Monday, January 21, 2008

ವಾಹ್ !! ಮಂಗಳೂರು !!!! ಭಾಗ ೧

Z: Beat rani ಗೆ ಕಡೆಗೂ ನನ್ನ ನೆನಪಾಯಿತೇ ?

ನಾನು : oye !! ನಿನ್ನನ್ನು ಮರೆತರೆ ನಾನು gone !! ನನ್ನ ಸ್ನೇಹಿತೆಯೊಬ್ಬಳ ಮದುವೆ ಅಂತ ಮಂಗಳೂರಿಗೆ ಹೋಗಿದ್ದೆನಲ್ಲ...ಬಂದ ಮೇಲೆ ಸಖತ್ ಕೆಲ್ಸ !!! ಅದಕ್ಕೆ phone ಮಾಡೋಕೆ ಆಗ್ಲೇ ಇಲ್ಲ !!!

Z: ಬೆಂಗಳೂರಿಗೆ ಬಂದ ಮೇಲೆ road road ಅಲೀತಿದ್ದೀ...shopping shopping ಅಂತ !! ಒಂದಾದರೂ call ಮಾಡಬಾರದೇ ? ಪಾಪ Z, ಕಾಯುತ್ತಿರುತಾಳೆ ಅಂತಾನೂ ಅನ್ನಿಸಲಿಲ್ವಾ ? I dont want reasons, I want report !!

ನಾನು: ಶಾಂತಿ !!!!

Z: ನಾನು zindagi ! ಶಾಂತಿ ಅಲ್ಲ !!

ನಾನು: ಗೊತ್ತಮ್ಮಾ ಮಹರಾಯ್ತಿ !! ನಾನು ಹೇಳಿದ್ದು peace !!!ಅಂತ !! ನಿನಗೆ report ತಾನೆ ಬೇಕು ? ಒಂದು inch-ಉ ಬಿಡದೆ ಕೊಡುತ್ತೀನಿ. ಕಿರ್ಚಾಡ್ಬೇಡ. And dont comment on shopping !!!! ಮನೇಲಿ function ಇಟ್ಕೊಂಡು, ಮನೆ ದೊಡ್ಡ ಮಗಳಾಗಿ ನಾನಲ್ಲದೇ ಇನ್ಯಾರು ಹೋಗ್ತಾರೆ shopping ge ? ಬಂದ್ಬಿಟ್ಟಳು ಮಾತಾಡೋಕೆ !!!

Z: ಶಾಂತಿ !!!!

ನಾನು : : ನಾನು ಲಕ್ಷ್ಮಿ !!

Z : dialogue thief !!!

ನಾನು : Pot calling kettle black !!!ನನ್ನ dialogue ನ first ಕದ್ಬಿಟ್ಟು.....grrrrrrrrrrrrrrrrrr !!!!!!!!!!!!!!!!!ಏನು ? ಈಗ report ಬೇಕೋ, ಅಥವಾ line hold ಮಾಡ್ಲೋ ?

Z::ಬೇಡಾ !!!!!!!!!!!!!! ನೀನು ಬಿಟ್ಟರೆ ಸಿಕ್ಕುವಂಥವಳಲ್ಲ ! ಹೆಸರಿಗೆ ತಕ್ಕವಳು... ಮಹಾ ಚಂಚಲೆ ! ಚಂಚಲೆ -ier than mercury!! ಬೇಗ ಬೇಗ ಶುರು ಮಾಡು !! ಬೇಕಾದ್ ಕಡೆ ನಾನು background music ಕೊಡ್ಲಾ ? effect ಗೆ ?

ನಾನು : ಕುಟ್ಟುತೀನಿ ತಲೆ ಮೇಲೆ ! only comments, no effects !

Z : ok start !

ನಾನು :ಹದಿನೈದನೇ ತಾರೀಖು ಬೆಳಗ್ಗೆ ಅಣ್ಣಂಗೆ meeting ಇತ್ತು. so he dropped me to my friend's place and left. ತಂದೆ ತಾಯಿಗಳು ಮನೆಯಲ್ಲೇ concise ಗೀತೋಪದೇಶ ಮಾಡಿದ್ದರು.

Z : ಜೋಪಾನ ಅಂತ One thousand times-ಉ, time time ಗೆ phone ಮಾಡಿ ಅಂತ 500 times -ಉ, ನಿದ್ದೆ ಮಾಡುವಾಗ ಕತ್ತು ಉಳುಕಿಸ್ಕೋಬೇಡಿ ಅಂತ 100 times-ಉ....ಎಲ್ಲೆಲ್ಲೋ ಎನೆನೋ ತಗೋಬೇಡಿ ಅಂತ 2000 times-ಉ....

ನಾನು : ಹು !!!!!!!! ನನಗೆ ಕತ್ತು ಉಳುಕಿತು...travel ಮಾಡಿ ಅಲ್ಲ....ಅವರು ಹೇಳಿದ್ದಕ್ಕೆಲ್ಲಾ ತಲೆ ಆಡಿಸಿ ಆಡಿಸಿ !!!!

Z : ಹೆ ಹೆ ಹೆ ಹೆ ಹೆ !!!!

ನಾನು : ಅಮ್ಮನಿಗೆ ಸ್ವಲ್ಪ polite aagi ಹೇಳಿದೆ...."ನಾವು ನರ್ಸರಿ ಮಕ್ಕಳಲ್ಲಾ..ನಮ್ಮನ್ನು ನಾವು ನೋಡ್ಕೋತೀವಿ..for safety ಅಂತ ಇಬ್ಬರೂ ಒಂದೊಂದು butcher knife ಇಟ್ಕೋಡಿದಿವಿ...ಯಾರಾದ್ರು ಅನುಮಾನಾಸ್ಪದ ವ್ಯಕ್ತಿ ಹತ್ರ ಬಂದ್ರೆ ಚುಚ್ಚಿಬಿಡ್ತೀವಿ...ನಮ್ಮ national law school of India friends ಹತ್ರ ಆಗ್ಲೇ ಮಾತಾಡಿದೀವಿ...ಅವರು ನಮ್ಮನ್ನು murder case ಇಂದ ಬಚಾವ್ ಮಾಡ್ತಾರೆ" ಅಂತ !!!

Z : ಯಪ್ಪಾ ರಾಮ !!! ಏನಂದ್ರು ಅವರು ಅದಕ್ಕೆ ?

ನಾನು : shocked ಅವರು !!! ಆ ಥರ statement ಗೆ ಇನ್ನು ಹೇಗೆ react ಮಾಡ್ತಾರೆ ? ಇವರು unwanted possibilities ನ ಹೆಚ್ಚು probable ಮಾಡ್ತಿದ್ರು...ನಾವು worst caseಗೂ ready ಇದೀವಿ ಅಂತ ಹೇಳಿದೆ ಅಷ್ಟೇ !!!

Z : ಆಮೇಲೆ ?

ನಾನು :ಅಷ್ಟೇ.ಇನ್ನು ಹೇಳಿ ಪ್ರಯೋಜನ ಇಲ್ಲ ಅಂತ ಅನಿಸಿತು ಅವರಿಗೆ. ಕಳಿಸಿಕೊಟ್ಟರು. ಬೆಳಗ್ಗೆ ಹತ್ತು ಕಾಲುಗಂಟೆಗೆ ಸರಿಯಾಗಿ ಬೆಂಗಳೂರು ನಗರದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ನಾನು ಮತ್ತು ನನ್ನ ಸ್ನೇಹಿತೆ ಬಂದು ತಲುಪಿದೆವು. ಒಂದು family ಬಂತು bus ಒಳಗೆ...ಗಂಡ, ಹೆಂಡತಿ ಮತ್ತು ಒಂದು ಮಗು. Lady was not well. She had a very bad cold. so, daddy dearest was taking care of his very cute daughter. That kid had a loud, clear voice.. ಕಂಚಿನ ಕಂಠ. ಬಂದದ್ದೆ... daddy dont make me sit down... I will stand !! ಅಂತು. daddy dearest ನಿಲ್ಲಿಸಿದರು ಅದನ್ನ. ತಲೆ ಎತ್ತಿ ನೋಡ್ತು ಅದು. Bus upholstery ನಲ್ಲಿ ಒತ್ತು ಶಾವಿಗೆ ತರಹ design ಇತ್ತು. ಅದನ್ನ ನೋಡಿದ್ದೆ...daddy...mummy.....this looks like noodles !!! ಅಂತು. bus was full then. ಇಡಿ bus zindagi...ಇಡೀ bus...ಒಂದೇ ಸಲ ತಲೆ ಎತ್ತಿ ನೋಡ್ತು !!! Nobody had seen the creative part of the upholstery till then. That kid saw all of us staring up and gleamed !!! It felt it was on the top of the world !! We were bowled over by its amazing creativity !! truly zindagi...we lost our creativity thinking about all other useless and complicated things in the world !!!I rememberd a saying by Einstein " you will never get a nobel if you kill the child in you " ಅಂತ !!

Z : ನಿಜ...ಅವರು ಪ್ರಪಂಚವನ್ನು ನೋಡುವ ಕಣ್ಣುಗಳೇ ಬೇರೆ !!! ಆಮೇಲೆ ?

ನಾನು : bus left at 11. ಮನೆಗೆ phone ಮಾಡೋ ಕರ್ತವ್ಯ ಮುಗಿಸಿದದೀವಿ. The bus was going via mysore...so we decided to finish all our sleeping shifts by the time we reach mysore and stay awake to watch the nature for the rest of our journey. That kid had slept. So, no free entertainment.It was a new bus...so no TV also. ಹೆಸರಿಗೆ ವೊಲ್ವೊ !! one techie ( 25 - 26 years may be )was hugging his laptop and reading tinkle and we were eyeing him jealously...so our code for him was tinkle uncle.my friend decided to steal that tinkle, read it and return it to him promptly saying "uncle, thanks for your tinkle ". we were thinking of all possible plans to steal it. we decided to steal it when he got down for lunch. we had anyways brought our lunch,so we were not getting down.the plan was ready. that tinkle uncle hugged his laptop and slept off. He started snoring, and so were others on the bus. ನನಗಂತೂ fork ಇಟ್ಕೋಂಡು frequency determine ಮಾಡೋ ಅಷ್ಟು ಆಸೆ ಆಯ್ತು !! But no tuning fork !! We also slept off....and got up when the bus was reaching hunsur. ಎಲ್ಲೂ ಸಂಕ್ರಾಂತಿಯ ಸಂಭ್ರಮವೇ ಇರದಿದ್ದುದು ನಮಗೆ ಸ್ವಲ್ಪ ಆಶ್ಚರ್ಯ ತಂತು.ಬಣ್ಣವಿರದ ಹಸುಗಳ ಕೊಂಬು, ಫಸಲಿನ ರಾಶಿ ಇರದ ಹೊಲ ಗದ್ದೆಗಳು, ಕಟಾವುಗೊಂಡಿಲ್ಲದ ಕಬ್ಬು ...quite surprising ! we didnt know how to interpret this anomaly. ಸುಮ್ಮನಿದ್ದೆವು. ಮಂಡ್ಯದಲ್ಲಿ ಹೇರಳವಾಗಿ ಕಾಣಿಸುತ್ತಿದ್ದ black soil and sugarcane slowly started disappearing and we started seeing vanilla, pepper and coffee estates. ಕುಶಾಲನಗರದ bus stop ನಲ್ಲಿ ಊಟಕ್ಕೆ ನಿಲ್ಲಿಸಲಾಯಿತು. we decided to execute the plan. My friend was about to take it, when she suddenly decided not to. we came back to our places, and that tinkle uncle came back to the bus suddenly !!! we were thanking our luck !!

Z : Serves you people right !! ಹಂಗೇ ಆಗ್ಬೇಕು !!

ನಾನು : yeah right !! ಕದಿಯಲಿಲ್ಲವಲ್ಲಾ...ಅಷ್ಟಕ್ಕೆ ತೃಪ್ತಿ ಪಡು ! Bus moved on further and again that tinkle uncle and others slept off !! ನನಗಂತು ಅವರೆಲ್ಲ waste people ಅನ್ನಿಸಿತು. nature ನ enjoy ಮಾಡ್ಬೇಕು ಅನ್ನೋ ಅಷ್ಟು aesthetic sense ಇಲ್ಲದೇ ಇರೋರು ಅನ್ನಿಸಿತು !! we were reaching ಮಡಿಕೇರಿ...there were a lot of small rivulets... ಮಡಿಕೇರಿ ಅನ್ನೊ ಷೋಡಷಿಗೆ ಕಾಲ್ಗೆಜ್ಜೆ ಹಾಕಿದಂಗೆ ಘಲ್ ಘಲ್ ಅಂತ ಶಬ್ದ ! My god !! that was a treat to our eyes !!ಮಡಿಕೇರಿ- ಸೂಳ್ಯ road had a lot of N- bends and we were enjoying every turn...aaga 4.30 p.m. surya was starting his return journey while we were descending ghats. My goodness zindagi !! what all shades of green did we see in every single mountain !! we wondered how many shades of green did God have on his palette when he painted earth !! He is the best artist !! ಅತ್ಯದ್ಭುತ ಕಲಾವಿದ !! ಇಂತಹ ಚಿತ್ತಾರವನ್ನೆಲ್ಲ ನೋಡದೇ ನಿದ್ದೆ ಮಾಡುವವರನ್ನು ನೋಡಿ ನನಗೆ ಅವರ ಮೇಲೆ ನೀರು ಸುರಿಯುವಷ್ಟು ಕೋಪ ಬಂತು!!

Z : volvo ನಲ್ಲಿ ನೀರು ಇರತ್ತಲ್ಲಾ...ಅವರವರ bottle ತಗೊಂಡು ಅವರ ಮುಖಕ್ಕೇ ಸುರಿಯೋದಪ್ಪ !!

ನಾನು : Brilliant idea !! ನಿನ್ನ ತಲೆ !! ಹಾಗೆ ಮಾಡಿದ್ರೆ ನಾನು nature ನ enjoy ಮಾಡೋದು miss ಆಗೋಗಲ್ವ ? ಅವರಿಗೆ ಇಂತಹ ನೋಟ miss ಆದದ್ದೇ ಅತೀ ದೊಡ್ಡ ಶಿಕ್ಷೆ !

Z : ಸರಿ.this seems to be a better punishment. ಆಮೇಲೆ ?

ನಾನು : ಕಾವು ಅನ್ನೋ ಜಾಗದಲ್ಲಿ coffee ಗೆ ನಿಲ್ಲಿಸಿದರು. hotel khushi ಅಂತ ಅದರ ಹೆಸರು. ನಾವು coffee order ಮಾಡಿ, ಸ್ವಲ್ಪ strong ಇರಲಿ ಅಂತ ಹೇಳಿದೆವು. ಅವನು ಐದು ನಿಮಿಷ ಬಿಟ್ಟು ಕಾಫಿ ತಂದಿಟ್ಟ. ಅದರಲ್ಲಿ ಹಾಲಿರಲಿಲ್ಲ, decoction ಅಂತು ಇರಲೇ ಇಲ್ಲ, ಸಕ್ಕರೆಯ spelling-ಉ ಇದಕ್ಕೆ ಗೊತ್ತಿದ್ದ ಹಾಗೆ ಕಾಣಲಿಲ್ಲ..ನೀರಿನ ತರಹನೂ ಇರಲಿಲ್ಲ.ಕಾಫಿಯ ಕಟ್ಟಾ ಅಭಿಮಾನಿ ಮತ್ತು ಆರಾಧಕರಾದ ನಮಗೆ ಇದು ಏನು ಅಂತ ನಾವು da vinci code ತರಹ decipher ಮಾಡ್ಬೇಕಿತ್ತು. but time ಇರ್ಲಿಲ್ಲ. ಕಲ್ಗಚ್ಚು ಇದ್ದಿದ್ದರೆ ಅದನ್ನೇ ಚಪ್ಪರಿಸಿಕೊಂಡು ಕುಡಿಯಬಹುದಿತ್ತು. but this was worse than that !!! ಜಠರಾಗ್ನಿಯ ಗಲಾಟೆಯುಕ್ತ ನಿರಾಕರಣೆಯನ್ನು ಹೇಗೋ ಸಮಾಧಾನ ಪಡಿಸಿ,ದುಡ್ಡು ಕೊಟ್ಟ ತಪ್ಪಿಗೆ ಇದನ್ನು ಹೇಗೋ ಒಳಗೆ ನೂಕಿದೆವು. ನಮ್ಮ ಹಿಂದೆಯೇ ಇನ್ನೊಬ್ಬರು ಬಂದು ಕಾಫಿ ಹೇಳಿದರು. ಸಕ್ಕರೆ ಕಮ್ಮಿ ಇರಲಿ ಎಂದರು. ನಮಗೆ ಇದನು ಕೇಳಿಯೇ ನಗು ಬಂತು !! ನಾವು ನಕ್ಕಿದ್ದನ್ನು ಅಪಾರ್ಥ ಮಾಡಿಕೊಂಡ ಅವರು ನಮ್ಮನ್ನು ದುರುದುರು ನೋಡಿದರು.ನಾವು ಅವರಿಗೆ ಒಂದು ಸಹಾನುಭೂತಿಯ ನೋಟ ಬೀರಿದೆವು. ಅದು ಅವರಿಗೆ ಮತ್ತಷ್ಟು ಕೋಪ ತರಿಸಿತು. we couldnt help it !!ನನಗೆ ಮಹಲಿಂಗ ರಂಗರ ಅನುಭವಾಮೃತದ ಒಂದು ವಚನ ನೆನಪಾಯಿತು -

ಹರಕೆಗೆಂದೇ ತಂದ ಕುರಿ ತಾ
ನರಿಯದಕಟಾ ಕೊಲುವರೆಂಬುದ
ಹಿರಿದು ಹಸಿವಿಗೆ ತಳಿರ ಮೆಲುವುದು ತೋರಣಕೆ ತಂದ ||
ನರಕುರಿಗಳದರಂತೆ ತಮಗಹ
ಮರಣವನು ತಾವರಿಯದೀ ಸಂ
ಸರಣ ದುಃಖದಿ ಮಗ್ನರಾಗಿಯೆ ಮೃತ್ಯುವಶರಹರು ||

ಹೀಗೆಂದುಕೊಂಡು ಬಸ್ಸು ಹತ್ತಿದೆ.khushi ಹೋಟೆಲಿನ ಈ ನೆನಪು ...ಖುಷಿ!!

Z : ಬಕ್ರಾ...ಬಕ್ರಾ...ಅ ಅ ಅ ಅ ಅ ಅ !!!ಹೆ ಹೆ ಹೆ ಹೆ ಹೆ ಹೆ ...ನನಗಂತು ನಗು ತಡಿಯಕ್ಕೇ ಆಗ್ತಿಲ್ಲ..

ನಾನು : ನಮಗೂ ಅಷ್ಟೆ !!! ನಾವು ಪುತ್ತೂರು ಮುಟ್ಟುವ ತನಕ ನಕ್ಕಿದ್ದೇ ನಕ್ಕಿದ್ದು. ಪುತ್ತೂರಿನ ತನಕ ನಮಗೆ network ಸಿಗುತ್ತಿರಲಿಲ್ಲ. ಪುತ್ತೂರಿನಲ್ಲಿ ನನ್ನ ಮಂಗಳೂರಿನ ಸ್ನೇಹಿತೆ phone ಮಾಡಿದಳು.ಅವಳಿಗೆ ನಾವು ಪುತ್ತೂರಿನಲ್ಲಿದ್ದೇವೆ ಎಂದೆವು. ಆಗ ಅವಳು ಇನ್ನೊಂದು ಗಂಟೆಯಲ್ಲಿ ನಾವು ಮಂಗಳೂರು ತಲುಪುತ್ತೇವೆ ಎಂದು ಹೇಳಿ ಅವಳು bus stand ನಲ್ಲಿ ಕಾಯುವುದಾಗಿ ಹೇಳಿದಳು. ಮಂಗಳೂರು ತಲುಪುವ ಮುಂಚೆ b.c. road ಎನ್ನುವ ರಸ್ತೆ ಬಂತು. ನಾವು ಅದರ abbreviation expand ಮಾಡಲು ಇಚ್ಛಿಸಿದೆವು. b for bangalore. c for ? cochin ಅಂತ ನಾನು...chennai ಅಂತ ನನ್ನ ಸ್ನೇಹಿತೆ. ಹೀಗೆ ಮಂಗಳೂರಿನ ತನಕ cochin- chennai, cochin -chennai ನಡಿತನೇ ಇತ್ತು. ನನ್ನ ಮಂಗಳೂರಿನ ಸ್ನೇಹಿತೆಯ ತಂದೆ journalist. ಅವರಿಗೆ ಗೊತ್ತೇ ಇರತ್ತೆ..ಹೋದ ತಕ್ಷಣ ಕೇಳೋಣ ಅಂತ decide ಆಯ್ತು. ನಮಗೆ ಸ್ವಲ್ಪನಾದ್ರು ಬುದ್ಧಿ ಬೇಡ್ವಾ ?If this road led to mangalore...it should have read mangalore cochin or mangalore coimbatore ತಾನೆ ? we had forgotten every bit of geography ಅನ್ನೋದು prove ಆಯ್ತು !!

Z : ನಿಮಗೆ ಬುದ್ಧಿ ಇಲ್ಲದೇ ಇರೋದು ಗೊತ್ತಿರೋ ವಿಷಯ ! but it is a very late realisation for you !!

ನಾನು : silence !!!!!!!!!!!!!!!!! Dont under estimate us like this !

Z : ಹೆ ಹೆ ಹೆ ಹೆ ಹೆ !!!ok continue !

ನಾನು : ಮಂಗಳೂರು ತಲುಪಿದಾಗ ರಾತ್ರಿ ಎಂಟು ಗಂಟೆ . ನಮ್ಮ ಸ್ನೇಹಿತೆ ಅಲ್ಲೇ ಕಾದಿದ್ದಳು. auto ಹತ್ತಿ ಬಾರೆಬಯಲಿನಲ್ಲಿರುವ ಅವಳ ಮನೆಗೆ ಹೋದೆವು. ನಮ್ಮ ಮಾತು ಕತೆ, ಪರಿಚಯ ಎಲ್ಲ ಆಯಿತು.ಮಂಥನ ನೋಡಿದೆವು .ಅದಾದ ತಕ್ಷಣ ನಾನು ತಕ್ಷಣ million dollar question ಕೇಳಿದೆ. B.C. road nalli B.C ಅಂದರೆ ಏನು ಅಂತ .bangalore cochin or bangalore chennai ?

ಅದಕ್ಕೆ ನನ್ನ ನೇಹಿತೆಯ ತಂದೆಯವರು ..." B.C road ಅಂದರೆ ಬಂಟ್ವಾಳ cross road ಅಂತ !! " ಅಂದರು !!!

Z : ROFL !!!!!!!!!!!!!!!!!

ನಾನು : stop it !!!!!!!!!!!!!!!!!!! ನಮಗೆಷ್ಟು ಬೇಜಾರು ಆಯ್ತು ಗೊತ್ತ ? ನೀನು ನಕ್ಕು ನಕ್ಕು ನನ್ನ ಪ್ರಾಣ ತೆಗಿಬೇಡಾ !!!

Z : Can't help !! ನೀವುಗಳು ಮಾಡಿಕೊಂಡಿರೋ ಅವಾಂತರಕ್ಕೆ ಅಳಕ್ಕಂತೂ ಆಗಲ್ಲ...let me laugh !!

ನಾನು : ಶ್ !!!!!!!!!!!!! ನಿಶ್ಶಬ್ದ !!! ಮುಂದೆ ಏನಾಯ್ತು ಅಂತ ಕೇಳೊಲ್ವಾ ?

Z : ಆಮೇಲೆ ಏನಾಯ್ತು ?

ನಾನು : ಊಟ ಆಯಿತು. ನಮ್ಮ ಮಾತುಕತೆ start ಆಯ್ತು. ನಮ್ಮ ಮತ್ತು ಅವರ university ಗಳ first hand gossip ಮಾತಾಡುವ ಹೊತ್ತಿಗೆ ಹನ್ನೆರಡಾಯಿತು. ನಾನು ಹನ್ನೆರಡು ಮುಕ್ಕಾಲಿಗೆ ಮಾತಾಡುತ್ತಲೇ ನಿದ್ದೆಗೆ ಜಾರಿದೆ. ನನ್ನ ಇನ್ನಿಬ್ಬರು ಸ್ನೇಹಿತರು ಮಲಗಿದಾಗ ಎರಡು ಗಂಟೆಯಂತೆ !!!

ಇದು ಹದಿನೈದನೆಯ ತಾರೀಖಿನ report. ನಾಳೆ ಹದಿನಾರನೇ ತಾರೀಖಿನ report. ok?
line on hold .

(ಸಶೇಷ)

3 comments:

Parisarapremi said...

ha ha ha... tinkle uncle kathe chennaaagide.. :-)

aamele, alla, BC road andre gottilva? yappaaaa....

he he... Z ge innu enen kaadidyO paapa..

ಅಂತರ್ವಾಣಿ said...

ತುಂಬಾ ಚೆನ್ನಾಗಿದೆ ನೀವು ಬರ್ದಿರೋದು.
ಆ ಪ್ರಕೃತಿ ಮಾತೆಯ ನೋಡುತ್ತಾಯಿದ್ದರೆ.. ನಾನು ಅಲ್ಲೆ ಇದ್ದುಬಿಡೋಣ ಅನ್ನಿಸುತ್ತೆ...(ಈ software engr ವೃತ್ತಿ.. ಬೇಡವೇ ಬೇಡ..)
ಹ ಹ ಹಾ ಹಾ

Sridhar Raju said...

full comedy zindagi jotey nim maathukathe..... usually naan system mundhe irovaaga haad keLkond blog oodho abhyaasa..nim ee article na oodak shuru maadid mele songs play aagtiddanna stop maadi oodide :-)..super idhe...

Z : ಜೋಪಾನ ಅಂತ One thousand times-ಉ, time time ಗೆ phone ಮಾಡಿ ಅಂತ 500 times -ಉ, ನಿದ್ದೆ ಮಾಡುವಾಗ ಕತ್ತು ಉಳುಕಿಸ್ಕೋಬೇಡಿ ಅಂತ 100 times-ಉ....ಎಲ್ಲೆಲ್ಲೋ ಎನೆನೋ ತಗೋಬೇಡಿ ಅಂತ 2000 times-ಉ....

ನಾನು : ಹು !!!!!!!! ನನಗೆ ಕತ್ತು ಉಳುಕಿತು...travel ಮಾಡಿ ಅಲ್ಲ....ಅವರು ಹೇಳಿದ್ದಕ್ಕೆಲ್ಲಾ ತಲೆ ಆಡಿಸಿ ಆಡಿಸಿ !!!!


sikk sikkapatte nagu banthu ee melin lines oodhi... :-)

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...