Sunday, October 26, 2008

ದೀಪದ ಹಬ್ಬದ ಶುಭಾಶಯ


ಅಡೋಬ್ ಫೋಟೋಶಾಪ್ ನಲ್ಲಿ (for the first time ) ನಾನೆ ಮಾಡಿದ ಶುಭಾಶಯ ಪತ್ರ. ಇಲ್ಲಿವರ್ಗೂ ಅದನ್ನ ಓಪನ್ನು ಮಾಡಿರಲಿಲ್ಲ. ಕನ್ನಡ ಶುಭಾಶಯಪತ್ರಗಳನ್ನು ಹುಡುಕಿದೆ...ಅದನ್ನ ಹುಡುಕುವುದರ ಬದಲು ನಾನೇ ಮಾಡಿದರೆ ಆ ಖುಶಿ ಬೇರೆ ಅನ್ನಿಸಿತು. ಅದಕ್ಕೆ ಐದು ಘಂಟೆಗಳ ಕಾಲ ಕಷ್ಟ ಪಟ್ಟು, ಫೋಟೋಶಾಪ್ ಉಪಯೋಗಿಸುವುದನ್ನು ತಕ್ಕ ಮಟ್ಟಿಗೆ ಕಲಿತು ಇದನ್ನ ಮಾಡಿದ್ದೇನೆ. ನಿಮಗೆಲ್ಲರಿಗೂ ಈ ದೀಪದ ಹಬ್ಬ ಸುಖ ಸಂತೋಷ, ನೆಮ್ಮದಿ, ಆಯಸ್ಸು, ಆರೋಗ್ಯ ಹಾಗೂ ನೆಮ್ಮದಿಯನ್ನು ಕೊಟ್ಟು ಬಾಳಿನಲ್ಲಿ ಬೆಳಕು ಮೂಡಿಸಲಿ ಎಂದು ಹಾರೈಸುತ್ತೇನೆ.

Friday, October 24, 2008

research status

ನಮಸ್ಕಾರ. ವಾರ್ತೆಗಳು. ಓದುತ್ತಿರುವವರು Z .

Head ruled ಅವರ ಕೊಲ್ಲುವ ಮೌನದ research ಭರ್ಜರಿಯಾಗಿ ಸಾಗುತ್ತಿದೆ.ಆದರೆ ಬೊಂಬೆಗಳ ವಿಡಿಯೋ ತೆಗೆಯುವಾಗ ಮಾತ್ರ ಕೊಟ್ಟ ಬ್ರೇಕ್ ಸಾರ್ಥಕವಾಗಿದೆ.

Head ruled ಅವರ ಮೌನ ಅರ್ಥಗಳಿಗಿಂತ ಅನರ್ಥ ಹಾಗೂ ನಾನಾರ್ಥಗಳಿಗೆ ಎಡೆಮಾಡಿಕೊಟ್ಟಿದೆ ಎಂಬುದು ಅವರ sudden ಮೌನದ ತನಿಖೆ ನಡೆಸಿದವರ ವರದಿ. ಕೆಲವರು "ಇವಳು ನಮ್ಮ ಲಕ್ಷ್ಮೀ ಅಲ್ಲವೇ ಅಲ್ಲ " ಎಂದು ನಮ್ಮನ್ನೂ ಸೇರಿಸಿ ಸಾರಾಸಗಟಾಗಿ ಆಪಾದಿಸಿ ಅನರ್ಥಕ್ಕೆ ಎಡೆ ಮಾಡಿಕೊಟ್ಟರೆ, ಇನ್ನು ಕೆಲವರು "ph.D entrance tension ಇರಬೇಕು", "mood ಸರಿಗಿಲ್ಲ ಅನ್ಸತ್ತೆ...ಯಾವ್ದಾದ್ರು ಪುಸ್ತಕವನ್ನು ಕೊಂಡುಕೋಬೇಡಾ ಅಂದ್ರಾ ಯಾರಾರು ? ", "ಮಳೆಗೆ ಕಾರಣ ಇವಳ ಮೌನವೇ " ಮತ್ತು "ಏನೋ ಪಾ...ಇತ್ತೀಚೆಗೆ ನಮ್ಮನ್ನೆಲ್ಲ ಮರ್ತೇ ಹೋಗಿದಾಳೆ" ಇತ್ಯಾದಿ ವ್ಯಾಖ್ಯಾನಗಳು ಕೇಳಿಬರುತ್ತಿವೆ. ph.D ವಿಷಯಕ್ಕೆ ಮಾತ್ರ ತಲೆಯಲ್ಲಾಡಿಸಿ ನಕ್ಕು ಸಮ್ಮತಿ ಸೂಚಿಸಿರುವ head ruled ಮಿಕ್ಕೆಲ್ಲದಕ್ಕೂ confused looks ಮತ್ತು ಅನರ್ಥದ ಕಾರಣಕ್ಕೆ ದರಿದ್ರವಾದ ಲುಕ್ ಒಂದನ್ನು ಎಸೆದಿದ್ದಾರೆ.

ಇದರ ಮಧ್ಯೆ ನಮ್ಮಿಬ್ಬರ ಸಖಿ ಹಿರಣ್ಮಯಿಯು [ Nokia phone ] ನೇಣುಹಾಕಿಕೊಂಡುದರ ಶೋಕ ತಡಿಯಲಾಗದೇ, ಸದ್ಯೋಜಾತನ ಮೊರೆ ಹೋಗಲಿಕ್ಕೆ ಪತಿ ಸಂಜೀವಿನಿ ವ್ರತದಂತೆ "ಸಖಿ ಸಂಜೀವಿನಿ ವ್ರತ" ದ ಮಂತ್ರಗಳನ್ನು ತಾವೇ ಕಂಡುಹಿಡಿದು,[ಪತಿಸಂಜೀವಿನಿ ವ್ರತದ ಮಂತ್ರಗಳ modification] ಬಾಯ್ಬಿಟ್ಟು ಮಂತ್ರ ಹೇಳುವ ಅಧಿಕಾರವಿಲ್ಲವಾದ್ದರಿಂದ ಮೌನವಾಗಿಯೇ ಓದಿ, ವ್ರತವನ್ನು ಮಾಡಿ, ಶಿವನ ಮೆಚ್ಚಿಸಿ ಹಿರಣ್ಮಯಿಗೆ ಜೀವ ತರಿಸಿದ್ದಾರೆ. ನೋಕಿಯಾ ಡೀಲರ್ ಬಳಿ ಭಾರೀ ಜಗಳವನ್ನೇ ನಿರೀಕ್ಷಿಸಿದ್ದ ನಮ್ಮ ತಂದೆ ಇವರು ಮನೆಯ ಹೊರಗೆ ಕಾಲಿಡದಿರುವುದನ್ನು ನೋಡಿ ಆಶ್ಚರ್ಯದಿಂದ ಹುಬ್ಬೇರಿಸಿದ್ದಾರೆ. ನಮಗೆ ವ್ರತದ ಬಗ್ಗೆ ಹೇಳಿ ಎಂದರೆ ಯಥಾ ಪ್ರಕಾರ blank look.

"ಯಾಕೆ ಈಥರ silent ಆಗಿದ್ದುಕೊಂಡು ಕೊಲ್ತಿಯಾ ?" ಅಂತ ಮನೆಯವರು ಸಿಕ್ಕಾಪಟ್ಟೆ ಕೂಗಾಡುವುದನ್ನು ಇವರು ಕೇಳಿದರೆ ಮೌನ ಮುರಿಯುವ ಸಾಧ್ಯತೆ ಇದೆ ಎಂದು ನಮ್ಮ ನಂಬಿಕೆ. ನಮ್ಮ ಅಂದಾಜಿನ ಪ್ರಕಾರ ಇನ್ನೆರಡು ತಿಂಗಳಾದರೂ ಈ ರಿಸರ್ಚು ನಡೆಯಲಿದೆ.ಆದರೆ ನಮ್ಮ ಅಂದಾಜಿನ ಸತ್ಯಾಸತ್ಯತೆಗಳ ಬಗ್ಗೆ ತಲೆಯಲ್ಲಾಡಿಸಲೂ ಸಹ ಇವರು ನಿರಾಕರಿಸಿದ್ದಾರೆ.

ಏತನ್ಮಧ್ಯೆ head ruled ಆಂಗ್ಲವನ್ನು ಮರೆತುಹೋಗಿದ್ದಾರೆ ಎಂಬ ಆಪಾದನೆಯನ್ನು ಮೌನವಾಗಿ ಸಹಿಸಿ ಎಲ್ಲರಿಗೂ ಆಶ್ಚರ್ಯದ shock ಕೊಟ್ಟು ಆಂಗ್ಲದ ಹೊಸದೊಂದು ಬ್ಲಾಗನ್ನು ಪ್ರಾರಂಭಿಸಿದ್ದಾರೆ[ನಮಗೆ ಹೇಳದೇ]. ಆದರೆ, ಅವರಿಗಿಂತ ನಾವೇ ಹೆಚ್ಚಾಗಿ ನೆಟ್ಟಿನಲ್ಲಿ ಬಿದ್ದಿರುತ್ತೇವೆಯಾದ್ದರಿಂದ ಅದರ ಲಿಂಕನ್ನು ಪತ್ತೆ ಮಾಡುವುದರಲ್ಲಿ ಯಶಸ್ವಿಯಾಗಿದ್ದೇವೆ. ಅದರ ಲಿಂಕ್ ಇಲ್ಲಿದೆ. ಲಿಂಕಿಗೆ ಭೇಟಿಕೊಟ್ಟಾಗ landline ನಲ್ಲಿ ಆದ ಮಾತುಕತೆಗಳು ನೋಡಸಿಗುತ್ತವೆ. ಅದೂ ಎರಡೇ ವಾಕ್ಯ ! [ಇದನ್ನು ಕೇಳಿಸಿಕೊಂಡವರು ತಲ್ಲಣಿಸಿಹೋಗಿದ್ದಾರೆ ಎಂಬುದು ಸೀಕ್ರೆಟ್ ಬ್ಯೂರೋ ರೆಪೋರ್ಟು] . ಅವರಿಗೆ ಆಕಸ್ಮಿಕವಾಗಿ ಹುಶಾರು ತಪ್ಪಿ, ವಿಧಿವಿಪರೀತದ ಆಟದಲ್ಲಿ ಸೋತಿರುವುದನ್ನೂ ನಾವು ಈ ಬ್ಲಾಗಿನಲ್ಲಿ ಕಾಣಬಹುದು.

ಇಲ್ಲಿಗೆ ವಾರ್ತಾಪ್ರಸಾರ ಮುಕ್ತಾಯವಾಯ್ತು. ನಮ್ಮ ಮುಂದಿನ ಭೇಟಿ ಎರಡು ತಿಂಗಳಾದ ಮೇಲೆ (ಪ್ರಾಯಶಃ), head ruled ಅವರ research analysis ಜೊತೆಗೆ. ಧನ್ಯವಾದಗಳು.

Sunday, October 5, 2008

ಕೊಲ್ಲುವ ಮೌನ ಅಂತೆ...ಹೇಗಿರತ್ತೆ ಅದು ?

Z : ನಿಂಗೆ ಜನ್ಮದಲ್ಲಿ ಗೊತ್ತಾಗಲ್ಲ ಬಿಡು ಇದು.

ನಾನು : ನೋಡು ಪ್ಲೀಸ್ ಈ ಥರ ಎಲ್ಲಾ under- estimate ಮಾಡ್ಬೇಡ ನನ್ನನ್ನ.

Z : ಎನ್ನೇನ್ ಮತ್ತೆ? ನಿಂಗೆ ಸೈಲೆಂಟಾಗಿ ಇರಕ್ಕೆ ಎಲ್ಲ್ ಬರತ್ತೆ?

ನಾನು : ನನಗೆ ಸೈಲೆಂಟಾಗಿರಕ್ಕೆ ಬರತ್ತೆ.

Z : ಭ್ರಮೆ.

ನಾನು : ಶಟಪ್ !ನೋಡು...ಈಗ ನಾನು ಈ "ಕೊಲ್ಲುವ ಮೌನ" ದ ಬಗ್ಗೆ ರಿಸರ್ಚು ಮಾಡ್ಲೇ ಬೇಕು. ಅದ್ ಹೇಗಿರತ್ತೆ ...ಯಾರ್ ಯಾರನ್ನ ಎಲ್ಲೆಲ್ಲಿ ಹೇಗ್ ಹೇಗೆ ಯಾವ್ ಯಾವ್ ಥರ ಕೊಲ್ಲತ್ತೆ ಅಂತ ನಾನ್ ನೋಡ್ಬೇಕ್.

Z : ನೀನು "ಕೊಲ್ಲುವ ಮೌನ" ನ action movie ಅಂದುಕೊಂಡಿದ್ಯಾ ಮಾ ಮಹತಾಯಿ ? ಭ್ರಮೆ !
ನೋಡು...ನೀನು ಆ ಬಿಗ್ ಬ್ಯಾಂಗ್ ಸ್ಫೋಟನ imitate ಮಾಡೋ experiment ನ ಮತ್ತೆ ಮಾಡ್ತಿನಿ ಅಂದ್ರೂ ನಾನ್ ಬೇಡಾ ಅನ್ನಲ್ಲ....ನಿನ್ನ ಕೈಲಿ ಆಗ್ದೇ ಇರೋ ಇಂಥಾ ಕೆಲ್ಸ ಎಲ್ಲ ಮಾಡ್ಬೇಡಾ....

ನಾನು : ನೋಡು ಎಂಥಾ hopeless negative approach ನಿಂದು! ಇನ್ನು ಶುರು ನೇ ಮಾಡಿಲ್ಲ experiment ನ...ಅಷ್ಟರಲ್ಲಿ ಶಕುನ ನುಡಿದುಬಿಟ್ಟಳು ದೊಡ್ಡ್ ಶಕುನದ ಪಕ್ಷಿ ಥರ. ಆಗಲ್ವಂತೆ ನನ್ನ ಕೈಲಿ. ಏನಾದ್ರು ಸರಿ ...ನಾನ್ ಸೈಲೆಂಟಾಗಿರೋದನ್ನ ಕಲಿಲೇ ಬೇಕು.

Z : ಮಕ್ಕಳು ಲಾಲಿಪಪ್ಪು ಬೇಕೇ ಬೇಕ್ ಅಂತ ಹಠ ಹಿಡ್ಯೋ ಹಾಗೆ ಹಠ ಹಿಡಿಬೇಡ.

ನಾನು :ಯಾಕೆ ಹಠ ಹಿಡಿಬಾರ್ದು ?

Z : ಲೋಕದ ಆರೋಗ್ಯಕ್ಕೆ ಒಳ್ಳೇದಲ್ಲ !

ನಾನು : ಅದು ಲೋಕದ ಕರ್ಮ ! ನನ್ನದಲ್ಲ.

Z : ನೋಡು head ruled... ಮಾತಾಡದೂ ಒಂದು ಟಾಲೆಂಟು.

ನಾನು : ಇರ್ಬಹುದು. ಹಾಗೇ ಸೈಲೆಂಟಾಗಿರೋದು ಒಂದು ಟಾಲೆಂಟಂತೆ.

Z : ಇರ್ಲಿ...ಅದಕ್ಕೆ ?

ನಾನು : ನಾನು ಆ ಟಾಲೆಂಟ್ ನ develop ಮಾಡ್ಕೋಬೇಕು ಈಗ. ನಾನು ಯಾವಾಗ್ ಬೇಕೋ ಆವಾಗ ನನ್ನ ಒರಿಜಿನಲ್ ಇಮೇಜ್ ಗೆ ವಾಪಸ್ ಬರ್ಬಹುದು. ಆದ್ರೆ ಈಗ...ಐ ವಾಂಟ್ ಟು ಟ್ರೈ ದ ಇಮೇಜ್ ಆಫ್ ಎ ಸೈಲೆಂಟ್ ಗರ್ಲ್.

Z : ಅಂಗಡಿಗೆಲ್ಲ ಹೋಗ್ಬೇಕಾದ್ರೆ ಮಾತಾಡ್ಬೇಕಾಗತ್ತಲ್ಲ....

ನಾನು : ಶಾಪಿಂಗ್ ಮಾಲ್ ಗೆ ಹೋಗೋದು. ಅಲ್ಲೆಲ್ಲ ನೋ ಮಾತು ನೋ ಕಥೆ. ಜಸ್ಟ್ ಕ್ಯಾಶ್ ಅಂಡ್ ಕ್ಯಾರಿ.

Z : ಮನೆಗೆ ಯಾರಾದ್ರು ಬಂದ್ರೆ ?

ನಾನು : ಸುಮ್ನೆ ಎಲ್ಲಾದಕ್ಕು ಒಂದು ಸ್ಮೈಲು, ಮತ್ತೆ ಮುಖದಲ್ಲೊಂದು ಕನ್ ಫೂಸ್ಡ್ ಲುಕ್ ಕೊಡೋದು. ಮಿಕ್ಕಿದ್ದನ್ನೆಲ್ಲ ಅಮ್ಮ ಮಾತಾಡ್ಕೋತಾರೆ. ಬರೋರೆಲ್ಲಾ ಒಂದೇ ಪ್ರಶ್ನೆ ಕೇಳ್ತಾರೆ. ನಂಗೆ ಆ ಪ್ರಶ್ನೆ ಕೇಳಿದರೆ ಇರಿಟೇಟ್ ಆಗತ್ತೆ ಅಂತ ಅಮ್ಮಂಗೆ ಗೊತ್ತಿದೆ. ಅದಕ್ಕೆ ಮೊದ್ಲಿಂದಲೂ ಆ ಪ್ರಶ್ನೆಗಳನ್ನ ಅಮ್ಮ ನೇ ಉತ್ತರಿಸುತ್ತಿದ್ದರು. ಈಗ್ಲೂ ಹಾಗೇ continue ಆಗತ್ತೆ ಅಷ್ಟೇ.

Z : ಫೋನ್ ಕಥೆ ?

ನಾನು : ಯೆಸ್. ಹಿರಣ್ಮಯಿ...ನೆನ್ನೆ ಇದರ ಬಗ್ಗೆ ನಾನು ಯೋಚ್ನೆ ಮಾಡ್ತಿದಿನಿ ಅಂತ ಗೊತ್ತಾಗಿ, ನಾನು ಇನ್ನು ಮಾತಾಡೊದು ದುರ್ಲಭ ಅಂತ ಮನಗಂಡು ಅವಳು ನೇಣು ಹಾಕೊಂಡ್ ಬಿಟ್ಲು. ಶ್ರದ್ಧಾಂಜಲಿ ಮತ್ತು ಶೋಕ ಸಭೆ ನಡಿಯುತ್ತದೆ ಮೂರ್ ದಿನ. ಆಮೇಲೆ ಮುಂದಿನ ಕಾರ್ಯಗಳ ಬಗ್ಗೆ ಯೋಚನೆ.

Z : ಬ್ಲಾಗು ?

ನಾನು : ಮಿಕ್ಕಿದ್ದೆಲ್ಲ ಬ್ಲಾಗ್ ಗಳು ವರ್ಕ್ ಆಗ್ತವೆ. ನಿನ್ನ ಜೊತೆ ಮಾತಾಡಲ್ಲ ಅಷ್ಟೇ.

Z : ಇವೆಲ್ಲ ಸ್ಕೋಪ್ ಬೇಡಾ...

ನಾನು : ನನ್ನನ್ನ discourage ಮಾಡೋರ್ ಹತ್ರ ನಾನ್ ಮಾತಾಡಲ್ಲ.

Z : ಇಲ್ಲ...ಸಾರಿ, ತಪ್ಪಯ್ತು. ಬೇರೆಯೋರ್ ಹತ್ರ ಎಲ್ಲ ಸೈಲೆಂಟಾಗಿರು ಬೇಕಾದ್ರೆ...ಆದ್ರೆ ನಿನ್ನ ಸೈಲೆನ್ಸು "ಕೊಲ್ಲುವ ಮೌನ" ಟಾರ್ಗೆಟ್ ರೀಚಾಯ್ತ ಇಲ್ವಾ ಅಂತ ಪ್ಲೀಸ್ ಹೇಳು.

ನಾನು : ....


Z : ಏನ್ ಲುಕ್ ಕೊಡ್ತ್ಯ ?

ನಾನು : ....


Z : ಮಾತಾಡೇ !!!

ನಾನು : .......


Z : ಅಯ್ಯೋ...ಹಠಕ್ಕೆ ಬಿದ್ಲಲ್ಲಪ್ಪಾ.....ಮಾತೇ ನಿಲ್ಲಿಸಿಬಿಟ್ಟಳಲ್ಲ...ಲೇ ಪ್ಲೀಸ್ ಮಾತಾಡು. ನನ್ನ ಜೊತೆ ಮಾತ್ರ ಮಾತಾಡು ! ಇನ್ಯಾರ್ ಜೊತೆ ಮಾತಾಡದಿದ್ರೂ ಓಕೆ !

ನಾನು : :-)

Z : ದರಿದ್ರ ಸ್ಮೈಲ್ ಬೇರೆ...ಹೇಳು ಮಾತಾಡ್ತ್ಯೋ ಇಲ್ವೋ ?

ನಾನು : ...........

Z : ಛೆ !

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...