Tuesday, November 18, 2008

Task accomplished

ನಾನು : :-)

Z : ಸಾಕು ಕಿಸಿಬೇಡ.

ನಾನು : :-) :-) :-)


Z : ಸಾಕುಉಉಉಉಉಉಉಉಉಉಉಉ !!!!!!!!!!!!!!!!!!!!!!!!!!!!!!

ನಾನು : :-) :-) :-) :-) :-) :-) :-) :-) :-) :-) :-) :-)

Z : ಸಾಕೆಲೆ !

ನಾನು : ನನಗೆ ಎಷ್ಟು ಸಂತೋಷವಾಗಿದೆ ಅಂತ ನಿನಗೇನ್ ಗೊತ್ತು ?

Z : ನೀನು ಬಾಯ್ಬಿಟ್ಟಿದ್ದೇ ಮೊಟ್ಟ ಮೊದಲ ಸಂತೋಷ. ಇದಕ್ಕಿಂತಾ ಸಂತೋಷ ಬೇರೆ ಬೇಕೆ ?

ನಾನು : ಬೇಕು.

Z : ಬೇರೆ ಏನಕ್ಕೆ ಸಂತೋಷವಾಯ್ತು ನಿಂಗೆ ?

ನಾನು : ಜನ ಎಲ್ಲ " ಬಾಯ್ಬಿಟ್ಟು ಮಾತಾಡಮ್ಮ ತಾಯಿ..." ಅಂತ ಬೇಡ್ಕೊಂಡ್ರಲ್ಲ....ಸಿಕ್ಕ್ ಸಿಕ್ಕಾಪಟ್ಟೆ ಖುಶಿಯಾಯ್ತು ನಂಗೆ.

Z : :-)

ನಾನು : ಏನ್ ಗೊತ್ತಾ...ಅಮ್ಮ ಅಂತು..." ಈ ಥರ ನೀನ್ ಸೈಲೆಂಟಾಗಿದ್ರೆ ಮನೆ ಮನೆ ಥರ ನೇ ಇರಲ್ಲ...ಮಾತಾಡಿ ಪುಣ್ಯ ಕಟ್ಕೋ..." ಅಂದ್ರು. ನಾನು ಆಗ್ಲೂ ಸುಮ್ನಿದ್ದೆ.

Z : ಆಮೇಲೆ ?

ನಾನು : ಅಣ್ಣ ಅದನ್ನೇ ಲುಕ್ಕಲ್ಲಿ ಹೇಳಿದ್ರು. ಆವಾಗ ಯೋಚ್ನೆ ಮಾಡಕ್ಕೆ ಶುರು ಮಾಡ್ದೆ. ಮಾತಾಡ್ಲಾ ಬೇಡ್ವಾ ಅಂತ.

Z : ಆಮೇಲೆ ?

ನಾನು : ಇನ್ನೊಂದ್ 20 percent ಅಷ್ಟು ಸಂಶೋಧನೆ ಬಾಕಿ ಇತ್ತು ಆಗ...ಅದಕ್ಕೆ ಆವಾಗ್ಲೂ ಸುಮ್ನಿದ್ದೆ.

Z : ಇವತ್ತೇನ್ ಮಾತಾಡಿದ್ದು ಮತ್ತೆ ?

ನಾನು : ರಿಸರ್ಚಿನ ಒಂದು ಹಂತ ಮುಗಿತು.

Z : ಏನ್ ಘನಂದಾರಿ ರಿಸರ್ಚು ಮಾಡಿದ್ರಿ ತಾವು ?

ನಾನು : ನೋಡು...ಈ ಥರ ಅವಹೇಳನಕಾರಿಯಾಗಿ ಮಾತಾಡ್ಬೇಡ....

Z : ಆಯ್ತಮ್ಮ. ರಿಸರ್ಚು ಹೈಲೈಟ್ಸ್ ಒದರು...sorry sorry... ಹೇಳು.

ನಾನು : Z ನೋಡು..ನಾನು ಕೊಲ್ಲುವ ಮೌನದ ಮೇಲೆ ರಿಸರ್ಚು ಮಾಡಲು ಪ್ರಾರಂಭಿಸಿದ್ದೆಯಾದರೂ ತೀರ ಅವಶ್ಯಕ ಎನಿಸಿದಾಗ, ಮನೆಯವರಿಗೆ ನನ್ನ ರಿಸರ್ಚಿನ ಬಗ್ಗೆ ಗೊತ್ತಾಗದಿರುವಂತೆ ಆಗಾಗ ಒಂದೆರಡು ನುಡಿಮುತ್ತುಗಳನ್ನು ಉದುರಿಸುತ್ತಿದ್ದೆ. ಕಾಫಿ, ತಿಂಡಿ, ಊಟ, ಹಸಿವು, ಮಲ್ಕೋತಿನಿ, ಓದ್ತಿದಿನಿ, ಬ್ಯುಸಿ, ಆಗಲ್ಲ, ಹೌದು ಮತ್ತು ಇಲ್ಲ.

Z : ಓಕೆ.

ನಾನು : ಆದರೆ, ಬೇರೆ ಯಾರಾದರೂ ಕೇಳಿದರೆ ಏನ್ ಮಾಡಿದ್ರು ಬಾಯ್ ಬಿಡ್ತಿರ್ಲಿಲ್ಲ.

Z : ಒಹೋ !

ನಾನು : ಹೂ... ಆಗ ಅವ್ರು ನನ್ನ ಮೌನವನ್ನ ಏನೂ ಅಂತಲೇ ಅರ್ಥ ಮಾಡ್ಕೊಳ್ಳಕ್ಕಾಗ್ದೆ ಒದ್ದಾಡುತ್ತಿದ್ದಿದ್ದು ನೋಡಿ...ನಾನ್ ಆಮೇಲೆ ಎಷ್ಟ್ ನಕ್ಕಿದಿನಿ ಅಂದ್ರೆ............

Z : ಆಹಾ....

ನಾನು : ಕೇಳು ಕಥೆ ಪೂರ್ತಿ...ಒಬ್ಬೊಬ್ಬರದ್ದು ಒಂದೊಂದು ಥರ interpretation-ನ್ನು...ನಾನು topic of discussion-ನ್ನು !

Z : ಕರ್ಮಕಾಂಡ !

ನಾನು : ಒಬ್ಬರು ಅಮ್ಮನ ಬಳಿ ..." ಏನ್ ರೀ? ಎನಾಯ್ತು ನಿಮ್ಮ ಮಗಳಿಗೆ ? mood ಸರಿಗಿಲ್ವ ?

ಅಮ್ಮ speechless. ನಾನೂ.

ಇನ್ನೊಬ್ಬರು " ಪಾಪ ಓದಿ ಓದಿ ಸುಸ್ತಾಗಿರ್ಬೇಕು ರಿ...ಮಾತೇ ಹೊರಡ್ತಿಲ್ಲ, ತಲೆ ತುಂಬಾ ಕಾಲ್ಕ್ಯುಲೇಷನ್ ಅನ್ಸತ್ತೆ..."

ನನ್ನ ತಲೆಯಲ್ಲಿ ಆಗ electrodynamics + "ನಟಸಾರ್ವಭೌಮ " ಕಾದಂಬರಿ hangover.

ಮಗದೊಬ್ಬರು " ಪ್ರಾಯಶಃ ಅವ್ರ ಮನೆಲಿ ಯಾರಾದ್ರು ಬೈದಿರ್ಬೇಕು...ಇಲ್ಲಾಂದ್ರೆ ಇವ್ಳು ಹೀಗಲ್ಲ..."

ನಮ್ಮಮ್ಮನಿಂದ ನನಗೊಂದು ದಟ್ಟ ದರಿದ್ರ ಲುಕ್ಕು ಪ್ರದಾನ . ನಾನು ಅತಿವಿನಮ್ರಳಾಗಿ " returned with thanks" look ಕೊಟ್ಟೆ.

ಇದು ಮೇಲ್ನೋಟ.

Z : ಒಳನೋಟವನ್ನು ಪೇಳುವಂತಹವರಾಗಿ.

ನಾನು : ನಾನು ಈ ರಿಸರ್ಚು ಮಾಡಿದ ಮುಖ್ಯ ಉದ್ದೇಶ ಏನಪ್ಪಾ ಅಂದರೆ, ಮಾತೇ ಬರದವರನ್ನು ಸಮಾಜ ಹೇಗೆ ಅರ್ಥೈಸಿಕೊಳ್ಳುತ್ತದೆ ? ಅವರ ಸಂವೇದನೆ ಹೇಗಿರತ್ತೆ ? ನಾನು ಹಾಗೆ ಕೆಲವು ಕೈ ಸನ್ನೆಗಳನ್ನು ಅಭ್ಯಾಸ ಮಾಡಿಕೊಳ್ಳಲೂ ಶುರು ಮಾಡಿದ್ದೆ. ಆದರೆ ಅದರ ಪ್ರದರ್ಶನಕ್ಕೆ ಅವಕಾಶ ಸಿಗಲಿಲ್ಲ.

Z : ಯಾಕೆ ?

ನಾನು : ಅಣ್ಣ ಮಾತಾಡ್ತ್ಯೋ ಇಲ್ವೋ ಅಂತ ಗದರಿಸೋ ಚಾನ್ಸಸ್ ಜಾಸ್ತಿ ಇತ್ತು. ರಿಸ್ಕ್ ರನ್ ಮಾಡಾಕ್ಕಾಗ್ಲಿಲ್ಲ.

Z : :( pity.

ನಾನು : But still, I accomplished what all tasks I had set. ನಾನು ಐದು ಮುಖ್ಯ ಅಂಶಗಳನ್ನು ಗಮನಿಸಿದೆ.

೧. ನಾವು ಮಾತು ನಿಲ್ಲಿಸಿದಾಗ ಕಣ್ಣುಗಳು ಹೆಚ್ಚು expressive ಆಗುತ್ತವೆ. ನಮ್ಮ ಇತರ sense organs ಆಶ್ಚರ್ಯಕರ ರೀತಿಯಲ್ಲಿ ಚುರುಕಾಗುತ್ತವೆ.

೨. ಜನರು ತಮಗೆ ಗೊತ್ತಿಲ್ಲದೆಯೇ ನಮ್ಮನ್ನು sign language ನಲ್ಲಿ ಮಾತನಾಡಿಸಲು ಶುರು ಮಾಡುತ್ತಾರೆ.

೩. ನಾವೂ ನಮಗರಿವಿಲ್ಲದಂತೆಯೇ ತಲೆ ಅಲ್ಲಾಡಿಸುತ್ತಾ ಹುಂ ಉಹುಂ ಗುಟ್ಟುತ್ತಿರುತ್ತೇವೆ.

೪. ಮೌನವನ್ನು ಶೇಕಡಾ ಅರವತ್ತರಷ್ಟು ಜನ ಅಸಮಾಧಾನ ಅಂತಲೇ ಅರ್ಥಮಾಡಿಕೊಳ್ಳುತ್ತಾರೆ.

೫. ಜನರು ನಮ್ಮನ್ನು ಮಾತಾಡಿಸುವಾಗ ಯಾಕೋ ಒಂದು ಭಯದ ಛಾಯೆ ಕಾಣಿಸುತ್ತದೆ. ಅವರು ನಮನ್ನು ಹಿಂದೆ ಆಡಿಕೊಂಡಿದ್ದೋ, ಮೋಸ ಮಾಡಿದ್ದೋ, ಬೆನ್ನಿಗೆ ಚೂರಿ ಹಾಕಿದ್ದೋ ಇವರಿಗೆ ತಿಳಿದು ಹೋಯ್ತಾ ಅಂತೆಲ್ಲಾ ಯೋಚ್ನೆ ಮಾಡ್ತಾರೆ ಅನ್ಸತ್ತೆ. moreover, ಅವರು ಮಾತಾಡಿ ಮಾತಾಡಿ ಅಭ್ಯಾಸ ಆಗಿರೋವಾಗ ತಲೆಗೆ ಹೆಚ್ಚು ಕೆಲ್ಸ ಇರಲ್ಲ. ಇನ್ನೊಬ್ಬರ ಪ್ರತಿಕ್ರಿಯೆಯ ಮೇಲೆ ಅವರ ಮುಂದಿನ ಹೆಜ್ಜೆ ನಿಂತಿರುತ್ತದೆ. According to them, everything must be easily comprehensible. ಆದರೆ ನಮ್ಮಿಂದ ಪ್ರತಿಕ್ರಿಯೆಯೇ ಬರದಿದ್ದಾಗ ಇವರ ತಲೆ ಕೆಡುತ್ತದೆ. ಹೆಚ್ಚು ಯೋಚನೆ ಮಾಡಬೇಕಾಗುತ್ತದೆ. ಹೇಗಾದರೂ ಮಾಡಿ ಇವರನ್ನ ಮಾತಾಡಿಸಲೇಬೇಕೆಂದು ಕೆಲವರು ಮಾತ್ರ ಯೋಚಿಸುತ್ತಾರೆ. Trial and error methods ಇಂದ very few of themನಮ್ಮಿಂದ either by voice or by signs, reply ತಗೊಳ್ಳೋದ್ರಲ್ಲಿ successful ಆಗ್ತಾರೆ . most of them just don't even try ! Suppose, ನಾವು ಅವರ ಯೋಚನೆಯಂತೆ ನಡೆದುಕೊಳ್ಳದೇ ಇದ್ದರೆ ಬಹುಬೇಗ ಕೋಪವೂ ಬರುತ್ತದೆ. ಸಂಯಮ ಕಳೆದುಕೊಳ್ಳುತ್ತಾರೆ. ಮತ್ತು, ಅವರಿಗೆ ಆ ಕೂಡಲೆ ನಮ್ಮ ಪ್ರತಿಕ್ರಿಯೆಯನ್ನು ಅರ್ಥ ಮಾಡಿಕೊಳ್ಳೂವ ಶಕ್ತಿ ಕೂಡಾ ಇರುವುದಿಲ್ಲ. ಯಾಕಂದರೆ ಅವರು ವಿವೇಚನಾಶಕ್ತಿ ಹಾಗೂ ಸಂಯಮವನ್ನು ಕೋಪಕ್ಕೆ ಆಹುತಿ ನೀಡಿರುತ್ತಾರೆ. ಮತ್ತು, ಯೋಚನಾ ಲಹರಿಯನ್ನು ಯಾವ ಕಡೆ ಹರಿಯಬಿಡಬೇಕು ಅಂತ ತಿಳಿಯದೇ confuse ಆದವರು ಸುಮಾರು ಜನ ಇದ್ದಾರೆ. ಕಡೆಗೆ ಅವರು ನಮ್ಮ ಮೇಲೆ ಏನೇನು ಕತ್ತಿ ಮಸೆದಿದ್ದಾರೆ ಎಂದು ನಿಜ ಒಪ್ಪಿಕೊಂಡುಬಿಡುತ್ತಾರೆ. ನನಗೆ ಈ ಅನುಭವ ಆಗಿದೆ.

Z : ಆಹಾ ?

ನಾನು : ಯೆಸ್.

Z : ಆಮೇಲೆ ?

ನಾನು : ಇಷ್ಟು ದಿನ ಮೌನ ಯಾರನ್ನು "ಕೊಲ್ಲುತ್ತೆ" ಅಂತ ನೋಡ್ತಿದ್ದೆ. ಅದು ಸಾಮಾನ್ಯ ಮನುಷ್ಯರ ಸಂಯಮವನ್ನು ಕೊಂದಿರುವುದನ್ನು ನೋಡಿದ್ದೇನೆ. ಮೌನದಿಂದ ಸಂಯಮ ಬರತ್ತೆ ಅಂತ ಕೇಳಿದ್ದೆ....ಇದ್ಯಾಕೋ ಉಲ್ಟಾ ಹೊಡಿತು. ಯಾಕೆ ಅಂತ ಗೊತ್ತಾಗ್ಲಿಲ್ಲ. Moreover, ಜನ ಮನಸ್ಸಿಗೆ ಕಸರತ್ತು ಮಾಡಿಸಿರಲ್ಲ. ಈ ಮೌನವನ್ನ ಅರ್ಥ ಮಾಡಿಕೊಳ್ಳುವ ಕಸರತ್ತನ್ನು ಖಂಡಿತಾ ಜನ ಮಾಡಿರಲ್ಲ. ನನಗನ್ನಿಸತ್ತೆ, ಅದಕ್ಕೆ ಅವರಿಗೆ ಮೂಕರೊಂದಿಗೆ ಮಾತನಾಡಲು ಜಿಗುಪ್ಸೆ, ಅವರ ಕಂಡರೆ ಅಸಡ್ಡೆ. ಅರ್ಥ ಮಾಡಿಕೊಳ್ಳಲು ಕಷ್ಟ ಅನ್ನೋ ಒಂದೇ ಕಾರಣದಿಂದ ತಮ್ಮ patience ಕಳೆದುಕೊಳ್ಳುವ ಜನರಿಂದ ಮಾತುಬರದವರಿಗೆ ಅನಾಥ ಪ್ರಜ್ಞೆ ಕಾಡುತ್ತದೆ. ಅವರಿಗೆ ಅನುಕಂಪದ ಅವಶ್ಯಕತೆ ಖಂಡತಾ ಇಲ್ಲ, ಅವರನ್ನು ಅರ್ಥಮಾಡಿಕೊಳ್ಳುವವರ ಅವಶ್ಯಕತೆ ಇರತ್ತೆ. ನಾವು ಅವರ frequency match ಮಾಡಿಕೊಂಡರೆ ಅವರೂ ಸಿಕ್ಕಾಪಟ್ಟೆ ಮಾತಾಡ್ತಾರೆ :-)

Z : :-)


ನಾನು : ಈ ರಿಸರ್ಚನ್ನು ಪುಷ್ಟೀಕರಿಸಲು ನಾನು ಲೈಬ್ರರಿಯಲ್ಲಿ ಪುಸ್ತಕಗಳನ್ನು, ನೆಟ್ಟಲ್ಲಿ ರಿಸ್ಸರ್ಚು ಪೇಪರ್ಗಳನ್ನು ಹುಡುಕೋಣಾ ಅಂದರೆ, ನನ್ನ ಪಿಎಚ್.ಡಿ ಪರೀಕ್ಷೆ ಎಚ್ಚರದ ಘಂಟೆ ಬಾರಿಸುತ್ತಿದೆ. ಅದಾದ ಮೇಲೆ ಮೇಲ್ಕಂಡ ನನ್ನ observation ಗಳಲ್ಲಿ ಎಷ್ಟು ಸರಿ, ಎಷ್ಟು ತಪ್ಪು ಎಂಬುದನ್ನು ಕಂಡುಹಿಡಿಯಬೇಕಿದೆ. ಇದೊಂದು ಟೈಂ ಪಾಸ್ ಪ್ರಾಜೆಕ್ಟ್ ಆಗತ್ತೆ, ನಾನು ಯಾವ್ದಾದ್ರು ರಿಸರ್ಚ್ ಇನ್~ಸ್ಟಿಟೂಟ್ ನ ಲ್ಯಾಬ್ ಸೇರುವವರೆಗೂ. ಒಟ್ಟಿನಲ್ಲಿ phase 1 ಅಂತೂ ನನಗೆ ತೃಪ್ತಿಕೊಡುವ ರೀತಿಯಲ್ಲಿ ಮುಕ್ತಾಯ ಕಂಡಿದೆ. ಮುಂದಿನ ಫೇಸ್ ಅನ್ನು ಅತಿಶೀಘ್ರದಲ್ಲೇ ಆರಂಭಿಸುತ್ತೇನೆ.

Z : ಆಗ ಮತ್ತೆ ಮಾತಿಗೆ ಫುಲ್ ಸ್ಟಾಪಾ ?

ನಾನು : mostly. ಮುಂದಿನ ಬಾರಿ ನನ್ನ ಮೌನ ಜನರಿಗೆ ಅರ್ಥವಾಗತ್ತೆ ಅಂತ ನಂಬಿದ್ದೀನಿ. ಅರ್ಥವಾಗದಿದ್ದರೆ ಅದು ಅವರ ಯೋಚನಾಶಕ್ತಿಗೆ ಬಿಟ್ಟಿದ್ದು ಅಂತ ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಫೇಸ್ ೨ ಮುಗಿದ ಮೇಲೆ ಮತ್ತೆ ಮಾತಾಡುವೆ. ಆದರೆ ಫೇಸ್ ೨ ಈಗಲೇ ಶುರು ಅಂತು ಮಾಡುವುದಿಲ್ಲ.

Z : ಸದ್ಯ.

ನಾನು : ಹೆ ಹೆಹೆಹೆ...

Z : ಆದ್ರೂ, ನೀನು at least ನನ್ನ ಜತೆಯಾದರೂ ಮಾತಾಡಬೇಕು. ಅದೊಂದು ಮಾತು ನಡೆಸಿಕೊಡು.

Well, lets ask everybody what they think about this.

ಓದುಗ ಬಂಧುಗಳೇ, ಮೌನದ ರಿಸರ್ಚಿನ ಎರಡನೆ ಹಂತ ಜಾರಿಯಲ್ಲಿರುವಾಗ head ruled (ನಾನು ) Z ರೊಂದಿಗೆ ಮಾತಾಡುವುದು ಸೂಕ್ತವೇ ? ನಿಮ್ಮ ಅತ್ಯಮೂಲ್ಯ ಮತವನ್ನು ಕಾಮೆಂಟ್ ಮೂಲಕ ಚಲಾಯಿಸಿ ಮತದಾನದ ಹಕ್ಕನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ವಿನಂತಿ.

ಎಲ್ಲರಿಗೂ ಒಂದೇ ಬಾರಿ ಮಾತ್ರ ಮತ ಚಲಾಯಿಸಲು ಅವಕಾಶ. ಮತವನ್ನು ಬದಲಿಸಿದರೆ ಅದನ್ನು ಪರಿಗಣಿಸಲಾಗುವುದಿಲ್ಲ.

ಮತ ಚಲಾಯಿಸಲು ಕಡೆಯ ದಿನಾಂಕ ಮೂವತ್ತು ನವೆಂಬರ್, ೨೦೦೮.

Z : ಬೇಗ ವೋಟ್ ಮಾಡಿ ...

(Line on hold)

12 comments:

Harish - ಹರೀಶ said...

ಹಿಹ್ಹಿಹ್ಹಿ! ನಾನ್ ಗೆದ್ಬಿಟ್ಟೆ!! ಟ್ರೀಟ್ ಯಾವಾಗ?

ಅಂತರ್ವಾಣಿ said...

ನಿನಗೆ ಇಷ್ಟ ಬಂದ ಹಾಗೆ ಮಾಡಮ್ಮ

NilGiri said...

ಧಾರಾಳವಾಗಿ ಮಾತಾಡಿ :). ಈಗಾಗ್ಲೇ ಬೊ-ರದವರು ನಿಮ್ಮ ನಿಗೂಢ sign language ನ್ನು ಅರ್ಥೈಸಲು ತಮ್ಮ ಸಮಸ್ತ ಏಕ ಸದಸ್ಯ ಬ್ಯೂರೋವನ್ನು ಅಟ್ಟಿದ್ದಾರೆ.

ಇನ್ನು ಇಲ್ಲಿಯೂ ಅದೇ S L ಮುಂದುವರಿದರೆ ನನ್ನಂತಹ ಪಾಮರರ ಗತಿ ಏನು?!

ಅನಂತ said...

ಅಬ್ಬಾ.. ಅಡ್ಡ ಬಿದ್ದೆ.. ಗ್ರೇಟ್..!
ನಿಮ್ಮ ಎರಡನೇ ಹಂತ ಸರಾಗವಾಗಿ ಸಾಗಲಿ.. :) Z ಜೊತೆ ಮಾತಾಡುವುದಕ್ಕೆ ನನ್ನ ಮತ.. ;)

shreevathsa said...

ನಾನು ಸಹ Z ಜೊತೆ ಮಾತನಾಡುವ ಪರ :-)

Anonymous said...

Research continue maado plan enadru idya?? :-)

ಅಸತ್ಯ ಅನ್ವೇಷಿ said...

Z ಬದ್ಲು ಬೊ.ರ. ಅಂತ ಮಾಡ್ಕೊಳಿ.... ಹಾಗಿದ್ರೆ ನನ್ ವೋಟ್ YES!!!

ಇನ್ನೊಂದ್ ವಿಷ್ಯ.
ಮಾತು ನಿಲ್ಲಿಸಿದಾಗ ಕಣ್ಣುಗಳು ಕೆಲಸ ಮಾಡುತ್ತವೆ, "ಸೆನ್ಸ್ ಇಲ್ಲ"ದವರಿಗೆ ಸೆನ್ಸ್ ಜಾಸ್ತಿಯಾಗುತ್ತೆ. ಆದ್ರೆ ನಿಮ್ಮ ರೀಸರ್ಚು ತಪ್ಪಾಗಿದೆ. ಯಾಕಂದ್ರೆ, ನಮಗೆ ಯಾವತ್ತಿಗೂ ಇದ್ದಿರದ, ಇಲ್ಲದ ಮತ್ತು ಇರಲಾರದ ಸೆನ್ಸ್, ಜಾಸ್ತಿ ಆಗಲೇ ಇಲ್ಲ!

ಒಟ್ನಲ್ಲಿ... ಅಂತೂ ಇಂತೂ... ಎಲ್ರನ್ನೂ ಸತಾಯ್ಸಿ ಸತಾಯ್ಸಿ ನೀವಂತೂ Some-ಚೋದನೆಯನ್ನೇ ಮಾಡ್ತಾ ಇದ್ದೀರಿ. :)

ಸಿಮೆಂಟು ಮರಳಿನ ಮಧ್ಯೆ said...

ನೀವು ಮಾತಾಡದೆ ಇರೋದೆ ಒಳ್ಳೆಯದು, ನೀವು ಅವರ ಪ್ರತಿಕ್ರಿಯೆಯನ್ನೂ ಕೂಡ ನಿಮ್ಮ ರಿಸರ್ಚಿಗೆ ಸೇರಿಸಿ ಕೊಳ್ಳಬಹುದು.. ಅಲ್ಲವಾ?

Lakshmi S said...

ಹರೀಶ್ :

ನೀವು ಸೋತಿದ್ದೀರಿ ಸಾರ್ ! ನಾನು ರಿಸರ್ಚನ್ನು ಅರ್ಧದಲ್ಲೇ truncate ಮಾಡಿದ್ದಿದ್ದರೆ ತಾವು ಗೆಲ್ಲುತ್ತಿದ್ದಿರಿ. ಆದರೆ ಹಾಗಾಗಿಲ್ಲ.ಒಂದು ಹಂತವನ್ನು ಮುಗಿಸಿ ವಿಜಯೋತ್ಸವವನ್ನು ಆಚರಿಸುತ್ತಿದ್ದೇನೆ.ಆದ್ದರಿಂದ ನಿಮಗೆ ಟ್ರೀಟ್ ಕೊಡಿಸುವ ಪ್ರಮೇಯ ಇಲ್ಲ. ಬೇಕಿದ್ದರೆ ತಾವು ಏನು ಬೇಕೋ ಅದನ್ನ ಪುಷ್ಕಳವಾಗಿ ತಿಂದು, ಬಿಲ್ಲನ್ನೂ ನೀವೆ ಪಾವತಿಸಿ, ನಾನು ಕೊಡಿಸಿದ್ದು ಅಂದುಕೊಳ್ಳಿ :-)

ಅಂತರ್ವಾಣಿ:
Thanks for your most valuable suggestion. ಆದ್ರೆ ಯಾರ್ ಇಷ್ಟ ಬಂದಹಾಗೆ ಮಾಡ್ಬೇಕು ಅಂತ ನಾನು ವೋಟ್ ಕೇಳಿದ್ದು.

ನೀಲಗಿರಿ:
ನಮಸ್ಕಾರ. ಬ್ಲಾಗ್ ಗೆ ಸ್ವಾಗತ. ಬೊ-ರವರ ಪಾಡು ಶೋಚನೀಯ ಅನ್ಸ್ತು. ;-) ಏನ್ ಮಾಡಿದ್ರು ಅವರಿಗೆ ನನ್ನ ಭಾಷೆ ಅರ್ಥವೇ ಆಗ್ಲಿಲ್ಲವಂತೆ ;-)

ಆದರೆ ನೀವು ಪಾಮರರಲ್ಲ ಬಿಡೀ.. ನಿಮ್ಮ ಜೊತೆ S L ನಲ್ಲಿ ಮಾತಾಡಲ್ಲ.

ಅನಂತ :
ನಮಸ್ಕಾರ ಅನಂತರವರೇ. ನಮ್ಮ ಬ್ಲಾಗ್ ಗೆ ಸ್ವಾಗತ. ನಾನು ಗ್ರೇಟ್ ಅಲ್ಲ, ನಾನು ಲಕ್ಷ್ಮೀ :-)
ಅಡ್ಡಬೀಳೋದೆಲ್ಲ ಬೇಡಾ ರಿ...ನಂಗೆ ಅಡ್ಬೀಳೋರ್ ಕಂಡ್ರೆ ಭಯ !

Lakshmi S said...

ಶ್ರೀವತ್ಸ:

ನಮಸ್ಕಾರ. ನಮ್ಮ ಬ್ಲಾಗ್ ಗೆ ಸ್ವಾಗತ. ನಿಮ್ಮ ಅಮೂಲ್ಯ ಮತಕ್ಕೆ ಧನ್ಯವಾದಗಳು.

ರಾಧೆ:

ಹು ಕಣೆ. ಪ್ಲಾನ್ ಹಾಗೆ ಇರೋದು. ವೋಟೇ ಮಾಡಿಲ್ಲವಲ್ಲೇ ???

ಅನ್ವೇಷಿ:

ಆಹಾ...ಏನ್ ಸ್ವಾರ್ಥಿ ರಿ ನೀವು !!! Z ಜೊತೆ ಮಾತಾಡೋ ಬದ್ಲು ನಾನು ಬೊ.ರ. ಜೊತೆ ಮಾತಾಡಿದರೆ ಅವ್ಳು ನನ್ನನ್ನ ಸುಮ್ನೆ ಬಿಡ್ತಾಳಾ ? ಇಟ್ಟಾಡ್ಸ್ಕೊಂಡ್ ಬಂದು ಎರ್ರ ಬಿರ್ರಿ ಒದೆ ಕೊಡ್ತಾಳೆ! ಅದನ್ನ ನೋಡಿ ನೀವ್ ಸಂತೋಷ ಪಡಕ್ಕೆ ಎಸ್ಸ್ ಅನ್ನುತ್ತಿದ್ದೀರಾ ? ನಿಮ್ಮ ಈ ಉಪಾಯ ಫಲಿಸಲ್ಲ ರಿ..ಛೆ! ಛೆ! ಆಗದು ಆಗದು !

ಇನ್ನೊಂದು ವಿಷ್ಯದ ಬಗ್ಗೆ ಒಂದು ವಿಷ್ಯ :

ನಾನು ಹೇಳಿದ್ದು ಸೈಲೆಂಟಾಗಿರೋರ ಸೆನ್ಸ್ ಜಾಸ್ತಿಯಾಗತ್ತೆ ಅಂತ.ಮಾತಾಡಿಸಲಿಕ್ಕೆ ಬರುವವರ ಸೆನ್ಸ್ ಬಗ್ಗೆ ನಾನು ಮಾತಾಡೇ ಇಲ್ಲ.ನೀವು ದಯಮಾಡಿ ನಿಮ್ಮ ಎರಡೂ ಕಣ್ಣುಗಳಿಗೆ ಮತ್ತೊಂದೆರಡ್ಮೂರ್ನಾಲ್ಕ್ ಕನ್ನಡಕ ಹಾಕೊಳ್ಳಿ!:P

ಆಮೇಲೆ, ನಂಗೊತ್ತು ನಿಮಗೆ ಸೆನ್ಸ್ ಜಾಸ್ತಿ ಆಗಿಲ್ಲ ಅಂತ :-)

ಪಾಪ ನೀವೊಬ್ರೆ ಎಷ್ಟು ಅಂತ some-ಚೋದನೆ ಮಾಡ್ಟೀರಾ ?ನಮ್ಮದೂ ಒಂದಿಷ್ಟು ಅಳಿಲು ಸೇವೆ ಅಷ್ಟೆ!

ಇಟ್ಟಿಗೆ ಸಿಮೆಂಟು:

ನಮಸ್ಕಾರ. ನಮ್ಮ ಈ ಬ್ಲಾಗ್ ಗೆ ಸ್ವಾಗತ. ನಿಮ್ಮ ಮತಕ್ಕೆ ಧನ್ಯವಾದ. ಸಖತ್ ಒಳ್ಳೇ ಪಾಯಿಂಟಿದೆ ನಿಮ್ಮ ಕಾಮೆಂಟಲ್ಲಿ. ನೋಡೋಣ..ಮೆಜಾರಿಟಿ ಏನ್ ಹೇಳತ್ತೆ ಅಂತ :-)

Karthik said...

ರೀ ನೀವ್ lifeನ ಎಕ್ಕಾ ಮಕ್ಕಾ ಮಜಾ ಮಾಡ್ತೀರಾ ಕಣ್ರೀ. ನಿಮ್ಮ some-ಶೋಧನೆಗೆ ನನ್ನ All the bestಉ. ನಿಮ್ಮ ಮುಂದಿನ ಪ್ರಯೋಗ ಚೆನ್ನಾಗಿ ನಡೀಲಿ. Z ಜೊತೆ ಮಾತಾಡಿ, ತನ್ಮೂಲಕ ನಿಮ್ಮ some-ಶೋಧನೆಯ some status ನಮ್ಗೆ ತಿಳೀತಿರತ್ತೆ.

Lakshmi S said...

karthik:

ಓಕೆ ! :)

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...