Saturday, June 21, 2008

ऎ ज़िंदगी...यह लम्हा फ़िल्हाल जी लॆने दॆ.....

ನಾನು : 22 years of life on this earth. 16 years of schooling. 72 percent of 22 years gone.... in schooling, college life, graduate and post graduate education. ನೆನ್ನೆಗೆ ....ಮುಗಿತು! it got over Z ! It got over ! ನನಗೆ ನಂಬೋಕೆ ಆಗ್ತಿಲ್ಲ ! I still cant believe it !

Z : ಆಗತ್ತೆ ಹೀಗೆ.

ನಾನು : ನನಗಿನ್ನೂ ನೆನಪಿದೆ. ನರ್ಸರಿಯ ಬೀನಾ ಟೀಚರ್, ಪ್ರೈಮರಿ ಶಾಲೆಯ ಮೇರಿ ಟೀಚರ್, ಹೆಡ್ ಮೇಡಮ್ ಸರೋಜಮ್ಮ...ಪ್ರತಿಭಾ ಬಾಲ ಮಂದಿರದ ನನ್ನ favourite ಉಯ್ಯಾಲೆ ಮತ್ತು ಜಾರುಬಂಡೆ , ಜಯಮಾಲ ಟೀಚರ್ ನ ಅತ್ಯಪೂರ್ವ ಕನ್ನಡ ಪಾಠದ ಶೈಲಿ...ಇದನ್ನೆಲ್ಲವನ್ನು ನಾನು ಮತ್ತಷ್ಟು ಆನಂದಿಸಲಿಚ್ಛಿಸಿದ್ದೆ. ನೋಡು ನೋಡುತ್ತಿದ್ದ ಹಾಗೆ ನಮ್ಮ ಮನೆ ಬದಲಾಯಿತೆಂದು ನನ್ನ ಶಾಲೆಯೂ ಬದಲಾಯ್ತು. ಬೇರೊಂದು ಶಾಲೆಯಲ್ಲಿ middle school ಮುಗಿಸಿ little flower public school ನಲ್ಲಿ high school ಓದಲು ಸೇರಿದೆ. ನನ್ನ ಜೀವನದಲ್ಲಿ ಸ್ನೇಹಿತೆ ಎಂದು ನಾನು ಯಾರನ್ನಾದರೂ ನೆನಪಿಸಿಕೊಳ್ಳುತ್ತೇನೆ ಎಂದರೆ ಅದು ಒಬ್ಬಳೆ...ಸ್ಮಿತ. ಪ್ರಾಣಕ್ಕೆ ಪ್ರಾಣ ಕೊಡುವವರು ನಾವಿಬ್ಬರೂ...ಈಗ ಅವಳು ಮದುವೆಯಾಗಿ ಅಮೇರಿಕೆಯಲ್ಲಿ ಹಾಯಾಗಿದ್ದಾಳೆ . ಅವಳ ಜೀವನ ಸುಖವಾಗಿರಲಿ.

ನಾನವಳಿಂದ ಸಹಿಷ್ಣುತೆಯನ್ನ ಕಲಿತಿದ್ದೇನೆ. ತಾಯಿ bed ridden. ಅವಳೇ ಅಡುಗೆ, ತಿಂಡಿ ಮಾಡಿ, ಮನೆ ಕೆಲಸವನ್ನೂ ಮಾಡಿ ಶಾಲೆಗೆ ಬರುತ್ತಿದ್ದಳು...ದಿನಾ ! maths ನ ನೀರು ಕುಡಿದ ಹಾಗೆ ಮಾಡುತ್ತಿದ್ದಳು ! ನನಗೆ maths ಹೇಳಿಕೊಟ್ಟಿದ್ದೂ ಅವಳೇ ! ಅವಳು ನನಗೆ ಮಾಡಿದ ಸಹಾಯ, ನೀಡಿದ support, ಇಟ್ಟ ವಿಶ್ವಾಸಕ್ಕೆ ನಾನು ಚಿರಋಣಿ. high school ನಲ್ಲಿ ನಾವಿದ್ದಿದ್ದು ಹೀಗೆ ! ಈಗಲೂ ಅವಳಲ್ಲಿ, ನಾನಿಲ್ಲಿ...ಆದರೆ ಮನಸಲ್ಲಿ...ನಾವಿರೋದೆ ಹೀಗೆ !






Z : ಹೌದು, ನನಗೂ ನೆನಪಿದೆ...trip ಗೆ ಹೋದಾಗ ಒಂದೆ ತಟ್ಟೆಯಲ್ಲಿ ಊಟ ಮಾಡಿದ್ದು....ಎಲ್ಲಿಗೆ ಹೋದರೂ ನೀವಿಬ್ಬರೂ ಮೊಸರನ್ನ ಬಿಟ್ಟೂ ಬೇರೇನೂ ತಿನ್ನದಿದ್ದುದು !

ನಾನು :ಹೂ...ನನಗೆ ಬೆಳ್ಳುಳ್ಳಿ ಸೇರೋದೆ ಇಲ್ಲ.ಅವಳಿಗೂ ಆ ಉಪ್ಪು,ಹುಳಿ, ಖಾರರಹಿತ ಊಟ ತಿನ್ನಲಾಗುತ್ತಿರಲಿಲ್ಲ...ನಾವಿಬ್ಬರೂ ಬರೀ ಮೊಸರನ್ನ ತಿಂದುಕೊಂಡೇ ಬದುಕಿದ್ವಿ 3 ದಿನ ! ನೋಡು ನೋಡುತ್ತಲೇ ಮೂರು ವರ್ಷ ಕಳೆಸೇ ಹೋಯ್ತು! ಹತ್ತನೇ ತರಗತಿ ಮುಗಿಸಿದಾಗ ನಮ್ಮ ಮನಸ್ಥಿತಿ ಸಲ್ಪ ಹೀಗೆ ಇತ್ತು....





Z : ನಿನಗಂತೂ ಪ್ರತಿಯೊಂದು situation ಗೆ ಹಾಡುಗಳೇ ಹೊಳೆಯತ್ತಲ್ಲಾ ಯಾಕೆ ?

ನಾನು : ನನಗೆ ಹಾಡೆಂದರೆ ಸಖತ್ ಇಷ್ಟ ! ನನಗೆ ಭವ್ಯ (ನನ್ನ ಮತ್ತೊಬ್ಬ ಆಪ್ತ ಗೆಳತಿ ) non stop mp3 player ಅಂತಾನೇ ನಾಮಕರಣ ಮಾಡಿದ್ದಾಳೆ ! ನನಗೆ ಮಾತಿಗಿಂತ ಸಂಗೀತ, ಅದಕ್ಕಿಂತಲೂ ಮೌನ ಹೆಚ್ಚು ಇಷ್ಟ ! ಇರಲಿ, coming back, ಎರಡು ವರ್ಷ PUC ಅದು ಹೇಗೆ ಮುಗಿಯಿತೋ ಗೊತ್ತಿಲ್ಲ...ಆದರೆ ಆಗ ನನಗೆ ನೆನಪಾಗೋದು ಅಂದರೆ ಜನ ನಾನು ವಿಜ್ಞಾನ ಓದುತ್ತೇನೆ ಅಂದಾಗ ಭಯಂಕರವಾಗಿ ಟೀಕೆ ಮಾಡಿ, ನನ್ನನ್ನು ಇಂಜಿನೀರಿಂಗ್ ಕಾಲೇಜೊಂದರಲ್ಲಿ ಸೇರಿಸಲು ಹರ ಸಾಹಸ ಮಾಡಿದ್ದು, ನನ್ನ ಸ್ಪಷ್ಟ ನಿರಾಕರಣೆ ಮತ್ತು ನನ್ನ ತಂದೆಯ support and encouragement ಇಂದ national college jayanagar ಗೆ ಡಿಗ್ರೀ ಮಾಡಲು ಸೇರಿದ್ದು.

Z : ಹು...ನನಗೂ ನೆನಪಿದೆ....ನನಗೂ ಸಖತ್ ಕೋಪ ಬಂದಿತ್ತು ಆಗ...

ನಾನು : ಆಗ ನನಗೂ ನಿನಗೂ ಹೀಗೆ ಅನ್ನಿಸಿದ್ದಲ್ವ ?




Z : yes !!! जुनून ಇತ್ತು ನಮಗೆ, ವಿಜ್ಞಾನವನ್ನೇ ಓದಿ ಏನಾದರೂ ಸಧಿಸಿ ತೋರಿಸಲೇ ಬೇಕು ಅಂತ. ಅದಕ್ಕೆ ಸದ್ಯೋಜಾತನ ಸಂಕಲ್ಪವೂ ಇತ್ತೇನೋ....graduation time ನಲ್ಲೇ ಮೂರು ವರ್ಷ jawaharlal nehru centre for advanced scientific research ನಲ್ಲಿ ನಮಗೆ research fellowship ಸಿಕ್ಕಿದ್ದು...


ನಾನು : ಹೌದು ! ಅದೊಂತು ನನ್ನ ಜೀವನದ turning point ! ನಾನು ಅಲ್ಲಿ ಇದ್ದ ಪ್ರತಿಯೊಂದು ಕ್ಷಣ ಆನಂದಮಯ ! ನನಗೆ ಭೌತಶಾಸ್ತ್ರದಲ್ಲಿ ಹೆಚ್ಚು ಆಸಕ್ತಿ ಇತಾದರೂ ನಾನು ರಸಾಯನಶಾಸ್ತ್ರವನ್ನು ಎಂದೂ ಕಡೆಗಾಣಿಸಿರಲಿಲ್ಲ...thats my favourite too ! ಕಣ್ಮುಚ್ಚಿ ಕಣ್ತೆರೆಯುವುದರಲ್ಲಿ ಬಿ ಎಸ್ಸಿ ಮುಗಿದೇಹೋಯ್ತು ! ಆದರೆ, ದುಃಖಗಳ ಉಡುಗೊರೆಯನ್ನು ನೀಡಿ !


Z : ನೆನಪಿಸಿಕೊಳ್ಳಬೇಡ ಬಿಡು ಅದನ್ನ.....


ನಾನು : ಮರೆಯಲಂತೂ ಸಾಧ್ಯವಿಲ್ಲವಲ್ಲ ...ನಾನೆಷ್ಟು ಕಷ್ಟಪಟ್ಟರೂ final year ನಲ್ಲಿ I got the lowest percentage ! ಎಮ್ಮೆಸ್ಸಿ ಸಿಗತ್ತೋ ಇಲ್ವೋ ಅನ್ನೋದೇ doubt ಆಗೋಗಿತ್ತು...ನಾನಂತೂ ನಲುಗಿ ಹೋಗಿದ್ದೆ...ದಿಕ್ಕೇ ತೋಚದಾಗಿತ್ತು...ನಗಲಾರದೇ ಅಳಲಾರದೇ ಜೀವ ನಿಜವಾಗಿಯೂ ತೊಳಲಾಡುತ್ತಿತ್ತು ! ಯಾವಾಗಲೂ ನನಗೆ ಹೀಗೆ, end result is always disappointing ! ಹೇಗೋ ....ಎಮ್ಮೆಸ್ಸಿ ಸಿಕ್ಕಿತು. ಎರಡು ವರ್ಷ ಪ್ರಾಮಾಣಿಕವಾಗಿ physics ಕಲಿತಿದ್ದೇನೆ. ಈಗ ಎಮ್ಮೆಸ್ಸಿ ಏನಾಗತ್ತೋ !!!

Z : ಈಗ ಮುಂದೆ ?

ನಾನು : ನೀನೂ ಈ ಪ್ರಶ್ನೆ ಕೇಳಬೇಡ ! ಎಲ್ಲರೂ ಈ ಪ್ರಶ್ನೆ ಕೇಳಿ ನನ್ನನ್ನು ಹೈರಾಣಾಗಿಸಿದ್ದಾರೆ. ಮುಂದೇನು ಅನ್ನುವ ಸ್ಪಷ್ಟ ಚಿತ್ರಣ ಸದ್ಯಕ್ಕೆ ಇಲ್ಲವಾದರೂ ನಾನು ಸುಮ್ಮನೆ ಮನೆಯಲ್ಲಂತೂ ಕೂರುವುದಿಲ್ಲ. ph.D entrance exam ಒಂದನ್ನು ನಾಳೆ ಕೊಡಬೇಕಿತ್ತು. ಆದರೆ ನಾನು ಅದಕ್ಕೆ ಈ ಸೆಮೆಸ್ಟೆರ್ exam ಗಲಾಟೆಯಲ್ಲಿ ಏನೂ ಓದಲಾಗಲಿಲ್ಲ. ಆದ್ದರಿಂದ ಅದೇ ಪರೀಕ್ಷೆಯನ್ನು ಡಿಸೆಂಬರ್ ನಲ್ಲಿ ತೆಗೆದುಕೊಳ್ಳಬೇಕೆಂದು ನಿರ್ಧರಿಸಿದ್ದೇನೆ. ಈಗಿನ ಈ ಬದುಕನ್ನು ಹೀಗೆ ಬದುಕಲು ಬಿಡು !

ऎ ज़िंदगी...यह लम्हा फ़िल्हाल जी लॆने दॆ.....


7 comments:

ಅಂತರ್ವಾಣಿ said...

ninna mundina jeevana ninna ichCheyanthe barali...

neen en maaDidru adakke ATB :) jothe DOM :)

Anonymous said...

All the Best ma.. Yavaglu nagu nagutha iru.. Phd maadi Dr.Luck aagu.. nanna ashirwaada ninmele yavaglu idhe.. :-) Article alli haadu irodhu super.. :-)

Srikanth - ಶ್ರೀಕಾಂತ said...

best of luck for your future endeavours... :-)

Sridhar Raju said...

Brahma swaroopigaLe different track nallideera....gooodh.. :-)

Ph.D mugsi ISRO dalli khagoLa vignaani aagi nam deshakke kelsa maado haage aagli antha hruthpoorvakavaadha wish maadthideeeeni :-)...All the best...

Lakshmi Shashidhar Chaitanya said...

@ಅಂತರವಾಣಿ :

ನಿಮ್ಮ ಹಾರೈಕೆಗೆ ತುಂಬಾ ಧನ್ಯವಾದಗಳು .

@ರಾಧೆ :

Dr.luck ? ನಿನ್ನ ಬಾಯಿ ಹರಕೆ ಇಂದ ಹಾಗಾಗಲಿ ! ನಾನು ಪ್ರಯತ್ನ ಪಡ್ತಿನಿ.... ಯಾವಾಗ್ಲು ನಗಕ್ಕೆ try ಮಾಡುವೆ. ಹಾಡು ಸೂಪರ್ರಾ ? thanks !!

@ ಶ್ರೀಕಾಂತ್ :

ಆಂಗ್ಲದಲ್ಲಿ ಕಮೆಂಟಿಸಿದ್ದೀರಿ ? ನಾನು ಸಂಸ್ಕೃತ ಶ್ಲೋಕ expect ಮಾಡ್ತಿದ್ದೆ ! ಇರಲಿ...thanks for the wishes !

@ ಶ್ರೀಧರ್:

ಕರ್ಮಕಾಂಡ ಪ್ರಭುಗಳೆ....ಗುದ್ ಗೆ ಥನ್ಕ್ಸ್ !

ನಾನು ಖಗೋಳ ವಿಜ್ನಾನಿ ಅಲ್ಲ.... materials science student-u !! ಆದ್ದರಿಂದ ISRO ನಲ್ಲಿ ನಾನು ಕಾಲೇ ಇಡೋ ಹಾಗಿಲ್ಲ !! :( ಆದರೆ ಯಾವ್ದಾದ್ರು ಒಂದು ರಿಸರ್ಚ್ ಸಂಸ್ಥೆ ಲಿ ಗೂಟಾ ಹೊಡೆಯುತ್ತೇನೆ dont worry ಮಾಡ್ಕೊಳ್ಳೀ...ಆಶೀರ್ವಾದಕ್ಕೆ ಥನ್ಕ್ಸ್ !!

Parisarapremi said...

[ಶ್ರೀಧರ] ಇವಳು ಇಸ್ರೋದಲ್ಲಿ ಖಗೋಳ ವಿಜ್ಞಾನಿಯಾದರೆ ಬಾಹ್ಯಾಕಾಶಕ್ಕೆ ಉಪಗ್ರಹದ ಅನುಗ್ರಹವೇ ಇಲ್ಲದೆಯೇ ಹಾರಬಹುದು. ;-)

[ಲಕುಮಿ] ಸೇಮ್ ಕಮೆಂಟನ್ನು ಓದ್ಕೊಂಡ್ಬಿಡು. ಆದ್ರೂ ಖಗೋಳ ವಿಜ್ಞಾನಿಯಾಗು. ಬಾಹ್ಯಾಕಾಶಕ್ಕೆ ಹೋಗು. ಏನಾದರೂ ಆಗು ಮೊದಲು ಮಾನವಳಾಗು... ;-)

Lakshmi Shashidhar Chaitanya said...

@ parisarapremi

ಅಪ್ಪಣೆ ಗುರುಗಳೆ !

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...