Sunday, January 6, 2008

Irreplaceable ಅಮ್ಮ

Z: ಏನಮ್ಮಾ....ಸುಸ್ತ್ look ಇದೆ ? what ಸಮಾಚಾರ ?

ನಾನು : ಕೆಲಸದವಳು ಇಲ್ವಲ್ಲ...ಅಮ್ಮನಿಗೆ ಹೆಲ್ಪ್ ಮಾಡೇ ಈ rate ನಲ್ಲಿ ಸುಸ್ತು ನಾನು ! Just imagine, ನನಗೆ college ಇದ್ದಿದ್ದರೆ ನನ್ನ ಕೆಲಸನೂ ಅಮ್ಮ ನೇ ಮಾಡ್ಬೇಕಿತ್ತು !ಪಾತ್ರೆ, ಬಟ್ಟೆ,ಸಾರ್ಸಿ-ಗುಡಿಸಿ... ಅಮ್ಮಂಗೆ ಎಷ್ಟು ಸುಸ್ತಾಗಿರಬೇಡ ? Its difficult even to imagine the situation zindagi !!!

Z: I understand.

ನಾನು: amma is irreplaceable. ಅವರ ಥರ ಯಾರೂ ಇರೋಕೆ ಸಾಧ್ಯ ವೇ ಇಲ್ಲ. She is multi dextrous and a very efficient parallel processor I tell you. ಬೆಳಗ್ಗೆ ಎಂಟು ಗಂಟೆಗೆ ತಿಂಡಿ ಅಡುಗೆ ಎರಡೂ ಮಾಡಿ ನಮ್ಮನ್ನ ಮನೆಯಿಂದ ಸುಸ್ತಿfied face ನಲ್ಲಿ ಕಳುಹಿಸದೇ ನಗುನಗುತ್ತ ಕಳುಹಿಸಿಕೊಡುವ magician ಅಮ್ಮ ! ಬೆಳಗ್ಗೆ ನಾಕುವರೆ ಗೆ ಎದ್ದು ದೇವರಿಗೂ ಸುಪ್ರಭಾತ ಹಾಕಿ ಎಬ್ಬಿಸಿ, simultaneously ನಮ್ಮನ್ನು ಎಬ್ಬಿಸಲು ಕಿರುಚಾಡಿದರೂ, ದೇವರ ಸ್ತೋತ್ರಗಳನ್ನು ಶ್ರುತಿಬದ್ಧವಾಗಿ, enthusiastic and brilliant ಆಗಿ ಹಾಡುವ ace singer ! ನಾವು ಎಲ್ಲೆಲ್ಲೊ ಬಿಸಾಕುವ ವಸ್ತುಗಳನ್ನು ನಮ್ಮ ನಮ್ಮ ರೂಮಿಗೆ ತಂದಿಟ್ಟು,ಮತ್ತೆ ಬಿಸಾಕಿದಾಗ ಬೈಯ್ಯದೇ ಎಲ್ಲಿ ಬಿಸಾಕಿದ್ದೇವೆ ಎಂದು ನೆನಪಿಸುವ giga bytes ಗಳ memory card !ಸದಾ ಊಟದ ಡಬ್ಬಿಯನ್ನು ಮರೆಯುವ ನನಗೆ bag ನಲ್ಲಿ ತಾನೇ ಊಟ ಇಟ್ಟು, ರಾತ್ರಿ ಮನೆ ತಲುಪುವ ನನಗೆ ಹಸಿವಾದಗಲೆಲ್ಲ ತಿನ್ನಲು ಕುರುಕಲೂ ಸಹ ಕಳಿಸಿಕೊಡುವ My mom greatest!!!!Its very difficult to play the role of ಅಮ್ಮ !

Z : ಮತ್ತೆ ಚಿಕ್ಕ ಮಗು ಆಗಿದ್ದಾಗ "ನಾನು ಅಮ್ಮ ಆಗ್ತಿನಿ...ನಾನು ಅಮ್ಮ ಆಗ್ತಿನಿ " ಅಂತ ಎಲ್ಲರ ಜೊತೆಗೂ ಜಗಳ ಆಡಿ kitchen set ಸೌಟನ್ನ ಹಿಡ್ಕೊಂಡ್ ಮೆರಿತಿದ್ದೆ ?

ನಾನು : Right. ಆಗ ಚಿಕ್ಕ ಮಗು ನಾನು. ಅಡುಗೆ ಮನೆಯ adversities and ಮನೆಯ complexities ಬಗ್ಗೆ ಅನಭಿಜ್ಞಳು. but now I tell you, ph.D ಮಾಡೋದು easy, ಅಮ್ಮನ position ನ ನಿಭಾಯಿಸೋದು ಕಷ್ಟ! ಅಮ್ಮ ಯಾವಾಗ್ಲಾದ್ರು ಕೋಪ ಮಾಡ್ಕೊಂಡು," ನೀವು ಒಂದೂಂದೇ ಕೆಲ್ಸ ಮಾಡಕ್ಕೆ ಇಷ್ಟು ಸುಸ್ತಾಗಿ ಗೊಣಗಾಡುತ್ತಿರ್ತಿರಾ...ಎಲ್ಲ ಕೆಲ್ಸಗಳನ್ನು ನಿಭಾಯಿಸಿಕೊಂಡು ಹೋಗುವ ನಾನೇನು ?" ಅಂದ್ರೆ ನಾನು " you are ಅಮ್ಮ ! " ಅಂತಿದ್ದೆ !But now I realise, My goodness !!! ಅಮ್ಮನ position is just so difficult to handle !!!

ಅಮ್ಮ ನಂಗೆ especially, " ನಿಂದು ಯಾವತ್ತಿದ್ರೂ ಬೀಳೋ wicket. ಅತ್ತೆ ಮನೇಲಿ ಅಡುಗೆ ಚೆನ್ನಾಗಿ ಮಾಡ್ಲಿಲ್ಲ ಅಂದ್ರೆ ticket guarantee ! ಅಡುಗೆ ಕಲಿ !!" ಅಂದಾಗೆಲ್ಲಾ " dont worry mom ! MTR and kadambam ಇಂದ ಒಂದೊಂದು tunnel ಎಳೀತಿನಿ ! " ಅಂತ ಉಡಾಫೆ ಉತ್ತರ ಕೊಡ್ತಿದ್ದೆ...ಈಗ..For the first time, I am scared. Basically ನನಗೆ ಭಯದ spelling ಏ ಗೊತ್ತಿಲ್ಲ.ಆದ್ರೆ ಈಗ probability ಓದಿದ ಮೇಲೆ ಸಲ್ಪ ಭಯ ಶುರುವಾಗಿದೆ.Compatible companion ಸಿಕ್ಕಿದರೆ serious ಅದೃಷ್ಟ ! But what if its otherwise ? ನಾನೋ,ಸಾರು specialist, but still uncertain about ಅನ್ನ. ಹುಳಿ ತಕ್ಕ ಮಟ್ಟಿಗೆ ok ..And ಪಲ್ಯ ಅಂದ್ರೆ beans only. ಬೆಂಡೆಕಾಯಿ ಗೊಜ್ಜನ್ನ favourite ಅಂತ josh ನಲ್ಲಿ ಕಲ್ತೆ , ತಿಂಡಿ knowledge zero !!....and what about other food stuffs ? ಇಷ್ಟನ್ನೇ ಮಾಡ್ತಿದ್ರೆ ಅಲ್ಲಿ ಏನಂತಾರೆ in laws ? I think, ಹೋಗೋ ಮನೇಲಿ ಎಲ್ಲರೂ ನನ್ನ ಪರಿಸ್ಥಿತಿ ಅರ್ಥ ಮಡ್ಕೊಳ್ಳಲಿ ಅಂತ expect ಮಾಡೋದೆ ದೊಡ್ಡ ತಪ್ಪು. ನಾನೇ ಊಟದ ವಿಷಯದಲ್ಲಿ compromise ಮಾಡಿಕೊಳ್ಳಲು ಸಾಧ್ಯವಿಲ್ಲದಿರುವಾಗ , ಅವರನ್ನ compromise ಮಾಡ್ಕೊಳ್ಳಿ ಅಂತ ಹೇಗೆ expect ಮಾಡಕಾಗತ್ತೆ? And the most dissapointing thing is that, post graduate ಸೊಸೆಗೆ ಅಡುಗೆ ಬರಲ್ಲ ಅಂದ್ರೆ ಅವರಿಗಲ್ಲ , ನನಗೇ ಅವಮಾನ ! physics ನಲ್ಲಿ quantum mechanics ಕಬ್ಬಿಣದ ಕಡ್ಲೆ. ಆದನ್ನೆ ಅರಗಿಸಿಕೊಂಡಿದ್ದೀನಿ...But ಅಡುಗೆ ? Its just not happening !!! For the first time in my life, I am in deep trouble !!!!!!

Z: So, ಸೌಟಿನ ಮುಂದೆ ಸೋಲೊಪ್ಪಿಕೊಂಡ್ಯಾ ?

ನಾನು: ME accepting defeat ? NO CHANCE !ಇದೇನು ಬ್ರಹ್ಮವಿದ್ಯೆ ಅಲ್ಲ, for philosophy's sake !!! Its difficult, but not impossible !!! ಏನಾದ್ರು ಸರಿ,ಅಡಿಗೆ ಕಲಿಯೋದೆ. ಅಮ್ಮನ role ಗೆ rehearsal ಮಾಡೋ time ಬಂದಿದೆ. But the problem is, cooking cant be done in micrograms , unlike material synthesis. ಪದಾರ್ಥ waste ಆದ್ರೆ ಮನೇಲಿ ಕೋಲು ತಗೋತಾರೆ. So,ಅದನ್ನ tackle ಮಾಡೋಕೆ ಕಣ್ಣಳತೆ ಕಲೀಬೇಕು and ಸಲ್ಪ dexterity ಬರ್ಬೇಕು. error na analyse ಮಾಡ್ಬೇಕು.error analysis is easy but dexterity needs practice and time, which is slightly difficult.Most importantly, ಆ stupid sodium chloride ಗೆ ಸರೀಗೆ ಪಾಠ ಕಲಿಸಬೇಕು !! ಯಾವಾಗ್ಲು ಕೈ ಕೊಡತ್ತೆ !! thankfully, its always been on the lower side so far. So, ಇವತ್ತು ಶುರುವಾಗತ್ತೆ ನನ್ನ "expedition to ಅಡುಗೆ ಮನೆ". ಅಮ್ಮನ್ನ replace ಮಾಡೋಕಂತು ಆಗೊಲ್ಲ,but ಅವರಿಗೆ ಸುಸ್ತಾದಾಗ complement and supplement ಮಾಡೋಕು ಬರ್ದೇ ಇದ್ರೆ ? ಛೆ...too bad. ಕಲಿತಿನಿ. ಇದಕ್ಕು ಕೈ ಹಾಕೇಬಿಡ್ತಿನಿ. But somewhere in the corner of my mind, I will gladly aprreciate and admire a husband who can cook for me !!

Z : ಅಹಾ ! ಆಸೆ ನೋಡು !! ಆಸೆಯೇ ದುಃಖಕ್ಕೆ ಮೂಲ !

ನಾನು: ನನಗೂ ಗೊತ್ತು !Its not necessary, but sufficient ಅಷ್ಟೆ! Prepare for the best and get ready to face the worst is my principle. ಇನ್ನೂ time ide. It will take minimum 730 days for the process of wicket falling to start. ಅಷ್ಟು ಸಾಕು ಅನ್ಸತ್ತೆ preparation ge.

Z: ಏನೋ ಪಾ! All the best !!!

ನಾನು: Thanks ! ಹೊರ್ಟೆ ಅಡುಗೆ ಮನೆಗೆ ಈಗ.

Z: ಹೌದಾ ? But I hear no trumpets and bugles ?

ನಾನು: For once, stop taunting , will you ?

(ಸಶೇಷ)

5 comments:

Anonymous said...

abbaaaaaaaaaaaa kelsadavru ilde idre entha kashta en kathe antha nangu gothu kane but ammange heLp mAdthini naanu kuda
mane ondhu orsolla ashte all other work naanu mAdiddini onde onduuuuuu sali for a 3days amele jwara bandhu 3days full flat agidhe :(
ny way olledu namma kelasanaave mAdko beku

ಅಂತರ್ವಾಣಿ said...

taayigintha devariddara?? avarige samayaru illa..
kelasadavaLu illadiddaga maathrana idu..? pratidina madbEku.. but I can understand nim jothe Dodda doDDa books iruthe. agaga exams iruthe.. time sikkagella thayi devarige sahaya maadi. bEga ella thara aDuge maDodu kaliri. I wish u get a hubby who is naLa maha raja.

Parisarapremi said...

ಪ್ರಥಮ ದೇವರ ಬಗ್ಗೆ ಸುಂದರವಾಗಿ ಚಿತ್ರಿಸಿದ ಕೆಲವೇ ಜನರಲ್ಲಿ ನೀನೂ ಒಬ್ಬಳಾಗುತ್ತೀಯೆಂಬ ವಿಶ್ವಾಸ ನನ್ನಲ್ಲಿದೆ.

ಮುಂದೆ ಯಾರು ಬರ್ತಾರೆ zindagiಯಲ್ಲಿ ಎಂಬ ತವಕ ನನಗೆ.... ಸಶೇಷದ ವಿಶೇಷಕ್ಕೆ ಕಾಯುತ್ತಿದ್ದೇನೆ..

Srinivasa Rajan (Aniruddha Bhattaraka) said...

ಅಮ್ಮ ಎನುವ ಸವಿಮಾತು ಎಂಥ ಚೆಂದ!!!
ನಾನು ಮೇಷ್ಟ್ರ ಮಾತನ್ನ seconding-ಉ.... :-)

chetana said...

ನಮಸ್ತೆ,
ಮಜವಾಗಿದೆ ನಿಮ್ಮ ಅನುಭವ. ನಾನೂ ಚಿಕ್ಕವ್ಳಿದ್ದಾಗ ಸೌಟ್ ಹಿಡ್ಕೊಂಡ್ ಓಡಾಡ್ತಿದ್ದೆ, ಆ ಫೋಟೋ ಇದೆ ಈಗ್ಲೂ!
-ಚೇತನಾ

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...