Thursday, March 26, 2009

ಸಂವತ್ಸರದ ಹೆಸರೇ ವಿರೋಧಿ ಆಗಿರೋದ್ರಿಂದ...

Z :ಯಾರೋ ಹೇಳಿದ್ರು ಎರಡು ತಿಂಗಳು ಮುಖಾ ತೋರಿಸಲ್ಲಾ ಅಂತೆಲ್ಲಾ...

ನಾನು :ಯಾರು ಹೇಳಿದ್ರು ?

Z :ಯಾರೋ ತಲೆ ಇರೋರು.

ನಾನು :ಪ್ಲೀಸ್...ಆಡ್ಕೋಬೇಡಾ..

Z :ಇನ್ನೇನ್ ಮತ್ತೆ ? ಎಲೆಕ್ಷನ್ ಟೈಮು ಅಂತ ಎಷ್ಟ್ ಚೆನ್ನಾಗಿ ತೋರ್ಸ್ದೆ ನೋಡು...ಹೇಳೋದ್ ಒಂದು, ಮಾಡೋದ್ ಒಂದು.

ನಾನು :ಹಂಗಲ್ಲಾ...ನಾನು ಬರಿಬಾರ್ದು ಅಂತ ನೇ ಇದ್ದೆ.

Z :ಮತ್ತೆ ? ಹೆಂಗೆ ತೋಚ್ತು ಬ್ಲಾಗ್ ಕುಟ್ಟಕ್ಕೆ ?

ನಾನು :ಹೊಸ ಸಂವತ್ಸರದ ಹೆಸರು ವಿರೋಧಿ ಅಂತ.

Z :I see. ಅದಕ್ಕೆ ?

ನಾನು :ಹೊಸ ವರ್ಷನ ಏನನ್ನಾದ್ರೂ ವಿರೋಧಿಸುತ್ತಲೇ ಆರಂಭಿಸಿದರೆ ಅದೊಂಥರಾ different ಆಗಿರತ್ತೆ ಅಂತ ಅನ್ನಿಸಿತು. ಆದ್ದರಿಂದ ನನ್ನ ಮಾತನ್ನೇ ನಾನು ಯಾಕೆ ವಿರೋಧಿಸಬಾರದು ಅನ್ನೋ ಐಡಿಯಾ ತಲೆಯಲ್ಲಿ ಬಲ್ಬಿನ ಥರಾ ಫ್ಲಾಷ್ ಆಯ್ತು ಆದ್ದರಿಂದ, ಅದನ್ನು ಪಾಲಿಸತೊಡಗಿದ್ದೇನೆ. ಇದೇ ನನ್ನ ಹೊಸ ವರ್ಷದ ಸಂಕಲ್ಪ.

Z :ಈ ಐಡಿಯಾ ನ ನಾನು ವಿರೋಧಿಸುತ್ತೇನೆ.

ನಾನು :ಶಭಾಷ್ ! ಇದು ...ಇದು ವಿರೋಧ ಅಂದ್ರೆ.

Z :ರಾಮಾ ! ಏನ್ ಹೇಳೋದು ಈ ಹುಡುಗಿ ಗೆ ?

ನಾನು :ಏನೂ ಹೇಳ್ಬೇಡ. ನೀನು ಏನನ್ನು ಹೇಳಿದರೂ ನಾನು ವಿರೋಧಿಸುತ್ತೇನೆ.

Z : ಸಿಕ್ಕ್ ಸಿಕ್ಕಿದ್ದನ್ನೆಲ್ಲಾ ವಿರೋಧಿಸಬೇಡ್ವೇ !!!!

ನಾನು :ಇಲ್ಲಾ....ವಿರೋಧಿಸಬಲ್ ವಿಷಯಗಳನ್ನ ವಿರೋಧಿಸಬೇಕು ಅಂತ decide ಮಾಡಿದ್ದೇನೆ.

Z : ಯಾವ್ಯಾವ್ದು ವಿರೋಧಿಸಬಲ್ ವಿಷಯಗಳು ?

ನಾನು : ಎರ್ರಾ ಬಿರ್ರಿ price rise, ಆಟೋನವರ ಆಟಾಟೋಪ...ಇತ್ಯಾದಿ ಇತ್ಯಾದಿ.

Z : ಹ್ಮ್ಮ್....

ನಾನು : ನೀನು ಎಲ್ಲಾದಕ್ಕೂ ಹ್ಮ್ಮ್...ಅಂದ್ರೆ ನಾನು ಅದನ್ನೂ ವಿರೋಧಿಸುತ್ತೀನಿ !

Z :ಎಲ್ಲಾದಕ್ಕೂ ಇಲ್ಲ ಅಂದ್ರೆ ಸುಮ್ಮನೆ ಇರ್ತ್ಯಾ ?

ನಾನು :Definitely not. ಅದನ್ನೂ ವಿರೋಧಿಸುತ್ತೇನೆ.

Z :ಮತ್ತೆ ಏನ್ ಮಾಡ್ಬೇಕ್ ನಾನು ? ಅದನ್ನ ಹೇಳೋದಕ್ಕೂ ವಿರೋಧ ಇದೆ ಅನ್ನಬೇಡ...

ನಾನು :ಇಲ್ಲ ಅನ್ನಲ್ಲ. ನಾನು ತುಂಬಾ ಯೋಚ್ನೆ ಮಾಡಿ ಒಂದು ನಿರ್ಧಾರಕ್ಕೆ ಬಂದಿದಿನಿ.

Z : ಬಾ ಬಾ...ಬಲಗಾಲಿಟ್ಟು ಬಾ...

ನಾನು :ಬಂದೆ. ನಿರ್ಧಾರ ಏನಪ್ಪಾ ಅಂದ್ರೆ, ಹದಿನೈದು ದಿನಕ್ಕೊಮ್ಮೆ ಈ ಬ್ಲಾಗನ್ನು ಅಪ್ಡೇಟ್ ಮಾಡ್ಬೇಕು ಅಂತ.

Z :ಇದನ್ನ ನಾನು ವಿರೋಧಿಸುತ್ತೇನೆ. ವಾರಕ್ಕೆ ಒಂದು ಅಪ್ಡೇಟ್ ಬೇಕು.

ನಾನು :ನೋಡೋಣ.

Z :ನೀನು ಎಲ್ಲಾದಕ್ಕೂ ನೋಡೋಣ ಅನ್ನೋದನ್ನ ನಾನು ವಿರೋಧಿಸಲಾ ?

ನಾನು : ಏನನ್ನ ಬೇಕಾದರೂ ವಿರೋಧಿಸಿಕೊಂಡು ಮಜಾ ಮಾಡು.
Happy ವಿರೋಧಿ...I mean ...Happy ಯುಗಾದಿ !

Tuesday, March 24, 2009

ಇಷ್ಟ್ ದಿನ ಏನಾಗಿತ್ತೂ ಅಂದ್ರೆ....

Z : ನೀನು ಈ ಕಡೆ ಮುಖ ನೇ ಹಾಕೋದಿಲ್ಲ ಅಂತ ನಾನು ದೃಢವಾಗಿ ನಂಬಿದ್ದೆ.

ನಾನು : ಭೇಷ್ ! ಅದೇ ನಂಬಿಕೆ ನ ಮುಂದಕ್ಕೂ continue ಮಾಡು.

Z :ಯಾಕಮ್ಮಾ ?

ನಾನು :ಅದನ್ನ ಹೇಳೋಕೆ ಇಲ್ಲಿ ಬಂದಿದ್ದು.

Z :ಹೇಳೋಣವಾಗಲಿ.

ನಾನು : ನಾನು ಕಡೆಯದಾಗಿ ಬ್ಲಾಗನ್ನು ಅಪ್ ಡೇಟ್ ಮಾಡಿದ್ದು ಫೆಬ್ರುವರಿಯಲ್ಲಿ. ಆಗ ನಾನು ಮಂಗಳೂರಿನಲ್ಲಿದ್ದೆ.

Z :ನನಗೆ ಹೇಳಲೇ ಇಲ್ಲ ?

ನಾನು :ಈಗ ಹೇಳ್ತಿದಿನಲ್ಲ !

Z :ಇದರ ಪ್ರವಾಸ ಕಥನ?

ನಾನು : ಕೇಳ್ಸ್ಕೋ:
day 1 : Movie in adlabs cinemas and ideals icecream.
day 2: Bijai museum and mangaladevi temple
day 3: Movie Slum dog millionaire in adlabs cinemas, Aloyseus museum, Atri book house and cherry square
Day 4: Very confidential work at Manipal, pabbas
Day 5: Bangalore.

ಇಷ್ಟೇ ಆಗಿದ್ದು.

Z :ನಿನ್ನ ಬರಹದ ಅತ್ಯಂತ ಚಿಕ್ಕ ಪ್ರವಾಸ ಕಥನ ಇದು.

ನಾನು :ಹೌದು.

Z :ಅಲ್ಲಾ...ಹಿಂಗ್ ಮಾಡಿದ್ರೆ ಹೇಗೆ ನೀನು ?

ನಾನು :ನನಗೆ ಎಲಾಬೊರೇಟ್ ಮಾಡಕ್ಕೆ ಸದ್ಯೋಜಾತನಾಣೆ ಟೈಂ ಇಲ್ಲ.

Z :ಏನಪ್ಪಾ ಅಂಥದ್ದಾಗಿದ್ದು ?

ನಾನು : ಅಲ್ಲಿಂದ ಬಂದ ತಕ್ಷಣ ಮುಂದಿನ ಭಾನುವಾರ ನನಗೆ BARC entrance exam ಇತ್ತು. ಓದುತ್ತಿದ್ದೆ. ಅದಾದ ಮೇಲೆ ಶಿವರಾತ್ರಿ.

Z :ಹೂಂ. ಆಮೇಲೆ ?

ನಾನು :ಅಮ್ಮನ ಕೆಲವು ಸಂಗೀತ ಕಾರ್ಯಕ್ರಮಗಳು ಇದ್ದವು. ಅದಕ್ಕೆ ಫೋಟೋಗ್ರಫಿ.

Z :ಆಮೇಲೆ ?

ನಾನು :ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ನಾನು ಒಂದು ದಿನದ ಶಿಬಿರವನ್ನು ಅಟೆಂಡ್ ಮಾಡಲು ಬಿ.ಎಮ್.ಎಸ್ ಮಹಿಳಾ ಕಾಲೇಜಿಗೆ ಹೋದೆ. ಅಲ್ಲಿ ಗೊತ್ತಾಯ್ತು ಬೆಂಗಳೂರು ಯೂನಿವರ್ಸಿಟಿ ph.D Entrance exam ಇನ್ನು ನಡೆದೇ ಇಲ್ಲ, ಈ ವಾರವೋ ಮುಂದಿನ ವಾರವೋ ಇರತ್ತೆ ಅಂತ. electrical contractor ಮಗಳಾದ ನನೇ 440 volts ಶಾಕು !

Z :naturally. ಆಮೇಲೆ ?

ನಾನು :ಯೂನಿವರ್ಸಿಟಿಯಿಂದ ಮಾಹಿತಿ ಸಂಗ್ರಹ. ಆಮೇಲೆ ಅಲ್ಲಿಗೆ ಒಂದು ಸರ್ತಿ ಪಾದಾರ್ಪಣೆ. ಸಿಲಬಸ್ಸು, ಪೋರ್ಷನ್ನು ಎಲ್ಲ ನೋಡಿ ಮನೆಗೆ ಬಂದರೆ ಮತ್ತೆರಡು ಶಾಕು.

Z : ಏನ್ ಶಾಕು ?

ಎಮ್ ಈ ಎಸ್ ಕಾಲೇಜಿನಿಂದ lecturer post ಗೆ. interview letter ! ಮತ್ತು ಪ್ರತಿಷ್ಟಿತ ಸ್ಥಳವೊಂದರಲ್ಲಿ research assistant ಆಗಿ ಕೆಲಸಕ್ಕೆ ಆಹ್ವಾನ !

ನಾನು : ph.D exam on march 15th, interview on march 11th. research assistantship from the next day !

Z : ಚಿತ್ರಾನ್ನ ಅನ್ನು.

ನಾನು : exactly. ಹೇಗೋ ಹೋಗಿ interview ಕೊಟ್ಟು ಬಂದೆ. ph.D entrance also went well. ಹೊಸ ಕೆಲಸ ಸೂಪರ್ರು. ಆಯ್ತಪ್ಪಾ ಅಂದುಕೊಳ್ಳುವ ಹೊತ್ತಿಗೆ...

Z : ಗೆ ?

ನಾನು : ನಾನು December ನಲ್ಲಿ ಬರ್ದಿದ್ನಲ್ಲಾ ಎಕ್ಸಾಮ್..ಅದರ ರಿಸಲ್ಟು !

Z : ಏನ್ ರಿಸಲ್ಟು ?

ನಾನು : I havent cleared !

Z : Oh my god !!

ನಾನು : [ಇಪ್ಪತ್ತು ಬಕೆಟ್ ಕಣ್ಣೀರು] ಈಗ ಮತ್ತೆ ಜೂನ್ ನಲ್ಲಿ ಎಕ್ಸಾಮ್ ತಗೋಬೇಕು.

Z : ಓಹ್ ಅದಕ್ಕೆ ಮೇಡಮ್ ಈ ಕಡೆ ಮುಖ ಹಾಕಿಲ್ಲ .

ನಾನು : ಈಗ ಗೊತ್ತಾಯ್ತಾ ?

Z : ಹೂಂ.

ನಾನು : ಇನ್ನೊಂದಿಷ್ಟ್ ಇದೆ.

Z : ಮುಂದುವರ್ಸು.

ನಾನು : ಎಕ್ಸಾಂ ಮುಗಿಯೋ ವರ್ಗು i.e; For the next two months, ಈಕಡೆ ತಲೆ ಹಾಕಲ್ಲ.

Z : ಹಂಗನ್ನಬೇಡ.

ನಾನು : ಲೇ ಆಗಲ್ಲಮ್ಮಾ...RA ಕೆಲ್ಸ, ಪ್ರಯಾಣ, ಓದು..ಇವೆಲ್ಲಾ ಆಗ್ಬೇಕಲ್ಲ...

Z :ತಿಂಗಳಿಗೊಂದ್ ಸರ್ತಿ ಮುಖ ತೋರ್ಸು !

ನಾನು : I cant promise. ನೋಡೋಣ.

ಆಮೇಲೆ, ನಾನು fever 104 ಕಡೆ ಇಂದ ಎರಡು ಸಾವಿರ ರೂಪಾಯಿ gift voucher ಗೆದ್ದಿದಿನಿ.ಮತ್ತೆ, MES College ನಲ್ಲಿ shortlist ಆಗಿದಿನಿ. ಇನ್ನೊಂದು ರೌಂಡ್ interview ಕೊಡ್ಬೇಕಾಗಬಹುದು ಅನ್ಸತ್ತೆ...ಗೊತ್ತಿಲ್ಲ.

Z : treat !

ನಾನು : ಖಂಡಿತಾ ಕೊಡ್ಸಲ್ಲ. ph.D exam clear ಆಗಿದ್ದಿದ್ರೆ ಕೊಡ್ಸೋದರ ಬಗ್ಗೆ ಯೋಚ್ನೆ ಮಾಡಿರ್ತಿದ್ದೆ.

Z : ಶತ ಜುಗ್ಗಿ.

ನಾನು : ಹೌದು.

Z :ಹರ ಹರ ......

ನಾನು : ಶ್ರೀಚೆನ್ನ ಸೋಮೇಶ್ವರ !

Z : ನಿನ್ನನ್ನ fill in the blanks ಮಾಡು ಅಂತ ಕೇಳಿದ್ನಾ ?

ನಾನು : ಎನೋ...exam time..ಹಂಗೆ ಮಾಡೋ ಹಂಗಾಗತ್ತೆ.

Z : ಇನ್ನೇನಾದ್ರು ವಿಷಯ ?

ನಾನು : ಇಲ್ಲ...will call back when I am really "free"

Till then, Line on hold.

Wednesday, February 11, 2009

ಗುಲಾಬಿ ಟಾಕೀಸ್...ಕಡೆಗೂ ನೋಡಿಯೇಬಿಟ್ಟೆ !

Z : Standing ovation ಕೊಡಿ ಪಾ ಎಲ್ಲಾರು ಈ ಸಾಧನೆ ಗೆ !

ನಾನು :yes ! ಇದು ಸಾಧನೆ ನೆ.

Z : In which dimension and from what angle is this a ಸಾಧನೆ ?

ನಾನು :In 3 dimensions and from all angles (from 0-360 degrees).

Z : ಆಹ...ನೀನೋ....ನಿನ್ನ ತಲೆಯೋ....

ನಾನು :ನೋಡು...ಬೈಬೇಡ. ಇದು ಯಾಕೆ ಇಷ್ಟು ದೊಡ್ಡ ಸಾಧನೆ ಅಂತ ನಾನು ನಿನಗೆ ವಿವರಿಸಿ ಹೇಳಬೇಕಿದೆ.

Z : ಪೇಳ್.

ನಾನು :ಗುಲಾಬಿ ಟಾಕೀಸ್ PVR ನಲ್ಲಿ ಇದ್ದಾಗ ನನಗೆ entrance exam ನ tension ಇತ್ತು. ಅದಕ್ಕೆ ಹೋಗಲಾಗಲಿಲ್ಲ. ನಾನು ಪರೀಕ್ಷೆ ಮುಗಿಸುವ ಹೊತ್ತಿಗೆ ಏನಾಯ್ತಪ್ಪಾ ಅಂದ್ರೆ...

Z : ಅಂದ್ರೆ....

ನಾನು :ಅದು PVR ಇಂದ ಹೊರಬಂತು.

Z : :(

ನಾನು : ನಾನು ಫಿಲಂ ಫೆಸ್ಟಿವಲ್ ಗೆ ಕಾಯುತ್ತಿದ್ದೆ. ಅದು ಫಿಲಂ ಫೆಸ್ಟಿವಲ್ ನಲ್ಲೂ ಬರತ್ತೆ ಅಂತ ಗೊತ್ತಾಯ್ತು.ನಾನು, ರೋಹಿಣಿ ಮತ್ತು ಚಂದ್ರಕಾಂತ ಮೇಡಮ್ ಹೊರಡಲು ತಯಾರಾದೆವು.

Z : :)

ನಾನು :just 3 days before, ಸುಶ್ರುತ ಅವರ ಜೊತೆ ಚಾಟ್ ಮಾಡುವಾಗ ಫಿಲಂ ಫೆಸ್ಟಿವಲ್ ಗೆ ಪಾಸ್ ಬೇಕು ಅಂತ ಗೊತ್ತಯ್ತು.ನಮ್ಮ ಹತ್ತಿರ ಪಾಸ್ ಇರಲಿಲ್ಲ ಮತ್ತು ಅದನ್ನು ಪಡೆಯುವ ಬಗೆಯೂ ನಮಗೆ ಗೊತ್ತಿರಲಿಲ್ಲ ಆದ್ದರಿಂದ ಆ programme drop ಆಯ್ತು.

Z : :(

ನಾನು :ನನ್ನ ಗೋಳಾಟ ಮುಗಿಲು ಮುಟ್ಟಿತು. ಎಲ್ಲಾರು ಚಿತ್ರ ನೋಡುವವರೇ, page ಗಳ ಗಟ್ಟಲೆ review ಬರೆಯೋರೆ. ನಾನು review ಬರೆಯೋ ಅಷ್ಟು ದೊಡ್ಡವಳಲ್ಲ ಆದರೂ..."ನೋಡಿದೆ" ಅಂತ ನಾದ್ರೂ ಒಂದು ರೆಕಾರ್ಡ್ ಬೇಡ್ವಾ ?

Z : ಬೇಕಾ ?

ನಾನು :ಬೇಕು.

Z : ಸರಿ. ಅದಕ್ಕೆ ?

ನಾನು :ಏನಾದ್ರೂ ಮಾಡಿ ಚಿತ್ರ ನೋಡಲೇಬೇಕಲ್ಲಾ ಅಂತ ಹಪಹಪಿಸುತ್ತಿದ್ದೆ ನಾನು...ಆಗ ಗೆಳೆಯರೊಬ್ಬರು ಈಮೈಲ್ ಮಾಡಿದರು.feb 8th ರಂದು ಕೆ. ವಿ.ಸುಬ್ಬಣ್ಣ ಆಪ್ತ ರಂಗ ಮಂದಿರದಲ್ಲಿ ಗುಲಾಬಿ ಟಾಕೀಸಿನ ಎರಡು ಶೋಗಳಿವೆ ಅಂತ ಅವಧಿಯಲ್ಲಿ ಹಾಕಿದ ಜಾಹೀರಾತಿನ ಲಿಂಕನ್ನು ಲಿಂಕಿಸಿದ್ದರು.

Z : ಅರ್ರೆ ವಾಹ್ !!!

ನಾನು :ನಾನು ಎಲ್ಲರಿಗೂ ಫೋನ್ ಮಾಡುವ ಕರ್ತವ್ಯವನ್ನು ಬಹಳ ಕಾಳಜಿ ಇಟ್ಟು ಮಾಡಿದೆ. ರೋಹಿಣಿ ಆಗಲ್ಲ ಅಂದಳು. ಚಂದ್ರಕಾಂತ ಮೇಡಂ ಮತ್ತು ನನ್ನ ನ್ಯಾಷನಲ್ ಕಾಲೇಜಿನ ಪ್ರಾಧ್ಯಾಪಕರೂ ಹಾಗೂ ಚಂದರಕಾಂತ ಮೇಡಮ್ ಅವರ ಪತಿಯೂ ಆಗಿರುವ ಕೆ.ಎಮ್.ಕೆ ಸರ್ ಬರಲು ಒಪ್ಪಿದರು.ಮಧ್ಯಾಹ್ನ ಮೂರುವರೆಯ ಶೋ ಗೆ ಟಿಕೆಟ್ಟು ಸಿಗಲಿಲ್ಲ. ಐದುವರೆಗೆ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಮತ್ತು ಎಸ್ ರಾಮಚಂದ್ರ ಅವರೊಂದಿಗೆ ಸಂವಾದ ಇತ್ತು. ಅದಾದ ಮೇಲೆ ಆರು ಮುಕ್ಕಾಲಿಗೆ ಇನ್ನೊಂದು ಶೋ ಇತ್ತು. ನಾವು ಅದಕ್ಕೆ ಹೊರಡಲು ನಿರ್ಧರಿಸಿಇದೆವು. ನಾನಂತು ಕಾಸರವಳ್ಳಿಯವರನ್ನು ಮುಖತಃ ನೋಡುವೆನೆಂಬ ಖುಷಿಯಲ್ಲಿ ಆಗಲೇ ಮೇಲ್ಗಡೆ ಹೋಟೋಗಿದ್ದೆ.

Z :ಹೆಹೆಹೆಹ್ಹೆ...


ನಾನು :ಹೂಂ !!! I was sooooooo happy ! ಸಂವಾದ ಚೆನ್ನಾಗಿ ನಡೆಯಿತು. ನಾನೇನೂ ಪ್ರಶ್ನೆ ಕೇಳಲು ಆಗಲಿಲ್ಲ...ಯಾಕಂದ್ರೆ ನಾನಿನ್ನೂ ಸಿನೆಮಾ ನೋಡಿರಲಿಲ್ಲ. ಅವರು ಹೇಳಿದ ಅಂಶಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ನೋಟ್ ಕೂಡಾ ಮಾಡಿಕೊಂಡೆ. ರಾಮಚಂದ್ರ ಅವರ ಫೋಟೋಗ್ರಫಿ ಬಗ್ಗೆ ನನಗೆ ಕುತೂಹಲ ಇನ್ನೂ ಸ್ವಲ್ಪ ಜಾಸ್ತಿ ಆಯ್ತು. ಆರುಮುಕ್ಕಾಲಿಗೆ ಕರೆಕ್ಟಾಗಿ ಚಿತ್ರ ಪ್ರಾರಂಭವಾಯ್ತು.

Z :ನಿನಗೆ ಇಷ್ಟವಾದ ಅಂಶ ಏನು ?

ನಾನು :ಮೌನ, ಬೆಳಕು, ಕತ್ತಲು, ವಸ್ತುಗಳ ಮತ್ತು propsಗಳ ಉಪಯೋಗ ಮತ್ತು ಬೆಕ್ಕು.

Z : ಈ ಬೆಕ್ಕು ಎಲ್ಲಿಂದ ಬಂತು ?

ನಾನು :ಅದು ಚಿತ್ರದಲ್ಲಿ ಇದೆ. ಒಂದೊಂದು ಸ್ಟೇಜ್ ನಲ್ಲೂ ಬೆಕ್ಕು ತನ್ನದೇ ಆದ ರೀತಿಯಲ್ಲಿ ತನ್ನ ಆಗಮನದಿಂದ ಗಮನ ಸೆಳೆಯುತ್ತದೆ....

Z : ....depicting what ?

ನಾನು :impact of globalization.

Z : ಹೇಗೆ ಹೇಳ್ತಿಯಾ ನೀನು ?

ನಾನು :ನೋಡು...ನನಗನ್ನಿಸಿದ್ದು ಇಷ್ಟು. ಪ್ರಾರಂಭದಲ್ಲಿ ಗುಲಾಬಿ ತಾನು ಮಾಡಿದ್ದ ಅಡುಗೆಯನ್ನು ಅವಳ ಸವತಿ ತಿರಸ್ಕರಿಸಿದಾಗ, ಅದನ್ನು ಹೊರಗೆ ಬಿಸಾಕುತ್ತಾಳೆ. ಆಗ ಬೆಕ್ಕು ಬಂದು ತಿನ್ನುತ್ತದೆ. ಇದರ ಅರ್ಥ, ಉದ್ಯಮಗಳು ಮುಕ್ತವಾಗಲು ಪ್ರಾರಂಭವಾಗುತ್ತದೆ.

Z : ಆಮೇಲೆ ?

ನಾನು :ಟೀವಿ ನೋಡುತ್ತಾ ಗುಲಾಬಿ ಆ ಬೆಕ್ಕಿಗೆ ಕೂಡ ಊಟವನ್ನು ನಿತ್ಯ ಹಾಕಲು ಪ್ರಾರಂಭಿಸುತ್ತಾಳೆ. ಇದರ ಅರ್ಥ, ನಾವು ಗ್ಲೋಬಲೈಸೇಷನ್ ನ ಸಾಕಲು ತೊಡಗಿದ್ದೇವೆ.

ನಾನು :ಕ್ಲೈಮಾಕ್ಸ್ ನಲ್ಲಿ ಆ ಬೆಕ್ಕು ರಾಜಾರೋಷವಾಗಿ ಟಿವಿ ಮೇಲೆ ಕೂರತ್ತೆ. ಅಂದರೆ, it starts to rule.ಅನ್ನ ಹಾಕಿದ ದಣಿಯೇ ಇಲ್ಲದ ಮನೆಯಲ್ಲಿ ಹಾಯಾಗಿ ಬದುಕತೊಡಗುತ್ತದೆ. globalization ಕೂಡಾ ಹಾಗೇ ಬೆಕ್ಕು ಥರಾ ನೇ ಮೆಲ್ಲಗೆ ಬಂದು...ನಿಧಾನಕ್ಕೆ ಬೆರೆತು, ಕಡೆಗೆ ನಮ್ಮನ್ನೇ ಆಳತೊಡಗಿತು. ಅಲ್ವಾ ?

Z : ಹೌದಾ ?

ನಾನು :ನನಗೆ ಹಾಗೇ ಅನ್ನಿಸತ್ತೆ.

Z : ಸರಿ. ಅನಿಸಲಿ.ಆಮೇಲೆ ಇನ್ನೇನು ಅನಿಸಿತು?

ನಾನು :ಪ್ರತಿಯೊಂದು ವಸ್ತುವೂ ಮಾತಾಡ್ತಿದೆ ಅನಿಸಿತು.

Z :ಅದು ನಿನ್ನ regular feeling ಅಲ್ವಾ ? lab apparatus ಜೊತೆ ಎಲ್ಲಾ ಮಾತಾಡ್ತಿದ್ದೆ ?

ನಾನು :ಹಂಗಲ್ಲ ಕಣೇ..ಅವು ತಮ್ಮದೇ ರೀತಿಯಲ್ಲಿ ಕಥೆಲ್ಲಿ ಮೌನ ಸಂಭಾಷಣೆ ನಡೆಸಿದೆ. ಸಾಂಬ್ರಾಣಿ, ತೆಂಗಿನ ಮರ, ಪೋಸ್ಟರ್ರು, ಲಾಟೀನು, ಡಿಷ್ ಅಂಟೆನಾ...ಎಲ್ಲಾ...

Z :ಹಾಂ....

ನಾನು :ನನಗಂತೂ ಈ ಮೂವೀ ನೋಡಬೇಕೆಂಬ ಆಸೆ ನೆರವೇರಿದ್ದಲ್ಲದೇ ಗಿರೀಶ್ ಕಾಸರವಳ್ಳಿಯವರ ಹಸ್ತಾಕ್ಷರ ದೊರೆತಿದ್ದೇ ನನ್ನ ಜೀವನದ most memorable moment ಅನ್ನಿಸಿತು.

Z : !!!!!!!!!!!!!!!!!!!!!!!!!!!!!!!!!!!

ನಾನು :ಏನಿದು ? ಗಾಬರಿ ನ, ಸಂತೋಷ ನ, ಅಥವಾ ಹೊಟ್ಟೆ ಉರಿ ನಾ ?

Z : ಎಲ್ಲದರ average ತಗೊ.

ನಾನು : :) :) :) ಏನೇ ಇರ್ಲಿ...It was a lovely Sunday evening. Really memorable one.

Z : :)..good !ಸಾಧನೆ ಮಾಡಿದ್ದಕ್ಕೆ congratulations.

Thursday, February 5, 2009

Journey to ಜಲೇಬಿನಾಡು-ಭಾಗ ೩

ನಾನು : ಕುಂಭಕೋಣಂ ನಲ್ಲಿ ಇಬ್ಬಿಬ್ಬರಿಗೆ ಒಂದು ರೂಮ್ ಅಂತ ನಿಗದಿಯಾಗಿತ್ತು. ನಾನು ಅಪರ್ಣ ಒಂದು ರೂಮ್, ಅಮ್ಮ ಅಣ್ಣ ಇನ್ನೊಂದು ರೂಮ್. ಇದ್ದ ಎರಡು ಪ್ಲಗ್ ಪಾಯಿಂಟುಗಳಲ್ಲಿ ಒಂದನ್ನು ಕ್ಯಾಮೆರಾದ ಬ್ಯಾಟರಿ ಚಾರ್ಜ್ ಮಾಡಲು, ಮತ್ತೊಂದನ್ನು mosquito repellent ಗೆ ಹಾಕಿದ್ದೆವಾದ್ದರಿಂದ, ನಮ್ಮ ಫೋನುಗಳ ಬ್ಯಾಟರಿ ಚಾರ್ಜ್ ಆಗಲಿಲ್ಲ. ನಾವು ಅಲಾರಂ ಕೂಡಾ ಇಡದೇ, ಅಮ್ಮ ಅಣ್ಣ ಬಂದು ಬಾಗಿಲು ಬಡಿದು ಎಬ್ಬಿಸುವವರೆಗೂ ಏಳೋದು ಬೇಡಾ ಅಂದ ಡಿಸೈಡ್ ಮಾಡಿ ಮಲಗಿದೆವು.

Z : ಆಹಾ ! ನೀವ್ ಮೊದಲು ಏಳೋದ್ ಬಿಟ್ಟು.....

ನಾನು : ಸೈಲೆನ್ಸ್ ! ಹಿಂದಿನ ದಿನ ಮೂರುವರಗೆ ಎದ್ದಿರ್ಲಿಲ್ವಾ ? ಆವತ್ತು ಐದ್ ಘಂಟೆಯ ವರೆಗೂ ಕಣ್ಣು ಬಿಡಲ್ಲ ಅಂತ ಪ್ರತಿಜ್ಞೆ ಮಾಡಿದ್ದೆ ನಾನಂತೂ !

Z :ಆಹಾ !

ನಾನು : ಹೂಂ ! ಮೊದ್ಲೇ ಚಿದಂಬರಂ ನಲ್ಲಿ disappoint ಆದೆ. ಅದು ತಿರುನಲ್ಲಾರ್ ನಲ್ಲೂ ಮುಂದುವರೆಯಿತು. ನಳ ತೀರ್ಥ, ಬ್ರಹ್ಮದಂಡ ತೀರ್ಥ ಇವೆಲ್ಲಾ ನೋಡ್ಬೇಕಿತ್ತು ನಾನು. ಯಾವ್ದೂ ನೋಡಕ್ಕಾಗ್ಲಿಲ್ಲ. ಆರಾಮದ ನಿದ್ದೆನಾದ್ರೂ ಬೇಡ್ವಾ ?

Z :ಬೇಕ್ ಬೇಕು.

ನಾನು : ಅದಕ್ಕೆ ಪ್ರತಿಜ್ಞೆ ಮಾಡಿದ್ದು. ಯಥಾ ಪ್ರಕಾರ ಅಮ್ಮ ನಾಲ್ಕುವರೆಗೆ ಎಬ್ಬಿಸಿದರು. ನಾನು ಐದು ಘಂಟೆಗೆ ಎದ್ದೆ. ತಿರುವಣ್ಣಾಮಲೈ ನಲ್ಲಿ ಬಿಸಿನೀರು syringe ಥರ ಬರ್ತಿದ್ರೆ, ಇಲ್ಲಿ ಕುಂಭಕೋಣಮ್ ನಲ್ಲಿ ತಣ್ಣೀರು waterfall ಥರ ಧೋ ಅಂತ ಸುರಿತಿತ್ತು ನಲ್ಲಿಲಿ.

Z :ತ್ಚು ತ್ಚು ಥ್ಚು ಥ್ಚು....


ನಾನು : ಲೊಚ್ಗುಟ್ಟಿ ಹೊಟ್ಟೆ ಉರ್ಸ್ಬೇಡಾ ಹೋಪ್ಲೆಸ್ಸ್ ಫೆಲ್ಲೋ... ಗಡಗಡ ನಡುಗುತ್ತಿದ್ದೆ ನಾನು ! ನಾವೆಲ್ಲಾ ರೆಡಿಯಾಗಿ ಲಗೇಜು ಪ್ಯಾಕ್ ಮಾಡೋ ಅಷ್ಟೊತ್ತಿಗೆ ಆರುವರೆ. ಆಮೇಲೆ ನಾವು ಮ್ಯಾನೇಜರ್ ಅಂಕಲ್ ಹೇಳಿದ ಛತ್ರಕ್ಕೆ ತಿಂಡಿ ತಿನ್ನಲು ಹೋದೆವು. ಅದರ ಎದುರುಗಡೆಯೇ ಇದ್ದಿದ್ದು ಮಹಾ ಮಾಘ ಕೊಳ.

Z : ಏನು ವಿಶೇಷ ಆ ಕೊಳದ್ದು ?

ನಾನು : ಆ ಕೊಳ ಕುಂಭಕೋಣಂ ನ ಅತಿ ಪುರಾತನ ಮತ್ತು ಪುರಾಣ ಪ್ರಸಿದ್ಧ ಕೊಳ. ಆ ಕೊಳಕ್ಕೆ ಭಾರತದ ಎಲ್ಲ ಪ್ರಸಿದ್ಧ ನದಿಗಳಿಂದ [ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು, ಕಾವೇರಿ, ಕೃಷ್ಣಾ] ನೀರು ಪ್ರತಿ ವರ್ಷ ಮಾಘಮಾಸದಲ್ಲಿ ಬಂದು ಸೇರತ್ತಂತೆ. ಎಲ್ಲಿಂದ ಬರತ್ತೆ ನೀರು ಅಂತ ಗೊತತಿಲ್ವಂತೆ. ಆದ್ರೂ, ನೀರು ಬರತ್ತೆ. ಆ ಕೊಳದಲ್ಲಿ ಎಲ್ಲಾ ದೇವತೆಗಳೂ ಮಿಂದು ಪುನೀತರಾಗಿದ್ದಾರಂತೆ ! ದೇವತೆಗಳೇನು , ರಾಮಾಯಣ ಮಹಾಕಾವ್ಯದ ಕಥಾನಾಯಕ Mr.Shrirama Chandra ಕೂಡಾ ಲಂಕೆಗೆ ಹೋಗುವ ಮುನ್ನ ಇಲ್ಲಿಗೆ ಬಂದು, ಕೊಳಕ್ಕೆ "ಧೊಪ್" ಅಂತ ಬಿದ್ದು, zuyk ಅಂತ ಎದ್ದು, ಪಕ್ಕದಲ್ಲೇ ಕಾಶಿ ಇಂದ ಸಾಕ್ಷಾತ್ ವಿಶ್ವನಾಥರು ಅವರು ಬಂದಿದ್ದರಾದ್ದರಿಂದ ಅಲ್ಲೇ ಅವರ ಪೂಜೆ ನೂ ಮಾಡಿ, ನಂತರ ರಾಮೇಶ್ವರದ ಕಡೆಗೆ ಪಾದ ಬೆಳೆಸಿದರಂತೆ.

Z :I see. ನೀನು ಹೋದೆಯಾ ಈ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ?

ನಾನು : ಎಸ್. ಅಲ್ಲೇ ಎಂಟು ನದಿಗಳ ಮೂರ್ತಿ ಇರುವ ಒಂದು ದೇವಸ್ಥಾನ ಇದೆ. Ms. ಕಾವೇರಿ ಅವರು center ನಲ್ಲಿ ನಿಂತಿದಾರೆ.unfortunately, we couldn’t get into ಮಹಾ ಮಾಘ ಕೊಳ.

Z :Its ok. ಆಮೇಲೆ ?

ನಾನು : ಆಮೇಲೆ ನಾವು Mr. ಸಾರಂಗಪಾಣಿ [Mr. S ಪಾಣಿ for short] ಅವರ ದೇವಸ್ಥಾನಕ್ಕೆ ಹೋದ್ವಿ.

Z :ಯಾರವರು ?

ನಾನು : ವಿಷ್ಣು ಕಣೆ ! ಶ್ರೀಮನ್ನಾರಾಯಣ. ಮಲಗಿದ್ದಾರೆ Mr. S ಪಾಣಿ. ಇವರ ಕಥೆ ಮಾತ್ರಾ....ultimate ಆಗಿದೆ.

Z :ಏನ್ ಕಥೆ ? ಹೇಳು ಬೇಗ !

ನಾನು : ಕೇಳಿಸ್ಕೋ. ನಿನಗೆ ಭೃಗು ಮಹರ್ಷಿಗಳ ಕಥೆ ಗೊತ್ತಲ್ಲಾ....ಅದೇ ಕಾಲಲ್ಲಿ ಒಂದು ಕಣ್ಣಿತ್ತು, ವಿಷ್ಣುವಿನ ವಕ್ಷಸ್ಥಳಕ್ಕೆ ಒದ್ದರು...ವಿಷ್ಣು ಕಾಲೊತ್ತುವ ನೆಪದಲ್ಲಿ ಕಣ್ಣು ಕಿತ್ತರು...ಲಕ್ಷ್ಮೀ ಕೋಪಿಸಿಕೊಂಡು ಹೊರಟೇಬಿಟ್ಟರು....ಅಮೇಲೆ ಪದ್ಮಾವತಿ ನ ಮದುವೆ ಆದ್ರಲ್ಲ...

Z :ಹಾಂ ಹಾಂ....ನೆನಪಿದೆ. ಅವರಿಗೂ Mr. S . ಪಾಣಿ ಗೂ ಏನ್ ಸಂಬಂಧ ?


ನಾನು : ಇದೆ ಇದೆ. ಭೃಗು ಮಹರ್ಷಿಗಳಿಗೆ ಲಕ್ಷ್ಮೀ ಕೋಪಿಸಿಕೊಂಡು ಹೋದಮೇಲೆ ಜ್ಞಾನೋದಯ ಆಯ್ತಂತೆ. ಅದಕ್ಕೆ ಅವರು ವಿಷ್ಣು ನ ಮೂರು ವರ ಕೇಳ್ಕೊತಾರೆ.

೧. ಅವರಿಗೆ ವಿಷ್ಣುವನ್ನು ಸೇವೆ ಮಾಡುವ ಭಾಗ್ಯ ಸಿಗಬೇಕು.

೨. ಲಕ್ಷ್ಮೀ ಅವರ ಮಗಳಾಗಿ ಹುಟ್ಟಬೇಕು. ಅವರೇ ವಿಷ್ಣುವಿಗೆ ಲಕ್ಷ್ಮೀಯನ್ನು ಧಾರೆ ಎರೆದು ಕೊಡಬೇಕು.

೩. ಅವರಿಗೆ ದೇಹದೊಂದಿಗೇ ಮೋಕ್ಷ ಸಿಗಬೇಕು.

ವಿಷ್ಣು ಒಪ್ಪಿದರು. ಆಮೇಲೆ ಲಕ್ಷ್ಮೀಯನ್ನು ಹುಡುಕಿಕೊಂಡು ಹೊರಟರು. ವಿಷ್ಣು ಶ್ರೀನಿವಾಸನಾಗಿ ಪದ್ಮಾವತಿಯನ್ನು ಮದುವೆಯಾಗಿ ತಿರುಪತಿಯಲ್ಲಿ ನೆಲೆಸಿದರು. ಲಕ್ಷ್ಮೀ ಕೊಲ್ಲಾಪುರದಲ್ಲಿ ಇದ್ದರು. ವಿಷ್ಣು ಶ್ರೀನಿವಾಸನಾಗಿ ಪದ್ಮಾವತಿಯ ವಿವಾಹವಾಗಿದ್ದನ್ನು Mr.ನಾರದರು ಲಕ್ಷ್ಮೀ ಗೆ ತಿಳಿಸಿದರು. ಮೇಡಂ ಗೆ ಸಿಕ್ಕಾಪಟ್ಟೆ ಕೋಪ ಬಂತು. ಅವರು ತಿರುಪತಿಗೆ ಬರುವ ಮುನ್ನವೇ ನಾರದರು ವೆಂಕಟೇಶ್ವರನಿಗೆ ಲಕ್ಷ್ಮೀ ಸಖತ್ ಕೋಪದಿಂದ ಈ ಕಡೆ ಧಾವಿಸುತ್ತಿದ್ದಾರೆ ಅಂದರು. ಶ್ರೀನಿವಾಸರು ಅಲ್ಲಿ ಪದ್ಮಾವತಿಯ ಹತ್ತಿರ ತಮ್ಮದೊಂದು ರೂಪವನ್ನು ಬಿಟ್ಟು ಕುಂಭಕೋಣಕ್ಕೆ ಓಡಿ ಬಂದು ಪಾತಾಳ ಶ್ರೀನಿವಾಸ ಆದರು.

ಈಕಡೆ ಲಕ್ಷ್ಮೀ ತಿರುಪತಿಗೆ ಬಂದು " ಶ್ರೀಕೃಷ್ಣ ನೀ, ನನ್ನ ಶ್ರೀ ರಾಮ ನೀ, ನನ್ನ ಪತಿರಾಯ ನೀನೇನಪ್ಪಾ " ಅಂತ ವೆಂಕಟೇಶ್ವರರಿಗೆ ಹೇಳಿದಾಗ ವೆಂಕಟೇಶ್ವರ ಅವರು "ನಾ ನಾ ನಾ...ಇಲ್ಲ ಇಲ್ಲ ಇಲ್ಲ ಇಲ್ಲ ನಾನವನಲ್ಲ" ಅಂದುಬಿಟ್ಟರು.

Z : ಬುದ್ಧಿವಂತರು !

ನಾನು : ಹೂಂ...ನಮ್ಮ ಮೇಡಮ್ಮೂ ಏನ್ ಕಮ್ಮಿ ಇಲ್ಲ. ಅವರಿಗೆ ಇವರ ರೂಪಾಂತರದ ರಹಸ್ಯ ತಿಳಿಯಿತು.ತಕ್ಷಣವೇ ಅಲ್ಲಿ ಅಲಮೇಲು ಮಂಗಾಪುರದಲ್ಲಿ ಅವರದೊಂದು ರೂಪವನ್ನು ಬಿಟ್ಟು ಇವರೂ ಕುಂಭಕೋಣಕ್ಕೆ ಶ್ರೀನಿವಾಸನನ್ನು ಹುಡುಕುತ್ತಾ ಓಡಿಬಂದರು. ಕುಂಭಕೋಣಕ್ಕೆ ಕಾಲಿಟ್ಟ ತಕ್ಷಣ ಅವರು ಮಗುವಾಗಿ ಹೋದರು. ಹೇಮ ಪುಷ್ಕರಿಣಿ ಎನ್ನುವ ಜಾಗದಲ್ಲಿ ಸಹಸ್ರದಳದ ಕಮಲದಲ್ಲಿ ಮೇಡಂ ಲಕ್ಷ್ಮಿ ಮಗುವಾಗಿ ಮಲಗಿದ್ದರು. ಅಲ್ಲಿಗೆ ಹೇಮ ಮಹರ್ಷಿ ಅನ್ನುವವರು ಬಂದರು. ಅವರು ಬೇರೆ ಯಾರೂ ಅಲ್ಲ, Mr. ಭೃಗು ಮಹರ್ಷಿ ಆಗಿದ್ದರಲ್ಲ....ಅವರೇ!

Z : ವಾಹ್ ವಾಹ್ !

ನಾನು : ಸರಿ ಇವರು ಆ ಮಗುವಿಗೆ ಕಮಲವಲ್ಲಿ ಅಂತ ನಾಮಕರಣ ಮಾಡಿ ಆ ಮಗುವನ್ನು ಸಾಕತೊಡಗಿದರು. ಆ ಮಗುವೂ ಬೆಳೆದು ಪ್ರಾಪ್ತವಯಸ್ಕವಾಯ್ತು.

ಬಹಳಾ ಹಿಂದೆ...

Z : ಎಷ್ಟ್ ಹಿಂದೆ ?

ನಾನು : ಸಿಕ್ಕ್ ಸಿಕ್ಕಾಪಟ್ಟೆ ಹಿಂದೆ...ವಿಷ್ಣು ಮೂರು ವಿಮಾನಗಳನ್ನು ರಚಿಸಿ, ಒಂದನ್ನು ಬ್ರಹ್ಮನಿಗೆ, ಇನ್ನೊಂದನ್ನು ವೈವಸ್ವತ ಮನುವಿಗೆ ಕೊಟ್ಟು,ಇನ್ನೊಂದನ್ನು ವೈಕುಂಠದಲ್ಲಿಯೇ ಬಿಟ್ಟರು. ವೈವಸ್ವತ ಮನುವಿನಿಂದ ಇಕ್ಷ್ವಾಕುವಿಗೆ ವಂಶಪಾರಂಪರ್ಯವಾಗಿ ಈ ವಿಮಾನ ಬಂತು. ಈ ಇಕ್ಷ್ವಾಕುವಿಗೆ ಬ್ರಹ್ಮನ ಬಳಿ ಇರುವ ವಿಮಾನವೂ ಬೇಕೆಂದು ಆಸೆ ಆಯ್ತು. ಬ್ರಹ್ಮ "take it" ಅಂತ ಧಾರಾಳವಾಗಿ ಕೊಟ್ಟುಬಿಟ್ಟರು. ಆಶ್ಚರ್ಯ ಏನಪ್ಪಾ ಅಂದ್ರೆ ಆ ಎರಡು ವಿಮಾನಗಳು ಫೆವಿಕಾಲ್ ಇಲ್ಲದೆಯೇ ಅಂಟಿಕೊಂಡುಬಿಟ್ಟು ಒಂದೇ ವಿಮಾನ ಆಗೋಯ್ತು !

Z : ಅಯ್ಯಯ್ಯೋ ! ಆಮೇಲೆ ?

ನಾನು : ಕಮಲವಲ್ಲಿ ಹೆಸರಿನಲ್ಲಿರುವ ಲಕ್ಷ್ಮೀಯನ್ನು ಮದುವೆಯಾಗಲು ವಿಷ್ಣು ಅವರು ಸಾರಂಗಪಾಣಿಯಾಗಿ ಈ ಅಂಟಿಕೊಂಡಿರೋ ವಿಮಾನದಲ್ಲಿ ಕುಂಭಕೋಣದಲ್ಲಿ ಒಂದು ದಿನ ಹೇಮಪುಷ್ಕರಿಣಿ ಎದುರು ಕಾಣಿಸಿಕೊಂಡರು. ಇದೊಂಥರಾ arranged love marriage. ಹೇಮ ಮಹರ್ಷಿಗಳು full speed ನಲ್ಲಿ ಕನ್ಯಾದಾನ ಮಾಡೇಬಿಟ್ಟರು. ಕಮಲವಲ್ಲಿ ಮತ್ತು ಸಾರಂಗಪಾಣಿಯ ಮದುವೆ ನೂ fast ಆಗಿ ಆಗೇಹೋಯ್ತು !

Z : ವಾಹ್ ವಾಹ್ ! ಏನ್ ಸ್ಪೀಡು...ಏನ್ ಕಥೆ !

ನಾನು : ಹೂಂ ಮತ್ತೆ ! ಹಿಂಗಿರ್ಬೇಕು ನೋಡು ಸ್ಪೀಡ್ ಅಂದರೆ ! ಅಷ್ಟು ದೂರ ಪಾಪ ವಿಮಾನ ಹಾರಿಸಿಕೊಂಡು ಬೇಗ ಬೇಗ ಮದುವೆ ಮಾಡ್ಕೊಂಡು ಸುಸ್ತಾಗಿರೋದ್ರಿಂದ ಅವರು ವಿಮಾನದಲ್ಲಿಯೇ ಆದಿಶೇಷನನ್ನು summon ಮಾಡಿ rest ತಗೋತಿದ್ದಾರೆ ಅಂತ ಅನ್ಸತ್ತೆ. ಮೇಡಮ್ ಕಾಲನ್ನು ಒತ್ತುತ್ತಿದ್ದಾರೆ. The whole temple is in the form of a chariot, pulled by elephants. It has brilliant architecture and is quite a big temple. ಇಲ್ಲೊಂದು ವಿಶೇಷ ಇದೆ. usually, ನಾವು ಮೊದಲು ಪುರುಷ ದೇವರನ್ನ ನೋಡಿಕೊಂಡು ಆನಂತರ ಸ್ತ್ರೀ ದೇವರನ್ನು ನೋಡಲು ಹೋಗುತ್ತೇವೆ [except in shakti kshetras like Chamundi hills] ಆದರೆ ಇಲ್ಲಿ ಮೊದಲು ಕಮಲವಲ್ಲಿಯವರ ದೇವಸ್ಥಾನಕ್ಕೆ [chariot ನ ಹೊರಗೆ] ಹೋಗಿ ದರ್ಶನ ಪಡೆದ ನಂತರವೇ ಸಾರಂಗಪಾಣಿಯ ದರ್ಶನ ಮಾಡುತ್ತೇವೆ. ಸಿಕ್ಕಾಪಟ್ಟೆ ಚೆನ್ನಾಗಿದೆ ದೇವಸ್ಥಾನ.

Z : I see !

ನಾನು : ಸಾರಂಗಪಾಣಿ ದೇವಸ್ಥಾನವನ್ನು ನೋಡಿದ ನಂತರ ನಾವು ಆದಿ ಕುಂಭೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿದೆವು.

Z : ಕುಂಭಕೋಣಕ್ಕೂ ಕುಂಭೇಶ್ವರಕ್ಕೂ ಏನಾದ್ರೂ ಸಂಬಂಧ ಇದ್ಯಾ ?

ನಾನು : ಇದೆ. ಕುಂಭಕೋಣಕ್ಕೆ ಈ ಹೆಸರು ಏಕೆ ಬಂತು ಅನ್ನೋದಕ್ಕೆ ಒಂದು ದೊಡ್ಡ ಕಥೆ ಇದೆ. ಆದಿಯಲ್ಲಿ ಬ್ರಹ್ಮದೇವನು ಸಕಲ ಜೀವಗಳನ್ನು ಸೃಷ್ಟಿಸಲು ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ಒಂದು ಕಲಶದಲ್ಲಿ ಇಟ್ಟುಕೊಂಡು ಆಕಾಶದಲ್ಲಿ walking ಹೊರಟರಂತೆ.

Z : ವಾಕಿಂಗ್ ಮುಗಿಸಿ ಸೃಷ್ಟಿ ಮಾಡೋಣ...ಸಿಕ್ಕಾಪಟ್ಟೆ creativity ಇರತ್ತೆ ಆಗ ಅಂತ ಪ್ಲಾನ್ ಏನಾದ್ರೂ ಇತ್ತಾ ?

ನಾನು : ಇರ್ಬಹುದು. ನಾನು ಬ್ರಹ್ಮನ interview ಮಾಡಿಲ್ಲ. ಕೈಗೆ ಸಿಕ್ಕಲಿ ಅವರು ಒಂದು ದಿನ...ಕೇಳೇ ಕೇಳ್ತಿನಿ. ಇರ್ಲಿ...coming back to ಕಥೆ, ಬ್ರಹ್ಮ ಅವರು ವಾಕಿಂಗ್ ಹೊರಟಾಗ ಕಲಶ slip ಆಗೋಯ್ತಂತೆ ಕೈಯಿಂದ. ಅದು ಮೇಲಿಂದ ಕೆಳಗೆ slow motion ನಲ್ಲಿ ಬೀಳ್ತಿರೋವಾಗ ಈಶ್ವರ ಅವರು ಬಾಣದಿಂದ ಅದನ್ನು ಹೊಡೆದರಂತೆ. ಆಗ ಆ ಸಾಮಾಗ್ರಿಗಳಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಭೂಮಿಯಲ್ಲೆಲ್ಲಾ distribute ಆಯ್ತಂತೆ. ಆ ಕಲಶ ಒಡೆದುಹಗಿ ಕುಂಭಕೋಣದಲ್ಲಿ ಬಿತ್ತಂತೆ ಕಡೆಗೆ. ಈಶ್ವರ ಆ ಬಿದ್ದು ಒಡೆದು ಹೋದ ಕಲಶದ ಚೂರುಗಳೆಲ್ಲಾ ಸೇರಿಸಿ ಲಿಂಗ ರೂಪ ತಾಳಿ ಕುಂಭೇಶ್ವರ ಅಂತ ಹೆಸರಾಗಿ ಅಲ್ಲಿ ನೆಲೆಸಿದ್ದಾರೆ. ಆದಿಯಲ್ಲಿ ಕುಂಭಕೋಣಕ್ಕೆ ಇವರೇ ಮೊದಲು ಬಂದಿದ್ದರಿಂದ ಇವರನ್ನು ಆದಿ ಕುಂಭೇಶ್ವರ ಅಂತ ಕರೆಯುತ್ತಾರೆ.

Z : ಲಿಂಗ ಮೂರ್ತಿಯ shape ಹೇಗಿದೆ ?

ನಾನು : ಲಾಲ್ ಬಾಗ್ ನಲ್ಲಿ ಪಾಟುಗಳು ಸಿಗತ್ವಲ್ಲ...ಕಪ್ಪಗೆ ಪ್ಲಾಸ್ಟಿಕ್ ನಲ್ಲಿ ಇರತ್ತಲ್ಲಾ...ಆ ಪಾಟನ್ನ ಶಿಲೆಯಲ್ಲಿ imagine ಮಾಡ್ಕೊ.

Z : ಮಾಡ್ಕೊಂಡೆ. ಆಮೇಲೆ ?

ನಾನು : ಅದನ್ನ ಉಲ್ಟಾ ಮಾಡು.

Z : ಮಾಡಿದೆ.

ನಾನು : ಅದೇ ಕುಂಭೇಶ್ವರ ಲಿಂಗ ಮೂರ್ತಿ.

Z : ಹೈ ! ಚೆನ್ನಾಗಿರತ್ತೆ ಅಲ್ವಾ ಒಂಥರಾ ?

ನಾನು : ಹೂಂ...ಸಕತ್ತಾಗಿದೆ ನೋಡಕ್ಕೆ ಮಾತ್ರ !

Z : ಹೌದು...

ನಾನು : Mrs. ಕುಂಭೇಶ್ವರ ಅವರ ಹೆಸರು ಮಂಗಳ ನಾಯಕಿ ಅಂತ. ಅವ್ರೂ ಚೆನ್ನಾಗಿದ್ದಾರೆ. cute, beautiful and adorable. ಅವರನ್ನೂ ನೋಡಿಕೊಂಡು, ದೇವಸ್ಥಾನದ architecture ನೋಡಿಕೊಂಡು ಅಲ್ಲಿಂದ ಸ್ವಾಮಿ ಮಲೈ ಗೆ ಹೊರಟೆವು.

Z : ಸ್ವಾಮಿ ಮಲೈ ಕಥೆ ?

ನಾನು : ಇನ್ನೊಂದು ದಿನ ಹೇಳ್ತಿನಿ !

ಅಲ್ಲಿಯವರೆಗೂ line on hold.

Monday, January 26, 2009

ಯೆಸ್ ! ಯೆಸ್ ! ಯೆಸ್ !! ಸೂರ್ಯಗ್ರಹಣ ನೋಡಿದೆ !

Z : ಆಹಾ ? ನೋಡೇಬಿಟ್ಯಾ ?

ನಾನು : ಯೆಸ್. ಕಡೆಗೂ ನೋಡೇಬಿಟ್ಟೆ.

Z :congratulations !

ನಾನು :thank you thank you.

Z : ಅಮ್ಮ ಅಣ್ಣ ಏನೂ ಅನ್ನಲಿಲ್ವಾ ?

ನಾನು :ಹೆಹೆ...ಅವ್ರೂ ಬಂದು ನೋಡಿದ್ರು.

Z : what ?

ನಾನು :ಹೂಂ...ನನ್ನ ನಂಬು !

Z : ಏನ್ ಈ ಸರ್ತಿ ಬಂದು ನೋಡೇಬಿಟ್ಟರಲ್ಲಾ?

ನಾನು :ಈ ಸರ್ತಿ ನಮ್ಮ ಯಾವ ರಾಶಿಗೂ ಗ್ರಹಣ ಹಿಡಿದಿರಲಿಲ್ಲ :) :):)

Z : ಹೆಹೆಹೀ....

ನಾನು : ಅಣ್ಣ ಕಡೇಲಿ ಬಂದ್ರು...ಅಮ್ಮ ಮಧ್ಯದಲ್ಲಿ ಬಂದು ನೋಡಿ..."ವಾಆಆಆಅಹ್ !! " ಅಂದ್ರು , ಅಪರ್ಣ ಗ್ರಹಣದ ಎಲ್ಲಾ ಸ್ಟೇಜುಗಳ ವೀಕ್ಷಣೆಗೆ ನಾನು ಕರೆದಾಗ ಉಪಸ್ಥಿತಳಾಗುತ್ತಿದ್ದಳು.ಯಾಕಂದ್ರೆ ಅವಳು ಡಾಕ್ಯುಮೆಂಟರಿ ಚಿತ್ರವೊಂದನ್ನು ನೋಡುತ್ತಿದ್ದಳು.

ನಾನಂತೂ ಹಠ ಹಿಡಿದಿದ್ದೆ. ಈ ಸರ್ತಿ ಏನಾದ್ರೂ ಸರಿ, ನಾನು ಪ್ಲಾನೆಟೇರಿಯಂ ಗೆ ಹೋಗಿ ಗ್ರಹಣ ನೋಡೋದೇ ಅಂತ. ಅಮ್ಮ ಮಾತ್ರ "ರಷ್ ಸಿಕ್ಕಾಪಟ್ಟೆ ಇರತ್ತೆ...ಇವತ್ತು ಮೋಡ ಇಲ್ಲ,ಇಲ್ಲೇ ನೋಡು, ಬೇಡಾ ಅನ್ನಲ್ಲ" ಅಂದರು. ಅದೂ ಸರಿ ಅನ್ನಿಸಿ ನಾನೂ ಹೂ ಅಂದು, ಕ್ಯಾಮೆರಾ ರೆಡಿ ಮಾಡಿಕೊಂಡೆ.

Z : ಹೋ...ತಾರಾಲಯದ ಕಡೆ ಸವಾರಿ ಮಾಡ್ಬೇಕೂ ಅಂತ ಇದ್ರಾ ತಾವು ?

ನಾನು : ಯೆಸ್.ಆಮೇಲೆ destination ಮನೆ ಅಂತಾ ನೇ ಡಿಸೈಡ್ ಮಾಡಿದೆ.

Z : ಗ್ರಹಣ ಶುರುವಾದಾಗ ಹೇಗಿತ್ತು ವಾತಾವರಣ ?

ನಾನು : Roadನಲ್ಲಿ ನನ್ನ ಬಿಟ್ಟು ಇನ್ಯಾವ ನರಪಿಳ್ಳೆ ನೂ ಇರಲಿಲ್ಲ. ಗ್ರಹಣ ಶುರುವಾದ ಎರಡು ನಿಮಿಷಕ್ಕೆ ಎರಡು ಬೈಕುಗಳಲ್ಲಿ ಇಬ್ಬರು ಹುಡುಗರು ನಮ್ಮ ರೋಡು ಗಸ್ತು ಹೊಡೆದರು. ನನಗೆ ಯಾಕೋ "ಚಿದಂಬರ ರಹಸ್ಯ" ಕಾದಂಬರಿಯ ಕ್ರಾಂತಿಕಾರಿ ಹುಡುಗರು ನೆನಪಾದರು.ಪ್ರಾಣಿ ಪಕ್ಷಿಗಗಳ behaviour ಸೂಕ್ಷ್ಮವಾಗಿ ಗಮನಿಸಿದೆ...looked normal.ಮನುಷ್ಯರು ಬಾಗಿಲು ಬಡಚಿಕೊಂಡು ಕೂತಿದ್ದರು ಬಿಟ್ಟರೆ, nature was just as normal as any afternoon.

Z :ಆಮೇಲೆ ?

ನಾನು : ನಾನು ಗ್ರಹಣದ ಪ್ರತಿಕ್ಷಣವನ್ನು ಆಸ್ವಾದಿಸುತ್ತಾ, ಫೋಟೋ ತೆಗೆಯಲು ಸೂಕ್ತ ಘಟ್ಟಗಳನ್ನು ಕಾಯುತ್ತಾಯಿದ್ದೆ..ನನಗೆ ಗ್ರಹಣ ಎಷ್ಟು ರೋಚಕ ಅನ್ನಿಸ್ತಪ್ಪಾ ಅಂದ್ರೆ...ಕಣ್ಣ ಮೇಲೆ X-ray film ಇಟ್ಟವಳು ಕೆಳಗಿಳಿಸಲೇ ಇಲ್ಲ !

Z : ಮತ್ತೆ ಫೋಟೋ ಹೇಗೆ ತೆಗೆದೆ ?

ನಾನು : ಫಿಲ್ಮ್ ಎಡಗೈಲಿ, ಬಲಗೈಲಿ ಕ್ಯಾಮೆರಾ...ಫಿಲ್ಮ್ ನಲ್ಲಿ ಕಾಣುತ್ತಿರುವ ಸೂರ್ಯನ ಲೆನ್ಸ್ ನಲ್ಲಿ ನೋಡಿ ಕ್ಲಿಕ್ಕಿಸುತ್ತಾ ಹೋದೆ. ಕೆಲವು shake ಆಗೋದ್ವು :( ಚೆನ್ನಾಗಿ ಬಂದಿದ್ದನ್ನ ಮಾತ್ರ upload ಮಾಡಿದಿನಿ. ನನಗೆ ವರ್ಷಾನುಗಟ್ಟಲೆಯಿಂದ ಆಸೆ ಇತ್ತು...ಸೂರ್ಯಗ್ರಹಣ ನೊಡ್ಬೇಕು, ಮತ್ತದರ ಫೊಟೊ ತೆಗೆಬೇಕು ಅಂತ..ನೆರವೇರ್ತು ಅದು ಇವತ್ತು. ಎಲ್ಲಿಲ್ಲದಷ್ಟು ಸಂತೋಷ ಆಗ್ತಿದೆ ನನಗೆ !

Z :ಪಡು...ಎಷ್ಟ್ ಸಂತೋಷ ಪಡ್ತಿಯೋ ಪಡು.

ನಾನು : thanks. ಕಳೆದ ವರ್ಷ ಆಗಸ್ಟ್ ಒಂದರಂದು ನಡೆದ ಸೂರ್ಯ ಗ್ರಹಣದಲ್ಲಿ ಆದ ಅವಾಂತರವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಆಮೇಲೆ, ಗ್ರಹಣ ನೋಡಲು ಮಿಸ್ಸ್ ಮಾಡಿಕೊಂಡವರು ಬೇಜಾರ್ ಮಾಡ್ಕೋಬೇಡಿ...ಇಲ್ಲಿದೆ ಫೋಟೋಸ್..ನೋಡ್ಬಿಡಿ :-)

Friday, January 23, 2009

Team work by Chaaya and shaarvari

Z :ನೀನು ರಾಜಕಾರಿಣಿ ಆಗೋದೆ ಅಂತ ಅಂದುಕೊಂಡುಬಿಟ್ಟಿದ್ದೆ ನಾನು...

ನಾನು : ಇಲ್ಲ...ನಾನು ಹೇಳಲಿಲ್ಲವಾ ? ನಾನು ಮಹಾನ್ ಸತ್ಯವಂತೆ ಮತ್ತು ಸಕತ್ ಒಳ್ಳೆಯವಳು.Most importantly, ಮಾತಿಗೆ ತಪ್ಪದವಳು.

Z : I see.

ನಾನು : ನೋಡು. ಛಾಯ ತೆಗೆದ ಫೋಟೋಸ್ ನ ಮತ್ತು ನಮ್ಮನೆ ಎದುರುಮನೆಯ ಶ್ರೀಮತಿ ನಂದಿನಿ ಪ್ರದೀಪ್ ಅವರು ತೆಗೆದ ಫೋಟೋಸ್ , ಒಟ್ಟು (139+126) ಫೋಟೋಸ್ ನ ನಿನಗೆ ತೋರ್ಸಕ್ಕೆ ಪಾಪ ಶಾರ್ವರಿ ರಾತ್ರಿ ಹಗಲೆನ್ನದೇ ಕಷ್ಟ ಪಟ್ಟು ನೀಟಾಗಿ upload ಮಾಡಿದ್ದಾಳೆ. ನೋಡು...ನಾನ್ ಹೇಳಿದ್ನಲ್ಲ...ಇನ್ನೆರಡು ದಿನ ಅಂತ...ಹಾಕ್ತಿದಿನಿ ಸ್ಲೈಡ್ ಷೋ...ನೋಡ್ಬಿಡು.

Z : ಓಕೆ.

ಓದುಗರೇ...ನೀವೂ ನೋಡ್ಬಿಡಿ.

ಈ ಅಲ್ಬಮ್ ನಲ್ಲಿ ನಾನು ತೆಗೆದ ಫೋಟೋಸ್:





ಮತ್ತೆ ಈ ಅಲ್ಬಮ್ ನಲ್ಲಿ ನಂದಿನಿ ಅವರು ತೆಗೆದ ಫೋಟೋಸ್:


Thursday, January 22, 2009

ಹೀಗೊಂದು ಅರ್ಥಪೂರ್ಣ ಸಂಜೆ

Z : ಅರ್ಥ ಯಾರು and ಪೂರ್ಣ ಎಲ್ಲಿದೆ?

ನಾನು :ಅಯ್ಯೋ...ಅದು ಒಂದೇ ಪದ ಕಣೇ...meaningful ಅಂತ ಅರ್ಥ.

Z : ಓಹ್ ಹಾಗೆ... ಸಂಜೆಗೂ ಅರ್ಥ ಇರತ್ತಾ ? " ಈ ಸಂಜೆ ಯಾಕಾಗಿದೆ ?" ಅಂತ ಬರೀ ಪ್ರಶ್ನೆಗಳನ್ನೇ ಕೇಳ್ಕೋಂಡ್ ಬಂದಿದಿನಿ ಇಷ್ಟ್ ವರ್ಷ.

ನಾನು :ಅರ್ಥ of ಸಂಜೆ depends on the mindset and temperament of the person.

Z : ಹ್ಹ್ಮ್ಮ್ಮ್......ತಮಗೆ ಯಾವ್ ರೀತಿಯಲ್ಲಿ ಅರ್ಥಪೂರ್ಣ ಅನ್ನಿಸಿತು ?

ನಾನು : ಜನವರಿ ೧೨ ನೇ ತಾರೀಖು "ಯುವ ದಿನ". ಆವತ್ತಿನ ಸಂಜೆ ಅರ್ಥಪೂರ್ಣ ಅನ್ನಿಸಿತು.

Z : ಹೋದ ಸೋಮವಾರ ನಡೆದಿದ್ದರ ಬಗ್ಗೆ ಇವತ್ತು ಹೇಳ್ತಿದ್ದೀಯಾ ?

ನಾನು : ಇವತ್ತಾದ್ರೂ ಹೇಳ್ತಿದಿನಲ್ಲ...ಅದಕ್ಕೆ ಖುಷಿ ಪಡು.

Z : ಕರ್ಮಕಾಂಡ ! ಹೋಗ್ಲಿ ಕಥೆ ಶುರು ಮಾಡು.

ನಾನು : ಹಿಂದಿನ ದಿನ ನಮ್ಮನೆಲಿ ನಡೆದ ಬನಶಂಕರಿ ಹಬ್ಬದ ಸುಸ್ತು ಇನ್ನೂ ಪರಿಹಾರ ನೂ ಆಗಿರ್ಲಿಲ್ಲ...ಅಪರ್ಣನಿಗೆ ಸಿಕ್ಕಾಪಟ್ಟೆ ಜ್ವರ ಬಂದು ಬೆಳಿಗ್ಗೆ ಎದ್ದವಳೇ ಡಾಕ್ಟರ್ ಹತ್ರ ಕರ್ಕೊಂಡ್ ಓಡಿ ಹೋದೆ. ಆಮೇಲೆ ಅವಳನ್ನ ಮನೆಗೆ ಕರ್ಕೊಂಡ್ ಬಂದು ಔಷಧಿ ಕೊಟ್ಟು ಬ್ಲಾಗನ್ನು ಕುಟ್ಟಲು ಕೂತೆ...ಶಾರದ ಅತ್ತೆ [ನನ್ನ ಸೋದರತ್ತೆ] ಇಂದ ಮೆಸೇಜು..."I have brought Aurobindo ghosh's book savitri for you. Are you free this evening ?" ಅಂತ. ಅಮ್ಮ ಹೊರಗೆ ಹೋಗಿದ್ದರು. ಅವರು ಬರುವವರೆಗೂ ನಾನು ಬ್ಯುಸಿ.ನಾನು "ಇಲ್ಲ" ಅಂತ ಟೈಪ್ ಮಾಡೋ ಟೈಂ ಗೆ ಸರಿಯಾಗಿ ಅಮ್ಮ ಬಲಗಾಲಿಟ್ಟರು. "ಇಲ್ಲ" ನ "ಹೌದು" ಮಾಡಿ ಕಳಿಸಿದೆ. ಠಕ್ ಅಂತ ಆಕಡೆ ಇಂದ "There is a lecture on Life and works of Aurobindo Ghosh in Gokhale Institute today. Come there at 6.15. Dont miss it ! "ಅಂತ ಮೆಸೇಜು. ನಾನು ಮನೆ ಪರಿಸ್ಥಿತಿ ಹತೋಟಿಗೆ ಬಂದ ಮೇಲೆ "ಓಕೆ" ಅಂದೆ. ಆರುಕಾಲಿಗೆ ಕರೆಕ್ಟಾಗಿ ಅತ್ತೆ ಮನೆಗೆ ಪಾದಾರ್ಪಣೆ ಮಾಡಿದೆ. ಅಲ್ಲಿಂದ ಗೋಖಲೆ ಸಂಸ್ಥೆಗೆ ಒಂದೇ ನಿಮಿಷದ ನಡಿಗೆ. ಆರೂ ಹದಿನಾರಕ್ಕೆ ನಾವು ಅಲ್ಲಿದ್ದೆವು.

Z : ಹೇಗಿದೆ ಸಭಾಂಗಣ ? It was under renovation ಅಲ್ವಾ ?

ನಾನು : ಹೂಂ...It has been very beautifully and thoughtfully renovated. Acoustically better than many auditoria [but cant excel IISc :)] ಮೈಕು ಕುಯ್ಯ್ಯ್ಯ್ಯ್ಯ್ಯ್ಯ್....ಅನ್ನಲ್ಲ. ಹೊರಗಿನ ಶಬ್ದ ಕೇಳ್ಸಲ್ಲ. Echo ಕಮ್ಮಿ ಮಾಡೋಕೆ ಒಳ್ಳೇ measures ತಗೊಂಡಿದಾರೆ. As a physicist, I found the auditorium nice and proper.

Z : From the point of view of ದೇಶಭಕ್ತಿ ?

ನಾನು : ಅಯ್ಯೋ...ಸೂಪರ್ರಾಗಿದೆ. ಎಷ್ಟೋ ಜನರ ಬಗ್ಗೆ ನಮಗೆ ಗೊತ್ತೇ ಇರಲ್ಲ Z....ಅವರ ಫೋಟೋ ನೋಡಿದಾಗ ನಾವೆಲ್ಲ ಏನೂ ಇಲ್ಲ ಅವರ ಮುಂದೆ ಅನ್ಸತ್ತೆ. ಅವರ ಕಣ್ಣುಗಳು ಒಳ್ಳೆ chinnaswamy stadium flood light ಥರ ಝಗಮಗ ಮಿನುಗ್ತಿರತ್ವೆ. ನಮ್ ಕಣ್ಣು....

Z : match stick ಅಂತಿಯಾ ?

ನಾನು : ಹೂಂ....

Z : ಆಮೇಲೆ ?

ನಾನು : ನಾವು ಅಲ್ಲಿ ಹೋಗಿ ಸ್ಥಾಪಿತರಾಗಿ, ಆಸೀನರಾಗೋ ಹೊತ್ತಿಗೆ ಆರು ಇಪ್ಪತ್ತು. ಭಾಷಣ ಇದ್ದಿದ್ದು ಆರು ವರೆಗೆ. ಅತ್ತೆ ಬೇಕಂತ್ಲೆ ನನ್ನನ್ನ ಕಾಲು ಘಂಟೆ ಮುಂಚೆ ಬರಹೇಳಿದ್ದರು. ನಾವು ಅಲ್ಲಿ ಸೆಟಲ್ ಆಗಕ್ಕೆ ಸರಿ ಹೋಗತ್ತೆ ಅಂತ. ಸರಿಯಾಗಿ ಆರುವರೆಗೆ ಅತಿಥಿಗಳು ಬಂದರು. ಸ್ವಾಗತ ಮಾಡಕ್ಕೆ ಬಂದವರು ಅಮೇರಿಕದ MIT ಲಿ Professor.

Z : ಹಾ ?

ನಾನು : ಹೂಂ...ಏನ್ ಸಿಂಪಲ್ ಮನುಷ್ಯ ಅಂದ್ರೆ... ಯಾರಿಗೂ ನಂಬಕ್ಕೆ ಆಗಲ್ಲ. ಅವರ ತಂದೆಯವರ ಸ್ಮರಣಾರ್ಥ ಈ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಅವರ ತಂದೆ Chief justice. ಒಂದಿಷ್ಟ್ ಹೇಳಿದ್ರು ಅವರ ಬಗ್ಗೆ. ನನಗೆ ತಲೆ ತಿರುಗಿ ಬಂತು. ಕಲೆ, ಸಾಹಿತ್ಯ, ಸಂಸ್ಕೃತಿ, ನ್ಯಾಯ, ನೀತಿ,ಧರ್ಮ, ಅಧ್ಯಾತ್ಮ...ಇವೆಲ್ಲದರ ಸಮ್ಮಿಶ್ರಣ ನೇ ಆ Chief justice.

Z : fruit salad ಅನ್ನು.

ನಾನು : ಹೂಂ...with ice cream-u.

Z : ಆಮೇಲೆ ?

ನಾನು : ಅತಿಥಿಯ ಹೆಸರು Ms. Aditi Vasist.ಅವರು Sri Aurobindo School ನ Principal. ಅವರಿಗೆ ಮೂರು ವರ್ಷ ವಯಸ್ಸಾಗಿದ್ದಾಗ ಅವರ ತಂದೆ ತಾಯಿ ಇವರನ ಅರಬಿಂದೋ ಆಶ್ರಮ, ಪುದುಚೇರಿಗೆ ಕರೆದುಕೊಂಡು ಹೋಗಿದ್ದರಂತೆ. ಅರಬಿಂದೋ ಅವರನ್ನು ನೋಡಿದ ನೆನಪು ಇವರಿಗೆ ಅಷ್ಟು ಇಲ್ಲದಿದ್ದರೂ ನಂತರ ಅವರು ಆಶ್ರಮದ ಕಾರ್ಯಕ್ರಮಗಳಲ್ಲಿ ಭಾಗವಹಿಸತೊಡಗಿದರು. ಈಗ ಈ ಶಾಲೆಯನ್ನು ನಡೆಸುತ್ತಿದ್ದಾರೆ. ಅವರು ಅರಬಿಂದೋ ಅವರ ಸಂಕ್ಷಿಪ್ತ ಜೀವನ ಚರಿತ್ರೆಯನ್ನು ಬಿಚ್ಚಿಡುತ್ತಾ ಹೋದರು...ನನಗೆ ನಾನು ಎಂಥಾ ನಿಷ್ಪ್ರಯೋಜಕಿ ಅನ್ನೋದು ಜ್ಞಾನೋದಯ ಆಯ್ತು.

Z : ಸದ್ಯ ಈಗ್ಲಾದ್ರೂ ಆಯ್ತಲ್ಲ...

ನಾನು : Better late than never. ಅರಬಿಂದೋ ಅವರ ತಂದೆ ಆಂಗ್ಲ ಸಂಕೃತಿಪ್ರಿಯ. ಮಕ್ಕಳಿಗೆ ಭಾರತದ ವಾಸನೆಯೂ ತಾಗಕೂಡದೆಂದು ಅರಬಿಂದೋ ಎಂಟು ವರ್ಷದವರಾಗಿದ್ದಾಗಲೇ, ಅವರನ್ನ ಮತ್ತು ಅವರ ಅಣ್ಣ ತಮ್ಮಂದಿರನ್ನೆಲ್ಲರನ್ನೂ ಲಂಡನ್ನಿಗೆ ಹಡಗಿನಲ್ಲಿ ಕಳಿಸಿ, ಅಲ್ಲಿನ ವಿದ್ಯಾಭ್ಯಾಸ ಕೊಡಿಸಿ ಅವರನ್ನು ಆಂಗ್ಲದವರಾಗಿಯೇ ಮಾಡಲು ಅವರು ಬಯಸಿದ್ದರು. ಇಲ್ಲಿ ಇಂಗ್ಲೆಂಡಿನಲ್ಲಿ ಅವರಿಗೆ ಆಶ್ರಯ ಕೊಟ್ಟ ಮನೆಯ ಮುಖ್ಯಸ್ಥ ತೀರಿಹೋದ ನಂತರ ಇವರು ಹೋಟೆಲೊಂದರಲ್ಲಿ ಮಾಣಿಯಾಗಿ ಕೆಲಸ ಮಾಡುತ್ತಾ, ಜೊತೆಯಲ್ಲಿಯೇ ಓದುತ್ತಾ, ಕಾಲೇಜಿಗೇ ಮೊದಲಿಗರಾಗಿ, ವಿದ್ಯಾರ್ಥಿವೇತನಗಳನ್ನು ಪಡೆದು ತಮ್ಮ ಜೀವನ ಸಾಗಿಸಿದರು. ಇವರು ICS ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಿದ್ದರೆ ಭಾರತದಲ್ಲಿ ಇವರಿಗೆ ಒಂದು ಉತ್ತಮ ಹುದ್ದೆ ದೊರಕುತ್ತಿತ್ತು. ಇಂಗ್ಲೆಂಡಿನ ಭಾರತೀಯರು ಇಂಗ್ಲೇಂಡ್ ನಲ್ಲೇ ಗುಪ್ತ ಸಂಘಗಳನ್ನು ಮಾಡಿಕೊಂಡು ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರು. ಅರಬಿಂದೋ ಕೂಡಾ ಈ ಸಂಘಕ್ಕೆ ಸೇರಿ, ಪ್ರಾಣ ಹೋದರೂ ಆಗ್ಲರ ಕೈ ಕೆಳಗೆ ದುಡಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿ, ICS ಪರೀಕ್ಷೆಯ ಕುದುರೆ ಸವಾರಿ ಪರೀಕ್ಷೆಯಲ್ಲಿ ಬೇಕಂತಲೇ ತೇರ್ಗಡೆಯಾಗದೇ ಉಳಿದರು. ಅವರು ಭಾರತಕ್ಕೆ ಬರುತ್ತಿದ್ದ ಹಡಗು ಮುಳುಗಿತೆಂದು ತಿಳಿದ ಅವರ ತಂದೆ ಭಾರತದಲ್ಲಿ ಆಘಾತ ತಡೆಯಲಾಗದೇ ಪ್ರಾಣ ಬಿಟ್ಟರು. ಆದರೆ ಅರಬಿಂದೋ ಕೊನೆಯ ಕ್ಷಣದಲ್ಲಿ ಹಡಗು ಬದಲಿಸಿದ್ದರು. ಕಡೆಗೂ ಅವರು ಭಾರತ ತಲುಪಿದರು.

Z : ಯಪ್ಪಾ !!!

ನಾನು : ಹೂಂ...ನೋಡು ಎಷ್ಟ್ adventurous ಆಗಿತ್ತು ಇವರ ಜೀವನ ! ನನ್ನದೂ ಒಂದು ಜೀವನಾ ನ ?...ಸ್ಕೂಲ್ ಗೆ ಹೋಗು ಬಾ...ಕಾಲೇಜಿಗೆ ಹೋಗು ಬಾ...ಕಷ್ಟನೇ ಪಡ್ಲಿಲ್ಲ...ಕಾಲೇಜೂ ಟಾಪ್ ಮಾಡ್ಲಿಲ್ಲ.... :( :( :( ಯಾವ್ದಕ್ಕೂ ಹೋರಾಡ್ಲೂ ಇಲ್ಲ...ಗಲಾಟೆ ಅಂತೂ ಮಾಡ್ಲೇ ಇಲ್ಲ...ಕ್ರಾಂತಿಯನ್ನೂ ನಡೆಸ್ಲಿಲ್ಲ :( :( ಛೆ ಛೆ ಛೆ ಛೆ ಛೆ !!!!!!!!!!!!!!!!!!!!

Z : ಶಾಂತಿ ಶಾಂತಿ ಶಾಂತಿ !! ಸಮಾಧಾನ ಮಾಡ್ಕೋ.

ನಾನು : sniff !!!! ಆಮೇಲೆ ಅವರು ಅರಬಿಂದೋ ಅವರ ಸ್ವಾತಂತ್ರ್ಯ ಹೋರಾಟದ ಕಥೆ ಹೇಳಿದ್ರು.ಮೈ ರೋಮಾಂಚನ ಆಗೋಯ್ತು ನಂಗೆ. ಒಂದುವರೆ ಘಂಟೆ ಕಳೆದಿದ್ದೇ ಗೊತ್ತಾಗ್ಲಿಲ್ಲ. ಆಮೇಲೆ ಅರಬಿಂದೋ ರಚಿಸಿದ ಮೇರು ಕೃತಿ "ಸಾವಿತ್ರಿ"ಯ ಬಗ್ಗೆ ಮಾತಾಡಿದರು ಅವರು.

Z : what it eez ?

ನಾನು : Its a poem,a very long poem of 23,813 lines. ಆಂಗ್ಲದಲ್ಲೇ ಬರ್ದಿದಾರೆ ಇದನ್ನ. ಸಾವಿತ್ರಿ..ಅದೇ ಸತ್ಯವಾನನ ಹೆಂಡತಿ...ಯಮನ ಜೊತೆ ಹೋರಾಡಿ ಪತಿಯನ್ನ ಬದುಕಿಸಿಕೊಂಡಳಲ್ಲಾ...ಅವಳ ಕಥೆ. ಅವಳ ಪಾತ್ರದಲ್ಲಿ ಭಾರತೀಯ ಸಂಸ್ಕೃತಿ, ಸನಾತನ ಧರ್ಮ, ಎಲ್ಲವನ್ನು portray ಮಾಡಿದ್ದಾರಂತೆ. ಇದನ್ನೇ ನನ್ನ ಸೋದರತ್ತೆ ನನಗೆ gift ಮಾಡಿದ್ರು,on the occasion of world youth day.

Z : ಆಹಾ !!!

ನಾನು : ಇನ್ನೊಂದ್ ಏನಪ್ಪಾ ಅಂದ್ರೆ, ಅರಬಿಂದೋ ಅವರು ಕೆಲವು ಆಂಗ್ಲಪದಗಳನ್ನ ಸ್ವತಃ coin ಮಾಡಿದ್ದಾರೆ. ಅದಕ್ಕೆ ಅಂತಾ ನೇ ಒಂದು ನಿಘಂಟೂ ಇದೆ. ಸಾವಿತ್ರಿ ಪುಸ್ತಕ ಇದ್ದು ಆ ನಿಘಂಟು ಇರದಿದ್ರೆ no use. ಪಾಪ ನಮ್ಮತ್ತೆ ನನಗೆ ಅದನ್ನೂ ಕೊಟ್ರು.

Z : ಹೊಡುದ್ಲು jackpot ನ.

ನಾನು : ಹೆ ಹೆ....ಹೆಂಗೆ ?

Z : ಸೂಪರ್. ಆಮೇಲೆ ?

ನಾನು : ನಾನು ಅಮ್ಮನ MP3ಪ್ಲೇಯರ್ ನಲ್ಲಿ ಭಾಷಣ ನ ರೆಕಾರ್ಡ್ ಮಾಡ್ಕೊಂಡೆ. ನನ್ನ ಪಕ್ಕದಲ್ಲಿ ಕೂತಿದ್ದವರೂ ಸಹ ಮಾಡ್ಕೋತಿದ್ರು ಅವರ ರೆಕಾರ್ಡರ್ ನಲ್ಲಿ.ನಾನು ಸ್ವಲ್ಪ ನೋಟ್ಸ್ ಕೂಡಾ ಮಾಡ್ಕೋತಿದ್ದೆ. ಭಾಷಣ ಆದ್ಮೇಲೆ ಅವರು ನನ್ನ ನೋಟ್ಸ್ ನೋಡಿ, "which college are you from ? What are you studying ?" ಅಂದ್ರು. ನಾನು " I have done myM.Sc in physics" ಅಂದೆ. ಅವರು ನೋಡಿದರೆ... ISROದಲ್ಲಿ scientist !! ಅವರು "you have a very good handwriting, an impressive way of writing and have developed a very correct method of making notes. I am impressed. Do come to ISRO once.I can show you around. If you want some projects, we can see what we can do "ಅಂದು, ಕಾರ್ಡ್ ಕೊಟ್ಟು, ಕೈ ಕುಲುಕಿ ಹೋದ್ರು..

Z : ಭೂಮಿಮೇಲೆ ಇದ್ದ್ಯೋ ಅಥ್ವಾ ಚಂದ್ರಕ್ಕೆ ಹೋಟೋಗಿದ್ಯೋ ?

ನಾನು : ಇಲ್ಲ..ಭೂಮಿ ಮೇಲೆ ಇದ್ದೆ.

Z : ಗೂಡ್ !!ಆಮೇಲೆ ?

ನಾನು : ಅದಿತಿ ಮೇಡಮ್ ನ ಮಾತಾಡಿಸಿದೆ. ನನ್ನ ಕೈಯಲ್ಲಿ ಸಾವಿತ್ರಿ ಪುಸ್ತಕ ಇದ್ದಿದ್ದನ್ನ ನೋಡಿ ಅವರು ಸಖತ್ ಖುಷಿ ಪಟ್ಟರು. ಅವರು ಹೊರಟ ನಂತರ ನಾವು ರಾಮಕೃಷ್ಣ ಆಶ್ರಮಕ್ಕೆ ಪಾದ ಬೆಳೆಸಿದ್ವಿ.ಆಶ್ರಮ ಸರ್ಕಲ್ ನಲ್ಲಿ ವಿವೇಕಾನಂದರ ಮೂರ್ತಿ ಆವತ್ತು ಬೆಳಿಗ್ಗೆ ಅನಾವರಣ ಆಗಿತ್ತಲ್ಲ, ಅದನ್ನ ನೋಡಕ್ಕೆ. ಅಲ್ಲಿ ಹೋದ ಮೇಲೆ ಅಲ್ಲಿ ನಡೆಯುತ್ತಿದ್ದ ಬುಕ್ ಸೇಲ್ ಗೆ ಹೋಗದೆ ಇರಲು ಪುಸ್ತಕ ಹುಳುಗಳಾದ ನನಗೆ ಮತ್ತು ನಮ್ಮ ಅತ್ತೆಗೆ ಮನಸ್ಸು ಬರಲಿಲ್ಲ. ನಮ್ಮ ಜೊತೆ ನನ್ನ ತಂಗಿಯರಾದ ಗೌರಿ ಮತ್ತು ವಿದ್ಯಾ ಮತ್ತು ನನ್ನ ಮಾವ ಮುರಳಿಧರ್ ಎಲ್ಲಾರು ಇದ್ದರು. ನಾವೆಲ್ಲ ಬುಕ್ ಸೇಲ್ ಗೆ ಹೋದೆವು. ಹೋದ ಸರ್ತಿ ಕೂಡಾ ನಾನು ಈ ಸೇಲ್ ಗೆ ಬಂದಿದ್ದೆ. ಆಗಲೇ ಗುರುಗಳಾದ ಅರುಣ್ ಮತ್ತು ನನ್ನ ಮತ್ತೊಬ್ಬ ಮಿತ್ರರಾದ ಶ್ರೀಕಾಂತ್ ಅವರನ್ನು ನಾನು ಮೊದಲ ಬಾರಿ ಮೀಟ್ ಮಾಡಿದ್ದು. ಆಗ ಗುರುಗಳು "ನಾನು ಯಾರು ?" ಅನ್ನೋ documentary ಮೂವಿಯ ಸಿ ಡಿ ತೋರಿಸಿ, "ಇದನ್ನ ತಗೋ. ಸಕತ್ತಾಗಿದೆ. " ಅಂದಿದ್ದರು. ನಾನು " ಹೂಂ.." ಎಂದು ತಲೆಯಲ್ಲಾಡಿಸಿದ್ದೆ. ಆದರೆ ತಗೊಳ್ಳಕ್ಕೆ ಆಗಿರ್ಲಿಲ್ಲ. ಅದನ್ನ ಈ ವರ್ಷ ತಗೊಂಡೆ .

Z : ಒಂದು ವರ್ಷ ಬಿಟ್ಟು ?

ನಾನು : ಹೂಂ.ಆಮೇಲೆ ಶಂಕರಾಚಾರ್ಯರು ಬರೆದ "ಲಘು ವಾಕ್ಯ ವೃತ್ತಿ" ಅನ್ನೋ ಪುಸ್ತಕದ ಬಗ್ಗೆ ಕೇಳಿದ್ದೆ. ಏನೂ ಅಂತ ತಿಳ್ಕೊಳಕ್ಕೆ ಅದನ್ನ ತಗೊಂಡೆ. For some technical reasons, ನನಗೆ ದಕ್ಷಿಣಾಮೂರ್ತಿ ಸ್ತೋತ್ರ ಬೇಕಿತ್ತು. ಮನೆಯಲ್ಲಿ ಇರಲಿಲ್ಲ ಆ ಪುಸ್ತಕ. ಅದನ್ನೂ ಸೇರಿಸಿಕೊಂಡೆ. ಸಾಕು ಈ ಸರ್ತಿಗೆ, ಇನ್ಯಾವ್ ಪುಸ್ತಕನೂ ತಗೊಳಲ್ಲಾ ಅಂತ ಪ್ರತಿಜ್ಞೆ ಮಾಡಿ ಬಿಲ್ ಕೌಂಟರ್ ಗೆ ಬಂದೆ, ಅಲ್ಲಿ ಸೋಮನಾಥಾನಂದ್ ಜೀ ಅವರು ಬರೆದ "ಉಪನಿಷತ್ ಭಾವಧಾರೆ" ಪುಸ್ತಕ ನನ್ನ ಕಣ್ಣಿಗೆ ಬಿತ್ತು.

Z : As ususal, ಪ್ರತಿಜ್ಞೆ ಗಾಳಿಗೆ ತೂರಿದ್ದಾಯ್ತು.

ನಾನು : ಇಲ್ಲ..ನಾನು ಯೋಚ್ನೆ ಮಾಡಕ್ಕೆ ಶುರು ಮಾಡಿದೆ. ತಗೊಳ್ಳಕ್ಕೆ ದುಡ್ಡಿತ್ತು...ಆದ್ರೆ ಮನೆಗೆ ಬಂದ್ರೆ ಅಮ್ಮ ಅಣ್ಣ ಇಬ್ಬರೂ " ನೀನ್ ಹೋದ್ ಕಡೆ ಎಲ್ಲ ಟೆಂಪೋ ಅರೇಂಜ್ ಮಾಡ್ಬೇಕಾಗತ್ತೆ...ಇಷ್ಟ್ ಇಷ್ಟ್ ಪುಸ್ತಕ ಹೊತ್ಕೊಂಡು ಬರ್ತ್ಯಾ....ನಿಂಗಿಂತಾ ಭಾರ ಇರತ್ತೆ ಅವು. ನಾಲ್ಕು book racks ಭರ್ತಿ ಆದ್ವು...ಎಲ್ಲಿಂದ ಮಾಡ್ಸೋದು ಹೊಸದನ್ನ ?" ಅಂತ ಆಡ್ಕೋತಾರೆ ಅಂತ ಗೊತ್ತಿತ್ತು. ಅವರು ನನ್ನ ಪುಸ್ತಕ ಪ್ರೀತಿಗೆ ಯಾವತ್ತೂ ಅಡ್ಡಿ ಬಂದವರಲ್ಲ. ನಾನ್ ಕೇಳಿದ್ದಕ್ಕೆ ಯಾವತ್ತೂ ಇಲ್ಲಾ ಅಂತ ನೂ ಅಂದಿಲ್ಲ.The problem is, ಮನೆಯಲ್ಲಿ ಈಗ ಹುಡುಕಿದ್ರೂ ಎಲ್ಲೂ ಜಾಗ ಇಲ್ಲ . ಎಲ್ಲಪ್ಪಾ ಇಡೋದು ಇವನ್ನಾ ಅಂತ ಯೋಚನೆ ಶುರುವಾಯ್ತು. ಅಷ್ಟೊತ್ತಿಗೆ ಮಳಿಗೆ ಕ್ಲೋಸ್ ಆಗೋ ಟೈಂ ಬಂದಿತ್ತು. ಅತ್ತೆ ಬಂದು " ಆಯ್ತಾ ಶಾಪಿಂಗ್ ?" ಅಂದ್ರು.ನಾನು ನನ್ ಪರಿಸ್ಥಿತಿ ವಿವರಿಸಿದೆ. ಅವರು " ಅಯ್ಯೋ ಪೆದ್ದಿ, ಹತ್ತರಲ್ಲಿ ಇದೂ ಹನ್ನೊಂದ್ನೇ ದು. ಈಗ ಏನು, ನೀನು ತಗೊಂಡರೆ ಮನೆಲಿ ಜಾಗ ಇಲ್ಲ ಅಂತ comment ಬರತ್ತೆ ತಾನೆ ? ನಾನ್ ಕೊಡ್ಸಿದ್ರೆ ? ಬರಲ್ಲ ತಾನೆ ? ತಗೊ..ಇದೂ ನನ್ನ gift. flat discount ಸಿಕ್ಕೋವಾಗ chance miss ಮಾಡ್ಕೋಬಾರ್ದು" ಅಂದಿದ್ದೇ...ಪುಸ್ತಕ ನ ತಗೊಂಡು ಹೋಗಿ ಬಿಲ್ ಹಾಕ್ಸೇಬಿಟ್ರು.

Z : playwin ಗಿಂತಾ ರೋಮಾಂಚನಕಾರಿಯಾಗಿದೆ ಇದು.

ನಾನು : ಅಲ್ವಾ ? ನೋಡು, ನನ್ನ ಪ್ರತಿಜ್ಞೆ ಮುರಿಲೂ ಇಲ್ಲ, ಪುಸ್ತಕ ನ ತಗೊಳ್ಳದೇ ಇರ್ಲೂ ಇಲ್ಲ. ಹೇಗೆ ?

Z : ಕಿಲಾಡಿ ;-)

ನಾನು : ಆಮೇಲೆ SLV corner ನಲ್ಲಿ ಗಡತ್ತಾಗಿ ನಾರ್ಥ್ ಇಂಡಿಯನ್ ಊಟ ತಿಂದು, ರಾತ್ರಿ ಹತ್ತು ಮುಕ್ಕಾಲು ಸಮಯದಲ್ಲಿ cane-o-la ದಲ್ಲಿ ginger lime sugarcane juice ಕುಡಿದು, ಅತ್ತೆ ಮನೆಯಲ್ಲಿ ರಾತ್ರಿ ಠಿಕಾಣಿ ಹೂಡಿದೆ. ವಿಶ್ವ ಯುವ ದಿನದಂದು ಅರಬಿಂದೋ ಮತ್ತು ಸ್ವಾಮಿ ವಿವೇಕಾನಂದರ ಪುಸ್ತಕ ನನ್ನ ಪಾಲಿಗೆ ಬಂದದ್ದು ಅರ್ಥಪೂರ್ಣ. ಅದನ್ನ ಓದಲು ಶುರು ಮಾಡ್ಬೇಕು. ಅವರ ಆದರ್ಶನ ನಾನೂ atleast in picograms ( one pico= 10^-12) ಮೈಗೂಡಿಸ್ಕೋಬೇಕು. ದೇಶ ಉದ್ಧಾರ ಮಾಡಕ್ಕೆ ಮೊದಲು ನಾನು ಉದ್ಧಾರ ಆಗ್ಬೇಕು ಅಂತೆಲ್ಲಾ ಯೋಚ್ನೆ ಮಾಡಿದ್ದೇನೆ. ಆಗತ್ತಾ ಇಲ್ವಾ ನೋಡ್ಬೇಕು !

Z : ಸಿಕ್ಕಾಪಟ್ಟೆ ಪುಸ್ತಕ ಇದೆ ಓದೋಕೆ ಹಾಗಾದ್ರೆ....

ನಾನು : ಹೂಂ....ನೋಡೋಣ ಯಾವಾಗ ಓದಿ, ಅರಗಿಸಿಕೊಂಡು ಮುಗಿಸುತ್ತೇನೆ ಇವೆಲ್ಲ ಅಂತ !

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...