Saturday, November 22, 2008

ತಾಯಮ್ಮ- epilogue

ಓದುಗರು ಈ ಮೊದಲ ಮೂರು ಭಾಗಗಳನ್ನು ಓದಿದ ನಂತರ ಈ ಪೋಸ್ಟನ್ನು ಓದಬೇಕಾಗಿ ಪ್ರಾರ್ಥಿಸುತ್ತೇನೆ.

ತಾಯಮ್ಮ - ೧

ತಾಯಮ್ಮ - ೨

ತಾಯಮ್ಮ- ೩
*************
Z : ಈಗ ಏನಾಯ್ತು ?

ನಾನು : ಜಯಂತಿ ಒಂದು ವಾರ ಹೇಳದೇ ಕೇಳದೇ ಚಕ್ಕರ್ ಕೊಟ್ಟಳು. ಅಮ್ಮ ಇನ್ನೊಬ್ಬ ಕೆಲಸದವಳು ರಾಧ ಅನ್ನುವವಳನ್ನು ಕೆಲಸಕ್ಕೆ ಸೇರಿಸಿಕೊಂಡರು. ಅವಳಿಗೆ ಮನೆ ಕೆಲಸ ಮಾಡಿ ಅನುಭವವೇ ಇಲ್ಲ. ನಾವೇ ಎಲ್ಲಾ ಹೇಳಿಕೊಡಬೇಕಾಯ್ತು.

Z : ದೇವಾ !

ನಾನು : ಇನ್ನೇನ್ ಮಾಡೋದು ಹೇಳು. ಅವಳು ಬಾಲ್ಯ ವಿವಾಹದ ಮತ್ತೊಂದು ಎಕ್ಸಾಂಪಲ್ಲು. ಗಂಡ ಅಪ್ರತಿಮ ಕುಡುಕ. ಇಪ್ಪತ್ತೊಂದನೇ ಶತಮಾನದ ಮಾದರಿ ಹೆಣ್ಣಾಗಿ ಬದುಕಲಿಚ್ಛಿಸಿದ ಇವಳು ಗಂಡನನ್ನು ಬಿಟ್ಟು ಬೇರೆ ಮನೆ ಮಾಡಿದ್ದಳು. ಅವ ಅಲ್ಲಿಗೆ ದಿನಾ ರಾತ್ರಿ ಕುಡಿದು ಬಂದು ರಂಪ ಮಾಡುತ್ತಿದ್ದ. ಕಷ್ಟ ಎಂದು ಹೇಳಿಕೊಂಡಳಲ್ಲ ಎಂದು ನಾವು ಸ್ವಲ್ಪ ಜಾಸ್ತಿ ಸಂಬಳ ಕೊಡಲು ರೆಡಿಯಾದೆವು.

Z :ಹ್ಮ್ಮ್ಮ್....


ನಾನು : ಒಂದು ವಾರ ಎಲ್ಲಾ ನೆಟ್ಟಗಿತ್ತು. ಆಮೇಲೆ ನನಗೆ ಡಾಮೆಕ್ಸ್ ಫೆನಾಯಿಲೇ ಬೇಕು...ಗುಂಜೆಲ್ಲಾ ಆಗಲ್ಲ, ಸ್ಕಾಚ್ ಬ್ರೈಟೇ ಆಗ್ಬೇಕು, ಬಟ್ಟೆಗೆ ಸರ್ಫೇ ಆಗ್ಬೇಕು ಅಂತೆಲ್ಲಾ ಕ್ಯಾತೆ ತೆಗೆದಳು. ಅಮ್ಮನ ಕಣ್ಣು ಕೆಂಪಾಯ್ತಾದರೂ, ಅವರಿಗೆ ಹುಶಾರು ತಪ್ಪಿದರೆ ಮನೆ ದಿಕ್ಕು ತಪ್ಪುತ್ತದೆ ಎಂಬ ಒಂದೇ ಕಾರಣದಿಂದ ಎಲ್ಲವನ್ನು ತಂದದ್ದಾಯ್ತು. ಸ್ವತಃ ಸ್ವಯಂ ಸಾಕ್ಷಾತ್ ನಾನೇ ಸೂಪರ್ ಮಾರ್ಕೆಟ್ಟಿಗೆ ಹೋಗಿ ಎಲ್ಲಾ ತಂದೆ.

Z : ಆಮೇಲೆ ?

ನಾನು : ಕೆಲಸದಲ್ಲಿ ಒಂದು ಚೂರು ಅಚ್ಚುಕಟ್ಟಿರಲಿಲ್ಲವಾದ್ದರಿಂದ ಅಮ್ಮನ ಕೋಪ ನೆತ್ತಿಗೇರಿತು. ಒಂದೇ ವಾರದಲ್ಲಿ ಅರ್ಧ ಕೆ. ಜಿ ಸರ್ಫು ಖಾಲಿಯಾಗಿದ್ದಕ್ಕೆ ನಾನು ಸಿಡಿಮಿಡಿ ಅಂದೆ. ದಿನಕ್ಕೊಂದು ಸಬೀನಾ ಪ್ಯಾಕೆಟ್ಟು ಖರ್ಚಾಗುತ್ತಿತ್ತು. ಪಾತ್ರೆಯ ಫಳ ಫಳ ಅಷ್ಟಕ್ಕಷ್ಟೇ. ಡಾಮೆಕ್ಸ್ ಫೆನಾಯಿಲಿನ ಅಲರ್ಜಿಯಿಂದ ಅಮ್ಮನ ಗಂಟಲು ಕಟ್ಟಿ ಎರಡು ಸಂಗೀತ ಕಾರ್ಯಕ್ರಮ ಕ್ಯಾನ್ಸೆಲ್ ಮಾಡುವ ಮಟ್ತಿಗೆ ಹೋಗಿತ್ತು. ಕೊನೆಗೆ ಹೇಗೋ ಮ್ಯಾನೇಜ್ ಮಾಡಿದರು. ಅಷ್ಟೇ ಅಲ್ಲದೇ ಇವಳು ಪಾತ್ರೆಗಳೆಲ್ಲವನ್ನು ಜಜ್ಜಿ ಹಾಕಿದ್ದಳು. ತವರು ಮನೆಯ ಪಾತ್ರೆ, ಇಪ್ಪತ್ನಾಲ್ಕು ವರ್ಷದಿಂದ ನೆಟ್ಟಗಿದ್ದವು ಸೊಟ್ಟಗಾದವಲ್ಲ ಎಂದು ಅಮ್ಮ ಅಜ್ಜಿಗೆ ದಾವಣಗೆರೆಗೆ ಫೋನ್ ಮಾಡಿ ಗೋಳು ಹೇಳಿಕೊಂಡರು. ಅಜ್ಜಿ ಕೊಟ್ಟಿದ್ದ ಆರು ದೊಡ್ಡ ಲೋಟದ ಸೆಟ್ಟಿನಲ್ಲಿ ಐದು ನಾಪತ್ತೆ. ಮತ್ತೂ, ಅಣ್ಣ ತಂದಿದ್ದ ಜರ್ಮನ್ ಕಂಪನಿಯ ಚಾಕು ಕೂಡಾ ಅವಳು ಕದ್ದಿದ್ದಳು. ಬೇರೆ ಹೊಸ ಚಾಕು ತರಲು ಅಣ್ಣನಿಗೆ ಟೈಂ ಇರಲಿಲ್ಲ. ನಾನೇ ಹೋಗಿ ತಂದಿದ್ದಾಯ್ತು. ಅದನ್ನು ಪಳಗಿಸಲು ನಮಗೆ ಕಷ್ಟ ಆಯ್ತು. ಇತ್ತ ಇವಳು ನಾವು ಇವಳ ಕಳ್ಳತನವನ್ನು ಹಿಡಿಯುತ್ತೇವೆ ಎಂದು ಭಯ ಪಟ್ಟು ಒಂದು ವಾರ ಚಕ್ಕರ್ ಹಾಕಿದಳು. Princess of the ocean ಆದ ನಾನು ಮತ್ತೆ ಎಂದಿನಂತೆ Queen of kitchen ಆಗಿ, ಪಾತ್ರೆ ಮತ್ತು ಕಸ ಗುಡಿಸಿ ಸಾರಿಸಿ ಎಲ್ಲ ನೋಡಿಕೊಂಡಿದ್ದಾಯ್ತು. ಇದು ಸಾಲದು ಅಂತ ಹದಿನೈದು ವರ್ಷಗಳ ನಮ್ಮ ಐ ಎಫ್ ಬಿ ವಾಶಿಂಗ್ ಮಷೀನು ಕೆಟ್ಟು ಹಾಳಾಗಿ ಹೋಯ್ತು.

Z : ರಾಮಾ !

ನಾನು : ಅಮ್ಮನಿಗೆ ನಾನು ಕೆಲಸ ಮಾಡಿದರೆ ಪಿಎಚ್.ಡಿ ಗೆ ಓದಲಿಕ್ಕಾಗುವುದಿಲ್ಲ ಅಂತ ಬೇಜಾರು. ಕೆಲಸ ಮಾಡಲು ಹೋಗಿ ಅವರಿಗೆ ಹುಶಾರು ತಪ್ಪುತ್ತಿತ್ತು. ಅವರಿಗೆ ಹುಶಾರು ತಪ್ಪುವುದನ್ನು ತಪ್ಪಿಸಲು ನಾನು ಕೆಲಸ ಮಾಡುತ್ತಿದ್ದೆನಾದ್ದರಿಂದ ಓದು, ಬ್ಲಾಗಿಂಗ್ ಹಾಗೂ ಆರ್ಕುಟ್ಟಿಂಗ್ ಮೂರಕ್ಕು ಕತ್ತರಿ ಬಿತ್ತು. ನಮ್ಮ ಪೀಕಲಾಟ ನೋಡಲಾಗದೇ ಈ ಸರ್ತಿ ಅಣ್ಣನ ತಾಳ್ಮೆ ಮಿತಿ ಮೀರಿತು.ಅದಕ್ಕೆ ಅವರು ನಮ್ಮಿಬ್ಬರನ್ನು ಕರೆದು "ಅಡಿಗೆ ನೀನು ಮಾಡು, ಮಿಕ್ಕಿದ್ದೆಲ್ಲಾ ಲಕ್ಷ್ಮೀ ನೋಡ್ಕೊಳ್ಳಲಿ. ವೀಕೆಂಡ್ ನಲ್ಲಿ ಎಲ್ಲ ಕೆಲ್ಸ ಅಪರ್ಣ ನೋಡಿಕೊಳ್ಳತಕ್ಕದ್ದು. ನನ್ನ ಮತ್ತು ನಿನ್ನ ಬಟ್ಟೆ ಡ್ರೈ ಕ್ಲೀನ್ ಗೆ ಕಳಿಸೋಣ. ಮಕ್ಕಳು ಅವರ ಬಟ್ಟೆಯನ್ನು ಅವರವರೇ ಒಗೆದುಕೊಳ್ಳತಕ್ಕದ್ದು" ಎಂದು ಅಪ್ಪಣೆ ಮಾಡಿದರು.

Z : ಉಫ್ !!!!!!!

ನಾನು : ಬಟ್ಟೆ ಒಗೆಯುವುದನ್ನು ನಾನು ಎಂಜಾಯ್ ಮಾಡುತ್ತಿದ್ದೆ. ಸ್ಕೂಲಿನಲ್ಲಿದ್ದಾಗ ನಮ್ಮ ಬಟ್ಟೆ ನಾನೇ ಒಗೆಯುತ್ತಿದ್ದೆ. ಬಟ್ಟೆ, ಶೂಸು, ಲಂಚ್ ಬಾಸ್ಕೆಟ್ಟು ಎಲ್ಲಾ...ನನಗೇನು ತೊಂದರೆ ಆಗಲಿಲ್ಲ. ಕಷ್ಟಕ್ಕೆ ಸಿಕ್ಕಿದ್ದು ಅಪರ್ಣ. ಅವಳಿಗೆ ಬಟ್ಟೆ ಒಗೆದು ಗೊತ್ತಿಲ್ಲ. "ಈಗಲಾದರೂ ಕಲ್ತ್ಕೋ " ಅಂತ ನಿರ್ದಾಕ್ಷಿಣ್ಯವಾಗಿ ನಾನು ಅಪ್ಪಣೆ ಮಾಡಿದೆ.

Z : ಹೆ ಹೆ...

ನಾನು : ರಾಧಾ ಒಂದು ವಾರದ ನಂತರ ಮನೆಯ ಮುಂದೆ ಪ್ರತ್ಯಕ್ಷವಾಗಿ " ಅಮ್ಮ...ಕ್ಷಮಿಸಿ, ಮನೆಯಲ್ಲಿ ಕಷ್ಟ..." ಎಂದು ಪ್ರವರ ಊದತೊಡಗಿದಳು. ಅಮ್ಮ ಮೊದಲೇ ಪಾತ್ರೆಗಳ ಶೋಚನೀಯ ಸ್ಥಿತಿ ಕಂಡು, ತಮ್ಮ ಅತಿಪ್ರೀತಿಯ ಚಾಕು ಮತ್ತು ಲೋಟ ಕಳೆದುಕೊಂಡು ಹೈರಾಣಾಗಿದ್ದರು. ಅಣ್ಣ ಕೂಡಾ ಅವಳ ದುಡ್ಡು ಚುಕ್ತಾ ಮಾಡಿ ಅವಳನ್ನು ಕಳಿಸಿಬಿಡಬೇಕೆಂದು ಆಜ್ಞೆ ಮಾಡಿದ್ದರು. ಅವಳು ಯಥಾಪ್ರಕಾರ ಗೋಳಾಡಿದಳು. ಆದರೆ ಅಮ್ಮ ನಂಬಲಿಲ್ಲ. ನಮ್ಮ ಮನೆಯಲ್ಲಿ ಮಾತ್ರವಲ್ಲದೇ ಎದುರು ಮನೆ, ಪಕ್ಕದ ಮನೆಯವರೂ ಇವಳ ಕೆಲಸದ ಬಗ್ಗೆ ಅಪಸ್ವರ ಎತ್ತಿದ್ದರು. ಅವಳ ಕಲ್ಯಾಣ ಗುಣಗಳ ಪರಿಚಯ ಎಲ್ಲರಿಗೂ ಆಗಿತ್ತು. ಜಾಸ್ತಿ ಸಂಬಳ ಕೊಟ್ಟು ಚೆನ್ನಾಗಿ ಕೆಲಸ ಮಾಡದ ಕೆಲಸದವರಿಗಿಂತಾ ನಾವೇ ಹೇಗೋ ಮಾಡಿಕೊಳ್ಳುವುದು ಸರಿಯೆಂದು ಗೇಟ್ ಮೀಟಿಂಗ್ ನಲ್ಲಿ ಇವರೆಲ್ಲ ನಿರ್ಧರಿಸಿದ್ದರು.

Z : ಗೇಟ್ ಮೀಟಿಂಗ್ ನಡೆಯುತ್ತಿದ್ದಾಗ ತಾವೇನು ಮಾಡುತ್ತಿದ್ದಿರಿ ?

ನಾನು : ಪಾತ್ರೆ ತೊಳೆಯುತ್ತಿದ್ದೆ.

Z : ಮುಂದೆ ?

ನಾನು : ಅವಳನ್ನು ಓಡಿಸಿದ್ದಾಯ್ತು. ಮಾರನೇ ದಿನ ಬೆಳಿಗ್ಗೆ ನಮ್ಮ ಕಾರ್ ಡ್ರೈವರ್ ಒಂದು ಆಶ್ಚರ್ಯಕರ ಸುದ್ದಿ ತಂದ. ತಾಯಮ್ಮ ಡಾಕ್ಟರ್ ಆಂಟಿ ಮನೆಗೆ ಬಂದಿದ್ದಾರೆ ಅಂತ !

ನಾನು ಆಂಟಿ ಮನೆಗೆ ಶರವೇಗದಲ್ಲಿ ಓಡಿದೆ. ಆದರೆ ತಾಯಮ್ಮ ಅಷ್ಟೊತ್ತಿಗಾಗಲೇ ಹೊರಟು ಹೋಗಿದ್ದರು. ಅವರು ನಾಳೆ ಬಂದರೆ ನಮ್ಮ ಮನೆಗೆ ದಯವಿಟ್ಟು ಕಳಿಸಿಕೊಡಿ ಎಂದು ಬೇಡಿಕೊಂಡೆ. ಅವರು ಖಂಡಿತಾ ಕಳಿಸುವೆವು ಅಂದರು.

Z : ವಾಹ್ !

ನಾನು : ಮಾರನೆಯ ದಿನ ತಾಯಮ್ಮ ಪ್ರತ್ಯಕ್ಷ ! ನಾವು " ಏನ್ ತಾಯಮ್ಮ, ನೀನು ಕೆಲಸಕ್ಕೆ ಮತ್ತೆ ಬರುತ್ತಿದ್ದೀಯ ಅಂತ ಹೇಳೋದಲ್ವಾ? " ಅಂತ ಕೇಳಿದೆವು. ಅದಕ್ಕೆ ಅವರು " ಬೇರೆ ಕೆಲ್ಸದವರ ಹೊಟ್ಟೆ ಹೊಡೆಯಕ್ಕೆ ನಂಗೆ ಇಷ್ಟಾ ಇರ್ಲಿಲ್ಲ " ಅಂತ ಅಂದರು. ನಾವು " ಅಯ್ಯೋ ತಾಯಮ್ಮ ! ಒಂದು ಮಾತು ಹೇಳೋದಲ್ವ ? ನಾವು ನಿಮ್ಮನ್ನೇ ಇಟ್ಕೋತಿದ್ವಿ" ಎಂಡು ಹಳೆಯ ಕೆಲಸಗಾರರ ಮಹತ್ಸಾಧನೆಗಳನ್ನ ವರ್ಣಿಸಿದೆವು. ಅವರು ಸಿಕ್ಕಾಪಟ್ಟೆ ಬೇಜಾರ್ ಮಾಡಿಕೊಂಡರು.

Z : ಅವರು ಹೇಗಿದ್ದಾರೆ ಈಗ ?

ನಾನು : ಕೇಳ್ಬೇಡ. ಕೆಲ್ಸ ಮಾಡದೇ ಇದ್ದ್ರೆ ಕೂಳಿಲ್ಲ ಅನ್ನೋ ಅಸಹಾಯಕತೆಗೆ ಪಾಪ ಹೇಗೋ ಸುಧಾರ್ಸ್ಕೊಂಡೀದಾರೆ... ಗಂಡ ಫ್ಯಾಕ್ಟರಿಲಿ ಬಿದ್ದು ಮಂದಿಯ ಚಿಪ್ಪು ಮುರಿದಿದೆ. ಆಪರೇಷನ್ ಗೆ ದುಡ್ಡಿಲ್ಲ. ಚೀಟಿಯ ದುಡ್ಡನ್ನ ಮಗನ ಕಾಲೇಜಿಗೆ, ಒಡವೆಗೆ ಇಟ್ಟಿದ್ದ ದುಡ್ಡನ್ನ ಮಗಳ ಹೈ ಸ್ಕೂಲಿಗೆ ಮತ್ತು ಹಳ್ಳಿಯ ಗೇಯ್ಮೆಯ ಪಾಲಲ್ಲಿ ಬಂದ ದುಡ್ಡಲ್ಲಿ ಅವರು ಆಪರೇಶನ್ ಮಾಡಿಸಿಸೊಂಡು ಔಷಧಿ ಖರ್ಚಿಗೆ ನಾವು ಕೊಟ್ಟ ದುಡ್ಡು ಬಳಸಿದ್ದಾರೆ. ಗಂಡನ ಆಪರೇಶನ್ ಗೆ ದುಡ್ಡಿಲ್ಲ ಅಂದಾಗ ನಾವೆಲ್ಲಾ ಮತ್ತೆ ಒಂದೊಂದು ಸಾವಿರ ರುಪಾಯಿ ದುಡ್ಡು ಕೊಟ್ಟು ಆಪರೇಷನ್ ಗೆ ಕಳಿಸಿದೆವು. ಡಾಕ್ಟರ್ ಆಂಟಿ ಬೌರಿಂಗ್ ಆಸ್ಪತ್ರೆಯ ವೈದ್ಯರ ಪರಿಚಯ ಮಾಡಿಸಿದರು. ಆಪರೇಶನ್ ಗೆ ಪೈಸ ತೆಗೆದುಕೊಳ್ಳಲಿಲ್ಲ ವೈದ್ಯರು. ಆದರೆ ಕ್ಲೀನರ್, ವಾರ್ಡ್ ಬಾಯ್ ಗಳ ಲಂಚಕ್ಕೆ ಹಣ ಹೊಂದಿಸಲು ಇವರು ಸುಸ್ತಾಗಿ ಹೋದರಂತೆ. ಬಡವರ ರಕ್ತ ಹೀರುವ ಇಂಥಾ ಆಸ್ಪತ್ರೆಯ ಸಿಬ್ಬಂದಿ ವರ್ಗಕ್ಕೆ ತಾಯಮ್ಮ ಧಿಕ್ಕಾರ ಕೂಗಿ ಬಂದಿದ್ದಾರೆ. ದೇವರಂಥಾ ವೈದ್ಯರಿದ್ದರೂ ಇಂತಹ ಅಮಾನವೀಯ ವರ್ತನೆಯುಳ್ಳ ಸಿಬ್ಬಂದಿವರ್ಗದ ಮೇಲೆ ತಾಯಮ್ಮ ಕೆಂಡಕಾರಿ ಬಂದಿದ್ದಾರೆ.

Z : what a pity !

ನಾನು : Exactly ! ನೋಡು, ಎಂಥೆಂಥಾ ಆಶ್ವಾಸನೆಗಳನ್ನ ಕೊಡ್ತಾರೆ ರಾಜಕಾರಿಣಿಗಳು...ಸಚಿವರು, ಅಧಿಕಾರಿಗಳು ಎಲ್ಲ...ಗವರ್ನಮೆಂತ್ ಆಸ್ಪತ್ರೆಗಲಲ್ಲಿ ಕನಿಷ್ಟಮಟ್ಟದ ಶುಚಿತ್ವವನ್ನು ಕಾಪಾಡಲು ಅಧಿಕಾರಿಗಳಿಗೆ ಸಾಧ್ಯವಿಲ್ಲವೇ ? ತಾಯಮ್ಮ ಹೀಗೆ ಕೇಳಿದರು ನನ್ನನ್ನ- "ಅಲ್ಲವ್ವಾ...ಅವ್ರುಗಳ್ ಮನೇನ ಪಳಪಳ ಅಂತ ಹೊಳೆಯೋ ಹಾಗೆ ಇಟ್ಕೋತಾರಲ್ಲ...ಅವ್ರು ದುಡ್ಯೋ ಜಾಗನೂ ಅಂಗೇ ಇರ್ಬೆಕಲ್ವ್ರಾ ? ಏನ್ ಓದಿ ಏನ್ ಪ್ರಯೋಜ್ನ ಏನ್ ಔಶ್ದ ಹಾಕ್ ಏನ್ ಉಪ್ಯೋಗ ಜಾಗನೇ ಕಿಲೀನಾಗಿಲ್ಲಾ ಅಂದ್ರ?" ನಾನು ಏನೂ ಉತ್ತರಿಸಲಾಗದೇ ಸುಮ್ಮನಿದ್ದೆ.

Z : ಛೆ!

ನಾನು : ಈಗ ತಾಯಮ್ಮನ ಗಂಡ ಮನೆಗೆ ಬಂದಿದ್ದಾರೆ. ನಮಗೆ ನಾಳೆ ಬರಕ್ಕೆ ಆಗತ್ತೆ ಅಥ್ವಾ ಆಗಲ್ಲ ಅನ್ನೋದನ್ನ ಮೊದಲೇ ತಿಳಿಸುತ್ತಾರೆ. ಮೊದಲಿನಂತೆ ಅವರಿಗೆ ಹೆಚ್ಚು ಕೆಲಸ ಮಾಡಕ್ಕೆ ಆಗಲ್ಲ ಆದ್ದರಿಂದ ನಮ್ಮ ಬಟ್ಟೆಗಳನ್ನು ನಾವೇ ಒಗೆಯುತ್ತಿದ್ದೇವೆ. ಅವರಿಗೆ ಸ್ವಲ್ಪವೇ ಬಟ್ಟೆ ಹಾಕಲಾಗತ್ತೆ. ಅವರು ಮೂರೇ ಮೂರು ಮನೆಗಳನ್ನು ಒಪ್ಪಿಕೊಂಡು, ಕಾಯಿಯ ಅಂಗಡಿ ಕೂಡಾ ನಡೆಸುವ ಯೋಜನೆ ಹಾಕಿದ್ದಾರೆ. ಗಂಡನಿಗೆ ಇನ್ನು ಮುಂದೆ ನಡೆಯುವುದು ಕಷ್ಟ ಆಗುತ್ತದೆಯಾದ್ದರಿಂದ ಕುಳಿತು ಮಾಡಲು ಈ ವ್ಯಾಪಾರ ಸರಿ ಎಂದು ನಮ್ಮೊಡನೆ ಹೇಳಿಕೊಂಡರು. ಅವರು ಮನೆಯ ಕೆಲಸಕ್ಕೆ ವಾಪಸ್ ಬಂದರಲ್ಲಾ...ನಮಗೆ ಅದೇ ಸಂತೋಷ.

Z :True.

ನಾನು : ಇದು ತಾಯಮ್ಮನ ಕಥೆ. ಲಕ್ಷಕ್ಕೊಬ್ಬರು ಇಂಥಾ ಕೆಲ್ಸದವರು ಸಿಕ್ಕೋದು ಅನ್ನಿಸತ್ತೆ. ನಾವು ಅದೃಷ್ತವಂತರು. ಅಲ್ವಾ ?

Z :ಹು.

8 comments:

NilGiri said...

ನೀವು ಅದೃಷ್ಟವಂತರೇ ಬಿಡಿ! ಕೆಲಸದವರು ಕೆಲವರು ಮನೆಗೆ ಒಗ್ಗಿ ಬಿಟ್ಟರೆ, ಅವರು ಕೆಲಸ ಮಾಡಲಿ ಬಿಡಲಿ, ಬರಲಿ ಬಿಡಲಿ, ಮನೆಯವರೊಂದಿಗೆ ಅವರನ್ನೂ ಒಬ್ಬರೊಂಬಂತೆ ನಡೆಸಿಕೊಳ್ಳುತ್ತೇವೆ. ಇನ್ನು ಕಳ್ಳಾಟವಾಡುವ ಕೆಲಸದ ರಂಭೆಯರ ಮಹಿಮೆ ಹೇಳಲಸದಳ!

ಇಲ್ಲಿ ನಾನೇ ರಾಣಿ, ನಾನೇ ರಂಭೆ :(

Harisha - ಹರೀಶ said...

ತಾಯಮ್ಮನಿಗೆ, ಅವಳ ಕುಟುಂಬಕ್ಕೆ ಮತ್ತೆ ಕಷ್ಟಗಳು ಬರದಿರಲಿ ಎಂದು ಸದ್ಯೋಜಾತನಲ್ಲಿ ನನ್ನದೂ ಪ್ರಾರ್ಥನೆ

Anveshi said...

ಹೌದು.... ಕೊನೆಗೂ ನೀವು ಸಿಕ್ಕಾಪಟ್ಟೆ ಅದೃಷ್ಟವಂತರು... ಇನ್ನು ಕೆಲಸ ಮಾಡ್ಬೇಕಿಲ್ವಲ್ಲಾ...

ಅದಿರ್ಲಿ... ಅಷ್ಟೆಲ್ಲಾ ಓದಕ್ಹೇಳಿ... ಬೆವರಿಳಿಸಿಬಿಟ್ರಿ... ನಾನು ಒಂದು ಕಾಲದಲ್ಲಿ ಚಿಕ್ಕವನಿರೋವಾಗ ಅಂಗನವಾಡಿಗೆ ಹೋಗಲ್ಲ ಅಂತ ಹಠ ಹಿಡಿದದ್ದೇ ಅಲ್ಲಿ ಓದಿಸ್ತಾರೆ ಎಂಬೋ ಕಾರಣಕ್ಕೆ.... ಈಗ ನೋಡಿದ್ರೆ... ನೀವೂ ಓದಿಸ್ತೀರಿ... ಉಫ್.... ಆ Z ಇದ್ದಿದ್ದಕ್ಕೆ ಸ್ವಲ್ಪನಾದ್ರೂ ಉಸಿರಾಡೋದಿಕ್ಕೆ, ಉಸಿರುಬಿಡೋದಿಕ್ಕೆ ಟೈಮ್ ಸಿಕ್ತಾಯಿತ್ತು. ಅಂತೂ ಎಲ್ಲಾ ಪಾಠ ಓದಿ ಮುಗ್ಸಿದೆ...

ಹಳೆಯ ಮೂರು ಪುರಾಣಗಳನ್ನು ಓದಿದ್ಮೇಲೆ ಅನ್ಸಿದ್ದು: ಆ ತಾಯಮ್ಮ ಚೆನ್ನಾಗಿ ಜೋಕ್ ಮಾಡ್ತಾರೆ... ಡುಮ್ಮು ಮಾತ್ರೆ, ಮೆಗಾ ಸೀರಿಯಲ್ಲಿನ ಕಣ್ಣೀರ ಕೋಡಿ, ಕಿವಿಮಾತನ್ನು ಎರಡೂ ಕಿವಿಗಳಲ್ಲಿ processing ಮಾಡ್ಸೋ ಇಬ್ರು ಕಿಲಾಡಿಗಳು, ಅದ್ರ ಮಧ್ಯೆ ಮಧ್ಯೆ ಆ Z ಒಗ್ಗರ್ಣೆ.... ಆ ಮೇಲೆ "ನಾನು" ಅನ್ನೋರ ವರಾತ... ನಮ್ಮ ಬ್ಯುರೋಗೆ ಹೇಳಿ ಮಾಡ್ಸಿದ್ದು...

ನಂಗಂತೂ ಡೌಟಾಗಿದ್ದು ನೀವು ಮನೆಕೆಲಸದ ಮೇಲೆಯೇ ಮತ್ತೊಂದು ಪಿಎಚ್‌ಡಿ ಈಸಿಯೆಸ್ಟ್ ಆಗಿ ಮಾಡ್ತಾ ಇದ್ದೀರಾಂತ....

ಅಂತರ್ವಾಣಿ said...

ಏನಮ್ಮ ಇದು...?
ಸಣ್ಣ ಪುಟ್ಟ ಕೆಲಸಗಳನ್ನು ದೊಡ್ಡ ಕೆಲಸ ಮಾಡಿದೆ ಅಂತ ಬರೆದು ಕೊಂಡಿದ್ದೀಯ..?

Ittigecement said...

ತಾಯವ್ವನಿಗೆ ಮತ್ತೆ ಕಷ್ಟ ಬರದೆ ಇರಲಿ.!! ಎಲ್ಲ ಏನೇ ಆಗಿದ್ದರೂ "ಆಳು ಮಾಡಿದ್ದು ಹಾಳು" ಅಂತಾರೆ ಹಿರಿಯವರು. ನಮ್ಮ ಕೆಲ್ಸನ ನಾವೆ ಮಡ್ಕೊಳ್ಳೋದು ಉತ್ತಮ. ಅಲ್ವರಾ? ಚೆನ್ನಾಗಿದೆ..

Lakshmi Shashidhar Chaitanya said...

@ ನೀಲಗಿರಿ :

ನೀವು ರಾಣಿ ಮತ್ತು ರಂಭೆ ನಾ ? ನಾನು ರಾಣಿ, ರಂಭೆ ಕೊಂಬೆ ಎಲ್ಲ...

Lakshmi Shashidhar Chaitanya said...

@ಹರೀಶ್:

:)

@ಅನ್ವೇಷಿ:

ಚಿಕ್ಕವಯಸ್ಸಿನಲ್ಲಿ ನೀವು ಓದದೇ ಹಠ ಮಾಡಿದಕ್ಕೆ ಈಗ ಬಡ್ಡಿ ಸಮೇತ ವಸೂಲಿ ಮಾಡಿದಿನಿ ಹಳೆ ಬಾಕಿ ನ. ಹೇಗೆ ? ;-)
ಥ್ಯಾಂಕ್ಸ್ ಎಲ್ಲಾ ಪೋಸ್ಟ್ ನ ಓದಿದ್ದಕ್ಕೆ.

ನಿಮ್ಮ ಬ್ಯೂರೋ ಗೆ " ಹೇಳಿ ಮಾಡಿಸಿದಂತಿರುವ" "ನಾನು" ಅನ್ನೋರ್ನ ಕೇಳ್ದೆ...ಏನಮ್ಮಾ...ನಿನಗೆ ಹೋಗಕ್ಕೆ ಆಸೆ ನಾ ಆ ಬ್ಯೂರೋ ಗೆ ಅಂತ...ಅವಳು ಸುತರಾಮ್ ಆಗೊಲ್ಲ ಅಂದುಬಿಟ್ಟಳು. hard luck.

ಮನೆ ಕೆಲಸದಲ್ಲಿ ಪಿಎಚ್ ಡಿ ಮಾಡದೇ ಇದ್ದ್ರೆ ಇನ್ಯಾವ್ ಪಿಎಚ್ ಡಿ ಮಾಡಿ ಪ್ರಯೋಜನ ಇಲ್ಲ ಅಂತ ಅಮ್ಮ ಹೇಳ್ತಿದ್ರು.

ಅಂತರ್ವಾಣಿ:

ಹು..ಹಾಗೇ ಸುಮ್ಮನೆ.

ಇಟ್ಟಿಗೆ ಸಿಮೆಂಟು :

ನಿಜ...ಅದಕ್ಕೆ ನಾನೂ ಅಲ್ಪ ಸ್ವಲ್ಪ ಕೆಲ್ಸ ಶುರು ಮಾಡಿದಿನಿ.

PaLa said...

>>"ಅಲ್ಲವ್ವಾ...ಅವ್ರುಗಳ್ ಮನೇನ ಪಳಪಳ ಅಂತ ಹೊಳೆಯೋ ಹಾಗೆ ಇಟ್ಕೋತಾರಲ್ಲ...ಅವ್ರು ದುಡ್ಯೋ ಜಾಗನೂ ಅಂಗೇ ಇರ್ಬೆಕಲ್ವ್ರಾ ? ಏನ್ ಓದಿ ಏನ್ ಪ್ರಯೋಜ್ನ ಏನ್ ಔಶ್ದ ಹಾಕ್ ಏನ್ ಉಪ್ಯೋಗ ಜಾಗನೇ ಕಿಲೀನಾಗಿಲ್ಲಾ ಅಂದ್ರ

ಅನುಭವದ ಮಾತು, ಇಷ್ಟ ಆಯ್ತು

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...