Wednesday, November 26, 2008

ಪುಸ್ತಕೋತ್ಸವ ಮತ್ತು ವಸ್ತು ಪ್ರದರ್ಶನ

ನಾನು : ಸಿಕ್ಕಾಪಟ್ಟೆ ಮಾತಾಡೋದಿದೆ ನಿನ್ ಹತ್ರ.

Z :ಮಾತಾಡು

ನಾನು : ಟೈಮ್ ಇಲ್ಲ.

Z :ರೈಟ್ ಹೇಳು. ಮಾತಾಡ್ಬೇಕು ಅಂತಿಯಾ , ಟೈಂ ಇಲ್ಲಾ ಅಂತಿಯಾ...ಏನ್ ಅರ್ಥ ?

ನಾನು : ಗೊತ್ತಿಲ್ಲ.

Z :ಛೆ !

ನಾನು : ಈಗ ನಿನ್ನ ಹತ್ರ ಜಗಳ ಆಡೋದಕ್ಕೂ ಟೈಂ ಇಲ್ಲ. ನಿಂಗೆ ನಾನು ನಾಲ್ಕು ಪ್ರವಾಸ ಕಥನ ಹೇಳ್ಬೇಕು.

Z :ಯಪ್ಪಾ !

ನಾನು : ಯಾ...

Z :ಯಾವ್ಯಾವ್ದು ?

ನಾನು :

೧.ಮೈಸೂರು ಮತ್ತು ಜಾನಪದ ಲೋಕ.
೨. ಬೆಂಗಳೂರು ಪುಸ್ತಕೋತ್ಸವಕ್ಕೆ ಮತ್ತು ಚಿತ್ರಕಲಾ ಪರಿಷತ್ತಿನ ಪ್ರದರ್ಶನಕ್ಕೆ ಹೋಗಿದ್ದು
೩. ಗೊರವನಹಳ್ಳಿ ಮತ್ತು ದೇವರಾಯನದುರ್ಗಕ್ಕೆ ಹೋಗಿದ್ದು.
೪. ಕಡಲೆಕಾಯಿ ಪರಿಷೆ.

Z :ಹೋಪ್ಲೆಸ್ಸ್ ಫೆಲ್ಲೋ...ಓದೋದ್ ಬಿಟ್ಟು ಊರೂರು ತಿರುಗುತ್ತಿದ್ದೀಯಾ ?

ನಾನು :ಇಲ್ಲಾ...ತಿರುಗಾಡ್ಕೊಂಡ್ ಓದ್ತಿದ್ದೆ.

Z :ಇರ್ಲಿ...ಯಾವಾಗ್ ಹೇಳೋದು ನೀನು ಇವೆಲ್ಲಾ ?

ನಾನು :ಟೈಮ್ ಸಿಕ್ಕಾಗ.

Z :ನನಗೆ ಕೋಪ ಬರತ್ತೆ...

ನಾನು : ಪ್ಲೀಸ್ ಕೋಪ ಮಾಡ್ಕೋಬೇಡಾ...

Z :ಯಾವ್ದಾದ್ರು ಒಂದು ಪ್ರವಾಸ ಕಥನ ಹೇಳು.

ನಾನು : ಹ್ಮ್ಮ್....ಪುಸ್ತಕೋತ್ಸವದ ಬಗ್ಗೆ ಹೇಳುವೆ.

Z :ಹೇಳು.

ನಾನು : ಕುಮಾರಣ್ಣನ ಭವ್ಯದಿವ್ಯ ಸಮಾವೇಶ ನಡೆದ ಮಾರನೇ ದಿನ ನಾನು ಪುಸ್ತಕೋತ್ಸವಕ್ಕೆ ಹೋಗಲು ನಿರ್ಧರಿಸಿದೆ.

Z :ಗುಡ್. ಆಮೇಲೆ?

ನಾನು : ನನ್ನ ಸ್ನೇಹಿತೆ ರೋಹಿಣಿ ಬರ್ತಿನಿ ಅಂದಿದ್ಲು. ನಾವಿಬ್ಬರು ಕಾರ್ಪೋರೇಷನ್ ನಲ್ಲಿ ಮೀಟ್ ಮಾಡಿ ಒಟ್ಟಿಗೆ ಹೋಗೋದಿತ್ತು. ಆದ್ರೆ ಅವಳಿಗೆ ಅರ್ಜೆಂಟ್ ಮೀಟಿಂಗ್ ಬಂದು ಆಗಲ್ಲ ಅಂತ ನಾನ್ ಹೊರ್ಡೋ ಟೈಂ ಗೆ ಕರೆಕ್ಟಾಗಿ ಫೋನ್ ಮಾಡಿದಳು.

Z :ಪಾಪ...ಆಮೇಲೆ ?

ನಾನು :ಓಕೆ ಅಂದಿದ್ದೇ ನಾನು ಬಸ್ ಸ್ಟಾಪ್ ಗೆ ಬಂದು ನಿಂತೆ. ನನ್ನ ಅದೃಷ್ಟಕ್ಕೆ ಮೇಕ್ರಿ ಸರ್ಕಲ್ ಗೆ ಡೈರೆಕ್ಟ್ ಬಸ್ ಸಿಕ್ತು. ಆದ್ರೆ ಇವ ಎಲ್ಲಿ ನಿಲ್ಸ್ತಾನೆ ಅನ್ನೋ ಐಡಿಯಾ ಇರ್ಲಿಲ್ಲ. ನನಗೆ ಗೊತ್ತಿದ್ದಿದ್ದು ಆರ್ಮಿ ಕಮಾಂಡ್ ಹಾಸ್ಪಿಟಲ್ಲು ಮತ್ತು ರಾಮನ್ ಇನ್ಸ್ಟಿಟ್ಯೂಟ್ ಎರಡೇ..ಎಲ್ಲಾದ್ರೂ ಬಿಸಾಕಲಿ, ನಡೆಯೋದಿದ್ದೇ ಇದೆ ಅಂದುಕೊಂಡು ಹತ್ತಿದೆ ಬಸ್ಸು. ಸ್ಟಾಪ್ ಬಂದಾಗ ಹೇಳಿ ಅಂದಿದ್ದೇ ನಾನು ಕೆ. ವಿ. ಐಯ್ಯರ್ ಅವರ ಶಾಂತಲಾ ಕಾದಂಬರಿ ಲಿ ಮುಳುಗಿ ಹೋದೆ. ಮೂವತ್ತು ಪೇಜ್ ದಾಟಿದಾಗ ಚಾಮರಾಜಪೇಟೆ ಲಿ ಇದ್ದೆ. ಅರವತ್ತನೇ ಪೇಜಿಗೆ ಕೋತಿಬಂಡೆ. ಎಂಭತ್ತನೇ ಪೇಜ್ ಗೆ ಇಸ್ಕಾನು. ಆಮೇಲೆ ನಾನು ಕತ್ತೆತ್ತಲೇ ಇಲ್ಲ. ಬಸ್ಸು ತನ್ನ ಪಾಡಿಗೆ ತಾನು ಚಲಿಸುತ್ತಿತ್ತು. ಆಮೇಲೆ ಒಂದು ಪಾಯಿಂಟಲ್ಲಿ ಎಲ್ಲೊ ಬಿಸಿ ಗಾಳಿ ಶುರುವಾಯ್ತು. ನಾನು ಬೇಲೂರು ಹಳೇಬೀಡು ಗುಂಗಿನಲ್ಲಿದ್ದವಳು ಕತ್ತೆತ್ತಿದೆ. ಬಸ್ ನಿಂತಿದೆ ! ನೋಡಿದರೆ ಬಸ್ಸಲ್ಲಿ ಮೂರೇ ಜನ ! ಡ್ರೈವರ್ರು ಕಂಡಕ್ಟರ್ರು ಇಬ್ಬರೂ ಇಲ್ಲ! ಬಸ್ ನಿಂತಿರೋ ಜಾಗ ನೂ ನನಗೆ ಗೊತ್ತಾಗಲಿಲ್ಲ..ಮುಂದಿರೋರ್ ನ ಕೇಳಿದೆ. ಅವರು...ಮೇಡಮ್..ಇದು ಯಶ್ವಂತಪುರ...ಅವ್ರು ಊಟಕ್ಕೋ ಕಾಫಿಗೋ ಹೋಗಿದಾರೆ...ಬರ್ತಾರೆ ಅರ್ಧ ಘಂಟೆ ಲಿ ಅಂದರು. ಗಂಟೆ ಹನ್ನೊಂದು ಮುಕ್ಕಾಲು...ಊಟವೇ ಅಂದುಕೊಂಡೆ. ಪಕ್ಕದಲ್ಲಿ ಇನ್ನೊಂದು ಮೇಕ್ರಿ ಸರ್ಕಲ್ಗೆ ಹೋಗೋ ಬಸ್ಸು ಬಂದಿತು. ಪಾಸು ತಗೊಂಡಿದ್ದೆಯಾದ್ದರಿಂದ ಪುಳಕ್ ಅಂತ ಅಲ್ಲಿಗೆ ಹಾರಿದೆ.

Z :ಭೇಷ್ ! ಆಮೇಲೆ ?

ನಾನು : ಮೇಕ್ರಿ ಸರ್ಕಲ್ಲ್ ನಲ್ಲಿ ಬಸ್ಸು ನಿಂತಿತು. ದರಿದ್ರ ಟ್ರಾಫಿಕ್ಕು. ಕಷ್ಟ ಪಟ್ಟು ಇಳಿದೆ. ಅರಮನೆ ಮೈದಾನಕ್ಕೆ ಅಲ್ಲಿಂದ ಸ್ವಲ್ಪ ದೂರಾನೆ...ನಡೆದೆ.ಸಿಕ್ಕಾಪಟ್ಟೇ ಗೇಟ್ಗಳಿದಾವೆ..ಒಂದ್ ಕಡೆನಾದ್ರೂ ಡೈರೆಕ್ಷನ್ ಹಾಕ್ಬೇಡ್ವಾ? ನಾನು ದಾರಿ ಕೇಳಿದವರೆಲ್ಲ ಕನ್ನಡ ಬರ್ದೆ ಇರೋರು...ಕಡೆಗೆ ಒಬ್ಬ ಪುಣ್ಯಾತ್ಮ ನಾನು ಬುಕ್ ಫೆಸ್ಟಿವಲ್ ಅಂದಿದ್ದಕ್ಕೆ...ಗೋ ಸ್ತ್ರೈಟ್ ಅಂದ. ಸುಮಾರು ಒಂದು ಕಿಲೋಮೀಟರ್ ನಡೆದ ಮೇಲೆ ಇದು ಕಾಣಿಸ್ತು.


ಒಳಗೆ ಬಲಗಾಲಿಟ್ಟೆ. ಕೌಂಟರ್ ನಲ್ಲಿ ಟಿಕೆಟ್ ಪಡೆದು ಒಳಗೆ ಹೋದೆ.

Z :ಹೇಗಿತ್ತು ಫೀಲಿಂಗು ?

ನಾನು : Exhilarating as ever. ಪುಸ್ತಕ ಅಂದ್ರೆ ಪ್ರಾಣ ನನಗೆ...ಒಂದು ಸ್ಟಾಲನ್ನೂ ಬಿಡದೆ ಆಮೂಲಾಗ್ರವಾಗಿ ಎಲ್ಲಾ ಪುಸ್ತಕಗಳನ್ನೂ ನೋಡುತ್ತಾ ಬಂದೆ. ಆಂಗ್ಲ ನಾವೆಲ್ಲುಗಳನ್ನೆಲ್ಲಾ ಯಾಕೋ ಲೈಬ್ರರಿಯಲ್ಲೇ ಓದೋದು ಉತ್ತಮ ಅನ್ನಿಸಿತು.ಕನ್ನಡ ಪುಸ್ತಕಗಳಲ್ಲಿ ಒಂದೆರಡು ತಗೊಳ್ಳಲು ಆಸೆ ಆಯ್ತು. ಅಣ್ಣ " ನಿನ್ನನ್ನ ಪುಸ್ತಕ ಕೊಳ್ಳಲು ಬಿಟ್ಟರೆ ಟೆಂಪೋ ಅರೇಂಜ್ ಮಾಡ್ಬೇಕಾಗತ್ತೆ " ಅಂತ ಹೇಳಿ, ನೂರೈವತ್ತ್ ರುಪಾಯಿ ಕೈಲಿಟ್ಟು "ಎಷ್ಟ್ ತಗೋತ್ಯೋ ತಗೊ ಪುಸ್ತಕ ! " ಅಂದ್ರು !

Z :ಹೆ ಹೆ...ಸರೀಗ್ ಮಾಡಿದಾರೆ !

ನಾನು : ಅಯ್ಯೋ ಪಾಪಿ ! ನಗ್ತ್ಯಾ ? ಹೋದ್ ಸಲ ಒಂದು ಸಾವಿರ ರೂಪಾಯಿಯಷ್ಟು ಪುಸ್ತಕ ತಗೊಂಡಿದ್ವಿ...Strand book festival ನಲ್ಲಿ ನಾಲ್ಕು ಸಾವಿರದಷ್ಟು! ಏನು ಮಾಡಕ್ಕಾಗ್ಲಿಲ್ಲಾ ಈ ಸರ್ತಿ !!

Z :ಬೇಜಾರ್ ಮಾಡ್ಕೋಬೇಡಾ...ಸಿಕ್ಕಷ್ಟು ಸೀರುಂಡೆ ಅಲ್ವಾ ?

ನಾನು : ಹು...ನಾನು ತಗೊಂಡ್ರೆ ಕನ್ನಡ ಪುಸ್ತಕ ನೇ ತಗೊಳ್ಳೋದು ಅಂತ ನಿರ್ಧಾರ ಮಾಡಿದೆ.

Z :ಭೇಷ್. ಆಮೇಲೆ ?

ನಾನು : ತೇಜಸ್ವಿಯವರ ಮಿಸ್ಸಿಂಗ್ ಲಿಂಕ್ ಪುಸ್ತಕ ನ ಓದ್ಲೇ ಬೇಕು ಅಂತ ಗುರುಗಳು ಆದೇಶ ಹೊರಡಿಸಿದ್ರು. ಕೈಗೆ ಸಿಕ್ತು..ತಗೊಂಡೆ. ಆಮೇಲೆ ನಾನು ಕ್ಷಣ ಹೊತ್ತು ಆಣಿ ಮುತ್ತು ಕಾಲಂ ನ ವಿಜಯ ಕರ್ನಾಟಕದಲ್ಲಿ ಫಾಲೋ ಮಾಡ್ತಿದ್ದೆ...ಆ ಪುಸ್ತಕ ತಗೊಂಡೆ. ಗಾಂಧಿಜೀಯವರ ಆತ್ಮಕಥೆ ಪುಸ್ತಕ ನ ಆವತ್ತ್ ಸ್ಪೆಷಲ್ಲಾಗಿ ಮೂವತ್ತು ರುಪಾಯಿಗೆ ಮಾರುತ್ತಿದ್ದರು. ಬಿಟ್ಟರೆ ಈ ಚಾನ್ಸು ಸಿಕ್ಕೋದಿಲ್ಲ ಅಂತ ಇದೊಂದು ಆಂಗ್ಲ ಪುಸ್ತಕ ಕೊಂಡುಕೊಂಡೆ. ಫುಲ್ಲ್ ದುಡ್ದು ಖರ್ಚಾಗೋಯ್ತು. ಬಸ್ ಪಾಸ್ ಬಿಟ್ಟರೆ ಪರ್ಸಿನಲ್ಲಿ ಹುಡುಕಿದರೂ ಒಂದು ರುಪಾಯಿ ಇರಲಿಲ್ಲ.

Z :ಹೆ ಹೆ...ಆಮೇಲೆ ?

ನಾನು : ಒಂದು ವಿಷಯ ಮಾತ್ರ ಸಖತ್ ಬೇಜಾರ್ ಆಯ್ತು.

ನಮ್ಮ ರಿಸರ್ಚ್ ಲೆವೆಲ್ ಪುಸ್ತಕಗಳ ಹೊಸ ಟೈಟಲ್ಲುಗಳು ಒಂದೂ ಬಂದೇ ಇರಲಿಲ್ಲ. ನಮ್ಮ ಟಾಟಾ ಇನ್ಸ್ಟಿಟ್ಯೂಟ್ ನಲ್ಲೇ ಹೆಚ್ಚು ಟೈಟಲ್ ಗಳು ಲಭ್ಯವಿದ್ದವೂ ಅನ್ನಿಸಿತು. ರಿಯಾಯಿತಿಯು ಟಾಟಾ ಇನ್ಸ್ಟಿಟೂಟ್ ನಲ್ಲೇ ಜಾಸ್ತಿ. ವಿಜ್ಞಾನಕ್ಕೆ ಮತ್ತು ರಿಸರ್ಚಿಗೆ ಸಂಬಂಧಿಸಿದ ಪುಸ್ತಕಗಳೆಲ್ಲಾ ನನ್ನ ಹತ್ತಿರ ಈಗಾಗಲೇ ಇತ್ತು. ಇಲ್ಲಾ ಬುಕ್ ರಾಕ್ ನಲ್ಲಿ...ಇಲ್ಲಾ ಡಿವಿಡಿ ನಲ್ಲಿ...ಹೊಸದೇನೂ ಕಾಣದೇ ಸಂಕಟ ಆಯ್ತು.

Z : :( :(


ಎರಡು ಕಾಲು ಘಂಟೆಗಳ ಕಾಲ ಇನ್ನೂರ ಎಂಭತ್ತೇಳು ಸ್ಟಾಲ್ ಗಳನ್ನು ಸುತ್ತಿದ ನಂತರ ಅಮ್ಮ ಪ್ಯಾಕ್ ಮಾಡಿ ಕಳಿಸಿದ ಉಪ್ಪಿಟ್ಟನ್ನು ಹೊರಗೆ ಬಂದು ಕ್ಯಾಂಟೀನಲ್ಲಿ ಕುಳಿತು ತಿಂದೆ. ಆಮೇಲೆ ಚಿತ್ರಕಲಾ ಪರಿಷತ್ ಕಡೆ ಹೊರಟೆ.

Z : ಏನ್ ವಿಶೇಷ ಅಲ್ಲಿ ?

ನಾನು : ಕ್ರೇಜಿ ಕ್ರಾಫ್ಟ್ ಅನ್ನುವ ಒಂದು ತಂಡ ಕಾರು, ಮೋಟಾರ್ ಸೈಕಲ್ಲು ಮುಂತಾದ ವಾಹನಗಳ ಬಿಡಿ ಭಾಗಗಳನ್ನು ಉಪಯೋಗಿಸಿ ಸಕತ್ ದೊಡ್ಡ ಆಕೃತಿಗಳನ್ನು ಮಾಡಿದ್ದರು. ಎಲ್ಲಾ dismantleable. ಅಂದ್ರೆ ಕೆಲವನ್ನ ವೆಲ್ಡ್ ಮಾಡೀರ್ತಾರೆ, ಆದ್ರೆ ಎಲ್ಲಾ ವ್ಸೆಲ್ಡೆಡ್ ಅಲ್ಲ. ಸ್ಪಾನರ್ರು, ಸ್ಪಾರ್ಕ್ ಪ್ಲಗ್ಗು, ಗೇರು, ಲೆವೆರ್ರು , ಚೈನು ಎಲ್ಲಾ ಉಪ್ಯೋಗ್ಸಿ ಸಖತ್ತಾಗಿ ಮಾಡಿದ್ದಾರೆ. ಫೋಟೋ ತೆಗೆಯಬಾರದು ಅಂತ ಗೊತ್ತಿಲ್ದೇ ನಾನು ಎಲ್ಲಾ ಕ್ಲಿಕ್ಕಿಸಿಬಟ್ಟಿದ್ದೆ. ಆಮೇಲೆ ಅವ್ರು ಬೇಡ ಅಂದ್ರು...ಅಷ್ಟೊತ್ತಿಗೆ ನನ್ನ ಕೆಲ್ಸ ಮುಗ್ದಿತ್ತು. ಅದರ ಲಿಂಕ್ ಹಾಕ್ತಿದಿನಿ. ನೋಡ್ಬಿಡು. ಮಿಸ್ಸ್ ಮಾಡಿಕೊಂಡವರು ನಿಜ್ವಾಗ್ಲು ಇನ್ನೊಂದ್ ಸರ್ತಿ ಹಾಕಿದ್ರೆ ಹೋಗಿ ನೋಡಿ ಮಾತ್ರ...ಬಿಡ್ಬೇಡಿ. ಇದನ್ನ ಹಾಕ್ಬಾರ್ದು ಅಂತ ಇದ್ದೆ..ಆದ್ರೂ ನಿಂಗೆ ಬೇಜಾರ್ ಆಗ್ದೇ ಇರ್ಲಿ ಅಂತ ಹಾಕ್ತಿದಿನಿ.

Z : :) thanks.

ಇದನ್ನ ಮುಗಿಸಿಕೊಂಡು ಮನೆಗೆ ಬಂದಾಗ ಸಾಯಂಕಾಲ ಆರ್ ಘಂಟೆ. ಮತ್ತೆ ನನ್ನ ಓದು ಪ್ರಾರಂಭ !

Z : ಹ್ಮ್ಮ್ಮ್....


ನಾನು : ಸ್ಲೈಡ್ ಶೋ ಲಿಂಕು ಇಲ್ಲಿದೆ :

6 comments:

tiruka said...

ಹಹಹ! ಸಂಭಾಷಣೆ ಮತ್ತು ರೂಪಕ ಬಹಳ ಸೊಗಸಾಗಿದೆ

ಹೌದು - ನೀವು ಯಾವುದಾದರೂ ಟಿವಿ ಸೀರಿಯಲ್ ಅಥವಾ ಸಿನೆಮಾಕ್ಕೆ ಕಥೆ ಸಂಭಾಷಣೆ ಬರೆಯುತ್ತಿದ್ದೀರಾ?

ಮನ ಮುದಗೊಳಿಸಿದುದಕ್ಕೆ ವಂದನೆಗಳು :)

ಗುರುದೇವ ದಯಾ ಕರೊ ದೀನ ಜನೆ

ಅಂತರ್ವಾಣಿ said...

As usual expected article....

Nice experience.

BTW Gandhiji aatmacharitre (english) munchinindalU Rs 30 only :)

Nice snaps of crazy craft :)

Harish - ಹರೀಶ said...

ನೀವೂ ಒಂದು ಆತ್ಮಚರಿತ್ರೆ ಬರೀಬಹುದು.. The Story of My Experiments with Zindagi ಅಂತ.. Free ಆಗಿ ಇಟ್ರೆ ಕೊಂಡ್ಕೊಳ್ತೀವಿ.

ಶ್ರೀಧರ ರಾಜು said...

neeevu koothkoothalle - adoo bus nalli 100 page odhhaakbidtheera andre super kaNri... bhale bhale...
he he he correct aage ide..nimmanthoru 'book festival' ge hodre..tempo enu lorry ne bekaagutte... :-)

ಸಿಮೆಂಟು ಮರಳಿನ ಮಧ್ಯೆ said...

ಸಂಭಷಣೆ ಹಾಗೂ ನಿರೂಪಣೆ ತುಂಬಾ ಚೆನ್ನಾಗಿದೆ.. ನೀವು ಏನು ಹೇಳಬೇಕೆಂದಿದ್ದೀರೊ ಅದರಲ್ಲಿ ಸಫಲರಾಗಿದ್ದೀರಿ..ಅಭೈನಂದನೆಗಳು...
ನೀವು ಮನಶ್ಯಾಸ್ತ್ರ ಓದಿದ್ದೀರ..? (ನನ್ನ ಕುತೂಹಲಕ್ಕೆ ಕೇಳುತ್ತಿರುವೆ) ನಿಮ್ಮ ಬರಹಗಳನ್ನು ಓದುತ್ತಿಡ್ಡರೆ ಆ ರೀತಿ ಅನಿಸುತ್ತದೆ..

ಅಸತ್ಯ ಅನ್ವೇಷಿ said...

ಯಬ್ಬಾ... ನೂರೈವತ್ತು ರೂಪಾಯಿಗೆ ಇನ್ನೂರಾ ಎಂಭತ್ತೇಳು ಸ್ಚಾಲು! ನಿಮ್ಮ ಅಣ್ಣನಿಗೆ ಗೊತ್ತಾದ್ರೆ ತಲೆ ತಿರುಗಿ ಬಿದ್ದಾರು... ನಿಮ್ಮ ಸಾಹಸ ಕೇಳಿ...

ಇರ್ಲಿ... ನಿಮ್ಮ ಆತ್ಮ ಚರಿತ್ರೆಗೆ ನನ್ನದೂ ಬೆಂಬಲ. ಅದರ ಬೆಲೆ ಎಷ್ಟೇ ಇರಲಿ, ನೀವು ಎಲ್ಲರಿಗೂ ಉಚಿತವಾಗಿಯೇ ಮಾರಾಟ ಮಾಡಿಬಿಡಿ... ಸಖತ್ ಸೇಲ್ ಆಗ್ಬೋದು...

ಅಂತರ್ವಾಣಿ ಅವರು ಹೇಳಿದಂತೆ ನಾನೂ ಹೇಳುವೆ...
An unusual, UNEXPECTED article!

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...