Z : ನಾನು ಬರಬಾರದು ಅಂತ ನೇ ಇದ್ದೆ. head ruled ಗೆ ಈ ವಿಷಯ ಗೊತ್ತಾಗಿ ಅವಳು ಬೈಯ್ಯುವುದನ್ನು ನೆನೆಸಿಕೊಂಡು ಥರ ಥರ ನಡುಗಿದೆ. ಅದರೆ...ನೆನ್ನೆ ಡೈನೊ ಮತ್ತೆ head ruled ಮಾತಾಡುತ್ತಿದ್ದಾಗ, ಬರೀ ಅವಳಲ್ಲ, ನಾನೂ ಕೂಡ disturb ಆಗಿದ್ದೀನಿ ಅಂತ ಡೈನೋ ಅದು ಹೇಗೋ ಪತ್ತೆ ಹಚ್ಚಿಬಿಟ್ಟಳು !! head ruled ge exam tension...disturb ಆಗಿರುವುದರಲ್ಲಿ ಆಶ್ಚರ್ಯ ಇರ್ಲಿಲ್ಲ....ಆದರೆ ನಾನು ಒಂದು ತಪ್ಪು ಮಾಡಿದ್ದೇನೆ... ಏಳು ವರ್ಷದ ಹಿಂದೆ ಮಾಡಿದ ತಪ್ಪು...ಅದೇ ತಪ್ಪನ್ನ ಮತ್ತೆ ಮಾಡಿದ್ದೇನೆ. ಈಗ ತಪ್ಪಿನ ಅರಿವಾಗಿದೆ. ಯಾಕಂದರೆ ಹಿಂದೆ ಆದ ಹಾಗೆಯೇ ಈಗಲೂ ಆಗಿದೆ. ಆದರೆ ಈ ಎರಡೂ ಘಟನೆಗೆಳು ನೆನಪಿನ ಸುಂದರಕೊಳಕ್ಕೆ ಕಲ್ಲು ಹಾಕಿ ಮನಶ್ಶಾಂತಿ ಕದಡಿವೆ. ಅದಕ್ಕೆ disturb ಆಗಿದ್ದೇನೆ.
ದಯಮಾಡಿ ತಪ್ಪು ಏನೆಂದು ಯಾರೂ ಕೇಳಬೇಡಿ. ಉತ್ತರಿಸುವ ಪರಿಸ್ಥಿತಿಯಲ್ಲಿ ನಾನಿಲ್ಲ.
ಏಳು ವರ್ಷದ ಹಿಂದೆ head ruled ಬೈದು ಬುದ್ಧಿ ಕಲಿಸಿದ್ದಳು. ನನ್ನನ್ನು ಹೊರಗೆ ಬಿಡದೇ ಹತೋಟಿಯಲ್ಲಿಟ್ಟಿದ್ದಳು. ಈಗ ಒಮ್ಮೆ ಎಂದೋ ಕೊಟ್ಟ ಸ್ವತಂತ್ರ್ಯದ ಸದುಪಯೋಗ ಮಾಡಿಕೊಂಡಿಲ್ಲ ನಾನು ಅನ್ನೋ ಪಾಪ ಪ್ರಜ್ಞೆ ಕಾಡಲು ಶುರುವಾಗಿದೆ. ಅವಳು ಬೈದರೇನೆ ನನಗೆ ತೃಪ್ತಿ . june 22 ಬೇಗ ಆಗಲಿ !
ಸದ್ಯಕ್ಕೆ ನನಗೆ ಇದೊಂದು ಕವಿತೆಯ ನೆನಪಾಗುತ್ತಿದೆ. ಕವಿಯ ಹೆಸರಿನ ನೆನಪಿಲ್ಲ. ಪೂರ್ತಿ ಸಾಹಿತ್ಯವೂ ನೆನಪಾಗುತಿಲ್ಲ.
ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನೆನಪೇ
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆ ಏಕೆ ಮಧುರ ನೆನಪೇ ?
ಸತ್ತ ಭೂತವನೆತ್ತಿ ಹದ್ದಿನಂದದಿ ತಂದು
ಎನ್ನ ಮನದಂಗಳಕೆ ಹಾಕದಿರು ನೆನಪೇ
ಭವ್ಯ ಭವಿತವ್ಯಕ್ಕೆ ಮೊಗಮಾಡಿ ನಿಂದಿರುವೆ
ಬೆನ್ನಲ್ಲಿ ಇರಿಯದಿರು ಓ ಚೆನ್ನ ನೆನಪೇ
head ruled... ನನ್ನ ತಪ್ಪನ್ನ ನಾನು ಒಪ್ಪಿಕೊಳ್ಳಲು ಸಿದ್ಧಳಿದ್ದೇನೆ. ಶಿಕ್ಷೆಯನ್ನನುಭವಿಸಲೂ ತಯಾರಾಗಿದ್ದೇನೆ. ಸದ್ಯೋಜಾತನ ಆಣೆ.
ಜೀವನದೊಂದಿಗಿನ ನಮ್ಮ ಮಾತು lifetime ! ಇದರಲ್ಲಿ incoming -ಊ free outgoing -ಊ free !
ನನ್ನ ज़िंदगीಯೊಂದಿಗಿನ nonstop ಗುಸುಗುಸುವನ್ನು ಇಲ್ಲಿ ಬಿಚ್ಚಿಟ್ಟಿದ್ದೇನೆ.
Subscribe to:
Post Comments (Atom)
ಉತ್ತರಾಯಣ ೩
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ನಾನು : There is always a next time. Z : ಹೌದಾ ? ನಾನು : ಹೌದು. Z : ಪ್ರತೀ ಸಲವೂ ಹೀಗೆ ಆದರೆ ಗತಿಯೇನು ? ನಾನು : ಅದಕ್ಕೆ ನಿನ್ನ pessimistic ಅಂತ ಬೈಯ್ಯ...
-
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಬ್ಲಾಗಿನ ಹುಟ್ಟು ಹಬ್ಬ ಮತ್ತು ಹೊಸ ವರ್ಷ ಯಾವಾಗ್ಲು ಒಟ್ಟಿಗೆ ಬರತ್ತೆ. ಆದರೆ, ಮತ್ತೆ ಅದೇ flash back ಗೆ ಹೋಗಿ, ಅದೇ ...
6 comments:
tappu maadodu sahaja kaNree...tiddi nadeyodhu manuja kaNree... :-)
ತಪ್ಪು ಮಾಡದೋರ್ ಯಾರೌರೆ?
ತಪ್ಪೇ ಮಾಡದೋರ್ ಎಲ್ಲೌರೆ?
ಅಪ್ಪಿ ತಪ್ಪಿ ತಪ್ಪಾಗುತ್ತೆ....
ತಿದ್ಗೊಳಕ್ಕೆ ದಾರಿ ಐತೆ...
Lux.. :-)
sikkhaakonDyaa.. Human psychology na chennaaagi balle... adoo ninnantaa mugdara mansu tiLkoLOke jaasti time en bekilla..
Ni disturb aagoke na biDalla
[-( NO... NOO.......
Main hoon naa..
:) tappu sahajavaage naDiyutte.. aadre adakkaagi disturb aagodralli arthavilla...
samaadhaana maaDko.
aadashtu bega aa 'disturbance' tolagali :-)
mahaataayi exam time~nal yaake beke ninge ee disturbance..modlu horag baa idarinda..exm mugili aamele maataaDoNa adara bagge:-)
Post a Comment