Showing posts with label ಕವಿತೆಗಳು. Show all posts
Showing posts with label ಕವಿತೆಗಳು. Show all posts

Thursday, March 20, 2008

A wrath called "orchestra "

ನಾನು : NOOOOOOOOOOOOOOOO !!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!
Z : ಶಾಅಆಆಆಆಅಆಅಆಆಂ೦೦೦೦೦೦೦೦೦೦ತಿ !!!!!!!!!!!!!!!!!!!!!!!!!!!!!!!!!!!!!!!!
ನಾನು : ಇಲ್ಲ, ಆಗೊಲ್ಲ, ಆಗೊದಿಲ್ಲ, ಆಗೊದೇ ಇಲ್ಲ !!!!!!
Z : ಏನಾಯ್ತು ಅಂತ ಹೇಳು ದಯವಿಟ್ಟು, ನಿನ್ನ ಕೋಪ ತಾಪ ಪ್ರಲಾಪಗಳನ್ನ ಆಮೇಲೆ ಚಿತ್ತೈಸ್ತಿನಿ !
ನಾನು : orchestra zindagi, orchestra !!! That is the cause of my sorrow !!!
Z : hmm....... ಏನು ? ಅಣ್ಣಮನ ಉತ್ಸವ ನ ?
ನಾನು : ಹು ! ಪಾಪ ಅಣ್ಣಮ್ಮ herself was quite troubled, disturbed and irritated. First of all excited state ನಲ್ಲಿರೋ ದೇವತೆ ಅವಳು. She looked agitated and ready to strike ! ಅವಳು ಕಾಪಾಡುವ ದೇವತೆಯಾಗಿ ಯಾವ dimension ನಲ್ಲೂ ನನಗೆ ಕಾಣಿಸಲಿಲ್ಲ !! infact, she needed to get ಕಾಪಾಡುfied - Thanks to the orchestra !!! ಅವಳ ಜೊತೆ ಮಾತಾಡ್ಬೇಕು ನಾನು urgent ಆಗಿ. ನಾವು passive audience -ಏ ಈ ರೀತಿ agitated ಆಗಿರುವಾಗ ಅವಳಿಗಾಗಿ "ಭಕ್ತಿ ಪೂರ್ವಕ" orchestra ಮಾಡಿದಾಗ ಅವಳಿಗೆ ಆದ ಅನುಭವ ಏನು ಅಂತ ಕೇಳಿ, ಅವಳ energy level ನಲ್ಲಿ ಆಗಿರೋ ಬದಲಾವಣೆಯನ್ನ ನಾನು research ಮಾಡ್ಬೇಕು.
Z : ಸರಿ....ಮಾಡ್ತೀಯಂತೆ.... but why this ಕಿರುಚಾಟ ?
ನಾನು : I have lost my peace of mind !!! ನನ್ನ seminar preparation ಎಲ್ಲಾ ನೆಗೆದು ಬಿದ್ದು ನಲ್ಲಿಕಾಯಿ ಆಗಿ ಹೋಯ್ತು !! ಮೊದಲೇ stimulated Raman scattering ಅಂಥಾ tough topic ಬಗ್ಗೆ ಮಾತಾಡ್ಬೇಕು...ಇಲ್ಲಿ ನೋಡಿದ್ರೆ ನನ್ನ brain cell ಗಳನ್ನೇ stimulated scattering ಮಾಡುವ sketch ಹಾಕಿದ್ದಾರೆ hopeless fellows !!! ನನಗೆ ಎಂಥಾ ಕೋಪ ಬಂತು ಅಂದ್ರೆ....ಅಂಜಲಿ vegetable cutter ಮೇಲೆ ಆಣೆ zindagi, ಕ್ಯಾರಟ್ ಜಾಗದಲ್ಲಿ ಅವರನ್ನ ಇಟ್ಟು ...!!!
Z : ಶ್!!!!!!!!!!! ಅಣ್ಣಮ್ಮನ ಪೂಜೆ ಮಾಡ್ಬೇಕು does not imply ಅವಳನ್ನ ನಮ್ಮ ಮೇಲೆ ಆವಾಹನೆ ಮಾಡ್ಕೋಬೇಕು !!! even though all forms of energy is essentially the same throughout the universe, the form of energy to be considered for the moment need not include all of them ! ! ನಿನ್ನ favourite line ನ ನೀನು ಹೀಗೆ ಮರೆಯಬಾರದು you see ?
ನಾನು : Look at what it has done to me !!! I have started to forget my own statements !!! Zindagi.... ಏನ್ ಗೊತ್ತಾ.... ಕಷ್ಟ ಪಟ್ಟು ಭಕ್ತಿಯಿಂದ "ಗಜಮುಖನೇ ಗಣಪತಿಯೇ" ಹಾಡಿದರು. ತಕ್ಷಣವೇ " ನಿನ್ನಿಂದಲೇ... ನಿನ್ನಿಂದಲೇ..." ಅನ್ನೋದೆ ???
Z : ಹ ಹ ಹ ಹಹಹಹಹ !!!!!!!!!!!!!!!!!!!!
ನಾನು : ನನಗೆ ಒಂದು ಕ್ಷಣ ಜಯಂತ್ ಕಾಯ್ಕಿಣಿ ಅವರು ಆ ಕ್ಷಣ ನಮ್ಮ ಮನೆಯಲ್ಲಿ ಇದ್ದಿದ್ದರೆ ಹೇಗಿರಬಹುದು ಅಂತ ಅನ್ನಿಸಿತು ! ನಿಜವಾಗಲೂ ಅವರು ಹೇಗೆ ಪ್ರತಿಕ್ರಿಯಿಸುತ್ತಿದ್ದರೋ ಏನೋ ! ಶೃತಿಯನ್ನು ಒದ್ದು ಓಡಿಸಿ, ಲಯವನ್ನು ಲಯವಾಗಿಸಿದ ಗಾಯಕರ ಅಬ್ಬರದ ಅರಚಾಟಗಳ ನಡುವೆ ಒಂದು ಸುಂದರ ಕವಿತೆಯ ಕಗ್ಗೊಲೆಯಾಯಿತು ! ಇದೊಂದೇ ಅಲ್ಲ...ಎಲ್ಲಾ ಹಾಡುಗಳ ಪಾಡೂ ಇದೇ ಆಯಿತು. ನಾನು ಕಾಯ್ಕಿಣಿಗೆ ಕ್ಷಮೆ ಕೋರಿ ನಿನ್ನಿಂದಲೇ ಹಾಡನ್ನು ನನಗನಿಸಿದ ರೀತಿಯಲ್ಲಿ ಬರೆದಿದ್ದೇನೆ.... After facing the wrath of orchestra !

ನಿಮ್ಮಿಂದಲೇ, ನಿಮ್ಮಿಂದಲೇ ತಲೆ ನೋವು ಶುರುವಾಗಿದೆ
ನಿಮ್ಮಿಂದಲೇ ನಿಮ್ಮಿಂದಲೇ ಮನಸ್ಸಿಂದು ಒದ್ದಾಡಿದೆ !!
ನಮ್ಮ ಎದೆಯಲ್ಲಿ ಕಹಿಯಾದ ಕೋಲಾಹಲ
ಮನೆ ಎದುರಲ್ಲೆ loudspeaker ಇಟ್ಟಾಗಲೇ
ನಿಮ್ಮ ಬಾಯಿ ಹೊಲಿದು ಸುಮ್ಮನಾಗಿಸೋ ಹಂಬಲ
ನನ್ನ ಸೆಮಿನಾರು ಹಾಳಾಯ್ತು ನಿಮ್ಮಿಂದಲೇ !!!
ಇರುಳಲ್ಲಿ ಗರದಂತೆ ಕಾಡಿ ಈಗ ಹಗಲಲ್ಲೂ ಹಾಡುವುದು ಸರಿಯೇನು
ಬೇಕಂತಲೇ ಹಾಡಿ ಮತ್ತದೇ ಹಾಡು ನಮ್ಮನ್ನು ಹಿಂಸಿಸುವ ಪರಿಯೇನು ?
ಅಣ್ಣಮ್ಮನಾ ಈ ಉತ್ಸವ ನಿಮ್ಮಿಂದ ಕಳೆಗುಂದಿದೆ.....
ಹೋದಲ್ಲಿ ಬಂದಲ್ಲಿ ಎಲ್ಲ ನಿಮ್ಮ ಕೋತಿ ಕುಣಿತದ "ಗುಣ"ಗಾನ
ಭಗವಂತ ಗಂಟಲಲ್ಲಿ ಏನನ್ನ ಇಟ್ಟನೋ
ಅನ್ನೋದೆ ನಂಗೀಗ ಅನುಮಾನ
ಫೋನಿಂದಲೇ ಈ ಕ್ಷಣದಲೆ police ಗೆ ಕರೆ ಹೋಗಿದೆ.....
I am extremely sorry kaaykini ji !! ಕ್ಷಮೆ ಇರಲಿ. ನನಗೆ ಖಂಡಿತಾ ಈ orchestra ದ wrath ನ ತಡೆಯೋಕೆ ಆಗ್ತಿಲ್ಲ. ನನ್ನ favourite ಹಾಡಾದ ನಿನ್ನಿಂದಲೇ ನ ಅವರು ಕೊಲೆ ಮಾಡಿದ್ದು ಅಸಹನೀಯವಾಗಿ ನಾನು ಈ ರೀತಿ ನನ್ನ ನೋವನ್ನು ತೋಡಿಕೊಂಡಿದ್ದೇನೆ ! what say Z ?
Z : Absolutely. ಅವರಿಗೆ ಅರ್ಥ ಆಗತ್ತೆ ಬಿಡು . ಸೆಮಿನಾರ್ ಕಥೆ ಏನು ?
ನಾನು : ಸದ್ಯೋಜಾತನೇ ಕಾಪಾಡ್ಬೇಕು ನಮ್ಮನ್ನ.....
Z : ಛೆ ಕಣೆ !!! third saturday university holiday. ಅವತ್ತೇ seminar ಇಟ್ಟಿರೋದು ನಂಗೆ ಯಾಕೋ doubt ತರ್ಸ್ತಿದೆ. post pone ಆಗುವ chances ?
ನಾನು : quite possible. If it happens, my quantum mechanical analysis of sadyojata's handling of applications will be proved right ! ನೋಡೋಣ. ಈಗ ಶುಂಠಿ ಪಟ್ಟು ಹಾಕಿಕೊಳ್ಳಲು ಹೊರಟೆ... for the nth and final time !!! :( ನಾನು normal state ಗೆ ಬರುವವರೆಗೂ
line on hold !

Wednesday, February 20, 2008

chloroform ಕವಿತೆಯೋ coffee ಕವಿತೆಯೋ ?

ನಾನು : Hi !!!!!!!! sorry ya !! lab nalli ಒಂದು experiment ಬರದೇ ನನ್ನ ತಲೆ ಎಲ್ಲ ಕಂಗೆಟ್ಟು, ನಾನು ದಿಕ್ಕೆಟ್ಟುಹೋಗಿದ್ದೆ. After 4 houurs of toil ಇವತ್ತೂ ಬರ್ಲಿಲ್ಲ !! ತಲೆ ನೋಯುತ್ತಿತ್ತು... time pass ಗೆ ಅಂತ ಒಂದು ಕವನ ಬರ್ದೆ !!

Z : ಮತ್ತೊಂದು chloroform ಕವಿತೆ ನ ? ಆಗೊಲ್ಲ ನನ್ ಕೈಲಿ !! pleeeeeeeeeeease !!!

ನಾನು : ಹೌದಾ ? ಇದೇ ಮಾತಾ ? ಸರಿ, ನಿನ್ನ ಪ್ರಕಾರ ಇದು chloroform ಕವಿತೆ. ನನ್ನ ಪ್ರಕಾರ ಇದು coffee ಕವಿತೆ. ಓದುಗರೆ, ದಯವಿಟ್ಟು ನಮ್ಮಿಬ್ಬರಲ್ಲಿ ಯಾರು ಸರಿ ಅಂತ ನೀವೆ ನಿರ್ಧರಿಸಿ !!

Z : election na ? ಮತ ಬಾಂಧವರೇ....ನನ್ನನ್ನು ಗೆಲ್ಲಿಸಿ chloroform ಇಂದ ಬಚಾವಾಗಿ !! ಇವಳು ಶುರು ಹಚ್ಚಿಕೊಳ್ಳುವ ಮುನ್ನ ನಾನು ತಪ್ಪಿಸಿಕೊಳ್ಳುತ್ತೇನೆ. head ruled u.... ಇವತ್ತು ನಿನಗೆ ತಿಳಿಸಿಯೇ going u !!

ನಾನು : ಹೋಗೇ !! ಎಲ್ಲಿಗೆ ಹೋಗ್ತಿಯ ? ಕೋಪ ಬಂದು, frustrate aagi, time pass ge lollypop ತಿಂದುಕೊಂಡು ಇರ್ತಿಯ ಮೂಲೆ ಲಿ !!! ಬಿದ್ದಿರು ಅಲ್ಲೇ!! election results ಬರ್ಲಿ !! ಆಗ ಗೊತಾಗತ್ತೆ !!

ಹ...ಈಗ ನನ್ನ ಕವನ ನ ಶುರು ಮಾಡ್ತಿನಿ.

ನೀ ಕಾಡುತ್ತಿಹೆ ಏಕೆ ?

ತಂಗಾಳಿ ಬೀಸಿದಾಗ ಮೈ ಹಗುರಾಗುತ್ತಿತ್ತು,
ಇಂದು ಬೀಸಿದಾಗ ಮೈ ಭಾರವಾಯಿತೇಕೆ ?

ಹುಣ್ಣಿಮೆಯ ಚಂದ್ರನಲ್ಲಿ ಮೊಲ ಮಾತ್ರ ಕಾಣುತ್ತಿತ್ತು
ಶಶಾಂಕನಲ್ಲಿ ನಿನ್ನ ಮೊಗವು ಇಂದು ಕಂಡಿತೇಕೆ ?

ತುಂತುರು ಮಳೆ ಸುರಿದೆ ಧರೆಯೆಲ್ಲಾ ತಂಪಾಗೆ
ನನ್ನ ತನುವು ಮಾತ್ರ ಇಂದು ಬಿಸಿಯಾಯಿತೇಕೆ ?

ನಿನ್ನ ಕುಡಿನೋಟ ಮೃಷ್ಟಾನ್ನ ನಿನ್ನ ಮಾತೇ ಜೋಗುಳ
ಹಸಿವು ನಿದಿರೆ ನಿಯತಿ ಮೀರಿ ನಡೆಯುತ್ತಿದೆ ಏಕೆ ?

ಬಾಳಿನಲ್ಲಿ ಇಂದೆಲ್ಲಾ ಸುಖಗಳು ತುಂಬಿದ್ದರೂ
ಅಪೂರ್ಣತೆಯು ಇನ್ನೂ ಇಣುಕುತ್ತಿದೆ ಏಕೆ ?

ತೊರೆದೆಲ್ಲಾ ಸಿರಿಯನ್ನು ನಾನಿನ್ನ ಹುಡುಕಿದರೂ
ಕಾಣಿಸದೇ ನೀ ಕಾಡುತ್ತಿಹೆ ಏಕೆ ?


vote maaDi !!

A : chloroform

B : coffee.

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...