Friday, August 8, 2008

ಇವತ್ತಿನ ದಿನ ಚೆನ್ನಾಗಿದೆಯಂತೆ !

Z : ಏನ್ ವಿಶೇಷ ಇವತ್ತು ?

ನಾನು : ಗೊತ್ತಿಲ್ವಾ ? ಇವತ್ತಿನ ಡೇಟ್ ನೋಡು - 08-08-08 !! ಬರೀ ಎಂಟುಗಳು ! ಚೆನ್ನಾಗಿದೆ ಅಲ್ವ ?

Z : looks nice !! ಇವತ್ತು Olympics ಬೇರೆ start ಆಗತ್ತೆ ಅಲ್ವ ?

ನಾನು : ಹೂ...start ಆಗೋಗಿದೆ. ನನಗೆ ಅದರ ಬಗ್ಗೆ ಇಂಟೆರಸ್ಟ್ ಇಲ್ಲ. ನಾನು ನಿನಗೆ ಹೇಳಬೇಕಾಗಿರುವ ವಿಷಯ ಒಂದಿದೆ.

Z : ಬೇಗ ಹೇಳು...ನೀನಿಥರ ಕುಣಿಯುತ್ತಿರುವುದನ್ನ ನೋಡಿದರೆ ವಿಷಯ ಏನೋ ಇದ್ದಹಾಗಿದೆ.

ನಾನು : ಯೆಸ್ !! ವಿಷಯ ಏನಪ್ಪ ಅಂದರೆ - ನಾಗರಪಂಚಮಿಯ ದಿನ ಗುರು ದೊಡ್ಡಪ್ಪ ನಾನು ಎಮ್. ಎಸ್ಸಿ ನ distinction ನಲ್ಲಿ clear ಮಾಡಿದ್ದಕ್ಕೆ ಆಶೀರ್ವಾದ ಪೂರ್ವಕವಾಗಿ ಐನೂರು ರುಪಾಯಿ ಕೊಟ್ಟರು. ಬಟ್ಟೆ, ಬಳೆ ಇವೇ ಮುಂತಾದವುಗಳನ್ನ ತಗೋ ಅಂತ.

Z : ತಗೊಂಡ್ಯಾ ?

ನಾನು : ಇಲ್ಲ.

Z : ಇಷ್ಟೇನಾ ? ಇದು ವಿಷಯ ನಾ ?

ನಾನು : ಥುಥ್ ! ಇದಲ್ಲ ವಿಷಯ. ವಿಷಯ ಏನಪ್ಪಾ ಅಂದರೆ...ಆ ಐನೂರು ರುಪಾಯಿಯನ್ನು ನಾನು ಹೇಗೆ ಖರ್ಚು ಮಾಡಿದೆ ಅನ್ನೋದರ ಬಗ್ಗೆ. ಇವತ್ತು ಸಾಯಂಕಾಲ ಅಂಕಿತ ಪುಸ್ತಕಕ್ಕೆ ಹೋಗಿ exactly Rs. 490 ಬಿಲ್ಲ್ ಆಗುವಂತೆ ಪುಸ್ತಕಗಳನ್ನ ಖರೀದಿ ಮಾಡಿದೆ !!

Z : :- ) :-) :-) good ! ಏನ್ ತಗೊಂಡೆ ?

ನಾನು : ಅಮೇರಿಕಾದಲ್ಲಿ ಗೊರೂರು ಅನ್ನೋ ಪುಸ್ತಕ ನ ಜೀವನದಲ್ಲಿ ಒಂದು ಸರ್ತಿ ಓದಲೇ ಬೇಕು ಅಂತ 8th standard ನಲ್ಲಿ ಇರೋವಾಗ ನಮ್ಮ ಕನ್ನಡ ಟೀಚರ್ ವಿಜಯವಳ್ಳಿ ಮೇಡಮ್ ಹೇಳಿದ್ದರು. ಈ ಪುಸ್ತಕವನ್ನು ನಾನು ಹುಡುಕದ ಲೈಬ್ರರಿಯಿಲ್ಲ. ಪ್ರತಿಸಲ ಗೌರಿ ಹಬ್ಬಕ್ಕೆ ಬಂದ ದುಡ್ಡು ಹೀಗೆ ಬಂದು ಹಾಗೆ ಹೊರಟುಹೋಗುತ್ತಿದ್ದವು. ನನಗೆ ಹುಟ್ಟು ಹಬ್ಬದ ಗಿಪ್ಟುಗಳಾಗಿ ನಾಯಿ ಬೆಕ್ಕುಗಳು, ಟೆಡ್ಡಿ ಬೇರುಗಳು, ಬಳೆ, ಸರ ಇತ್ಯಾದಿಗಳೇ ಬರುತ್ತಿದ್ದವು.ಮತ್ತೂ, ನಾನು ದುಡ್ಡು ಕೂಡಿಸಿ ಪೋಸ್ಟ್ ಗ್ರಾಡುಯೇಷನ್ ಗೆ ಬೇಕಾದ ಪುಸ್ತಕಗಳನನ್ನೇ ಖರೀದಿಸಬೇಕಾಗಿ ಬರುತ್ತಿತ್ತು. ಒಂದು ವಿಷಯಕ್ಕೆ ಮಿನಿಮಮ್ ಎರಡು ಪುಸ್ತಕ ಓದಲೇ ಬೇಕಿತ್ತು. ನಾಲ್ಕು ಪುಸ್ತಕಗಳು reference ಗೆ. ವಿಷಯಕ್ಕೆ ಎರಡರಂತೆ ನಾಲ್ಕಕ್ಕೆ ಎಂಟು ಪುಸ್ತಕಗಳು. ಮಿಕ್ಕಿದ್ದು ಲೈಬ್ರರಿಯಲ್ಲಿ ಹುಡುಕಾಡುವುದು. ಪುಸ್ತಕಗಳೋ, ಮುಟ್ಟಿದರೆ ಐನೂರರ ಕಡಿಮೆ ಇರುತ್ತಿರಲಿಲ್ಲ. ಡಿಸ್ಕೌಂಟ್ ಗಾಗಿ ಮಲ್ಲೇಶ್ವರದ ಟಾಟಾ ಬುಕ್ ಹೌಸ್ ಗೆ ಹೋಗುತ್ತಿದ್ದೆಯಾದರೂ, ಸೆಮೆಸ್ಟರ್ ಗೆ ಮೂರು ಸಾವಿರದ ವರೆಗೂ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಣ್ಣ ಮರುಮಾತಿಲ್ಲದೇ ಪುಸ್ತಕ ಅಂದ ತಕ್ಷಣ ಹೇಗೋ ದುಡ್ಡು ಕೊಡುತ್ತಿದ್ದರು. ವಿಪರ್ಯಾಸ ಏನಂದರೆ ಒಂದು ರುಪಾಯಿಯೂ ಮಿಗುತ್ತಿರಲಿಲ್ಲ, ಇಂತಹ ಪುಸ್ತಗಳನ್ನ ಕೊಳ್ಳಲು ! :-(

ಇವತ್ತು ನನ್ನ ಹೆಬ್ಬಯಕೆ ಈಡೇರಿತು. ಎಂಟು ವರ್ಷದ ನನ್ನ ಅವಿರತ ಬೇಟೆಯ ಫಲವಾಗಿ ಇವತ್ತು ಆ ಪುಸ್ತಕ ನನ್ನ ಕಣ್ಣಿಗೆ ಬಿತ್ತು ! ಅದನ್ನ ನೋಡಿದ ತಕ್ಷಣ ತಿಂಗಳುಗಟ್ಟಲೆ ಅನ್ನ ಕಾಣದೇ ಹಸಿದ ಮನುಷ್ಯನೊಬ್ಬನಿಗೆ ಅನ್ನದ ಅಗಳು ಕಂಡರೆ ಅವನು ಅದನ್ನ ಬಾಚಿಕೊಳ್ಳುವ ಹಾಗೆ, ಆ ಪುಸ್ತಕ ರಾಕ್ ನಲ್ಲಿ ಕಂಡದ್ದೇ ಅದನ್ನು ಹಾಗೇ ತೆಗೆದು ಎದೆಗೊತ್ತಿಕೊಂಡೆ ! ತಪಸ್ಸು ಸಾರ್ಥಕವಾದ ಫೀಲಿಂಗು ಒಂಥರಾ ! ನಿಧಿ ಸಿಕ್ಕಿದಷ್ಟು ಸಂತೋಷ ! ೦೮-೦೮-೦೮ ರಂದು ಎಂಟನೇ ಕ್ಲಾಸಿನಿಂದ ಹುಡುಕಿದ ಪುಸ್ತಕ ಸಿಕ್ಕಿತು !

Z : ಆಹಾ !! ಸಂತೋಷ !!

ನಾನು : ಬರೀ ಸಂತೋಷ ಅಲ್ಲ, ಮಹದಾನಂದ ! ಇದಾದ ಮೇಲೆ ನಾನು ಬಹಳ ದಿನಗಳಿಂದ ಖರೀದಿಸಲಿಚ್ಛಿಸಿದ ಮತ್ತೊಂದು ಪುಸ್ತಕ ಪೂರ್ಣಚಂದ್ರ ತೇಜಸ್ವಿಯವರ ಪಾಕಕ್ರಾಂತಿ ಮತ್ತು ಇತರ ಕಥೆಗಳು . ನಮ್ಮ ನಾಡಿನ ನನ್ನ ಮಿತ್ರವರ್ಗದವರು ಇದನ್ನ ತಗೊಂಡು ಓದಿಯಾಗೋಗಿತ್ತು. ನಾನೊಬ್ಬಳೇ ಹಿಂದೆ ಬಿದ್ದಿದ್ದೆ. ಒಂಥರಾ ಅನ್ನಿಸುತ್ತಿತ್ತು . ಕರ್ಮಕಾಂಡ ಪ್ರಭುಗಳು " ಇನ್ನೂ ಓದಿಲ್ವಾ ? ಅದೂ ನೀವು ?" ಅಂತ ಬೇರೆ ಕೇಳಿಬಿಟ್ಟರು. ಶ್ರೀಕಾಂತ್ ಕೂಡಾ ಓದಿಯಾಗಿದೆ ಅನ್ನಿಸುತ್ತದೆ. ಗಂಡಭೇರುಂಡ ಶ್ರೀನಿವಾಸ ರಾಜನ್ " ಯಾವಾಗ್ಲೋ ಓದ್ಬಿಟ್ಟೆ ನಾನು !" ಅಂದಾಗಲಂತೂ ನನಗೆ ಸಿಕ್ಕ್ ಸಿಕ್ಕಾಪಟ್ಟೇ ಬೇಜಾರಾಗೋಯ್ತು ! ಇವತ್ತು ತಗೊಂಡೇ ಬಿಟ್ಟೆ !

Z : ಭೇಷ್ ! ಆಮೇಲೆ ?

ನಾನು : ನಾಗೇಶ್ ಹೆಗಡೆ ಅಂತ ಒಬ್ಬರು ಬರಹಗಾರರಿದ್ದಾರೆ. ಪ್ರಜಾವಾಣಿಯಲ್ಲಿ ಕನ್ನಡದಲ್ಲಿ ವಿಜ್ಞಾನ ಲೇಖನಗಳನ್ನು ಬರೆಯುತ್ತಿದ್ದವರು. ಸರಳ, ಸುಲಲಿತ ಬರವಣಿಗೆಗೆ ಹೆಸರಾದವರು. ಇವರ ಪುಸ್ತಕಗಳನ್ನು ಕೊಂಡು ಓದು ಎಂದು ಪವನಜ ಸರ್ ನನಗೆ ಸಲಹೆ ಕೊಟ್ಟಿದ್ದರು. ಅವರ ಸಲಹೆಯಂತೆ, " ಎಂಥದ್ದೋ ತುಂತುರು " ಮತ್ತು " ಆಚಿನ ಲೋಕದಲ್ಲಿ ಕಾಲಕೋಶ " ಅನ್ನುವ ಎರಡು ಪುಸ್ತಕಗಳನ್ನು ಖರೀದಿಸಿದೆ.

Z : ಸರಿ...ಸಂತೋಷ . ಆಮೇಲೆ ?

ನಾನು : ಮತ್ತೊಬ್ಬ ವಿಜ್ಞಾನ ಬರಹಗಾರರಾದ ಜಿ.ಟಿ. ನಾರಯಣರಾವ್ ಅವರು ನಮ್ಮನ್ನು ಹೋದ ತಿಂಗಳಷ್ಟೇ ಅಗಲಿದರು. ಅವರ ನೆನಪಿಗಾಗಿ " ವೈಜ್ಞಾನಿಕ ಮನೋಧರ್ಮ " ಪುಸ್ತಕವನ್ನೂ ಖರೀದಿಸಿ ಅಂಕಿತ್ತ ಪುಸ್ತಕದಿಂದ ಅತೀ ಸಂತುಷ್ಟಳಾಗಿ ಹೊರನಡೆದೆ. .

Z : :-) :-) :-)

ನಾನು : ಇನ್ನು ಈ ಪುಸ್ತಕಗಳನ್ನು ಓದಲಾರಂಭಿಸುತ್ತೇನೆ...ಇಂದಿನಿಂದಲೇ ! ಇವತ್ತು ದಿನ ಚೆನ್ನಾಗಿದೆ Z ....ಎಂಟುಗಳು ಒಂದೇ ಕಡೆ ಸೇರಿವೆ !

Z : Happy reading !

ನಾನು : thanks !

10 comments:

ಅಂತರ್ವಾಣಿ said...

ಮ,
ಇವತ್ತು... ೦೮ ೦೮ ೦೮ ೦೮ ತಾನೆ?

ಪಠ್ಯಪುಸ್ತಕಗಳು ತುಂಬಾ ದುಬಾರಿಯಾಗೋಗಿವೆ. ಡಿಸ್ಕೌಂಟ್ ಕೊಟ್ಟರೂ ದುಬಾರಿನೆ.

ಕುಕೂಊ.. said...

08-08-08..ದಿನದಂದು ಇಷ್ಟೊಂದು ಪುಸ್ತಕಗಳ ಹೆಸರನ್ನು ಒಂದೇ ಕಡೆ ಬರೆದಿದ್ದಕ್ಕೆ ತುಂಬಾ ಧನ್ಯವಾದಗಳು.

ನನ್ನಿ
ಕುಮಾರಸ್ವಾಮಿ
ಪುಣೆ

Sridhar Raju said...

oodhi oodhi...naanu "men who killed gandhi" tagonde...manohara maLgaokar du....

Anonymous said...

Nan hathra PoornaChandra Tesasvi-dhu 2 books idhe.. Adanna ninge kodthini.. Adhu with Discount.. Lucky U.. ;-)

onepercentgenius said...

Are you still in touch with Vijaya Valli ma'am? She'd be proud to see you write all this... and happy to know that you've paid so much attention to what she said.

Lakshmi Shashidhar Chaitanya said...

ಅಂತರ್ವಾಣಿ :

ಹೌದು ರೀ ಜಯಶಂಕರ್...ಆವತ್ತು ೦೮ ೦೮ ೦೮ ೦೮ !

ನಿಜ...ಪಠ್ಯಪುಸ್ತಕಗಳೂ ಮತ್ತು ಶಿಕ್ಷಣ ಎರಡೂ ದುಬಾರಿಯಾಗಿ ಹೋಗಿವೆ!

Lakshmi Shashidhar Chaitanya said...

@ ಶ್ರೀಧರ್ :

ಹೌದಾ ಕರ್ಮಕಾಂಡ ಪ್ರಭುಗಳೇ ? ಹೇಗಿದೆ ಪುಸ್ತಕ ? ಈ ಪುಸ್ತಕದ ವಿಮರ್ಶೆಯನ್ನು ಕರ್ಮಕಾಂಡದಲ್ಲಿ ಹಾಕಿದರೆ ಸರಿ. ಇಲ್ಲಾಂದ್ರೆ ಎನಾಗತ್ತೆ ಅಂತ ಗೊತ್ತಲ್ಲ ? :-) ವೊನ್ ಮೋರ್ ಥಿಂಗ್ : ವಿಮರ್ಶೆ ಮಾಡುವಷ್ಟು ದೊಡ್ಡೋನಲ್ಲ, ಶ್ರೀಸಾಮಾನ್ಯ ನಾನು ಅಂತೆಲ್ಲ ಓಳು ಬಿಡಬೇಡಿ.

@ರಾಧೆ :
:-) :-) !! ಥಾಂಕ್ಸ್ ಸೋ ಮಚ್ ಕಣೇ ! ನೀನ್ ಕೊಡ್ತಿನಿ ಅಂದಿದ್ಯ ಪುಸ್ತಕಾನಾ...ಆದ್ರೆ ನೀನ್ ಕೈಗೆ ಸಿಗಲ್ಲ :( [ಪ್ಲೀಸ್ ನಾನು ನಿನ್ನ ಬಯ್ಯೋದರ ಬದಲು ಬೈಕೊಂಡ್ ಬಿಡು ನಿನ್ನನ್ನ ನೀನೆ hopeless fellow ಅಂತ ] ಕೈಗೆ ಸಿಗು ಫಸ್ಟು.

@ onepercentgenius :

Hello amogh ! you really read my blog ? Thanks !

Yes, I am still in touch with Vijayavalli maa'm and had met her when aparna graduated from our school. She is still the same ! well....I dunno whether she would be proud about me writing about her...but I will try to tell her someday :-)

Srikanth - ಶ್ರೀಕಾಂತ said...

ಪಾಕಕ್ರಾಂತಿ ಪುಸ್ತಕ ತೊಗೊಂಡಿದ್ದೇನೋ ದಿಟ. ಆದರೆ ಅದು ಬೆಚ್ಚಗೆ ಬೆಂಗಳೂರಿನಲ್ಲಿ ಕೂತಿದೆ. ಯಾಕೋ ಓದೋ ಫಾರ್ಮಲ್ಲಿ ಇಲ್ಲ ನಾನು ಇತ್ತೀಚೆಗೆ.

ಶ್ರೀಧರ - ವೆರ್ಯ್ ಗೂದ್; ನಿನ್ನ ಮನಸ್ಥಿತಿ ನನಗೆ ಅರ್ಥವಾಯಿತು.

Lakshmi Shashidhar Chaitanya said...

ಶ್ರೀಕಾಂತ್ :

ಓದಕ್ಕೂ ಫಾರ್ಮ್ ಇರತ್ತಾ ??? ನನಗೆ ಗೊತ್ತೇ ಇರ್ಲಿಲ್ಲ ! ನೀವಿನ್ನೂ ಪಾಕಕ್ರಾಂತಿ ಪುಸ್ತಕ ಓದಿಲ್ವಾ ??? ಚೆ !

Rohini Joshi said...

oi iSTondu pustaka togonDyene good:) nan hatra ankita avra discnt care ittu heLidre nin jote bartidna ninge innondu Tejaswi avra pustaka barodu;)......naanu Paaka KrAnti togonDe full book odilla innu...

ide tara yaavaaglu ninge bekaago pustakagaLu sigtirli:)

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...