ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಬ್ಲಾಗಿನ ಹುಟ್ಟು ಹಬ್ಬ ಮತ್ತು ಹೊಸ ವರ್ಷ ಯಾವಾಗ್ಲು ಒಟ್ಟಿಗೆ ಬರತ್ತೆ. ಆದರೆ, ಮತ್ತೆ ಅದೇ flash back ಗೆ ಹೋಗಿ, ಅದೇ ಕಥೆಯನ್ನ ಹೇಳಿ ನಿಮ್ಮನ್ನ ಬೋರ್ ಹೊಡೆಸಲ್ಲ. ನೀವೆಲ್ಲ ಬುದ್ಧಿವಂತರು. Call history ತೆಗೆದು ನೋಡಿ ಈ ಬ್ಲಾಗ್ ಹೇಗೆ ಹುಟ್ಟಿತು ಅನ್ನೋದನ್ನ ಓದ್ಕೋತಿರಾ :)
ಹೌದು, ಇವತ್ತಿಗೆ ಮೂರು ವರ್ಷ ಆಗೋಯ್ತು ಈ ಬ್ಲಾಗ್ ಆರಂಭ ಆಗಿ. ಮೂರು ವರ್ಷಗಳಲ್ಲಿ ಬ್ಲಾಗ್ ಲೋಕದಿಂದ ನಾನು ಬಹಳಷ್ಟು ಒಳ್ಳೆ ಗೆಳೆಯರನ್ನು ಪಡೆದಿದ್ದೇನೆ.ನನ್ನ ಈ non stop ವಟವಟವನ್ನ ನೀವು ಪಾಪ ಬಹಳ ಉತ್ಸಾಹದಿಂದ, ಶ್ರದ್ಧೆಯಿಂದ, ಪ್ರೀತಿಯಿಂದ, ಅಭಿಮಾನದಿಂದ ಕೇಳುತ್ತಾ ಬರುತ್ತಿದ್ದೀರ. ಡೊಂಟ್ ವರಿ ಮಾಡ್ಕೊಳಿ, ಈ ವಟ ವಟ ಈ ವರ್ಷವೂ ಮುಂದುವರಿಯಲಿದೆ,on one condition: ನೀವು ಹೀಗೆ ಈ ಬ್ಲಾಗ್ ಓದೋದರ ಬಗ್ಗೆ ಉತ್ಸಾಹ, ಶ್ರದ್ಧೆ ಮತ್ತು ಪ್ರೀತಿ ನ ಮುಂದುವರಿಸಿದರೆ ಮಾತ್ರ ! :)
ಈ ಬ್ಲಾಗಿನ ಕಟ್ಟಾ ಅಭಿಮಾನಿ ವರ್ಗ ಈ ಬ್ಲಾಗು ನಿಯತವಾಗಿ ಅಪ್ಡೇಟ್ ಆಗ್ತಿಲ್ಲ ಅನ್ನೋದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಇದರ ಬಗ್ಗೆ ಸ್ವತಃ ಸ್ವಯಂ ಸಾಕ್ಷಾತ್ ನನಗೇ ಬೇಜಾರಿದೆ.I don't want reasons, I want results ಅಂತ ಸದಾ ಕಾಲ ಶಂಖ ಊದುವ ನಾನು, ಇಂದು ಬ್ಲಾಗ್ ಅಪ್ಡೇಟ್ ಆಗದಿರುವುದಕ್ಕೆ ನಿಮಗೆ ಕಾರಣ ಹೇಳಬೇಕೋ ಬೇಡವೋ ತಿಳಿಯದೇ ಪರದಾಡುತ್ತಿದ್ದೇನೆ. ಆದರೂ, ನೀವೆಲ್ಲಾ ನನ್ನನ್ನ ಅರ್ಥ ಮಾಡ್ಕೊತಿರಾ ಅನ್ನೋದರ ಬಗ್ಗೆ ದೃಢವಾದ ನಂಬಿಕೆ ಇದೆ ಆದ್ದರಿಂದ, ಕಾರಣಗಳನ್ನು ನಿಮ್ಮ ಮುಂದೆ ಇಡಬಯಸುತ್ತೇನೆ.
೧. ದಿನ ಬೆಳಗಾದರೆ ಕಾಲೇಜು, ಪಾಠ, ಮತ್ತು ನನ್ನ ಲ್ಯಾಬು, ಎಮ್.ಫಿಲ್ ಪ್ರಾಜೆಕ್ಟು, ಅದಕ್ಕಾಗಿ ಜೆ.ಸಿ.ರಸ್ತೆ ಮತ್ತು ಜಯನಗರ ಮೂರನೇ ಬ್ಲಾಕಿನ ನಡುವಿನ ಅವ್ಯಾಹತ ಓಡಾಟ."ನಾವೂ ಇದೇ ರಸ್ತೆಗಳಲ್ಲಿ ಓಡಾಡೋದು.ಅದರಲ್ಲಿ ಏನು ವಿಶೇಷ" ಅಂತ ನೀವು ಕಮೆಂಟೋ ಮುಂಚೆ ದಯವಿಟ್ಟು ನನ್ನ ಮಾತನ್ನ ಪೂರ್ತಿ ಕೇಳಿ. ನಿಮಗೆ ಆಫೀಸಲ್ಲಿ ಫ್ರೀ ಟೈಂ ಸಿಗಬಹುದು, ಆದರೆ ನನಗೆ ಕಾಲೇಜಲ್ಲಿ ಟೈಂ ಸಿಕ್ತಿಲ್ಲ.ಸಾಲದ್ದಕ್ಕೆ ಶನಿವಾರ ಭಾನುವಾರಗಳು ನಾನು ರಿಸರ್ಚ್ ಲ್ಯಾಬ್ನಲ್ಲಿ ವಾಸ್ತವ್ಯ ಹೂಡಿರುವ ಕಾರಣ, ವೀಕೆಂಡ್ ಬರುವುದೂ ಗೊತ್ತಾಗುತ್ತಿಲ್ಲ, ಹೋಗುವುದೂ ಗೊತ್ತಾಗುತ್ತಿಲ್ಲ. ಟೈಂ ಇಲ್ಲ ಅನ್ನೋರನ್ನ ನಂಬಬೇಡಿ ಅಂತ ಹಿರಿಯರು ಅಪ್ಪಣೆ ಕೊಡಿಸಿರುವರಾದರೂ, ನನ್ನ ಮಟ್ಟಿಗೆ, ಬ್ಲಾಗಲು ನನಗೆ ಟೈಂ ಇಲ್ಲದಿರುವುದು ನನ್ನ ಜೀವನದ ಸಧ್ಯದ ಮಹಾದುರಂತಗಳಲ್ಲೊಂದು.
೨. ಹಿಂದೆಲ್ಲಾ ರಾತ್ರಿ ಒಂದಕ್ಕೆ ಮಲಗಿ ಬೆಳಿಗ್ಗೆ ಎಂಟಕ್ಕೆ ಏಳುತ್ತಿದ್ದೆ. ಈಗ ಒಂಭತ್ತುವರೆಗೆ ಪಾಚ್ಕೊತಿದಿನಿ. ಯಾಕಂದ್ರೆ, earth polarity ಬದಲಾದರೂ, Land to water mass ratio interchange ಆದರೂ ನಾನು ಬೆಳಿಗ್ಗೆ ಎಂಟು ಹದಿನೈದರೊಳಗೆ ಕಾಲೇಜಲ್ಲಿರಬೇಕು. ಆದ್ದರಿಂದ ಸೂರ್ಯ ಯಾವಾಗ ಹುಟ್ಟುತ್ತಾನೋ, ನಾನು ಆಗಲೇ ಏಳಬೇಕು :(
೩. ನನ್ನ ಎಮ್.ಫಿಲ್ ಒಂದು ವರ್ಷಕ್ಕೆ ಪರಿಸಮಾಪ್ತಿಯಾಗದೇ ಇನ್ನೂ ಮೂರು ತಿಂಗಳು ಮುಂದೂಡಲ್ಪಟ್ಟಿದೆ.ಕಾರಣ ಮೂರು ಬಾರಿ experiments ಮಾಡಿದರೂ ಸರಿಯಾಗಿ ಬರದೇ ಕೈಕೊಟ್ಟ ನನ್ನ samples.ಮತ್ತು, ಮಹಾ ಭಾರತಕ್ಕೆ ಮತ್ತು ಕಾಳಿದಾಸನ ಮಹಾಕಾವ್ಯಕ್ಕೆ competition ಕೊಡುವ ರೀತಿಯಲ್ಲಿ ನನ್ನ ಥೀಸಿಸ್ ಇರಬೇಕು ಎಂದು ನನ್ನ ಗುರುಗಳು ಆಜ್ಞೆ ಮಾಡಿದ್ದಾರೆ. ಆ ಮಹಾಕಾವ್ಯದ ರಚನೆಗೆ ಇರೋ ಟೈಂ ಎಲ್ಲಾ ಮೀಸಲಿಡಬೇಕಾಗಿದೆ.ಇಷ್ಟು ತಿಂಗಳುಗಳಿಂದ ತಿನುಕಾಡಿ ಒಂದು ಅಧ್ಯಾಯ ಬರ್ದಿದಿನಿ, ಮಿಕ್ಕಿದ್ದಕ್ಕೆ ಗಣೇಶ ಮತ್ತು ಕಾಳಿದಾಸನ ಅನುಗ್ರಹ ಮತ್ತು ಸಹಾಯಕ್ಕೆ ವೈಟಿಂಗು.
ಹಿಂಗೆಲ್ಲಾ ಆಗೋಗಿರೋದ್ರಿಂದ, ನನಗೆ ಬ್ಲಾಗಲು ಆಗುತ್ತಿಲ್ಲ ಮತ್ತು ಎಲ್ಲರ ಬ್ಲಾಗುಗಳಿಗೆ ನನ್ನ ಭೇಟಿ ಆಲ್ಮೋಸ್ಟ್ ನಿಂತುಹೋಗಿದೆ. ಬಜ್ ನಲ್ಲಿ ಕಂಡದ್ದನ್ನಷ್ಟೇ ಓದುವ ಹಾಗಾಗಿದೆ. ಹಾಗಾಗಿ, ಬ್ಲಾಗಿಗೆ ಬಂದು ಕಮೆಂಟಿಸಲು ಸಾಧ್ಯವಾಗಿಲ್ಲ.ಇದಕ್ಕೆ ಸಹಬ್ಲಾಗಿಗರಲ್ಲಿ ಕ್ಷಮೆಯಾಚಿಸುತ್ತಿದ್ದೇನೆ.
ಆದರೂ ಈ ವರ್ಷದ ಹೈಲೈಟ್ಸ್ ಕೊಟ್ಟುಬಿಡುತ್ತೇನೆ. ಡೀಟೈಲಾಗಿ ಖಂಡಿತಾ ಏಪ್ರಿಲ್ ತಿಂಗಳಿನಿಂದ ಬ್ಲಾಗುತ್ತೇನೆ. ಫೂಲ್ ಮಾಡ್ತಿಲ್ಲ, ಪ್ರಾಮಿಸ್ ಮಾಡ್ತಿದಿನಿ. :)
೧. ಉತ್ತರಾಯಣ. ಸಕ್ಕತ್ತಾಗಿತ್ತು ಟೂರು. ಇದರ ಪ್ರತಿಯೊಂದು ಡೀಟೈಲ್ ಖಂಡಿತಾ ಬ್ಲಾಗುತ್ತೇನೆ.
೨. ಕೆಲವು ವಿಜ್ಞಾನದ ವರ್ಕ್ ಶಾಪುಗಳಿಗೆ ಹೋಗಿದ್ದೆ. ಒಳ್ಳೇ ಅನುಭವ.
೩.ಡಿಸೆಂಬರ್ ನಲ್ಲಿ ಮತ್ತೆ ಜಲೇಬಿನಾಡಿಗೆ ಮೂರುದಿನಗಳ ಪ್ರವಾಸ. ಅದರದ್ದೂ ಬ್ಲಾಗ್ ಬರಲಿದೆ, ಕಾಯಬೇಕಾಗಿ ಪ್ರಾರ್ಥನೆ.
೪. ಶನಿವಾರ ಭಾನುವಾರಗಳನ್ನೂ ಬಿಡದೆ, ರಜಾದಿನಗಳಲ್ಲಿಯೂ ಬೆಳಗಿಂದ ಸಾಯಂಕಾಲ ನಾನು ಲ್ಯಾಬ್ ವಾಸ್ತವ್ಯ ಹೂಡಿರುವುದರಿಂದ ರಿಸರ್ಚ್ ಲ್ಯಾಬಿನಿಂದ ನನ್ನನ್ನು ಓಡಿಸಲು ಉತ್ಸುಕನಾಗಿದ್ದಾನೆ ನಮ್ಮ ಲ್ಯಾಬಿನ ವಾಚ್ಮಾನ್ !
೫.ಅಡುಗೆ ಮನೆಗೆ ಹೋಗದೆ, ಅಡುಗೆ ಮಾಡದೇ, ಅಮ್ಮನ ಹತ್ತಿರ 2010 ರಲ್ಲಿ ಸರಿಸುಮಾರು ಒಂದು ಲಕ್ಷ ಸರ್ತಿ ಬೈಸಿಕೊಂಡಿದ್ದೇನೆ. ಮನೆಯ ಕೆಲಸಗಳ ಕಡೆಗೆ ಗಮನ ಕೊಡದಿರುವ,ಮತ್ತು ಸದಾ ಕಾಲ ಮಹಾಕಾವ್ಯ ರಚನೆಯಲ್ಲಿ ತಲ್ಲೀನಳಾಗಿ ಮಿಕ್ಕೆಲ್ಲದ್ದಕ್ಕೆ ವಿದಾಯ ಹೇಳಿರುವ ಕಾರಣ ಅಮ್ಮ ನನ್ನನ್ನು ಮನೆಯಿಂದ ಓಡಿಸಲು ಹವಣಿಸುತ್ತಿದ್ದಾರೆ. ;)
೬.ಸುಶ್ರುತನ ಕೈಲಿ ಮಾಡಿಸಿದ ಕ್ಯಾರಟ್ ಸಾರಿನ experiment work ಆಗಿದೆ.
೫.Anchor stich kit. ಏನ್ ಚೆನ್ನಾಗಿದೆ ಗೊತ್ತಾ ಅದು ! ಒಂದು ಕಿಟ್ಟಲ್ಲಿ ಎರಡು ಟ್ವೀಟಿ ಮರಿಗಳಿರುವ ಚಿತ್ರವನ್ನು cross stich ನಲ್ಲಿ ಹಾಕಿ, ಅದನ್ನ ಫ್ರೇಮ್ ಮಾಡಿಸಿದೆ. ಅದೇ ಜೋಷಿನಲ್ಲಿ, ಈಗ ಜಿಂಕೆ ಮರಿಯನ್ನು stich ಮಾಡುತ್ತಿದ್ದೇನೆ. ಮಜಾ ಬರ್ತಿದೆ :)
೬.ಪಾನಿ ಪುರಿ ಮತ್ತು ಐಸ್ ಕ್ರೀಮ್ ನ ಸ್ನೇಹಿತರೊಟ್ಟಿಗೆ ಹಿಂದಿನಂತೆ ನಿಧಾನಕ್ಕೆ ಚಪ್ಪರಿಸಿಕೊಂಡು ತಿನ್ನಕ್ಕೆ ಆಗಿಲ್ಲ :( ಜಯನಗರದಂತಹಾ ಜಯನಗಕ್ಕೆ ಪ್ರತಿದಿನ ಹೋದರೂ ಪಾನಿಪುರಿ ತಿನ್ನಲಾಗದ ನನ್ನ ದೌರ್ಭಾಗ್ಯವನ್ನು ವರ್ಣಿಸಲು ಪದಗಳಿಲ್ಲ.ಮೈಯಾಸ್ ಗೆ ಮಾತ್ರ ವಿಸಿಟ್ಟು ಕೊಡುತ್ತಿದ್ದೇನೆ ಅಷ್ಟೇ.
೭.ಹೊಸ ಫೋನ್. ನಮ್ಮಪ್ಪ ಗಿಫ್ಟ್ ಮಾಡಿದ್ರು ನನ್ನ ಹುಟ್ಟುಹಬ್ಬಕ್ಕೆ. Nokia X6. ಫೋನ್ ಸಕತ್ತಾಗಿದೆ.ಆದರೆ ಅದಕ್ಕೆ ಒಗ್ಗಲು ನನಗಿನ್ನೂ ಸಮಯ ಬೇಕಾಗಿದೆ. ಸಿಕ್ಕಾಪಟ್ಟೆ ಯೋಚನೆ ಮಾಡಿ, ಫೋನಿಗೆ ಪ್ರಿಯಂವದಾ ಅಂತ ನಾಮಕರಣ ಮಾಡಿದೆ. ಹಿರಣ್ಮಯಿಯನ್ನು ನನ್ನ ತಂಗಿಗೆ ಹಸ್ತಾಂತರಿಸಿದೆ.
ಇಷ್ಟು ೨೦೧೦ ಮುಖ್ಯಾಂಶಗಳು. ಈ ವರ್ಷ ಎಮ್.ಫಿಲ್ ಮುಗಿಯತ್ತೆ. ವಟವಟಕ್ಕೆ, ಗುಸುಗುಸುವಿಗೆ ನನ್ನ ಸಮಯ ಮಿಸಲಿರತ್ತೆ.2011 ಬಗ್ಗೆ ಸಿಕ್ಕಾಪಟ್ಟೆ ಆಸೆ, ಭರವಸೆ ಇಟ್ಟುಕೊಂಡಿದ್ದೇನೆ. ನೀವು ಇಟ್ಕೊಂಡಿರ್ತಿರ. ಇಟ್ಕೊಂಡಿಲ್ಲಾಂದ್ರೆ ಇಟ್ಕೊಳ್ಳಕ್ಕೆ ಶುರು ಮಾಡಿ. ನಮ್ಮ ನಿಮ್ಮೆಲ್ಲರ ಜೀವನದ ಎಲ್ಲ ಆಸೆಗಳು ಈಡೇರಲಿ, ಭರವಸೆ ಬತ್ತದಿರಲಿ ಅಂತ ಆಶಿಸುತ್ತೇನೆ .Wish you all a very happy 2011!
ಜೀವನದೊಂದಿಗಿನ ನಮ್ಮ ಮಾತು lifetime ! ಇದರಲ್ಲಿ incoming -ಊ free outgoing -ಊ free !
ನನ್ನ ज़िंदगीಯೊಂದಿಗಿನ nonstop ಗುಸುಗುಸುವನ್ನು ಇಲ್ಲಿ ಬಿಚ್ಚಿಟ್ಟಿದ್ದೇನೆ.
Subscribe to:
Post Comments (Atom)
ಉತ್ತರಾಯಣ ೩
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ನಾನು : There is always a next time. Z : ಹೌದಾ ? ನಾನು : ಹೌದು. Z : ಪ್ರತೀ ಸಲವೂ ಹೀಗೆ ಆದರೆ ಗತಿಯೇನು ? ನಾನು : ಅದಕ್ಕೆ ನಿನ್ನ pessimistic ಅಂತ ಬೈಯ್ಯ...
-
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಬ್ಲಾಗಿನ ಹುಟ್ಟು ಹಬ್ಬ ಮತ್ತು ಹೊಸ ವರ್ಷ ಯಾವಾಗ್ಲು ಒಟ್ಟಿಗೆ ಬರತ್ತೆ. ಆದರೆ, ಮತ್ತೆ ಅದೇ flash back ಗೆ ಹೋಗಿ, ಅದೇ ...
15 comments:
Hosa Varshada HArdika ShubhAshayagaLu mattu Jindagi~ge HuTTu Habbada ShubhAshayagaLu....ee Jindagi sadAkAla heege JeevanmukhiyAgi hariyutirali..:)
ನಿಮಗೂ ಹೊಸವರ್ಷದ ಶುಭಾಶಯಗಳು. ಹೊಸವರ್ಷದಲ್ಲಿ ನಿಮ್ಮ ಎಮ್.ಫಿಲ್. ಬೇಗ ಮುಗಿದು ಪಾನಿಪುರಿ ತಿನ್ನಕ್ಕೆ ಟೈಮು ಸಿಗ್ಲಿ!
ಆದಷ್ಟು ಬೇಗ ಥಿಸಿಸ್ ಕಂಪ್ಲೀಟ್ ಆಗ್ಲಪ್ಪಾ.... ಆವಾಗ್ಲೇ ನಮ್ಮೊಂಥರ ಕಷ್ಟ ಪರಿಹಾರವಾಗೋದು ಬೇಗ :)
ಅಭಿನಂದನೆಗಳು. (ಹಿರಣ್ಮಯಿನೇ ಚೆನ್ನಾಗಿದೆ ಹೆಸ್ರು ಪ್ರಿಯಂವದಕ್ಕಿಂತ)
Rohini, srinidhi and Tejaswini,
Thanks so much for your wishes. :)
tejakka,
nange priamvada hesru ishta hiranmayi ginta.
innoo yaaroo pickkE madlilvenri? 3 varshadinda..?
@sush, pick maadiddidre ee line busy aagirodu. innu aagilla implies...
swalpa overraytu. but adroo ok. keep calling... ;)
vi.ra.he,
nimma self contradicting statement na artha maadkollo ashtu buddhivante naanalla. aadru, thanks for the comment.
ಲಕ್ಷ್ಮಿ ಟೀಚರ್, ಪರಮ ಪವಿತ್ರವೂ, ಮನೋಹರವೂ ಆದ ವಿಜ್ಞಾನ ಕ್ಷೇತ್ರದಲ್ಲಿ ನಿಮ್ಮ ಸಾಧನೆಯನ್ನು ಮುಂದುವರಿಸಿ. ಯಶಸ್ಸು ನಿಮ್ಮದಾಗಲಿ
I am one of the 'katta abhimani' of this blog. Waiting for furhter updates...
It is really very good blog...
nandoo ditto SRINIVASA.
jotege, oLLE oota haakisi mane bittu hoguvavaraagi ;-)
~ Harsha
innen naalkane varshaa kooda bandubidtu.. update aaglilla :-D
~ Harsha
4 varsha aaytu :) congrats.. but 1 varsha updates illa.. paapa nim blogu..
Post a Comment