Wednesday, August 13, 2008

hopeless fellow ಪದದ ತರ್ಜುಮೆ !

Z : ಇತ್ತೀಚೆಗೆ ನೀನು ಟೈಂ ಪಾಸ್ ಬಿಟ್ಟು ಇನ್ನೇನೂ ಮಾಡುತ್ತಿಲ್ಲ ಅಲ್ಲಾ ?

ನಾನು : ಹಾಗೇನಿಲ್ಲ. ಟೈಂ ಪಾಸ್ ಬಿಟ್ಟು ಬೇಕಾದಷ್ಟು ಕೆಲ್ಸ ಮಾಡ್ತಿದಿನಿ. for example : ನಿದ್ದೆ, ಊಟ, etc.

Z : ಕರ್ಮಕಾಂಡ !

ನಾನು : ಸಾಕು ನಿನ್ನ ಉದ್ಗಾರ . ಇವತ್ತೇನಾಯ್ತಪ್ಪಾ ಅಂದ್ರೆ...

ಮದ್ಯಾಹ್ನ ನಾನು ಆನ್ಲೈನ್ ಬಂದೆ..ಶ್ರೀಕಾಂತ್ ಇದ್ದರು..ನಾನೇ ನನ್ನ ಕೆಟ್ಟುಹೋಗಿದ್ದ ಮೈಕ್ ನ ರಿಪೇರಿ ಮಾಡಿದ ಖುಶಿ ಲಿ ಗೂಗಲ್ ಟಾಕಿನಲ್ಲಿ ಫೋನಿಸಿದೆ. ತರ್ಜುಮೆಗಳ ಬಗ್ಗೆ ಸಲ್ಪ ಮಾತಾಡೋದಿತ್ತು. ಮಾತಾಯ್ತು. ನಂತರ ಪಾಪ ಶ್ರೀಕಾಂತರ ಬೈಕ್ ಇವತ್ತು ಕೆಟ್ಟು ಅವರು ಪಟ್ಟ ಅವಸ್ಥೆ / ಅವ್ಯವಸ್ಥೆಗಳನ್ನು ಕೇಳುತ್ತಿರುವಾಗ ಎಲ್ಲಿಂದಲೋ ಸಡನ್ನಾಗಿ ನನ್ನ ತಲೆಯಲ್ಲಿ ಒಂದು ಪ್ರಶ್ನೆ ಉದ್ಭವವಾಯಿತು.

Z : ಏನ್ ಪ್ರಶ್ನೆ ?

ನಾನು : hopeless fellow ಅನ್ನುವ ನುಡಿಗಟ್ಟನ್ನು ಶುದ್ಧ ಕನ್ನಡದಲ್ಲಿ ಏನನ್ನುತ್ತಾರೆ ?

Z : ಆಹಾ ! million dollar question-ನ್ನು !

ನಾನು : ಹೂ ಮತ್ತೆ ! ನಾನು ಪ್ರಶ್ನೆ ಕೇಳುವ ಹೊತ್ತಿಗೇ ಕರ್ಮಕಾಂಡ ಪ್ರಭುಗಳು ಆನ್ಲೈನ್ ಬಂದರು. ನಮಸ್ಕಾರ ಮತ್ತು ಉಭಯಕುಶಲೋಪರಿ ಸಾಂಪ್ರತದ ನಂತರ ಏನು ಮಾಡುತ್ತಿದ್ದೀರಿ ಅಂತ ಅವರು ನನ್ನ ಕೇಳಿದರು. ನಾನು ಶ್ರೀಕಾಂತರ ಜೊತೆ ಟಾಕಿಸುತ್ತಿರುವುದನ್ನು ತಿಳಿಸಿದೆ. ಯಥಾ ಪ್ರಕಾರ "ಗೂದ್ " ಎಂದರು. " ಗೂದ್" ಅನ್ನುವುದು ಅವರು ಪೇಟೆಂಟಿಸಿಕೊಂಡಿರುವ ಶಬ್ದ. ಈ ಪ್ರಶ್ನೆ ಉದ್ಭವವಾದ ಕೂಡಲೆ ನಾನು ಶ್ರೀಕಾಂತರನ್ನು ಕೇಳಿದೆ. ಅವರು ಒಡನೆಯೇ ಉತ್ತರಿಸಿದರು -

"ನಿರಾಶಾದಾಯಕ ಮನುಷ್ಯ " ರಿ...

ಆಮೇಲೆ ಕರ್ಮಕಾಂಡ ಪ್ರಭುಗಳನ್ನ ಕೇಳಿದೆ . ಅವರು ಕೊಟ್ಟ ಉತ್ತರಗಳು ಮತ್ತು ನಮ್ಮಿಬ್ಬರ ನಡುವೆ ನಡೆದ ಸಂಭಾಷಣೆಯ ತಿರುಳು ಇಷ್ಟು :
goodh boy.. :) ಅಂದರು ಮೊದಲು. ನಂತರ hoplessa fella... ಆಮೇಲೆ.. hope = aashe..less = kammi fellow = mansha.. aashekammi mansha..
aashekammi maanava... ಇದಾದ ಮೇಲೆ ಅವರು ಉಪದೇಶ ಶುರು ಮಾಡಿದರು...ಕೆಲವು ಪದಗಳೆ ಅದೇ ಭಾಷೆಯಲ್ಲಿ ಇದ್ದರೆ ಚೆನ್ನ...ತರ್ಜುಮೆ ಮಾಡಬೇಡಿ ಅಂತ. ನಾನು ಬಿಡಲಿಲ್ಲ. ಶ್ರೀಕಾಂತರೂ ! ಅವರ ಕಾಲೆಳೆಯಲು, ಅವರನ್ನು ಮರ ಹತ್ತಿಸಲು ನಾವು ನಿರ್ಧಾರ ಮಾಡಿಬಿಟ್ಟಿವು ! ಇದರ ಮಧ್ಯದಲ್ಲಿ ನಾನು ಶ್ರೀಕಾಂತರಿಗೆ ಇದೇ ಪ್ರಶ್ನೆಯನ್ನು ಅರುಣ್ ಗೆ ಮತ್ತು ಶ್ರೀನಿವಾಸರಿಗೆ ಕೇಳಿ ಅಂತ ಹೇಳಿದೆ. ಅವರು ಮೆಸೇಜಿಸಿದರು. ನನಗೆ ಮತ್ತು ಕರ್ಮಕಾಂಡಪ್ರಭುಗಳಿಗೂ ಸೇರಿ !

Z : ನಿನಗೆ ಯಾಕೆ ?

ನಾನು : ರೆಕಾರ್ಡ್ ಗೆ !

Z : ಆಹಾ ! ಅದ್ಭುತ ! ಆಮೇಲೆ ?

ಇದನ್ನು ನೋಡಿದ ಕರ್ಮಕಾಂಡ ಪ್ರಭುಗಳು ನಾವು ಅವರಿಗೆ ಮರ ಹತ್ತಿಸಲು ನಿರ್ಧರಿಸಿದ್ದೀವಿ ಅಂತ ಗೊತ್ತಾಗಿ..." ಏನ್ ಗಲಾಟೆ ನಿಮ್ಮದು ? " ಅಂತ ಕೇಳಿದರು. ನಾನು ಏನೂ ಗೊತ್ತಿಲ್ಲದವರಂತೆ " ಏನೂ ಇಲ್ಲಪ್ಪ ! " ಅಂತ ಅಂದೆ ! ಸರಿ ಅವರು.."ನಾನು ಹೊರಟೆ" ಅಂತ ಹೇಳಿ escape ಆಗೋದ್ರು ! ಮರ ಹತ್ತಲಿಲ್ಲ ಚಾಣಾಕ್ಷರು !

Z : ಸರಿ ಹೋಯ್ತು !

ನಾನು : ಹೆ ಹೆ...ಇದರ ಮಧ್ಯೆ ಶ್ರೀಕಾಂತರು ತಮ್ಮ ತರ್ಜುಮೆಯನ್ನು ಸಂಸ್ಕೃತದಲ್ಲೂ ಮಾಡಲಿಚ್ಛಿಸಿ, ಇದರ ತರ್ಜುಮೆಯನ್ನು ಎರಡೂ ರೀತಿಯಲ್ಲಿ ಮಾಡಿ ಕಳಿಸಿದರು. ಒಂದು - ನಿರಾಶಾಮಗ್ನ ಮನುಷ್ಯ. ಎರಡು - ಆಶಾಧಮ ಸಖ (ಸಂಸ್ಕೃತ ತರ್ಜುಮೆ ).

ಇದಾಗುವ ಹೊತ್ತಿಗೆ ಗುರುಗಳು ತಮ್ಮ ತರ್ಜುಮೆ ಕಳಿಸಿದ್ದರು :

ನಿರಾಶಾದಾಯಕ ಮನುಷ್ಯ ಅಂತ

ಅವರ ಮೆಸೇಜಿನ ಹಿಂದೆಯೇ ಗಂಡಭೇರುಂಡರ ಮೆಸೇಜು..ಪದವಿಭಾಗ ಸಮೇತ :
aashaa ( hope )
kammi (less )
aaLu ( fellow )

ನಾವಂತೂ...ನಕ್ಕು ನಕ್ಕೂ ಸುಸ್ತು !!

Z : ಆಹಾ ! ಒಬ್ಬೊಬ್ಬರೂ ಸರೀಗಿದ್ದೀರಿ ತರ್ಜುಮೆ ಪ್ರವೀಣರು !! ನಿನ್ನ ತರ್ಜುಮೆ ?

ನಾನು : ನಾನು ತುಂಬಾ ಚಿಕ್ಕವಳು. ಶ್ರೀ ಸಾಮಾನ್ಯೆ ! ಆದ್ದರಿಂದ ಈಗ ನಾನು ತರ್ಜುಮೆ ಮಾಡಲು ಆಗುವುದಿಲ್ಲ. by the way, this question is open to all. ಎಲ್ಲರೂ ಈ ನುಡಿಗಟ್ಟಿನ ಕನ್ನಡ ತರ್ಜುಮೆಯನ್ನು ಮಾಡಬಹುದು. ಎಲ್ಲರದ್ದೂ ಆಗಲಿ...ಆಮೇಲೆ ನಾನು ನನ್ನ ತರ್ಜುಮೆಯನ್ನು ಮಾಡಲು ಪ್ರಯತ್ನಿಸುವೆ !

Z : :) :) : ) ಸರಿ !

ನಾನು : ಎಲ್ಲರೂ ಪ್ರಯತ್ನಿಸಿ ! ಆಲ್ ದಿ ಬೆಸ್ಟ್ !
ಅತಿವಿಶೇಷ ಸೂಚನೆ : ತರ್ಜುಮೆ "ಶುದ್ಧ" ಕನ್ನಡದಲ್ಲಿರಬೇಕು.

11 comments:

ಅರುಣ ಪ್ರಕಾಶ said...

hopeless fellow ನ ಅರ್ಥಭರಿತವಾಗಿ ತರ್ಜುಮೆ ಮಾಡಬೇಕಾದರೆ ಅಯೋಗ್ಯ ಅನ್ನೋ ಪದ ತುಂಬಾ ಚೆನ್ನಾಗಿ ಹೊಂದುತ್ತೆ ಅನ್ನಿಸುತ್ತೆ - ಏಕೆಂದರೆ hopeless fellow ಅಂತ ಯಾರನ್ನಾದರು ಬೈಬೇಕಾದರೆ ಅವನು ಅಯೋಗ್ಯನೇ ಆಗಿರಬೇಕು ಅಲ್ಲವೆ? ಆದರೆ ಪ್ರೀತಿಯಿಂದ ಯಾರನ್ನಾದರು hopeless fellow ಅಂತ ಬೈಯ್ಯೋದಾದರೆ ಅಯೋಗ್ಯ ಸರಿ ಹೊಂದೊಲ್ಲ - ಅದಕ್ಕೆ ಬೇರೆ ಏನಾದ್ರು ಹುಡುಕ ಬೇಕಾಗುತ್ತೆ (ಗಬ್ಬ್ ನನ್ನ ಮಗ ಹೊಂದುತ್ತೇನೊ :) )

Parisarapremi said...

naanu kaLsid tarjume adu alve alla... ninge wrong aagi convey maadidaane srikantha.

ಅಸತ್ಯ ಅನ್ವೇಷಿ said...

ಲಕ್ಷ್ಮಿ ಅವರೆ, ನೀವು ಇಷ್ಟು ಸಣ್ಣ ಕಾರಣಕ್ಕೆ ನಿಮ್ಮ ಫ್ರೆಂಡ್ಸನ್ನ ಮರ ಹತ್ತಿಸೋದು ಓದಿದ್ಮೇಲೆ hopeless fellowವನ್ನು ಒಂದೆರಡ್ಮೂರ್ನಾಲ್ಕು ವಿಭಾಗಗಳಾಗಿ ವಿಂಗಡಿಸಬಹುದು.
hop (e) less fell - ow! = "ಮರದಿಂದ ಮರಕ್ಕೆ ಹಾರೋದು ಕಡಿಮೆ ಮಾಡಿ ಬಿದ್ದ...ಓಹ್" ಅಂತಲೂ ಆಗುತ್ತೆ.

ಅದರ ಕಿರು ರೂಪ ಇನ್ನೊಂದಿದೆ. ಇದಕ್ಕೆ ನಿಮ್ಮ "ನಿರಾಶಾದಾಯಕ"ವೇ ಸ್ಫೂರ್ತಿ. ನೀವು ಮರ ಹತ್ತಿಸಿದ ಕಾರಣ.... "ನಿರಾಶಾಜನಕ ವ್ಯಕ್ತಿ" ಅಂತನೂ ಹೇಳಬಹುದು!!!

ಆದ್ರೆ, ಇದಕ್ಕೆ ನಮ್ಮ ನಮ್ಮ ಜನಕರೆಲ್ಲಾ ಆಕ್ಷೇಪ ಒಡ್ಡದಿದ್ದರೆ ಸಾಕು. ಅಂದ್ರೆ ಅವರೆಲ್ಲಾ (ನಮ್ಮಂತಹ!) ನಿರಾಶೆಯನ್ನೇ ಹುಟ್ಟುಹಾಕಿದೋರು ಅಂತ ಕರೆದಂತೆಯೂ ಆಗುತ್ತಲ್ಲಾ...

Lakshmi S said...

ಅರುಣ್ ಪ್ರಕಾಶ್ :

ಅಯೋಗ್ಯ ಅನ್ನೋ ಪದ ಹೊಂದಬಹುದು...ಆದ್ರೆ ಇನ್ನೊಂದು ತರ್ಜುಮೆ ಡೌಟು ಸಲ್ಪ.

ಪರಿಸರಪ್ರೇಮಿ :
ಹಾಗಾ ಗುರುಗಳೇ ? ನೀವು ನಿಮ್ಮ ತರ್ಜುಮೆಯನ್ನು ಇಲ್ಲಿ ಟೈಪಿಸಿ ಮತ್ತೆ !

ಅಸತ್ಯ ಅನ್ವೇಷಿ :

ನಾವು ಶ್ರೀಧರರನ್ನು ಮರಹತ್ತಿಸಲು ಪ್ರಯತ್ನಿಸಿದೆವಷ್ಟೆ..ಅವರು ಚಾಣಾಕ್ಷರು, ಅಸಾಮಾನ್ಯರು, ಪ್ರಳಯಾಂತಕರು, ಮಹಾಪ್ರಚಂಡರು. ಮರ ಹತ್ತಲಿಲ್ಲ. ಎಗರುವ ದೂರ ಕಮ್ಮಿಯಾಗಿ ಬೀಳಲೂ ಇಲ್ಲ ! ಆದರೂ ಈ ತರ್ಜುಮೆ ಅದ್ಭುತವಾಗಿದೆ.

ಇನ್ನು ನಿರಾಶಾಜನಕ ವ್ಯಕ್ತಿ...ನನ್ನ ಲೆವೆಲ್ಲಿಗೆ ಸಲ್ಪ ಜಾಸ್ತಿಯಾಯ್ತು ಈ ಪದ ! ಇನ್ನೂ ಅರ್ಥವಾಗಿಲ್ಲ ! ಇದು ಅರ್ಥವಾದ ಮೇಲೆ ಕಡೆಯ ಎರಡು ಲೈನುಗಳು ಅರ್ಥವಗಬಹುದೇನೋ !

Sridhar said...

goodh hopeless fellow :-)
ನಾವು ಶ್ರೀಧರರನ್ನು ಮರಹತ್ತಿಸಲು ಪ್ರಯತ್ನಿಸಿದೆವಷ್ಟೆ..ಅವರು ಚಾಣಾಕ್ಷರು, ಅಸಾಮಾನ್ಯರು, ಪ್ರಳಯಾಂತಕರು, ಮಹಾಪ್ರಚಂಡರು...

cough cough cough.... ee melin saalugaLna oodhi yedhva tadva kemmu banthu....cough cough cough..

yaav mara hatso prayatna idu brahma swaroopigaLe??

Srikanth - ಶ್ರೀಕಾಂತ said...

:-)

@sridhara - "brahma swaroopigaLe" anno sambodhane chennaagide... apyaayanaama no ilvo gottilla.

ಅಂತರ್ವಾಣಿ said...

ನಿರಾಸೆ ಜೀವಿ.

Sridhar said...

@srikanth : Lakshmi avrige "Brahma Swaroopi" anno hesaru yedhva tadva apyaayamaanavaagi hondutte.....

Lakshmi S said...

@sridhar :

goodh hopeless fellow :-)---> no comments idakke !

ನಾವು ಶ್ರೀಧರರನ್ನು ಮರಹತ್ತಿಸಲು ಪ್ರಯತ್ನಿಸಿದೆವಷ್ಟೆ..ಅವರು ಚಾಣಾಕ್ಷರು, ಅಸಾಮಾನ್ಯರು, ಪ್ರಳಯಾಂತಕರು, ಮಹಾಪ್ರಚಂಡರು...-----> idu doubtaateeta satya !

cough cough cough.... ee melin saalugaLna oodhi yedhva tadva kemmu banthu....cough cough cough.. ------> kemmu banta karmakaanda prabhugaLE ? benadryl tagoLLi bega !

yaav mara hatso prayatna idu brahma swaroopigaLe?? ----> baaLe mara hattiso prayatna.

:-)

nange "brahma swaroopini" anno hesru aapyaayamaanavaagi hondatta ? adu "yadvaa tadhva " aapyaayamaanaa na ?

neev yaav mara hattistiddeeri nanna karmakaanda prabhugaLE ?

Sridhar said...

@lakshmi : satyaane doubt -u ;-)

mara annodu bhrame..ellaa maaye :-)

Srikanth - ಶ್ರೀಕಾಂತ said...

@sridhara - idanna odappa... top secret idu... artha maaDkonDre neenoo brahmasvaroopi aagogteeya!

BTW, bhagawadgeeteyalli idanna huDuki torsbiDu... ninge prize koDteeni...

ಭ್ರಮಾಧೀನೋ ಹ್ಯಸ್ಮಿನ್ ಲೋಕಃ
ಭ್ರಮಾಸು ಭ್ರಮತೇ ಮನಃ
ಬ್ರಹ್ಮ ಏವೈಕ ಹಿ ಸತ್ಯಂ
ಭ್ರಮಾಖಿಲೋಽಪಿ ತದ್ವಿನಾ

ತದ್ಬ್ರಹ್ಮಾ ಗುಣದೂರೋಸ್ತಿ
ತಂ ಜ್ಞಾತುಂ ಕುರು ಯತ್ನಂ ತ್ವಂ
ತಜ್ಜ್ಞಾನಂ ಪ್ರಾಪ್ನೋಸಿ ಯದಾ
ತ್ವಂ ಬ್ರಹ್ಮ ನಿರ್ಗುಣೋ ತದಾ

ಏತದೇವ ಹಿ ಮಜ್ಜ್ಞಾನೇ
ಆಚಾರ್ಯಶಂಕರಮತಃ
ಭ್ರಮಾಂ ಬ್ರಹ್ಮಾರ್ಪಣಂ ಕೃತ್ವಾ
ಬ್ರಹ್ಮೋ ಭವತು ಶ್ರೀಧರ

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...