Thursday, January 22, 2009

ಹೀಗೊಂದು ಅರ್ಥಪೂರ್ಣ ಸಂಜೆ

Z : ಅರ್ಥ ಯಾರು and ಪೂರ್ಣ ಎಲ್ಲಿದೆ?

ನಾನು :ಅಯ್ಯೋ...ಅದು ಒಂದೇ ಪದ ಕಣೇ...meaningful ಅಂತ ಅರ್ಥ.

Z : ಓಹ್ ಹಾಗೆ... ಸಂಜೆಗೂ ಅರ್ಥ ಇರತ್ತಾ ? " ಈ ಸಂಜೆ ಯಾಕಾಗಿದೆ ?" ಅಂತ ಬರೀ ಪ್ರಶ್ನೆಗಳನ್ನೇ ಕೇಳ್ಕೋಂಡ್ ಬಂದಿದಿನಿ ಇಷ್ಟ್ ವರ್ಷ.

ನಾನು :ಅರ್ಥ of ಸಂಜೆ depends on the mindset and temperament of the person.

Z : ಹ್ಹ್ಮ್ಮ್ಮ್......ತಮಗೆ ಯಾವ್ ರೀತಿಯಲ್ಲಿ ಅರ್ಥಪೂರ್ಣ ಅನ್ನಿಸಿತು ?

ನಾನು : ಜನವರಿ ೧೨ ನೇ ತಾರೀಖು "ಯುವ ದಿನ". ಆವತ್ತಿನ ಸಂಜೆ ಅರ್ಥಪೂರ್ಣ ಅನ್ನಿಸಿತು.

Z : ಹೋದ ಸೋಮವಾರ ನಡೆದಿದ್ದರ ಬಗ್ಗೆ ಇವತ್ತು ಹೇಳ್ತಿದ್ದೀಯಾ ?

ನಾನು : ಇವತ್ತಾದ್ರೂ ಹೇಳ್ತಿದಿನಲ್ಲ...ಅದಕ್ಕೆ ಖುಷಿ ಪಡು.

Z : ಕರ್ಮಕಾಂಡ ! ಹೋಗ್ಲಿ ಕಥೆ ಶುರು ಮಾಡು.

ನಾನು : ಹಿಂದಿನ ದಿನ ನಮ್ಮನೆಲಿ ನಡೆದ ಬನಶಂಕರಿ ಹಬ್ಬದ ಸುಸ್ತು ಇನ್ನೂ ಪರಿಹಾರ ನೂ ಆಗಿರ್ಲಿಲ್ಲ...ಅಪರ್ಣನಿಗೆ ಸಿಕ್ಕಾಪಟ್ಟೆ ಜ್ವರ ಬಂದು ಬೆಳಿಗ್ಗೆ ಎದ್ದವಳೇ ಡಾಕ್ಟರ್ ಹತ್ರ ಕರ್ಕೊಂಡ್ ಓಡಿ ಹೋದೆ. ಆಮೇಲೆ ಅವಳನ್ನ ಮನೆಗೆ ಕರ್ಕೊಂಡ್ ಬಂದು ಔಷಧಿ ಕೊಟ್ಟು ಬ್ಲಾಗನ್ನು ಕುಟ್ಟಲು ಕೂತೆ...ಶಾರದ ಅತ್ತೆ [ನನ್ನ ಸೋದರತ್ತೆ] ಇಂದ ಮೆಸೇಜು..."I have brought Aurobindo ghosh's book savitri for you. Are you free this evening ?" ಅಂತ. ಅಮ್ಮ ಹೊರಗೆ ಹೋಗಿದ್ದರು. ಅವರು ಬರುವವರೆಗೂ ನಾನು ಬ್ಯುಸಿ.ನಾನು "ಇಲ್ಲ" ಅಂತ ಟೈಪ್ ಮಾಡೋ ಟೈಂ ಗೆ ಸರಿಯಾಗಿ ಅಮ್ಮ ಬಲಗಾಲಿಟ್ಟರು. "ಇಲ್ಲ" ನ "ಹೌದು" ಮಾಡಿ ಕಳಿಸಿದೆ. ಠಕ್ ಅಂತ ಆಕಡೆ ಇಂದ "There is a lecture on Life and works of Aurobindo Ghosh in Gokhale Institute today. Come there at 6.15. Dont miss it ! "ಅಂತ ಮೆಸೇಜು. ನಾನು ಮನೆ ಪರಿಸ್ಥಿತಿ ಹತೋಟಿಗೆ ಬಂದ ಮೇಲೆ "ಓಕೆ" ಅಂದೆ. ಆರುಕಾಲಿಗೆ ಕರೆಕ್ಟಾಗಿ ಅತ್ತೆ ಮನೆಗೆ ಪಾದಾರ್ಪಣೆ ಮಾಡಿದೆ. ಅಲ್ಲಿಂದ ಗೋಖಲೆ ಸಂಸ್ಥೆಗೆ ಒಂದೇ ನಿಮಿಷದ ನಡಿಗೆ. ಆರೂ ಹದಿನಾರಕ್ಕೆ ನಾವು ಅಲ್ಲಿದ್ದೆವು.

Z : ಹೇಗಿದೆ ಸಭಾಂಗಣ ? It was under renovation ಅಲ್ವಾ ?

ನಾನು : ಹೂಂ...It has been very beautifully and thoughtfully renovated. Acoustically better than many auditoria [but cant excel IISc :)] ಮೈಕು ಕುಯ್ಯ್ಯ್ಯ್ಯ್ಯ್ಯ್ಯ್....ಅನ್ನಲ್ಲ. ಹೊರಗಿನ ಶಬ್ದ ಕೇಳ್ಸಲ್ಲ. Echo ಕಮ್ಮಿ ಮಾಡೋಕೆ ಒಳ್ಳೇ measures ತಗೊಂಡಿದಾರೆ. As a physicist, I found the auditorium nice and proper.

Z : From the point of view of ದೇಶಭಕ್ತಿ ?

ನಾನು : ಅಯ್ಯೋ...ಸೂಪರ್ರಾಗಿದೆ. ಎಷ್ಟೋ ಜನರ ಬಗ್ಗೆ ನಮಗೆ ಗೊತ್ತೇ ಇರಲ್ಲ Z....ಅವರ ಫೋಟೋ ನೋಡಿದಾಗ ನಾವೆಲ್ಲ ಏನೂ ಇಲ್ಲ ಅವರ ಮುಂದೆ ಅನ್ಸತ್ತೆ. ಅವರ ಕಣ್ಣುಗಳು ಒಳ್ಳೆ chinnaswamy stadium flood light ಥರ ಝಗಮಗ ಮಿನುಗ್ತಿರತ್ವೆ. ನಮ್ ಕಣ್ಣು....

Z : match stick ಅಂತಿಯಾ ?

ನಾನು : ಹೂಂ....

Z : ಆಮೇಲೆ ?

ನಾನು : ನಾವು ಅಲ್ಲಿ ಹೋಗಿ ಸ್ಥಾಪಿತರಾಗಿ, ಆಸೀನರಾಗೋ ಹೊತ್ತಿಗೆ ಆರು ಇಪ್ಪತ್ತು. ಭಾಷಣ ಇದ್ದಿದ್ದು ಆರು ವರೆಗೆ. ಅತ್ತೆ ಬೇಕಂತ್ಲೆ ನನ್ನನ್ನ ಕಾಲು ಘಂಟೆ ಮುಂಚೆ ಬರಹೇಳಿದ್ದರು. ನಾವು ಅಲ್ಲಿ ಸೆಟಲ್ ಆಗಕ್ಕೆ ಸರಿ ಹೋಗತ್ತೆ ಅಂತ. ಸರಿಯಾಗಿ ಆರುವರೆಗೆ ಅತಿಥಿಗಳು ಬಂದರು. ಸ್ವಾಗತ ಮಾಡಕ್ಕೆ ಬಂದವರು ಅಮೇರಿಕದ MIT ಲಿ Professor.

Z : ಹಾ ?

ನಾನು : ಹೂಂ...ಏನ್ ಸಿಂಪಲ್ ಮನುಷ್ಯ ಅಂದ್ರೆ... ಯಾರಿಗೂ ನಂಬಕ್ಕೆ ಆಗಲ್ಲ. ಅವರ ತಂದೆಯವರ ಸ್ಮರಣಾರ್ಥ ಈ ಉಪನ್ಯಾಸವನ್ನು ಏರ್ಪಡಿಸಲಾಗಿತ್ತು. ಅವರ ತಂದೆ Chief justice. ಒಂದಿಷ್ಟ್ ಹೇಳಿದ್ರು ಅವರ ಬಗ್ಗೆ. ನನಗೆ ತಲೆ ತಿರುಗಿ ಬಂತು. ಕಲೆ, ಸಾಹಿತ್ಯ, ಸಂಸ್ಕೃತಿ, ನ್ಯಾಯ, ನೀತಿ,ಧರ್ಮ, ಅಧ್ಯಾತ್ಮ...ಇವೆಲ್ಲದರ ಸಮ್ಮಿಶ್ರಣ ನೇ ಆ Chief justice.

Z : fruit salad ಅನ್ನು.

ನಾನು : ಹೂಂ...with ice cream-u.

Z : ಆಮೇಲೆ ?

ನಾನು : ಅತಿಥಿಯ ಹೆಸರು Ms. Aditi Vasist.ಅವರು Sri Aurobindo School ನ Principal. ಅವರಿಗೆ ಮೂರು ವರ್ಷ ವಯಸ್ಸಾಗಿದ್ದಾಗ ಅವರ ತಂದೆ ತಾಯಿ ಇವರನ ಅರಬಿಂದೋ ಆಶ್ರಮ, ಪುದುಚೇರಿಗೆ ಕರೆದುಕೊಂಡು ಹೋಗಿದ್ದರಂತೆ. ಅರಬಿಂದೋ ಅವರನ್ನು ನೋಡಿದ ನೆನಪು ಇವರಿಗೆ ಅಷ್ಟು ಇಲ್ಲದಿದ್ದರೂ ನಂತರ ಅವರು ಆಶ್ರಮದ ಕಾರ್ಯಕ್ರಮಗಳಲ್ಲಿ ಭಾಗವಹಿಸತೊಡಗಿದರು. ಈಗ ಈ ಶಾಲೆಯನ್ನು ನಡೆಸುತ್ತಿದ್ದಾರೆ. ಅವರು ಅರಬಿಂದೋ ಅವರ ಸಂಕ್ಷಿಪ್ತ ಜೀವನ ಚರಿತ್ರೆಯನ್ನು ಬಿಚ್ಚಿಡುತ್ತಾ ಹೋದರು...ನನಗೆ ನಾನು ಎಂಥಾ ನಿಷ್ಪ್ರಯೋಜಕಿ ಅನ್ನೋದು ಜ್ಞಾನೋದಯ ಆಯ್ತು.

Z : ಸದ್ಯ ಈಗ್ಲಾದ್ರೂ ಆಯ್ತಲ್ಲ...

ನಾನು : Better late than never. ಅರಬಿಂದೋ ಅವರ ತಂದೆ ಆಂಗ್ಲ ಸಂಕೃತಿಪ್ರಿಯ. ಮಕ್ಕಳಿಗೆ ಭಾರತದ ವಾಸನೆಯೂ ತಾಗಕೂಡದೆಂದು ಅರಬಿಂದೋ ಎಂಟು ವರ್ಷದವರಾಗಿದ್ದಾಗಲೇ, ಅವರನ್ನ ಮತ್ತು ಅವರ ಅಣ್ಣ ತಮ್ಮಂದಿರನ್ನೆಲ್ಲರನ್ನೂ ಲಂಡನ್ನಿಗೆ ಹಡಗಿನಲ್ಲಿ ಕಳಿಸಿ, ಅಲ್ಲಿನ ವಿದ್ಯಾಭ್ಯಾಸ ಕೊಡಿಸಿ ಅವರನ್ನು ಆಂಗ್ಲದವರಾಗಿಯೇ ಮಾಡಲು ಅವರು ಬಯಸಿದ್ದರು. ಇಲ್ಲಿ ಇಂಗ್ಲೆಂಡಿನಲ್ಲಿ ಅವರಿಗೆ ಆಶ್ರಯ ಕೊಟ್ಟ ಮನೆಯ ಮುಖ್ಯಸ್ಥ ತೀರಿಹೋದ ನಂತರ ಇವರು ಹೋಟೆಲೊಂದರಲ್ಲಿ ಮಾಣಿಯಾಗಿ ಕೆಲಸ ಮಾಡುತ್ತಾ, ಜೊತೆಯಲ್ಲಿಯೇ ಓದುತ್ತಾ, ಕಾಲೇಜಿಗೇ ಮೊದಲಿಗರಾಗಿ, ವಿದ್ಯಾರ್ಥಿವೇತನಗಳನ್ನು ಪಡೆದು ತಮ್ಮ ಜೀವನ ಸಾಗಿಸಿದರು. ಇವರು ICS ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಿದ್ದರೆ ಭಾರತದಲ್ಲಿ ಇವರಿಗೆ ಒಂದು ಉತ್ತಮ ಹುದ್ದೆ ದೊರಕುತ್ತಿತ್ತು. ಇಂಗ್ಲೆಂಡಿನ ಭಾರತೀಯರು ಇಂಗ್ಲೇಂಡ್ ನಲ್ಲೇ ಗುಪ್ತ ಸಂಘಗಳನ್ನು ಮಾಡಿಕೊಂಡು ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರು. ಅರಬಿಂದೋ ಕೂಡಾ ಈ ಸಂಘಕ್ಕೆ ಸೇರಿ, ಪ್ರಾಣ ಹೋದರೂ ಆಗ್ಲರ ಕೈ ಕೆಳಗೆ ದುಡಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿ, ICS ಪರೀಕ್ಷೆಯ ಕುದುರೆ ಸವಾರಿ ಪರೀಕ್ಷೆಯಲ್ಲಿ ಬೇಕಂತಲೇ ತೇರ್ಗಡೆಯಾಗದೇ ಉಳಿದರು. ಅವರು ಭಾರತಕ್ಕೆ ಬರುತ್ತಿದ್ದ ಹಡಗು ಮುಳುಗಿತೆಂದು ತಿಳಿದ ಅವರ ತಂದೆ ಭಾರತದಲ್ಲಿ ಆಘಾತ ತಡೆಯಲಾಗದೇ ಪ್ರಾಣ ಬಿಟ್ಟರು. ಆದರೆ ಅರಬಿಂದೋ ಕೊನೆಯ ಕ್ಷಣದಲ್ಲಿ ಹಡಗು ಬದಲಿಸಿದ್ದರು. ಕಡೆಗೂ ಅವರು ಭಾರತ ತಲುಪಿದರು.

Z : ಯಪ್ಪಾ !!!

ನಾನು : ಹೂಂ...ನೋಡು ಎಷ್ಟ್ adventurous ಆಗಿತ್ತು ಇವರ ಜೀವನ ! ನನ್ನದೂ ಒಂದು ಜೀವನಾ ನ ?...ಸ್ಕೂಲ್ ಗೆ ಹೋಗು ಬಾ...ಕಾಲೇಜಿಗೆ ಹೋಗು ಬಾ...ಕಷ್ಟನೇ ಪಡ್ಲಿಲ್ಲ...ಕಾಲೇಜೂ ಟಾಪ್ ಮಾಡ್ಲಿಲ್ಲ.... :( :( :( ಯಾವ್ದಕ್ಕೂ ಹೋರಾಡ್ಲೂ ಇಲ್ಲ...ಗಲಾಟೆ ಅಂತೂ ಮಾಡ್ಲೇ ಇಲ್ಲ...ಕ್ರಾಂತಿಯನ್ನೂ ನಡೆಸ್ಲಿಲ್ಲ :( :( ಛೆ ಛೆ ಛೆ ಛೆ ಛೆ !!!!!!!!!!!!!!!!!!!!

Z : ಶಾಂತಿ ಶಾಂತಿ ಶಾಂತಿ !! ಸಮಾಧಾನ ಮಾಡ್ಕೋ.

ನಾನು : sniff !!!! ಆಮೇಲೆ ಅವರು ಅರಬಿಂದೋ ಅವರ ಸ್ವಾತಂತ್ರ್ಯ ಹೋರಾಟದ ಕಥೆ ಹೇಳಿದ್ರು.ಮೈ ರೋಮಾಂಚನ ಆಗೋಯ್ತು ನಂಗೆ. ಒಂದುವರೆ ಘಂಟೆ ಕಳೆದಿದ್ದೇ ಗೊತ್ತಾಗ್ಲಿಲ್ಲ. ಆಮೇಲೆ ಅರಬಿಂದೋ ರಚಿಸಿದ ಮೇರು ಕೃತಿ "ಸಾವಿತ್ರಿ"ಯ ಬಗ್ಗೆ ಮಾತಾಡಿದರು ಅವರು.

Z : what it eez ?

ನಾನು : Its a poem,a very long poem of 23,813 lines. ಆಂಗ್ಲದಲ್ಲೇ ಬರ್ದಿದಾರೆ ಇದನ್ನ. ಸಾವಿತ್ರಿ..ಅದೇ ಸತ್ಯವಾನನ ಹೆಂಡತಿ...ಯಮನ ಜೊತೆ ಹೋರಾಡಿ ಪತಿಯನ್ನ ಬದುಕಿಸಿಕೊಂಡಳಲ್ಲಾ...ಅವಳ ಕಥೆ. ಅವಳ ಪಾತ್ರದಲ್ಲಿ ಭಾರತೀಯ ಸಂಸ್ಕೃತಿ, ಸನಾತನ ಧರ್ಮ, ಎಲ್ಲವನ್ನು portray ಮಾಡಿದ್ದಾರಂತೆ. ಇದನ್ನೇ ನನ್ನ ಸೋದರತ್ತೆ ನನಗೆ gift ಮಾಡಿದ್ರು,on the occasion of world youth day.

Z : ಆಹಾ !!!

ನಾನು : ಇನ್ನೊಂದ್ ಏನಪ್ಪಾ ಅಂದ್ರೆ, ಅರಬಿಂದೋ ಅವರು ಕೆಲವು ಆಂಗ್ಲಪದಗಳನ್ನ ಸ್ವತಃ coin ಮಾಡಿದ್ದಾರೆ. ಅದಕ್ಕೆ ಅಂತಾ ನೇ ಒಂದು ನಿಘಂಟೂ ಇದೆ. ಸಾವಿತ್ರಿ ಪುಸ್ತಕ ಇದ್ದು ಆ ನಿಘಂಟು ಇರದಿದ್ರೆ no use. ಪಾಪ ನಮ್ಮತ್ತೆ ನನಗೆ ಅದನ್ನೂ ಕೊಟ್ರು.

Z : ಹೊಡುದ್ಲು jackpot ನ.

ನಾನು : ಹೆ ಹೆ....ಹೆಂಗೆ ?

Z : ಸೂಪರ್. ಆಮೇಲೆ ?

ನಾನು : ನಾನು ಅಮ್ಮನ MP3ಪ್ಲೇಯರ್ ನಲ್ಲಿ ಭಾಷಣ ನ ರೆಕಾರ್ಡ್ ಮಾಡ್ಕೊಂಡೆ. ನನ್ನ ಪಕ್ಕದಲ್ಲಿ ಕೂತಿದ್ದವರೂ ಸಹ ಮಾಡ್ಕೋತಿದ್ರು ಅವರ ರೆಕಾರ್ಡರ್ ನಲ್ಲಿ.ನಾನು ಸ್ವಲ್ಪ ನೋಟ್ಸ್ ಕೂಡಾ ಮಾಡ್ಕೋತಿದ್ದೆ. ಭಾಷಣ ಆದ್ಮೇಲೆ ಅವರು ನನ್ನ ನೋಟ್ಸ್ ನೋಡಿ, "which college are you from ? What are you studying ?" ಅಂದ್ರು. ನಾನು " I have done myM.Sc in physics" ಅಂದೆ. ಅವರು ನೋಡಿದರೆ... ISROದಲ್ಲಿ scientist !! ಅವರು "you have a very good handwriting, an impressive way of writing and have developed a very correct method of making notes. I am impressed. Do come to ISRO once.I can show you around. If you want some projects, we can see what we can do "ಅಂದು, ಕಾರ್ಡ್ ಕೊಟ್ಟು, ಕೈ ಕುಲುಕಿ ಹೋದ್ರು..

Z : ಭೂಮಿಮೇಲೆ ಇದ್ದ್ಯೋ ಅಥ್ವಾ ಚಂದ್ರಕ್ಕೆ ಹೋಟೋಗಿದ್ಯೋ ?

ನಾನು : ಇಲ್ಲ..ಭೂಮಿ ಮೇಲೆ ಇದ್ದೆ.

Z : ಗೂಡ್ !!ಆಮೇಲೆ ?

ನಾನು : ಅದಿತಿ ಮೇಡಮ್ ನ ಮಾತಾಡಿಸಿದೆ. ನನ್ನ ಕೈಯಲ್ಲಿ ಸಾವಿತ್ರಿ ಪುಸ್ತಕ ಇದ್ದಿದ್ದನ್ನ ನೋಡಿ ಅವರು ಸಖತ್ ಖುಷಿ ಪಟ್ಟರು. ಅವರು ಹೊರಟ ನಂತರ ನಾವು ರಾಮಕೃಷ್ಣ ಆಶ್ರಮಕ್ಕೆ ಪಾದ ಬೆಳೆಸಿದ್ವಿ.ಆಶ್ರಮ ಸರ್ಕಲ್ ನಲ್ಲಿ ವಿವೇಕಾನಂದರ ಮೂರ್ತಿ ಆವತ್ತು ಬೆಳಿಗ್ಗೆ ಅನಾವರಣ ಆಗಿತ್ತಲ್ಲ, ಅದನ್ನ ನೋಡಕ್ಕೆ. ಅಲ್ಲಿ ಹೋದ ಮೇಲೆ ಅಲ್ಲಿ ನಡೆಯುತ್ತಿದ್ದ ಬುಕ್ ಸೇಲ್ ಗೆ ಹೋಗದೆ ಇರಲು ಪುಸ್ತಕ ಹುಳುಗಳಾದ ನನಗೆ ಮತ್ತು ನಮ್ಮ ಅತ್ತೆಗೆ ಮನಸ್ಸು ಬರಲಿಲ್ಲ. ನಮ್ಮ ಜೊತೆ ನನ್ನ ತಂಗಿಯರಾದ ಗೌರಿ ಮತ್ತು ವಿದ್ಯಾ ಮತ್ತು ನನ್ನ ಮಾವ ಮುರಳಿಧರ್ ಎಲ್ಲಾರು ಇದ್ದರು. ನಾವೆಲ್ಲ ಬುಕ್ ಸೇಲ್ ಗೆ ಹೋದೆವು. ಹೋದ ಸರ್ತಿ ಕೂಡಾ ನಾನು ಈ ಸೇಲ್ ಗೆ ಬಂದಿದ್ದೆ. ಆಗಲೇ ಗುರುಗಳಾದ ಅರುಣ್ ಮತ್ತು ನನ್ನ ಮತ್ತೊಬ್ಬ ಮಿತ್ರರಾದ ಶ್ರೀಕಾಂತ್ ಅವರನ್ನು ನಾನು ಮೊದಲ ಬಾರಿ ಮೀಟ್ ಮಾಡಿದ್ದು. ಆಗ ಗುರುಗಳು "ನಾನು ಯಾರು ?" ಅನ್ನೋ documentary ಮೂವಿಯ ಸಿ ಡಿ ತೋರಿಸಿ, "ಇದನ್ನ ತಗೋ. ಸಕತ್ತಾಗಿದೆ. " ಅಂದಿದ್ದರು. ನಾನು " ಹೂಂ.." ಎಂದು ತಲೆಯಲ್ಲಾಡಿಸಿದ್ದೆ. ಆದರೆ ತಗೊಳ್ಳಕ್ಕೆ ಆಗಿರ್ಲಿಲ್ಲ. ಅದನ್ನ ಈ ವರ್ಷ ತಗೊಂಡೆ .

Z : ಒಂದು ವರ್ಷ ಬಿಟ್ಟು ?

ನಾನು : ಹೂಂ.ಆಮೇಲೆ ಶಂಕರಾಚಾರ್ಯರು ಬರೆದ "ಲಘು ವಾಕ್ಯ ವೃತ್ತಿ" ಅನ್ನೋ ಪುಸ್ತಕದ ಬಗ್ಗೆ ಕೇಳಿದ್ದೆ. ಏನೂ ಅಂತ ತಿಳ್ಕೊಳಕ್ಕೆ ಅದನ್ನ ತಗೊಂಡೆ. For some technical reasons, ನನಗೆ ದಕ್ಷಿಣಾಮೂರ್ತಿ ಸ್ತೋತ್ರ ಬೇಕಿತ್ತು. ಮನೆಯಲ್ಲಿ ಇರಲಿಲ್ಲ ಆ ಪುಸ್ತಕ. ಅದನ್ನೂ ಸೇರಿಸಿಕೊಂಡೆ. ಸಾಕು ಈ ಸರ್ತಿಗೆ, ಇನ್ಯಾವ್ ಪುಸ್ತಕನೂ ತಗೊಳಲ್ಲಾ ಅಂತ ಪ್ರತಿಜ್ಞೆ ಮಾಡಿ ಬಿಲ್ ಕೌಂಟರ್ ಗೆ ಬಂದೆ, ಅಲ್ಲಿ ಸೋಮನಾಥಾನಂದ್ ಜೀ ಅವರು ಬರೆದ "ಉಪನಿಷತ್ ಭಾವಧಾರೆ" ಪುಸ್ತಕ ನನ್ನ ಕಣ್ಣಿಗೆ ಬಿತ್ತು.

Z : As ususal, ಪ್ರತಿಜ್ಞೆ ಗಾಳಿಗೆ ತೂರಿದ್ದಾಯ್ತು.

ನಾನು : ಇಲ್ಲ..ನಾನು ಯೋಚ್ನೆ ಮಾಡಕ್ಕೆ ಶುರು ಮಾಡಿದೆ. ತಗೊಳ್ಳಕ್ಕೆ ದುಡ್ಡಿತ್ತು...ಆದ್ರೆ ಮನೆಗೆ ಬಂದ್ರೆ ಅಮ್ಮ ಅಣ್ಣ ಇಬ್ಬರೂ " ನೀನ್ ಹೋದ್ ಕಡೆ ಎಲ್ಲ ಟೆಂಪೋ ಅರೇಂಜ್ ಮಾಡ್ಬೇಕಾಗತ್ತೆ...ಇಷ್ಟ್ ಇಷ್ಟ್ ಪುಸ್ತಕ ಹೊತ್ಕೊಂಡು ಬರ್ತ್ಯಾ....ನಿಂಗಿಂತಾ ಭಾರ ಇರತ್ತೆ ಅವು. ನಾಲ್ಕು book racks ಭರ್ತಿ ಆದ್ವು...ಎಲ್ಲಿಂದ ಮಾಡ್ಸೋದು ಹೊಸದನ್ನ ?" ಅಂತ ಆಡ್ಕೋತಾರೆ ಅಂತ ಗೊತ್ತಿತ್ತು. ಅವರು ನನ್ನ ಪುಸ್ತಕ ಪ್ರೀತಿಗೆ ಯಾವತ್ತೂ ಅಡ್ಡಿ ಬಂದವರಲ್ಲ. ನಾನ್ ಕೇಳಿದ್ದಕ್ಕೆ ಯಾವತ್ತೂ ಇಲ್ಲಾ ಅಂತ ನೂ ಅಂದಿಲ್ಲ.The problem is, ಮನೆಯಲ್ಲಿ ಈಗ ಹುಡುಕಿದ್ರೂ ಎಲ್ಲೂ ಜಾಗ ಇಲ್ಲ . ಎಲ್ಲಪ್ಪಾ ಇಡೋದು ಇವನ್ನಾ ಅಂತ ಯೋಚನೆ ಶುರುವಾಯ್ತು. ಅಷ್ಟೊತ್ತಿಗೆ ಮಳಿಗೆ ಕ್ಲೋಸ್ ಆಗೋ ಟೈಂ ಬಂದಿತ್ತು. ಅತ್ತೆ ಬಂದು " ಆಯ್ತಾ ಶಾಪಿಂಗ್ ?" ಅಂದ್ರು.ನಾನು ನನ್ ಪರಿಸ್ಥಿತಿ ವಿವರಿಸಿದೆ. ಅವರು " ಅಯ್ಯೋ ಪೆದ್ದಿ, ಹತ್ತರಲ್ಲಿ ಇದೂ ಹನ್ನೊಂದ್ನೇ ದು. ಈಗ ಏನು, ನೀನು ತಗೊಂಡರೆ ಮನೆಲಿ ಜಾಗ ಇಲ್ಲ ಅಂತ comment ಬರತ್ತೆ ತಾನೆ ? ನಾನ್ ಕೊಡ್ಸಿದ್ರೆ ? ಬರಲ್ಲ ತಾನೆ ? ತಗೊ..ಇದೂ ನನ್ನ gift. flat discount ಸಿಕ್ಕೋವಾಗ chance miss ಮಾಡ್ಕೋಬಾರ್ದು" ಅಂದಿದ್ದೇ...ಪುಸ್ತಕ ನ ತಗೊಂಡು ಹೋಗಿ ಬಿಲ್ ಹಾಕ್ಸೇಬಿಟ್ರು.

Z : playwin ಗಿಂತಾ ರೋಮಾಂಚನಕಾರಿಯಾಗಿದೆ ಇದು.

ನಾನು : ಅಲ್ವಾ ? ನೋಡು, ನನ್ನ ಪ್ರತಿಜ್ಞೆ ಮುರಿಲೂ ಇಲ್ಲ, ಪುಸ್ತಕ ನ ತಗೊಳ್ಳದೇ ಇರ್ಲೂ ಇಲ್ಲ. ಹೇಗೆ ?

Z : ಕಿಲಾಡಿ ;-)

ನಾನು : ಆಮೇಲೆ SLV corner ನಲ್ಲಿ ಗಡತ್ತಾಗಿ ನಾರ್ಥ್ ಇಂಡಿಯನ್ ಊಟ ತಿಂದು, ರಾತ್ರಿ ಹತ್ತು ಮುಕ್ಕಾಲು ಸಮಯದಲ್ಲಿ cane-o-la ದಲ್ಲಿ ginger lime sugarcane juice ಕುಡಿದು, ಅತ್ತೆ ಮನೆಯಲ್ಲಿ ರಾತ್ರಿ ಠಿಕಾಣಿ ಹೂಡಿದೆ. ವಿಶ್ವ ಯುವ ದಿನದಂದು ಅರಬಿಂದೋ ಮತ್ತು ಸ್ವಾಮಿ ವಿವೇಕಾನಂದರ ಪುಸ್ತಕ ನನ್ನ ಪಾಲಿಗೆ ಬಂದದ್ದು ಅರ್ಥಪೂರ್ಣ. ಅದನ್ನ ಓದಲು ಶುರು ಮಾಡ್ಬೇಕು. ಅವರ ಆದರ್ಶನ ನಾನೂ atleast in picograms ( one pico= 10^-12) ಮೈಗೂಡಿಸ್ಕೋಬೇಕು. ದೇಶ ಉದ್ಧಾರ ಮಾಡಕ್ಕೆ ಮೊದಲು ನಾನು ಉದ್ಧಾರ ಆಗ್ಬೇಕು ಅಂತೆಲ್ಲಾ ಯೋಚ್ನೆ ಮಾಡಿದ್ದೇನೆ. ಆಗತ್ತಾ ಇಲ್ವಾ ನೋಡ್ಬೇಕು !

Z : ಸಿಕ್ಕಾಪಟ್ಟೆ ಪುಸ್ತಕ ಇದೆ ಓದೋಕೆ ಹಾಗಾದ್ರೆ....

ನಾನು : ಹೂಂ....ನೋಡೋಣ ಯಾವಾಗ ಓದಿ, ಅರಗಿಸಿಕೊಂಡು ಮುಗಿಸುತ್ತೇನೆ ಇವೆಲ್ಲ ಅಂತ !

8 comments:

ಸಂದೀಪ್ ಕಾಮತ್ said...

ಎಲ್ರೀ 150+150 photos?ನಿಮಗಿಂತ z ವಾಸಿ..

Lakshmi Shashidhar Chaitanya said...

ಸಂದೀಪ್,

ತಾಳಿದವನು ಬಾಳಿಯಾನು !

Ittigecement said...

ಲಕ್ಷ್ಮೀಯವರೆ...

ತುಂಬಾ ಚೆನ್ನಾಗಿದೆ...

ಅಂದು ಭಾಷಣಕ್ಕೆ ನಾವೂ ಹಾಜರಿದ್ದೇವು...

ತುಂಬಾ ಚೆನ್ನಾಗಿತ್ತು...

Harisha - ಹರೀಶ said...

ಉದ್ಧಾರ...


ನೀವೂ ಅಲ್ಲ, ದೇಶವೂ ಅಲ್ಲ.. ಪುಸ್ತಕದ ಅಂಗಡಿ..

PaLa said...

ಓದಿ ಓದಿ ಮರುಳಾದ ಕೂಚು ಭಟ್ಟ!

Anveshi said...

ನೀವು ಯಾವ್ದಾದ್ರೂ ಕಾರ್ಯಕ್ರಮಕ್ಕೆ ಹೋಗೋವಾಗ ಲಾರಿ ತಗೊಂಡು ಹೋಗ್ತೀರಾ? ಯಾಕಂದ್ರೆ ಟೆಂಪೋ ಸಾಲದೂಂತ ಆಗ್ಲೇ ಹೇಳಿಬಿಟ್ಟಿದ್ದಾರಲ್ಲ...

Dr. Udayana Hegde said...

nanna hesaru udayana anta

nanna maatru bhaashe samskrita.

can contact me at -udayanahegde@gmail.com

ವಿ.ರಾ.ಹೆ. said...

ಅರಬಿಂದೋ ಮತ್ತು ಸ್ವಾಮಿ ವಿವೇಕಾನಂದರ ಆದರ್ಶ 10^-15 ashtadrU maigoodisikondra?

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...