡೋಣ.

ನಾನು : Done !

Thursday, January 22, 2009

ಹೀಗೊಂದು ಅರ್ಥಪೂರ್ಣ ಸಂಜೆ

Z : ಅರ್ಥ ಯಾರು and ಪೂರ್ಣ ಎಲ್ಲಿದೆ?

ನಾನು :ಅಯ್ಯೋ...ಅದು ಒಂದೇ ಪದ ಕಣೇ...meaningful ಅಂತ ಅರ್ಥ.

Z : ಓಹ್ ಹಾಗೆ... ಸಂಜೆಗೂ ಅರ್ಥ ಇರತ್ತಾ ? " ಈ ಸಂಜೆ ಯಾಕಾಗಿದೆ ?" ಅಂತ ಬರೀ ಪ್ರಶ್ನೆಗಳನ್ನೇ ಕೇಳ್ಕೋಂಡ್ ಬಂದಿದಿನಿ ಇಷ್ಟ್ ವರ್ಷ.

ನಾನು :ಅರ್ಥ of ಸಂಜೆ depends on the mindset and temperament of the person.

Z : ಹ್ಹ್ಮ್ಮ್ಮ್......ತಮಗೆ ಯಾವ್ ರೀತಿಯಲ್ಲಿ ಅರ್ಥಪೂರ್ಣ ಅನ್ನಿಸಿತು ?

ನಾನು : ಜನವರಿ ೧೨ ನೇ ತಾರೀಖು "ಯುವ ದಿನ". ಆವತ್ತಿನ ಸಂಜೆ ಅರ್ಥಪೂರ್ಣ ಅನ್ನಿಸಿತು.

Z : ಹೋದ ಸೋಮವಾರ ನಡೆದಿದ್ದರ ಬಗ್ಗೆ ಇವತ್ತು ಹೇಳ್ತಿದ್ದೀಯಾ ?

ನಾನು : ಇವತ್ತಾದ್ರೂ ಹೇಳ್ತಿದಿನಲ್ಲ...ಅದಕ್ಕೆ ಖುಷಿ ಪಡು.

Z : ಕರ್ಮಕಾಂಡ ! ಹೋಗ್ಲಿ ಕಥೆ ಶುರು ಮಾಡು.

ನಾನು : ಹಿಂದಿನ ದಿನ ನಮ್ಮನೆಲಿ ನಡೆದ ಬನಶಂಕರಿ ಹಬ್ಬದ ಸುಸ್ತು ಇನ್ನೂ ಪರಿಹಾರ ನೂ ಆಗಿರ್ಲಿಲ್ಲ...ಅಪರ್ಣನಿಗೆ ಸಿಕ್ಕಾಪಟ್ಟೆ ಜ್ವರ ಬಂದು ಬೆಳಿಗ್ಗೆ ಎದ್ದವಳೇ ಡಾಕ್ಟರ್ ಹತ್ರ ಕರ್ಕೊಂಡ್ ಓಡಿ ಹೋದೆ. ಆಮೇಲೆ ಅವಳನ್ನ ಮನೆಗೆ ಕರ್ಕೊಂಡ್ ಬಂದು ಔಷಧಿ ಕೊಟ್ಟು ಬ್ಲಾಗನ್ನು ಕುಟ್ಟಲು ಕೂತೆ...ಶಾರದ ಅತ್ತೆ [ನನ್ನ ಸೋದರತ್ತೆ] ಇಂದ ಮೆಸೇಜು..."I have brought Aurobindo ghosh's book savitri for you. Are you free this evening ?" ಅಂತ. ಅಮ್ಮ ಹೊರಗೆ ಹೋಗಿದ್ದರು. ಅವರು ಬರುವವರೆಗೂ ನಾನು ಬ್ಯುಸಿ.ನಾನು "ಇಲ್ಲ" ಅಂತ ಟೈಪ್ ಮಾಡೋ ಟೈಂ ಗೆ ಸರಿಯಾಗಿ ಅಮ್ಮ ಬಲಗಾಲಿಟ್ಟರು. "ಇಲ್ಲ" ನ "ಹೌದು" ಮಾಡಿ ಕಳಿಸಿದೆ. ಠಕ್ ಅಂತ ಆಕಡೆ ಇಂದ "There is a lecture on Life and works of Aurobindo Ghosh in Gokhale Institute today. Come there at 6.15. Dont miss it ! "ಅಂತ ಮೆಸೇಜು. ನಾನು ಮನೆ ಪರಿಸ್ಥಿತಿ ಹತೋಟಿಗೆ ಬಂದ ಮೇಲೆ "ಓಕೆ" ಅಂದೆ. ಆರುಕಾಲಿಗೆ ಕರೆಕ್ಟಾಗಿ ಅತ್ತೆ ಮನೆಗೆ ಪಾದಾರ್ಪಣೆ ಮಾಡಿದೆ. ಅಲ್ಲಿಂದ ಗೋಖಲೆ ಸಂಸ್ಥೆಗೆ ಒಂದೇ ನಿಮಿಷದ ನಡಿಗೆ. ಆರೂ ಹದಿನಾರಕ್ಕೆ ನಾವು ಅಲ್ಲಿದ್ದೆವು.

Z : ಹೇಗಿದೆ ಸಭಾಂಗಣ ? It was under renovation ಅಲ್ವಾ ?

ನಾನು : ಹೂಂ...It has been very beautifully and thoughtfully renovated. Acoustically better than many auditoria [but cant excel IISc :)] ಮೈಕು ಕುಯ್ಯ್ಯ್ಯ್ಯ್ಯ್ಯ್ಯ್....ಅನ್ನಲ್ಲ. ಹೊರಗಿನ ಶಬ್ದ ಕೇಳ್ಸಲ್ಲ. Echo ಕಮ್ಮಿ ಮಾಡೋಕೆ ಒಳ್ಳೇ measures ತಗೊಂಡಿದಾರೆ. As a physicist, I found the auditorium nice and proper.

Z : From the point of view of ದೇಶಭಕ್ತಿ ?

ನಾನು : ಅಯ್ಯೋ...ಸೂಪರ್ರಾಗಿದೆ. ಎಷ್ಟೋ ಜನರ ಬಗ್ಗೆ ನಮಗೆ ಗೊತ್ತೇ ಇರಲ್ಲ Z....ಅವರ ಫೋಟೋ ನೋಡಿದಾಗ ನಾವೆಲ್ಲ ಏನೂ ಇಲ್ಲ ಅವರ ಮುಂದೆ ಅನ್ಸತ್ತೆ. ಅವರ ಕಣ್ಣುಗಳು ಒಳ್ಳೆ chinnaswamy stadium flood light ಥರ ಝಗಮಗ ಮಿನುಗ್ತಿರತ್ವೆ. ನಮ್ ಕಣ್ಣು....

Z : match stick ಅಂತಿಯಾ ?

ನಾನು : ಹೂಂ....

Z : ಆಮೇಲೆ ?

ನಾನು : ನಾವು ಅಲ್ಲಿ ಹೋಗಿ ಸ್ಥಾಪಿತರಾಗಿ, ಆಸೀನರಾಗೋ ಹೊತ್ತಿಗೆ ಆರು ಇಪ್ಪತ್ತು. ಭಾಷಣ ಇದ್ದಿದ್ದು ಆರು ವರೆಗೆ. ಅತ್ತೆ ಬೇಕಂತ್ಲೆ ನನ್ನನ್ನ ಕಾಲು ಘಂಟೆ ಮುಂಚೆ ಬರಹೇಳಿದ್ದರು. ನಾವು ಅಲ್ಲಿ ಸೆಟಲ್ ಆಗಕ್ಕೆ ಸರಿ ಹೋಗತ್ತೆ ಅಂತ. ಸರಿಯಾಗಿ ಆರುವರೆಗೆ ಅತಿಥಿಗಳು ಬಂದರು. ಸ್ವಾಗತ ಮಾಡಕ್ಕೆ ಬಂದವರು ಅಮೇರಿಕದ MIT ಲಿ Professor.

Z : ಹಾ ?

ನಾನು : ಹೂಂ...ಏನ್ ಸಿಂಪಲ್ ಮನುಷ್ಯ ಅಂದ್ರೆ... ಯಾರಿಗೂ ನಂಬಕ್ಕೆ ಆಗಲ್ಲ. ಅವರ ತಂದೆಯವರ ಸ್ಮರಣಾರ್ಥ ಈ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಅವರ ತಂದೆ Chief justice. ಒಂದಿಷ್ಟ್ ಹೇಳಿದ್ರು ಅವರ ಬಗ್ಗೆ. ನನಗೆ ತಲೆ ತಿರುಗಿ ಬಂತು. ಕಲೆ, ಸಾಹಿತ್ಯ, ಸಂಸ್ಕೃತಿ, ನ್ಯಾಯ, ನೀತಿ,ಧರ್ಮ, ಅಧ್ಯಾತ್ಮ...ಇವೆಲ್ಲದರ ಸಮ್ಮಿಶ್ರಣ ನೇ ಆ Chief justice.

Z : fruit salad ಅನ್ನು.

ನಾನು : ಹೂಂ...with ice cream-u.

Z : ಆಮೇಲೆ ?

ನಾನು : ಅತಿಥಿಯ ಹೆಸರು Ms. Aditi Vasist.ಅವರು Sri Aurobindo School ನ Principal. ಅವರಿಗೆ ಮೂರು ವರ್ಷ ವಯಸ್ಸಾಗಿದ್ದಾಗ ಅವರ ತಂದೆ ತಾಯಿ ಇವರನ ಅರಬಿಂದೋ ಆಶ್ರಮ, ಪುದುಚೇರಿಗೆ ಕರೆದುಕೊಂಡು ಹೋಗಿದ್ದರಂತೆ. ಅರಬಿಂದೋ ಅವರನ್ನು ನೋಡಿದ ನೆನಪು ಇವರಿಗೆ ಅಷ್ಟು ಇಲ್ಲದಿದ್ದರೂ ನಂತರ ಅವರು ಆಶ್ರಮದ ಕಾರ್ಯಕ್ರಮಗಳಲ್ಲಿ ಭಾಗವಹಿಸತೊಡಗಿದರು. ಈಗ ಈ ಶಾಲೆಯನ್ನು ನಡೆಸುತ್ತಿದ್ದಾರೆ. ಅವರು ಅರಬಿಂದೋ ಅವರ ಸಂಕ್ಷಿಪ್ತ ಜೀವನ ಚರಿತ್ರೆಯನ್ನು ಬಿಚ್ಚಿಡುತ್ತಾ ಹೋದರು...ನನಗೆ ನಾನು ಎಂಥಾ ನಿಷ್ಪ್ರಯೋಜಕಿ ಅನ್ನೋದು ಜ್ಞಾನೋದಯ ಆಯ್ತು.

Z : ಸದ್ಯ ಈಗ್ಲಾದ್ರೂ ಆಯ್ತಲ್ಲ...

ನಾನು : Better late than never. ಅರಬಿಂದೋ ಅವರ ತಂದೆ ಆಂಗ್ಲ ಸಂಕೃತಿಪ್ರಿಯ. ಮಕ್ಕಳಿಗೆ ಭಾರತದ ವಾಸನೆಯೂ ತಾಗಕೂಡದೆಂದು ಅರಬಿಂದೋ ಎಂಟು ವರ್ಷದವರಾಗಿದ್ದಾಗಲೇ, ಅವರನ್ನ ಮತ್ತು ಅವರ ಅಣ್ಣ ತಮ್ಮಂದಿರನ್ನೆಲ್ಲರನ್ನೂ ಲಂಡನ್ನಿಗೆ ಹಡಗಿನಲ್ಲಿ ಕಳಿಸಿ, ಅಲ್ಲಿನ ವಿದ್ಯಾಭ್ಯಾಸ ಕೊಡಿಸಿ ಅವರನ್ನು ಆಂಗ್ಲದವರಾಗಿಯೇ ಮಾಡಲು ಅವರು ಬಯಸಿದ್ದರು. ಇಲ್ಲಿ ಇಂಗ್ಲೆಂಡಿನಲ್ಲಿ ಅವರಿಗೆ ಆಶ್ರಯ ಕೊಟ್ಟ ಮನೆಯ ಮುಖ್ಯಸ್ಥ ತೀರಿಹೋದ ನಂತರ ಇವರು ಹೋಟೆಲೊಂದರಲ್ಲಿ ಮಾಣಿಯಾಗಿ ಕೆಲಸ ಮಾಡುತ್ತಾ, ಜೊತೆಯಲ್ಲಿಯೇ ಓದುತ್ತಾ, ಕಾಲೇಜಿಗೇ ಮೊದಲಿಗರಾಗಿ, ವಿದ್ಯಾರ್ಥಿವೇತನಗಳನ್ನು ಪಡೆದು ತಮ್ಮ ಜೀವನ ಸಾಗಿಸಿದರು. ಇವರು ICS ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಿದ್ದರೆ ಭಾರತದಲ್ಲಿ ಇವರಿಗೆ ಒಂದು ಉತ್ತಮ ಹುದ್ದೆ ದೊರಕುತ್ತಿತ್ತು. ಇಂಗ್ಲೆಂಡಿನ ಭಾರತೀಯರು ಇಂಗ್ಲೇಂಡ್ ನಲ್ಲೇ ಗುಪ್ತ ಸಂಘಗಳನ್ನು ಮಾಡಿಕೊಂಡು ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರು. ಅರಬಿಂದೋ ಕೂಡಾ ಈ ಸಂಘಕ್ಕೆ ಸೇರಿ, ಪ್ರಾಣ ಹೋದರೂ ಆಗ್ಲರ ಕೈ ಕೆಳಗೆ ದುಡಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿ, ICS ಪರೀಕ್ಷೆಯ ಕುದುರೆ ಸವಾರಿ ಪರೀಕ್ಷೆಯಲ್ಲಿ ಬೇಕಂತಲೇ ತೇರ್ಗಡೆಯಾಗದೇ ಉಳಿದರು. ಅವರು ಭಾರತಕ್ಕೆ ಬರುತ್ತಿದ್ದ ಹಡಗು ಮುಳುಗಿತೆಂದು ತಿಳಿದ ಅವರ ತಂದೆ ಭಾರತದಲ್ಲಿ ಆಘಾತ ತಡೆಯಲಾಗದೇ ಪ್ರಾಣ ಬಿಟ್ಟರು. ಆದರೆ ಅರಬಿಂದೋ ಕೊನೆಯ ಕ್ಷಣದಲ್ಲಿ ಹಡಗು ಬದಲಿಸಿದ್ದರು. ಕಡೆಗೂ ಅವರು ಭಾರತ ತಲುಪಿದರು.

Z : ಯಪ್ಪಾ !!!

ನಾನು : ಹೂಂ...ನೋಡು ಎಷ್ಟ್ adventurous ಆಗಿತ್ತು ಇವರ ಜೀವನ ! ನನ್ನದೂ ಒಂದು ಜೀವನಾ ನ ?...ಸ್ಕೂಲ್ ಗೆ ಹೋಗು ಬಾ...ಕಾಲೇಜಿಗೆ ಹೋಗು ಬಾ...ಕಷ್ಟನೇ ಪಡ್ಲಿಲ್ಲ...ಕಾಲೇಜೂ ಟಾಪ್ ಮಾಡ್ಲಿಲ್ಲ.... :( :( :( ಯಾವ್ದಕ್ಕೂ ಹೋರಾಡ್ಲೂ ಇಲ್ಲ...ಗಲಾಟೆ ಅಂತೂ ಮಾಡ್ಲೇ ಇಲ್ಲ...ಕ್ರಾಂತಿಯನ್ನೂ ನಡೆಸ್ಲಿಲ್ಲ :( :( ಛೆ ಛೆ ಛೆ ಛೆ ಛೆ !!!!!!!!!!!!!!!!!!!!

Z : ಶಾಂತಿ ಶಾಂತಿ ಶಾಂತಿ !! ಸಮಾಧಾನ ಮಾಡ್ಕೋ.

ನಾನು : sniff !!!! ಆಮೇಲೆ ಅವರು ಅರಬಿಂದೋ ಅವರ ಸ್ವಾತಂತ್ರ್ಯ ಹೋರಾಟದ ಕಥೆ ಹೇಳಿದ್ರು.ಮೈ ರೋಮಾಂಚನ ಆಗೋಯ್ತು ನಂಗೆ. ಒಂದುವರೆ ಘಂಟೆ ಕಳೆದಿದ್ದೇ ಗೊತ್ತಾಗ್ಲಿಲ್ಲ. ಆಮೇಲೆ ಅರಬಿಂದೋ ರಚಿಸಿದ ಮೇರು ಕೃತಿ "ಸಾವಿತ್ರಿ"ಯ ಬಗ್ಗೆ ಮಾತಾಡಿದರು ಅವರು.

Z : what it eez ?

ನಾನು : Its a poem,a very long poem of 23,813 lines. ಆಂಗ್ಲದಲ್ಲೇ ಬರ್ದಿದಾರೆ ಇದನ್ನ. ಸಾವಿತ್ರಿ..ಅದೇ ಸತ್ಯವಾನನ ಹೆಂಡತಿ...ಯಮನ ಜೊತೆ ಹೋರಾಡಿ ಪತಿಯನ್ನ ಬದುಕಿಸಿಕೊಂಡಳಲ್ಲಾ...ಅವಳ ಕಥೆ. ಅವಳ ಪಾತ್ರದಲ್ಲಿ ಭಾರತೀಯ ಸಂಸ್ಕೃತಿ, ಸನಾತನ ಧರ್ಮ, ಎಲ್ಲವನ್ನು portray ಮಾಡಿದ್ದಾರಂತೆ. ಇದನ್ನೇ ನನ್ನ ಸೋದರತ್ತೆ ನನಗೆ gift ಮಾಡಿದ್ರು,on the occasion of world youth day.

Z : ಆಹಾ !!!

ನಾನು : ಇನ್ನೊಂದ್ ಏನಪ್ಪಾ ಅಂದ್ರೆ, ಅರಬಿಂದೋ ಅವರು ಕೆಲವು ಆಂಗ್ಲಪದಗಳನ್ನ ಸ್ವತಃ coin ಮಾಡಿದ್ದಾರೆ. ಅದಕ್ಕೆ ಅಂತಾ ನೇ ಒಂದು ನಿಘಂಟೂ ಇದೆ. ಸಾವಿತ್ರಿ ಪುಸ್ತಕ ಇದ್ದು ಆ ನಿಘಂಟು ಇರದಿದ್ರೆ no use. ಪಾಪ ನಮ್ಮತ್ತೆ ನನಗೆ ಅದನ್ನೂ ಕೊಟ್ರು.

Z : ಹೊಡುದ್ಲು jackpot ನ.

ನಾನು : ಹೆ ಹೆ....ಹೆಂಗೆ ?

Z : ಸೂಪರ್. ಆಮೇಲೆ ?

ನಾನು : ನಾನು ಅಮ್ಮನ MP3ಪ್ಲೇಯರ್ ನಲ್ಲಿ ಭಾಷಣ ನ ರೆಕಾರ್ಡ್ ಮಾಡ್ಕೊಂಡೆ. ನನ್ನ ಪಕ್ಕದಲ್ಲಿ ಕೂತಿದ್ದವರೂ ಸಹ ಮಾಡ್ಕೋತಿದ್ರು ಅವರ ರೆಕಾರ್ಡರ್ ನಲ್ಲಿ.ನಾನು ಸ್ವಲ್ಪ ನೋಟ್ಸ್ ಕೂಡಾ ಮಾಡ್ಕೋತಿದ್ದೆ. ಭಾಷಣ ಆದ್ಮೇಲೆ ಅವರು ನನ್ನ ನೋಟ್ಸ್ ನೋಡಿ, "which college are you from ? What are you studying ?" ಅಂದ್ರು. ನಾನು " I have done myM.Sc in physics" ಅಂದೆ. ಅವರು ನೋಡಿದರೆ... ISROದಲ್ಲಿ scientist !! ಅವರು "you have a very good handwriting, an impressive way of writing and have developed a very correct method of making notes. I am impressed. Do come to ISRO once.I can show you around. If you want some projects, we can see what we can do "ಅಂದು, ಕಾರ್ಡ್ ಕೊಟ್ಟು, ಕೈ ಕುಲುಕಿ ಹೋದ್ರು..

Z : ಭೂಮಿಮೇಲೆ ಇದ್ದ್ಯೋ ಅಥ್ವಾ ಚಂದ್ರಕ್ಕೆ ಹೋಟೋಗಿದ್ಯೋ ?

ನಾನು : ಇಲ್ಲ..ಭೂಮಿ ಮೇಲೆ ಇದ್ದೆ.

Z : ಗೂಡ್ !!ಆಮೇಲೆ ?

ನಾನು : ಅದಿತಿ ಮೇಡಮ್ ನ ಮಾತಾಡಿಸಿದೆ. ನನ್ನ ಕೈಯಲ್ಲಿ ಸಾವಿತ್ರಿ ಪುಸ್ತಕ ಇದ್ದಿದ್ದನ್ನ ನೋಡಿ ಅವರು ಸಖತ್ ಖುಷಿ ಪಟ್ಟರು. ಅವರು ಹೊರಟ ನಂತರ ನಾವು ರಾಮಕೃಷ್ಣ ಆಶ್ರಮಕ್ಕೆ ಪಾದ ಬೆಳೆಸಿದ್ವಿ.ಆಶ್ರಮ ಸರ್ಕಲ್ ನಲ್ಲಿ ವಿವೇಕಾನಂದರ ಮೂರ್ತಿ ಆವತ್ತು ಬೆಳಿಗ್ಗೆ ಅನಾವರಣ ಆಗಿತ್ತಲ್ಲ, ಅದನ್ನ ನೋಡಕ್ಕೆ. ಅಲ್ಲಿ ಹೋದ ಮೇಲೆ ಅಲ್ಲಿ ನಡೆಯುತ್ತಿದ್ದ ಬುಕ್ ಸೇಲ್ ಗೆ ಹೋಗದೆ ಇರಲು ಪುಸ್ತಕ ಹುಳುಗಳಾದ ನನಗೆ ಮತ್ತು ನಮ್ಮ ಅತ್ತೆಗೆ ಮನಸ್ಸು ಬರಲಿಲ್ಲ. ನಮ್ಮ ಜೊತೆ ನನ್ನ ತಂಗಿಯರಾದ ಗೌರಿ ಮತ್ತು ವಿದ್ಯಾ ಮತ್ತು ನನ್ನ ಮಾವ ಮುರಳಿಧರ್ ಎಲ್ಲಾರು ಇದ್ದರು. ನಾವೆಲ್ಲ ಬುಕ್ ಸೇಲ್ ಗೆ ಹೋದೆವು. ಹೋದ ಸರ್ತಿ ಕೂಡಾ ನಾನು ಈ ಸೇಲ್ ಗೆ ಬಂದಿದ್ದೆ. ಆಗಲೇ ಗುರುಗಳಾದ ಅರುಣ್ ಮತ್ತು ನನ್ನ ಮತ್ತೊಬ್ಬ ಮಿತ್ರರಾದ ಶ್ರೀಕಾಂತ್ ಅವರನ್ನು ನಾನು ಮೊದಲ ಬಾರಿ ಮೀಟ್ ಮಾಡಿದ್ದು. ಆಗ ಗುರುಗಳು "ನಾನು ಯಾರು ?" ಅನ್ನೋ documentary ಮೂವಿಯ ಸಿ ಡಿ ತೋರಿಸಿ, "ಇದನ್ನ ತಗೋ. ಸಕತ್ತಾಗಿದೆ. " ಅಂದಿದ್ದರು. ನಾನು " ಹೂಂ.." ಎಂದು ತಲೆಯಲ್ಲಾಡಿಸಿದ್ದೆ. ಆದರೆ ತಗೊಳ್ಳಕ್ಕೆ ಆಗಿರ್ಲಿಲ್ಲ. ಅದನ್ನ ಈ ವರ್ಷ ತಗೊಂಡೆ .

Z : ಒಂದು ವರ್ಷ ಬಿಟ್ಟು ?

ನಾನು : ಹೂಂ.ಆಮೇಲೆ ಶಂಕರಾಚಾರ್ಯರು ಬರೆದ "ಲಘು ವಾಕ್ಯ ವೃತ್ತಿ" ಅನ್ನೋ ಪುಸ್ತಕದ ಬಗ್ಗೆ ಕೇಳಿದ್ದೆ. ಏನೂ ಅಂತ ತಿಳ್ಕೊಳಕ್ಕೆ ಅದನ್ನ ತಗೊಂಡೆ. For some technical reasons, ನನಗೆ ದಕ್ಷಿಣಾಮೂರ್ತಿ ಸ್ತೋತ್ರ ಬೇಕಿತ್ತು. ಮನೆಯಲ್ಲಿ ಇರಲಿಲ್ಲ ಆ ಪುಸ್ತಕ. ಅದನ್ನೂ ಸೇರಿಸಿಕೊಂಡೆ. ಸಾಕು ಈ ಸರ್ತಿಗೆ, ಇನ್ಯಾವ್ ಪುಸ್ತಕನೂ ತಗೊಳಲ್ಲಾ ಅಂತ ಪ್ರತಿಜ್ಞೆ ಮಾಡಿ ಬಿಲ್ ಕೌಂಟರ್ ಗೆ ಬಂದೆ, ಅಲ್ಲಿ ಸೋಮನಾಥಾನಂದ್ ಜೀ ಅವರು ಬರೆದ "ಉಪನಿಷತ್ ಭಾವಧಾರೆ" ಪುಸ್ತಕ ನನ್ನ ಕಣ್ಣಿಗೆ ಬಿತ್ತು.

Z : As ususal, ಪ್ರತಿಜ್ಞೆ ಗಾಳಿಗೆ ತೂರಿದ್ದಾಯ್ತು.

ನಾನು : ಇಲ್ಲ..ನಾನು ಯೋಚ್ನೆ ಮಾಡಕ್ಕೆ ಶುರು ಮಾಡಿದೆ. ತಗೊಳ್ಳಕ್ಕೆ ದುಡ್ಡಿತ್ತು...ಆದ್ರೆ ಮನೆಗೆ ಬಂದ್ರೆ ಅಮ್ಮ ಅಣ್ಣ ಇಬ್ಬರೂ " ನೀನ್ ಹೋದ್ ಕಡೆ ಎಲ್ಲ ಟೆಂಪೋ ಅರೇಂಜ್ ಮಾಡ್ಬೇಕಾಗತ್ತೆ...ಇಷ್ಟ್ ಇಷ್ಟ್ ಪುಸ್ತಕ ಹೊತ್ಕೊಂಡು ಬರ್ತ್ಯಾ....ನಿಂಗಿಂತಾ ಭಾರ ಇರತ್ತೆ ಅವು. ನಾಲ್ಕು book racks ಭರ್ತಿ ಆದ್ವು...ಎಲ್ಲಿಂದ ಮಾಡ್ಸೋದು ಹೊಸದನ್ನ ?" ಅಂತ ಆಡ್ಕೋತಾರೆ ಅಂತ ಗೊತ್ತಿತ್ತು. ಅವರು ನನ್ನ ಪುಸ್ತಕ ಪ್ರೀತಿಗೆ ಯಾವತ್ತೂ ಅಡ್ಡಿ ಬಂದವರಲ್ಲ. ನಾನ್ ಕೇಳಿದ್ದಕ್ಕೆ ಯಾವತ್ತೂ ಇಲ್ಲಾ ಅಂತ ನೂ ಅಂದಿಲ್ಲ.The problem is, ಮನೆಯಲ್ಲಿ ಈಗ ಹುಡುಕಿದ್ರೂ ಎಲ್ಲೂ ಜಾಗ ಇಲ್ಲ . ಎಲ್ಲಪ್ಪಾ ಇಡೋದು ಇವನ್ನಾ ಅಂತ ಯೋಚನೆ ಶುರುವಾಯ್ತು. ಅಷ್ಟೊತ್ತಿಗೆ ಮಳಿಗೆ ಕ್ಲೋಸ್ ಆಗೋ ಟೈಂ ಬಂದಿತ್ತು. ಅತ್ತೆ ಬಂದು " ಆಯ್ತಾ ಶಾಪಿಂಗ್ ?" ಅಂದ್ರು.ನಾನು ನನ್ ಪರಿಸ್ಥಿತಿ ವಿವರಿಸಿದೆ. ಅವರು " ಅಯ್ಯೋ ಪೆದ್ದಿ, ಹತ್ತರಲ್ಲಿ ಇದೂ ಹನ್ನೊಂದ್ನೇ ದು. ಈಗ ಏನು, ನೀನು ತಗೊಂಡರೆ ಮನೆಲಿ ಜಾಗ ಇಲ್ಲ ಅಂತ comment ಬರತ್ತೆ ತಾನೆ ? ನಾನ್ ಕೊಡ್ಸಿದ್ರೆ ? ಬರಲ್ಲ ತಾನೆ ? ತಗೊ..ಇದೂ ನನ್ನ gift. flat discount ಸಿಕ್ಕೋವಾಗ chance miss ಮಾಡ್ಕೋಬಾರ್ದು" ಅಂದಿದ್ದೇ...ಪುಸ್ತಕ ನ ತಗೊಂಡು ಹೋಗಿ ಬಿಲ್ ಹಾಕ್ಸೇಬಿಟ್ರು.

Z : playwin ಗಿಂತಾ ರೋಮಾಂಚನಕಾರಿಯಾಗಿದೆ ಇದು.

ನಾನು : ಅಲ್ವಾ ? ನೋಡು, ನನ್ನ ಪ್ರತಿಜ್ಞೆ ಮುರಿಲೂ ಇಲ್ಲ, ಪುಸ್ತಕ ನ ತಗೊಳ್ಳದೇ ಇರ್ಲೂ ಇಲ್ಲ. ಹೇಗೆ ?

Z : ಕಿಲಾಡಿ ;-)

ನಾನು : ಆಮೇಲೆ SLV corner ನಲ್ಲಿ ಗಡತ್ತಾಗಿ ನಾರ್ಥ್ ಇಂಡಿಯನ್ ಊಟ ತಿಂದು, ರಾತ್ರಿ ಹತ್ತು ಮುಕ್ಕಾಲು ಸಮಯದಲ್ಲಿ cane-o-la ದಲ್ಲಿ ginger lime sugarcane juice ಕುಡಿದು, ಅತ್ತೆ ಮನೆಯಲ್ಲಿ ರಾತ್ರಿ ಠಿಕಾಣಿ ಹೂಡಿದೆ. ವಿಶ್ವ ಯುವ ದಿನದಂದು ಅರಬಿಂದೋ ಮತ್ತು ಸ್ವಾಮಿ ವಿವೇಕಾನಂದರ ಪುಸ್ತಕ ನನ್ನ ಪಾಲಿಗೆ ಬಂದದ್ದು ಅರ್ಥಪೂರ್ಣ. ಅದನ್ನ ಓದಲು ಶುರು ಮಾಡ್ಬೇಕು. ಅವರ ಆದರ್ಶನ ನಾನೂ atleast in picograms ( one pico= 10^-12) ಮೈಗೂಡಿಸ್ಕೋಬೇಕು. ದೇಶ ಉದ್ಧಾರ ಮಾಡಕ್ಕೆ ಮೊದಲು ನಾನು ಉದ್ಧಾರ ಆಗ್ಬೇಕು ಅಂತೆಲ್ಲಾ ಯೋಚ್ನೆ ಮಾಡಿದ್ದೇನೆ. ಆಗತ್ತಾ ಇಲ್ವಾ ನೋಡ್ಬೇಕು !

Z : ಸಿಕ್ಕಾಪಟ್ಟೆ ಪುಸ್ತಕ ಇದೆ ಓದೋಕೆ ಹಾಗಾದ್ರೆ....

ನಾನು : ಹೂಂ....ನೋಡೋಣ ಯಾವಾಗ ಓದಿ, ಅರಗಿಸಿಕೊಂಡು ಮುಗಿಸುತ್ತೇನೆ ಇವೆಲ್ಲ ಅಂತ !

Thursday, January 1, 2009

Happy Birthday Z !

ನಾನು : Happy birthday to you.......

Z : :-) :-)

ನಾನು : Happy Birthday to you ....

Z : :-) :-) :-)

ನಾನು : Happy Birthday to you dear Z.................

Z : :-) :-) :-):-) :-) :-)

ನಾನು : Happy birthday to you !!!!!!!!!!!!!!!!!!!!

Z : :-) :-) :-):-) :-) :-):-) :-) :-):-) :-) :-):-) :-) :-)

ನಾನು : ತಾವು ಕಿಸ್ದಿದ್ದು ಮುಗ್ದಿದ್ದ್ರೆ thank you ಅಂತ ಅಂದು ಪುಣ್ಯ ಕಟ್ಟಿಕೊಳ್ಳಿ.

Z : Thank you Thank you Thank you !!!!!!!!!!!!!!!!

ನಾನು : Welcome.

Z : ನನಗಂತೂ ಸಖತ್ ಖುಶಿಯಾಗಿದೆ....

ನಾನು : ಏನು ಪುರುಷಾರ್ಥಕ್ಕೆ ಅಂತ ವಿವರಿಸುವಂಥವರಾಗಿ.

Z : ನಿನ್ನ ನಾವೇಕೆ ಹೀಗೆ ಗಿಂತ ನನ್ನ ಬ್ಲಾಗೇ ಜಾಸ್ತಿ ಫೇಮಸ್ಸಾಗಿರೋದು.

ನಾನು : ಏನಿಲ್ಲ...ನನ್ನ ಬ್ಲಾಗೇ ಜಾಸ್ತಿ ಫೇಮಸ್ಸು.

Z : ಆಹ...Stat counter statistics sample ನ ತೋರಿಸಲಾ ? ನಿನ್ನ ಬ್ಲಾಗ್ ಗಿಂತ ನನ್ನ ಬ್ಲಾಗ್ ಗೆ 1500 hits ಜಾಸ್ತಿ ಇದೆ.

ನಾನು : ಅದಕ್ಕೆ ?

Z : ನಾನ್ ಜಾಸ್ತಿ ಫೇಮಸ್ಸು.

ನಾನು : ಸರಿ. ಬ್ಲಾಗ್ ಪ್ರಪಂಚಕ್ಕೆ ಬಂದು ಒಂದು ವರ್ಷವಾದ ಸಂತೋಷನ ಆಚರಿಸ್ಕೋತಿದ್ಯಾ...ಸಂತೋಷ ಪಡು. I am very happy for you. ಇವತ್ತ್ ನಿನ್ನ ಕಾಲು ಎಳಿಯಲ್ಲ.

Z : ಈ ತರಹ ಸಡನ್ನಾಗಿ ನೀನು ಭಾವನೆ ಗೀವನೆ ಎಲ್ಲಾ ತೋರ್ಸ್ಬೇಡ. ನನಗೆ ಶಾಕ್ ಆಗತ್ತೆ.

ನಾನು : ಅಲ್ಲಾ...ನಾನು ನನ್ನ ಥರ ಇದ್ದರೆ "ಭಾವನೆ ನೇ ಇಲ್ದೆ ಇರೋ hopeless fellow " ಅಂತ ಬೈತ್ಯಾ...ಭಾವನೆ ತೋರ್ಸಿದರೂನೂ ಬೈತಿಯಾ...It is so difficult to please you !

Z : ಮತ್ತೆ ? ಒಂದು ವರ್ಷದಿಂದ ನನ್ನನ್ನ ಎಷ್ಟು ಗೋಳಿಕೊಂಡಿದ್ಯಾ. Today is my day.

ನಾನು : ನನ್ನ ಮೇಲೆ ನ್ಯೂಟನ್ನಿನ ಮೂರನೆಯ ನಿಯಮದ ಪ್ರಯೋಗ ನಾ?

Z : ನೀನು ಎಷ್ಟ್ ಜನರ ಮೇಲೆ ಈಥರ ರಿಸರ್ಚ್ ಮಾಡಿಲ್ಲ ? ಈಗ ನಿನ್ನ ಬಾರಿ.

ನಾನು : correction. ನಾನು ಜನಗಳ ಮೇಲೆ ರಿಸರ್ಚ್ ಮಾಡಿಲ್ಲ...ವಸ್ತುಗಳ ಮೇಲೆ ರಿಸರ್ಚ್ ಮಾಡಿದಿನಿ.

Z : ಮೌನದಲ್ಲಿದ್ದಾಗ ಮನುಷ್ಯರನ್ನು ಬಿಡ್ಲಿಲ್ಲವಲ್ಲಾ....

ನಾನು : oh yes...ಆದ್ರೂ...

Z : ಅವೆಲ್ಲಾ ಇಲ್ಲಾ...ಇವತ್ತ್ ನಾನ್ ಮಾತಾಡ್ತಿನಿ. ನೀನು ಕೇಳಿಸಿಕೋ. ಅಷ್ಟೆ.

ನಾನು : ಅಪ್ಪಣೆ.

Z : ಹೋದ ವರ್ಷ ಡಿಸಂಬರ್ 31ನೇ ತಾರೀಖು head ruled ಅವರು ನಾವೇಕೆ ಹೀಗೆ ಬ್ಲಾಗ್ ನಲ್ಲಿ ಒಂದು ಪೋಸ್ಟನ್ನು ಹಾಕುವುದರಲ್ಲಿ ಬ್ಯುಸಿ ಆಗಿದ್ದರು. Simultaneously ಯಾಹೂ ಲಿ ಒಂದು conference ಮತ್ತು ಇನ್ನು ಕೆಲವು ಬ್ಲಾಗ್ ಗಳ ಓದೂ ಸಾಗಿತ್ತು. ನಾನು ಸುಮ್ನೆ, ಹಾಗೆ...with no specific intentions ಒಂದು ಫೋನ್ ಮಾಡಿದೆ. ಯಥಾ ಪ್ರಕಾರ ಇವರು ತಮ್ಮ ಕಥೆಯನ್ನು ಹೇಳಿಕೊಳ್ಳಲು ಶುರು ಮಾಡಿದರು. ಆವಾಗ ಅಪ್ಪಿ ತಪ್ಪಿ loudspeaker on ಆಗಿದ್ದರ ಫಲವೇ ಈ ಬ್ಲಾಗು.

ನಾನು : ಸತ್ಯ ಹರಿಶ್ಚಂದ್ರಿ ! Let me tell the rest of the story. ಪಾಪ, ಓದುಗ (actually ಕೇಳುಗ) ಮಹಾಶಯರಿಗೆ ಅನುಮಾನ ಇರತ್ತೆ...ಇಂಥಾ ಐಡಿಯಾಗಳೆಲ್ಲ ಹೇಗೆ ಹೊಳಿಯತ್ವೇ ಅಂತ...ನಿಜ ಹೇಳ್ತಿದಿನಿ ಕೇಳಿಸಿಕೊಂಡುಬಿಡಿ ಎಲ್ಲಾರು...ಇದು ಇವಳಿಗೆ ಅನಿಸಿದ್ದಲ್ಲ...ನನಗೆ ತೋಚಿದ್ದು.

Z : ಮಾತಾಡ್ಬೇಡ ಅಂತ ಹೇಳಿರ್ಲಿಲ್ಲ!

ನಾನು : ಇನ್ನು ತಾವು ಮುಂದುವರ್ಸಿ. ನಮ್ಮ ಮಾತು ಆಯ್ತು.

Z : good. ಆಮೇಲೆ, ಇದನ್ನ ಜನಕ್ಕೆ ಹೇಳೋದೋ ಬೇಡ್ವೋ ಅಂತೆಲ್ಲ ಮೇಡಮ್ ಅವರು ಒಂದು ಹತ್ತು ಲಕ್ಷ ಸರ್ತಿ ಯೋಚ್ನೆ ಮಾಡಿ, ಅರ್ಧ ರಾತ್ರಿ ಲಿ conference ನಲ್ಲಿ ಈ ಬ್ಲಾಗಿನ ಬಗ್ಗೆ ಎಲ್ಲರಿಗೂ ತಿಳಿಯಪಡಿಸಿ,ಒಂದೆರಡ್ಮೂರು ಚಪ್ಪಾಳೆಗಳ ಸ್ಮೈಲಿಯನ್ನು ಗಿಟ್ಟಿಸಿಕೊಂಡರು. ಆಮೇಲೆ ಇವರಿಗೆ ಸಡನ್ನಾಗಿ ಬ್ಲಾಗನ್ನು ಡಿಲೀಟ್ ಮಾಡುವ ಮನಸ್ಸಾಗಿ " ಡಿಲೀಟ್ ಮಾಡಲಾ ? " ಅಂತ ಗುರುಸ್ವರೂಪ ಅರುಣ್ ಅವರಿಗೆ ಕೇಳಲು ಅವರು " ಡಿಲೀಟ್ ಮಾಡಿದ್ರೆ ನನ್ನ ಜೊತೆ ಮಾತಾಡ್ಬೇಡಾ ನೀನು " ಅಂತ ಬೈಸಿಕೊಂಡ ಮೇಲೆ ಸಂತೃಪ್ತರಾಗಿ ಆ ಯೋಚನೆಯನ್ನು ತಾತ್ಕಾಲಿಕವಾಗಿ ಕೈಬಿಟ್ಟರು. ಆಮೇಲೆ ಪ್ರತಿ ಸಲ ಬ್ಲಾಗ್ ಡಿಲೀಟ್ ಮಾಡಲು ಹೋದಾಗಲೂ ಕಮೆಂಟ್ ಗಳ ಸಂಖ್ಯೆ ಮತ್ತು hits ಏರು ಮುಖ ಮಾಡುತ್ತಿದ್ದುದನ್ನ ಕಂಡು ತೆಪ್ಪಗಾಗುತ್ತಿದ್ದರು.

ನಾನು : ನಾ...

Z : ಶ್!!!!!!!!!! ನನ್ನ ಮಾತು ಮುಗಿದಿಲ್ಲ ಇನ್ನು.

ಇದಾದ ಆರು ತಿಂಗಳಿಗೆ ಮೇಡಮ್ ಅವರಿಗೆ ನನ್ನ ಜೊತೆಯಲ್ಲಿ ಮಾತನ್ನು loudspeaker mode ನಲ್ಲಿ ನಡೆಸುತ್ತಿದ್ದುದರ ದೆಸೆಯಿಂದ ಸ್ನೇಹಿತರು exponential rate ನಲ್ಲಿ ಹೆಚ್ಚಾದರು. ನಮ್ಮ ಮಾತು ಕತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದುದರ ಪರಿಣಾಮ, ಒಂಭತ್ತು ತಿಂಗಳಿಗೆ ಐವತ್ತು ಪೋಸ್ಟ್ ಗಳನ್ನ ಈ ಬ್ಲಾಗು ಕಂಡಿತು. [ನಾವೇಕೆ ಹೀಗೆ ಬರಿ ಇಪ್ಪತ್ನಾಲ್ಕು after one year !!!! yahoooooo!!!!!!!!!!!!!!!!!!!!!]

ನಾನು : ಅ..

Z : ಚುಪ್ ! ಬಟ್ಟೆ ಕಟ್ಟುಬಿಡ್ತಿನಿ ನೀನು ಒಂದಕ್ಷರ ಮಾತಾಡಿದರೆ !

ನಾನ್ ಎಲ್ಲಿದ್ದೆ ಕಥೆ ಲಿ ? ಹಾಂ...ಐವತ್ತು ಪೋಸ್ಟು. ಸಿಕ್ಕಾಪಟ್ಟೆ ಮಾತಾಗೋಯ್ತು ಅಂತ ಮೇಡಮ್ ಅವರಿಗೆ ಅನ್ನಿಸಿ ಅವರು ಮೌನದ ರಿಸರ್ಚು ಶುರು ಮಾಡಿದರು. ಆಗಲೂ ಸಹ ಕಮೆಂಟುಗಳು, hitsಗಳನ್ನು ಕಂಡು ಇವರಿಗೇ ಅಯ್ಯೋ ಪಾಪ ಅನ್ನಿಸಿ, ಒಂದು ಫೇಸ್ ಮುಗಿದ ಮೇಲೆ ಮಾತಾಡಲು ನಿರ್ಧರಿಸಿದರು. ಇಲ್ಲಾಂದಿದ್ದ್ರೆ...ಇದು ವರ್ಗು silent mode ನಲ್ಲಿ ಇರ್ತಿತ್ತು ಬ್ಲಾಗು. ನಿಮ್ಮ ಪ್ರೋತ್ಸಾಹಕ್ಕೆ ಸಿಕ್ಕ್ ಸಿಕ್ಕಾಪಟ್ಟೆ ಧನ್ಯವಾದ.

ಸರಿ...ಹೋಗ್ಲಿ...ಈಗ ನೀನು ಮಾತಾಡು.

ನಾನು : ಅಬ್ಬಾ ಸದ್ಯ ! ಓದುಗ ಬಂಧುಗಳೇ...Z ಬಹಳ ನೀಟಾಗಿ ಸತ್ಯಾನೆಲ್ಲ ಚಾ ಚು ತಪ್ಪದೇ ನಿಮಗೆ ತಿಳಿಸಿದ್ದಾಳೆ.ನನ್ನದು ಡಿಟ್ಟೋ ನೇ. ನಾನು ಕೂಡಾ ನಿಮಗೆ ಸಿಕ್ಕ್ ಸಿಕ್ಕಾಪಟ್ಟೆ ಧನ್ಯವಾದ ಹೇಳ್ತಿನಿ. ಈ ನಮ್ಮ ಬ್ಲಾಗ್ ಯಶಸ್ವಿಯಾಗುವುದರಲ್ಲಿ ನಮ್ಮ ಮಾತುಕತೆಗಿಂತಾ ನಿಮ್ಮ ಭಾಗವಹಿಸುವಿಕೆ ಹೆಚ್ಚು ಪಾತ್ರ ವಹಿಸಿದೆ. [ಸಿಕ್ಕಾಪಟ್ಟೇ ದೊಡ್ಡ್ dialogue ಅಲ್ವಾ ? ಇರ್ಲಿ...] ನೀವು ಇನ್ನು ಮುಂದೇನೂ ಇದೇ ರೀತಿ ನಮಗೆ ಪ್ರೋತ್ಸಾಹ ಕೊಡ್ತೀರಾ ಅಂತ ಪಾಪ Z ಸ್ವಲ್ಪ ಜಾಸ್ತಿ ನೇ ನಂಬಿಕೊಂಡಿದ್ದಾಳೆ. ನಾನೂ ನಂಬಿದಿನಿ. ಹೊಸ ವರ್ಷದ ಆಚರಣೆ ಮಾಡದ ನಾನು ಇನ್ನು ಮುಂದೆ ಪ್ರತಿ so called ಹೊಸ ವರ್ಷ ಇವಳಿಗೆ wish ಮಾಡುವ ಹಾಗಾಗಿದೆ ! ಈ ಬ್ಲಾಗು ಖಂಡಿತಾ ಹೊಸ ವರ್ಷದ ಸಂಕಲ್ಪದ ಆಗಿರ್ಲಿಲ್ಲ ...It just happened. ಅಷ್ಟೆ.

Thanks for all the support, guidance and everything.

[ನನ್ನ ಆಪ್ತ ಗೆಳೆಯರ ಬಳಗಕ್ಕೆ ಈಗ ನಾನು ಬೆಂಗಳೂರಿನಲ್ಲಿಲ್ಲ ಅನ್ನುವುದು ಗೊತ್ತು. ಈಗ ನಾನು ಹತ್ತು ದಿನದ ದಕ್ಷಿಣ ಭಾರತ ಪ್ರವಾಸದಲ್ಲಿದ್ದೇನೆ. ಆದರೂ ಈ ಪೋಸ್ಟ್ ಹೇಗೆ ಹಾಕಿದೆ ಅಂತ ತಲೆ ಕೆಡಿಸಿಕೊಳ್ಳಬೇಡಿ. This is called scheduled posting. ಬ್ಲಾಗರ್ ನಲ್ಲಿ ಪೋಸ್ಟ್ ರಚಿಸಿ, ಡೇಟ್ ಸೆಟ್ ಮಾಡಿ ಆ ದಿನ ಪೊಸ್ಟ್ ಪ್ರಕಟವಾಗುವಂತೆ ಮಾಡಬಹುದು. ನಾನು ಮಾಡಿರುವುದು ಅದನ್ನೇ. :-)

ನಾನು ಬರುವುದು ಇನ್ನು ಎರಡು ಮೂರು ದಿನ ಆಗತ್ತೆ. ಆಮೇಲೆ ದೊಓಓಓಓಓಓಓಡ್ಡ ಪ್ರವಾಸ ಕಥನ ನಿಮ್ ಮುಂದೆ ಬರತ್ತೆ. ಅಲ್ಲಿ ವರೆಗೂ ನಿಮಗೆ ಬೇಜಾರ್ ಆಗತ್ತೆ ಅನ್ನೋದಾದ್ರೆ ನನ್ನ ಹಳೆಯ ಪೋಸ್ಟುಗಳ ಕಡೆ ಸ್ವಲ್ಪ ದೃಷ್ಟಿ ಬೀರಿ :) ಕಮೆಂಟ್ ಮಾಡೋದನ್ನ ಮರಿಬೇಡಿ. :-) :-)


Will see you all very soon. Before I forget, I wish you all a very happy, prosperous and peaceful new year.]

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...