Monday, January 26, 2009

ಯೆಸ್ ! ಯೆಸ್ ! ಯೆಸ್ !! ಸೂರ್ಯಗ್ರಹಣ ನೋಡಿದೆ !

Z : ಆಹಾ ? ನೋಡೇಬಿಟ್ಯಾ ?

ನಾನು : ಯೆಸ್. ಕಡೆಗೂ ನೋಡೇಬಿಟ್ಟೆ.

Z :congratulations !

ನಾನು :thank you thank you.

Z : ಅಮ್ಮ ಅಣ್ಣ ಏನೂ ಅನ್ನಲಿಲ್ವಾ ?

ನಾನು :ಹೆಹೆ...ಅವ್ರೂ ಬಂದು ನೋಡಿದ್ರು.

Z : what ?

ನಾನು :ಹೂಂ...ನನ್ನ ನಂಬು !

Z : ಏನ್ ಈ ಸರ್ತಿ ಬಂದು ನೋಡೇಬಿಟ್ಟರಲ್ಲಾ?

ನಾನು :ಈ ಸರ್ತಿ ನಮ್ಮ ಯಾವ ರಾಶಿಗೂ ಗ್ರಹಣ ಹಿಡಿದಿರಲಿಲ್ಲ :) :):)

Z : ಹೆಹೆಹೀ....

ನಾನು : ಅಣ್ಣ ಕಡೇಲಿ ಬಂದ್ರು...ಅಮ್ಮ ಮಧ್ಯದಲ್ಲಿ ಬಂದು ನೋಡಿ..."ವಾಆಆಆಅಹ್ !! " ಅಂದ್ರು , ಅಪರ್ಣ ಗ್ರಹಣದ ಎಲ್ಲಾ ಸ್ಟೇಜುಗಳ ವೀಕ್ಷಣೆಗೆ ನಾನು ಕರೆದಾಗ ಉಪಸ್ಥಿತಳಾಗುತ್ತಿದ್ದಳು.ಯಾಕಂದ್ರೆ ಅವಳು ಡಾಕ್ಯುಮೆಂಟರಿ ಚಿತ್ರವೊಂದನ್ನು ನೋಡುತ್ತಿದ್ದಳು.

ನಾನಂತೂ ಹಠ ಹಿಡಿದಿದ್ದೆ. ಈ ಸರ್ತಿ ಏನಾದ್ರೂ ಸರಿ, ನಾನು ಪ್ಲಾನೆಟೇರಿಯಂ ಗೆ ಹೋಗಿ ಗ್ರಹಣ ನೋಡೋದೇ ಅಂತ. ಅಮ್ಮ ಮಾತ್ರ "ರಷ್ ಸಿಕ್ಕಾಪಟ್ಟೆ ಇರತ್ತೆ...ಇವತ್ತು ಮೋಡ ಇಲ್ಲ,ಇಲ್ಲೇ ನೋಡು, ಬೇಡಾ ಅನ್ನಲ್ಲ" ಅಂದರು. ಅದೂ ಸರಿ ಅನ್ನಿಸಿ ನಾನೂ ಹೂ ಅಂದು, ಕ್ಯಾಮೆರಾ ರೆಡಿ ಮಾಡಿಕೊಂಡೆ.

Z : ಹೋ...ತಾರಾಲಯದ ಕಡೆ ಸವಾರಿ ಮಾಡ್ಬೇಕೂ ಅಂತ ಇದ್ರಾ ತಾವು ?

ನಾನು : ಯೆಸ್.ಆಮೇಲೆ destination ಮನೆ ಅಂತಾ ನೇ ಡಿಸೈಡ್ ಮಾಡಿದೆ.

Z : ಗ್ರಹಣ ಶುರುವಾದಾಗ ಹೇಗಿತ್ತು ವಾತಾವರಣ ?

ನಾನು : Roadನಲ್ಲಿ ನನ್ನ ಬಿಟ್ಟು ಇನ್ಯಾವ ನರಪಿಳ್ಳೆ ನೂ ಇರಲಿಲ್ಲ. ಗ್ರಹಣ ಶುರುವಾದ ಎರಡು ನಿಮಿಷಕ್ಕೆ ಎರಡು ಬೈಕುಗಳಲ್ಲಿ ಇಬ್ಬರು ಹುಡುಗರು ನಮ್ಮ ರೋಡು ಗಸ್ತು ಹೊಡೆದರು. ನನಗೆ ಯಾಕೋ "ಚಿದಂಬರ ರಹಸ್ಯ" ಕಾದಂಬರಿಯ ಕ್ರಾಂತಿಕಾರಿ ಹುಡುಗರು ನೆನಪಾದರು.ಪ್ರಾಣಿ ಪಕ್ಷಿಗಗಳ behaviour ಸೂಕ್ಷ್ಮವಾಗಿ ಗಮನಿಸಿದೆ...looked normal.ಮನುಷ್ಯರು ಬಾಗಿಲು ಬಡಚಿಕೊಂಡು ಕೂತಿದ್ದರು ಬಿಟ್ಟರೆ, nature was just as normal as any afternoon.

Z :ಆಮೇಲೆ ?

ನಾನು : ನಾನು ಗ್ರಹಣದ ಪ್ರತಿಕ್ಷಣವನ್ನು ಆಸ್ವಾದಿಸುತ್ತಾ, ಫೋಟೋ ತೆಗೆಯಲು ಸೂಕ್ತ ಘಟ್ಟಗಳನ್ನು ಕಾಯುತ್ತಾಯಿದ್ದೆ..ನನಗೆ ಗ್ರಹಣ ಎಷ್ಟು ರೋಚಕ ಅನ್ನಿಸ್ತಪ್ಪಾ ಅಂದ್ರೆ...ಕಣ್ಣ ಮೇಲೆ X-ray film ಇಟ್ಟವಳು ಕೆಳಗಿಳಿಸಲೇ ಇಲ್ಲ !

Z : ಮತ್ತೆ ಫೋಟೋ ಹೇಗೆ ತೆಗೆದೆ ?

ನಾನು : ಫಿಲ್ಮ್ ಎಡಗೈಲಿ, ಬಲಗೈಲಿ ಕ್ಯಾಮೆರಾ...ಫಿಲ್ಮ್ ನಲ್ಲಿ ಕಾಣುತ್ತಿರುವ ಸೂರ್ಯನ ಲೆನ್ಸ್ ನಲ್ಲಿ ನೋಡಿ ಕ್ಲಿಕ್ಕಿಸುತ್ತಾ ಹೋದೆ. ಕೆಲವು shake ಆಗೋದ್ವು :( ಚೆನ್ನಾಗಿ ಬಂದಿದ್ದನ್ನ ಮಾತ್ರ upload ಮಾಡಿದಿನಿ. ನನಗೆ ವರ್ಷಾನುಗಟ್ಟಲೆಯಿಂದ ಆಸೆ ಇತ್ತು...ಸೂರ್ಯಗ್ರಹಣ ನೊಡ್ಬೇಕು, ಮತ್ತದರ ಫೊಟೊ ತೆಗೆಬೇಕು ಅಂತ..ನೆರವೇರ್ತು ಅದು ಇವತ್ತು. ಎಲ್ಲಿಲ್ಲದಷ್ಟು ಸಂತೋಷ ಆಗ್ತಿದೆ ನನಗೆ !

Z :ಪಡು...ಎಷ್ಟ್ ಸಂತೋಷ ಪಡ್ತಿಯೋ ಪಡು.

ನಾನು : thanks. ಕಳೆದ ವರ್ಷ ಆಗಸ್ಟ್ ಒಂದರಂದು ನಡೆದ ಸೂರ್ಯ ಗ್ರಹಣದಲ್ಲಿ ಆದ ಅವಾಂತರವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಆಮೇಲೆ, ಗ್ರಹಣ ನೋಡಲು ಮಿಸ್ಸ್ ಮಾಡಿಕೊಂಡವರು ಬೇಜಾರ್ ಮಾಡ್ಕೋಬೇಡಿ...ಇಲ್ಲಿದೆ ಫೋಟೋಸ್..ನೋಡ್ಬಿಡಿ :-)

10 comments:

ಕಟ್ಟೆ ಶಂಕ್ರ said...

ಗ್ರಹಣದ ಚಿತ್ರಗಳು ಚೆನ್ನಾಗಿದೆ.
ಜೊತೆಗೆ ಸಂಭಾಷಣೆ ಕೂಡ ರಸವತ್ತಾಗಿದೆ.
ಥ್ಯಾಂಕ್ಸ್ ಲಕ್ಷ್ಮಕ್ಕ.

ಕಟ್ಟೆ ಶಂಕ್ರ

ಅಂತರ್ವಾಣಿ said...

super kaNamma.. good wrk..

Karthik said...

Super agitu photos.. Thyaanks

ಪಾಲಚಂದ್ರ said...

ರಾತ್ರಿ ಅಮ್ಮ ಮನೆಯಿಂದ ಕಾಲ್ ಮಾಡಿ ಇವತ್ತು ಗ್ರಹಣ ಅಂದಮೇಲೆ ಗೊತ್ತಾಗಿದ್ದು. ಮೊದ್ಲೆ ಗೊತ್ತಾದ್ರು ಫೋಟೋ ತೆಗಿತಿದ್ನೊ ಇಲ್ವೊ. x-ray filmನಿಂದ ತೆಗೆದದ್ದು ಒಳ್ಳೆ ಉಪಾಯ. ಚಿತ್ರಗಳು ಚೆನ್ನಾಗಿವೆ..

ಸಿಮೆಂಟು ಮರಳಿನ ಮಧ್ಯೆ said...

ಚೆನ್ನಾಗಿದೆ ಸಾಹಸ..!

ಫೋಟೊ ಲೇಖನ ಎರಡೂ ಚೆನ್ನಾಗಿದೆ..!

ಅಭಿನಂದನೆಗಳು...

Parisarapremi said...

ಸಂತೋಷ. ಆದರೆ, ಇಷ್ಟೇ ಇಷ್ಟು ಗ್ರಹಣಕ್ಕೆ "ಎಕ್ಸ್ ರೇ" ಅವಶ್ಯವಿಲ್ಲವೆನಿಸುತ್ತೆ. ಬರಿಗಣ್ಣಿನಿಂದ ನೋಡಿದರೂ ಏನೂ ಆಗುವುದಿಲ್ಲ.

ಅಸತ್ಯ ಅನ್ವೇಷಿ said...

ಈಗ ಗೊತ್ತಾಯ್ತು. ನಮ್ಮೂರಲ್ಲಿ ಗ್ರಹಣವೇ ಯಾಕೆ ಕಾಣಿಸ್ಲಿಲ್ಲಾ ಅಂತ... ಎಲ್ಲಾ ನೀವೇ ನೋಡಿ ಖಾಲಿ ಮಾಡಿದ್ರಿ... ಅಷ್ಟೊತ್ತು ಸೂರ್ಯನ್ನ ಆಚೀಚೆ ಓಡಲು ಬಿಡದೆ ನಿಮ್ಮ ಛಾಯಾಳ ಜೊತೆಗೆ ಹಿಡ್ಕೊಂಡುಬಿಟ್ಟಿದ್ರಿ....

ಅದಿರ್ಲಿ, ನಿಮ್ಮ ಎಕ್ಸ್-ರೇ ಫಿಲ್ಮಿಗೆ ಏನೂ ಆಗಿಲ್ಲವಾ?

Harish - ಹರೀಶ said...

ಈ ಥರ ಟೈಮ್ ವೇಸ್ಟ್ ಮಾಡೋದಾ.. ನಾನಂತೂ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದೆ.. ಬೆಳಿಗ್ಗೆ ಪರೇಡ್ ನೋಡಿ, ಮಧ್ಯಾಹ್ನ ಗಡದ್ದಾದ ನಿದ್ದೆ ಹೊಡೆದು :-)

Greeshma said...

ಗ್ರಹಣದ ಫೋಟೋಗೆ ತುಂಬಾ ಥ್ಯಾಂಕ್ಸ್ :)
ಹಸಿವೆಯಲ್ಲಿ ಗ್ರಹಣ ಆಚರಿಸುತ್ತಿದ್ದ ನನಗೆ ನೋಡೋ ಉತ್ಸಾಹನೇ ಇರ್ಲಿಲ್ಲ.

Sandhya said...

chenngide ...

praanigaLella normal aagidwa...naanu normal aagirona ankondidde.....aadre nang tumba hasivagtha ittu avaga ....yenu tinnok bittirlilwalla maneli beligginda :(

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...