Monday, January 5, 2009

Journey to ಜಲೇಬಿನಾಡು- ಭಾಗ ೧

Z : what ?

ನಾನು : yes.

Z : ಎಲ್ಲಿದೆ ಜಲೇಬಿ ನಾಡು ?

ನಾನು : ತಮಿಳುನಾಡು ಮತ್ತು ಕೇರಳವನ್ನ ನಮ್ಮ ತಾತ ಮತ್ತು ನಮ್ಮ ಅಣ್ಣ (ಅಪ್ಪ) ಜಲೇಬಿ ನಾಡು ಅಂತ ಕರಿತಾರೆ.

Z : ಯಾಕೆ ?

ನಾನು : ತಮಿಳು ಮತ್ತು ಮಲಯಾಳಂ ಭಾಷೆಗಳ ಅಕ್ಷರ ಜಲೇಬಿ ಥರಾ ಇರತ್ತೆ ಅದಕ್ಕೆ.

Z : ವಾಆಆಆಆಆಆಆಆಆಆಆಆಆಹ್ ವಾಆಆಆಆಆಆಆಆಆಆಆಆಅಹ್ ವಾಆಆಆಆಆಆಅಹ್ !!!

ನಾನು : ಏನ್ ಬುದ್ಧಿ ಅಲ್ವಾ ತಾತನದ್ದು ?

Z : undoubtedly brilliant. :)

ನಾನು : Coming back, ನಾನು ಹಿಂದಿನ ಪೋಸ್ಟ್ ನಲ್ಲಿ ಹೇಳಿದ್ದ ಹಾಗೆ ನಾನು ಮತ್ತು ನಮ್ಮ ಕುಟುಂಬ ಹತ್ತು ದಿನಗಳ ದಕ್ಷಿಣ ಭಾರತದ ಪ್ರವಾಸಕ್ಕೆ (ಜಲೇಬಿ ನಾಡು from now on) ಹೋಗಿದ್ದೆವು. ಅದರ ಅನುಭವ ನ ನಿನಗೆ ಹೇಳಲೋ ಬೇಡವೋ ಅಂತ ಕವಡೆ ಹಾಕ್ಬೇಕು ಅಂತ ಇದ್ದೆ....ಆದ್ರೆ ಹೇಳದಿದ್ರೆ ನೀನು ಸುಮ್ನೆ ಬಿಡಲ್ಲ ಅಂತ ಹೇಳಕ್ಕೆ ಶುರು ಮಾಡ್ತಿನಿ.

Z : ಗುಡ್. ಈ ಥರ ಇರ್ಬೇಕು ನನ್ನ ಬಗ್ಗೆ ಭಯ ಭಕ್ತಿ.

ನಾನು : Shut up ok ? ನಿನ್ನ ಮೇಲೆ ಭಯ ಮೊದ್ಲೆ ಇಲ್ಲ, ಭಕ್ತಿ ಅಂತು ಒಂದು ಚೂರು ಇಲ್ಲ.

Z : ಮತ್ತೆ ?

ನಾನು : ಹಾಗೆ ಸುಮ್ನೆ ಹೇಳ್ತಿನಿ ಅಷ್ಟೆ.

Z : ಒಕೆ.

ನಾನು : ಶುರು ಮಾಡ್ಲಾ ?

Z :ದಯವಿಟ್ಟು.

ನಾನು : ಓಕೆ. ನಾವ್ಯಾಕೆ ಜಲೇಬಿ ನಾಡಿಗೆ ಹೋದೆವು ಅನ್ನೋದಕ್ಕೆ ಮೊದಲು ಕಾರಣ ಕೊಡ್ತಿನಿ.
  1. ಅಣ್ಣ ಅಮ್ಮ ತೀರ್ಥಯಾತ್ರೆ ಮಾಡ್ಬೇಕು ಅಂತ ಹಪಹಪಿಸ್ತಿದ್ರು. ಅಣ್ಣ ಹತ್ತು ದಿನ ನಿಜವಾಗಿಯೂ ತಮ್ಮ ಕೆಲಸ ಕಾರ್ಯ ಮರೆತುಬಿಡ್ತಿನಿ ಅಂತ ಹೇಳೋದನ್ನ ನಾವು ಟೆಸ್ಟ್ ಮಾಡಿ ನೋಡ್ಬೇಕಿತ್ತು. ಯಾಕಂದ್ರೆ, ಕಾರ್ಮಿಕರ ದಿನಾಚರಣೆ ಒಂದು ದಿನ ಬಿಟ್ಟು ಅವರು ಇನ್ಯಾವತ್ತು ಬೆಳಗ್ಗಿಂದ ಸಂಜೆಯವರೆಗೆ ಮನೆಯಲ್ಲಿ ನಮ್ಮ ಜೊತೆ ಇದ್ದವರಲ್ಲ.
  2. ನನಗೆ ಪಿಎಚ್.ಡಿ ಗೆ ಓದಿ ಓದಿ ಸುಸ್ತಾಗಿತ್ತು. ಒಂದು ಬ್ರೇಕ್ ಬೇಕಿತ್ತು.
  3. ಅಪರ್ಣಂಗೆ ಕಾಲೇಜಲ್ಲಿ ಕ್ರಿಸ್ಮಸ್ ಗೆ ರಜ ಸಿಕ್ಕೋ ಚಾನ್ಸಿತ್ತು.
ನಾನು : ಈ ಪ್ರಕಾರವಾಗಿ ನಾವು ಜಲೇಬಿನಾಡಿಗೆ ಹೋಗಬೇಕೆಂದು ನಿರ್ಧರಿಸಿದೆವು. ಒಂದು ತಿಂಗಳಿನ ಮುಂಚೆ Asian Travels ಎಂಬಲ್ಲಿ package tour ಗೆ ವ್ಯವಸ್ಥೆಯಾಯ್ತು. ನಮ್ಮ ಮನೆ ಎದುರು ಮನೆಯ ಸುಧಾ ಆಂಟಿ ಮತ್ತು ಅನಂತ್ ಅಂಕಲ್ ಸಹ ನಮ್ಮೊಂದಿಗೆ ಬರಲಿಚ್ಛಿಸಿ ಅವರೂ ಬುಕ್ ಮಾಡಿಸಿ ಸಿದ್ಧರಾಗತೊಡಗಿದರು.

Z :ಓಹೋ...ಆಮೇಲೆ ?

ನಾನು : ನಾನು ಓದು ಬರಹ ಕಷ್ಟ ಪಟ್ಟು ಮಾಡತೊಡಗಿದ್ದೆ.ಎಲ್ಲರೂ ನನ್ನ entrance exam ಮುಗಿಯುವುದನ್ನೇ ಕಾಯುತ್ತಿದ್ದರು. ಅದು ಇದ್ದದ್ದು December 21st ರಂದು. ನಾವು ಹೊರಡಬೇಕಿದ್ದಿದ್ದು December 25 ರಂದು.

ಅಣ್ಣ ಯಾವಾಗಲೂ " ನಿನ್ನ ಕೈಲಿ ಕ್ಯಾಮೆರಾ ಕೊಟ್ಟರೆ ನೀನು ಕುದುರೆ, ಕೋತಿ, ಕಾಗೆಗಳ ಫೋಟೋ ತೆಗಿತ್ಯಾ... ಫೋಟೋಪ್ರಾಣಿ ... ಕೊಡ್ಸಲ್ಲ ಹೋಗು " ಅಂತ ಹೇಳುತ್ತಲೇ ಇರ್ತಿದ್ರು.

Z : ಕರೆಕ್ಟ್. ನಿನ್ನ ಕೈಲಿ ಕ್ಯಾಮೆರಾ ಸಿಕ್ಕರೆ....

ನಾನು : shut up ok? ನೀನು ಉರ್ಸ್ಬೇಡ. ಅಣ್ಣ ಹೀಗೆ ಹೇಳುತ್ತಿದ್ದರೂ ನಾನು ಹಿರಣ್ಮಯಿ ಯ 2 megapixel camera ಲೇ ನನ್ನ ಎಲ್ಲ ಆಸೆಗಳನ್ನು ತೀರಿಸಿಕೊಳ್ಳುತ್ತಿದ್ದೆ. ನಾನು ಅಲ್ಲಿ ಫೋಟೋಸ್ ತೆಗೆಯಲು ಹಿರಣ್ಮಯಿಗೆ ಒಂದು ಹೊಸ ಮೆಮೋರಿ ಕಾರ್ಡ್ ಕೊಡಿಸಿ 2 GB ದು ಅಂತ ಕೇಳಿದೆ. ಅಣ್ಣ ಬೇಡಾ...ಒಂದು ಸಣ್ಣ ಕ್ಯಾಮೆರ ತಗೊಳ್ಳೋಣ ಅಂದರು. ನಾನಂದೆ ಸಣ್ಣ ಕ್ಯಾಮೆರಾ ಅಂದ್ರೆ ನನ್ನ ಇಂಟೆರೆಸ್ಟಿಗೆ ಸ್ವಲ್ಪ ಕಷ್ಟ ಆಗತ್ತೆ. ತಗೊಳ್ಳೋದು ತಗೋತಿವಿ, ಸ್ವಲ್ಪ ಜಾಸ್ತಿ ಇನ್ವೆಸ್ಟ್ ಮಾಡೋಣ ಅಂದೆ. ಸರಿ ಇಂಟರ್ನೆಟ್ಟಿನಲ್ಲಿ ಕ್ಯಾಮೆರಾಗಳ ಮೇಲೆ ನನ್ನ ರಿಸರ್ಚು ಶುರುವಾಯ್ತು.

Z : ಕರ್ಮಕಾಂಡ. ಆಮೇಲೆ ?

ನಾನು : ಪಿಕ್ಸೆಲ್ ಗಳು ಜಾಸ್ತಿ ಇದ್ದರೆ aperture ಮೇಲೆ ನನಗೆ ಸಮಾಧಾನವಿರಲಿಲ್ಲ, aperture ಗಳು ಚೆನ್ನಾಗಿದ್ದಿದ್ದರೆ ಬ್ಯಾಟೆರಿ ಲೈಫ್ ಕಡಿಮೆ. ಎರಡೂ ಚೆನ್ನಾಗಿದ್ದರೆ out of budget. ಸರಿ ಕಳೆದು ಕೂಡಿ ಗುಣಾಕಾರ ಭಾಗಾಕಾರ ಮಾಡಿ Sony cybershot 13.2 megapixel camera ತಗೊಳ್ಳೋಣ ಅಂತ ನಿರ್ಧರಿಸಿ, ಡಿಸೆಂಬರ್ ಹದಿನೆಂಟು ಸಾಯಂಕಾಲ ಶುಭಮುಹೂರ್ತದಲ್ಲಿ ನಾನು ಅಣ್ಣ ಕ್ಯಾಮೆರಾ ಕೊಳ್ಳಲು ಹೊರಟೇ ಬಿಟ್ಟೆವು. ಅಣ್ಣ ಕ್ಯಾಮೆರ ತಗೊಳ್ಳೋಣ ಅಂದಿದ್ದು ಅಮ್ಮನಿಗೆ ನಂಬಿಕೆಯೇ ಬರಲಿಲ್ಲ. ನಾವು ಹೊರಟಾಗ ಅಮ್ಮ ಮಾರ್ಮಿಕವಾಗಿ ನಕ್ಕರು. ಅಮ್ಮನ ಆ ನಗು ನೋಡಿ ನನಗೆ ಸಿಕ್ಕಾಪಟ್ಟೆ ಕೋಪ ಬಂತು. ಆದರೆ ಅಣ್ಣ ಕ್ಯಾಮೆರ ತಗೊಳ್ಳುವಲ್ಲಿ ಸೀರಿಯಸ್ಸಾಗಿದ್ದಾರೆ ಅಂತ ಗೊತ್ತಾಗಿದ್ದು ನಾವು ಗಾಂಧಿಬಜಾರಿನ GK Vale ಮುಂದೆ ನಿಂತಾಗಲೇ. ನಮಗೆ ಬೇಕಿದ್ದ ಮಾಡೆಲ್ ಸಿಗಲಿಲ್ಲ. ಸರಿ 100 ft ring road, Banashankari ಯಲ್ಲಿರುವ ಸೋನಿ ಶೋರೂಮ್ ಕಡೆಗೆ ಗಾಡಿ ತಿರುಗಿಸಿದೆವು. ಅಲ್ಲಿ ಹೋಗಿದ್ದೇ ನಾವು ನಮಗೇ ಬೇಕಿದ್ದ ಕ್ಯಾಮೆರ ಕೇಳಿದೆವು. ಅಲ್ಲಿಯೂ out of stock ಆಗಿದ್ದು ನನಗಂತೂ ಸಿಕ್ಕಾಪಟ್ಟೆ ಬೇಜಾರು ಆಯ್ತು.

Z :ಪಾಪ.

ನಾನು : ಆದರೆ ಅಲ್ಲಿ ನಮಗೆ Sony cyber shot digital SLR ಕ್ಯಾಮೆರಾ ಕಂಡಿತು. ನಾನು ಅದರ technical details ಎಲ್ಲ ಕೇಳಿದೆ.ಅಲ್ಲಿನ salesman "ಮೇಡಮ್ ನೀವು professional photographer ಆ? ಎಲ್ಲ ಥರದ detail ಗಳನ್ನು ಬಿಡಿಸಿ ಬಿಡಿಸಿ ಕೇಳುತ್ತಿದ್ದೀರಲ್ಲ ? " ಅಂದ. ನಾನು " ಇಲ್ಲ, Its my hobby. ನಾವು tour ಗೆ ಹೋಗ್ತಿದಿವಿ. ಗುಡಿ ಗೋಪುರ, ಅವುಗಳ ಆಕಾರ, ಶಿಲ್ಪ ಎಲ್ಲ zoom ಮಾಡಿ ತೆಗೆಯಬೇಕು. ನನ್ನ ರಿಸರ್ಚಿಗೆ ಅವಶ್ಯಕತೆ ಇದೆ " ಅಂದೆ. ಅವನು " ಇದು outdoor and indoor ಎರಡಕ್ಕೂ ಆಗತ್ತೆ ಮೇಡಮ್. ನಿಮ್ಮ taste ಗೆ ಸರಿಗಿದೆ. ನಾನು ನಿಮಗೆ ಈಗಲೆ ಕ್ಯಾಮೆರಾ ಕೊಡ್ತಿನಿ. ನೀವೆ experiment ಮಾಡಿ" ಅಂದ. ನಾನು ಪ್ರಯೋಗ ಪ್ರಾರಂಭಿಸಿಯೇ ಬಿಟ್ಟೆ. ಒಂದು ಘಂಟೆ experiment ಮಾಡಿ, ಎಲ್ಲಾ ಥರದ ಡೌಟುಗಳನ್ನು ಕೇಳಿ, clarify ಆದಮೇಲೆ camera ನನಗೆ ಒಪ್ಪಿಗೆ ಆಯ್ತು.

Z : ಎಲ್ಲಿ ಬಿಡ್ತ್ಯಾ ನಿನ್ನ ಬುದ್ಧಿ ? ಸರಿ ಆಮೇಲೆ ?

ನಾನು :ಎಲ್ಲಾ ಸರಿಗಿತ್ತು. ಆದರೆ ಬೆಲೆ ಸ್ವಲ್ಪ ಜಾಸ್ತಿ ಆಯ್ತು. ಅದಕ್ಕೆ ನಾನು 10.1 mega pixel ಸಾಕು ಅಂತ ನನಗೆ ನಾನೆ ಸಮಾಧಾನ ಹೇಳಿಕೊಳ್ಳತೊಡಗಿದ್ದೆ. ಅಣ್ಣ "ಇಲ್ಲ...ಇದನ್ನೇ ತಗೊಳ್ಳೋಣ" ಅಂದರು. ನಾನು ಪಿಳಿ ಪಿಳಿ ನೋಡಿದೆ.

Z : :-)


ನಾನು :ಅಣ್ಣ " ಇಲ್ಲ...ಇದಿರ್ಲಿ..ಮಾಡೋವಾಗ ಸರಿಯಾದ investment ಮಾಡಬೇಕು. ನಿನ್ನ ಕುದುರೆ, ಕತ್ತೆ, ಕೋತಿ, ಕಾಗೆ, ನಾಯಿಮರಿಗಳ ಮಧ್ಯ ಗುಡಿ ಗೋಪುರ, ಬೆಟ್ಟ ಗುಡ್ಡ ಮತ್ತು ಸಾಧ್ಯವಾದರೆ ನಮ್ಮನ್ನು ಸೇರಿಸು" ಅಂದರು.

Z : ತಾವೇನಂದಿರಿ ?

ನಾನು : ಓಕೆ ಅಂದೆ. ಗುರುವಾರ "ಛಾಯಾ" ಮನೆಗೆ ಬಂದಳು. Technical details ಗೆ ಇಲ್ಲಿ ಕ್ಲಿಕ್ಕಿಸಿ.

Z : ಎಲ್ಲ ವಸ್ತುಗಳಿಗೂ ಈ ನಾಮಕರಣ ಸಂಪ್ರದಾಯ ಅವಶ್ಯವೇ ಅಥವಾ ಅನಿವಾರ್ಯವೇ ?

ನಾನು : ಎರಡೂ.

Z : ಓಕೆ. ಮುಂದೆ ?

ನಾನು : ಛಾಯಾ ಬಂದಿದ್ದು ಹಿರಣ್ಮಯಿ ಗೆ naturally ಇಷ್ಟ ಆಗ್ಲಿಲ್ಲ. professional jealousy. Hang ಆಗಿ ಪ್ರಾಣ ತಿಂದಳು. ಸರಿ ನಾನು ಛಾಯಾ ನುಗ್ಗಲಾಗದ ಕಡೆ ವಿಶೇಷ ಚಿತ್ರಗಳನ್ನ ಮತ್ತು ವಿಚಿತ್ರ ಫೋಟೋಗಳನ್ನ ಹಿರಣ್ಮಯಿ ತೆಗೆಯಲಿ, ವಿಶೇಷ ಫೋಟೋಗಳನ್ನ ಛಾಯಾ ತೆಗೆಯಲಿ ಅಂತ ತೀರ್ಮಾನ ಮಾಡಿದ ಮೇಲೆ ಇವ್ರಿಬ್ರು ಜಗಳ ಆಡೋದನ್ನ ನಿಲ್ಲಿಸಿದ್ರು.

Z : ರಾಮ ರಾಮಾ....ಆಮೇಲೆ ?

ನಾನು : ಇನ್ನು ಎರಡು ದಿನಗಳಿಗೆ ನನ್ನ ಪರೀಕ್ಷೆ ಇದ್ದಿದ್ದುದರಿಂದ ಹೆಚ್ಚು ಪ್ರಯೋಗಗಳನ್ನ ಮಾಡಲಾಗಲಿಲ್ಲ. ಭಾನುವಾರ ಪರೀಕ್ಷೆ ಮುಗಿಸಿ ಮನೆಗೆ ಬಂದದ್ದೇ ಕೈಯಲ್ಲಿ ಕ್ಯಾಮೆರ ಹಿಡಿದು ಎಲ್ಲ ಮೋಡ್ ಗಳನ್ನು ಪ್ರಯೋಗ ಮಾಡಿದೆ. ಗೈಡ್ ಗಳು ಇರಲಿಲ್ಲವಾದ್ದರಿಂದ ಸ್ಥಳ ಪುರಾಣಗಳನ್ನು ಅಂತರ್ಜಾಲದಲ್ಲಿ ಸಂಗ್ರಹಿಸಿ ಬರೆದಿಟ್ಟುಕೊಂಡೆ. ಪ್ರತಿಯೊಂದು ದೇವಸ್ಥಾನದ ವಿಸ್ತೀರ್ಣ, ಮುಖ್ಯಾಂಶ, ಶಿಲ್ಪ ಕಲೆ, ಮುಖ್ಯ ದೇವರು, ಸ್ಥಳ ಪುರಾಣ, ಇವೆಲ್ಲವನ್ನು ಡೈರಿಯಲ್ಲಿ ನೋಟ್ ಮಾಡಿಕೊಂಡು, ಅಕಸ್ಮಾತ್ ನಾನು ಕಳೆದುಹೋದರೆ ಬೆಂಗಳೂರು ತಲುಪುವುದು ಹೇಗೆಂದು ಗುರುತುಹಾಕಿಕೊಂಡೆ. ಅದಕ್ಕೆ ಸರಿಯಾಗಿ ದಾವಣಗೆರೆಯಿಂದ ಅಜ್ಜಿ ಫೋನ್ ಮಾಡಿ, "ಅಪ್ಪ ಅಮ್ಮನ ಜೊತೆ ಘನವಾಗಿ ಬಿದ್ದಿರು. ಫೋಟೋ ತೆಗಿತಿನಿ ಅಂತ ಎಲ್ಲೆಲ್ಲೋ ಅಲೆದು ಕಳೆದು ಹೋಗ್ಬೇಡ. ನನಗಿರೋದು ನೀನೊಬ್ಬಳೆ ದೊಡ್ಡ ಹೆಣ್ಣು ಮೊಮ್ಮಗಳು. " ಅಂತ ಉಪದೇಶ ಬೇರೆ ಮಾಡಿದ್ರು.

Z : ಅದಕ್ಕೆ ತಾವೇನಂದ್ರಿ ?

ನಾನು : ಕಳೆದು ಹೋಗಿ ನಿನಗೆ tension ಕೊಡ್ಲಿಲ್ಲಾ ಅಂದ್ರೆ ನನ್ನ ಹೆಸರು ಲಕ್ಷ್ಮೀ ನೇ ಅಲ್ಲ ಅಂದೆ. ಅಜ್ಜಿ ಅದಕ್ಕೆ " ಥು ನಿನ್ನ " ಅಂತ ಹರಸಿದರು.

Z : ವಾಹ್ ವಾಹ್ ವಾಹ್ !

ನಾನು : thanks. ಶಾಪಿಂಗ್, ಪ್ಯಾಕಿಂಗ್ ಮತ್ತು ಬ್ಲಾಗಿಂಗ್ ಗಳಲ್ಲಿ ಮಿಕ್ಕ ದಿನಗಳು ಹೇಗೆ ಕಳೆದವೋ ಗೊತ್ತೇ ಆಗಲಿಲ್ಲ. ಅಂತೂ ಡಿಸೆಂಬರ್ ಇಪ್ಪತ್ತೈದನೆಯ ತಾರೀಖು ಬೆಳಿಗ್ಗೆ ನಾಲ್ಕು ಘಂಟೆಗೆ ಎದ್ದು ರೆಡಿಯಾಗಿ ಹೊರಟೆವು.

Z : ನಿಜ್ವಾಗ್ಲೂ ನೀನು ನಾಲ್ಕು ಘಂಟೆಗೆ ಎದ್ದೆಯಾ ? ಜೀವನದಲ್ಲಿ ಆ ಟೈಮ್ ನೋಡಿರಲಿಲ್ವಲ್ಲಾ ನೀನು !

ನಾನು : ಏನ್ ಮಾಡೋದು ! ಎದ್ದೆ. ನಿಜ್ವಾಗ್ಲೂ ಎದ್ದೆ.

Z : ಅದ್ಭುತ. ಆಮೇಲೆ ?

ನಾನು : ನಾವು ಹೊರಡುವಾಗ ಸೂರ್ಯ ಆಗ್ತಾನೆ ಹುಟ್ಟುತ್ತಿದ್ದ.ಆಶ್ಚರ್ಯಕರವಾಗಿ, ಆವತ್ತು ಏನೂ ಟ್ರಾಫಿಕ್ಕ್ ಇರಲಿಲ್ಲ. ನಾವು ಮಿನರ್ವಾ ಸರ್ಕಲ್ ನಲ್ಲಿ ಬಸ್ಸು ಹತ್ತಬೇಕಿತ್ತು. ಮಿನರ್ವ ಸರ್ಕಲ್ ಬೆಳಿಗ್ಗೆ ೬ ಘಂಟೆಗೆ ಹೇಗಿತ್ತಪ್ಪಾ ಅಂತ ನೋಡು.Photo by chaaya.

Z : Oh my God !!!!!!!!!!!!

:-) ನೋಡ್ಬಿಡು.ಸಂತೋಷ ಆಶ್ಚರ್ಯ ಎರಡೂ ಪಟ್ಟುಬಿಡು.

Z : ಓಕೆ. ಮುಂದೆ ?

ನಾನು : ನಾವು ಬಂದು ಇಳಿದವರು ಯಾವ್ದೋ ಒಂದು ಹೈಟೆಕ್ ಬಸ್ ಬರತ್ತೆ ಅಂತ ಅಂದುಕೊಂಡಿದ್ದೆವು . ನೋಡಿದ್ರೆ ಬಂದಿದ್ದು ಕೂರಕ್ಕೆ ನೆಟ್ಟಗೆ ಜಾಗವಿಲ್ಲದ, ಕಾಲು ಚಾಚಿಕೊಳ್ಳಲು ಒದ್ದಾಡಬೇಕಾಗಿದ್ದ ಈ ಬಸ್ಸು.

Photo by chaaya.


ಸದ್ಯೋಜಾತನ ನೆನೆದು ಹೊರಟಾಯ್ತು...ಬೆಳಿಗ್ಗೆ ಏಳು ಗಂಟೆಗೆ.ಹೊಸೂರಲ್ಲಿ ಕನ್ನಡ ಮುಗಿದು ಜಲೇಬಿ ದರ್ಶನ ಶುರುವಾಯ್ತು. ಹೇಗೆ ಅಂದ್ರೆ, arrow, ಜಲೇಬಿ, ಮತ್ೆ ಕಿಲೋಮೀಟರ್ ನುಮ್ಬೆರ್ರು. ಈ ಜಲೇಬಿ ಏನ್ ಹೇಳ್ತಿದೆ ಅಂತನೇ ಗೊತ್ತಾಗ್ತಿರ್ಲಿಲ್ಲ. ಕನ್ನಡ ಇರ್ಲಿ...ಇಂಗ್ಲೀಷ್ ಕೂಡಾ ಕಾಣ್ಲಿಲ್ಲ ! ಡ್ರೈವರ್ ಪ್ರಾಯಶಃ ಅಭ್ಯಾಸ ಬಲದ ಮೇಲೆ ಗಾಡೀ ಓಡಿಸುತ್ತಿದ್ದ ಅನ್ಸತ್ತೆ. ಅಪರ್ಣ ದಾರಿಯಲ್ಲಿ ಕಂಡ ಕಂಡ ಗಿಡ ಮರಗಳ family, genus, species ಗಳನ್ನ guess ಮಾಡತೊಡಗಿದ್ದಳು. ಈಗಷ್ಟೇ ಬಯಾಲಜಿ ಓದ್ತಿದಾಳೆ...ಜೋಷು ಜೋರಾಗಿತ್ತು. ಅದಕ್ಕೆ ನಾನು ಅವಳಿಗೆ "ಗಿಡಮೂಲಿಕೆ" ಅಂತ ನಾಮಕರಣ ಮಾಡಿದೆ. ನಾನು ಕಂಡ ಕಂಡ ಬೆಟ್ಟಗುಡ್ಡಗಳ rock formation and structure ಬಗ್ಗೆ ಯೋಚ್ನೆ ಮಾಡ್ತಿದ್ದೆ. ಅದಕ್ಕೆ ಅವಳು ನನ್ನನ್ನ ಶಿಲಾಬಾಲಿಕೆ ನೀನು ಅಂದಳು.

Z : ನೀನ್ ಯಾವ್ dimension ನಲ್ಲಿ ಶಿಲಾಬಾಲಿಕೆ ನ ಹೋಲುತ್ತೀಯಾ ಅಂತ ?

ನಾನು :ಹೋಲಲ್ಲ ಅಂತ ನೇ ಹೆಸರಿಟ್ಟಳು ಅವಳು.

Z : ಆಮೇಲೆ ?

ನಾನು : ಮಧ್ಯಾಹ್ನ ತಿರುವಣ್ಣಾಮಲೈ ತಲುಪಿದೆವು. ಟ್ರಾವೆಲ್ಸ್ ನವರೇ ಅಡಿಗೆ ಮಾಡುತ್ತಿದ್ದರು. ಆದ್ದರಿಂದ ನಮಗೆ ಊಟದ ತೊಂದರೆ ಆಗ್ಲಿಲ್ಲ. ಮೊದಲ ದಿನದ ಊಟ ಇದು.


Photo by hiranmayi.

Z : yummmmmmm........................

ನಾನು :ಸಾಕು. ಊಟ ಸಕತ್ತಾಗಿತ್ತು. ಚಪ್ಪರಿಸಿಕೊಂಡು ಊಟ ಮಾಡಿದಮೇಲೆ ಲಾಡ್ಜಿಗೆ ಹೋದೆವು. ಶಾಕ್ ಕಾದಿತ್ತು.

Z : ಯಾಕೆ ?

ನಾನು :ಭೂತ ಬಂಗಲೆ ಥರ ಇತ್ತು ಅದು. ಎಲ್ಲಾ ವಸ್ತುಗಳ ಮೇಲೆ ಮಿನಿಮಮ್ ೩ ಇಂಚು ಧೂಳು. ಅಣ್ಣಾ ನೋ...ನಮ್ಮನ್ನು ಬೇರೆ ಊರುಗಳಿಗೆ ಕರೆದುಕೊಂಡು ಹೋದಾಗಲೆಲ್ಲಾ ಒಳ್ಳೊಳ್ಳೇ ಹೋಟೆಲ್ ಗಳಲ್ಲಿ ಇಳಿಸುತ್ತಿದ್ದರು.ನಮಗೆ ಇಂಥಾ ಹೋಟೆಲ್ಲುಗಳ ರೂಪುರೇಷೆಯೇ ಗೊತ್ತಿರಲಿಲ್ಲ. ನಮ್ಮ ರೂಮಿದ್ದಿದ್ದು ಮೂರನೇ ಫ್ಲೋರ್ ನಲ್ಲಿ.ಲಿಫ್ಟ್ ಇಲ್ಲ. ಲಗೇಜ್ ಹೇಗೆ ತಗೆದುಕೊಂಡು ಹೋಗುವುದು ? ರೂಮ್ ಬಾಯ್ ಗಳಿಲ್ಲ...ಅಣ್ಣನಿಗೆ ಬಲಗೈ ನೋವು ಬೇರೆ. ಅನಂತ್ ಅಂಕಲ್ ಗೆ ಮೊದಲೇ ಆಗ್ತಿರ್ಲಿಲ್ಲ. ಇನ್ನು ನಮ್ಮ ಬಗ್ಗೆ ಮಾತಾಡೋದೇ ಬೇಕಿಲ್ಲ. ..ನನಗೆ ಅಪರ್ಣನಿಗೆ ಮಾತೇ ಹೊರಡಲಿಲ್ಲ.

Z : ಕರೆಂಟ್ ಹೊಡೆದ ಕಾಗೆಗಳಾಗೋದ್ರಾ ?

ನಾನು :yes.

Z : good. ಆಮೇಲೆ ?

ನಾನು :Adjust ಮಾಡಿಕೊಳ್ಳದೇ ಬೇರೆ ದಾರಿ ಇರಲಿಲ್ಲ ಆದ್ದರಿಂದ ಅಣ್ಣ ಅಪರ್ಣ ಮತ್ತು ನಾನು ಭಾರದ ಲಗೇಜ್ ಹೊತ್ತೆವು. ಮಿಕ್ಕೋರು ಲೈಟ್ ಲಗೇಜ್ ನೋಡಿಕೊಂಡರು.

Z : ನಿಜ್ವಾಗ್ಲು ಭಾರ suitcase ಗಳನ್ನ ನೀನೆ ಹೊತ್ಕೊಂಡ್ಯಾ ?

ನಾನು :Silence I say. Don’t underestimate me like this !!!!

Z : Ok ok...sorry. ಆಮೇಲೆ ?

ನಾನು : ಬಂದು ಸೆಟಲ್ ಆದೆವು. ತಿರುವಣ್ಣಾಮಲೈ ಮುಖ್ಯ ರಸ್ತೆಯಲ್ಲಿ ಒಂದು ಗಸ್ತು ಹೊಡೆದೆವು. ಆಮೇಲೆ ರಮಣ ಮಹರ್ಷಿ ಆಶ್ರಮಕ್ಕೆ ಹೋದೆವು. ಅವರನ್ನು "sage of arunachala" ಅಂತಲೇ ಕರೆಯುವುದು. ಅರುಣಾಚಲೇಶ್ವರ ದೇವಸ್ಥಾನದಲ್ಲಿ ಪಾತಾಳ ಲಿಂಗೇಶ್ವರನ ಸನ್ನಿಧಿಯಲ್ಲಿ ಅವರಿಗೆ ಜ್ಞಾನೋದಯ ಆಯ್ತಂತೆ. ಆಮೇಲೆ ಅವರು ನೆಲೆಸಿದ ಸ್ಥಳ ಈಗ ಆಶ್ರಮ ಆಗಿದೆ. ಅಲ್ಲಿ ಈಶ್ವರನ ಪೂಜೆ ನಡೆಯುತ್ತೆ. ಏನ್ ಶಾಂತಿ ಏನ್ ಕಥೆ ! ಆಶ್ರಮ ಸಕತ್ತಾಗಿದೆ. ಹದಿನಾಲ್ಕು ಕಿಲೋಮೀಟರ್ ಪ್ರದಕ್ಷಿಣೆ ಬೇರೆ ಇದೆ. ಅದನ್ನ ನಾವು ಮಾಡಲಾಗಲಿಲ್ಲ. ಸ್ಕಂದ ಆಶ್ರಮ ಐದು ಘಂಟೆಗೆ ಮುಚ್ಚುತ್ತೆ. ಅರ್ಧ ಬೆಟ್ಟ ಹತ್ತಿ, ಸೂರ್ಯಾಸ್ತ ನೋಡಿ , "ನಾನು ಯಾರು " ಅನ್ನೋ ಪುಸ್ತಕ ಖರೀದಿಸಿ, ವಾಪಸ್ಸು ಬಂದೆವು. ರಾತ್ರಿ ಅರುಣಾಚಲ ದೇವಸ್ಥಾನಕ್ಕೆ ಹೋಗುವ ಟೈಮ್ ಗೆ ಕರೆಕ್ಟಾಗಿ ಕರೆಂಟ್ ಹೋಯ್ತು. ಅದರ ಭವ್ಯ ಶಿಲ್ಪ ಕಲೆ ನೋಡಲಾಗಲ್ವಲ್ಲಾ ಅಂತ ಎಲ್ಲರು ಲೊಚಗುಟ್ಟಿದರು. ನಾನು ಸೈಲೆಂಟಾಗಿ night shots in infra red mode on ಮಾಡಿದೆ.

Z : ಶಭಾಷ್ ! ಆಮೇಲೆ ?

ನಾನು : ನಾನು ಫೋಟೋ ಕ್ಲಿಕ್ಕಿಸಲು ಶುರು ಮಾಡಿದೆ. ಸದ್ಯೋಜಾತ ನನ್ನ interest ನೋಡಿ ದೇವಸ್ಥಾನದ ಅಧಿಕಾರಿಗಳಿಗೆ ಜನರೇಟರ್ ಆನ್ ಮಾಡುವ ಬುದ್ಧಿ ಕೊಟ್ಟ. ಲೈಟ್ ಆನ್ ಆಯ್ತು. ಬಿಂದಾಸಾಗಿ ಫೋಟೋ ತೆಗೆದೆ. ಗರ್ಭಗುಡಿಯಲ್ಲಿ ಹಿರಣ್ಮಯಿ, ಹೊರಗಡೆ ಛಾಯ ತಮ್ಮ ಚಾತುರ್ಯ ಮೆರೆದರು. ಅರುಣಾಚಲೇಶ್ವರ ದೇವರಂತೂ.....ಸೂಪರ್. ವರ್ಣಿಸಲು ಪದಗಳಿಲ್ಲ. Mrs. ಅರುಣಾಚಲೇಶ್ವರ ಸ್ವಲ್ಪ ಕಾಯ್ಸಿದ್ರು ದರ್ಶನ ಕೊಡಕ್ಕೆ. ಆದ್ರೆ ಅವ್ರು ತುಂಬಾ ಚೆನ್ನಾಗಿದಾರೆ.

Z : ಏನ್ ಕಥೆ ಈ ದೇವಸ್ಥಾನದ್ದು ?

ನಾನು :ದಯವಿಟ್ಟು ಗೂಗಲ್ಲಿಸು. Please google. :)

Z : ಆಹಾ....ಹೇಳೆ ಕಥೆ ನ ...

ನಾನು : ಹೆ ಹೆ...ಸರಿ. ಬಹಳ ಹಿಂದೆ, ಬ್ರಹ್ಮ ಮತ್ತು ವಿಷ್ಣು ಶಿವನ ಆದಿ ಮತ್ತು ಅಂತ್ಯ ಎರಡೂ ತಿಳಿಯಬೇಕೆಂದು ಬ್ರಹ್ಮ ಹಂಸ ರೂಪದಲ್ಲಿ ಶಿವನ ಆದಿಯನ್ನು, ವಿಷ್ಣು ಯಜ್ಞವರಾಹ ರೂಪದಲ್ಲಿ ಶಿವನ ಅಂತ್ಯವನ್ನು ಹುಡುಕಲು ಶುರು ಮಾಡೂತ್ತಾರೆ. ಆಗ ಶಿವನು ಜ್ಯೋತಿಯ ರೂಪ ತಾಳುತ್ತಾನೆ. ಇವರಿಬ್ಬರಿಗೂ confuse ಆಗತ್ತೆ. ಆಮೇಲೆ ಈಶ್ವರನನ್ನು ಅವರು ಮಾಡಿದ ತಪ್ಪಿಗೆ ಸಾರಿ ಕೇಳ್ಕೋತಾರೆ. ಸದ್ಯೋಜಾತ ಜ್ಯೋತಿ ರೂಪ ತಾಳಿದ ಸ್ಥಳವೇ ಅಣ್ಣಾಮಲೈ. ಈಗಲು ಬೆಳಗಿನ ಜಾವ ಸೂರ್ಯನ ಕಿರಣ ಆ ಬೆಟ್ಟದ ಮೇಲೆ ಬಿದ್ದಾಗ ಅದು ಬೆಂಕಿಯ ಥರಾ ನೇ ಕಾಣತ್ತೆ( ಹಾಗಂತ ಹೇಳ್ತಾರೆ). ಶಿವನು ಜಲೇಬಿನಾಡಿನಲ್ಲಿ ಪಂಚಭೂತಗಳ ರೂಪದಲ್ಲಿ ನೆಲೆಸಿದ್ದಾನೆ. ತಿರುವಣ್ಣಾಮಲೈ ನಲ್ಲಿ ಅರುಣಾಚಲೇಶ್ವರ ಅಗ್ನಿಯನ್ನು ಪ್ರತಿನಿಧಿಸುತ್ತದೆ.

Z : ಮಿಕ್ಕಿದ್ದು ?

ನಾನು : ಆಮೇಲೆ ಹೇಳುವೆ. ಈಗ ಇನ್ನೊಂದು ಕಥೆ ಇದೆ. ಅರುಣಗಿರಿನಾಥ ಎಂಬ ಸನ್ಯಾಸಿಯೊಬ್ಬರು ಅರುಣಾಚಲದಲ್ಲಿ ಹಿಂದೆ ಇದ್ದರು. ಮಹಾನ್ ಪವಾಡಪುರುಷರು. ಅಲ್ಲಿಯ ರಾಜ ತನಗೆ ದೇವಲೋಕದ ಪಾರಿಜಾತ ಬೇಕೆಂದು ಇವರನ್ನ ಕೇಳಿದರು. ಆಗ ಸನ್ಯಾಸಿಯು ತಮ್ಮ ಮಾನವ ಶರೀರ ಬಿಟ್ಟು ಗಿಳಿಯ ರೂಪ ಧರಿಸಿ ಸ್ವರ್ಗಕ್ಕೆ ಹಾರಿದರು. ಈ ಸನ್ಯಾಸಿಗೆ ಆಗದವರು ಇದೆ ಸರಿಯಾದ ಸಮಯವೆಂದು ಆ ದೇಹವನ್ನು ಸುಟ್ಟು ಹಾಕುತ್ತಾರೆ. ಮರಳಿ ಬಂದ ಅರುಣಗಿರಿನಾಥರಿಗೆ ಏನು ಮಾಡಬೇಕೆಂದು ತೋಚದೆ ಅವರು ಗಿಣಿಯಾಗಿಯೇ ಅರುಣಾಚಲೇಶ್ವರ ದೇವಸ್ಥಾನದ ಗೋಪುರದ ಮೇಲೆ ಕೂರುತ್ತಾರೆ. ಇದೇ ಗಿಳಿಗೋಪುರ. ನಾನು ಸಿಕ್ಕ ಸಿಕ್ಕವರನ್ನ " which is giligopuram ? " ಅಂತ ಕೇಳಿ ಕೇಳಿ ಕಡೆಗೂ ಅದರ ಫೋಟೋ ತೆಗೆಯುವಲ್ಲಿ ಯಶಸ್ವಿಯಾದೆ.Z : good.

ನಾನು : Thanks.

ಈ ದೇವಸ್ಥಾನಕ್ಕೆ ಒಟ್ಟು ೯ ಗೋಪುರಗಳಿವೆ. ವಿಸ್ತೀರ್ಣ ೨೪ ಎಕರೆ. ರಾಜಗೋಪುರ ೨೧೪ ಅಡಿಗಳು. ದೇವಸ್ಥಾನ ಚೋಳರು ಕಟ್ಟಿಸಿದ್ದು. ಈ ಗೋಪುರಗಳನ್ನ ಕಟ್ಟಿಸಿದವರು ವಿಜಯನಗರದ ಅರಸರು. ಅಲ್ಲದೇ ತೇರುಗಳನ್ನು ಕೊಟ್ಟವರೂ ಅವರೇ. ಗೋಡೆಗಳ ಮೇಲೆ ಜಲೇಬಿ (ಮಲಯಾಳಮ್ ಮತ್ತು ತಮಿಳು) ಮತ್ತು ತೆಲುಗು ಶಾಸನಗಳನ್ನು ಕಾಣಬಹುದು.ಕೆಳಗಿರುವ ಫೋಟೋ ರಾಜಗೋಪುರದ್ದು...infra red ನಲ್ಲಿ.Z : ಅಬ್ಬಾ....

ನಾನು :Its a magnificent temple. ನನಗಂತೂ ಸಖತ್ ಸಂತೋಷ ಆಯ್ತು. ಹಾಗೆ ಬರ್ತಾ ಶಾಪಿಂಗ್ ಮಾಡಣ ಅಂದುಕೊಂಡು ಅಣ್ಣ ಮತ್ತು ಅಂಕಲ್ ನ ಹುಡುಕಿದರೆ ಇಬ್ಬರೂ ನಾಪತ್ತೆ !!

Z : ಹೆಹೆಹೆಹೆ...ಸರೀಗ್ ಮಾಡಿದಾರೆ.

ನಾನು : ಆಮೇಲೆ ಅವರು ನಮ್ಮನ್ನು ಲಾಡ್ಜ್ ಹತ್ತಿರ ಕಾಯುತ್ತಿದ್ದರು. ನಾವು ಬಂದು ಆ ಭೂತ ಬಂಗಲೆಯಲ್ಲಿ ಕಷ್ಟಪಟ್ಟು ನಿದ್ದೆ ಮಾಡಿದೆವು. ತಿರುವಣ್ಣಾಮಲೈ ಚಿತ್ರಗಳ ಸ್ಲೈಡ್ ಶೋ ಕೆಳಗಿದೆ. ಅಕಸ್ಮಾತ್ play ಆಗ್ಲಿಲ್ಲ ಅಂದರೆ ದಯವಿಟ್ಟು ಇಲ್ಲಿ ಕ್ಲಿಕ್ಕಿಸಿ.9 comments:

Harish - ಹರೀಶ said...

ನಿಮ್ಮ ಕ್ಯಾಮೆರಾದ ಚಿತ್ರದ ಗುಣಮಟ್ಟ ಹೇಳಿಕೊಳ್ಳುವಷ್ಟೇನೂ ಚೆನ್ನಾಗಿಲ್ಲವಲ್ಲ! ಬೇಸ್ತುಬಿದ್ದಂತೆ ಕಾಣುತ್ತೆ!!

"ಗಿಳಿಯ ಚಿತ್ರ" ಎಂದು ನೀವು ಹಾಕಿರೋ ಚಿತ್ರದಲ್ಲಿನ ಹಕ್ಕಿ ಪಾರಿವಾಳದ ಥರ ಇದೆ.. ಯಾವ್ದಕ್ಕೂ ಒಂದ್ಸಲ verify ಮಾಡ್ಬಿಡಿ..

ಸಿಮೆಂಟು ಮರಳಿನ ಮಧ್ಯೆ said...

ನನಗೆ ಇಷ್ಟವಾಯಿತು...ಬರಹ.. ಮತ್ತು ಫೋಟೊಗಳು...

ಚಂದವಾದ ವಿವರಣೆ..
ನನ್ನ ತಂಗಿ ಎಲ್ಲಿಯಾದರೂ ಹೋಗಿ ಬಂದರೆ ಇದೇರೀತಿ ವಿವರಣೆ ಕೊಡುತ್ತಾಳೆ(ಕೊರೆಯುತ್ತಾಳೆ..)

ಅಲ್ಲಿಯ ವಿವರಣೆ ನನಗಂತೂ ಖುಷಿ ಕೊಟ್ಟಿತು..

ನಿಮ್ಮ ಡೈಲಾಗ್ ಗಳು ತುಂಬ ಚೆನ್ನಾಗಿರುತ್ತದೆ..


ಅಭಿನಂದನೆಗಳು..

NilGiri said...

ವಿವರಣೆ ಅದ್ಭುತ! ಅಲ್ಲಲ್ಲಿ ಕಥೆಗಳು ಕುತೂಹಲ ಮೂಡಿಸಿದವು. ಈ ಸಲ ಊರಿಗೆ ಬಂದಾಗ ಇವೆಲ್ಲಾ ನೋಡಲು ಟ್ರೈ ಮಾಡಬೇಕು.

TKN said...

ಬರಹದ ಶೈಲಿ ಚೆನ್ನಾಗಿದೆ ಮತ್ತು ಫೋಟೋಗಳು ಬಹಳ ಚೆನ್ನಾಗಿ ಮೊಡಿ ಬಂದಿವೆ. ಮತ್ತೆ ಪ್ರಯಾಣ ಮಾಡುವಾಗ ಉಪಯೋಗವಾಗುತ್ತದೆ.
ನಾನು ಟಿಕೆಟ್ ಕಾಯ್ದಿರಿಸುವಾಗ ೩೫ ಸೀಟಿನ ಬಸ್ ಅಂತ ಹೇಳಿದ್ದರು. ಬಸ್ ನೋಡಿದಾಕ್ಷಣ ನನಗೂ ಬೇಜಾರಯ್ತು. ಆದು ಬೇರೆ ಕೊನೆಯ ಸೀಟು. ಫ್ರಯಾಣದ ನಂತರ ನಟ್ ಬೋಲ್ಟ್ ಎಲ್ಲ ಲೂಸ್ ಆಗ್ಬಿಟ್ಟಿವೆ. ತಮಿಳುನಾಡಿನ ರೋಡ್ ಗಳು ನಾನಂದು ಕೊಂಡಿದ್ದಕ್ಕೂ ಸುಮಾರಾಗಿವೆ.
ಪ್ರಯಾಣಕ್ಕಿಂತ ಮುಂಚೆ ಬಹಳ ಹೋಮ್ ವರ್ಕ್ ಮಾಡಿದೀರ (ಸ್ಥಳ ಮಹಿಮೆ ಮತ್ತು ನೋಡ ಬೇಕಾದರ ಬಗ್ಗೆ). ಆಗ ತಾನೆ ಹಂಪೆ ಪ್ರವಾಸದಿನ೦ದ ಬಂದ ನನಗೆ ತಯ್ಯಾರಿ ಮಾಡಲಿಕ್ಕಾಗಲಿಲ್ಲ. ಗೈಡ್ ಇರದೆ ಇದ್ದದ್ದು ಇನ್ನು ಬೇಸರವಾಯ್ತು. ಬಸ್ನಲ್ಲಿ ಜೊತೆಗೆ ಕೂತ ಭಟ್ಟರು ನಿರ್ಮಲ ಟ್ರಾವೆಲ್ಸ್ ನವರ ಜೊತೆ ೩ ಗೈಡ್ ಗಳಿರುತ್ತಾರೆಂದು ಕೇಳಿ ಇನ್ನಷ್ಟು ಬೇಸರವಾಯ್ತು (ಕಾರಣಾಂತರಗಳಿಂದ ಅಲ್ಲಿ ಬುಕ್ ಮಾಡಲಾಗಲಿಲ್ಲ).
ಜಿಲೇಬಿ ನಾಡಿನಲ್ಲಿ ತಮಿಳು ಗೊತ್ತಿರದಿದ್ದರೆ ಬಹಳ ಕಷ್ಟ. ತಿರುವಣ್ಣಾಮಲೈನಲ್ಲಿ ಒಂದು ಹಗ್ಗ ಕೊಂಡು ಕೊಳ್ಳಲೂ ಕಷ್ತವಾಯ್ತು. ರೋಪ್ ಅಂಥ ಹೆಳಿದರೂ ಅವರಿಗೆ ಅರ್ಥ ಆಗಲಿಲ್ಲ.

ಇನ್ನು ೮ ದಿನದ ಪ್ರವಾಸ ಕಥನಕ್ಕಾಗಿ ಕಾಯ್ತ ಇದೀನಿ.

ಧನ್ಯವಾದಗಳೊಂದಿಗೆ,
ನಾಗಾಭರಣ

ಅಸತ್ಯ ಅನ್ವೇಷಿ said...

ಓಹ್... ಜಿಲೇಬಿ ನಾಡಿನಲ್ಲೇ ಇರೋ ನಮ್ಮ ಬೊಗಳೂರಿನ ಪಕ್ಕದಲ್ಲೇ ಏನೋ ಕೋಲಾಹಲ, ಹಾಲಾಹಲ, ಗದ್ದಲ, ಗೌಜು, ಸ್ಫೋಟ, ಧಮಾಕಾ... ಸದ್ದು... ಯಾಕೇಂತ ಈಗ್ಲೇ ಗೊತ್ತಾಗಿದ್ದು...

ಯಪ್ಪಾ... ನಿಮ್ಮ ಛಾಯಾ ಸವಾರಿಯೇ! ನೀವು ಬಂದೇ ಬಿಟ್ರಾ ಅಂತ ಬೊಗಳೂರು ಬಂದ್ ಮಾಡಿ ತಲೆ ಮರೆಸಿಕೊಂಡಿದ್ವು...

ನೀವು ಫೋಟೋ ತೆಗೆದ ಕ್ಯಾಮರಾ ಚೆನ್ನಾಗಿದೆ... ;)

Lakshmi S said...

ಹರೀಶ್ :

camera ಚೆನ್ನಾಗೆ ಇದೆ...ಫೋಟೋಗಳ resize ಮಾಡಿದಾಗ ಹೀಗಾಯ್ತು.

ಆಮೇಲೆ, ಅದು ಗಿಳಿ ನೆ...ಸ್ವಲ್ಪ over weight ಆಗಿದೆ...:) :) :)

ಪ್ರಕಾಶ್ ಅಂಕಲ್,

ನಿಮ್ಮ ತಂಗಿ ಥರ ನಾನು ಕೊರೆಯಲ್ಲಾ...:) ಬರಿ ಮಾತಾಡ್ತಿನಿ ಅಷ್ಟೇ. thanks ನನ್ನ ಬರವಣಿಗೆ ಶೈಲಿಯನ್ನ ಮತ್ತೆ ಮತ್ತೆ ಮೆಚ್ಚಿ ಪ್ರಶಂಸೆ, ಪ್ರೋತ್ಸಾಹ ನೀಡ್ತಿರೋದಕ್ಕೆ.

ನೀಲಗಿರಿ,

Dont miss it. ಸುಮ್ನೆ ಜಮಾಯಿಸಿ.

ನಾಗಾಭರಣ,

ನಮ್ಮ ಸಹಪ್ರಯಾಣಿಕರಾದ ನೀವೂ ಈ ಬ್ಲಾಗ್ ಓದಿ ನಿಮ್ಮ ಅನುಭವ ಹಂಚಿಕೊಂಡಿದ್ದಕ್ಕೆ ನಿಮಗೂ ಧನ್ಯವಾದಗಳು. ನಿರ್ಮಲಾ ಟ್ರಾವೆಲ್ಸ್ ನಲ್ಲಿ ನಾವು ಬುಕ್ ಮಾಡಿದ್ದೆವು.ಆದರೆ ಅವರು tour ನ ಕಾರಣಾಂತರಗಳಿಂದ cancel ಮಾಡಿದರು.ಅದಕ್ಕೆ ನಾವು ಇಲ್ಲಿಗೆ ಬಂದೆವು. ಟೂರಿನ ನಂತರದ ನಿಮ್ಮ ಸ್ಥಿತಿಯ ಬಗ್ಗೆ ಖೇದವಿದೆ.

ಫೋಟೋಗಳನ್ನ ಪಿಕಾಸದಿಂದ ದಯವಿಟ್ಟು download ಮಾಡಿಕೊಳ್ಳಿ.

ಎಂಟು ದಿನದ ಪ್ರವಾಸ ಕಥನ ಅತಿಶೀಘ್ರದಲ್ಲೇ ಬರಲಿದೆ :)

ಅನ್ವೇಷಿಗಳೇ,

ನನಗೊತ್ತು ಜಲೇಬಿನಾಡಿನಲ್ಲೇ ನಿಮ್ಮ ಊರಿರೋದು ಅಂತ. ಈಗ ಬರೀ ಜಲೇಬಿನಾಡಿನಲ್ಲಿ ಕಾಲಿಟ್ಟಿದ್ದೇನೆ. ಇನ್ನೊಂದು ಸ್ವಲ್ಪ ದಿನ...ರಿಸರ್ಚಿಗಾಗಿ (mostly) ನಾನು ಬೊಗಳೂರಿಗೂ ಎಡಗಾಲು ಇಡಲಿದ್ದೇನೆ.ಅದೂ ಶುಕ್ರವಾರ ಬೆಳಿಗ್ಗೆ 10.30 ರಾಹುಕಾಲಕ್ಕೆ ಸರಿಯಾಗಿ. ಈಗಲೇ ಇಷ್ಟು ಗದ್ದಲ ಆಗಿದ್ಯಲ್ಲ...ಆಗ ಜಗತ್ಪ್ರಳಯ ಗ್ಯಾರಂಟೀ...ರೆಡಿಯಾಗಿ.ತಲೆ ಮರೆಸಿಕೊಳ್ಳೂತ್ತೀರೋ, ಕೆಡಿಸಿಕೊಳ್ಳೂತ್ತೀರೋ, ತೆಗೆಸಿಕೊಳ್ಳೂತ್ತೀರೋ...ಅದು ನಿಮಗೇ ಬಿಟ್ಟಿದ್ದು :P

ನೀವು ಫೋಟೋ ತೆಗೆದ ಕ್ಯಾಮರಾ ಚೆನ್ನಾಗಿದೆ... ;)-------> ನೀವು ಏನು ಹೇಳ್ಬೇಕಂತ ಇದಿರಾ ಅಂತ ಅರ್ಥ ಆಯ್ತು ನಂಗೆ ;-)

ಅಂತರ್ವಾಣಿ said...

ಮಾ
ಚೆನ್ನಾಗಿದೆಮ ಅನುಭವ.. ಮತ್ತಷ್ಟು ಭಾಗಗಳ/ ಛಾಯಾಳ ಕಣ್ಣು ಚಳಕಗಳನ್ನು ಎದುರು ನೋಡುತ್ತಿದ್ದೇನೆ..

Vijay said...

ನನ್ನ ಪ್ರಕಾರ ಕೇರಳ ಬೇರೆ.. ತಮಿಳುನಾಡು ಬೇರೆ.. ನನಗೆ ಇನ್ನೂ ನೆನಪಿದೆ.. ಒಮ್ಮೆ ನಾವು ತಿರುವನಂತಪುರದಿಂದ ಕನ್ಯಾಕುಮಾರಿಗೆ ಪ್ರಯಾಣ ಮಡುತ್ತಿದ್ದೆವು. ನಮ್ಮಲ್ಲಿ ಯಾರಿಗೂ ಮಲಯಾಳಂ ಅಥವಾ ತಮಿಳು ಬರದು. ಹಾಗಾಗಿ ಕೇರಳ ಮುಗಿದು ತಮಿಳುನಾಡು ಬಂತೆಂದು ಹೇಗೆ ತಿಳಿಯುವುದು? ಅದಕ್ಕೆ ಉತ್ತರ: ರಸ್ತೆ ಬದಿಯ ಫಲಕಗಳನ್ನು ನೋಡುತ್ತಾ ಇರುವುದು, ಜಿಲೇಬಿ ಫಲಕಗಳು ಮುಗಿದು ಜಹಾಂಗೀರು ಫಲಕಗಳು ಶುರು ಆದ ಕೂಡಲೆ ಅದು ತಮಿಳುನಾಡು :)
ಕೇರಳ ಜಿಲೇಬಿನಾಡು... ತಮಿಳುನಾಡು ಜಹಾಂಗೀರು ನಾಡು :) ಯಾಕೆ ಅಂದರೆ ತಮಿಳು ಅಕ್ಷರ ಸ್ವಲ್ಪ ಓರಣವಾಗಿರುತ್ತವೆ, ಆದರೆ ಮಲಯಾಳಂ ಅಕ್ಷರಗಳು ಪೂರ ವಕ್ರ :P

Kiran Prasad said...

All my deep appreciation for your tallented variety.....I am really overwhelmed with your interest in so many aspects of Life. Your sense of Humor is absolutely fantastic.....very natural. Photos yella Thumba Chennagide...Jilebi OOrau thumba sundara.....Navu adakke ONAGIDA KAPPU JILEBI anthane karyodu...Bisilu jasthi...Jana Kappu adakke..AMMA AND ANNA looks so young like me!!!??? hahahaha....APARNA Looks Great and very beautiful....God Bless you both.... Prasad Uncle

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...