Wednesday, January 9, 2008

Expedition to ಅಡುಗೆ ಮನೆ phase 1 - ಉಪ್ಪಿಟ್ಟು

ನಾನು : One phase complete ಮಾಡಿದೆ expedition ನಲ್ಲಿ.

Z: hmmm....ಏನಾಯ್ತು, ಹೇಗಾಯ್ತು ?

ನಾನು:Well, the experiment consisted of two stages:

stage 1: ಉಪ್ಪಿಟ್ಟು ಮಾಡೋದು ಹೇಗೆ ಅಂತ ಓದೋದು,Which I did yesterday. Physics lab ನಲ್ಲಿ manual ಓದಿನೇ experiment ಮಾಡಿ ಅಭ್ಯಾಸ.So, ಅಮ್ಮನ ಗುರು ವೇದಮ್ಮ ನವರು ಬರೆದ ಅಡುಗೆ ಪುಸ್ತಕವನ್ನು ಓದಿ,ನಾನೂ ಅವರ ಏಕಲವ್ಯ ಶಿಷ್ಯೆಯರಲ್ಲಿ ಒಬ್ಬಳಾದೆ. ರವೆಯನ್ನ ಹೇಗೆ ಹುರಿಬೇಕು,ಎಷ್ಟು ಹುರಿಬೇಕು ಅಂತೆಲ್ಲ ಸಲ್ಪ idea ಬಂತು.ನೆನ್ನೆನೇ ಮಾಡ್ಬೇಕಿತ್ತು,but ಆಗ್ಲಿಲ್ಲ as I was busy with some other work. ರಾತ್ರಿ ಇಡಿ golden brown,golden brown ಅಂತ ಮನನ ಮಾಡ್ಕೋತಿದ್ದೆ. So, ಇವತ್ತು ಮಾಡೇ ಮಾಡ್ಬೇಕು ಅಂತ determine ಮಾಡಿದ್ದೆ.

Stage 2: ಉಪ್ಪಿಟ್ಟು ಮಾಡೋದು : Theoryಗೂ ,practical methods ಗೂ physics ನಲ್ಲಿ ವ್ಯತ್ಯಾಸ ಇದ್ದಿದ್ದು ಗೊತ್ತಿತ್ತು, but ಅಡುಗೆಲೂ ಹಾಗೇ ಅಂತ ಇವತ್ತು ಗೊತ್ತಾಯ್ತು. It took a lot of time for me to distinguish between ಉಪ್ಪಿಟ್ಟಿನ ರವೆ and ಅಕ್ಕಿ ತರಿ !! material ಆಗಿದ್ದಿದ್ರೆ, metallurgical microscope ಕೆಳಗೆ ಇಟ್ಟು ನೋಡಿ ಅದರ ಜಾತಕನೇ ಹೇಳಬಹುದಿತ್ತು. But no microscope here !!! I was staring at both of them for some time...then I realised ಅಕ್ಕಿ ತರಿ is larger and ರವೆ is comparitively smaller ಅಂತ. Also, ರವೆ reminded me of fine sand grains ...By analogy, I made out which one is ರವೆ.

ಆಮೇಲೆ ಅರ್ಧ ಪಾವು ರವೆ ತಗೊಂಡೆ. I thought this was a safe measure. ಇದಕ್ಕಿಂತ small scale ನಲ್ಲಿ ಮಾಡೋದು ಕಷ್ಟ ಅನ್ನಿಸಿತು. ಹುರಿದೆ, ಹುರಿದೆ, ಹುರಿತಾನೇ ಇದ್ದೆ...For 10 minutes almost in sim mode. ನಮ್ಮಮ್ಮ ಅವರ ತ್ಯಾಗರಾಜರ ಕೀರ್ತನೆ revise ಮಾಡುತ್ತಿದ್ದವರು ಆಗಲೇ ಕೆಳಗೆ ಇಳಿಯಬೇಕಿತ್ತೇ ? ಇಳಿದಿದ್ದೇ, " ಏನು ಮಾಡ್ತಿದ್ದೀಯ ? " ಅಂದ್ರು. I was stuck. I didnt want to tell her about my expedition.I feared " ಬರ್ತ್ಯೋ ಇಲ್ವೋ ಹೊರಗೆ ? bore ಆದ್ರೆ ನಿದ್ದೆ ಹೊಡಿ, ನನ್ನ ಅಡಿಗೆಮನೆನೆಲ್ಲ ಧ್ವಂಸ ಮಾಡ್ಬೇಡ !!!" Dialogue. I dont know how to lie and I didnt want to abandon my expedition either. So, technically correct ಆಗಿ, " ರವೆ ಹುರಿಯೋದನ್ನ practice ಮಾಡುತ್ತಿದ್ದೇನೆ" ಅಂದೆ.

Z: ಹ ಹ ಹ ಹ ಹ ಹ.....ಆಮೇಲೆ ?

ನಾನು: ಶ್!!!!!!!!! ನಗಬೇಡ.There is more to come. ಅಮ್ಮ ನನ್ನ ಮಾತನ್ನ ಕೇಳಿದ್ದೆ," ಆ ರವೆನ ನಾನು ಆಗ್ಲೆ ಹುರಿದಿದ್ದೆ ! ಮತ್ತೆ ಯಾಕೆ ಹುರಿತಿದಿಯಾ?" ಅಂದ್ರು !!!!This was a bolt from the blue for me. I mean, this was worse than bhajji's googly ! ಏನೆಲ್ಲ ಮಾಡಿದ್ದೆ ರವೆನ identify ಮಾಡಕ್ಕೆ, and how should I know that it was fried already ? It didnt look golden brown also, if it was fried. I had fried it to golden brown now. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅನ್ನೊ ಹಾಗೆ, I said, " ನೀನು ಸರಿಯಾಗಿ ಹುರಿದಿಲ್ಲ, Golden brown ಇರ್ಲೇ ಇಲ್ಲ ಅದು ? ". She replied," 5 ನಿಮಿಷ high mode ನಲ್ಲಿ ಹುರಿದ್ರೆ ಆಗತ್ತೆ ಅಂತ ಅರ್ಧಂಬರ್ಧ fry ಮಾಡಿದ್ದೆ. ನೀನು ಸೀದಿಸಿದ್ಯ ?" ಅಂತ ಒಳಗೆ ಬಂದು ನೋಡಿದ್ರು.5 minutes in high mode is equal to 10 minutes in sim mode. mathematics had saved my life. She said approvingly, "ಇಷ್ಟು ಸಾಕು .ಎತ್ತಿಡು. ನಾನು ಮಲ್ಕೋತಿನಿ ಸಲ್ಪ ಹೊತ್ತು,ನೀನು ಏನು ಮಾಡ್ಕೋತ್ಯೋ ಮಾಡ್ಕೋ ".She had forgotten to say, " ಅಡುಗೆ ಮನೇಲಿ ಏನು ಮಾಡ್ಬೇಡ !!", which was a blessing for me. In case of any mishap, I could escape saying, " ನೀನೆ ಹೇಳಿದ್ಯಲ್ಲ ಏನ್ ಬೇಕಾದ್ರೂ ಮಾಡ್ಕೋ ಅಂತ, I was just trying to do some thing " ಅಂತ. I was legally safe. Above all, ಜಟ್ಟಿ ಬಿದ್ದೇ ಇರ್ಲಿಲ್ಲ ಮೀಸೆ ಮಣ್ಣಾಗೋಕೆ !! I had succeeded in frying ರವೆ !!

ಅಮ್ಮ ಮೇಲೆ room ಬಾಗಿಲು ಹಾಕಿಕೊಳ್ಳುತ್ತಿದ್ದಂತೆಯೇ ನನ್ನ Activity speed up ಆಯ್ತು. ನೀರನ್ನು ಬಿಸಿಗೆ ಇಟ್ಟೆ. I searched for the smallest tomato and potato in the whole lot of vegetables. ಕಡಲೆ ಬೇಳೆ, ಉದ್ದಿನ ಬೇಳೆ ಎಲ್ಲ ಪಟ ಪಟನೆ ಕಟ್ಟೆ ಮೇಲೆ ಜೋಡಿಸಿದೆ. ಬಾಣಲಿಗೆ ಎಣ್ಣೆ ಹಾಕಿ ಕಾಯಲು ಬಿಟ್ಟೆ. All the processes mentioned before and henceforth are carried out in sim mode.ಒಗ್ಗರಣೆ went well. So far so good ಅಂದುಕೊಂಡೆ. ಹೆಚ್ಚಿದ ತರಕಾರಿ ನ ಹಾಕ್ದೆ. I didnt know how to check whether it was fully cooked or not. 2 minutes might be enough ಅಂತ Speculate ಮಾಡ್ದೆ.Then ರವೆ ಹಾಕ್ದೆ. ನೀರು ಹಾಕಿ 3 minutes cook ಮಾಡ್ದೆ. ಅಲ್ಲೇ ತಪ್ಪಾಗಿದ್ದು. ರವೆ ಜಿಗುಟು ಜಿಗುಟಾಗಿದ್ದಿದ್ದನ್ನು ನೋಡಿ ನನಗೆ ಎಣ್ಣೆ ಕಮ್ಮಿ ಆಗಿದೆ ಅನ್ನೋದು flash ಆಗಲಿಲ್ಲ. ಬೆಂದಿಲ್ಲ ಅಂದುಕೊಂಡು ಮತ್ತಷ್ಟು ನೀರು ಹಾಕಿದೆ. paste ಆಯಿತು. And I was scared.ಪ್ರಯತ್ನ ಎಲ್ಲ ನೀರಲ್ಲಿ ಹೋಮ ಆಯ್ತಲ್ಲಪ್ಪ ಅಂಕೊಂಡೆ, sudden ಆಗಿ system stabilise ಆಯ್ತು. ನೋಡಿದ್ರೆ,I was right, It needed water. Thank god ಅಂತ mentally ಒಂದು salute ಹೊಡ್ದೆ. Now I encountered a big problem. When to add salt ? 8 years of chemistry had taught me that adding salt while cooking vegetables does not cook the vegetables properly. It is one of the colligative properties of sodium chloride. But this was theory. practically ??? I decided to stick to theoretical beliefs. gas off ಮಾಡಿ,ಉಪ್ಪು ಹಾಕಿದೆ. ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ಹಣ್ಣನ್ನು ಹಾಕಿ embellishments and garnishing job complete ಮಾಡ್ದೆ.

Z: ಹೆ ಹೆ ಹೆ ಹೆ ಹೆ....ಸರಿ, ಆಮೇಲೆ ?

: specimen ಏನೋ ready ಆಯ್ತು. But experiment ಮಾಡೋಕೆ ಒಂದು guinea pig ಬೇಕಲ್ಲ ? ಅಮ್ಮ ನಿದ್ದೆ, ತಂಗಿ school-ಉ. No other alternative. Much against international laws to ban self experimentation, ನಾನೇ ಒಂದು plate ನಲ್ಲಿ ಅರ್ಧ ಸೌಟು ಉಪ್ಪಿಟ್ಟನ್ನ ಹಾಕಿಕೊಂಡು,ಒಂದು ಸ್ಪೂನ್ ತಿಂದೆ.

Z:How was it ? ವಾಕರಿಕೆ ಬಂತಾ ?

ನಾನು:ಏನಿಲ್ಲ. It was nice and edible.vegetables 98% ಬೆಂದಿತ್ತು.again,sodium chloride was on lower side. I couldnt help vegetables, but I added a litte salt.ಈ time ನಲ್ಲಿ perfect bakra ಥರಾ, ನನ್ನ ತಂಗಿ ಬಂದ್ಲು school ಇಂದ. ಬಂದೊಡನೇ, "ಹಸಿವು " ಅಂದ್ಲು, ನಾನು, " ನಾನು ಉಪ್ಪಿಟ್ಟು ಮಾಡಿದೀನಿ ತಿನ್ನು " ಅಂದೆ. ಅವಳು ನಿಂತಲ್ಲೆ ಕುಸಿದು, "what ???????? ನೀನು ಅಡುಗೆ ನ ? ಹುಷಾರಾಗಿದೀಯ ? books and computer ಬಿಟ್ಟು ಬೇರೇನು ಗೊತ್ತಿಲ್ಲ ನಿಂಗೆ,ನೀನು ಅಡುಗೆ ಮನೇಲಿ ಇವತ್ತು more than 30 seconds ಇದ್ದೆಯಾ ? ಯಾಕೀ ಹರ ಸಾಹಸ ? " ಅಂತ ಮೂದಲಿಸಿದಳು. I retorted saying, " Shut up you oaf ! This is not ಹರ ಸಾಹಸ. This is enthusiasm ! " ಅಂದೆ. ಅವಳು," ಈಶ್ವರಾ !F1 F1 F1 " ಅಂದಳು. plate ನಲ್ಲಿ specimen ಹಾಕಿ ಅವಳ ಮುಂದಿಟ್ಟೆ. " looks appealing ! " ಅಂದು ಬಾಯಿಗೆ ಹಾಕಿಕೊಂಡು "super ಕಣೇ !!!" ಅಂತ ಉದ್ಗರಿಸಿದಳು. ನಾನು "experiment success !!!! " ಅಂತ ನಿಟ್ಟುಸಿರು ಬಿಟ್ಟೆ.

ಅಮ್ಮ ಎದ್ದು ಕೆಳಗಿಳಿದು ಬಂದು " ಏನ್ happening-ಉ ? " ಅಂದ್ರು.ಇಬ್ಬರು ಮಿಕಿ ಮಿಕಿ ನೋಡ್ದ್ವಿ. ಅಷ್ಟರಲ್ಲೇ ಅಮ್ಮ," ನನಗೆ ಹಸಿವು " ಅಂದರು. ನಾನು ಸಾವರಿಸಿಕೊಂಡು "ಅಮ್ಮಾ, ಉಪ್ಪಿಟ್ಟು ಮಾಡ್ದೆ ನಾನೇ ! " ಅಂದೆ. I was ready to face the music. But ಆದದ್ದೇ ಬೇರೆ. ಅಮ್ಮ " Wow !! Very good. ಬಿಸಿ ಮಾಡು microwave ನಲ್ಲಿ. Let me see ! " ಅಂದ್ರು. I was thrilled. ಬಿಸಿ ಮಾಡಿ ಕೊಟ್ಟೆ." good. ಚೆನ್ನಾಗಿ ಮಾಡಿದ್ದೀಯ, ತರಕಾರಿ 2 % ಬೇಯಬೇಕಿತ್ತು, and ಎಣ್ಣೆ ಸಲ್ಪ ಬೇಕಿತ್ತು ಅಷ್ಟೇ..." ಅಂದ್ರು. I was happy that my error analysis was perfect , and so was the expedition phase 1 !


Z: Good.ಏನೋ ಅಡ್ಡೇಟಿನ ಮೇಲೆ ಗುಡ್ಡೇಟು ಅಂತ hit ಆಗೋಯ್ತು ಅನ್ಸತ್ತೆ.

ನಾನು:ಇರಬಹುದು. ಈಗ ಬಂದ result important-ಉ. ಉಪ್ಪಿಟ್ಟು ಮಾಡೋದು ಹೇಗಂತ ಒಂದು idea ಬಂತಲ್ಲಾ...good beginning.Refinement does takes its time.Perfection cannot be attained in one attempt.
Z: ಮುಂದೆ ? ಏನ್ idea ?

ನಾನು : Nothing planned as of now.ನನ್ನ ತಲೇಲಿ ಈಗ 2 songs back to back:

ಅಂತು ಇಂತು...ಉಪ್ಪಿಟ್ಟ್ ಬಂತು..ಒಂದು Very easy experiment ಅಂತೆ....

Due to error of ಎಣ್ಣೆ and sodium chloride, there is a little दर्द.Otherwise, its disco.
so, दिल मॆ मेरे है दर्द-ए-Disco दर्द-ए-Disco दर्द-ए-Disco......

(ಸಶೇಷ)

11 comments:

Parisarapremi said...

ಉಪ್ಪಿಟ್ಟು ಮಾಡೋಕೂ ಪುಸ್ತಕ ಬೇಕು ನೋಡಿ ಫಿಸಿಕ್ಸ್ ನವರಿಗೆ. ನಮ್ಮ ಫಿಸಿಕ್ಸ್ ಮೇಷ್ಟ್ರೊಬ್ಬರು ಇದ್ದರು. ತರಗತಿಯಿಂದ ಪ್ರವಾಸ ಪ್ಲಾನ್ ಮಾಡ್ತಿದ್ದಾಗ, ಮೊಸರು ತರ್ಬೇಕು ಅಂತ ಇದ್ದಾಗ, ಅದಕ್ಕೇನಂತೆ, ಈಗ ಇರೋ ಒಂದು ಲೀಟರ್ ಮೊಸರಿಗೆ ಒಂದು ಚಮಚ ಹಾಲು ಹಾಕ್ದ್ರೆ ಸಾಕು! ನಾಳೆ ಮೊಸರು ರೆಡಿ.. ಹೆಪ್ಪಾಕೋದು ಅಂದ್ರೆ, ಲ್ಯಾಬಲ್ಲಿ ವರ್ನಿಯರ್ ಕ್ಯಾಲಿಪರ್ಸ್ ಹಿಡ್ಕೊಂಡ್ ಹಾಗಲ್ಲ.. ಅಂತ ಇನ್ನೊಬ್ಬ ಲೇಡಿ ಟೀಚರು ಬೈದರು!

ಅಂತರ್ವಾಣಿ said...

ನಿಮ್ಮ ಉಪ್ಪಿಟ್ಟಿನ experimentu ಚೆನ್ನಾಗಿದೆ. 98% score ಮಾಡಿದೀರ, ತುಂಬಾ ಒಳ್ಳೇ ಅಂಕ!!!. ನಾನು ಮೊದಲ ಬಾರಿ ಮಾಡಿದಾಗ just ಪಾಸ್ ಆಗಿದ್ದೆ.
ಮುಂದಿನ ತಿಂಡಿಗಳಲ್ಲಿ.. 100% score ಮಾಡಿ ಅಂತ ಹಾರೈಸ್ತೀನಿ.

Jagali bhaagavata said...

Made me nostalgic. We had to prepare uppittu during our scout camp (during my primary school days). Rememberd the 'hardships' that we had to go-through and the joy after getting it correct :-)

Suma Udupa said...

zindagi jote mataadodu ... nice idea ... :)

Srinivasa Rajan (Aniruddha Bhattaraka) said...

ಒಳ್ಳೆ ಉಪ್ಪಿಟ್ಟು... :-) ಚೆನ್ನಾಗಿ ಮಾಡಿದ್ದೀರ.. wish you all the best for your future endeavours ;)

Sridhar Raju said...

serious comedy aagidhe nim article -u, uppitt maadakke harasaahasa ne maadiddera...kindly heege carry on maadi..maadiddanna haage blaagisi.. :-)

Srikanth - ಶ್ರೀಕಾಂತ said...

ನಕ್ಕು ನಕ್ಕು ಸಾಕಾಯ್ತು. ಏನೂ ಅದೃಷ್ಟ - ಈ ಸರ್ತಿ 98% ಬಂದ್ಬಿಡ್ತು. ಅಡಿಗೆ ಮಾಡೋ ಕಷ್ಟ ನಂಗೆ ಗೊತ್ತು. ಪ್ರತಿ ಸರ್ತಿ ಪಾಸಾಗೋದೇ ಕಷ್ಟ. ಏನೇ ಇರಲಿ, I wish you good luck - ನಿಮ್ಮ ಅಡಿಗೆ ಪ್ರಯೋಗಗಳಿಗೆ.

ಈ sodium chloride ಬಗ್ಗೆ ಒಂದು ವಿಷಯ. sodium chloride ಜಾಸ್ತಿ ಆಗೋದ್ರೆ ಕಮ್ಮಿ ಮಾಡಕ್ಕಾಗಲ್ಲ. ಕಮ್ಮಿ ಇದ್ರೆ ಆಮೇಲೆ ಸೇರಿಸಿಕೋಬೋದು. ಆದಿಕ್ಕ ನಾನೇನೋ ಹಾಕುವಾಗ ಕಮ್ಮಿನೇ ಹಾಕ್ತೀನಿ. ಈ ಉಪಾಯ ನಿಮಗೆ ಉಪಯೋಗ ಆಗತ್ತೋ ಏನೋ ನೋಡಿ.

ಎಲ್ಲಾ ಸರಿ - bhajji's googly ಅಂದ್ರಲ್ಲ. ಭಜ್ಜಿ ಯಾವಾಗ ಗೂಗ್ಲಿ ಮಾಡೋದು ಕಲಿತ?

Rohini Joshi said...

Ohohohoho bhayankara prayOga mADi yashaswi aagbiTTidiya good:)

Adella sari namagyAvAga nin uppiTTu saviyo sakAla[?] baratte anta....yAvattu barli manege:-?

Anonymous said...

Yavaga vegetable pulav maadodhu try maadthya??? 7 pages article barithya ansuthe.. Anyways Uppitu super.. :-)

PaLa said...

>>Then ರವೆ ಹಾಕ್ದೆ. ನೀರು ಹಾಕಿ 3 minutes cook ಮಾಡ್ದೆ.
ಮೊದ್ಲು ನೀರು ಹಾಕಿ ಆಮೇಲೆ ರವೆ ಹಾಕಿ, ನಿಧಾನಕ್ಕೆ ಕದಡ್ತಾ,, ಬಿಸಿ ಉಪ್ಪಿಟ್ಟಿಗೆ ತುಪ್ಪ, ತಣ್ದು ಹೋಗಿದ್ರೆ ಮೊಸ್ರು ಸೂಪರ್ ಕಾಂಬಿನೇಶನ್

ವಿ.ರಾ.ಹೆ. said...

ಸಖತ್ತಾಗಿತ್ತು. ನಾನಿನ್ನೂ demo ನೋಡ್ಕೊಂಡಿದ್ದೀನಷ್ಟೆ ಮನೆಲ್ಲಿ. ಯಾವಾಗ್ ಮಾಡ್ತೀನೋ ಗೊತ್ತಿಲ್ಲ. :P. ಈಗ ಫುಲ್ ಎಕ್ಸ್ ಪರ್ಟ್ ಆಗಿದ್ದೀರಾ ಅನ್ಸುತ್ತೆ ಅಲ್ವಾ? atleast in uppittu. :)

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...