Saturday, August 16, 2008

ಪಾಪ !

ನಾನು : ಪಾಪ ! ಪಾಪ ! ಪಾಪ !!!!!!!!!!

Z : ಏನಾಯ್ತು ? ಪಾಪಗುಟ್ಟುತ್ತಿದ್ದೀಯಾ ?

ನಾನು : ಮೊನ್ನೆ ಮಂಗಳೂರಿನ ಬಳಿ ಪಾಪ ಪುಟ್ಟ ಪಾಪುಗಳು ಹೋಗುತ್ತಿದ್ದ ಬಸ್ಸು ನದಿ ನೀರಿಗೆ ಉರುಳಿ ಎಲ್ಲಾ ಪಾಪುಗಳು ನೀರುಪಾಲಾದವಂತೆ Z !

Z : ಛೆ ! ಅನ್ಯಾಯ !

ನಾನು : ಇದು ಒಂಥರಾ ವಿವವರಿಸಲು ಆಗದ, ತರ್ಕಕ್ಕೆ ನಿಲುಕದ ಸಂಗತಿ. ಅನ್ಯಾಯ...ಅವೇನು ಮಾಡಿದ್ದವು ಪಾಪ...ಪಾಪದಂಥವು, ಶಾಲೆಗೆ ಹೊರಟಿದ್ದವು...ಕುಂಭದ್ರೋಣ ಮಳೆಯನ್ನೂ ಲೆಕ್ಕಿಸದೇ...ತಮ್ಮದೇ ಲೋಕದಲ್ಲಿ ಕುಣಿದಾಡುತ್ತಾ, ಅವರದ್ದೇ ಕನಸಿನ ಸಮುದ್ರದಲ್ಲಿ ತೇಲುತ್ತಾ ಇದ್ದವು...ಛೆ ! ಮುಳುಗಿ ಹೋದವು ! ಪ್ರಳಯ ರೂಪ ತಾಳಿದ ನದಿನೀರಿನಲ್ಲಿ ! ನನಗಂತೂ tv9ನಲ್ಲಿ ನ್ಯೂಸ್ ನೋಡಿದ್ದೇ ವಿಪರೀತ ಸಂಕಟವಾಯ್ತು. ಕಣ್ಣಿಂದ ಧುಮುಕಲು ಯತ್ನಿಸುತ್ತಿದ್ದ ನೀರನ್ನು ಅದು ಹೇಗೆ ತಡೆದೆನೋ ನನಗಿನ್ನೂ ಅರ್ಥವಾಗುತ್ತಿಲ್ಲ. ಆ ಮೂವತ್ತು ಮಕ್ಕಳಲ್ಲಿ ಎಷ್ಟು ವಿಜ್ಞಾನಿಗಳಿದ್ದರೋ, ಎಷ್ಟು ವೈದ್ಯರಿದ್ದರೋ, ಯಾರು ಅವರಲ್ಲಿ ವಿಶ್ವೇಶ್ವರಯ್ಯನಾಗಬಹುದಿತ್ತೋ, ಯಾರು ಕಾರಂತರಂಥವರೋ, ಯಾರು ರಾಧಕೃಷ್ಣರಾಗುತ್ತಿದ್ದರೋ ? ಅನ್ಯಾಯ Z ... ಭವಿಷ್ಯ ರೂಪುಗೊಳ್ಳಬೇಕಿದ್ದ ಮಕ್ಕಳ ಈ ತರಹದ ಸಾವು ನಿಜವಾಗಿಯೂ ನನ್ನನ್ನು ಏನೂ ಹೇಳಲಾಗದ ಮೌನ ಸ್ಥಿತಿಗೆ ನೂಕಿತ್ತು ಎರಡು ದಿನ ! ನೆನ್ನೆ ಹಬ್ಬ ಇತ್ತಾದರೂ, ಒಂದು ಕ್ಷಣ ಆ ಮಕ್ಕಳ ಮನೆಯಲ್ಲಿರಬಹುದಾದ ಸೂತಕದ ಛಾಯೆ ನನ್ನ ಕಣ್ಣು ಮುಂದೆ ಹಾಗೇ ಹಾದು ಹೋಯ್ತು .

ಆಗುವುದನ್ನು ತಡೆಯಲಸಾಧ್ಯವಾದಾಗಲೇ ಪ್ರಾಯಶಃ ಅಪಘಾತ ಸಂಭವಿಸುವುದು. ಅಪಘಾತದ ಹಿಂದಿನ ನೋವಿನ ಅರಿವು ನನಗಿದೆ. ಆಗಬಾರದಿತ್ತು...ಆಗಿಹೋಯ್ತು. ಆ ಮಕ್ಕಳ ತಂದೆ ತಾಯಿಗಳಿಗೆ ಮತ್ತೆ ಅವರ ಕಂದಮ್ಮಗಳನ್ನು ಮರಳಿ ದೊರಕಿಸಿಕೊಡಲು ನಮ್ಮ ಬಳಿ ಸಂಜೀವಿನಿ ಪರ್ವತವಾಗಲಿ, ದ್ರೋಣಗಿರಿಯಾಗಲಿ, ಚಿಂತಾಮಣಿಯಾಗಲಿ ಇಲ್ಲ ! ಇದು ಭರಿಸಲಾಗದ ನಷ್ಟ. ನಾವು ನಮ್ಮ ಸಹಾನುಭೂತಿ ಮತ್ತು ಶೋಕವನ್ನು ವ್ಯಕ್ತಪಡಿಸಬಹುದಷ್ಟೇ ವಿನಃ ಇನ್ನೇನೂ ಸಾಧ್ಯವಿಲ್ಲ. ಆ ಕಂದಮ್ಮಗಳ ಅಕಾಲ ಮೃತ್ಯುವಿಗೆ ಇದು ಭಾವಪೂರ್ಣ ಅಶ್ರುತರ್ಪಣ.

Z : sniff ! ನನ್ನದೂ ಶ್ರಧ್ಧಾಂಜಲಿ !

Wednesday, August 13, 2008

hopeless fellow ಪದದ ತರ್ಜುಮೆ !

Z : ಇತ್ತೀಚೆಗೆ ನೀನು ಟೈಂ ಪಾಸ್ ಬಿಟ್ಟು ಇನ್ನೇನೂ ಮಾಡುತ್ತಿಲ್ಲ ಅಲ್ಲಾ ?

ನಾನು : ಹಾಗೇನಿಲ್ಲ. ಟೈಂ ಪಾಸ್ ಬಿಟ್ಟು ಬೇಕಾದಷ್ಟು ಕೆಲ್ಸ ಮಾಡ್ತಿದಿನಿ. for example : ನಿದ್ದೆ, ಊಟ, etc.

Z : ಕರ್ಮಕಾಂಡ !

ನಾನು : ಸಾಕು ನಿನ್ನ ಉದ್ಗಾರ . ಇವತ್ತೇನಾಯ್ತಪ್ಪಾ ಅಂದ್ರೆ...

ಮದ್ಯಾಹ್ನ ನಾನು ಆನ್ಲೈನ್ ಬಂದೆ..ಶ್ರೀಕಾಂತ್ ಇದ್ದರು..ನಾನೇ ನನ್ನ ಕೆಟ್ಟುಹೋಗಿದ್ದ ಮೈಕ್ ನ ರಿಪೇರಿ ಮಾಡಿದ ಖುಶಿ ಲಿ ಗೂಗಲ್ ಟಾಕಿನಲ್ಲಿ ಫೋನಿಸಿದೆ. ತರ್ಜುಮೆಗಳ ಬಗ್ಗೆ ಸಲ್ಪ ಮಾತಾಡೋದಿತ್ತು. ಮಾತಾಯ್ತು. ನಂತರ ಪಾಪ ಶ್ರೀಕಾಂತರ ಬೈಕ್ ಇವತ್ತು ಕೆಟ್ಟು ಅವರು ಪಟ್ಟ ಅವಸ್ಥೆ / ಅವ್ಯವಸ್ಥೆಗಳನ್ನು ಕೇಳುತ್ತಿರುವಾಗ ಎಲ್ಲಿಂದಲೋ ಸಡನ್ನಾಗಿ ನನ್ನ ತಲೆಯಲ್ಲಿ ಒಂದು ಪ್ರಶ್ನೆ ಉದ್ಭವವಾಯಿತು.

Z : ಏನ್ ಪ್ರಶ್ನೆ ?

ನಾನು : hopeless fellow ಅನ್ನುವ ನುಡಿಗಟ್ಟನ್ನು ಶುದ್ಧ ಕನ್ನಡದಲ್ಲಿ ಏನನ್ನುತ್ತಾರೆ ?

Z : ಆಹಾ ! million dollar question-ನ್ನು !

ನಾನು : ಹೂ ಮತ್ತೆ ! ನಾನು ಪ್ರಶ್ನೆ ಕೇಳುವ ಹೊತ್ತಿಗೇ ಕರ್ಮಕಾಂಡ ಪ್ರಭುಗಳು ಆನ್ಲೈನ್ ಬಂದರು. ನಮಸ್ಕಾರ ಮತ್ತು ಉಭಯಕುಶಲೋಪರಿ ಸಾಂಪ್ರತದ ನಂತರ ಏನು ಮಾಡುತ್ತಿದ್ದೀರಿ ಅಂತ ಅವರು ನನ್ನ ಕೇಳಿದರು. ನಾನು ಶ್ರೀಕಾಂತರ ಜೊತೆ ಟಾಕಿಸುತ್ತಿರುವುದನ್ನು ತಿಳಿಸಿದೆ. ಯಥಾ ಪ್ರಕಾರ "ಗೂದ್ " ಎಂದರು. " ಗೂದ್" ಅನ್ನುವುದು ಅವರು ಪೇಟೆಂಟಿಸಿಕೊಂಡಿರುವ ಶಬ್ದ. ಈ ಪ್ರಶ್ನೆ ಉದ್ಭವವಾದ ಕೂಡಲೆ ನಾನು ಶ್ರೀಕಾಂತರನ್ನು ಕೇಳಿದೆ. ಅವರು ಒಡನೆಯೇ ಉತ್ತರಿಸಿದರು -

"ನಿರಾಶಾದಾಯಕ ಮನುಷ್ಯ " ರಿ...

ಆಮೇಲೆ ಕರ್ಮಕಾಂಡ ಪ್ರಭುಗಳನ್ನ ಕೇಳಿದೆ . ಅವರು ಕೊಟ್ಟ ಉತ್ತರಗಳು ಮತ್ತು ನಮ್ಮಿಬ್ಬರ ನಡುವೆ ನಡೆದ ಸಂಭಾಷಣೆಯ ತಿರುಳು ಇಷ್ಟು :
goodh boy.. :) ಅಂದರು ಮೊದಲು. ನಂತರ hoplessa fella... ಆಮೇಲೆ.. hope = aashe..less = kammi fellow = mansha.. aashekammi mansha..
aashekammi maanava... ಇದಾದ ಮೇಲೆ ಅವರು ಉಪದೇಶ ಶುರು ಮಾಡಿದರು...ಕೆಲವು ಪದಗಳೆ ಅದೇ ಭಾಷೆಯಲ್ಲಿ ಇದ್ದರೆ ಚೆನ್ನ...ತರ್ಜುಮೆ ಮಾಡಬೇಡಿ ಅಂತ. ನಾನು ಬಿಡಲಿಲ್ಲ. ಶ್ರೀಕಾಂತರೂ ! ಅವರ ಕಾಲೆಳೆಯಲು, ಅವರನ್ನು ಮರ ಹತ್ತಿಸಲು ನಾವು ನಿರ್ಧಾರ ಮಾಡಿಬಿಟ್ಟಿವು ! ಇದರ ಮಧ್ಯದಲ್ಲಿ ನಾನು ಶ್ರೀಕಾಂತರಿಗೆ ಇದೇ ಪ್ರಶ್ನೆಯನ್ನು ಅರುಣ್ ಗೆ ಮತ್ತು ಶ್ರೀನಿವಾಸರಿಗೆ ಕೇಳಿ ಅಂತ ಹೇಳಿದೆ. ಅವರು ಮೆಸೇಜಿಸಿದರು. ನನಗೆ ಮತ್ತು ಕರ್ಮಕಾಂಡಪ್ರಭುಗಳಿಗೂ ಸೇರಿ !

Z : ನಿನಗೆ ಯಾಕೆ ?

ನಾನು : ರೆಕಾರ್ಡ್ ಗೆ !

Z : ಆಹಾ ! ಅದ್ಭುತ ! ಆಮೇಲೆ ?

ಇದನ್ನು ನೋಡಿದ ಕರ್ಮಕಾಂಡ ಪ್ರಭುಗಳು ನಾವು ಅವರಿಗೆ ಮರ ಹತ್ತಿಸಲು ನಿರ್ಧರಿಸಿದ್ದೀವಿ ಅಂತ ಗೊತ್ತಾಗಿ..." ಏನ್ ಗಲಾಟೆ ನಿಮ್ಮದು ? " ಅಂತ ಕೇಳಿದರು. ನಾನು ಏನೂ ಗೊತ್ತಿಲ್ಲದವರಂತೆ " ಏನೂ ಇಲ್ಲಪ್ಪ ! " ಅಂತ ಅಂದೆ ! ಸರಿ ಅವರು.."ನಾನು ಹೊರಟೆ" ಅಂತ ಹೇಳಿ escape ಆಗೋದ್ರು ! ಮರ ಹತ್ತಲಿಲ್ಲ ಚಾಣಾಕ್ಷರು !

Z : ಸರಿ ಹೋಯ್ತು !

ನಾನು : ಹೆ ಹೆ...ಇದರ ಮಧ್ಯೆ ಶ್ರೀಕಾಂತರು ತಮ್ಮ ತರ್ಜುಮೆಯನ್ನು ಸಂಸ್ಕೃತದಲ್ಲೂ ಮಾಡಲಿಚ್ಛಿಸಿ, ಇದರ ತರ್ಜುಮೆಯನ್ನು ಎರಡೂ ರೀತಿಯಲ್ಲಿ ಮಾಡಿ ಕಳಿಸಿದರು. ಒಂದು - ನಿರಾಶಾಮಗ್ನ ಮನುಷ್ಯ. ಎರಡು - ಆಶಾಧಮ ಸಖ (ಸಂಸ್ಕೃತ ತರ್ಜುಮೆ ).

ಇದಾಗುವ ಹೊತ್ತಿಗೆ ಗುರುಗಳು ತಮ್ಮ ತರ್ಜುಮೆ ಕಳಿಸಿದ್ದರು :

ನಿರಾಶಾದಾಯಕ ಮನುಷ್ಯ ಅಂತ

ಅವರ ಮೆಸೇಜಿನ ಹಿಂದೆಯೇ ಗಂಡಭೇರುಂಡರ ಮೆಸೇಜು..ಪದವಿಭಾಗ ಸಮೇತ :
aashaa ( hope )
kammi (less )
aaLu ( fellow )

ನಾವಂತೂ...ನಕ್ಕು ನಕ್ಕೂ ಸುಸ್ತು !!

Z : ಆಹಾ ! ಒಬ್ಬೊಬ್ಬರೂ ಸರೀಗಿದ್ದೀರಿ ತರ್ಜುಮೆ ಪ್ರವೀಣರು !! ನಿನ್ನ ತರ್ಜುಮೆ ?

ನಾನು : ನಾನು ತುಂಬಾ ಚಿಕ್ಕವಳು. ಶ್ರೀ ಸಾಮಾನ್ಯೆ ! ಆದ್ದರಿಂದ ಈಗ ನಾನು ತರ್ಜುಮೆ ಮಾಡಲು ಆಗುವುದಿಲ್ಲ. by the way, this question is open to all. ಎಲ್ಲರೂ ಈ ನುಡಿಗಟ್ಟಿನ ಕನ್ನಡ ತರ್ಜುಮೆಯನ್ನು ಮಾಡಬಹುದು. ಎಲ್ಲರದ್ದೂ ಆಗಲಿ...ಆಮೇಲೆ ನಾನು ನನ್ನ ತರ್ಜುಮೆಯನ್ನು ಮಾಡಲು ಪ್ರಯತ್ನಿಸುವೆ !

Z : :) :) : ) ಸರಿ !

ನಾನು : ಎಲ್ಲರೂ ಪ್ರಯತ್ನಿಸಿ ! ಆಲ್ ದಿ ಬೆಸ್ಟ್ !
ಅತಿವಿಶೇಷ ಸೂಚನೆ : ತರ್ಜುಮೆ "ಶುದ್ಧ" ಕನ್ನಡದಲ್ಲಿರಬೇಕು.

Friday, August 8, 2008

ಇವತ್ತಿನ ದಿನ ಚೆನ್ನಾಗಿದೆಯಂತೆ !

Z : ಏನ್ ವಿಶೇಷ ಇವತ್ತು ?

ನಾನು : ಗೊತ್ತಿಲ್ವಾ ? ಇವತ್ತಿನ ಡೇಟ್ ನೋಡು - 08-08-08 !! ಬರೀ ಎಂಟುಗಳು ! ಚೆನ್ನಾಗಿದೆ ಅಲ್ವ ?

Z : looks nice !! ಇವತ್ತು Olympics ಬೇರೆ start ಆಗತ್ತೆ ಅಲ್ವ ?

ನಾನು : ಹೂ...start ಆಗೋಗಿದೆ. ನನಗೆ ಅದರ ಬಗ್ಗೆ ಇಂಟೆರಸ್ಟ್ ಇಲ್ಲ. ನಾನು ನಿನಗೆ ಹೇಳಬೇಕಾಗಿರುವ ವಿಷಯ ಒಂದಿದೆ.

Z : ಬೇಗ ಹೇಳು...ನೀನಿಥರ ಕುಣಿಯುತ್ತಿರುವುದನ್ನ ನೋಡಿದರೆ ವಿಷಯ ಏನೋ ಇದ್ದಹಾಗಿದೆ.

ನಾನು : ಯೆಸ್ !! ವಿಷಯ ಏನಪ್ಪ ಅಂದರೆ - ನಾಗರಪಂಚಮಿಯ ದಿನ ಗುರು ದೊಡ್ಡಪ್ಪ ನಾನು ಎಮ್. ಎಸ್ಸಿ ನ distinction ನಲ್ಲಿ clear ಮಾಡಿದ್ದಕ್ಕೆ ಆಶೀರ್ವಾದ ಪೂರ್ವಕವಾಗಿ ಐನೂರು ರುಪಾಯಿ ಕೊಟ್ಟರು. ಬಟ್ಟೆ, ಬಳೆ ಇವೇ ಮುಂತಾದವುಗಳನ್ನ ತಗೋ ಅಂತ.

Z : ತಗೊಂಡ್ಯಾ ?

ನಾನು : ಇಲ್ಲ.

Z : ಇಷ್ಟೇನಾ ? ಇದು ವಿಷಯ ನಾ ?

ನಾನು : ಥುಥ್ ! ಇದಲ್ಲ ವಿಷಯ. ವಿಷಯ ಏನಪ್ಪಾ ಅಂದರೆ...ಆ ಐನೂರು ರುಪಾಯಿಯನ್ನು ನಾನು ಹೇಗೆ ಖರ್ಚು ಮಾಡಿದೆ ಅನ್ನೋದರ ಬಗ್ಗೆ. ಇವತ್ತು ಸಾಯಂಕಾಲ ಅಂಕಿತ ಪುಸ್ತಕಕ್ಕೆ ಹೋಗಿ exactly Rs. 490 ಬಿಲ್ಲ್ ಆಗುವಂತೆ ಪುಸ್ತಕಗಳನ್ನ ಖರೀದಿ ಮಾಡಿದೆ !!

Z : :- ) :-) :-) good ! ಏನ್ ತಗೊಂಡೆ ?

ನಾನು : ಅಮೇರಿಕಾದಲ್ಲಿ ಗೊರೂರು ಅನ್ನೋ ಪುಸ್ತಕ ನ ಜೀವನದಲ್ಲಿ ಒಂದು ಸರ್ತಿ ಓದಲೇ ಬೇಕು ಅಂತ 8th standard ನಲ್ಲಿ ಇರೋವಾಗ ನಮ್ಮ ಕನ್ನಡ ಟೀಚರ್ ವಿಜಯವಳ್ಳಿ ಮೇಡಮ್ ಹೇಳಿದ್ದರು. ಈ ಪುಸ್ತಕವನ್ನು ನಾನು ಹುಡುಕದ ಲೈಬ್ರರಿಯಿಲ್ಲ. ಪ್ರತಿಸಲ ಗೌರಿ ಹಬ್ಬಕ್ಕೆ ಬಂದ ದುಡ್ಡು ಹೀಗೆ ಬಂದು ಹಾಗೆ ಹೊರಟುಹೋಗುತ್ತಿದ್ದವು. ನನಗೆ ಹುಟ್ಟು ಹಬ್ಬದ ಗಿಪ್ಟುಗಳಾಗಿ ನಾಯಿ ಬೆಕ್ಕುಗಳು, ಟೆಡ್ಡಿ ಬೇರುಗಳು, ಬಳೆ, ಸರ ಇತ್ಯಾದಿಗಳೇ ಬರುತ್ತಿದ್ದವು.ಮತ್ತೂ, ನಾನು ದುಡ್ಡು ಕೂಡಿಸಿ ಪೋಸ್ಟ್ ಗ್ರಾಡುಯೇಷನ್ ಗೆ ಬೇಕಾದ ಪುಸ್ತಕಗಳನನ್ನೇ ಖರೀದಿಸಬೇಕಾಗಿ ಬರುತ್ತಿತ್ತು. ಒಂದು ವಿಷಯಕ್ಕೆ ಮಿನಿಮಮ್ ಎರಡು ಪುಸ್ತಕ ಓದಲೇ ಬೇಕಿತ್ತು. ನಾಲ್ಕು ಪುಸ್ತಕಗಳು reference ಗೆ. ವಿಷಯಕ್ಕೆ ಎರಡರಂತೆ ನಾಲ್ಕಕ್ಕೆ ಎಂಟು ಪುಸ್ತಕಗಳು. ಮಿಕ್ಕಿದ್ದು ಲೈಬ್ರರಿಯಲ್ಲಿ ಹುಡುಕಾಡುವುದು. ಪುಸ್ತಕಗಳೋ, ಮುಟ್ಟಿದರೆ ಐನೂರರ ಕಡಿಮೆ ಇರುತ್ತಿರಲಿಲ್ಲ. ಡಿಸ್ಕೌಂಟ್ ಗಾಗಿ ಮಲ್ಲೇಶ್ವರದ ಟಾಟಾ ಬುಕ್ ಹೌಸ್ ಗೆ ಹೋಗುತ್ತಿದ್ದೆಯಾದರೂ, ಸೆಮೆಸ್ಟರ್ ಗೆ ಮೂರು ಸಾವಿರದ ವರೆಗೂ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಣ್ಣ ಮರುಮಾತಿಲ್ಲದೇ ಪುಸ್ತಕ ಅಂದ ತಕ್ಷಣ ಹೇಗೋ ದುಡ್ಡು ಕೊಡುತ್ತಿದ್ದರು. ವಿಪರ್ಯಾಸ ಏನಂದರೆ ಒಂದು ರುಪಾಯಿಯೂ ಮಿಗುತ್ತಿರಲಿಲ್ಲ, ಇಂತಹ ಪುಸ್ತಗಳನ್ನ ಕೊಳ್ಳಲು ! :-(

ಇವತ್ತು ನನ್ನ ಹೆಬ್ಬಯಕೆ ಈಡೇರಿತು. ಎಂಟು ವರ್ಷದ ನನ್ನ ಅವಿರತ ಬೇಟೆಯ ಫಲವಾಗಿ ಇವತ್ತು ಆ ಪುಸ್ತಕ ನನ್ನ ಕಣ್ಣಿಗೆ ಬಿತ್ತು ! ಅದನ್ನ ನೋಡಿದ ತಕ್ಷಣ ತಿಂಗಳುಗಟ್ಟಲೆ ಅನ್ನ ಕಾಣದೇ ಹಸಿದ ಮನುಷ್ಯನೊಬ್ಬನಿಗೆ ಅನ್ನದ ಅಗಳು ಕಂಡರೆ ಅವನು ಅದನ್ನ ಬಾಚಿಕೊಳ್ಳುವ ಹಾಗೆ, ಆ ಪುಸ್ತಕ ರಾಕ್ ನಲ್ಲಿ ಕಂಡದ್ದೇ ಅದನ್ನು ಹಾಗೇ ತೆಗೆದು ಎದೆಗೊತ್ತಿಕೊಂಡೆ ! ತಪಸ್ಸು ಸಾರ್ಥಕವಾದ ಫೀಲಿಂಗು ಒಂಥರಾ ! ನಿಧಿ ಸಿಕ್ಕಿದಷ್ಟು ಸಂತೋಷ ! ೦೮-೦೮-೦೮ ರಂದು ಎಂಟನೇ ಕ್ಲಾಸಿನಿಂದ ಹುಡುಕಿದ ಪುಸ್ತಕ ಸಿಕ್ಕಿತು !

Z : ಆಹಾ !! ಸಂತೋಷ !!

ನಾನು : ಬರೀ ಸಂತೋಷ ಅಲ್ಲ, ಮಹದಾನಂದ ! ಇದಾದ ಮೇಲೆ ನಾನು ಬಹಳ ದಿನಗಳಿಂದ ಖರೀದಿಸಲಿಚ್ಛಿಸಿದ ಮತ್ತೊಂದು ಪುಸ್ತಕ ಪೂರ್ಣಚಂದ್ರ ತೇಜಸ್ವಿಯವರ ಪಾಕಕ್ರಾಂತಿ ಮತ್ತು ಇತರ ಕಥೆಗಳು . ನಮ್ಮ ನಾಡಿನ ನನ್ನ ಮಿತ್ರವರ್ಗದವರು ಇದನ್ನ ತಗೊಂಡು ಓದಿಯಾಗೋಗಿತ್ತು. ನಾನೊಬ್ಬಳೇ ಹಿಂದೆ ಬಿದ್ದಿದ್ದೆ. ಒಂಥರಾ ಅನ್ನಿಸುತ್ತಿತ್ತು . ಕರ್ಮಕಾಂಡ ಪ್ರಭುಗಳು " ಇನ್ನೂ ಓದಿಲ್ವಾ ? ಅದೂ ನೀವು ?" ಅಂತ ಬೇರೆ ಕೇಳಿಬಿಟ್ಟರು. ಶ್ರೀಕಾಂತ್ ಕೂಡಾ ಓದಿಯಾಗಿದೆ ಅನ್ನಿಸುತ್ತದೆ. ಗಂಡಭೇರುಂಡ ಶ್ರೀನಿವಾಸ ರಾಜನ್ " ಯಾವಾಗ್ಲೋ ಓದ್ಬಿಟ್ಟೆ ನಾನು !" ಅಂದಾಗಲಂತೂ ನನಗೆ ಸಿಕ್ಕ್ ಸಿಕ್ಕಾಪಟ್ಟೇ ಬೇಜಾರಾಗೋಯ್ತು ! ಇವತ್ತು ತಗೊಂಡೇ ಬಿಟ್ಟೆ !

Z : ಭೇಷ್ ! ಆಮೇಲೆ ?

ನಾನು : ನಾಗೇಶ್ ಹೆಗಡೆ ಅಂತ ಒಬ್ಬರು ಬರಹಗಾರರಿದ್ದಾರೆ. ಪ್ರಜಾವಾಣಿಯಲ್ಲಿ ಕನ್ನಡದಲ್ಲಿ ವಿಜ್ಞಾನ ಲೇಖನಗಳನ್ನು ಬರೆಯುತ್ತಿದ್ದವರು. ಸರಳ, ಸುಲಲಿತ ಬರವಣಿಗೆಗೆ ಹೆಸರಾದವರು. ಇವರ ಪುಸ್ತಕಗಳನ್ನು ಕೊಂಡು ಓದು ಎಂದು ಪವನಜ ಸರ್ ನನಗೆ ಸಲಹೆ ಕೊಟ್ಟಿದ್ದರು. ಅವರ ಸಲಹೆಯಂತೆ, " ಎಂಥದ್ದೋ ತುಂತುರು " ಮತ್ತು " ಆಚಿನ ಲೋಕದಲ್ಲಿ ಕಾಲಕೋಶ " ಅನ್ನುವ ಎರಡು ಪುಸ್ತಕಗಳನ್ನು ಖರೀದಿಸಿದೆ.

Z : ಸರಿ...ಸಂತೋಷ . ಆಮೇಲೆ ?

ನಾನು : ಮತ್ತೊಬ್ಬ ವಿಜ್ಞಾನ ಬರಹಗಾರರಾದ ಜಿ.ಟಿ. ನಾರಯಣರಾವ್ ಅವರು ನಮ್ಮನ್ನು ಹೋದ ತಿಂಗಳಷ್ಟೇ ಅಗಲಿದರು. ಅವರ ನೆನಪಿಗಾಗಿ " ವೈಜ್ಞಾನಿಕ ಮನೋಧರ್ಮ " ಪುಸ್ತಕವನ್ನೂ ಖರೀದಿಸಿ ಅಂಕಿತ್ತ ಪುಸ್ತಕದಿಂದ ಅತೀ ಸಂತುಷ್ಟಳಾಗಿ ಹೊರನಡೆದೆ. .

Z : :-) :-) :-)

ನಾನು : ಇನ್ನು ಈ ಪುಸ್ತಕಗಳನ್ನು ಓದಲಾರಂಭಿಸುತ್ತೇನೆ...ಇಂದಿನಿಂದಲೇ ! ಇವತ್ತು ದಿನ ಚೆನ್ನಾಗಿದೆ Z ....ಎಂಟುಗಳು ಒಂದೇ ಕಡೆ ಸೇರಿವೆ !

Z : Happy reading !

ನಾನು : thanks !

Tuesday, August 5, 2008

ಗ್ರಹಣ

ನಾನು : ಆಗಸ್ಟ್ ಮೊದಲನೇ ತಾರೀಖು ಖಂಡಗ್ರಾಸ ಸೂರ್ಯಗ್ರಹಣ ಇತ್ತು.

Z : ಗೊತ್ತು.

ನಾನು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾನು ಹುಟ್ಟಿದ ರಾಶಿಗೆ ಸೂರ್ಯಗ್ರಹಣದ ಸಕಲ ಪ್ರಭಾವಗಳೂ ಯದ್ವಾ ತದ್ವಾ ಬೀಳಲಿದ್ದವು. ನಮ್ಮಮ್ಮ ದೇವಸ್ಥಾನಕ್ಕೆ ಹೋಗಿ ನನ್ನ ಹೆಸರಿನಲ್ಲಿ ನವಗ್ರಹಶಾಂತಿ ಹೋಮಕ್ಕೆ ಕೊಟ್ಟು ಬಂದರು.

Z: ಆಗ ತಾವೇನು ಮಾಡುತ್ತಿದ್ದಿರಿ ?

ನಾನು : planetarium ನಲ್ಲಿ ಗ್ರಹಣ ನೋಡುವ ವ್ಯವಸ್ಥೆ ಇದೆಯಾ ಅಂತ ತಿಳಿದುಕೊಳ್ಳಲು website browse ಮಾಡುತ್ತಿದ್ದೆ. ಅಷ್ಟೊತ್ತಿಗೆ ಸರಿಯಾಗಿ ನಮ್ಮಜ್ಜಿಯ ಫೋನ್ ಬಂತು ನಮ್ಮಮನ ಮೊಬೈಲಿಗೆ.

ಅಮ್ಮ:" ....ಹು ಕಣಮ್ಮ...ಲಕ್ಷ್ಮಿ ಗೆ ಗ್ರಹಣ ಹಿಡ್ದಿದೆ.... "

ನಾನು : ಅಮ್ಮ...ಗ್ರಹಣ ಹಿಡ್ದಿರೋದು ನಂಗಲ್ಲ...ಸೂರ್ಯಂಗೆ ! ಇನ್ನು ಹಿಡಿದಿಲ್ಲ...ಐದು ಘಂಟೆಗೆ ಹಿಡಿಯತ್ತೆ, once again, ಸೂರ್ಯಂಗೆ, ನಂಗಲ್ಲ.

Z : ಹೆ ಹೆ ಹೆಹೆ ......ಲಕ್ಷ್ಮೀ ಗೆ ಗ್ರಹಣ ! ಜಬರ್ದಸ್ತ್ dialogue !

ನಾನು :Grrrrrrrrrrrrrr !!!!!!!!!!!!!!!!!!!!!

Z : uhahahahahahah !!!!!!!!!!! Continue.

ನಾನು : ಅಮ್ಮ ಅಜ್ಜಿಗೆ ವರದಿ ಕೊಡ್ದ್ತಿದ್ರು...... "ಈಗ್ ತಾನೆ ಇವ್ರ ಕೈಲಿ ಜ್ಯೋತಿರ್ಭೀಮೇಶ್ವರ ವ್ರತ ಮಾಡ್ಸ್ದೆ. ಹತ್ತು ಘಂಟೆಯಾದ ಮೇಲೆ ಗ್ರಹಣ ಮುಗಿಯುವ ವರೆಗೂ ಏನೂ ತಿನ್ನಬಾರದು ಬೇರೆ. ಇವ್ರಿಬ್ಬ್ರು ಗ್ರಹಣದ ಟೈಮ್ ಗೆ ನೋಡು ಏನ್ ಮಾಡ್ತಿವಿ ಅಂತ ಹೆದರ್ಸ್ತಿದಾರೆ. ನೋಡಮ್ಮ... ಅಕ್ಕ ತಂಗಿ ಇಬ್ರು ಎಗರಿ ಎಗರಿ ಕುಣಿತಿದ್ದಾರೆ planetarium ಗೆ ಹೋಗಿ ಗ್ರಹಣ ನೋಡ್ತಿವಿ ಅಂತ..."
ಅಜ್ಜಿ ಮಾತಾಡಿದ್ದೇನೂ ಗೊತ್ತಾಗ್ಲಿಲ್ಲ. ಅಮ್ಮ ಬರೀ ಹೂಗುಟ್ಟುತ್ತಿದ್ದರು. ಅವರಿಬ್ಬರ secret ಮಾತುಕಥೆ ನನಗೆ ಮತ್ತಷ್ಟು ಕೋಪ ತರಿಸಿತು. ಅಮ್ಮ ಮಾತು ಮುಗಿಸಿದ ಮೇಲೆ ನಾನು ವಾದಕ್ಕಿಳಿಯಲು ಎದ್ದೆ.

Z : tittidiiidiiiiii..tiiiiiiiiiiitittiiidiididiiiiiiiiiii....

ನಾನು : ಏನಿದು ?

Z : bugle. sound effect ಗೆ.

ನಾನು : silent ಆಗಿ ಕಥೆ ಕೇಳಿದ್ರೆ ಸರಿ !

Z : ok ok !

ನಾನು : " ಅಮ್ಮಾ !!!!!!!" ಗುಡುಗಿದೆ.

ಅಮ್ಮ :" silent ಆಗಿ ಸುಮ್ನಿದ್ದ್ರೆ ಸರಿ. ಹೊರ್ಗಡೆ ಎಲ್ಲಾದ್ರು ತಲೆ ಹಾಕ್ತಿನಿ ಅಂತ ಚಕಾರ ಎತ್ತ್ಬೇಕಲ್ಲ.....ಅಷ್ಟೆ ! ಯಾವ್ದ್ ಮೂಢ ನಂಬಿಕೆ, ಯಾವುದು ಅಲ್ಲ ಅಂತ ನಮ್ಗೂ ಗೊತ್ತಿದೆ...ಸುಮ್ನೆ ವಾದ ಮಾಡಕ್ಕ್ ಬರ್ಬೇಡ. ಹೋಗಿ ಕೀಬೋರ್ಡ್ ಕುಟ್ಟ್ಕೋ !"

ನಾನು ಸೈಲೆಂಟಾಗಿ ರೂಮಿಗೆ ವಾಪಸ್ ಬಂದೆ.

Z : ಹ ಹ ಹಹ !!! all gathered energy wasted !!! ಚೆ ಚೆ...ಹುಲಿ ಥರ ಹೋದೋಳು ಇಲಿ ಥರ ವಾಪಸ್ ಬಂದ್ಯಲ್ಲೇ !!

ನಾನು : ಸುಮ್ನೆ ಉರ್ಸ್ಬೇಡ. ನಾನು ವಾಪಸ್ ಬಂದಿದ್ದೇನೋ ನಿಜ. ಆದ್ರೆ ನನ್ನ ತಲೆ ಲಿ ಒಂದು ಭೀಕರವಾದ ಪ್ಲಾನ್ ಹೊಳಿತಿತ್ತು.

Z : ಅದೇ compound ಹಾರಿ escape ಆಗೋದು ! ನೀನೋ...ನಿನ್ನ ಹೋಪ್ಲೆಸಾತೀತ ಐಡಿಯಾಗಳೋ !!

ನಾನು : shut up ! ಅಂಥಾ ಐಡಿಯಾಗಳೆಲ್ಲ fail ಆಗತ್ತೆ ಅಂತ ಗೊತ್ತಿತ್ತು ಕಣೆ ಲೆ ! ಇದೊಂದು ಮಹಾ ಇಡಿಯಾ...ಹಿಂದೆ ಯಾರ್ಗೂ ತೋಚಿರ್ಲಿಲ್ಲ, ಮುಂದಕ್ಕೆ ಯಾರ್ಗೂ ತೋಚಲ್ಲ.

Z: ಏನಮ್ಮ ಅದು ಅರಿಭಯಂಕರವಾದ ಐಡಿಯಾ ?

ನಾನು : ಇದು outline ಮಾತ್ರ. exact idea is top secret. ಗ್ರಹಣ ಸ್ಟಾರ್ಟ್ ಆಗೋ ಟೈಮ್ ಗೆ ಹೇಗಾದ್ರು ಮಾಡಿ ಬಾಗಿಲು ತೆಗಿಯಬೇಕು. ಮನೆಯವರು ಹೊರಗೆ ಹೋದ ಹಾಗೆ ನಾನು ಹಿಂದೆ ಓಡಿ ಹೋಗಿ, for a second, pin hole ನಲ್ಲಿ ಗ್ರಹಣ ನೋಡಿ ಜನ್ಮ ಸಾರ್ಥಕ ಮಾಡಿಕೊಳ್ಳೋದು ಅಂತ full fledged ಆಗಿ sketch ಹಾಕಿದ್ದೆ. ಐಡಿಯಾ ನ execute ಮಾಡಲು ready ನೂ ಆದೆ. ಅಣ್ಣ ಮೀಟಿಂಗ್ ಗೆ ಹೋಗಿದ್ದರು, ಹೊಸಕೋಟೆಗೆ. ಅವರು ಬರುತ್ತಲೇ ಯಾರಿಗೂ ತಿಳೀಯದ ಹಾಗೆ ಕೆಲ್ಸ ಮುಗಿಸ್ಬೇಕು ಅಂತ ಪ್ಲಾನ್ ಮಾಡಿದೆ. ಕರೆಂಟ್ in the pond on the bank ಆಟ ಆಡುತ್ತಿದ್ದ ಕಾರಣ ನಾನು ಕೀಬೋರ್ಡ್ ನ ಕುಟ್ಟಿ ಕಂಪ್ಯೂಟರ್ ನ ಉದ್ಧಾರ ಮಾಡಲಾಗದೇ, ಏನೂ ತೋಚದೇ ಹಾಗೆ ಮಲಗಿದೆ. ಕನಸ್ಸಿನಲ್ಲೇ ನಾನು ಗ್ರಹಣ ನೋಡುತ್ತಿದ್ದೆ. ಆಗ ನನ್ನನ್ನು ಫೋನ್ ಮಾಡಿ ಎಬ್ಬಿಸಿದವರು ಕರ್ಮಕಾಂಡ ಪ್ರಭು ಶ್ರೀಧರ್ .

ಫೋನ್ ಮಾಡಿದ್ದೇ, " ರೀ ಲಕ್ಷ್ಮೀ, ಗ್ರಹಣದ ಟೈಮ್ ನಲ್ಲಿ ಊಟ ತಿಂಡಿ ತಿಂದರೆ ಏನಾದ್ರು ಆಗತ್ತಾ ?" ಅಂದರು. ನಾನು " ಏನೂ ಆಗಲ್ಲ ರೀ...ಮಸ್ತ್ ಮಜಾ ಮಾಡಿ ತಿಂದುಕೊಂಡು ಊಟ ನಾ ! " ಅಂದೆ. ಅದಕ್ಕೆ ಅವರು " ಮತ್ತೆ ತಿನ್ನಬಾರದು ಏನೂ ಅಂತ ಯಾಕ್ ಹೇಳ್ತಾರೆ ಮತ್ತೆ ?" ಅಂದ್ರು . ನಾನಂದೆ " ಅದು ಗ್ರಹಣ ಆಗೋ ಟೈಂ ಮೇಲೆ depend ಆಗತ್ತೆ ಕರ್ಮಕಾಂಡ ಪ್ರಭುಗಳೆ. ಊಟ digest ಆಗೋಕೆ 4 hours ಬೇಕು. ಗ್ರಹಣಕ್ಕೆ 4 hours ಮುಂಚೆ ಗಡತ್ತಾಗಿ ತಿಂದಿದ್ದರೆ, ಮಧ್ಯ ಮಧ್ಯ ನೀರು ಕುಡಿದು ಗ್ರಹಣ ಮುಗಿಯೋ ತನಕ ಕಾಯಬಹುದು. irregular food habits ಇದ್ರೆ normal days ನಲ್ಲೇ ಹೊಟ್ಟೆ ಕೆಡತ್ತೆ. ಸುಮ್ನೆ ಗ್ರಹಣದ ಮೇಲೆ ಗೂಬೆ ಕೂರ್ಸ್ತಾರೆ ಜನ ಅವತ್ತು ತಿಂದು ಹೊಟ್ಟೆ ಕೆಟ್ಟರೆ.ಗ್ರಹಣದ ಟೈಮ್ ನಲ್ಲಿ ಹೊಟ್ಟೆ ಹಸಿವಾದರೆ ಮಾತ್ರ ತಿನ್ನಿ. ನನ್ನಾಣೆ, ಹೊಟ್ಟೆ ಕೆಡಲ್ಲ, ಸುಮ್ ಸುಮ್ನೆ ತಿಂದ್ರೆ ಕೆಡತ್ತೆ, ಅದಕ್ಕೆ ಗ್ರಹಣ ನ ಬೈಬೇಡಿ, ಪಾಪದಂಥದ್ದು ಗ್ರಹಣ " ಅಂದೆ. ಪಾಪಗುಟ್ಟಿದರು ಅವರು.

ಅವರು ನ್ಯಾಷನಲ್ ಕಾಲೇಜು ಬಸವನಗುಡಿಯಲ್ಲಿ ಓದಿದಂಥವರು,ನಾನು ನ್ಯಾಷನಲ್ ಕಾಲೇಜು ಜಯನಗರದ product, ನಮ್ಮಿಬ್ಬರ common link Dr. H. Narasimhaiah. ಅವರು ಗ್ರಹಣದ ಮೂಢನಂಬಿಕಗಳ ಮೇಲೆ ಮಾಡಿದ ಭಾಷಣಗಳನ್ನೆಲ್ಲಾ, ನಾವು ನೋಡಿದ ಡಾಕ್ಯುಮೆಂಟರಿಗಳನ್ನೆಲ್ಲಾ ನೆನಪಿಸಿಕೊಂಡೆವು. ಆಗ ಕರ್ಮಕಾಂಡ ಪ್ರಭುಗಳು " ಅಲ್ಲಾ ರಿ...ಇದನ್ನೆಲ್ಲ ನೋಡಿದ ಮೇಲೆ , ಅದು ಮೂಢನಂಬಿಕೆ ಅಂತ ಗೊತ್ತಿದ್ದರೂನೂ ನಾವು blind ಆಗಿ ಕೆಲವು ಆಚರಣೆಗಳನ್ನ follow ಮಾಡ್ತಿವಲ್ಲ, ನಾವೇಕೆ ಹೀಗೆ ? ಅಂತ ಬ್ಲಾಗ್ ಬರೀರಿ...ಇದು ನನ್ನ ಕೋರಿಕೆ, ಖಂಡಿತಾ ಇಲ್ಲಾ ಅನ್ನಬೇಡಿ, ಪ್ಲೀಸ್ " ಅಂತ ಕೇಳಿಕೊಂಡರು.

Z : ತಾವು ಟೋಟಲಿ ರೈಲ್ ಹತ್ತಿದಿರಿ.

ನಾನು : ಏನಿಲ್ಲ. ಅವರೇನು ರೈಲ್ ಹತ್ತಿಸಲಿಲ್ಲ. ನಿಜವಾಗಲೂ ಕೇಳಿಕೊಂಡರು. ನಾನಂದೆ -
" ಇಲ್ಲ. ಇದನ್ನ ನಾವೇಕೆ ಹೀಗೆ ಲಿ ಹಾಕೊಲ್ಲ. ಕುತೂಹಲಿ ನಲ್ಲಿ ಹಾಕ್ತಿನಿ "

ಅವರು : "ಎಲ್ಲಾದ್ರು ಹಾಕಿ...ಆದ್ರೆ ಬರಿರಿ ಮಾತ್ರ...ಬಿಡ್ಬೇಡಿ. ಓಳ್ಳೇ ವಿಷಯ ನ ತಿಳ್ಸೋ ನಿಮ್ಮಂಥವರು ಬೇಕು ರೀ ಲೋಕಕ್ಕೆ" ಅಂತ ಸಿಕ್ಕಾಪಟ್ಟೆ ದೊಡ್ಡ dialogue ಹೊಡೆದರು. ನಾನು ಆ ಡೈಲಾಗ್ ಭಾರನ ತಡಿಯಕ್ಕಾಗದೇ ಒಪ್ಪಿಕೊಂಡೆ.

Z : ಏನಂತ ಬರೀಬೇಕಿತ್ತಂತೆ ನೀನು ?

ನಾನು : ಅದೇ...ಈ ಗ್ರಹಣದ ಟೈಮ್ ನಲ್ಲಿ ದರ್ಭೆ ಇಡೋದು, pregnant women ನ ಕತ್ತಲೆ ಕೋಣೆ ಲಿ ಕೂಡಿ ಹಾಕೋದು, ಅವರಿರುವ ಕೋಣೆಯ ಬಾಗಿಲ key hole ಗೂ ಬಟ್ಟೆ ತುರ್ಕೋದು, ಗ್ರಹಣ ಆದ್ಮೇಲೆ ದೇವರನ್ನ ತೊಳೆಯೋದು, ಹಳೆ ನೀರೆಲ್ಲ ಚೆಲ್ಲೋದು, ಊಟ ಮಾಡದೇ ಇರೋದು, ಆಮೇಲೆ ಇನ್ನೆಷ್ಟೋ ಆಚರಣೆಗಳು !

Z : ಹೌದಾ ? ಇಷ್ಟೆಲ್ಲಾ ಮಾಡ್ತಾರ ಜನ ? ಯಾಕೆ ?

ನಾನು : ನೋಡು. ಈ problem ನ ಎರಡು ರೀತಿಯಲ್ಲಿ analyze ಮಾಡಬಹುದು. ಒಂದು, ನಮಗೆ ನಿಜವಾಗಲೂ ಕಾಣುವ ಸತ್ಯ, ಇನ್ನೊಂದು ನಮಗೆ ಕಾಣದೇ ಇರುವ ಕೆಲವು ಅಂಶಗಳು.

Z : ನಮಗೆ ಕಾಣದೇ ಇರುವ ಕೆಲವು ಅಂಶಗಳು ಅಂದರೆ ?

ನಾನು : ಇದನ್ನು ಹೇಳಬೇಕೆಂದರೆ ಮೊದಲು ನಮ್ಮ ಕಾಣಿಗೆ ಕಾಣುವ ಕೆಲವು ಅಂಶಗಳ ಬಗ್ಗೆ ತಿಳ್ಕೋಬೇಕು.
ಈಗ ನೋಡು ಗ್ರಹಣ ಆದಾಗ ಏನಾಗತ್ತೆ ? temporary darkness create ಆಗತ್ತೆ. Sudden ಆಗಿ ಕತ್ತಲಾಗಿದುದರ ಪರಿಣಾಮವಾಗಿ ಪ್ರಾಣಿ ಪಕ್ಷಿಗಳು ಒಂದೆರಡು ಸೆಕೆಂಡು ಗಾಬರಿಗೊಳ್ಳಬಹುದು. ಕೀಟಗಳು ರಾತ್ರಿಯಾಯ್ತೆಂದು ಭಾವಿಸಿ ಹೊರಬರಬಹುದು. ನೋಡು, ಆಗಿನ ಕಾಲದಲ್ಲಿ ಬಲ್ಬಾಗಲಿ, ಟ್ಯೂಬ್ ಲೈಟಾಗಲಿ ಇರಲಿಲ್ಲ. ಕತ್ತಲಾದ ಬಳಿಕ ಮೇಣದ ಬತ್ತಿಯನ್ನೋ, ಸೀಮೆಯೆಣ್ಣೆಯ ದೀಪವನ್ನೋ, ಪಂಜನ್ನೋ ಹಚ್ಚುತ್ತಿದ್ದರು. ಇವೆರಡನ್ನೂ ಹಚ್ಚಿಟ್ಟ ತಕ್ಷಣ ರಾತ್ರಿಯೇ ಎಂದು ಭಾವಿಸುವ ಹೆಗ್ಗಣಗಳು ಮತ್ತಿತರ ಪ್ರಾಣಿಗಳು ಅಡುಗೆಮನೆಗೆ ದಾಳಿಯಿಡಬಹುದು. ಅವು ಓಡುವ ರಭಸದಲ್ಲಿ ಹಾಲಿನ ಪಾತ್ರೆಗೆ ಮೊಸರು ಚೆಲ್ಲಬಹುದು, ಅಗ್ಗಿಷ್ಟಿಕೆಗಳು ಅಲ್ಲೋಲ ಕಲ್ಲೋಲವಾಗಬಹುದು. ವಸ್ತು ಕೆಡಬಹುದು. ಇದು ಗ್ರಹಣದ ತೀಕ್ಷ್ಣ ಪ್ರಭಾವವಲ್ಲ, ಆಗಿರಬಹುದಾದ ವಸ್ತು ಸ್ಥಿತಿ.
ದರ್ಭೆಗಳನ್ನು ಏಕೆ ಇಡುತ್ತಿದ್ದರಪ್ಪಾ ಎನ್ನುವುದರ ಬಗ್ಗೆ ಇನ್ನೂ ವೈಜ್ಞಾನಿಕ ಸಂಶೋಧನೆ ಮಾಡಬೇಕಾಗಿದೆಯಾದರೂ, ದರ್ಭೆಯನ್ನು ಉಪಯೋಗಿಸುವುದರ ಹಿಂದಿನ ಉದ್ದೇಶದ ಬಗ್ಗೆ ನನ್ನ ಅನಿಸಿಕೆ ಇಷ್ಟು :
೧. ದರ್ಭೆಯ ರುಚಿ ಕಹಿಯಿರಬಹುದು.
೨. ದರ್ಭೆಗಳನ್ನು ಒಟ್ಟು ಗೂಡೆಹಾಕಿದರೆ ಮೂಡುವ ಕಗ್ಗತ್ತಲು ಆ ಕ್ಷಣಕ್ಕೆ ಅಭೇದ್ಯ ಎಂದು ಪ್ರಾಣಿಗಳಿಗೆ ಅನ್ನಿಸಬಹುದು. ಏಕೆಂದರೆ ಹೊರಗಾಗಲೇ ಕತ್ತಲೆಯಾಗಿರುತ್ತದೆ. ಪ್ರಾಣಿಗಳ ದಿಕ್ಕುತಪ್ಪಿಸಲು ಇದೊಂದು ಮಾರ್ಗ ಹುಡುಕಿರಬಹುದು ಹಿಂದಿನಕಾಲದವರು.
೩. ದರ್ಭೆಗಳನ್ನು ಒತ್ತು ಒತ್ತಾಗಿ ಕೂಡಿಹಾಕಿದರೆ ಅವು ಸುತ್ತುವರಿದ ಗಾಳಿಯ ಶಾಖವನ್ನು ಹೊರಬಿಡದೇ ತಮ್ಮಲ್ಲಿಯೇ ಉಳಿಸಿಕೊಳ್ಳಬಹುದು. they might be insulators. ಆ ಶಾಖವು ಆಹಾರದಲ್ಲಿ ಆಗಬಹುದಾದ ಸಹಜ microbial activity ಯನ್ನು ಕಡಿಮೆ ಮಾಡಬಹುದು. ಇದು ಹೇಗೆ ಸಾಧ್ಯ ಅಂದರೆ microbes are very temperature specific. ಅವು ತಮ್ಮ ಕೆಲಸಗಳನ್ನು ಸರಿಯಾಗಿ ಮಾಡಲು ಹವೆಯ ಉಷ್ಣಾಂಶ ಬಹು ಮುಖ್ಯ. ದರ್ಭೆಗಳಿಗೆ " thermos flasks" ನಂತೆ temperature maintain ಮಾಡುವ ಶಕ್ತಿ ಇರಲಿಕ್ಕೂ ಸಾಧ್ಯ. ನಾನಂದುಕೊಂಡದ್ದು ಸರಿಯೂ ಇರಬಹುದು, ತಪ್ಪೂ ಇರಬಹುದು.

ಇನ್ನು ಗ್ರಹಣದ ಸಮಯದಲ್ಲಿ ಊಟ ತಿನ್ನುವುದರ ಬಗ್ಗೆ ನಾನು ಆಗಲೇ ಹೇಳಿದ್ದೇನೆ. ಹೋದ ತಿಂಗಳು ಜುಲೈ ಹದಿನಾಲ್ಕನೇ ತಾರೀಖು ಬೆಂಗಳೂರು ವಿಜ್ಞಾನ ವೇದಿಕೆಯಲ್ಲಿ ನಡೆದ ವಿಜ್ಞಾನೋತ್ಸವದಲ್ಲಿ ಮಾತನಾಡಿದ ಜವಾಹರ್ಲಾಲ್ ನೆಹ್ರೂ ತಾರಾಲಯದ ಹಿರಿಯ ವೈಜ್ಞಾನಿಕ ಅಧಿಕಾರಿ ಡಾ||ಬಿ.ಎಸ್. ಶೈಲಜಾ ಅವರು "ಗ್ರಹಣವನ್ನು ಏಕೆ ಅಧ್ಯಯನ ಮಾಡಬೇಕು " ಎನ್ನುವುದರ ಬಗ್ಗೆ ಮಾತಾಡುತ್ತಾ ಕೆಲವು ಮುಖ್ಯವಾದ ಅಂಶಗಳನ್ನು , ಪ್ರಯೋಗದ ಫಲಿತಾಂಶಗಳನ್ನು ಬೆಳಕಿಗೆ ತಂದರು.
ಸೂರ್ಯಗ್ರಹಣ ಯಾವಾಗಲೂ ಅಮಾವಾಸ್ಯೆಯಂದು ಆಗುತ್ತದೆ. ಅಮಾವಾಸ್ಯೆ ದಿನ ಹುಚ್ಚರಿಗೆ ಹುಚ್ಚು ಹೆಚ್ಚಾಗುತ್ತದೆಂದು ಎಲ್ಲರೂ ನಂಬಿದ್ದಾರೆ. ಗ್ರಹಣಾ್ದ ದಿನ ಅದು ವೈಪರೀತ್ಯ ಮುಟ್ಟುತ್ತದೆ ಎಂದು ಎಲ್ಲರ ನಂಬಿಕೆ. ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯೆಯೊಬ್ಬರು ಅಂದು ಯಾವ ರೋಗಿಗೂ ಅಮಾವಾಸ್ಯೆ ಆವತ್ತು ಎಂದು, ಅವತ್ತು ಗ್ರಹಣ ಸಂಭವಿಸುತ್ತದೆ ಎಂದೂ ಕೂಡಾ ತಿಳಿಸದೇ, extra dose of medicines administer ಮಾಡದೇ ಹಾಗೆಯೇ ಸುಮ್ಮನಿದ್ದಾರೆ. ಯಾವ ರೋಗಿಯೂ ಪ್ರತಿಕೂಲವಾಗಿ ವರ್ತಿಸಲಿಲ್ಲ, ಗ್ರಹಣ ಸಂಭವಿಸಿದಾಗಲೂ ! That was a negative result ! ಆದ್ದರಿಂದ, ರೋಗಿಗಳಿಗೆ ಅಮಾವಸ್ಯೆ ಎಂದು ಹೇಳಿದರೆ ಮಾತ್ರ violent ಆಗಿ react ಮಾಡ್ತಾರೆ ಎಂಬುದು ಸಾಬೀತಾಯ್ತು.

Z : ಅರೆ ವಾಹ್ !

ನಾನು : ಹೂ ! ಇನ್ನು ಗರ್ಭಿಣಿಯರ ವಿಷಯ. ಖ್ಯಾತ ವಿಜ್ಞಾನಿ , ಪ್ರಸ್ತುತ ಬೆಂಗಳೂರು ವಿಜ್ಞಾನ ವೇದಿಕೆಯ ಕೋಶಾಧಿಕಾರಿಯಾಗಿರುವ ಡಾ|| ಎಚ್.ಆರ್. ರಾಮಕೃಷ್ಣ ರಾವ್ ಅವರು ನಮಗೆ ಒಮ್ಮೆ ಪಾಠ ಮಾಡುತ್ತಾ ಕುತೂಹಲಕರವಾದ ಒಂದು ವಿಷಯವನ್ನು ಹೇಳಿದರು. ಬಹಳ ವರ್ಷಗಳ ಹಿಂದಿನ ಮಾತಂತೆ ಇದು. ಪೂರ್ಣ ಸೂರ್ಯಗ್ರಹಣ ಯೂರೋಪ್ ಖಂಡದ ನಾರ್ವೇ ದೇಶದಲ್ಲಿ ಸಂಭವಿಸಲಿತ್ತು. ಗ್ರಹಣಗಳ ಅಧ್ಯಯನದಲ್ಲಿ ಆಸಕ್ತರಾದ ಇವರು ನಾರ್ವೇ ದೇಶಕ್ಕೆ ಗ್ರಹಣ ನೋಡಲು ಹೋದರು. ಬೆಟ್ಟವೊಂದರ ಮೇಲೆ ಗ್ರಹಣ ವೀಕ್ಷಿಸಲು ಸಕಲ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಅಲ್ಲಿ ಕಿಕ್ಕಿರಿದಿದ್ದ ನೋಡುಗರಲ್ಲಿ ನವಮಾಸ ತುಂಬಿದ ಗರ್ಭಿಣಿ ಸ್ತ್ರೀಯೂ ಇದ್ದಳು. ಎಹ್.ಆರ್.ಆರ್. ಹೀಗೆ ಯೋಚನೆ ಮಾಡಿದರಂತೆ: ಭಾರತದಲ್ಲಿ ಗ್ರಹಣವನ್ನು ನೋಡಲು ಗರ್ಭಿಣಿಯರಿಗೆ ಬಿಡದಿರುವ ಕಾರಣವೇನೆಂದರೆ ಹುಟ್ಟುವ ಮಕ್ಕಳು ಅಂಗವಿಕಲರಾಗುತ್ತಾರೆ ಎನ್ನುವ ಭಯ. ಭೂಮಿಗೆ ಸೂರ್ಯ ಒಬ್ಬನೇ, ಪ್ರತೀಸಲ ಗ್ರಹಣ ಸಂಭವಿಸಿದಾಗ ಆಗುವ ವಿದ್ಯಮಾನ ಒಂದೇ. ಅದಕ್ಕೆ ದೇಶಕಾಲಗಳ ಹಂಗಿಲ್ಲ. ಆದ್ದರಿಂದ ಈ ಗರ್ಭಿಣಿಯು ಇಲ್ಲಿ ಗ್ರಹಣವನ್ನುವೀಕ್ಷಿಸಿದಳೇ ಆದರೆ ಇವಳ ಮಗುವಿಗೂ ಏನಾದರು ಊನವಾಗಲೇ ಬೇಕು. ಇದನ್ನು ಹೇಗಾದರೂ ಮಾಡಿ ಪತ್ತೆ ಹಚ್ಚಬೇಕೆಂದುಕೊಂಡು, ಆ ಗರ್ಭಿಣಿಯ ಪರಿಚಯ ಮಾಡಿಕೊಂಡು, ಇವರ ಮನೆ ವಿಳಾಸ ಕೊಟ್ಟು, ಮಗು ಹುಟ್ಟಿದ ತಕ್ಷಣ ಫೋಟೋ ಒಂದನ್ನು ತೆಗುದು ಅತೀ ತುರ್ತಾಗಿ ಭಾರತಕ್ಕೆ ಕಳಿಸಬೇಕೆಂದು ಮನವಿ ಮಾಡಿಕೊಂಡರು. ಅವರೂ ಒಪ್ಪಿದರು. ಇವರು ವಾಪಸ್ಸು ಬಂದ ಎರಡೇ ವಾರಕ್ಕೆ ಕಾಗದ ಬಂತು.The child was born with no defects ! It was as fit as a fiddle !

Z : wow !!

ನಾನು : ನೋಡು....ಇವೆಲ್ಲ ಪ್ರಯೋಗ ಮಾಡಿ ತಿಳಿದ ಸತ್ಯಗಳು. ಇನ್ನು ದೇವರನ್ನು ತೊಳೆಯುವುದು ಅವರವರ ಇಷ್ಟ ಕಷ್ಟಗಳಿಗೆ ಬಿಟ್ಟಿದ್ದು. ಟೈಮ್ ಪಾಸಿಗಂತಲೋ ಏನೋ...ಮಾಡಲಿ ಪಾಪ. ದೇವರನ್ನು ತೊಳೆಯದಿದ್ದರೆ ದೇವರು ಖಂಡಿತಾ ಶಾಪ ಕೊಡುವುದಿಲ್ಲ. I can guarantee that. :-)

Z : ಹಂಗಂತೀಯ ?

ನಾನು : ಹೂ...ಇದು ಡೌಟಾತೀತ ಸತ್ಯ !! ಆದರೆ ನೀರನ್ನು ಚೆಲ್ಲುವುದನ್ನು ಕಂಡರೆ ನನಗೆ ತಡಿಯಕ್ಕಾಗ್ದೇ ಇರೋ ಅಷ್ಟು ಕೋಪ ಬರತ್ತೆ ! ಅಲ್ಲಾ...ಇವರು ಮನೆಲಿರೋ ನೀರ್ ಚೆಲ್ಲಿ ಬರೋ ಕಾರ್ಪೋರೇಷನ್ ನೀರ್ ನ ಹಿಡ್ಕೋತಾರೆ...ಗ್ರಹಣ ಕಾರ್ಪೋರೆಷನ್ ನೀರನ್ನ affect ಮಾಡಲ್ವಾ ? ಗ್ರಹಣ ಭೂಮಿಮೇಲೆ ಆಗ್ತಿರ್ಬೇಕಾದ್ರೆ ನದಿಗಳ ಮೇಲೂ ಅದರ ಪ್ರಭಾವ ಬಿದ್ದಿರತ್ತೆ...ಇವ್ರು ನದಿ ನೀರ್ನೆಲ್ಲ ಚೆಲ್ಲಿ ಸಮುದ್ರಕ್ಕೆ ಹಾಕ್ತಾರ ? ಯೋಚನೇ ನೇ ಮಾಡದೇ ಸುಮ್ಮನೆ ಈ ಥರ ಆಚರಣೆಗಳನ್ನೆಲ್ಲ ಮಾಡಿದ್ರೆ ಏನನ್ನೋದು ?

Z : ಹೌದು...ಹೌದು...ಆಚರಣೆಗೆ ಒಂದು ಅರ್ಥ ಬೇಕು. ಹಿಂದಿನ ಕಾಲದವರು ನೀರೂ ಕೂಡ ಈ ಪ್ರಾಣಿಗಳ ಹಾವಳಿಗೆ ತುತ್ತಾಗಿರಬಹುದೆಂದು ಭಾವಿಸಿ ಚೆಲ್ಲುತ್ತಿದ್ದರೇನೋ...ಆಗ ಈಗಿನಷ್ಟು facilities ಇರ್ತಿರ್ಲಿಲ್ಲ...aqua guard, refrigerator ಇತ್ಯಾದಿ. ಈಗ ಅವೆಲ್ಲ ಇದೆ ಅಲ್ವ ? ದರ್ಭೆ, ನೀರು ಚೆಲ್ಲುವಿಕೆಯ ಅವಶ್ಯಕತೆನೇ ಇಲ್ಲ ತಾನೆ ?

ನಾನು : ಹೌದು...ಆದರೆ ಕೆಲವರು ಫ್ರಿಡ್ಜ್ ಮೇಲೂ ದರ್ಭೆ ಇಡ್ತಾರೆ ! :-)

Z : ಹೆ ಹೆ...ಇದಿಷ್ಟೂ ಕಣ್ಣಿಗೆ ಕಾಣುವಂಥವು...ಕಣ್ಣಿಗೆ ಕಾಣದ್ದು ಏನು ?

ನಾನು : ಮನಸ್ಸು...Z ...ಮನಸ್ಸು. ಈ ಮನಸ್ಸು ಒಂದು multi-dimensional entity. It responds very quickly to vibrations. ಗ್ರಹಣದ ಟೈಮ್ ನಲ್ಲಿ ಏನೂ ಆಗಲ್ಲ ಅಂತ ಪಾಸಿಟಿವ್ vibrations ನ induce ಮಾಡಿದ್ರೆ ಏನೂ ಆಗಲ್ಲ...for example, that pregnant woman. ಆಗತ್ತೆ ಅಂದ್ರೆ ಏನ್ ಬೇಕಾದ್ರೂ ಆಗತ್ತೆ. ನಂಬಿಕೆ ಅನ್ನೋದು ಒಂದು vibration-ನ್ನೆ. ಇಂಥದ್ದು ಓದಿ ಏನೂ ಆಗಲ್ಲ ಅಂತ ನಂಬಿಸಿದರೆ ಏನೂ ಆಗಲ್ಲ. ಹಾಗೇ ಗ್ರಹಣ ನೋಡಿ ಏನೂ ಆಗಲ್ಲ ಅಂತ ನಂಬಿದರೆ ನಿಜ್ವಾಗ್ಲೂ ಏನೂ ಆಗಲ್ಲ. ಈ ಮಂತ್ರವಾದಿಗಳೂ, ಅಂಥಿಂಥವರು exploit ಮಾಡೊದು ಇದೇ vibration-ಅನ್ನೇ ! ಇದಾಗತ್ತೆ ಅದಾಗತ್ತೆ ಅಂತ ನೆಗೆಟಿವ್ ವೈಬ್ಸ್ ನ induce ಮಾಡಿ ಹೆದರಿಸುತ್ತಾರೆ. ನಾವ್ ಹೆದ್ರುಕೊಂಡ್ರೆ ದೇಹ ಕೂಡಾ respond ಮಾಡತ್ತೆ. ಗ್ರಹಣಕ್ಕೂ ಇದಕ್ಕೂ ಸಂಬಂಧವೇ ಇಲ್ಲ. ಪಾಪ ಎಲ್ಲಾರು ಗ್ರಹಣದ ಮೇಲೆ ಗೂಬೆ ಕೂರ್ಸ್ತಾರೆ.

Z : oh ! very true. ಮನೇಲಿ ಕಥೆ ಏನಾಯ್ತು ?

ನಾನು : ಹಾ...ಯೆಸ್...ಕಮಿಂಗ್ ಬ್ಯಾಕ್ ಟು ದ ಸ್ಟೋರಿ, ಅಣ್ಣ ಕಾರ್ ನ ಮನೆ ಒಳಗೇ ಪಾರ್ಕ್ ಮಾಡಿಬಿಟ್ಟರು !! so, plan flopped ! ಅಮ್ಮ ಫ್ರಿಡ್ಜ್ ಮೇಲೆ ದರ್ಭೆ ಇಡಲಿಲ್ಲ, ಅಣ್ಣ ಗ್ರಹಣ ಆದ ಮೇಲೆ ದೇವರು ತೊಳೆಯಲಿಲ್ಲ.ನಾನು ಜ್ವರದಿಂದ ಎದ್ದು exactly 86400 seconds ಆಗಿತ್ತು. ಆದ್ದರಿಂದ ನನಗೆ ಒಂದೇ ಚೊಂಬು ತಲೆ ಮೇಲೆ ನೀರು ಹಾಕಿಕೊಳ್ಳಲು ಹೇಳಿದರು. ಇಲ್ಲಾಂದ್ರೆ ಸ್ಪರ್ಶಕ್ಕೊಂದು ನೀರು, ಮೋಕ್ಷಕ್ಕೊಂದು ನೀರು ಹಾಕಿಕೊಂಡಿದ್ದಿದ್ದರೆ ನಾನು ಆಸ್ಪತ್ರೆಯಲ್ಲಿರುತ್ತಿದ್ದೆ. ಅವರು ನನ್ನ ವಿಜ್ಞಾನ ಸಿದ್ಧಾಂತಕ್ಕೆ ಬೆಲೆ ಕೊಟ್ಟರು. ನಾನು ಗ್ರಹಣದ ಕಾಲದಲ್ಲಿ ಮಹಾಮೃತ್ಯುಂಜಯ ಮಂತ್ರ ಜಪ, ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದೆ ಅವರ " vibrations" ಗೆ ಬೆಲೆ ಕೊಡಲು. ಅವರೂ ನನ್ನ ಎಡಬಲದಲ್ಲಿ ಕೂತಿದ್ದರು, ತಮ್ಮ ಮಗಳು ಕ್ಷೇಮವಾಗಿರಲಪ್ಪ ಅಂತ ಕೇಳ್ಕೋತಿದ್ರು ಸದ್ಯೋಜಾತನ್ನ. ಅವರ ಆ strong feeling of possessiveness, care and compassion ನ overlook ಮಾಡೋಕೆ ನನಗೆ ಇಷ್ಟ ಇರಲಿಲ್ಲ. ನಾನು blind ಆದೆ, vibration ಗೆ ! ಆದ್ರೆ ಅವರು ಕೆಲವು ಆಚರಣೆಗಳನ್ನು ಮಾಡದೆ ನನ್ನ ವಿಜ್ಞಾನಕ್ಕೆ ಬೆಲೆ ಕೊಟ್ಟರು." ಜ್ಞಾನಂ ವಿಜ್ಞಾನ ಸಹಿತಂ" ಎಂಬ ಮಾತಿಗೆ ಪೂರಕವಾಗಿ, ನಾವು ಮಾಡಿದ ಪ್ರತಿಯೊಂದು ಆಚರಣೆಗೂ ಒಂದು ಆರ್ಥವಿತ್ತು. vibration part ಅವರದ್ದು...science part ನನ್ನದು !

Z : :-) nice ! ಗ್ರಹಣ ನೋಡಿದ್ಯ ?

ನಾನು : ಏನ್ ನೋಡೋದು ಮಣ್ಣಾಂಗಟ್ಟಿ !ಮಳೆ ! ಆಕಾಶವೇ ಕಿತ್ತೋಗೋ ಮಳೆ ! :-(

Z : there is always a next time !

ನಾನು : ಹೂ ! ಹಂಗಂದುಕೊಂಡು ಕಾಯಬೇಕು....ಕಾಯ್ತಿನಿ !

Sunday, August 3, 2008

Friends

ನಾನು : Z ಇವತ್ತು friendship day .

Z : Happy friendship day !

ನಾನು : ನನ್ನ ಸ್ನೇಹಿತರಿಗೆಲ್ಲರಿಗೂ "Happy Friendship day " !
ಇವತ್ತು ಟಿವಿಯಲ್ಲೆಲ್ಲ, ರೇಡಿಯೋದಲ್ಲೆಲ್ಲ ಏನ್ ಎಲ್ಲರೂ wish ಮಾಡಿದ್ದೇ ಮಾಡಿದ್ದು. ಭಾಷಣಗಳನ್ನ ಬಿಗಿದ್ದಿದ್ದೇ ಬಿಗಿದಿದ್ದು, ಸ್ನೇಹ ಎಷ್ಟು ಸುಂದರ, ಸ್ನೇಹ ಎಷ್ಟು ಆನಂದದಾಯಕ ಅಂತೆಲ್ಲ.

Z : ನಿಜ ಅಲ್ವ ಅದು ? friendship is a strong bondage, it is the nicest feeling one can ever have. Friends support us, encourage us, help us and what not ? ಸ್ನೇಹಿತರಿರದ ಬದುಕು ಬದುಕೇ ಅಲ್ಲ head ruled....

ನಾನು : ಹ ಹ ಹ !

Z : Please sarcastic ಆಗಿ ನಗಬೇಡ.

ನಾನು : ನೀನ್ ಯೆಷ್ಟ್ innocent Z ! ಪಾಪ ಅನ್ನಿಸತ್ತೆ ನಿನ್ನ ಮಾತು ಕೇಳಿದ್ರೆ. ಪ್ರಪಂಚದ ಘೋರ ಸ್ವರೂಪ ನಿನಗೆ ಗೊತ್ತೇ ಇಲ್ಲ. I honestly pity you.

Z : why do you say so?

ನಾನು : I stand testimony for all the adversities friendships can put one into, Z ! ನಿನ್ನ ಮಾತನ್ನ ಪೂರ್ತಿ ಅಲ್ಲಗಳೀತಿಲ್ಲ ಅಥವಾ ಹೀಯಾಳಿಸುತ್ತಿಲ್ಲ ನಾನು, ಸ್ನೇಹದ ಇನ್ನೊಂದು ಮುಖದ ಬಗ್ಗೆ ನಿನಗೆ ಹೇಳಲೋ ಬೇಡ್ವೋ ಅನ್ನೋದರ ಬಗ್ಗೆ ನಾನು ಯೋಚನೆ ಮಾಡುತ್ತಿದ್ದೇನೆ ಅಷ್ಟೆ.

Z : Go ahead and tell me.

ನಾನು : ನಂಬಿ ಕಡೆಗೆ ಸಹಿಸಲಾರದ ಕೊಡಲಿಪೆಟ್ಟು ತಿಂದಿದ್ದೇನೆ ನಾನು ಸ್ನೇಹದಲ್ಲಿ. ಜೀವಕ್ಕೆ ಜೀವ ಕೊಡುವೆವೆಂದು ಹೇಳಿಕೊಳ್ಳುತ್ತಾ ನಂಬಿಸಿ ಕಡೆಗೆ ಜೀವನವೇ ಸಾಕಪ್ಪಾ ಎನ್ನುವಷ್ಟು ಜಿಗುಪ್ಸೆ ತರಿಸಿದ್ದಾರೆ ಕೆಲವರು. ಬೇಕಾದಾಗ ಬೆಣ್ಣೆಯಂತೆ ಮಾತಾಡಿ, ಬೇಡದಿರುವಾಗ ಬೀದಿಯಲ್ಲಿ ಒಬ್ಬರೇ ಬಿಟ್ಟೂಹೋಗಿರುವವರೂ ಇದ್ದಾರೆ ನನ್ನ "ಸ್ನೇಹಿತ/ತೆ" ರ ಪೈಕಿ. ಫೋನ್ ನಲ್ಲೇ ಘಂಟೆಗಟ್ಟಲೇ ಮಾತಾಡುತ್ತಿದ್ದ ಕೆಲವರು ಈಗ ಫೋನ್ ಮಾಡಿದ್ರೆ " I am busy " ಎಂದು " ಅರೆಘಳಿಗೆಯಲ್ಲೇ ಫೋನಿಟ್ಟವರಿದ್ದಾರೆ. ಮುಂದೆ ಒಳ್ಳೆಯ ಮಾತಾಡಿ, ಹಿಂದೆ ಅಷ್ಟೆ ವಿಷ ಕಾರಿ, ಅಪಪ್ರಚಾರ ಮಾಡಿ, ಆಡಿಕೊಂಡವರ ಸಂಖ್ಯೆ ಬಹಳ. ಎಲ್ಲಾ ಕೆಲಸಗಳನ್ನು ಕದ್ದು ಮುಚ್ಚಿ ಮಾಡಿ, ಕಡೆಗೆ ಅದು ನನಗೆ ಗೊತ್ತಾದಾಗ..." sorry, I just forgot to tell you...I didnt mean to hide things...but it just slipped out of my mind" ಎಂದು ಜಾರಿಕೊಳ್ಳೂವವರೂ ಇದ್ದಾರೆ. ಎಲ್ಲಿ ನಾವು ಅವರ ಸಮಕ್ಕೆ ನಿಲ್ಲುವೆವೋ? ಎಲ್ಲಿ ನಾವವರಿಗೆ ಸ್ಪರ್ಧೆ ಒಡ್ಡುವೆವೋ ಅನ್ನುವ ಭಯ. ಅವರಿಗಿಂತ ಹೆಚ್ಚು ನಾವು ಪ್ರಸಿದ್ಧರಾದರೆ ? ಅವರಿಗೆ ಬೇಕಾದದ್ದು ನಮಗೆ ಸಿಕ್ಕರೆ ? ಈ ಲೋಕದಲ್ಲಿ ಸ್ವಾರ್ಥ ಹೆಚ್ಚು Z !

Z : Oh my god !

ನಾನು : such is the world, Z ! you have no other choice but to wonder at the magic it conjures up every moment, and grieve and endure the pains it gives you.

Z : ತಪ್ಪು ನಿನ್ನದೂ ಇರತ್ತೆ. ಎರಡು ಕೈ ಸೇರಿದರೇನೆ ಚಪ್ಪಾಳೆ.

ನಾನು : ಆಯ್ತಮ್ಮ..ಒಪ್ಪೋಣ. ಆದರೆ ಯಾರು ಎಲ್ಲಿ ತಪ್ಪು ಮಾಡಿದ್ದಾರೆ ಎಂದು ಕೂತು ಮಾತಾಡುವ ಬದಲು, ಏನೂ ಮಾತಾಡದೇ, ಕಣ್ಣಿನಲ್ಲಿ ಕಣ್ಣಿಟ್ಟು ನೋಡದೇ ಕಣ್ಣು ತಪ್ಪಿಸಿಕೊಂಡರೆ ನಿನಗೇನನ್ನಿಸತ್ತೆ ? ನಾನು ಕೂತು ವಿಷಯಗಳನ್ನು ಬಗೆಹರಿಸಿಕೊಳ್ಳಲು ತಯಾರಿದ್ದರೂ ಅವರೇ ಮಾತಾಡದಿದ್ದರೇ ಕಳ್ಳನ ಮನಸ್ಸು ಹುಳ್ಳಹುಳ್ಳಗೆ ಎಂದು ಅಂದುಕೊಳ್ಳದೇ ನನಗೆ ಬೇರೆ ದಾರಿಯಿಲ್ಲ. ನಾನೇ ಫೋನ್ ಮಾಡಿ ಮಾತಾಡುವ ಎಂದು ಹೇಳಿದ್ದು ತಪ್ಪಾ ? ಮೂರಿಂದ ಆರು ತಿಂಗಳಿಗೊಂದು ಸಲ ಫೋನ್ ಮಾಡಿ ಯಾವಾಗಲೂ ನಾನೇ ಕ್ಷೇಮಸಮಾಚಾರ ವಿಚಾರಿಸಿಕೊಂಡದ್ದು ತಪ್ಪ ? ಗೊತ್ತಿರುವವರೆಲ್ಲರೂ " ಹೇಗಿದ್ದೀರಿ ನೀವು best friends ಈಗ ?" ಎಂದು ಕೇಳಿದಾಗಲೆಲ್ಲ, ನಮ್ಮ rift ಅನ್ನು ಮುಚ್ಚಿಟ್ಟು ಗೊತ್ತಿದ್ದಷ್ಟೇ ಅವರಿಗೆ ಹೇಳಿ ಅವರ ಕುತೂಹಲ ಶಾಂತಗೊಳಿಸಲು ಪ್ರಯತ್ನ ಪಟ್ಟಿದ್ದು ತಪ್ಪಾ ? ಅವರಿಗೆ ಗೊತ್ತಿರುವವರು ನನ್ನನ್ನು ಮಾತಾಡಿಸಿದರೆ ಅದು ನನ್ನ ತಪ್ಪಾ ಅಥವಾ ಮಾತಾಡಿಸಿದವರ ತಪ್ಪಾ ?

Z : er.....

ನಾನು : ಏನೂ ಮಾತಾಡೊ ಸ್ಥಿತಿಯಲ್ಲಿಲ್ಲ ನೀನು ಅಲ್ಲ ? ಗೊತ್ತು ನಂಗೆ. I have suffered and endured enough Z. ಈ ವರ್ಷದ friendship day ದಿನ ನಾನೊಂದು ಮಹತ್ವಪೂರ್ಣ ನಿರ್ಧಾರ ಮಾಡಿದ್ದೇನೆ, ಬಹಳ ಯೋಚನೆ ಮಾಡಿದ ನಂತರ.

Z : ಏನದು ?

ನಾನು : ಸ್ನೇಹದ ಅರ್ಥ ಮತ್ತು ಬೆಲೆ ಗೊತ್ತಿಲ್ಲದೇ ಅವಕಾಶವಾದಿಗಳಂತೆ ವರ್ತಿಸಿದವರನ್ನು, ಒಳ್ಳೆಯದನ್ನೆಲ್ಲ ನನ್ನಿಂದ ಬಾಚಿಕೊಂಡು, ನನ್ನಿಂದ ಎಲ್ಲಾ ಕಲಿತು ನನಗೇ ಬತ್ತಿಯಿಟ್ಟು ಏನೂ ಅರಿಯದಂತಿರುವ ನರಿಯಂತವರನ್ನು, ಬೆನ್ನಿಗೆ ಚೂರಿ ಹಾಕುವ ಮಿತ್ರರ ಸೋಗಿನಲ್ಲಿರುವ ಮಿತ್ರದ್ರೋಹಿಗಳನ್ನು ನನ್ನ ಜೀವನ, ಫೋನ್ ಮತ್ತು friend list ಇಂದ ಶಾಶ್ವತವಾಗಿ ಉಚ್ಛಾಟಿಸುತ್ತಿದ್ದೇನೆ. ನನಗವರ ಸ್ನೇಹವೂ ಸಾಕು, ಅನುಭವಿಸಿದ ಯಾತನೆಯೂ ಸಾಕು. ಇನ್ನವರು ತಿಪ್ಪರ್ಲಾಗ ಹಾಕಿದರೂ, ಮುಗಿಬಿದ್ದರೂ, ಬಿಕ್ಕಿ ಬಿಕ್ಕಿ ಅತ್ತರೂ, ಬೇಡಿಕೊಂಡರೂ ನಾನು entertain ಮಾಡೋಲ್ಲ. The end !

Z : Oh my god ! how can you live without friends ?

ನಾನು : ಅಯ್ಯೊ ಮಹತಾಯಿ, ಹಾಗಂತ ನನಗೆ ಸ್ನೇಹಿತರೇ ಇಲ್ಲ, ಇರುವವರೆಲ್ಲರೂ ಹೀಗೆ ಎಂದು ಅರ್ಥ ಅಲ್ಲ. ಸ್ಮಿತೆಯಂಥಾ, ಭವ್ಯಳಂತಾ , ಚೈತ್ರಳಂತಾ, ಅಕ್ಷಜಾಳಂಥಾ, ನಮ್ಮ ನಾಡಿನ ಸದಸ್ಯರಂಥಾ, ಪ್ರಣತಿಯ team members ಅಂಥಾ, ರಾಧೆಯಂಥಾ , ಆಶಾಳಂಥಾ, ರೋಹಿಣಿಯಂಥಾ, ಶೃತಿಯಂಥಾ, ಹಾಗೆಯೇ ಮತ್ತಷ್ಟು ನಿಜವಾದ ಒಳ್ಳೆ ಸ್ನೇಹಿತರು ನನ್ನ ಪಾಲಿಗಿದ್ದಾರೆ. ಅವರೆಲ್ಲರೂ ನನಗಾದ ನೋವನ್ನ ಮರೆಯುವಂತೆ ಮಾಡಿದ್ದಾರೆ. All thanks to them !

Z : :) Good to know, but still, wont people think you are headstrong when they see you act tough ?

ನಾನು : They weren't nice to me when I was nice to them, Z ! There is a saying " you cannot have a choice of relatives, but you can have a choice of friends ".

And I have done mine.

If people think I am headstrong, rude, tough, stupid and what not... I care a damn ! My true friends have accepted me as I am and I have accepted them as they are. ಅಷ್ಟೆ.

Z : ಸರಿ.

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...