Sunday, June 15, 2008

Happy father's day.

ನಾನು : Z... ಇವತ್ತು father's day.

Z : ಹೌದು.

Z + head ruled : Happy father's day ! ಅಣ್ಣಾ ! [ನಾವು ನಮ್ಮ ತಂದೆ ನ ಅಣ್ಣ ಅಂತ ನೇ ಕರಿಯೋದು]




ನಾನು : ಇವರೇ ನಮ್ಮ ತಂದೆ....ಅದು ನಾವು ! 1-11-1987 ರಂದು ತೆಗೆದಿದ್ದಂತೆ ಈ ಫೋಟೊ....ಅಮ್ಮ ಹೇಳಿದ್ರು....ಆವತ್ತು ಲಾಲ್ಬಾಗ್ ನಲ್ಲಿ ice cream ಕೊಡ್ಸೋ ತಂಕ ನಾನು ಹೀಗೆ ಮುಖ ಗಂಟಿಟ್ಟುಕೊಂಡಿದ್ದೆನಂತೆ..ಆಗ ನಮಗಿನ್ನೂ ಎರಡು 2 ವರ್ಷ !

Z : he is the best father one can ever get ! we are the luckiest !!!

ನಾನು : of course ! We cant thank him enough for what all he has done to us in bringing us up.

Z : yes ! ಅದರಲ್ಲಿ ಎರಡು ಮಾತಿಲ್ಲ. ತಂದೆಯ ಕರ್ತವ್ಯ ಚಾ ಚೂ ತಪ್ಪದೇ ನಿರ್ವಸಿದ್ದಾರೆ. ನಮ್ಮ ಬೇಡಿಕೆ, ಇಚ್ಛೆಗಳನ್ನ ಜಾಸ್ತಿ ಬೈಯ್ಯದೇ ನೆರವೇರಿಸಿದ್ದಾರೆ. ತಮಗೆ ಏನೆ ಕಷ್ಟ ಬಂದರೂ ಅದನ್ನ ನಮಗೆ ತೋರಗೊಡದೇ ಹಾಗೆಯೇ ಇದ್ದಾರೆ.

ನಾನು : 1994 ನಲ್ಲಿ ನಡೆದ ಅಪಘಾತವೊಂದರಲ್ಲಿ ನಮ್ಮ ತಂದೆಗೆ ಬಲಗಣ್ಣು ಪೆಟ್ಟಾಗಿ ಕಣ್ಣನ್ನೇ ಕಳೆದುಕೊಂಡಾಗ ನನಗೆ ಒಂಭತ್ತು ವರ್ಷ. ನಾನು ನಮ್ಮ ತಂದೆಯನ್ನೇ ಕಳೆದುಕೊಂಡೆನೇನೋ ಎಂಬ ಭಯ ಕಾಡಿದಾಗ...ಅವ್ರೇ ಹೇಳಿದ್ದು ...."where there is a will, there is a way" ನಮ್ಮ ತಂದೆಯ will power ಎಷ್ಟು strong ಅಂತ ಗೊತ್ತಲ್ವಾ Z ? ಹದಿನೈದೇ ದಿನದಲ್ಲಿ ಮೇಲೆದ್ದು ಮುಳುಗುತ್ತಿದ್ದ ನಮ್ಮ ಸಂಸಾರ ಮತ್ತು ಕಂಪನಿಯನ್ನ ಮೇಲಕ್ಕೆತ್ತಲು ಹಗಲೂ ರಾತ್ರಿ ದುಡಿಯುತ್ತಾ ಇದ್ದಾರೆ. .....ಯಾರೊಬ್ಬರ ಬಳಿಯೂ ಕೈಚಾಚದೇ ! ಈಗಲೂ ಎಲ್ಲರ ತಲೆಯ ಮೇಲೆ ಹೊಡೆಯುವ ಹಾಗೆ ಕಾರನ್ನು ಮಳೆ, ಮಂಜು ಮಸುಕು ತುಂಬಿದ ಶಿರಾಡಿ ಘಾಟನ್ನ, ಆಗುಂಬೆ ಘಾಟನ್ನ, ರಾತ್ರಿ ಹಗಲೆನ್ನದೇ , ಒಬ್ಬರೇ ಹತ್ತಿ ಇಳಿಯುವ ಸಾಮರ್ಥ್ಯವನ್ನು ಹೊಂದಿದ್ದಾರೆ...ನಮ್ಮ ತಂದೆ...our father strongest ! ಅವರಷ್ಟು will power, guts and strength ನನಗಿಲ್ಲವಲ್ಲ ಎಂದು ಎಷ್ಟೋ ಬಾರಿ ನನಗನ್ನಿಸಿದೆ...I have to imbibe from him his qualities of patience, tolerance, time management, discipline, dedication...everything !


Z : Doubt -ಎ ಇಲ್ಲ....ಇದೆಲ್ಲ ನಮಗೆ ಬೇಕೆ ಬೇಕು. ನಮ್ಮನ್ನು ಸಂಸ್ಕಾರವಂತರನ್ನಾಗಿ ಮಾಡಲು ಅಣ್ಣ ಪಟ್ಟ ಪ್ರಯತ್ನ ಏನು ಕಮ್ಮಿ ? ಪಂಚಾಂಗ ಶ್ರವಣ, ದೈವ ಭಕ್ತಿ, ಪೂಜೆ, ಪುರಸ್ಕಾರ, ಪುರಾಣ ಶಾಸ್ತ್ರಗಳ ತಿಳಿವಳಿಕೆ, ಆಚಾರ, ವಿಚಾರ, ಸಂಸ್ಕೃತಿ ಇವೆಲ್ಲ ನಮಗೆ ಪಾಠ ಮಾಡುವಲ್ಲಿ ಅಮ್ಮನ ಜೊತೆಗೂಡಿ ಅವರೂ ಶ್ರಮಿಸಿದ್ದಾರೆ.


ನಾನು : of course...



ಪ್ರಪಂಚದ ಜನರಿಗೆ ಮನ್ನ ತಂದೆ ಮಿತಭಾಷಿ, ಸದಾ tension ನಲ್ಲಿ ಇರುವವರು ಅಂತ ಕಂದರು ನಮ್ಮ ತಂದೆಯ sense of humour ಮಾತ್ರ ultimate and unbeatable ! ಮೊನ್ನೆ ಮೊನ್ನೆ ಬಂದ ಗಾಳಿಪಟ ಚಿತ್ರದ ಹಾಡನ್ನು ಅರ್ಧಮರ್ಧ ಕೇಳಿಸಿಕೊಂಡು ನನಗೆ astrophysics exam ಇದ್ದ ದಿನ ಬೆಳಿಗ್ಗೆ " ಆಕಾಶ ಭೂಮಿಮೇಲಿದೆಯೋ " ಅಂತ ಹಾಡಿ ನನ್ನ tension ಇಳಿಸಿದರು !!!


Z : ಹೆ ಹೆಹೆ....ಹಾ ಒಂದು ದಿನ ನಾನೇ tea ಮಾಡುತ್ತೀನಿ ಎಂದು ಒಂದು ಲೀಟರ್ ಹಾಲು full ಖರ್ಚು ಮಾಡಿ tea ಮಾಡಿದ್ದು !!!


ನಾನು : ಉಹಹಹಹಾಹ !!!! oh yes I remember.....ಎಣ್ಣೆ ಹಾಕದೆ ದೋಸೆ ಬೇಯಿಸಲು ಹೋಗಿದ್ದು !!!


Z : ha hahahahah !!!!! ಮೊಬೈಲ್ ನಲ್ಲಿ "thank you and wish you the same " ಅಂತ too many recipients ಗೆ ಕಳಿಸಲು ಗೊತ್ತಾಗದೇ ಮೂರು ಗಂಟೆ ಪರದಾಡಿದ್ದು !!! ನನ್ನನ್ನು ಎಬ್ಬಿಸಲಿಲ್ಲ ಯಾಕೆ ಎಂದು ಕೇಳಿದರೆ..."ನೀನ್ ಸಖತ್ ಸ್ಪೀಡಾಗಿ ಮಾಡಿದ್ರೆ ನಂಗೆ ಹೇಗೆ ಗೊತಾಗತ್ತೆ ? " ಅಂದಿದ್ದು !!


ನಾನು : gtalk ನಲ್ಲಿ talk and chat ನ simultaneously ಮಾಡಲು initially ಒದ್ದಾಡಿ...ಈಗ ಪ್ರೌಢಿಮೆ ಸಾಧಿಸಿರೋದು. So many things of that sort !!!


ನಾನು : ultimate comedy : ನಮಗೆ ಹಬ್ಬಕ್ಕೆ ಬಟ್ಟೆ ಬೇಕು ಅಂತ ಕೇಳಿದ್ದಕ್ಕೆ ನನಗೆ ಮತ್ತೆ ಅಪರ್ಣಳಿಗೆ ಸೀರೆ ತಂದಿದ್ದು !!! ನಾವು ಮುಖ ಮುಖ ನೋಡಿದ್ದಕ್ಕೆ..."ನಿಮ್ಮ ಸೋದರತ್ತೆಯರಿಗೆ ನಿಮ್ಮ ತಾತ ನೂ ಹೀಗೆ ಮಾಡ್ತಿದ್ದ್ರು...ನಾನೂ ಹಾಗೇ ಮಾಡಿದಿನಿ. ವಂಶ ಪಾರಂಪರ್ಯ ಕೆಲಸ " ಅಂದಿದ್ದು !!!


Z : yes !! ಅದನ್ನ ಇನ್ನೂ ಹೀಗೆ ಇಟ್ಟುಕೊಂಡಿದ್ದೇವೆ ಉಡದೇ....ಅಣ್ಣನ ಹುಟ್ಟುಹಬ್ಬ ಜುಲೈ ಐದನೇ ತಾರೀಖು...ಆವತ್ತು ಉಡೋಣ ಅಂತ sketch ಹಾಕ್ತಿದೀನಿ.


ನಾನು : lets finalise the deal !


Z : ok. deal.





ನಾನು : Last but not the least, we would want you thank for everything you have done. ಇಲ್ಲಿ ಕೆಲವು ಮುಖ್ಯ ವಿಚಾರಗಳನ್ನು ಮಾತ್ರ ಹೆಸರಿಸಿದ್ದೇವೆ...ಮಿಕ್ಕಿದ್ದಕ್ಕೆಲ್ಲ ನಾವು ಕೃತಜ್ಞರಲ್ಲ ಅಂತ ಅಲ್ಲ....ಹೇಳಿದ್ವಲ್ಲ... we cant thank you enough !!!


ಅಣ್ಣಾ....thank you soooooooooooooooooo much for :


1. ಬೆಂಗಳೂರು ಮಂಗಳೂರು ವಿಮಾನ ಆರಂಭವಾದಾಗ (1986) airport ನಲ್ಲಿ ನಾನು ವಿಪರೀತ ಅಳುತ್ತಿದ್ದಾಗ ಅರ್ಧ ಕಿಲೋ ಓಣದ್ರಾಕ್ಷಿ ತಂದುಕೊಟ್ಟು (ಅದೊಂದರಿಂದಲೇ ನನ್ನ ಅಳು ಬೇಜಾರು ಎಲ್ಲಾ ನೀಗೋದು...ಈವತ್ತಿಗೂ )ನನ್ನನ್ನು ಶಾಂತ ರೀತಿಯಲ್ಲಿ ಸಮಾಧಾನ ಪಡಿಸಿದ್ದಕ್ಕೆ.


2. ನಾಲ್ಕು ಬೇರೆ ಬೇರೆ flavour icecream ಒಟ್ಟಿಗೆ ತಿನ್ನಬೇಕೆಂದು ನಾನು ಗಲಾಟೆ ಮಾಡಿದಾಗ ನಾಲ್ಕು cone ice cream ಒಟ್ಟಿಗೆ ಕೈಲಿ ಹಿಡಿದು ತಿನ್ನಿಸಿದ್ದಕ್ಕೆ.


3. ನಾನು ಕೇಳಿದ ಪುಸ್ತಕಗಳನ್ನೆಲ್ಲಾ ಮರುಮಾತಾಡದೇ ಕೊಡಿಸಿದ್ದಕ್ಕೆ.


4. ನಾನು ವಿಜ್ಞಾನ ನೇ ಓದೋದು ಅಂದಾಗ ಎಲ್ಲರಂತೆ ಬಲವಂತ ಪಡಿಸದೇ ನನ್ನ ಜೊತೆ ನಿಂತಿದ್ದಕ್ಕೆ.


5. ನಾನು ಕೇಳೋಕೆ ಮುಂಚೆಯೇ ರಸಗುಲ್ಲಾ...ಕೇಸರೀಭಾತ್ ಮುಂತಾದ ಸ್ವೀಟುಗಳನ್ನು ತಂದುಕೊಡುತ್ತಿರುವುದಕ್ಕೆ.


6. ನೀವು free ಆಗಿರುವ ಸಂಡೆಗಳಂದು ನನಗಾಗಿ ವಿದ್ಯಾರ್ಥಿ ಭವನ್ ದೋಸೆ ತರೋದಕ್ಕೆ !


7. ನಾನು ಯಾವುದೇ lecture, seminar, field work, presentation, competition , exam ಗಳಿಗೆ ಹೋಗಬೇಕಾದರೂ ನಿಮ್ಮ busy schedule ನಲ್ಲಿ ಜಾಗ ಮಾಡೀಕೊಂಡು ನನ್ನನ್ನ pick up ಮತ್ತೆ drop ಮಾಡೋದಕ್ಕೆ !ಎಂತದ್ದೇ ಹೊತ್ತಾದರೂ !!!
ನಮಗೆ ಗೊತ್ತು...ನಿಮ್ಗೆ US culture ಥರ " happy father's day " ಅಂತೆಲ್ಲ wish ಮಾಡೋದು ಇಷ್ಟ ಇಲ್ಲ ಅಂತ... but...this is an opportunity for us to remember, cherish and thank you for all that you have done to us !


thanks dad...words fall short to say anything more !!!!!!!

4 comments:

ಅಂತರ್ವಾಣಿ said...

chennaagide ma....

Unknown said...

It is a good writeup, every line i remembered my father.

Padma

ಶ್ರೀನಿಧಿ.ಡಿ.ಎಸ್ said...

touchy! very nice..

PaLa said...

>>ನಾವು ನಮ್ಮ ತಂದೆ ನ ಅಣ್ಣ ಅಂತ ನೇ ಕರಿಯೋದು
ನಮ್ಮ ದೊಡ್ಡಮ್ಮನ ಮನೇಲೂ ಅಷ್ಟೆ ಅಪ್ಪಂಗೆ ಅಣ್ಣಾ ಅಂತಾ ಕರಿಯೋದು, ನಾವು ಅಪ್ಪಯ್ಯ ಅಂತ :)

ಸೂಪರ್ರಾಗಿದೆ ಫೋಟೋ, ಅನಲಾಗ್ ಎಸ್.ಎಲ್.ಆರ್.ನಲ್ಲಿ ತೆಗೆದ ಹಾಗೆ ಇದೆ

>>ಹದಿನೈದೇ ದಿನದಲ್ಲಿ ಮೇಲೆದ್ದು ಮುಳುಗುತ್ತಿದ್ದ ನಮ್ಮ ಸಂಸಾರ ಮತ್ತು ಕಂಪನಿಯನ್ನ ಮೇಲಕ್ಕೆತ್ತಲು ಹಗಲೂ ರಾತ್ರಿ ದುಡಿಯುತ್ತಾ ಇದ್ದಾರೆ. .....ಯಾರೊಬ್ಬರ ಬಳಿಯೂ ಕೈಚಾಚದೇ !
ನಿಜವಾಗ್ಲು ಪುಣ್ಯವಂತರು ನೀವು, ನನ್ನ ಕಡೆಯಿಂದ ನಿಮ್ಮ ತಂದೆಯ will powerಗೆ ವಂದನೆಗಳು

>>ಆಕಾಶ ಭೂಮಿಮೇಲಿದೆಯೋ
:)

>>ಒಣದ್ರಾಕ್ಷಿ
ಚಿಕ್ಕ ಮಕ್ಳಿಗೆ ಹಲ್ಲು ಬರೋ ಟೈಮಲ್ಲಿ, ಬೆರಳು ಬಾಯಿಗೆ ಹಾಕ್ಬಾರ್ದು ಅಂತ ಬಟ್ಟೆಲಿ ಒಣ ದ್ರಾಕ್ಷಿ ಹಾಕಿ ಚೀಪೋಕೆ ಕೊಡ್ತಾರೆ :)

>>ವಿದ್ಯಾರ್ಥಿ ಭವನ್ ದೋಸೆ ತರೋದಕ್ಕೆ
ನಮ್ಮೂರಿದು "ವಿದ್ಯಾರ್ಥಿ ಭವನ್"

ತುಂಬಾ ಖುಷಿಯಾಯ್ತು.. ನಿಮ್ಮ ತಂದೆಯ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದ..

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...