Z : day two and three...lakshmi confused !!! galaxies round her head !!OR are they question marks ??? 
ನಾನು : ಸಾಕು !! ನಿನಗೇನು ಗೊತ್ತು ನಾನ್ ಯಾವ್ ಯೋಚನೇಲಿ ಇದಿನಿ ಅಂತ !!
Z : ಯಾವ್ ಯೋಚನೇಲಿ ಬೇಕಾದ್ರು ಇರು   head ruled -ಊ!! but ಏನ್ ಯೋಚನೆ ಮಾಡ್ತಿದ್ಯಾ ಅಂತ ಹೇಳು !!
ನಾನು : ಪಾಠಗಳ ಬಗ್ಗೆ  ofcourse !!! ನೆನ್ನೆ ಏನ್ ಆಯ್ತು ಗೊತ್ತ ? ನಮ್ಮ  HOD  ಬಂದು, "I  hope you remember whatever we did in last semester" ಅಂದ್ರು. ನಾವೆಲ್ಲ ಪಿಳಿ ಪಿಳಿ ಕಣ್ಣ್ ಬಿಟ್ವಿ !! first question was...
" what is a metal ? "
Z : ಪುಂಖಾನುಪುಂಖವಾಗಿ answer ಮಾಡಿದ್ರೋ ಇಲ್ವೊ ?
ನಾನು :  nothing !!!  ಹತ್ತು ನಿಮಿಷ ನೀರವ ಮೌನ !!! ನಮ್ಮ ಸರ್ ಗೆ ಕೋಪ ಬಂತು. ಅದನ್ನ ಹೇಗೆ ತಡೆದುಕೊಂಡ್ರೋ ನನಗಂತೂ ಗೊತ್ತಿಲ್ಲ...great person ಅವ್ರು !! ಸರಿ ಆಮೇಲೆ ಅವರೇ..." tell me what you know !! "ಅಂದ್ರು. ಆಗ್ಲೂ silence. ಸರಿ ಆಮೇಲೆ ಅವರೇ metal characteristics ಎಲ್ಲಾ ಬರೆದರು !! ಆವಾಗ ಸ್ವಲ್ಪ ನೆನಪಾಯ್ತು...faint  ಆಗಿ.
Z : ಕರ್ಮಕಾಂಡ !!! faint ಅಂತೆ faint !! ರಜದಲ್ಲಿ ಹೀಗಾ ಎಲ್ಲಾನೂ ಮರ್ಥೋಗದು ? ಮರೆವಿಗೂ ಒಂದು ಇತಿ ಮಿತಿ ಇರ್ಬೇಕು !!ನಿನ್ನದಂತು ಎಂಥಾ special case ಅಂದ್ರೆ...sudden  ಆಗಿ ಯಾರಾದರು " ನಿನ್ನ ಹೆಸರೇನು ? "ಅಂತ ಕೇಳಿದರೆ, your answer will be " I don't know !!" ದೊಡ್ಡ ದುಷ್ಯಂತ ಮಹಾರಾಜರ ವಂಶಸ್ಥೆ !!  sir board ಮೇಲೆ ಬರೆದಾಗ ಅದು ನಿನಗೆ ಶಕುಂತಲೆಗೆ ಕೊಟ್ಟ ಉಂಗುರದಂತೆ ಕಾಣಿಸಿ ಆಗ ನೀನು ದುಷ್ಯಂತನಂತೆ ಎಲ್ಲಾ ಜ್ಞಾಪಿಸಿಕೊಂಡೆಯಾ ??  ಆಗ  "ಶಾಕುಂತಲಾ...ಶಾಕುಂತಲಾ..." ಅಂತ ಮಹಾರಾಜರು ಕೂಗಿಕೊಂಡು ಹೋದರು....ನೀನು "metal...metal.." ಅಂತ ಕೂಗಿದೆಯ ?? ಕೈಗೆ ಏನ್ ಸಿಕ್ತು ? ಚಿನ್ನ?? ಬೆಳ್ಳಿ...ತಗಡು ??? 
ನಾನು : ಶ್ !!!!!!!!!!!!!!! ಅಷ್ಟೋಂದ್  ಏನು ಮರ್ಥೋಗಿರ್ಲಿಲ್ಲ ನಾನು...Gold is a metal ಅಂತ ಗೊತ್ತಿತ್ತು...chlorine is a non metal ಅಂತ ಗೊತ್ತಿತ್ತು...Helium is inert ಅಂತ ಗೊತ್ತಿತ್ತು...
Z : But what is a metal ಅಂತ ಗೊತ್ತಿರ್ಲಿಲ್ಲ. ಗಣಪತಿ ಮಾಡ್ರೋ ಅಂದ್ರೆ ಅವರಪ್ಪನ್ನ ಮಾಡ್ತೀರಿ ನೀವು !!
ನಾನು : ಏನಿಲ್ಲ !! ಅವರು metal characteristics  ಬರೆದ ಮೇಲೆ periodic table ಬಗ್ಗೆ ಪ್ರಶ್ನೆಗಳನ್ನ ಕೇಳಿದಾಗ ನಾನೇ ಎಲ್ಲಾ answer ಮಾಡಿದೆ. incomplete d shells...incomplete f shell....ಎಲ್ಲ !!
Z: Sir, ನನ್ನ  brain shells incomplete ಅಂತ ಯಾಕೆ ಹೇಳಲಿಲ್ಲ ?head ruled out ಅಂತ ಹೇಳೋದಪ್ಪ !!!! ಒಂದು ಕಾಲದಲ್ಲಿ ಸಾಕ್ಷಾತ್  Hermione Granger ತರಹ ಎಲ್ಲದಕ್ಕು ಉತ್ತರಗಳನ್ನ ಪಟಾಪಟನೆ ಒದರುತ್ತಿದ್ದ ಲಕ್ಶ್ಮಿ ಶಶಿಧರ್ ಇವತ್ತು ಮೌನ ಗೌರಿ !! 
ನಾನು : hey !!   engine start ಆದ್ಮೆಲೂ ಅದಕ್ಕೆ ಸಲ್ಪ time stabilise  ಆಗೋಕೆ. ಇನ್ನು ನಮ್ಮ ಬ್ರೈನ್ ಪಾಪ !! ಅದಕ್ಕೆ  time  ಬೆಡ್ವಾ ?
Z : ಬೇಕು ಬೇಕು...6 months ನಲ್ಲಿ 5 and a half months ಸಾಕಾ ? brain stabilise  ಆಗೋಕೆ ? ಕರ್ಮ ಕರ್ಮ !! ನಿನಗೆ ಕುಂಟು ನೆಪ ಹೇಳೊಕೆ ಬಿಟ್ಟರೆ ಇನ್ನೇನ್ ಗೊತ್ತಿದೆ ? ಉದ್ಧಾರ ಪದದ spelling ಆದ್ರೂ ಗೊತ್ತ ನಿನಗೆ ? ಇರ್ಲಿ...ನಾನ್ ಕಿರ್ಚಾಡಿ what ಪ್ರಯೋಜನ ? ನಾನು ಒಳಗೆ ಇರೋಳು !! ಹೋಗಲಿ !! sir ನಿಮ್ಮ ದುಷ್ಯಂ(ರಂ)ತ ಸ್ಥಿತಿಗಳನ್ನ ನೋಡಿ ಏನ್ ಅಂದರು ?
ನಾನು : "read your previous semester notes and come for the next class " ಅಂದ್ರು !!
Z : ಓದು ಓದು !! Oh !! I forgot !! exam  ಮುಗಿದ josh ನಲ್ಲಿ ಎಲ್ಲಾ  notes ನ ಎಲ್ಲೆಲ್ಲೋ ಗಾಳಿಪಟದ ತರಹ ಹಾರಾಡಕ್ಕೆ ಬಿಟ್ಟಿದ್ಯಲ್ಲ !! ಇನ್ನು ನಿನ್ನ ಆ table ? ನಂದಿ ಬೆಟ್ಟದ  prototype  !! ಎಲ್ಲಿಂದ, ಹೇಗೆ ಹುಡುಕ್ತೀಯಾ ಈಗ ?
ನಾನು :ಎಲ್ಲಿಂದ ಅಂತ ಗೊತ್ತಿಲ್ಲ. ಹಾಡು ಹೇಳ್ಕೊಂಡು ಹುಡುಕುತ್ತೀನಿ... "ವೈದೇಹಿ ಏನಾದಳೋ ?????........" ಅಂತ !!
Z :ಹುಡುಕು ಹುಡುಕು...atleast  ಕಿಷ್ಕಿಂಧೆ reach  ಆಗು ನಿನ್ನ ಹುಡುಕಾಟದಲ್ಲಿ. ಆಮೇಲೆ ಹಾಗೂ ಹೀಗೂ ರಾಮೇಶ್ವರ ತಲುಪಿ ಒಂದು  bridge  ಕಟ್ಟು; from one end of the table to another. first  register ಮಾಡಿಸಿಕೋ ! ಈಗ ಜನರು ರಾಮೇಶ್ವರದ ಸೇತುವೆಯನ್ನು ರಾಮನೇ ಕಟ್ಟಿದ ಅಂತ ಏನು  guarantee  ಅಂತ ಕೇಳಿದ ಹಾಗೆ ನಾಳೆ ನಿನ್ನ  bridge ಗೆ ಕೇಳಬಾರದು you see  !! ಆಮೇಲೆ ನೋಡು...ನಿನ್ನ  notes...Oh sorry !!  ವೈದೇಹಿ ಸಿಗ್ತಾಳೆ !! 
ನಾನು : ಆಹಾ !!! ನಿನ್ನಂಥವರು ಒಬ್ಬರು ಸಾಕು ನೋಡು !! ಡಕೋಟಾ idea ಗಳಿಗೆ !!
Z: ನಮ್ಮಂಥವರು ಒಬ್ಬೊಬ್ಬರೇ ಬೇಕಾಗಿರೋದು ಎಲ್ಲರಲ್ಲೂನು ...every body have only one zindagi in their life ! ಸರಿ  ದುಷ್ಯಂತ....All the best in searching  ವೈದೇಹಿ !!
ನಾನು : ಲೇ!!!!!!!!!! ಕಥೆ ಕೆಡಿಸಬೇಡ !!! dushyanta went in search of shaakuntala...not sita !!
Z : ಕಥೆ ಕೆಡಿಸಲಿಲ್ಲ...twist ಮಾಡಿದೆ ! see....you are ದುಷ್ಯಂತ . you want your ಶಾಕುಂತಲ (memory). So you are searching your notes (ವೈದೇಹಿ )...So climax  ಏನ್ ಆಯ್ತು ? ವೈದೇಹಿ  led ದುಷ್ಯಂತ to ಶಾಕುಂತಲ! ! ಹೇಗೆ ?
ನಾನು : ಅಯ್ಯೋ !! ನಿನ್ನ ಮಾತು ಕೇಳಿ ವಾಲ್ಮೀಕಿ ಮತ್ತು  ಕಾಳಿದಾಸರ ಆತ್ಮಗಳು  ಇಬ್ಬರಲ್ಲಿ ಯಾರು  first  ಬಾವಿಗೆ ಬಿದ್ದುಆತ್ಮ ಹತ್ಯೆ ಮಾಡಿಕೊಳ್ಳಬೇಕು ಅಂತ ಜಗಳ ಆಡ್ತಿದಾರೆ !!ನಾನು ಹೋಗಿ ಸಮಾಧಾನ ಮಾಡ್ತಿನಿ...line on hold !!
Z: ವೈದೇಹಿಯನ್ನ ಮರೀಬೇಡ ದುಷ್ಯಂತ !!
(ಸಶೇಷ )
 
          
        
ಜೀವನದೊಂದಿಗಿನ ನಮ್ಮ ಮಾತು lifetime ! ಇದರಲ್ಲಿ incoming -ಊ free outgoing -ಊ free !
 ನನ್ನ ज़िंदगीಯೊಂದಿಗಿನ nonstop ಗುಸುಗುಸುವನ್ನು ಇಲ್ಲಿ ಬಿಚ್ಚಿಟ್ಟಿದ್ದೇನೆ.
Subscribe to:
Post Comments (Atom)
ಉತ್ತರಾಯಣ ೩
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
- 
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
- 
ನಾನು : There is always a next time. Z : ಹೌದಾ ? ನಾನು : ಹೌದು. Z : ಪ್ರತೀ ಸಲವೂ ಹೀಗೆ ಆದರೆ ಗತಿಯೇನು ? ನಾನು : ಅದಕ್ಕೆ ನಿನ್ನ pessimistic ಅಂತ ಬೈಯ್ಯ...
- 
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಬ್ಲಾಗಿನ ಹುಟ್ಟು ಹಬ್ಬ ಮತ್ತು ಹೊಸ ವರ್ಷ ಯಾವಾಗ್ಲು ಒಟ್ಟಿಗೆ ಬರತ್ತೆ. ಆದರೆ, ಮತ್ತೆ ಅದೇ flash back ಗೆ ಹೋಗಿ, ಅದೇ ...
 
3 comments:
ರಜೆ ಮುಗಿಸಿ ಕಾಲೇಜಿಗೆ ಬಂದಾಗ ಎಲ್ಲರಿಗೂ ಆಗೋ ಅನುಭವನೇ ಇದು.
ಆದರೆ...ಯಕೋ ತುಂಬಾ confuse ಮಾಡ್ತಾಯಿದ್ದೀರ.
ಪ್ರೇಮಿಗಳ ಮಧ್ಯೇ ಇನ್ನೊಬ ಪ್ರೇಯಸಿನ ತಂದು..triangle love story ಯಾಕೆ ಮಾಡಿದೀರ?
ನೀವು MSc in Physics? or ಎರಡು ಕಾವ್ಯಗಳನ್ನು combine ಮಾಡಿ Phd ತೊಗೋಬೇಕು ಅಂತ ಇದ್ದೀರ?
ಪಾಠ ಮರೆತರೆ ನಾನು ಬೈಯ್ಯೋದು ಹೀಗೆ: ರಾತ್ರಿ ಎಲ್ಲಾ ರಾಮಾಯಣ ಕೇಳಿ ಬೆಳಿಗ್ಗೆ ರಾವಣಂಗೂ ಕೃಷ್ಣಂಗೂ ಏನು ಸಂಬಂಧ ಅಂತ!!
ಅಂದ ಹಾಗೆ ಮೆಟಲ್ ಅಂದ್ರೆ ಏನು??
:-) oLLe student-u... ha ha ha.. naavoo ella heege martbiTTirtidvi..
aadre kashTa.. haagella maaDbaardu :D
Post a Comment