ನಾನು : ಪ್ರಯಾಣದ ಸುಸ್ತೋ ಅಥವಾ ಮಾತಾಡಿ ಮಾತಾಡಿ ಸುಸ್ತಾಗಿತ್ತೋ ಏನೋ ನನ್ನ ಸ್ನೇಹಿತೆಯ ತಂದೆ ಬಂದು ಎಬ್ಬಿಸುವ ವರೆಗೂ ನಾವು ಯಾವ ಲೋಕದಲ್ಲಿ ತೇಲಾಡುತ್ತಿದ್ದೇವೆಂದು ನಮಗೇ ತಿಳಿದಿರಲಿಲ್ಲ...ಅಂತಹ ಗಾಢ ನಿದ್ದೆಯಲ್ಲಿದ್ದೆವು. ಐದಕ್ಕೆ ಏಳಬೇಕಾಗಿದ್ದವರು ಆರಕ್ಕೆ ಕಣ್ಣು ಬಿಟ್ಟೆವು. ಮುಖ ತೊಳೆದ ತಕ್ಷಣ ಅಂಕಲ್ ಬಿಸಿ ಬಿಸಿ ಕಾಫಿ ತಂದು ಕೊಟ್ಟರು. ಎಂತಹ ಅದ್ಭುತ ಕಾಫಿ ಎಂದರೆ ಅದು....ವಾಹ್ !! ನೆನ್ನೆಯ ಆ ಕಾಫಿಯ "ಖುಷಿ" ಅನುಭವವಾದ ಮೇಲೆ ನನ್ನ ನಾಲಿಗೆ ಕಾಫಿಯ ರುಚಿಯನ್ನೇ ಮರೆತಿತ್ತೇನೋ !!ಆಗಿದ್ದ ಆ ನಷ್ಟವನ್ನು ತುಂಬಿಸಿ ಕೊಡಲು ಈ ಕಾಫಿಯು ಎಲ್ಲ ವಿಧದಲ್ಲೂ ಸಮರ್ಥವಾಗಿತ್ತು. ಘಮ ಘಮಸುತ್ತಿದ್ದ ಆ ಕಾಫಿಯ ಘಮವನ್ನೇ ಎರಡು ನಿಮಿಷ ಆಘ್ರಾಣಿಸಿದೆ...ಅಪ್ಯಾಯಮಾನವಾದ ಅನುಭವ !!ಅಂಕಲ್ ಗೆ ಹೇಳಿದೆ ಸಹಾ " uncle....excellent coffee !!! " ಅದಕ್ಕೆ ಅವರು ಸಂತೋಷಿಸುತ್ತಾ "ಇದು ನಲವತ್ತು ವರ್ಷಗಳ ಅನುಭವ ! " ಎಂದರು. ನಾನು ಅವರ ಪಾಂಡಿತ್ಯಕ್ಕೆ ತಲೆದೂಗಿ ಮುಕ್ತ ಕಂಠದಿಂದ ಪ್ರಶಂಸಿಸಿದೆ. ಅಂಕಲ್ ವೃತ್ತಿಯಲ್ಲಿ ಪತ್ರಕರ್ತರಾದರೂ ಬಹಳ jovial ಸ್ವಭಾವದವರು. ಅವರ ಹಾಸ್ಯಪ್ರಜ್ಞೆ ಅತ್ಯದ್ಭುತ. his one liners were very witty ! ಆಂಟಿಯೂ ಅಷ್ಟೇ !! ನಾವು ಅವರನ್ನು ಬಹು ಬೇಗ ಹೊಂದಿಕೊಂಡು ಬಿಟ್ಟಿದ್ದೆವು.
Z : hmm....good...ಹೊರಟಿದ್ದು ?
ನಾನು : ಏಳುವರೆಗೆ ಏನಾದ್ರು ಸರಿ ಹೊರಡಲೇಬೇಕೆಂದು ಹಿಂದಿನ ದಿನ ನಿರ್ಧರಿಸಿದ್ದೆವು. ಆದರೆ ಮನೆ ಬಿಟ್ಟಿದ್ದು ಎಂಟುಕಾಲಿಗೆ. ಮೈನ್ ರೋಡ್ ತಲುಪಿ ಆಟೋ ಹಿಡಿದು ಬಂಟ್ಸ್ ಹಾಸ್ಟೆಲಿನ ಬಸ್ ಸ್ಟಾಪಿಗೆ ಬರುವ ಹೊತ್ತಿಗೆ ಉಡುಪಿಗೆ ಹೊರಟಿದ್ದ ಎಕ್ಸ್ ಪ್ರೆಸ್ ಬಸ್ಸೊಂದು ಹೊರಟು ನಿಂತಿತ್ತು. ಅಟೋನವನಿಗೆ ದುಡ್ಡು ಕೊಟ್ಟು ಓಡೋಡಿ ಬಸ್ಸು ಹತ್ತಿದೆವು. ಆದರೆ ನಾವೆಲ್ಲರೂ ಬೇರೆ ಬೇರೆ ಕೂರಬೇಕಾಯಿತು ! ಇಬ್ಬರನ್ನು ಕೇಳಿದೆವು...ಅವರು ಜಾಗ ಬಿಟ್ಟು ಕೊಡಲು ನಿರಾಕರಿಸಿದ್ದು ಬೆಂಗಳೂರಿಗರಾದ ನಮಗೆ ಆಶ್ಚರ್ಯ ತಂದಿತು.
Z :Interesting !! Some people might be conservative ! ಏನೂ ಮಾಡೊಕಾಗಲ್ಲ.
ನಾನು : ನಿಜ.ಬಸ್ಸು ಹೊರಟ ತಕ್ಷಣ ಮಂಗಳೂರಿನ characteristic ಮೀನು ವಾಸನೆ ಬರಲು ಪ್ರಾರಂಭವಾಯಿತು. ನನಗೆ ಸತ್ಯನಾರಾಯಣ ಪೂಜೆಯ ಕ್ಯಾಸೆಟ್ಟಿನಲ್ಲಿ ಶಾಸ್ತ್ರಿಗಳು ಹೇಳಿದ್ದು ನೆನಪಾಯಿತು - "ಮೂಗು ಹಿಡಿದು ಪ್ರಾಣಾಯಾಮ ಮಾಡುವುದು !!"
Z : ಮಾಡಿದೆಯಾ ?
ನಾನು : ಇಲ್ಲ,ಬರೀ ಉಸಿರು ಬಿಗಿ ಹಿಡಿದೆ. ಬಸ್ಸಿನವ ಸ್ಪೀಡಾಗಿ ಓಡಿಸುತ್ತಿದ್ದ ರೀತಿ ಎಗ್ಗಾ ಮುಗ್ಗಾ ಓಡುವ ನಮ್ಮ 201 ಅನ್ನು ನೆನಪಿಸಿತು. ಇವನು accelerator ಮೇಲೆ ಕಾಲಿಟ್ಟವ ತೆಗೆಯಲು ಮನಸ್ಸು ಮಾಡಿದ ಹಾಗೆ ನಮಗೆ ಕಾಣಲಿಲ್ಲ. ನನ್ನ ಮಂಗಳೂರಿನ ಸ್ನೇಹಿತೆ ಸೂರತ್ಕಲ್ಲು ಬರುವವರೆಗೂ ಎದ್ದಿದ್ದು,ನಮಗೆ engineering college ತೋರಿಸಿ, ಇನ್ನೇನು ನೋಡುವಷ್ಟಿಲ್ಲ, ನಿದ್ದೆ ಮಾಡುವವರು ಮಾಡಿ ಎಂಡು ತಾನು ಥಟ್ಟನೆ ನಿದ್ರಿಸಲು ಆರಂಭಿಸಿದಳು.
Z : one small question -ನ್ನು. ಮದುವೆ ಇದ್ದಿದ್ದು ಮಣಿಪಾಲದಲ್ಲಿ. ನೀವು ಮಣಿಪಾಲಕ್ಕೆ ಹೋಗುವುದು ಬಿಟ್ಟು ಉಡುಪಿಗೆ ಯಾಕೆ ಹೋದಿರಿ ?
ನಾನು : lawyer zindagi,ಉಡುಪಿಯ ತನಕ ಹೋಗಿ ಕೃಷ್ಣ ಪರಮಾತ್ಮನಿಗೆ ಒಂದು ನಮಸ್ಕಾರವೂ ಹಾಕದಿದ್ದರೆ ಹೇಗೆ ? moreover, ಉಡುಪಿಯಿಂದ ಮಣಿಪಾಲ just 5 kms. so, ಕಿಟ್ಟಿ ಗೆ Hi ಹೇಳಿ ಹೊರಡುವುದೆಂದು ತೀರ್ಮಾನ ಮಾಡಿದ್ದೆವು.
Z : ಓಹ್ !! ಹಾಗೆ ! continue continue.
ನಾನು : ಅವಳು ನಿದ್ರಿಸಲು ಪ್ರಾರಂಭಿಸಿದಳು. ಹಳ್ಳಕೊಳ್ಳಗಳ ಪರಿವೇ ಇಲ್ಲದೆ, ಬಸ್ಸನ್ನು formula 1 car ಅಂದುಕೊಂಡು, ತಾನೇ ಷೂಮೇಕರ್ ಅಂದು ಭಾವಿಸಿ ಓಡಿಸುತ್ತಿದ್ದ ಆ ಚಾಲಕನ ದೆಸೆಇಂದ ಬೆಂಗಳೂರಿನವರಾದ ನಮಗೆ ನಿದ್ದೆ ಬಾರದೇ ಹೋಯ್ತು. ಎಲ್ಲಾ ಜಾಗಗಳಲ್ಲೂ ಬಿಡದೆ ನಿಲ್ಲಿಸಿ, ಹತ್ತು ಗಂಟೆಗೆ ನಮ್ಮನ್ನು ಉಡುಪಿ ತಲುಪಿಸಿದ. ಸದ್ಯ ಜೀವಂತವಾಗಿ ತಲುಪಿದೆವಲ್ಲಾ ಎಂದು ನಾವು ನಿಟ್ಟುಸಿರು ಬಿಟ್ಟರೆ, ನಮ್ಮ ಮಂಗಳೂರಿನ ಸ್ನೇಹಿತೆ " ಸಖತ್ slow ಆಗಿ drive ಮಾಡಿದ. ನಾವು ಒಂಭತ್ತು ವರೆಗೇ ತಲುಪಬೇಕಿತ್ತು !ಅನ್ಯಾಯ late ಆಯ್ತು !! " ಅಂದಳು. ನಾವಿಬ್ಬರು ಒಟ್ಟಿಗೆ " what ? slow driving a ? " ಎಂದು ಗಾಬರಿ ಸೂಚಿಸಿದೆವು. ನಮ್ಮ ಭಯವನ್ನು ಗ್ರಹಿಸಿದ ಅವಳು, " ರಸ್ತೆ ಕೆಟ್ಟಿದೆ, ಅದಕ್ಕೆ ಈ ಥರ slow ಆಗಿ ಓಡಿಸಿದ...ಇಲ್ಲ ಅಂದ್ರೆ you just cant imagine ..." ಅಂದಳು. ನಾವು imagine ಮಾಡಿಕೊಳ್ಳುವ ತಂಟೆಗೆ ಹೋಗಲೇ ಇಲ್ಲ !! we were soooooo scared !!
Z : ಹೆದರಿದ್ದಕ್ಕೆ make up gone !! touch up ಗೆ ಏನು ಮಾಡಿದಿರಿ ?
ನಾನು :ಅಯ್ಯೋ ಅದೊಂದು ದೊಡ್ಡ ಕಥೆ. ಮುಹೂರ್ತ ಇದ್ದಿದ್ದು ಹತ್ತೂ ವರೆಗೆ. ನಾವು ಉಡುಪಿಯಲ್ಲಿ ದರ್ಶನಕ್ಕೆಂದು ಹೋದರೆ ನಮಗೆ ಮುಹೂರ್ತ miss ಆಗುತ್ತಿತ್ತು.So, ದರ್ಶನವನ್ನು post-pone ಮಾಡಬೇಕಾಯಿತು. Actually, touch up ನಾವು ಉಡುಪಿಯಲ್ಲಿ ಮಾಡಿಕೊಳ್ಳಲು ಯೋಚಿಸಿದ್ದೆವು. plan could not be executed. ಬಂದದ್ದೇ ಮಣಿಪಾಲ ಬಸ್ ಹತ್ತಿದೆವು. ಬೇರೆ ದಾರಿಯಿಲ್ಲದೇ ಬಸ್ಸಿನಲ್ಲೇ touch up ಮಾಡಿಕೊಳ್ಳಬೇಕಾಯಿತು. ಬಸ್ಸಿನವರೆಲ್ಲಾ ನಮ್ಮನ್ನ extra terrestrials ಥರ ನೋಡಿದರು !!! We couldnt help it. ಅಲ್ಲಿನ ಛತ್ರಗಳಲ್ಲಿ room ಗಳು ಇರೋದಿಲ್ಲ. ಮದುವೆ ಅಲ್ಲಿ One day function ಅಂತೆ. ಅದಕ್ಕೆ Bus was our only resort !!
Z : ಹೆ ಹೆ ಹೆ ಹೆ !! ಥರ ಏನ್ ಬಂತು....ನೀವು ET ಗಳೇ !!ಪಾಪ bus people!!
ನಾನು : what ಪಾಪ !! ನಾವು ಪಾಪ !! ಸೆಖೆ ಲಿ ಒದ್ದಾಡುತ್ತಿದ್ದಿವಿ !! ಕೊನೆಗೂ ಛತ್ರ ಮುಟ್ಟಿದೆವು. correct ಮುಹೂರ್ತದ timeಗೆ entry ಕೊಟ್ಟೆವು. ನಮ್ಮನ್ನು ನೋಡಿ ನನ್ನ ಸ್ನೇಹಿತೆ ಮತ್ತು ಅವರ ಮನೆಯವರೆಲ್ಲಾ ಸಖತ್ ಖುಶಿ ಪಟ್ಟರು. ಮದುವೆಯಾಯಿತು...ಊಟವೂ ಆಯಿತು. ಮಂಗಳೂರಿನ ಮುಖ್ಯ ತಿನಿಸುಗಳಾದ ಮೆಣಸು ಕಾಳು, ಗಸಿ, ಸಾಟೆ...ಅವೆಲ್ಲ ಚಪ್ಪರಿಸಿಕೊಂಡು ಸವಿದೆವು.ನನಗೆ ಎಲ್ಲವೂ ರುಚಿಸಿತು..because all of them were made in normal oil...not coconut oil !!
Z : coconut oil ನಲ್ಲಿ banana chips ಆದ್ರೆ ok ನಾ ? ಇನ್ನು ಯಾವುದೂ ok ಅಲ್ವಾ ?
ನಾನು : ಸದ್ಯಕ್ಕೆ not okay ! ಆಮೇಲೆ ಏನಾಗತ್ತೋ ಗೊತ್ತಿಲ್ಲ. ನಾವು ಊಟಕ್ಕೆ ಕೂರುವ ಮುಂಚೆಯೇ ಅಂಕಲ್ phone ಮಾಡಿ ಉಡುಪಿಯಲ್ಲಿ ಪರ್ಯಾಯದ ಪ್ರಯುಕ್ತ ದೇವಸ್ಥಾನ ಬಾಗಿಲು ಹಾಕಿರುವುದಿಲ್ಲವೆಂದೂ, ನಾವು ಮಣಿಪಾಲದಿಂದ ಉಡುಪಿಗೆ ಹೋಗಿ ಬರಬಹುದೆಂದು ಹೇಳಿದರು. ನಾವು ಹಾಗೆಯೇ ಮೂಡುಬಿದಿರೆಗೂ ಹೋಗಿ ಬರಲು ನಿರ್ಧರಿಸಿದೆವು.
Z : ಆಹಾ !! ಕಿಟ್ಟಿಗೆ Hi ಹೇಳುವ ಅವಕಾಶ ಕಡೆಗೂ ಸಿಕ್ಕಿತು !!
ನಾನು : ಹು !! ಉಡುಪಿಗೆ ಬಂದು, ವಜ್ರ ಕವಚ ತೊಟ್ಟು ಪರ್ಯಾಯ ಉತ್ಸವಕ್ಕೆ ತಯಾರಾಗಿದ್ದ handsome young ಕಿಟ್ಟಿಗೆ Hi ಹೇಳಿ, ದರ್ಶನ ಮಾಡಿ ನಂತರ ಉಡುಪಿ ಬಸ್ ಸ್ಟಾಪ್ ತಲುಪಿದೆವು. ಅಲ್ಲಿ ಮೂಡುಬಿದಿರೆ ಗೆ ಹೋಗುವ ಬಸ್ಸು ಯಾವುದೆಂದು ಕೇಳಿದಾಗ ಅವರು ಉಡುಪಿಯಿಂದ ಮೂಡುಬಿದಿರೆ ಗೆ ನೇರ ಬಸ್ಸಿಲ್ಲವೆಂದೂ, ನಾವು ಕಾರ್ಕಳಕ್ಕೆ ಹೋಗಿ ಅಲ್ಲಿಂದ ಇನ್ನೊಂದು ಬಸ್ಸನ್ನು ಹತ್ತಬೇಕೆಂದು ತಪ್ಪು ವಿವರ ನೀಡಿದರು. ಇದರ ಅರಿವು ಇರದ ನಾವು ಅವರು ಹೇಳಿದ್ದನ್ನೇ ಸತ್ಯವೆಂದು ನಂಬಿದೆವು. ಕಾರ್ಕಳದಲ್ಲಿ ಬೃಹತ್ ಬಾಹುಬಲಿ ಮೂರ್ತಿಯೊಂದಿದೆ ಎಂದು ನಮಗೆ ಪವಾಡಸದೃಶ ರೀತಿಯಲ್ಲಿ , for the first time in life, right time ಗೆ ಜ್ಞಾನೋದಯವಾಯಿತು.
Z : ಶಭಾಷ್ !! ಕೊನೆಗೂ ತಲೆಯ bulb on ಆಯಿತಲ್ಲ !!
ನಾನು : yeah right !! pling !! ಬರೋದು ಬಂದಿದ್ದೀವಿ, ಬಾಹುಬಲಿಗೂ ಒಂದು Hi ಹೇಳಿ ನಂತರ ಮೂಡುಬಿದಿರೆ ಗೆ ಪ್ರಯಾಣ ಬೆಳೆಸೋಣವೆಂದು ತೀರ್ಮಾನ ಮಾಡಿದೆವು. ನಮ್ಮ ಅದೃಷ್ಟವೋ ಎಂಬಂತೆ ನಮಗೆ ಮೂಡುಬಿದಿರೆಗೆ ನೇರ ಬಸ್ಸೊಂದು ಸಿಕ್ಕಿತು. ಹಾಗಾಗಿ ನಾವು ಕಾರ್ಕಳಕ್ಕೆ ಹೋಗುವ programme cancel ಮಾಡಿದೆವು. ಆದರೆ ಸ್ತ್ರೀಕುಲ ಪ್ರದೀಪ್ತೆಯರಾದ ನಮಗೆ ಕಾರ್ಕಳ ತಲುಪಿದ ತಕ್ಷಣ ಚಿತ್ತ ಚಾಂಚಲ್ಯವಾಯಿತು. ನಾವು ಈಗ ಬಾಹುಬಲಿಯನ್ನು ನೋಡದೇ ಇದ್ದರೆ ಇನ್ನು ವರ್ಷಗಟ್ಟಲೆ ಕಾಯಬೇಕಾಗುತ್ತದೆಂದು, ನಾವು ಮೂಡುಬಿದಿರೆ ನೋಡಿ ಮತ್ತೆ ಕಾರ್ಕಳಕ್ಕೆ ಬಂದು ನಂತರ ಮಂಗಳೂರಿಗೆ ಹೋಗಲು ಇಚ್ಛಿಸಿದರೆ ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ ಆಗುತ್ತದೆಂದು ನಾನು ನನ್ನ ಸ್ನೇಹಿತೆಯರಿಗೆ ಮನದಟ್ಟು ಮಾಡಿಸುವಲ್ಲಿ ಯಶಸ್ವಿಯಾದೆ.ಆದರೆ ನಾವು ಮೂಡುಬಿದಿರೆಯ ವರೆಗೂ ಟಿಕೆಟ್ ಖರೀದಿಸಿದ್ದೆವು. ಡುಡ್ಡು ಹೋದರೆ ಹೋಗಲಿ,ಜಾಗ ಮುಖ್ಯ ಎಂದು ಬಹು ಕಷ್ಟ ಪಟ್ಟು ಗಟ್ಟಿ ಮನಸ್ಸು ಮಾಡಿದೆವು. ಬಸ್ಸಿನವ ಪುಣ್ಯಾತ್ಮ ಆದರೆ conductor ಪಾಪಿ !! ಬಾಹುಬಲಿ ಮೂರ್ತಿಯ ಹತ್ತಿರದಲ್ಲಿರುವ bus stop ಹತ್ತಿರ ನಿಲ್ಲಿಸಿದನು. conductor..waste fellow, idiot fellow, stupid fellow... ನಮ್ಮ ಟಿಕೆಟ್ ವಾಪಸ್ ತಗೋಂಡು ಮತ್ತೆ ಯಾರಿಗೋ ಕೊಟ್ಟು extra ದುಡ್ಡು ಕಮಾಯಿಸಿದ !!
Z : ದುಡ್ಡು ಮಾಡಿಕೊಳ್ಳಲಿ ಬಿಡು ಪಾಪ...ಉದರ ನಿಮಿತ್ತಮ್....
ನಾನು : ಕರ್ಮಕಾಂಡ !! ನನಗೆ ಬಂದ ಕೋಪಕ್ಕೆ...ಮೊದಲೇ ನಾನು ಇಡಿ ಬಸ್ ಪ್ರಯಾಣದಲ್ಲಿ ಎಲ್ಲೂ ನಿದ್ದೆ ಮಾಡಿರಲಿಲ್ಲ ....ಅಷ್ಟರ ಮಧ್ಯೆ ಇದು ಬೇರೆ ! ಸರಿ ಬಾಹುಬಲಿ ದೇವಸ್ಥಾನ ಇರುವ ಗಿರಿಯ ಬಳಿಗೆ ಬಂದು ತಲುಪಿದೆವು. ಹತ್ತುವ ಅಷ್ಟರಲ್ಲಿ ಕಾಲುಗಳು ಪದ ಹೆಳಲು ಪ್ರಾರಂಭಿಸಿದ್ದವು. ಆದರೆ ಅಲ್ಲಿಂದ ಪ್ರಕೃತಿಯು ಬಹಳ ಸುಂದರವಾಗಿ ಕಾಣಿಸುತ್ತಿತ್ತು. ದೃಷ್ಟಿಯ ವಿಸ್ತೀರ್ಣ ಇದ್ದಷ್ಟು ಬೆಟ್ಟದ ಸಾಲುಗಳು, shadow effect... 3D effect, name it and you could see it !!
Z : ನಾವು ಮನುಜರು ಈಗೀಗ ಕಂಡು ಹಿಡಿದು ಖುಶಿ ಪಡುತ್ತಿರುವುದನ್ನೆಲ್ಲಾ ಪ್ರಕೃತಿ ಆಗಲೆ ಕಂಡು ಹಿಡಿದಾಗಿದೆ. ಆದರೆ ನಮಗಿನ್ನೂ ಗೋಚರವಾಗಿಲ್ಲ ಅಷ್ಟೆ !!
ನಾನು : ಬಹಳಾ ನಿಜ ! 42 ಅಡಿ ಬಾಹುಬಲಿಯನ್ನು ದರ್ಶಿಸಿ, ಹಿಂದೆ ಇರುವ 24 ತೀರ್ಥಂಕರರನ್ನು ನೋಡಿ, ಯಜ್ಞಮಂಟಪದ geometry ಯನ್ನು ಪ್ರಷಂಸಿಸಿ,ಅಲ್ಲಿನ ಶಿಲಾ ಶಾಸನಗಳು ಯಾವ ಭಾಷೆಯಲ್ಲಿದೆ ಎಂದು ಜಿಜ್ಞಾಸೆ ಮಾಡಿ, ಅಲ್ಲಿ ಉಪಸ್ಥಿತರಿದ್ದ ಮೂರು ಮತ್ತೊಂದು ಜನರಿಗೆ ನಾವು ಬಹಳ ದೊಡ್ಡ ಸಂಶೋಧಕರೆಂದು build up ಕೊಟ್ಟು, ಅಲ್ಲಿನ ಶಾಂತ ವಾತಾವರಣವನ್ನು ಮನಸಾರ ಅನುಭವಿಸಿ, ಅಲ್ಲಲ್ಲಿ ಕಂಡ ಮನಮೋಹಕ ದೃಶ್ಯಗಳನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿದು, ಬೆಟ್ಟವನ್ನು ಇಳಿಯುವಾಗ ಮೆಟ್ಟಿಲುಗಳನ್ನು ಉಪಯೋಗಿಸದೇ ಹಾಗೆಯೇ ಬಿಸಿ ಬಿಸಿ ಕಲ್ಲುಗಳ ಮೇಲೆ ಚಪ್ಪಲಿ ಇಲ್ಲದೇ ಇಳಿದೆವು. ಒಂದು ಕೈಲಿ hand bag, ಇನ್ನೊಂದು ಕೈಲಿ designer sandals ಇಟ್ಕೊಂಡು ಇಳಿದೆ !! ಚಾರಣ ಮಾಡಬೇಕೆಂದು ವರ್ಷಗಳಿಂದ ಪರಿತಪಿಸುತ್ತಿದ್ದ ನನಗೆ ಇದೊಂದು ಮರೆಯಲಾಗದ ಮನೋಹರ ಅನುಭವ !!
Z : What ????? !!!!!! ಹುಟ್ಟುವಾಗಲೇ " to be handled with utmost care " ಅನ್ನೋ label ನ ತಲೆ ಮೇಲೆ ಅಂಟಿಸಿಕೊಂಡು ಬಂದ ನೀನು trekking ಮಾಡಿದಿಯ ? ಕೈ ಕಾಲು ನೆಟ್ಟಗಿದ್ದವು ತಾನೆ ? ಈಗ ಏನೂ side effect, after effectಗಳು ಏನು ಇಲ್ಲ ತಾನೇ ? ಯಪ್ಪಾ !!! ಸುಮ್ನೆ ಇರೋದೊಂದನ್ನು ಬಿಟ್ಟು ನೀನು ಏನು ಬೇಕಾದ್ರೂ ಮಾಡ್ತಿಯಾ !!
ನಾನು : relaaaaaaaax !!!!!! Take a chill pill !!! ನಾನು ಚೆನ್ನಾಗಿದ್ದೇನೆ. in fact, rappling ಮಾಡಿದ ಮೇಲೆ ಇನ್ನೂ ಚೆನ್ನಾಗಿದ್ದೀನಿ. ಲಾಲ್ಬಾಗ್ ಬೆಟ್ಟಕಿಂತ ಸಲ್ಪ ಎತ್ತರ, ನಂದಿ ಬೆಟ್ಟಕ್ಕಿಂತ ಬಹಳ ಚಿಕ್ಕದಾಗಿರೋ ಒಂದು ಸಣ್ಣ ಬೆಟ್ಟ ಹತ್ತಿ ಇಳಿದಿದ್ದಕ್ಕೆ ನೀನು mount everst ಹತ್ತಿದ ಹಾಗೆ react ಮಾಡಬೇಡ !!!
Z : whatever !! As I said ಉದ್ಧಾರದ spelling-ಊ ಗೊತ್ತಿಲ್ಲ ನಿಂಗೆ !!
ನಾನು : What ever !!!! ಸರಿ,ಬೆಟ್ಟ ಹತ್ತಿ ಇಳಿಯಲು ಪಟ್ಟ ಪ್ರಯಾಸವನ್ನು ನೀಗಿಸಿಕೊಳ್ಳಲು,ಬೆಟ್ಟದ ತಪ್ಪಲಿನಲ್ಲಿ ದೊರೆತ ಸಪ್ಪೆ ಏಳನೀರನ್ನೇ ಚಪ್ಪರಿಸಿಕೊಂಡು ಸವಿದೆವು. ಸಮಯ ಐದಾಗಿತ್ತು. ಭೇಲ್ ಪುರಿ ಇತ್ತು ಅಲ್ಲಿ. ತಿನ್ನಲು ಮನಸಾಯಿತಾದರೂ ಮೂಡುಬಿದಿರೆ ತಲುಪಲು ತಡವಾಗುತ್ತದೆಂದು ಹಾಗೆಯೆ ಬಸ್ ಸ್ಟಾಪ್ ಬಳಿ ಬಂದೆವು. ಒಂದು ಬಸ್ ಬಂತು.
ನಾವು : "ಮೂಡುಬಿದಿರಿ ? "
ಬಸ್ಸಿನವ : " ಹಿಂದೆ ಬರೋ ಬಸ್ ಹತ್ತಿ ! "
2 ನಿಮಿಷ ಯಾವ ಬಸ್ಸೂ ಇಲ್ಲ. ಆಮೇಲೆ ಮತ್ತೊಂದು ಬಸ್ ಅಗಮನ.
ನಾವು : "ಮೂಡುಬಿದಿರಿ ? "
ಬಸ್ಸಿನವ : " ಹಿಂದೆ ಬರೋ ಬಸ್ ಹತ್ತಿ ! "
ನಾವು surprised. again, for 5 minutes no bus. ಭೆಲ್ ಪುರಿಯ ಕಡೆಗೆ ನಮ್ಮ ಗಮನ. ಇತ್ತ ಹೋಗಲೂ ಆಗದೆ, ತಿನ್ನಲೂ ಆಗದೆ, ತ್ರಿಶಂಕು ಸ್ಥಿತಿ. ಮೂರನೆಯ ಬಸ್ ಆಗಮನ.
ನಾವು : "ಮೂಡುಬಿದಿರಿ ? "
ಬಸ್ಸಿನವ : " ಹಿಂದೆ ಬರೋ ಬಸ್ ಹತ್ತಿ ! "
ನಾವು angry !! ಯಾವ ಘನಂದಾರಿ ಬಸ್ಸಿಗೆ ಈ ಮೂರು ಬಸ್ಸಿನವರು ಪರಾಕು ಹಾಡುತ್ತಿದ್ದಾರೆಂದು ನಮಗೆ ಅನ್ನಿಸಿತು. ಆಗ ನಾಲ್ಕನೆಯ ಬಸ್ಸಿನ ಹಾರ್ನ್ ಶಬ್ದ ಮತ್ತು ವಾಯುವೇಗದಲ್ಲಿ ಆಗಮನ. ನನ್ನ ತಲೆಯಲ್ಲಿ ಹಾಡು..
Z : wait wait .... I will guess which song.. " ಅನಿಸುತಿದೆ ಯಾಕೋ ಇಂದು, ಇದೇನೆ ಆ ಬಸ್ಸು ಎಂದು..."
ನಾನು : correct.
ನಾವು : "ಮೂಡುಬಿದಿರಿ ? "
ಬಸ್ಸಿನವ : "ಹಿಂದೆ ಬರ್ತಿದೆ."
ನಾವು totally disgusted !!!ನನ್ನ ತಲೆಯಲ್ಲಿ ಹಾಡು..." ನಗಲಾರದೇ...ಅಳಲಾರದೇ...ತೊಳಲಾಡಿದೇ ಜೀವ !!!" ಅಷ್ಟರಲ್ಲಿ ಐದನೆಯ ಬಸ್ಸು.
ನಾವು : "ಮೂಡುಬಿದಿರಿ ? "
ಬಸ್ಸಿನವ : " ಹತ್ಕೊಳ್ಳಿ...ಬೇಗ ಬೇಗ !!"
ನಾನು : " koi...mil gaya !!! "
Z : ಹೇಗಿತ್ತು ಬಸ್ಸು ? ನಾಲ್ಕು ಬಸ್ಸುಗಳು ವಂಧಿ ಮಾಗಧರ ತರಹ ಪರಾಕು ಹಾಡಿದ್ವಲ್ಲ !!
ನಾನು : ಇನ್ನೊಂದು ಎಕ್ಸ್ ಪ್ರೆಸ್ಸ್ ಬಸ್ಸು ಅಷ್ಟೇ!! but ಇವನು 201 ಥರ ಓಡಿಸಲಿಲ್ಲ. 45 g ಥರ ಓಡಿಸಿದ. I enjoyed the journey. As usual ನಾವು ಮೂವರೂ ಬೇರೆ ಆಗಿ ಕೂರಬೇಕಾಯಿತು. ಕೊನೆಗೂ ಮೂಡುಬಿದಿರಿ ತಲುಪಿದೆವು. ಸಾವಿರ ಕಂಬಗಳ ಬಸದಿ ನೋಡಬೇಕೆಂದು ಹಾತೊರೆಯುತ್ತಿದ್ದ ನನ್ನ ಜೀವ ಅದನ್ನು ನೋಡಿ ಕುಣಿದಾಡಿತು.ಅದರ ಪುರಾಣ ಹೇಳಲಾ ?
Z : ಈಗಲೇ ಇಷ್ಟೋಂದು ಪಿಟೀಲು ಕುಯ್ಯಿದಿದಿಯಾ...ಅದನ್ನೂ ಕುಯ್ಯಿ...ಏನ್ ಪರ್ವಾಗಿಲ್ಲ...ಕೇಳ್ತಿನಿ !!
ನಾನು : good !! I like the spirit !! ಕಾರ್ಕಳ ಮತ್ತು ಮೂಡುಬಿದಿರಿಯಲ್ಲಿ ತಲಾ ೧೮ ಬಸದಿಗಳಿದ್ದು, ಈ ಮೂವತ್ತಾರು ಬಸದಿಗಳು ಜೈನರಿಗೆ ಬಹು ಮುಖ್ಯವಂತೆ. ಮೈಸೂರಿನ ಒಡೆಯರು ಮೊದಲು ಇಲ್ಲಿ ಒಂದು ಮಂಟಪವನ್ನು ಕಟ್ಟಿಸಿದರು. ಅದಕ್ಕೆ floor tiles ಚೈನಾ ದೇಶದಿಂದ ಆಗಿನ ಕಾಲದಲ್ಲೇ ತರಿಸಿ ಹಾಕಿಸಿದ್ದು, ಅದು ಮೈಸೂರು ಅರಮನೆಯ floor type resemble ಆಗತ್ತೆ. ಮತ್ತೆ ಕೆಲವು ರಾಣಿಯರೂ ಈ ಬಸದಿಯನ್ನು ಕಟ್ಟಲು ಕಾರಣರೆಂದೂ, ಗರ್ಭ ಗುಡಿಯಲ್ಲಿ ೯ ಅಡಿ ಎತ್ತರದ ಪಂಚಲೋಹದ ಚಂದ್ರನಾಥ ತೀರ್ಥಂಕರರ ವಿಗ್ರಹವನ್ನು ಪೂಜಿಸಲಾಗುತ್ತದೆ ಎಂದು, ಮಹಾವೀರ ಜಯಂತಿ ಮತ್ತು ಕಾರ್ಥೀಕ ಮಾಸದಲ್ಲಿ ದೀಪೋತ್ಸವಗಳಾಗುತ್ತದೆಂದು, ಈ ಬಸದಿಯಲ್ಲಿ ಇರುವ ಒಂದು ಕಂಭ ಇನ್ನೊಂದರ ತರಹ ಇಲ್ಲ ಎಂದೂ, ಈ ಕಂಭಗಳಲ್ಲಿರುವ ಸಣ್ಣ ಸಣ್ಣ ಕಂಭಗಳನ್ನು ಒಟ್ಟುಗೂಡಿಸಿದರೆ ಸಾವಿರ ಕಂಭಗಳಾಗುತ್ತವೆಂದು, ಈ ಬಸದಿ ಎಲ್ಲಾ ಬಸದಿಗಳ ತಿಲಕಪ್ರಾಯವೆಂದು,ಇದಕ್ಕೆ ತ್ರಿಭುವನ ತಿಲಕ ಚೂಡಾಮಣಿ ಎಂಬ ಹೆಸರಿದೆ ಎಂದು, ಈ ಬಸದಿಯ ಹೊರಗಿರುವ ಕಂಭವು ೧೫ ನೇ ಶತಮಾನದ್ದು ಎಂದು, ಮೂಡು ಎಂದರೆ ಪೂರ್ವ ದಿಕ್ಕು ಎಂದೂ, ಬಿದಿರೆ ಎಂದರೆ ಇಲ್ಲಿ ಬಿದಿರಿನ ಮರಗಳು ಹೆಚ್ಹೆಂದೂ ಅದಕ್ಕಾಗಿ ಈ ಸ್ಥಳಕ್ಕೆ ಮೂಡುಬಿದಿರೆ ಎಂದು ಹೆಸರು ಬಂತೆಂದು ಆ guide ನಮಗ explain ಮಾಡಿದ. ನಾವು ಅವನ ಕಣ್ಣು ತಪ್ಪಿಸಿ ಒಂದು photo ತೆಗೆಯುವಲ್ಲಿ ಯಶಸ್ವಿಯಾದೆವು. It is a place worth watching. It needs aesthetic sense to admire the splendid architecture which resembles vijayanagar style and hoysala style a bit. Its tranquility is soothing, and environment spiritual !! words fall short !!
Z : ಅಬ್ಬಬ್ಬಾ !!
ನಾನು : ಸಖತ್ ಜಾಗ ಮಾತ್ರ !! ಇದನ್ನ ನೋಡದೇ ಇದ್ದಿದ್ದರೆ ನಾನು ಒಂದು ಒಳ್ಳೆಯ ಜಾಗವನ್ನು miss ಮಾಡ್ಕೋತಿದ್ದೆ !! ಆಮೇಲೆ ಅಲ್ಲಿಂದ ಬಂದು, ಹೋಟೇಲೊಂದರಲ್ಲಿ ಕೊಬ್ಬರಿ ಎಣ್ಣೆಯಲ್ಲಿ ಮಾಡಿದ ಮಸಾಲೆ ದೋಸೆ ತಿಂದೆವು .ಕಾಫಿಯನ್ನು ಯಾವ angle ನಲ್ಲೂ resemble ಆಗದ ಪೇಯವೊಂದನ್ನು ಕುಡಿದೆವು !!
Z : ಈಗ ಒಕೆ ಆಯ್ತ ? ಕೊಬ್ಬರಿ ಎಣ್ಣೆಯ ತಿಂಡಿ ?
ನಾನು : ಹಸಿವಿನಲ್ಲಿ ಬೇರೆ ವಿಧಿಯೇ ಇರಲಿಲ್ಲ !! ಆಮೇಲೆ ಹೋಟೆಲು ಮುಂದೆಯೇ ಮಂಗಳೂರಿಗೆ ಹೋಗುವ ಬಸ್ಸು ಬರುತ್ತದೇ ಎಂದು ತಿಳಿಯದೇ ಸ್ವಲ್ಪ ಅಲೆದು, ಆಮೇಲೆ ಮೂರ್ನಾಲ್ಕು ಜನರನ್ನ ಕೇಳಿ ಅದೇ ಹೋಟೆಲೆದುರಿಗೆ ಬಂದು ನಿಂತೆವು !!
Z : ಹೋದ ಕಡೆಯೆಲ್ಲಾ ಒಂದು ಅವಾಂತರ ಮಾಡದೇ ಇದ್ದರೆ ಮನಶ್ಶಾಂತಿ ಇಲ್ವಾ ನಿಂಗೆ ?
ನಾನು : ನಾನ್ ಏನ್ ಮಾಡ್ಲಿ ? ನಾನೇನ್ ಬೇಕೂ ಅಂತ ಮಾಡಿದ್ನಾ ? ಅದದೇ ಎನೋ ಆಗೋಗತ್ತಪ್ಪ !! Its totally not my fault !!
Z : yeah right !! ನೀನು problemನ ಹುಡುಕಿಕೊಂಡು ಹೋಗಲ್ಲ, problem - ಏ ನಿನ್ನ ಹುಡುಕಿಕೊಂಡು ಬರತ್ತೆ ಅಲ್ವ ???
ನಾನು : precisely !! ಬಸ್ಸಿನಲ್ಲಿ ಮಂಗಳೂರಿನ ಸಖತ್ hot mirchi - 98.3 FM ಅನ್ನು ಕೇಳಿಕೊಂಡು ಎಂಟು ಗಂಟೆಗೆ ಮಂಗಳೂರು ತಲುಪಿದೆವು. ನಂತರ ಪಬ್ಬಾಸ್ ಅನ್ನುವ ಒಂದು famous ice cream parlour ನಲ್ಲಿ ಅಲ್ಲಿನ special ice cream ಗಳನ್ನು ಸವಿದು,ಮೋಹಿತರಾಗಿ ಆ ಅಂಗಡಿಯು ಬೆಂಗಳೂರಿನಲ್ಲಿ outlet ಯಾಕೆ ತೆರೆಯಲಿಲ್ಲವೆಂದು ನನ್ನ ಸ್ನೇಹಿತೆಗೆ ಕೇಳಲು, ಅವಳು " ಈ shop owner ತಾಯಿ ಹತ್ರ ಒಂದು secret ingredient ಇದೆ. ಅವರೇ ದಿನಾ ಬೆಳಗ್ಗೆ ಬಂದು ice cream ಗೆ ಹಾಕಿ ಹೋಗುತ್ತಾರೆಂದು, ಆದ್ದರಿಂದ ಇದಕ್ಕೆ ಈ ವಿಶಿಷ್ಟ ಸ್ವಾದ ಇದೆ ಎಂದು ವಿವರಿಸಿದಳು.ಅವರು ಸಾಯುವಾಗ ಅವರ ಕುಟುಂಬಸ್ಥರಲ್ಲಿ ಒಬ್ಬರಿಗೆ ಮಾತ್ರ ಆ secret ingredient prepare ಮಾಡುವ recipe ವಿವರಿಸುತ್ತಾರೆಂದೂ, ಅಲ್ಲಿಯವರೆಗೂ ಅದು secret ಎಂದಳು. ಬೆಂಗಳೂರಿನಲ್ಲಿ ಈ ಅಂಗಡಿಯನ್ನು ತೆರೆದರೆ ಅಲ್ಲಿಗೆ ದಿನಾಗಲೂ ಅವರು ಬಂದು ಆ secret ingredient add ಮಡೋಕೆ ಆಗೊಲ್ಲ ಎಂದು ಹೇಳಿದಳು. ನಾವು ಚಪ್ಪಿರಿಸಿಕೊಂಡು ತಿಂದು ಒಂಭತ್ತು ವರೆ ರಾತ್ರಿಗೆ ಮನೆ ತಲುಪಿದೆವು. ಬಂದದ್ದೇ ಮಾತಾಡುತ್ತಲೇ ನಾವು ಯಾವಾಗ ನಿದ್ದೆಗೆ ಶರಣಾದೆವೆಂದು ನಮಗೇ ಗೊತ್ತಿಲ್ಲ !!
(ಸಶೇಷ )
ಜೀವನದೊಂದಿಗಿನ ನಮ್ಮ ಮಾತು lifetime ! ಇದರಲ್ಲಿ incoming -ಊ free outgoing -ಊ free !
ನನ್ನ ज़िंदगीಯೊಂದಿಗಿನ nonstop ಗುಸುಗುಸುವನ್ನು ಇಲ್ಲಿ ಬಿಚ್ಚಿಟ್ಟಿದ್ದೇನೆ.
Subscribe to:
Post Comments (Atom)
ಉತ್ತರಾಯಣ ೩
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ನಾನು : There is always a next time. Z : ಹೌದಾ ? ನಾನು : ಹೌದು. Z : ಪ್ರತೀ ಸಲವೂ ಹೀಗೆ ಆದರೆ ಗತಿಯೇನು ? ನಾನು : ಅದಕ್ಕೆ ನಿನ್ನ pessimistic ಅಂತ ಬೈಯ್ಯ...
-
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಬ್ಲಾಗಿನ ಹುಟ್ಟು ಹಬ್ಬ ಮತ್ತು ಹೊಸ ವರ್ಷ ಯಾವಾಗ್ಲು ಒಟ್ಟಿಗೆ ಬರತ್ತೆ. ಆದರೆ, ಮತ್ತೆ ಅದೇ flash back ಗೆ ಹೋಗಿ, ಅದೇ ...
6 comments:
ಕಾಫಿಯನ್ನು ಯಾವ angle ನಲ್ಲೂ resemble ಆಗದ ಪೇಯವೊಂದನ್ನು ಕುಡಿದೆವು !!
he he he.....
keep going -u....mundvarsi mundvarsi...narration chennagidhe.....
ದಕ್ಷಿಣ ಕನ್ನಡ ಜಿಲ್ಲೆಯನ್ನು ನೋಡೋದಕ್ಕೆ ನಮ್ಮ ಅರ್ಧಜನ್ಮ ಬೇಕಾಗುತ್ತೆ ಅಂತ ನಾನು ವಿಶ್ಲೇಷಣೆ ಮಾಡಿದ್ದೀನಿ. ಅಷ್ಟು ಜಾಗಗಳಿವೆ. ಅಂತೂ ಕೆಲವು ಜಾಗಗಳನ್ನು ನೋಡಿ ಬಂದಿದ್ದಲ್ಲದೇ ಅದನ್ನು ಸೊಗಸಾದ ರೀತಿಯಲ್ಲಿ ಅರ್ಪಿಸಿದ್ದೀಯ ಇಲ್ಲಿ. ಭೇಷ್!!
[ಶ್ರೀಧರ] ಲೋ, ಆರ್ಟಿಕಲ್‍ನಲ್ಲಿ ನಿನ್ನ ಕಣ್ಣಿಗೆ ಮೊದಲು ಕಾಣೋದು ಕಾಫಿನೇನಾ??
@parisarapremi : eno pa kaapi anno word nange edd kaaNsatte eShTe chikdaagi bardidro....en maadodu..
ella aa kaapi mahime.. :-)
ಸ್ವಲ್ಪ ದೊಡ್ಡದಾಗಿದ್ದರೂ ದಡ್ಡರಿಗೂ ಅರ್ಥವಾಗೋ ರೀತಿ ಕಾರ್ಕಳ ಹಾಗು ಮೂಡಬಿದಿರಿ ಬಗ್ಗೆ ಚೆನ್ನಾಗಿ ಬರೆದಿದ್ದೀರ.
tumba udda lekhana.. aadre haagansalla Oduvaaga.. chennagide narration-u... jaagagaLa hesru Odtidre eega avannella recognize maaDo ashTantu mangLur noDiddini eega.. :D so chennagi artha aaytu ellilli suttidri anta.. good work.. keep this going.. heege zindagi jothe calls munduvareyali :)
ರೀ ಮೀನಿನ ವಾಸ್ನೆ ಎಷ್ಟು ಹಿತವಾಗಿರುತ್ತೆ, ಆರೋಗ್ಯಕ್ಕೂ ಒಳ್ಳೇದು.. ಬೆಂಗ್ಳೂರಿನ ಹೊಗೆ ಆದ್ರೆ ಇಷ್ಟ ಪಟ್ಟು ಕುಡ್ಕೊಂತ ಹೋಗ್ತೀರ, ಅದಕ್ಕಿಂತ ಗಲೀಜ ಇದು?
ನೀವು ಉಡುಪಿಯಲ್ಲಿ ತೆಂಗಿನೆಣ್ಣೆಲಿ ಕರಿದ ಗೋಳಿ ಬಜೆ (ಅದೇ ಬೆಂಗ್ಳೂರಿನ ಮಂಗ್ಳೂರ್ ಬಜ್ಜಿ) ತಿನ್ಬೇಕಿತ್ತು..ಮತ್ತೆ ಮಂಡಕ್ಕಿ ಉಪ್ಕರಿ.. ಆಗ ಗೊತ್ತಾಗ್ತಿತ್ತು ಕೊಬ್ರಿ ಎಣ್ಣೆ ಟೇಸ್ಟು :)
ಮೂಡ್ಬಿದ್ರೆ ಹಾಗೆ ಉಡುಪಿಯಿಂದ ಸ್ವಲ್ಪ ಪಶ್ಚಿಮಕ್ಕೆ ಪಡುಬಿದ್ರೆನೂ ಇದೆ..
ಸಾವಿರಕಂಬದ ಬಸದಿ, ಕಾರ್ಕಳದ ವಿಷ್ಯ ಮಾಹಿತಿ ಪೂರ್ಣವಾಗಿ ಸರಳವಾಗಿದೆ.
--
ಪಾಲ
Post a Comment