ನಾನು : ಬೆಳಿಗ್ಗೆ ನಾಲ್ಕು ಘಂಟೆಗೆ ಎದ್ದು ರೆಡಿಯಿರಬೇಕೆಂದು ಮ್ಯಾನೇಜರ್ ಶಿವಾನಂದ್ ಅವರು ಹಿಂದಿನ ರಾತ್ರಿಯೇ ಹೇಳಿದ್ದರು.
Z : what ?
ನಾನು : ಹೂಂ...ನಾನು ಮೂರು ಘಂಟೆಗೆ ಅಲಾರಂ ಇಟ್ಟೆ. ಜೀವನದಲ್ಲಿರಲಿ, ಕನಸಲ್ಲೂ ನಾನು ಆ ಟೈಮ್ ನೋಡಿರಲಿಲ್ಲ...ಏಳೋ ಹಾಗೆ ಆಗೋಯ್ತಲ್ಲ ಅಂತ ಕೊರಗ್ತಿದ್ದೆ. To be precise, ಒಂದೇ ಕಣ್ಣಲ್ಲಿ ಅಳುತ್ತಿದ್ದೆ. ಅರುಣಾಚಲೇಶ್ವರ ದೇವಾಲಯದ ೨೪ ಎಕರೆ ಸುತ್ತಿ ಸಾಕಾಗಿತ್ತು ಆದ್ದರಿಂದ ಆ ಭೂತ ಬಂಗಲೆಯಲ್ಲಿ ಬೇಗ ನಿದ್ದೆ ಹತ್ತಿತು. ಬೆಳಿಗ್ಗೆ ಮೂರಕ್ಕೆ ಅಲಾರಂ ಹೊಡಿಯಿತು. ನಾನು " ಅಮ್ಮಾ...ಮೂರು ಘಂಟೆ..."ಅಂತ ಅವರನ್ನ ಎಬ್ಬಿಸಿ, ಅಲಾರಂ ಆಫ್ ಮಾಡಿ ಮತ್ತೆ ಮಲ್ಕೊಂಡೆ.
Z : ಆಹಾ...ಆದರ್ಶ ಮಗಳು. ಥೂ !
ನಾನು : ಏನ್ ಥೂ ಅಂತೀಯಾ ? ಮೂರು ಘಂಟೆಗೆಲ್ಲಾ ಏಳಕ್ಕೆ ಆಗಲ್ಲ ಆದ್ದರಿಂದ ಮೂರುವರೆಗೆ ಕಣ್ಬಿಟ್ಟೆ.
Z : ಯಾಕ್ ಏಳಕ್ಕಾಗಲ್ಲ ?
ನಾನು : ಗೂಬೆಗಳು ಕಾಫಿ ಕುಡಿಯೋ ಹೊತ್ತು ಅದು.ಮನುಷ್ಯರು ಎದ್ದರೆ ಅವಕ್ಕೆ disturb ಆಗಲ್ವಾ ? ಹೆಂಗೆ ಏಳಕ್ಕೆ ಆಗತ್ತೆ ?
Z : ಮೂರುವರೆಗೆ ಗೂಬೆಗಳು ಏನ್ ಮಾಡ್ತಿರತ್ವೆ ?
ನಾನು : ಕಾಫಿ ಕುಡಿದು ಮುಗಿಸಿರುತ್ತವೆ.
Z : ಸರಿಹೋಯ್ತು. ಆಮೇಲೆ ?
ನಾನು :ಬಿಸಿ ನೀರು ಬರುತ್ತಿತ್ತು ಪುಣ್ಯಕ್ಕೆ.ನೀರು actually ನಮ್ಮ ಮನೆ ನೀರಿನ ಥರಾ ನೇ ಇತ್ತು.ಆದ್ರೆ ನಲ್ಲಿಯಲ್ಲಿ ನೀರು ಸಿರಿಂಜ್ ಇಂದ ಇಂಜೆಕ್ಷನ್ trickle ಆಗೋ ಥರ trickle ಆಗ್ತಿತ್ತು.
Z : ಸಿರಿಂಜ್ ಸ್ನಾನ ಅನ್ನು.
ನಾನು : ಹೂಂ. ನಾವು ತಿರುವಣ್ಣಾಮಲೈ ಬಿಟ್ಟಮೇಲೆ ನನಗೊಂದು ವಿಷಯ flash ಆಯ್ತು.
Z : ಏನು ?
ನಾನು :ಜಲೇಬಿನಾಡಲ್ಲೂ ನಮ್ಮ ಕಾವೇರಿ ನೇ ಇರೋದು ಅಂತ :)
Z : ವಾಆಹ್ !! ಬುದ್ಧಂಗೆ ಜ್ಞಾನೋದಯ ಆದ್ಮೇಲೆ ನಿಂಗೆ ನೋಡು ಜ್ಞಾನೋದಯ ಆಗಿದ್ದು. ;-)
ನಾನು :ಓಯ್ !!!
Z : ಸಾರಿ ಸಾರಿ...continue.
ನಾನು :ಹೂಂ... ಲಗೇಜೆಲ್ಲಾ ಮತ್ತೆ ಹೊತ್ತುಕೊಂಡು ಹೊರಟ್ವಿ. ಅಂದು ನಾವು ಚಿದಂಬರಂ ಮತ್ತು ತಿರುನಲ್ಲಾರ್ ನೋಡಿಕೊಂಡು ಕುಂಭಕೋಣಂ ನಲ್ಲಿ ತಂಗಬೇಕಿತ್ತು.
Z : i see. ಆಮೇಲೆ ?
ನಾನು :ಬೆಳಿಗ್ಗೆ ಅಣ್ಣಾ ಮಲೈ ಹೇಗೆ ಕಾಣತ್ತೆ ಅಂತ ನೋಡಲು ಹಪಹಪ ಅಂತಿದ್ದೆ. ಆದ್ರೆ ಸೂರ್ಯ ಹುಟ್ಟೊ ಅಷ್ಟೊತ್ತಿಗೆ ನಾವು ತಿರುವಣ್ಣಾಮಲೈ ಬಿಟ್ಟುಬಿಟ್ಟಿದ್ದೆವು.
Z : :(
ನಾನು : ಹಾಡು ಹಗಲಲ್ಲಿ, ಹುಣಸೆ ಮರದ ಕೆಳಗೆ ಕೂತು ತಿಂಡಿ ತಿಂದೆವು. ಅಮ್ಮಾ ಮತ್ತೆ ಇನ್ನಿತರರು ಹುಣಸೆ ಕಾಯಿ ಆರಿಸಿಕೊಂಡರು ಬೇರೆ.
Z : ರಾಮಾ....ಆಮೇಲೆ ?
ನಾನು : ಚಿದಂಬರಂ ತಲುಪೋ ಹೊತ್ತಿಗೆ ಹನ್ನೊಂದಾಗಿತ್ತು. ಹನ್ನೆರಡಕ್ಕೆ ದೇವಸ್ಥಾನ ಕ್ಲೋಸ್.ನಾವು ನಟರಾಜನ್ನ ನೋಡಿದ್ವಿ. Mr. ನಟರಾಜ ಅವರು ಆನಂದ ತಾಂಡವ pose ನಲ್ಲಿ ಆನಂದವಾಗಿ ನಾಟ್ಯವಾಡುತ್ತಾ ಇದ್ದಾರೆ. ದೊಡ್ಡ ನಟರಾಜ ಮೂರ್ತಿ. ಅದನ್ನ ನೋಡಿದರೆ ನಮಗೂ ಕುಣಿಬೇಕು ಅನ್ನಿಸತ್ತೆ. ಪ್ರದಕ್ಷಿಣೆ ಮಾಡಿ ನಮಸ್ಕರಿಸಿ ಏಳ್ತಿವಿ...ಬಾಗಿಲು ಮುಚ್ಚಿದ್ದಾರೆ !!!!!ದರ್ಶನ ಆಗಿದ್ದು ನಮ್ಮ ಪುಣ್ಯ. also, 4೦ ಎಕರೆ ದೇವಸ್ಥಾನ ಅದು. ನೋಡಕ್ಕೆ ಅಗ್ಲಿಲ್ಲ :( More than anything, ನಾನು ಚಿದಂಬರ ರಹಸ್ಯದ ಬಗ್ಗೆ ಅಲ್ಲಿನ ಅರ್ಚಕರ ಹತ್ತಿರ discuss ಮಾಡಬೇಕಿತ್ತು. ಏನೂ ಆಗ್ಲಿಲ್ಲ.ಚಿದಂಬರ ರಹಸ್ಯ ರಹಸ್ಯವಾಗಿಯೇ ಉಳಿಯಿತು. [10 bucket ಕಣ್ಣೀರು :( :( :( ] ಅಲ್ಲಿನ ನೃತ್ಯ ಸಭಾ ಅನ್ನೋ ಮಂಟಪ ಅಂತು ಕುಸುರಿ ಕೆತ್ತನೆಗಳಿಂದ ತುಂಬಿ ಹೋಗಿತ್ತು. ಕಣ್ತುಂಬ ನೋಡಕ್ಕೂ ಟೈಂ ಇರಲಿಲ್ಲ. ಆಕಾಶ ಲಿಂಗದ ರುದ್ರಾಭಿಷೇಕ ಮತ್ತು ಮಹಾ ಮಂಗಳಾರತಿ ನೋಡಿದ್ವಿ. Mrs. ನಟರಾಜ ಕೂಡಾ smile ಕೊಟ್ಟುಕೊಂಡು photogenic ಆಗಿದಾರೆ. ಆದ್ರೆ photography prohibited.
Z : :-) ಆಕಾಶ ಲಿಂಗ ಅಂದ್ರೆ ಏನು ?
ನಾನು : ತಿರುವಣ್ಣಾಮಲೈ ಕಥೆ ಹೇಳಿದಾಗ ನಾನು ಪಂಚಭೂತಗಳ ರೂಪದಲ್ಲಿ ಈಶ್ವರ ಜಲೇಬಿನಾಡಲ್ಲಿ ನೆಲೆಸಿದ್ದಾನೆ ಅಂದಿದ್ದೆನಲ್ಲಾ ?
Z : ಹೂಂ....
ನಾನು :ಆಕಾಶ ನೂ ಪಂಚಭೂತಗಳಾಲ್ಲಿ ಒಂದಲ್ವಾ ? ಇಲ್ಲಿರುವ ಲಿಂಗ ಆಕಾಶ ನ ಪ್ರತಿನಿಧಿಸುತ್ತದೆ.
Z : ಓಹ್ ಹೋ...
ನಾನು :ಆಹ್ ಹಾ.....
Z : ಆಮೇಲೆ ?
ನಾನು : ಈ ದೇವಸ್ಥಾನದ ಗರ್ಭಗುಡಿಯ ಮೇಲಿರುವ ಗೋಪುರವನ್ನ ಚಿನ್ನದ ತಟ್ಟೆಗಳಲ್ಲಿ ಮಾಡಲಾಗಿದೆ. ನಟರಾಜನು ಯೋಗ ರಹಸ್ಯಗಳನ್ನು ಪತಂಜಲಿ ಮಹರ್ಷಿ ಮತ್ತಿತರರಿಗೆ ನೃತ್ಯ ಸಭಾ ಅನ್ನೋ ಮಂಟಪದಲ್ಲಿ ನಾಟ್ಯ ಮಾಡುತ್ತಾ ವಿವರಿಸದನಂತೆ. ಈಗಲೂ ನಟರಾಜನಿಗೆ ನೃತ್ಯ ಸೇವೆ ಎಲ್ಲ ಈ ಸಭೆಯಲ್ಲೇ ನಡೆಯುತ್ತದೆ. ಗರ್ಭಗುಡಿಯ ಮಂಟಪವನ್ನ ಚಿತ್ಸಭಾ ಎಂದು ಕರೆಯುತ್ತಾರೆ. ಇನ್ನೂ ಮೂರ್ನಾಲ್ಕು ಮಂಟಪಗಳಿವೆ. ಹೆಸರು ಮರ್ತೋಗಿದೆ. ಆಮೇಲೆ Mr. Ranganatha ಅವರು ಈಶ್ವರನಿಗೆ company ಕೊಡಕ್ಕೆ ಗೋವಿಂದರಾಜ ಅನ್ನೋ ಹೆಸರಲ್ಲಿ ಚಿದಂಬರದಲ್ಲಿ ಬಂದು ನೆಲೆಸಿದ್ದಾರೆ .(actually ಮಲಗಿದ್ದಾರೆ)
Z : ಹ್ಮ್ಮ್..... ಆಮೇಲೆ ?
ನಾನು : ನನಗೆ ಸಖತ್ ಬೇಜಾರಾಗಿದೆ ಅಂತ ಅಣ್ಣನಿಗೆ ಗೊತ್ತಾಯ್ತು. ಅದಕ್ಕೆ ಅಣ್ಣ " ಬೇಜಾರ್ ಮಾಡ್ಕೋಬೇಡಾ...ಚಿದಂಬರಕ್ಕೆ ಮತ್ತೆ ನಾನೇ ಕಾರಲ್ಲಿ ಕರ್ಕೊಂಡ್ ಬರ್ತಿನಿ, ಅರ್ಚಕರನ್ನ mic ಹಿಡಿದು interview ಮಾಡಿ ನೀನೆ ಚಿದಂಬರ ರಹಸ್ಯ ಭೇದಿಸುವಂತೆ. promise" ಅಂದ್ರು.ಆಮೇಲೇ ನಾನು ಹಲ್ಲು ಬಿಟ್ಟು ನಕ್ಕಿದ್ದು. ವಾಪಸ್ ಬಂದು ನಾವೆಲ್ಲಾ ಬಸ್ ಹತ್ತಿದೆವು. ಆದರೆ ನಮ್ಮಲ್ಲಿ ಒಬ್ಬರು ದಾರಿತಪ್ಪಿ ಬೇರೆ ಎಲ್ಲೋ ಹೊರಟು ಹೋಗಿದ್ದರು. ಅವರನ್ನು ಹುಡುಕಿ ಕರೆದಂದು ನಾವು ಹೊರಡುವಷ್ಟರಲ್ಲಿ ಒಂದು ಘಂಟೆ ತಡವಾಯ್ತು.
ತಿರುನಲ್ಲಾರಿನ ದೇವಸ್ಥಾನ ಕೂಡಾ ಹನ್ನೆರಡಕ್ಕೆ ಕ್ಲೋಸ್. ಮತ್ತೆ ತೆರೆಯುವುದು ನಾಲ್ಕು ಘಂಟೆ. ಸರಿ ನಾವು ಪೂಂಪುಹಾರ್ ಅನ್ನುವ ಜಾಗದಲ್ಲಿ, ಬೀಚ್ ಬಳಿ ನಿಲ್ಲಿಸಿ ಊಟ ಮಾಡಿದೆವು.ಇನ್ನು ೩ ಘಂಟೆ ಸಮಯ ಇತ್ತು.
Z : ಬೀಚ್ ಹೇಗಿತ್ತು ?
ನಾನು : ಶಾಂತವಾಗಿತ್ತು. ಆದರೆ ದೊಡ್ಡ ದೊಡ್ಡ, ಚೂಪಾದ ಬಂಡೆಗಳಿದ್ದವು ಆದ್ದರಿಂದ ಬೀಚ್ ಹತ್ತಿರ ಯಾರೂ ಹೋಗಲಾಗಲಿಲ್ಲ.
Z : :(
ನಾನು : ಆದ್ರೆ ಅಲ್ಲೊಂದು art gallery ಇತ್ತು. ಅಲ್ಲಿ ಇಳಾಂಗೊ ಎಂಬ ತಮಿಳು ಕವಿ ರಚಿಸಿದ "ಸಿಲಾಪತ್ತಿಕಂ" ಎಂಬ ಕಾವ್ಯದ ಕಥೆಯನ್ನು ಗೋಡೆಗಳ ಮೇಲೆ ಕೆತ್ತಿದ್ದಾರೆ. ಕಥಾನಾಯಕಿ ಕನ್ನಗಿ, ನಾಯಕ ಕೋವಲನ್. ಇದೊಂದು folk ಕಥೆ. ಎಷ್ಟು ಚೆನ್ನಾಗಿ ಕೆತ್ತಿದ್ದಾರೆ ಅಂದ್ರೆ..........
Z : ಫೋಟೋ ತೆಗ್ದ್ಯಾ ?
ನಾನು : ಹೂಂ. ಆದ್ರೆ ಓದುಗರೆ ದಯವಿಟ್ಟು ಕ್ಷಮಿಸಿ, ನಾನು ಈ ಗ್ಯಾಲೆರಿಯ ಯಾವ ಫೋಟೋವನ್ನು ಇಲ್ಲಿ ಹಾಕಲಾರೆ. ಉದ್ದೇಶ ಇಷ್ಟೇ. ಇದನ್ನ ಇಲ್ಲಿ ಅಂತರ್ಜಾಲದಲ್ಲಿ ನೋಡಿಬಿಟ್ಟರೆ ಯಾರೂ ಆ ಜಾಗಕ್ಕೆ ಹೋಗುವುದೇ ಇಲ್ಲ...ಅಯ್ಯೋ..."ನೋಡಿದ್ದೀವಲ್ಲ" ಅನ್ನಿಸುತ್ತದೆ. ಆದರೆ ನಾವು ಹಾಗೆ ಮಾಡಿದರೆ ಕಲೆಯನ್ನು, ಕಲಾವಿದರನ್ನು ಪ್ರೋತ್ಸಾಹಿಸಿದ ಹಾಗಾಯಿತೇ ? ಮತ್ತು gallery ಯ ಸ್ಥಾಪನೆಯ ಉದ್ದೇಶವೇ ನೆರವೇರುವುದಿಲ್ಲ. ಕಲೆಯನ್ನು patronize ಮಾಡಲು ದೇಶ ಭಾಷೆಗಳ ಹಂಗೇಕೆ ಅಲ್ಲವಾ ? ಆದ್ದರಿಂದ ಅಲ್ಲಿಗೆ ಹೋಗಿ ನಾವು ಆ ಕಲೆಯನ್ನು ನೋಡಿಯೇ ಪ್ರೋತ್ಸಾಹಿಸಬೇಕು. ಪ್ರವಾಸಿಗರು ಮುಂದೊಮ್ಮೆ ಹೋಗುವಾಗ ಈ ಜಾಗಕ್ಕೆ ತಪ್ಪದೇ ಹೋಗಿ. ಶಾಂತ ಜಾಗ ಇದು. ನಿಜವಾಗಲೂ ತುಂಬಾ ಚೆನ್ನಾಗಿದೆ.
Z : ಹೋಗ್ಲಿ...ಕಥೆಯಾದ್ರೂ ಹೇಳು.
ನಾನು : ಓಕೆ. ಕೋವಲನ್ ಪಾಂಡ್ಯ ರಾಜ್ಯದ ಒಬ್ಬ ಸೈನಿಕ. ಕನ್ನಗಿ ಗೂ ಕೋವಲನ್ ಗೂ ಮದುವೆ ಆಗುತ್ತದೆ. ಅದೇ ಸಮಯದಲ್ಲಿ ಮಾಧವಿ ಎಂಬ ನರ್ತಕಿ ರಾಜನ ಆಸ್ಥಾನದಲ್ಲಿ ಆಶ್ರಯ ಸಂಪಾದಿಸುವುದಲ್ಲದೇ, ಕೋವಲನ್ ನ ಹೃದಯ ಸಾಮ್ರಾಜ್ಯವನ್ನೂ ಆಕ್ರಮಿಸಿಕೊಳ್ಳುತ್ತಾಳೆ. ಕನ್ನಗಿಯನ್ನು ಬಿಟ್ಟು ಕೋವಲನ್ ಮಾಧವಿಯ ಮನೆಯಲ್ಲಿ ವಾಸ ಶುರುಮಾಡುತ್ತಾನೆ. ಆನಂತರ ಮಾಧವಿಯ ನಿಜ ಬಣ್ಣ ಬಯಲಾಗಿ ಅವನು ಮಾಧವಿಯನ್ನು ತೊರೆಯುತ್ತಾನೆ. ಕನ್ನಗಿಯ ಬಳಿಬಂದಾಗ ಅವರಿಗೆ ಕಡುಬಡತನ. ಕನ್ನಗಿಯ ಚಿನ್ನದ ಕಾಲಂದುಗೆ ಒಂದನ್ನು ಅಕ್ಕಸಾಲಿಗನಲ್ಲಿ ಕೋವಲನ್ ಅಡ ಇಡುತ್ತಾನೆ. ಅದೇ ಸಮಯದಲ್ಲಿ ರಾಜನ ಮಗಳ ಕಾಲಂದುಗೆ ಅಪಹರಣವಾಗಿರುತ್ತದೆ. ಅದು ಕನ್ನಗಿಯ ಕಾಲಂದುಗೆಯ ಹಾಗೇ ಇರುತ್ತದೆ. ವಿಚಾರಣೆ ಇಲ್ಲದೆಯೇ ಕೋವಲನ್ ಕಳ್ಳನೆಂದು ಭಾವಿಸಿ ಅವನ ಶಿರಚ್ಛೇದ ಮಾಡಲಾಗುತ್ತದೆ. ವಿಷಯ ತಿಳಿದ ಕನ್ನಗಿ ಆಸ್ಥಾನದಲ್ಲಿ ಬಂದು ಗೋಳಾಡಿ ತನ್ನ ಇನ್ನೊಂದು ಕಾಲಂದುಗೆ ತೋರಿಸುತ್ತಾಳೆ. ಅದನ್ನು ಪರೀಕ್ಷಿಸಿ ನೋಡಿದಾಗ ಅದು ರಾಜಕುಮಾರಿಯದ್ದಲ್ಲವೆಂದು, ಕೋವಲನ್ ನಿರಪರಾಧಿ ಎಂದು ಸಾಬೀತಾಗುತ್ತದೆ. ಆದರೆ ಕೋವಲನ್ ಸತ್ತುಹೋಗಿರುತ್ತಾನೆ. ಕನ್ನಗಿ ತನ್ನ ಪಾತಿವ್ರತ್ಯ, ಸ್ವಾಮಿನಿಷ್ಟೆ ಮತ್ತು ಪತಿಭಕ್ತಿಯನ್ನು ಮೆರೆದಿದ್ದಾಳೆ.
Z : ಪಾಪ ಅಲ್ವಾ ? nice story.
ನಾನು : Very touchy too.ಅದಕ್ಕೇ ಹೇಳಿದ್ದು ಎಲ್ಲರೂ ಒಮ್ಮೆ ಹೋಗಿ ನೋಡಿ ಬನ್ನಿ ಅಂತ. ಸಿಕ್ಕಾಪಟ್ಟೆ ಚೆನ್ನಾಗಿದೆ ಜಾಗ.
ಸರಿ ಅಲ್ಲಿಂದ ಹೊರಟು ತಿರುನಲ್ಲಾರ್ ಗೆ ಬಂದೆವು. ಅಲ್ಲಿ Mr. ಶನೈಶ್ಚರ (not ಶನೇಶ್ವರ...ಅದು ತಪ್ಪು ಪದಬಳಕೆ) ಅವರ ದೇವಸ್ಥಾನವಿದೆ. ಜೊತೆಗೆ ದರ್ಭಾರಣ್ಯೇಶ್ವರ ಸ್ವಾಮಿ ದೇವಾಲಯವಿದೆ. ನಳ ಮಹಾರಾಜ ಶನಿಕಾಟ ತಡೆಯಲಾಗದೇ ಈ ಲಿಂಗದ ಹಿಂದುಗಡೆ ಬಚ್ಚಿಟ್ಟುಕೊಂಡನಂತೆ. ಅವನನ್ನು ಅಟ್ಟಿಸಿಕೊಂಡು ಬಂದ ಶನೈಶ್ಚರನಿಗೆ ಇಲ್ಲಿನ ಮಹಿಮೆ ಇಂದ ಈ ದೇವಾಲಯದ ಒಳಗೆ ಪ್ರವೇಶ ನೇ ಮಾಡಕ್ಕೆ ಆಗ್ಲಿಲ್ಲವಂತೆ. ಅದಕ್ಕೆ ಅವನು ಹೊರಪ್ರಾಕಾರದಲ್ಲಿಯೇ strand ಆಗಿಹೋದ.
Z : ಪಾಪ..
ನಾನು : ಯಾರು ?
Z : ನಳ.
ನಾನು :ಹೂಂ. ಈ ಲಿಂಗ ಮತ್ತು ಶನೈಶ್ಚರ ಸಿಕ್ಕಾಪಟ್ಟೆ powerful. ಇದು ನವಗ್ರಹ ದೇವಸ್ಥಾನಗಳಲ್ಲಿ ಒಂದು. ಈ ಲಿಂಗವನ್ನು ಬ್ರಹ್ಮ ಸ್ಥಾಪಿಸಿದ್ದು. ಜೊತೆಗೆ ಇಲ್ಲಿ ಬ್ರಹ್ಮದಂಡತೀರ್ಥ ಇದೆ. ಇದರಲ್ಲಿ ಮಿಂದರೆ ಸಕಲ ರೋಗಗಳೂ ನಿವಾರಣೆ ಆಗುತ್ತದಂತೆ. ಆದರೆ ಒಳಗೆ ಪ್ರವೇಶ ಇಲ್ಲ. ಜೊತೆಗೆ ಮಿಕ್ಕ ದೇವರುಗಳಿಗೆ ಒಂದೊಂದು ತೀರ್ಥವಿದೆ. ನಳಮಹರಾಜ ಕೂಡ ಒಂದು ತೀರ್ಥವನ್ನು ಕಟ್ಟಿಸಿದ್ದಾನೆ. ಅದನ್ನು ನಳ ತೀರ್ಥ ಎಂದು ಕರೆಯುತ್ತಾರೆ. ಇದು ಸಖತ್ ಬ್ಯುಸಿ ದೇವಸ್ಥಾನ. ಚೆನ್ನಾಗಿ ದರ್ಶನ ಆಯ್ತು. ಇಲ್ಲಿನ ದರ್ಭಾರಣ್ಯೇಶ್ವರ ಪಚ್ಚೆಲಿಂಗಕ್ಕೆ ವಿಶೇಷ ಪೂಜೆ ಇರುತ್ತದೆ. ಈ ಲಿಂಗವನ್ನ್ನು ತ್ಯಾಗರಾಜ ದೇವ ಎಂದೂ ಕರೆಯುತ್ತಾರೆ.
Z : i see.... ಆಮೇಲೆ ?
ನಾನು :ಇದನ್ನು ನೋಡಿಕೊಂಡು ನಾವು ಕುಂಭಕೋಣಕ್ಕೆ ಪ್ರಯಾಣ ಮಾಡಿದ್ವಿ. ದಾರಿಯಲ್ಲಿ ಬಸ್ಸಿನ ಲೈಟ್ ತೊಂದರೆ ಕೊಟ್ಟೂ...ಎಲ್ಲರೂ ಇಳಿದು ಪರೀಕ್ಷಿಸಿ, ಒಂದರ್ಧ ಘಂಟೆ ಕಾಲ ಬಸ್ ನಿಂತು ...ಎಲ್ಲಾ ಆಗಿ ಕುಂಭಕೋಣಮ್ ಮುಟ್ಟುವ ಹೊತ್ತಿಗೆ ರಾತ್ರಿ ಒಂಭತ್ತು. ಲಾಡ್ಜ್ ಮತ್ತೊಂದು ಭೂತಬಂಗಲೆ. ಬಿಸಿನೀರೂ ಇರದ, ನಿಜವಾದ ಭೂತ ಬಂಗಲೆ. ಈ ಸರ್ತಿ ನಮ್ಮ ರೂಮಿದ್ದಿದ್ದು ನಾಲ್ಕನೇ ಫ್ಲೋರು. As usual, no lift. no room boys. ಸಾಕುಬೇಕಾಗಿ ಹೋಯ್ತು ಲಗೇಜ್ ಸಾಗಿಸೋ ಅಷ್ಟರಲ್ಲಿ. ಊಟ ಮಾಡಿ ಮಲಗಿದ್ದಷ್ಟೇ ಗೊತ್ತು.
Z : ಫೋಟೋಸ್ ???
ನಾನು : ಸ್ಲೈಡ್ ಶೋ ಇಲ್ಲಿದೆ...ನೋಡಿ ಮಜಾ ಮಾಡಿ.
ಜೀವನದೊಂದಿಗಿನ ನಮ್ಮ ಮಾತು lifetime ! ಇದರಲ್ಲಿ incoming -ಊ free outgoing -ಊ free !
ನನ್ನ ज़िंदगीಯೊಂದಿಗಿನ nonstop ಗುಸುಗುಸುವನ್ನು ಇಲ್ಲಿ ಬಿಚ್ಚಿಟ್ಟಿದ್ದೇನೆ.
Subscribe to:
Post Comments (Atom)
ಉತ್ತರಾಯಣ ೩
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ನಾನು : There is always a next time. Z : ಹೌದಾ ? ನಾನು : ಹೌದು. Z : ಪ್ರತೀ ಸಲವೂ ಹೀಗೆ ಆದರೆ ಗತಿಯೇನು ? ನಾನು : ಅದಕ್ಕೆ ನಿನ್ನ pessimistic ಅಂತ ಬೈಯ್ಯ...
-
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಬ್ಲಾಗಿನ ಹುಟ್ಟು ಹಬ್ಬ ಮತ್ತು ಹೊಸ ವರ್ಷ ಯಾವಾಗ್ಲು ಒಟ್ಟಿಗೆ ಬರತ್ತೆ. ಆದರೆ, ಮತ್ತೆ ಅದೇ flash back ಗೆ ಹೋಗಿ, ಅದೇ ...
4 comments:
ma,
chennagide :)
good info
ನಳಮಹಾರಾಜನಿಗೆ ಬೆನ್ನು ಹತ್ತಿದ್ದು ಕಲಿಪುರುಷ ಅಲ್ವ? ಶನಿ ಎಲ್ಲಿಂದ ಬಂದ?
ಆಕರಗಳು:
ನಳ
ದಮಯಂತಿ
ನಳ-ದಮಯಂತಿ ಭಾಗ ೧
ನಳ-ದಮಯಂತಿ ಭಾಗ ೨
ನಳ-ದಮಯಂತಿ ಭಾಗ ೩
ಅಷ್ಟು ನಿಧಾನವಾಗಿ ಹಾಸಿಗೆಯಿಂದ ಎದ್ದೋರು... ಚಿದಂಬರಂನಲ್ಲಿ ಪ್ರದಕ್ಷಿಣೆ ಮಾಡಿ ನಮಸ್ಕಾರ ಮಾಡಿದಾಗ ಬಹುಶಃ ನಿದ್ದೆಹೋಗಿರ್ಬೇಕು... ಅದ್ಕೇ ಬಾಗ್ಲು ಮುಚ್ಚಿದ್ದು ಗೊತ್ತಾಗ್ಲೇ ಇಲ್ಲಾಂತ ಕಾಣ್ಸುತ್ತೆ. ಆದರೆ, ಆ ಹತ್ತು ಬಕೆಟ್ ಕಣ್ಣೀರಿನಲ್ಲೂ ಕಾವೇರಿ ನೀರೇ ಇದ್ದದ್ದಾದರೆ, (10 ಬಕೆಟ್ ಕಾವೇರಿ ನೀರು ಕರ್ನಾಟಕದಿಂದ ಬಂತಲ್ಲಾ ಅಂತ) ಕರುಣಾನಿಧಿ ನಿಮಗೆ ಜೈಕಾರ ಹಾಕ್ತಾರೆ.
ಮತ್ತೆ ನಮಗೆ ಗೊತ್ತಿರೋ ಪ್ರಕಾರ, ಇಲ್ಲಿ ಚಿದಂಬರ ರಹಸ್ಯ ಬಯಲು ಮಾಡಬೇಕಿದ್ದರೆ ಒಂದಷ್ಟು ಹಣ ನೀಡಬೇಕಾಗುತ್ತದೆ. ಆದ್ರೆ, ರಾಜಕಾರಣಿಗಳನ್ನೆಲ್ಲಾ ಹಿಡಿದು ತದುಕಿದರೆ ಸಾಕಷ್ಟು ಚಿದಂಬರ ರಹಸ್ಯಗಳು ಬಯಲಾಗುತ್ತವೆ ಮತ್ತು ಈಗಾಗ್ಲೇ ಸತ್ಯಂನ ಚಿದಂಬರ ರಹಸ್ಯವೂ ಬಯಲಾಗ್ಬಿಟ್ಟಿದೆ. ಆದ್ರೂ ಮೊನ್ನೆಯ ಮಟ್ಟಿಗಂತೂ ನೀವು ನಮಸ್ಕಾರ ಹಾಕ್ದಾಗ ನಿದ್ದೆ ಹೋಗಿದ್ರಾ ಅನ್ನೋದೇ ಚಿದಂಬರ ರಹಸ್ಯವಾಗ್ಬಿಟ್ಟಿದೆ ಬಿಡಿ.
ನಿಮ್ಮ ಇಡೀ ಆಲ್ಬಮ್ ಜಾಲಾಡಿಸಿದರೂ ನಿಮ್ಮ ಇನ್ನೊಂದು ಕಣ್ಣು ನೋಡೋದಿಕ್ಕೆ ಸಿಗಲಿಲ್ವಲ್ರೀ!
Post a Comment