Sunday, June 29, 2008

Art of living ಆಶ್ರಮದಲ್ಲಿ ಒಂದು ದಿನ......

ನಾನು : Z...

Z : ಹೇಳಮ್ಮ....ವ್ಹಾಟ್ ಸಮಾಚಾರ ?

ನಾನು : ಏನಿಲ್ಲ...ನಿಂಗೊಂದ್ ವಿಷಯ ಹೇಳೊದನ್ನ ಮರೆತುಹೋಗಿದ್ದೆ...ಅದೇನಪ್ಪ ಅಂದ್ರೆ....ನಾವೆಲ್ಲ [ಅಣ್ಣ, ಅಮ್ಮ, ನನ್ನ ತಂಗಿ, ಅತ್ತೆ [ಸೋದರತ್ತೆ] ಮತ್ತು ಅವರ ಮಕ್ಕಳು ಮತ್ತೆ ನಾನು] ಮೇ ಒಂಭತ್ತನೇ ತಾರೀಖು art of living ಆಶ್ರಮಕ್ಕೆ ಹೋಗಿದ್ವಿ.

Z : ಮೇ 9th ಹೋಗಿದ್ದರ ಬಗ್ಗೆ ಇವತ್ತು ಹೇಳ್ತಿದ್ಯ ? ಹೋಪ್ಲೆ...

ನಾನು: ಶ್ !!!!!!!! ಶಾಂತಿ. ನಂಗೆಲ್ಲಿ ಟೈಮ್ ಇತ್ತು ಆಗ ? ಈಗ ಟೈಮ್ ಇದೆ, ಹೇಳ್ತಿನಿ, ಕೇಳಿಸಿಕೊಳ್ಳುತ್ತೀಯೋ ಇಲ್ಲವೊ ?

Z : ಕೇಳೊಲ್ಲ ಅಂದ್ರೂ ನೀನ್ ಬಿಡಲ್ವಲ್ಲ....ಆಯ್ತು ಶುರು ಹಚ್ಕೋ.

ನಾನು : ಮೇ ಒಂಭತ್ತನೇ ತಾರೀಖು election ಇತ್ತು. ನಾನಂತು vote ಮಾಡಲೇಬೇಕು ಅಂತ decide ಮಾಡಿ voters ID ನೂ ಮಾಡ್ಸ್ಕೊಂಡಿದ್ದೆ....queue ನಲ್ಲಿ ನಿಂತು ! ಅಮ್ಮ ವೋಟ್ ಮಾಡಲು ಸಾರಸಗಟಾಗಿ ನಿರಾಕರಿಸಿದರು. ಅಣ್ಣ...as usual in his ಯೋಚನಾ ಲಹರಿ. ನಾನಂತು ಹೇಳೇಬಿಟ್ಟೆ.....vote ಮಾಡದೇ ಆಮೇಲೆ ಸರ್ಕಾರ ಸರಿಗಿಲ್ಲ ಅಂತ ಬೈಯ್ಯದು ತಪ್ಪು ! we have to choose our leader. Its our duty. We have no right to rebuke when we have not exercised our powers. I understand the system is totally corrupt. But the change should begin from us only !

ಅಮ್ಮ ಆಕಳಿಸಿದರು. ಅಣ್ಣ ಕೇಳಿಸಿಕೊಂಡಿರೋದಿಲ್ಲ ಅಂತ ನನಗೆ ಮೊದಲೇ ಗೊತ್ತಿತ್ತು. ಚಪ್ಪಲಿ ಹಾಕೊಂಡು ಹೊರಟೇಬಿಟ್ಟೆ ವೋಟ್ ಮಾಡಲು.

Z: very good. lecture ನಂಗೂ ಬೋರ್ ಆಯ್ತು...but still it was nice.

ನಾನು : ಛೆ ! ಎಲ್ಲರೂ ಹೀಗೆ ಆಗೋದ್ರು. ಸರಿ ಮತಗಟ್ಟೆಗೆ ಹೋಗಿ, queue ನಲ್ಲಿ ನಿಂತು ಮತ ಚಲಾಯಿಸಿ ಬಂದೆ. ವಿಷಾದಕರ ಸಂಗತಿ ಏನಪ್ಪ ಅಂದ್ರೆ...ಅವರು ink ಬಳಿತಾರಲ್ಲ ಕೈಗೆ...ಆ ink pot photo ತೆಗಿಯಕ್ಕಾಗ್ಲಿಲ್ಲ .....orange colour ink pot....ಎಷ್ಟ್ ಚೆನಾಗಿತ್ತು ಗೊತ್ತಾ..... It was just so cute....enclosure ಒಂದಿತ್ತು ಅದಕ್ಕೆ.....ಹೊಟ್ಟೆ ಉರಿತಿದೆ photo ತೆಗೆಯಕ್ಕಾಗ್ಲಿಲ್ಲವಲ್ಲ ಅಂತ !!

Z : ಐದೊರ್ಷ ಬಿಟ್ಟಮೇಲೆ ಮತ್ತೆ ತೆಗಿವಂತೆ...don't lose hope !

ನಾನು : hmmm.... vote ಹಾಕಿ ಮನೆಗೆ ಬಂದು ನೋಡಿದರೆ scene totally change !! lazy goose ಗಳ ಥರ ಇದ್ದ ನಮ್ಮ ಮನೆಯವರು busy bee ಆಗೋಗಿದ್ರು all of a sudden !! ಅಣ್ಣ art of living ಆಶ್ರಮದ electrical maintenance job ತಗೊಂಡು ತಿಂಗಳುಗಳೇ ಕಳೆದಿದ್ದವು. ಆವತ್ತು office ಗೆ ರಜೆ ಇತ್ತು. ಅಣ್ಣ ಇಂತಹ ದಿನಗಳಂದು site inspection ಗೆ ಹೋಗವುದು ಅಭ್ಯಾಸ. ಅಮ್ಮ ನಾವು ಬರ್ತಿವಿ ಆಶ್ರಮಕ್ಕೆ ಅಂದರಂತೆ. ಅಣ್ಣ ಥಟ್ಟನೆ ಒಪ್ಪಿದ್ದಾರೆ. ಅಮ್ಮ ನಮ್ಮ ಸೋದರತ್ತೆಗೆ ಫೋನಿಸಿದ್ದಾರೆ. ಅವರು ನಿಂತಕಾಲಲ್ಲಿ ಬರಲು ಒಪ್ಪಿಗೆ ಸೂಚಿಸಿದ್ದಾರೆ. ಆದರಿಂದ ಮನೆ ಇಷ್ಟು ಬುಸ್ಯಿ ಆಗಿದೆ ಅಂತ ತಂಗಿ headlines ಉಸುರಿದಳು. ನಾನು ಸರಿ...outing ಆಯ್ತು ಅಂತ ಹು ಎಂದೆ.

ಇಪ್ಪತ್ತು ನಿಮಿಷದಲ್ಲಿ ಮನೆ ಬಿಟ್ಟೆವು. ಅತ್ತೆಯನ್ನು ಮತ್ತು ನನ್ನಿಬ್ಬರು ಕಸಿನ್ನುಗಳನ್ನು ದಾರಿಯಲ್ಲಿ pick up ಮಾಡಿಕೊಂಡು ಕಾರ್ ಕನಕಪುರ ರಸ್ತೆಯತ್ತ ಧಾವಿಸಿತು. ಬನಶಂಕರಿ ಬಸ್ ನಿಲ್ದಾಣ ಕಾಮಾಗಿದ್ದನ್ನು ನಮ್ಮಮ್ಮ ಹುಬ್ಬೇರಿಸಿ ನೋಡಿದರು. ಬನಶಂಕರಿ ದೇವಿಗೆ eyes right ಮಾಡಿ ಒಂದು salute ಹೊಡೆದು ಹೊರಟೆವು. ಮೆಟ್ರೋ ಆಯ್ತು...ಖೋಡೇಯ್ಸ್ factory ಆಯ್ತು...engineering collegeಗಳ ಹೆಬ್ಬಾಗಿಲುಗಳ ದರ್ಶನವೂ ಆಯ್ತು. ಒಂದು ಘಂಟೆಯಾದ ನಂತರ welcome to art of living ಅನ್ನುವ ಫಲಕ ನಮ್ಮನ್ನು ಸ್ವಾಗತಿಸಿತು. ಅಷ್ಟರಲ್ಲಿ ನಾನು ಕಿಟಕಿಯಿಂದ ಹೊರಗೆ ಇಣುಕಿ ಮೋಡಗಳ ಮತ್ತು ಪ್ರಾಣಿಗಳ ಫೋಟೋ ತೆಗೆಯಲು ಹೋಗಿ ಅಮ್ಮ ಮತ್ತು ಅಣ್ಣನ ಕೈಲಿ ಹತ್ತಿಪ್ಪತ್ತು ಸರ್ತಿ ಬೈಸಿಕೊಂಡಿದ್ದೆ.

Z : correct ಆಗಿ ಮಾಡಿದ್ದಾರೆ. ನೀನು 100 metres ಗೂ " ಅಣ್ಣ ನಿಲ್ಸಿ...ಹಸು ಫೋಟೊ...ಅಣ್ಣಾ ನಿಲ್ಸಿ ಕುರಿ ಫೋಟೊ ಅಂತ ಅಂತಿದ್ರೆ ಹಿಂದೆ ಇರೋ ಗಾಡಿಗಳು ಬಂದು ಗುದ್ದಲ್ವಾ ? ನಿಮ್ಮಂಥವರೆಲ್ಲ ನಡ್ಕೊಂಡು ಓಡಾಡ್ಬೇಕು. ಇನ್ನು ಮೋಡ...ಸದಾ ಕಾಲ ನೋಡ್ತಾನೆ ಇದ್ರೆ ಬಗ್ಗಿ ಬಗ್ಗಿ...ಇಣುಕಿ ಇಣುಕಿ...ಹೇಗೆ ಡ್ರೈವ್ ಮಾಡ್ತಾರೆ ಅಣ್ಣ ? i support him.

ನಾನು : ಮಾತಾಡ್ಬೇಡಾ !! ನಿಂಗೇನ್ ಗೊತ್ತು ಫೋಟೋ ತೆಗಿಯದು ಎಷ್ಟ್ ಮಜಾ ಅಂತ...ಕುರಿಗಳ running race ನಡೀತಿತ್ತು. video ತೆಗಿಯಣಾ ಅಂದ್ರೆ ಆಗ್ಲಿಲ್ಲ....i felt so bad !!! ನೀನ್ ಬೇರೆ !! ಹೋಗೆ, aesthetic sense ಇಲ್ಲ ನಿನ್ಗೆ.

Z : ಸರಿ. ಆಮೇಲೆ ?

ನಾನು : ಆಶ್ರಮಕ್ಕೆ ಬಂದ್ವಿ. ಅಲ್ಲೊಂದು ದೊಡ್ಡ ಮಂಟಪವಿದೆ...ವಿಶಾಲಾಕ್ಷಿ ಮಂಟಪ ಅಂತ ಅದರ ಹೆಸರು. ಒಳಗೆ ನಮಗೆ ಹೋಗಲಾಗಲಿಲ್ಲ...ಯಾಕಂದ್ರೆ ಅಲ್ಲಿ ಪ್ರವಚನ ನಡೀತಿತ್ತು. ಸ್ವಾಮೀಜಿಯವರದಲ್ಲ...ಮತ್ತಿನ್ಯಾರದ್ದೋ. ನಾವು ಕೇಳಲೂ ಹೋಗಲಿಲ್ಲ. ಬರೀ ಪ್ರಕೃತಿ ಸೌಂದರ್ಯ ನ ಆಸ್ವಾದನೆ ಮಾಡ್ತಿದ್ವಿ.ಶಾಂತಿ ನಮಗೆ ಸಿಟಿಯಲ್ಲಿ ಸಿಗದ ವಸ್ತು. ಇಲ್ಲಿ ಭರಪೂರ ಶಾಂತಿ ! ಸೌಂದರ್ಯ ಪಷ್ಚಿಮ ಘಟ್ಟದ ಮುಂದೆ ಸೊನ್ನೆಯಾದರೂ ಕಣ್ಣಿಗೆ ಇಂಪುಕೊಡಲು ಏನೂ ಕಮ್ಮಿ ಇಲ್ಲ. ನಾನಂತೂ ಬರೀ ಫೋಟೋ ಕ್ಲಿಕ್ಕಿಸುತ್ತಲೇ ಇದ್ದೆ. ನಮ್ಮಂಥಾ city ಜನಕ್ಕೆ concrete jungle ಬಿಟ್ಟು one small patch of greenery ಕಾಣಿಸಿದರೆ ಅದೇನೋ ಆನಂದ. ನಾವು ಹೊರಗಡೆ ಜಾಗಗಳಿಗೆ ಹಲವಾರು ಕಾರಣಗಳಿಂದ ಹೋಗಲಾಗುವುದಿಲ್ಲ. western ghats ಅಂತಹ ಜಾಗಗಳನ್ನು ನೋಡಿ ಬಂದವರು ನಿಜ್ವಾಗ್ಲು lucky. ನನಗೆ ಯೋಗವಿಲ್ಲ ಎಂದು ನಾನೆಷ್ಟು ಸಲ ನನ್ನನ್ನೇ ನಾನು ಹಳಿದುಕೊಂಡಿದ್ದೇನೋ !! ದರಿದ್ರ city life...ಏನನ್ನೂ ಮಾಡಲು ಬಿಡುವುದಿಲ್ಲ ಇದು. ಈ city life octopus ಥರ ನಮ್ಮನ್ನು ಬಿಗಿಹಿಡಿದಿರುತ್ತದೆ. ಜಂಜಾಟಗಳನ್ನು ಬಿಡಿಸಿಕೊಳ್ಳುವುಸು ಕಷ್ಟ. ನಮ್ಮಂಥವರಿಗೆ ಅಸಾಧ್ಯ. ಅಣ್ಣಂಗೆ time ಇದ್ದಾಗ ನಮಗೆ exam, ನಮಗೆ free time ಇದ್ದಾಗ ಅಣ್ಣನಿಗೆ ಕೆಲ್ಸ. ಹೀಗೆ...ಆದ್ದರಿಂದ ಬರೀ in and around city ಲೇ ಇರೋ ಜಾಗಗಳನ್ನ ನೋಡುವ ಹಾಗಾಗಿದೆ.

Z : very true...ಆಮೇಲೆ ?

ನಾನು : ಆಶ್ರಮವೆಲ್ಲ ತಿರುಗಿ ಅಲೆದು ಸುಸ್ತಾದ ಮೇಲೆ ಊಟ ಅಲ್ಲೇ ಲಭ್ಯವಿದೆ ಎಂದು ತಿಳಿದುಬಂತು. ಊಟದ ಶಾಲೆಗೆ ಹೋದ್ವಿ. ಅಲ್ಲಿ ಮಕ್ಕಳಿಗೆ summer camp ನಡೀತಿತ್ತು ಅನ್ಸತ್ತೆ...ಅವು ಊಟ ಬಡಿಸಲು ಕಲಿಯುತ್ತಿದ್ದವು. ನಮಗೆಲ್ಲರಿಗೂ ಮಕ್ಕಳೇ ಊಟ ಬಡಿಸಿದ್ದು. ನಮ್ಮಮ್ಮ ಮತ್ತು ಅತ್ತೆ " ನೋಡಿ ಕಲಿತುಕೊಳ್ಳಿರಿ " ಅಂದರು. ನಾವು ಮಕ್ಕಳು ಒಂದು ದಟ್ಟ ದರಿದ್ರ look ಕೊಟ್ಟೆವು. ಸುಮ್ಮನಾದರು. ನಮಗೆ ಮಾಡಲು ಬರುವುದಿಲ್ಲ ಅಂತ ಅಲ್ಲ...ಅವರ ತಾತನ ಥರ ಮಾಡಬಲ್ಲೆವು. ಆದರೆ ಎಲ್ಲೆಲ್ಲೋ talent exhibit ಮಾಡಿ waste ಮಾಡ್ಕೋಬಾರ್ದು ಅನ್ನೋದು ನಮ್ಮ principle.

Z : ಆಹಾ....ಉದ್ಧಾರವಾಗಿ ಹೋಯ್ತು ಜನ್ಮ !

ನಾನು : ಅಲ್ವಾ ? ಇಂತಹಾ principle ಇಂದಲೇ ಜನ್ಮ ಉದ್ಧಾರವಾಗೋದು ತಿಳ್ಕೋ. ಊಟದ ಫೋಟೋ ನೋಡು. ನೋಡಿ ಹೊಟ್ಟೆ ಉರ್ಕೋ...ನಾನ್ permission ಕೊಡ್ತಿನಿ ! ಬೈಯಲ್ಲ !! :P


ಸಖತಾಗಿತ್ತು ಊಟ...ಲಗಾಯಿಸಿದೆ. ಉಪ್ಪಿಟ್ಟಿಗೆ ನಿಂಬೆಹಣ್ಣು ಮುಂದಿತ್ತು...ಅದ್ಭುತವಾಗಿತ್ತು. ಕೋಸಿನ ಪಲ್ಯ, ಕಾಳಿನ ಹುಳಿ...ಅನ್ನ, ತಿಳಿಮಜ್ಜಿಗೆ...ಒಂದನ್ನು ಬಿಡದೇ ತಿಂದೆ. ಊಟವಾದ ಮೇಲೆ ಅಲ್ಲಿಂದ ಹೊರಡಲನುವಾದೆವು. ಅಣ್ಣ site inspection ಅಂದರು. ನಾವು ಮತ್ತೊಂದು ದರಿದ್ರ ಲುಕ್ ಕೊಟ್ಟು ಅವರ ಆಸೆಗೆ ನೀರೆರೆಚಿ ವಾಪಸ್ ಕರೆದುಕೊಂಡುಬಂದೆವು.

ಅಲ್ಲಿಂದ ಸಲ್ಪ ಮುಂದೆಯೇ ತ್ರಿಮೂರ್ತಿ ದೇವಸ್ಥಾನ ಅಂತ ಒಂದು ಜಾಗ ಇದೆ. ಬ್ರಹ್ಮ ವಿಷ್ಣು ಮಹೇಶ್ವರರ ಚಿತ್ರ ಹುಡುಕಬೇಡ ...ಇಲ್ಲಿರೋರು ಕೃಷ್ಣ, ಗಣಪ ಮತ್ತು ಹನುಮಂತ ! ಬಾತುಕೋಳಿಗಳಿದ್ದವು...ಫೋಟೋ ಕ್ಲಿಕ್ಕಿಸಿ ಮುಂದೆ ನಡೆದೆವು.

ಅಲ್ಲಿಂದ ಸುಮಾರು ದೂರ ಹೋದರೆ ವಿಶ್ರಾಂತಿ ಧಾಮ ಅಂತ ಇನ್ನೊಂದು ಜಾಗವಿದೆ. ಅಲ್ಲೊಂದು ದೊಡ್ಡ ಗಣಪತಿಯ ವಿಗ್ರಹವಿದೆ. ಕೆಳಗೆ ದೇವಾಲಯವೂ ಇದೆ. .ಅಲ್ಲಿಯೇ ಮುಂದೆ ಕೆಲವು ಪಕ್ಷಿ ಪ್ರಾಣಿಗಳನ್ನು ಬಂಧಿಸಿಟ್ಟಿದ್ದಾರೆ. ಬೇರೆಯವರಿಗೆ ಸಂತೋಷವಾಗಬಹುದು...ಆದ್ರೆ ನನಗೆ ಬೇಜಾರಾಯ್ತು. naturally ಬದುಕಲು ಬಿಡದೇ ಈ ತರಹ ಪಂಜರದಲ್ಲಿ ಬಂಧಿಸಿಟ್ಟು ಎಷ್ಟು ಚೆನ್ನಾಗಿ ನೋಡಿಕೊಂಡರೇನು ? ನನಗೆ ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರ ಕವನವೊಂದು ನೆನಪಾಯಿತು

ನಿಂತ ನೀರ ಕಲಕಬೇಡಿ ಕಲ್ಲುಗಳೆ
ಹೂದಳಗಳ ಇರಿಯಬೇಡಿ ಮುಳ್ಳುಗಳೇ
ಏನಿವೆಯೋ ನೋವು ಅವಕೆ ತಮ್ಮದೇ
ಬಾಳಲು ಬಿಡಿ ತಮ್ಮಷ್ಟಕೆ ಸುಮ್ಮನೆ

ಪಂಜರದಲಿ ನೂಕಬಹುದೇ ಗಿಳಿಯನು ?
ನೂಕಿ ಸುರಿದರಾಯ್ತೆ ರಾಶಿ ಕಾಳನು ?
ತಿನ್ನುವುದೇ ಗುರಿಯೆ ಹೇಳಿ ಬಾಳಿಗೆ ?
ಪರರ ಬಾಳು ಬಲಿಯೆ ನಮ್ಮ ಲೀಲೆಗೆ ?

Z : ನಿಜ....

ನಾನು : ಸರಿ ಅವೆಲ್ಲದುದರ ವೀಡಿಯೋಗಳನ್ನು ಚಿತ್ರೀಕರಿಸಿ...ಬಾತುಕೋಳಿಯ ವಿಡಿಯೋ ತೆಗೆಯುತ್ತಿದ್ದಾಗ ಅದು ಬಂದು ನನ್ನ ಪಾದಗಳನ್ನು ಕಚ್ಚಿ, ನಾನು ಕೆಳಗೆ ಬಿದ್ದು.. ನನಗೆ ಗಾಯವಾಗಿ, ಅಮ್ಮ ನೀನೇನು ಮಾಡಿದೆ ಅಂತ ರೇಗಿ, ನಾನೇನೂ ಮಾಡ್ಲಿಲ್ಲ...ದೂರದಿಂದ ವಿಡಿಯೋ ತೆಗಿತಿದ್ದೆ....ಅದು ಹಾಗೇ ಹತ್ತಿರ ಬಂತು. ನಾನು ಹಾಗೇ ಹಿಂದೆ ಹೋದೆ...ಅದೇಕೋ sudden ಆಗಿ attack ಮಾಡಿತು ಎಂದು ಅತ್ತು ....ಇವೇ ಮುಂತಾದ ಘಟನೆಗಳು ಘಟಿಸಿದ ನಂತರ ಪಕ್ಷಿಗಳ psychology ನನಗೆ intriguing ಅನ್ನಿಸಿ, ಗುರುಗಳ ಜೊತೆಗೆ ಇದರ ಬಗ್ಗೆ ಚರ್ಚೆ ಮಾಡಲೇಬೇಕು ಎಂದು ನಿರ್ಧರಿಸಿದ ಮೇಲೆ ಇನ್ನೊಂದಷ್ಟು ಫೋಟೋಗಳನ್ನು ತೆಗೆದು ಅಲ್ಲಿಂದ ಹೊರಟೆವು. ಸರಿ...ಸಮಯ ನಾಲ್ಕಾಗಿತ್ತು. ದಾರಿ ಮಧ್ಯದಲ್ಲಿ ಅಣ್ಣ ಏನೋ mood ನಲ್ಲಿ " i will vote" ಎಂದರು ! ಅಮ್ಮ ನಾನು ಮಾಡಲ್ಲ ಅಂದರು. ಅಣ್ಣ ಮಾಡು ಮಾಡು...ನೋಡು ನೀನು ವೋಟ್ ಮಾಡದಿದ್ದರೆ ಬೆರೆಯವರು ನಕಲಿ ಮತ ಹಾಕ್ತಾರೆ, ಅನ್ಯಾಯ ಆಗತ್ತೆ ಅಂತ ಅಂದರು. ಅಮ್ಮ 600 ಸೆಕೆಂಡುಗಳು ಯೋಚನೆ ಮಾಡಿ ಸರಿ ವೋಟ್ ಮಾಡುವ ಅಂದರು. ನಾಲ್ಕು ನಲವತ್ತಕ್ಕೆ ನಮ್ಮನ್ನು ಮನೆಯಲ್ಲಿ ಉದುರಿಸಿ ನಾಲ್ಕು ಮುಕ್ಕಾಲಿಗೆ ಹೋದರು ಮತಗಟ್ಟೆಗೆ. ಏನ್ ಸಾರ್ ಇಷ್ಟೊತ್ತಿಗೆ ಬರ್ತಿದ್ದೀರಿ ...ಇನ್ನೆರಡು ನಿಮಿಷಕ್ಕೆ close ಮಾಡುವುದರಲ್ಲಿದ್ದೆವು ಇವೇ ಮುಂತಾದ ಮಾತುಗಳನ್ನು ಕೇಳಿಸಿಕೊಂಡು ಮತ ಚಲಾಯಿಸಿ ಬಂದರು. ಬಸವನಗುಡಿ ಕ್ಷೇತ್ರ ಇವರಿಬ್ಬರ ಮತ ಪಡೆದು ಪಾವನವಾಯ್ತು.

Z : ಹೆ ಹೆಹೆಹ್...ಬಾತುಕೋಳಿ ಎಪಿಸೋಡ್ ನೈಸ್ !

ನಾನು : ಆಹಾ...ನಿನ್ನಂಥವರನ್ನ ನೋಡಿಯೇ equation ಮಾಡಿದ್ದಾರೆ ದೊಡ್ದವರು.."ಬೆಕ್ಕಿಗೆ ಚೆಲ್ಲಾಟ = ಇಲಿಗೆ ಪ್ರಾಣ ಸಂಕಟ " ಅಂತ !!

Z : sorry ! Anyways...that was a nice outing !!

ನಾನು : And refreshing too... ನನಗಂತೂ ಸಾಕಾಗಿತ್ತು...ಅದೇ ಕಾಲೇಜಿನ ಮೇಜು....ಅದೇ ಪಾಠ, ಅದೇ lab u !!! ಬೇಕು ಇಂಥವು ಒಮ್ಮೊಮ್ಮೆ ! ನಾನು ಕ್ಲಿಕ್ಕಿಸಿದ ಫೋಟೋಗಳ ಸ್ಲೈಡ್ ಶೋ ನೋಡು.





ಸರಿ...ಹೊರ್ಟೆ...ಕೆಲ್ಸ ಇದೆ.

line on hold.

7 comments:

ಅಂತರ್ವಾಣಿ said...

AOL aashrama outing chennagi varNisiddeeya...

Slide shows + points... nice pics :)

SHREE (ಶ್ರೀ) said...

ಇಷ್ಟೇನ ಆರ್ಟ್ ಆಫ್ ಲಿವಿಂಗ್ ಅಂದ್ರೆ...? ಇನ್ನೇನೂ ಇಲ್ವ ಅಲ್ಲಿ?

Lakshmi S said...

ನಮಸ್ಕಾರ ಶ್ರೀಯವರಿಗೆ.

ಆಟ್ ಆಫ್ ಲಿವಿಂಗ್ ಆಶ್ರಮ ಮಾತ್ರ "ಇಷ್ಟೇ" ! ಆರ್ಟ್ ಆಫ್ ಲಿವಿಂಗ್ ಎಷ್ಟೋ/ಏನೋ ಗೊತ್ತಿಲ್ಲ :). ಅಲ್ಲಿ ವಿಶಾಲಾಕ್ಷಿ ಮಂಟಪದ ಒಳಗೆ ನಾವು ಹೋಗಲು ಆಗಲಿಲ್ಲವಾದ್ದರಿಂದ ಒಳಗೆ ಇನ್ನೇನಿನದೆ ಎಂದು ನಮಗೆ ತಿಳಿಯಲಾರದಾಯಿತು. ಇನ್ನೊಮ್ಮೆ ಹೋದಾಗ ಇದರ ಬಗ್ಗೆ ಮತ್ತೆ ಬ್ಲಾಗಿಸುವೆ.

ಸುಶ್ರುತ ದೊಡ್ಡೇರಿ said...

ಆಶ್ರಮದ ಬಗ್ಗೆ ಬರ್ದಿರ್ತೀರಾ ಅಂತ ನೋಡಿದ್ರೆ ದಾರೀಲಿ ಕಂಡಿದ್ದು, ಮಾತಾಡಿದ್ನೆಲ್ಲ ಬರ್ದಿದೀರಲ್ರೀ.. anyways, nice photos.

ಅಂದಹಾಗೇ ನಿಮ್ಗೆ ಕಚ್ಚಿದ್ ಬಾತುಕೋಳಿ ಯಾವ್ದು? ಆ ಕಲ್ಲಿಂದೋ, ಮೋಡದ್ದೋ ಅಥ್ವಾ...? ;)

Lakshmi S said...

ನಮಸ್ಕಾರ ಸುಶ್ರುತ !

ಆಶ್ರಮದಲ್ಲಿ ನಾವು ಹೋದ ಸಮಯದಲ್ಲಿ ಪ್ರವಚನವೊಂದು ನಡಿತಿತ್ತು. ಆದರೆ ಬಾಗಿಲು ಹಾಕಿದ್ರು...ಸೋ ಏನೂ ಕೇಳಲಾಗಲಿಲ್ಲ...ಅಲ್ಲಿ ನೋಡಿದ್ದುದರ ವರ್ಣನೆ ನನಗೆ ನಿಮ್ಮಷ್ಟು ಚೆನ್ನಗಿ ಮಾಡೋಕೆ ಬರೋಲ್ಲವಾದ್ದರಿಂದ ಫೋಟೋ ಗಳನ್ನು ಹಾಕಿದ್ದೇನೆ ಅಷ್ಟೆ !

ನನಗೆ ಕಚ್ಚಿದ ಬಾತುಕೋಳಿ ನಿಜ್ವಾದ್ದು ! ;-)

Srikanth - ಶ್ರೀಕಾಂತ said...

ಈ ಲೇಖನ ಓದಿದಮೇಲೆ ನನಗೊಂದು ಸೂಪರ್ ಜಾಗದ ನೆನಪಾಗ್ತಿದೆ. ಸುಮ್ನೆ ಯಾಕೆ ಅದೆಲ್ಲಾ ಹೇಳಿ ಹೊಟ್ಟೆ ಉರ್ಸೋದು ಅಂತ ಅದರ ಪ್ರಸ್ತಾಪ ಮಾಡ್ತಿಲ್ಲ.

Lakshmi S said...

@srikanth :

sari.

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...