ನಾನು : ಒಬ್ಬಳೇ ಹೋಗ್ತಿಯಾ ಅಂತ ಕೇಳಿದರು ಅಮ್ಮ. ಜೀವನದಲ್ಲಿ ಮೊದಲನೇ ಸರ್ತಿ ಮನೆ ಬಿಟ್ಟು ಹೊರಗೆ ಹೋಗ್ತಿರೋ ಹಾಗೆ.
Z : ಇನ್ನೇನ್ ಮತ್ತೆ. ವಿದ್ಯಮಾನಗಳು, ವಾರ್ತೆಗಳಿಂದ ಏನು ಕಡಿಮೆ ಗಾಬ್ರಿ ಆಗಿರತ್ತ ? ನೀನೇನಂದೆ ?
ನಾನು : ಆಗಿದ್ದು ಇಷ್ಟು. ನಾನು ಕಂಪನಿಯಿಂದ ಕಳಿಸಬೇಕಿದ್ದ ಹೊಸ ವರ್ಷಕ್ಕೆ ಗ್ರೀಟಿಂಗ್ ಕಾರ್ಡ್ ಸೆಲೆಕ್ಟ್ ಮಾಡಲು ಜಯನಗರಕ್ಕೆ ಹೋಗಬೇಕಿತ್ತು. ಹೊರಗೆ ಭಯಂಕರ (ನನಗೆ ಮಾತ್ರ) ಚಳಿ. ಆದ್ರೆ I had to go.
ಅಮ್ಮ : ಅಣ್ಣನಿಗೆ ಫೋನ್ ಮಾಡು. ಕಾರ್ ನಲ್ಲಿ ಹೋಗು. ಒಬ್ಬೊಬ್ಬ್ಳೇ ಅಲಿಬೇಡಾ. ಪ್ಲೀಸ್.
ನಾನು : ಯಾಕೆ ?
ಅಮ್ಮ: ನೆಕ್ಸ್ಟ್ ಟಾರ್ಗೆಟ್ಟ್ ಬೆಂಗಳೂರು...
ನಾನು : ಶುಭ ನುಡಿ.
ಅಮ್ಮ: ಹೇಗ್ ನುಡ್ಯಕ್ಕಾಗತ್ತೆ ? ನಿಂಗೇನ್ ಗೊತ್ತು ನಮ್ ಯೋಚ್ನೆ ?
ನಾನು : ಯೋಚ್ನೆ ಮಾಡ್ಬೇಡ. ನಿನಗೆ ತೃಪ್ತಿ ಆಗತ್ತೆ ಅಂದ್ರೆ ಹತ್ತ್ ಹತ್ತ್ ನಿಮಿಷಕ್ಕೂ ಫೋನ್ ಮಾಡ್ಲಾ ?
ಅಮ್ಮ: ಅವೆಲ್ಲಾ ಬೇಡ. ನನಗೆ ಧೈರ್ಯ ಇದೆ. ಆದ್ರೂ ಈ ಚಳಿ ಲಿ ಹೋಗ್ಬೇಕಾ ?
ನಾನು : ಸಿಯಾಚಿನ್ ಗ್ಲೇಸಿಯರ್ ನಲ್ಲಿ ಟೆಂಪೆರೇಚರ್ರು ಮೈನಸ್ ೩೦ ಇರತ್ತೆ. ಅಲ್ಲಿ ನಮ್ಮ ವೀರ ಯೋಧರು ಬದುಕ್ಕೊಂಡು ದೇಶ ಕಾಯ್ತಿಲ್ವಾ ಇಲ್ಲೇನ್ ಚಳಿ ಮಹಾ..ನಾನ್ ಹೋಗ್ಬರ್ತಿನಿ.
ಅಮ್ಮ : ಹಿಂಗೆಲ್ಲಾ ಹೇಳಿದ್ರೆ ನಾನ್ ನಿನ್ನ ಕಳ್ಸ್ತಿನಿ ಅಂತ ಅಂದುಕೊಂಡಿದ್ಯ ?ಪ್ಲೀಸ್ ಸ್ವಲ್ಪ ದಿನ ಮನೇಲಿ ಇರ್ಬಾರ್ದ ?
ನಾನು : ಏನಾಗಲ್ಲಮ್ಮ...ಹೆದ್ರುಕೋಬೇಡ, ಪ್ಲೀಸ್ !
ಅಮ್ಮ: ಸರಿ ಏನಾದ್ರೂ ಮಾಡ್ಕೋ.
Z : ರಾಮ !
ನಾನು : ಆವಾಗ ಹಾಗ್ ಹೇಳಿ ಮನೆಯಿಂದ ಹೊರಗ್ ಬರೋದೇನೋ ಬಂದುಬಿಟ್ಟೆ. ಆದ್ರೆ ಬಂದ್ ಮೇಲೆ ಒಳಗೆ ಒಂಥರಾ ಭಯ ಶುರುವಾಯ್ತು. ಜಯನಗರದಲ್ಲಿ ನಾನು ಬಸ್ ಸ್ಟಾಪ್ ನಲ್ಲಿರೋವಾಗ ಸಡನ್ನಾಗಿ ಯಾರಾದ್ರು ಗುಂಡು ಹಾರಿಸಿಬಿಟ್ಟರೆ ? ಬಸ್ ನಲ್ಲೇ ಯಾರಾದ್ರೂ ಏನಾದ್ರು ಮಾಡಿಬಿಟ್ಟರೆ ? ಕಾಂಪ್ಲೆಕ್ಸ್ ಬ್ಲಾಸ್ಟ್ ಆದರೆ ? ಏನಿದು ಕ್ಷಣ ಕ್ಷಣಕ್ಕೂ ಇಷ್ಟೋಂದು uncertainty ? ಎಲೆಕ್ಟ್ರಾನ್ ( electron) ಜೀವನ ವಾಸಿ ಅನ್ನಿಸ್ತು ನನಗೆ ನನ್ನ ಜೀವನ compare ಮಾಡಿದ್ರೆ.
Z : ನಿಜ.
ನಾನು : ಮುಂಬೈ ನಲ್ಲಿ ನಡೆದ ಆ ಮಾರಣ ಹೋಮದ ಶಾಕ್ ಇಂದ ನಾನಂತೂ ಇನ್ನೂ ಹೊರಬಂದಿಲ್ಲ. ಅಲ್ಲಾ...ನಮ್ಮ ದೇಶಕ್ಕೆ ಹೀಗೂ ಒಂದು ದಾಳಿ ನಡೆಯಲಿದೆ ಅಂತ ಕನಸಿನಲ್ಲೂ ಎಣಿಸಿರಲಿಲ್ಲ. ಭಾರತದ ಪ್ರತಿಷ್ಟೆ, ಗೌರವ ಹಾಗೂ ಪ್ರೀತಿಪಾತ್ರವಾದ ಮುಂಬೈಯ ಮೇಲೆ ಇಂತಹಾ ಧಾಳಿಯೇ ? ಗೇಟ್ ವೇ ಆಫ್ ಇಂಡಿಯಾ ಭಯೋತ್ಪಾದಕರಿಗೆ ಹೆಬ್ಬಾಗಿಲಾಯ್ತೆ ?
Z : ಅನ್ಯಾಯ ಇದು. ಅಲ್ಲಾ...ಈ ಘಟನೆಯ ಉದ್ದೇಶ ಏನೂ ಅಂತ ?
ನಾನು : ಉದ್ದೇಷ ಅಸ್ಪಷ್ಟ . ರಾಜಕೀಯವೋ, ಮ(ದಾ)ತಾಂಧತೆಯೋ, ಜೆಹಾದ್ ಓ, ಭಯೋತ್ಪಾದನೆಯೋ, ಏನೋ ಎಂತೋ....
Z : ಆದ್ರೂ...massive attack .
ನಾನು : ಹೂ ಮತ್ತೆ. If they so much wanted to grab the world's attention, was there no way other than mass destruction ?
Z : ಹಾಗಲ್ಲ head ruled, ಇಂತಹ ಜನಕ್ಕೆ ಒಳ್ಳೇದು ಕೆಟ್ಟದ್ದು ಅನ್ನೋ ಪರಿಲಕ್ಪನೆ ಸರಿ ಇಲ್ಲ ಅನ್ನಿಸತ್ತೆ. fundamental error ಇದು.
ನಾನು : ಇರ್ಬಹುದು. ಆದ್ರೆ ಇಲ್ಲಿ ನಮ್ಮ ತಪ್ಪು ಹೆಚ್ಚಿದೆ .
Z : how can you make a statement like this ?
ನಾನು : That is because it is the truth. ನೋಡು...ಪ್ರಾಬ್ಲೆಮ್ ಶುರುವಾಗಿದ್ದು ಮುಂಬೈ ನಲ್ಲಿ ಅಲ್ಲ. ಪೂರ್ತಿ ಪಶ್ಚಿಮ ಕರಾವಳಿ ಲಿ. ದಿನಕ್ಕೆ ಕರಾವಳಿಯಿಂದ ಹೋಗುವ/ ಬರುವ ದೋಣಿಗಳ ಲೆಕ್ಕ ಸರಿಯಿರುವುದಿಲ್ಲ. ಕಸ್ಟಂ ಇಲಾಖೆಯ ಬಗ್ಗೆ ನಾನು ಮಾತಾಡದಿರುವುದು ಒಳಿತು. ಕಳೆದು ಹೋದ ದೋಣಿಗಳ ಬಗ್ಗೆ ತನಿಖೆ....ಬೇಡ ಅಲ್ಲ ಇವೆಲ್ಲ ಮಾತು ? ಕ್ಲೀಷೆ ಅನ್ಸತ್ತೆ.
Z : ಹು. ಆದ್ರೂ ನೆನ್ನೆ ಅಣ್ಣ ಹೇಳ್ತಿದ್ರಲ್ಲ...ನಮಗೆ " owningness " ಇಲ್ಲಾ ಅಂತ. ಅದು ನಿಜ ಅನ್ನಿಸತ್ತೆ. We don’t own over country at all. We own our property, we own our caste, creed. ನಮ್ಮ ಜಾತಿ, ಮತ, ಧರ್ಮಕ್ಕಿಂತಾ ಮೇಲೆ ನಾವಿರುವ ಈ ದೇಶ ನಮ್ಮದು ಅಂತ ನಮಗೆ ಅನ್ನಿಸಲ್ಲ. ಅದೇ ತೊಂದರೆ. ಲಂಚ ತಗೊಳ್ಳೋವಾಗ ನಮಗೆ ನಾವು ದೇಶಕ್ಕೆಮಾಡ್ತಿರೋ ದ್ರೋಹ ನೆನ್ಪಾಗಲ್ಲ. ಒಬ್ಬ ಸಮಾಜ ಘಾತುಕನನ್ನು ಹಾಗೇ ಬಿಟ್ಟರೆ ಅದರಿಂದ ಪ್ರಜೆಗಳ ಭದ್ರತೆಗೆ ಆಗುವ ಅಪಾಯದ ಅರಿವಿಲ್ಲ. ಪಾಸ್ಪೋರ್ಟೀಗೆ ನಮ್ಮ ದೇಶದ ಗುರುತು ಬೇಕು, ತಿಂದು ಕುಡಿದು ಸ್ವೇಚ್ಛೆಯಿಂಡ ತಿರುಗಾಡಲು ಭಾರತವೇ ಬೇಕು . This is seriously disgusting.
The most disappointing thing is- Our county declares itself " Sovereign Socialist Secular Democratic Republic" . ಯಾವ್ದಾದ್ರು ಒಂದು ಶಬ್ದನ ಅರ್ಥ ಮಾಡ್ಕೊಂಡಿದಾರಾ ಜನ ? ಹಾ ? ಅಥ್ವಾ ಆ ಶಬ್ದಗಳ ಥರ ನಡ್ಕೊಂಡಿದಾರ ರಾಜಕಾರಿಣಿಗಳು ? This attack is a blow to our Sovereignty. It is a black mark on socialism and the act is dead opposite to secularism. With democracy being a business...are we a Republic anymore ???????????????????????
ನಾನು : ಇನ್ನೊಂದು ಅತೀ ಸೀರಿಯಸ್ ವಿಷಯ ಇದೆ. ದೇಶದಲ್ಲಿ ಇರುವ ಅನ್ಯ ದೇಶೀಯರನನ್ನು ನಾವು ಸರಿಯಾಗಿ ಮಾನಿಟರ್ ಮಾಡ್ತಿಲ್ಲ. Cricket match ನೊಡಲು ಬರುವ ಅನ್ಯ ದೇಶೀಯಯರು ಭಾರತ ಬಿಟ್ಟು ಹೋದ್ರಾ ? ಗೊತ್ತಿಲ್ಲ. ಸರಿಯಾದ ಸಮಯದಲ್ಲಿ ವೀಸಾ ರೆನ್ಯೂ ಮಾಡದವರ ಮೇಲೆ ಕ್ರಮ ಜರುಗಿಸಲಾಗತ್ತಾ ? ಗೊತ್ತಿಲ್ಲ. ಎಲ್ಲದಕ್ಕು ನಮ್ಮ ದೇಶದಲ್ಲಿ ಒಂದು ದರಿದ್ರ ಉಡಾಫೆ. ಅಷ್ಟೆ. ಆಮೇಲೆ ಇಂತಹಾ ದಾಳಿಗಳಿಂದ ನಾವು ನಿದ್ದೆಯಿಂದ ಎದ್ದು, ನಮ್ಮ ಕಮಾಂಡೋಸ್ ಗಳನ್ನ ಬಿಟ್ಟು ಕಾರ್ಯಾಚರಣೆಯಲ್ಲಿ ಕೆಲ ಸಾವು ನೋವು ವೀರಮರಣಗಳಾದ ಮೇಲೆ, ನಮ್ಮ ವ್ಯವಸ್ಥೆಯ ಧಣಿಗಳ ತಲೆಯಲ್ಲಿ tube light on ಆಗತ್ತೆ. ಓಹ್...ತಪ್ಪಾಗಿದ್ದು ಇಲ್ಲಿ ಅಂತ. ಛೆ...ಧಿಕ್ಕಾರ ನಮ್ಮ ವ್ಯವಸ್ಥೆಗೆ.ನಮ್ಮ ವೀರ ಯೋಧರಿಗೆ ಭಾವಪೂರ್ಣ ಅಶ್ರುತರ್ಪಣ.
ನಮ್ಮ ದೇಶದವರು ಸಣ್ಣ ಸಣ್ಣ ಕ್ಲೂ ನೂ ಸೀರಿಯಸ್ಸಾಗಿ ತಗೊಳ್ಳೋ ವರ್ಗು ಉದ್ಧಾರ ಆಗಲ್ಲ Z.
Z : ಕರೆಕ್ಟು. ಆದ್ರೆ ನೀನು ಇನ್ನೊಂದು ವಿಷಯ ನ observe ಮಾಡಿದ್ಯಾ ? ಅಣ್ಣ point out ಮಾಡಿದ್ರಲ್ಲಾ ?
ನಾನು : ಏನು ?
Z : ಭಾರತದ ಪಾಪ್ಯುಲೇಷನ್ ಈಗ ಎಷ್ಟು ?
ನಾನು : 1132 million ಅನ್ನತ್ತೆ ವೆಬ್ ಸೈಟು.
Z :ಈ ಪಾಪ್ಯುಲೇಷನ್ ಗೆ ತಕ್ಕ ratio ನಲ್ಲಿ police and armed forces ಇದೆಯಾ ?
ನಾನು : ????????????????????
Z : ಇಲ್ಲ. ಸತ್ಯ ಒಪ್ಕೋ.
ನಾನು : ಹ್ಮ್ಮ್ಮ್
Z : ನೋಡು, ನಾವಿಲ್ಲಿ ಕೋಟ್ಯಂತರ ಜನ ಇದ್ದೀವಿ. ಅದರೆ ಸೈನ್ಯ ಇರೋದು ಕೆಲವು ಸಾವಿರ ಮಾತ್ರ. Its a dangerous difference in the order of magnitude. ಪಂಜಾಬ್ ನವರು ಹೋರಾಡ್ತಾರೆ...ಕೊಡವರು ಇದ್ದಾರೆ ಹೋರಾಡೋಕೆ ಅಂತ ದೇಶದ ಬಹಳ ಜನ ಸುಮ್ನೆ ಕೂತಿರ್ತಾರೆ. ಈಗ್ಲೂ ಸುಮ್ನೆ ಕೂತಿದಾರೆ. ನೀವೆಲ್ಲ ದಯವಿಟ್ಟು ಈ ಆರ್ಟಿಕಲ್ ನ ಓದಿ.
ಬೇರೆ ಏನು ಕೆಲ್ಸ ಸಿಕ್ಕಲಿಲ್ಲ ಅಂತ army ಸೇರೋ ಅಂಥಾ hopeless ಸ್ಥಿತಿ ಗೆ ತರಬಾರದು ನಾವು ನಮ್ಮ ದೇಶ ನ. ನಮ್ಮ ದೇಶ ಅಂತ ಒಂದಿದ್ದ್ರೆ ನೆ ನಾವು ಅಲ್ವಾ ? ತಂದೆ ತಾಯಂದ್ರು ಈಗ ಜಾಣರಾಗದೇ ಇದ್ರೆ ಮುಂದೆ inevitable ಆಗಿ " ಮನೆಯಿಂದ ಒಬ್ಬ ಸೈನಿಕ " ಅಂತ ಹೋಗ್ಲೇ ಬೇಕಾಗತ್ತೆ. ಬೇರೆ ದಾರಿ ಇರಲ್ಲ. ಅದರ ಬದ್ಲು ಮಕ್ಕಳಲ್ಲಿ ಮೊದಲು ದೇಶಭಕ್ತಿ ಭಾವನೆ ತುಂಬಿಸಿ ಅವ್ರನ್ನ ದೇಶಕ್ಕೆ ಹೋರಾಡೋ ಹಾಗೆ ಪ್ರೇರೇಪಿಸಬೇಕು. Atleast ನಾವೆ ನಮ್ಮನ್ನು defend ಮಾಡಿಕೊಳ್ಳುವ ಮಟ್ಟಿಗಾದರೂ ಬೆಳೆಸಬೇಕು. moreover, ಸೈನಿಕ ಅಂದ ತಕ್ಷಣ ಎಲ್ಲರು ಬಾರ್ಡರ್ ನಲ್ಲೇ ಇರ್ಬೇಕು ಅಂತ ಇಲ್ಲ. ಅದರಲ್ಲಿ ತುಂಬಾ ವಿಭಾಗಗಳಿರತ್ವೆ. ಅದಕ್ಕೆ distribute ಮಾಡ್ಬೇಕು ನಮ್ಮ ಜನಗಳನ್ನ. We have to fill in the gap. ಸಮಯ ಬಂದ್ರೆ ಪ್ರಾಣದ ಹಂಗು ತೊರೆದು ಹೋರಾಡೋ ಅಂಥಾ ಒಂದು ಮನೋಭಾವ ನ ಬೆಳೆಸಿಕೊಳ್ಳಬೇಕು. ಆ ಸಮಯ ಬರದೇ ಇರೋ ಹಾಗೆ vigilant ಆಗಿದ್ದು ಕಂಟ್ರೋಲ್ ಗೆ ತರ್ಬೇಕು ಪರಿಸ್ಥಿತಿ ನ. ತುರ್ತು ಪರಿಸ್ಥಿತಿನಲ್ಲಿ ಹೋರಾಡೋದು ಇದ್ದೇ ಇದೆ.
ನಾನು : I concur.
Z : ನಾನು ನೀನು ಅದ್ಯಾರಿಗೆ ಏನ್ ಅನ್ಯಾಯ ಮಾಡಿದ್ವೋ..ಆ ಪಾಪಕ್ಕೆ ಶಿಕ್ಷೆಯಾಗಿ ದೇವರು ನಮಗೆ ಬುದ್ಧಿ ಮಾತ್ರ ಕೊಟ್ಟ. ಶಕ್ತಿ ಕೊಡಲಿಲ್ಲ. ಮೋಸ ಆಗಿದೆ ನಮ್ಮಿಬ್ಬರಿಗೆ. ದೇವರಿಂದಲೇ !! ನಮ್ಮ ಕೈಲಿ ನಿಜ್ವಾಗ್ಲು ಆ ಶಕ್ತಿ ಇದ್ದಿದ್ದರೆ ನಾವು ಖಂಡಿತಾ ಆರ್ಮಿ ಸೇರ್ತಿದ್ವಿ. ನಮ್ಮ ತಂದೆ ಗೆ ಆರ್ಮಿ ಸೇರೋ ಆಸೆ ಇತ್ತು. ಆದ್ರೆ ನಮ್ಮ ತಾತ ಬಿಡಲಿಲ್ಲ. ನಮಗೆ ಸೇರ್ಬೇಕು ಅಂತ ಆಸೆ ಇದ್ರು, ಮನೇಲಿ ಒಪ್ಪಿದ್ರೂ ಇಲ್ಲಿ ದೇವರು ಒಪ್ಪಲಿಲ್ಲ ! Man proposes God disposes ಅನ್ನೋ ಗಾದೆಯ ಅತಿ ವಿಡಂಬನಾತ್ಮಕ ಉದಾಹರಣೆ ಬೇಕು ಪ್ರಪಂಚದಲ್ಲಿ ಅಂದ್ರೆ ಅದು ನಾವೆ.
ನಾನು : ನೆನಪಿಸಬೇಡ...ರಕ್ತ ಕುದಿಯತ್ತೆ.
Z :ನಮ್ಮ helplessness ಮೇಲೆ ನನಗೆ ಜಿಗುಪ್ಸೆ ಬರ್ತಿದೆ. ಕೆಲವರಿಗೆ ಶಕ್ತಿ ಇರತ್ತೆ, ಆಸೆ ನೆ ಇರಲ್ಲ. ಇನ್ನು ನಮ್ಮಂಥವರಿಗೆ ಆಸೆ ಇರತ್ತೆ, ಶಕ್ತಿ ಇರಲ್ಲ.
ನಾನು : ಬೇಡಾ......
Z : ಓಕೆ. coming back to the discussion, ಈಗ ನಮ್ಮ ದೇಶದ ಈ ಅತಂತ್ರ ಸ್ಥಿತಿ ಗೆ ನಾವೇ ಜವಾಬ್ದಾರರು. Where does the buck stop ? ಅಂತ ಕೂತ್ಕೊಂಡು ತಮಾಷೆ ನೋಡೊದನ್ನ ಬಿಟ್ಟು for once, ನಾವು ಎದ್ದು ಹೋರಾಡ್ಬೇಕು. ನಮ್ಮ ಕೈಯಲ್ಲಿ ಎಷ್ಟಾಗತ್ತೆ ಅಷ್ಟು, ಹೇಗಾಗತ್ತೆ ಹಾಗೆ, ಈ ದರಿದ್ರ ವ್ಯವಸ್ಥೆ ಮತ್ತು ಈ ಅಮಾನುಷ ಭಯೋತ್ಪಾದನೆ ವಿರುದ್ಧ ಹೋರಾಡ್ಬೇಕು. ನಾನಂತೂ ಹೀಗೆ ಅಂದುಕೊಂಡೀದಿನಿ. ನಮಗೆ ಮೋಸ ಆಗಿದೆ ನಿಜ. ಹಾಗಂತ ನಾನಂತೂ ಸುಮ್ಮನಿರಲ್ಲ. ನನ್ನ ಇರೋ ಶಕ್ತಿ ಬಳಸಿಯೇ ಈ ವ್ಯವಸ್ಥೆಯ , ಭಯೋತ್ಪಾದನೆ ವಿರುದ್ಧ ಹೋರಾಡ್ತಿನಿ.
I seriously think this event marks the beginning of a revolution, a revolution against a stinking system, revolution against terrorism. ಅಲ್ವಾ ?
ಜೀವನದೊಂದಿಗಿನ ನಮ್ಮ ಮಾತು lifetime ! ಇದರಲ್ಲಿ incoming -ಊ free outgoing -ಊ free !
ನನ್ನ ज़िंदगीಯೊಂದಿಗಿನ nonstop ಗುಸುಗುಸುವನ್ನು ಇಲ್ಲಿ ಬಿಚ್ಚಿಟ್ಟಿದ್ದೇನೆ.
Subscribe to:
Post Comments (Atom)
ಉತ್ತರಾಯಣ ೩
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ನಾನು : There is always a next time. Z : ಹೌದಾ ? ನಾನು : ಹೌದು. Z : ಪ್ರತೀ ಸಲವೂ ಹೀಗೆ ಆದರೆ ಗತಿಯೇನು ? ನಾನು : ಅದಕ್ಕೆ ನಿನ್ನ pessimistic ಅಂತ ಬೈಯ್ಯ...
-
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಬ್ಲಾಗಿನ ಹುಟ್ಟು ಹಬ್ಬ ಮತ್ತು ಹೊಸ ವರ್ಷ ಯಾವಾಗ್ಲು ಒಟ್ಟಿಗೆ ಬರತ್ತೆ. ಆದರೆ, ಮತ್ತೆ ಅದೇ flash back ಗೆ ಹೋಗಿ, ಅದೇ ...
5 comments:
ನೀವು ಹೇಳಿದ್ದೆಲ್ಲವೂ ನಿಜ... ಮಾತು ಬರದ ..ಮೂಕನಾಗಿದ್ದೇನೆ..
ಲೇಖನ ತುಂಬಾ ಚೆನ್ನಾಗಿದೆ...
ಅಭಿನಂದನೆಗಳು...
ಛೆ! ಗಡಿಬಿಡಿಯಲ್ಲಿ ಇಷ್ಟೊಂದು ಕಾಗುಣಿತ ತಪ್ಪು ಮಾಡೋದಾ!! ನಿಮ್ಮಿಬ್ಬರಿಗೂ (ನಿಮಗೆ, Zಗೆ) ದೇವರು ಬುದ್ಧಿ ಕೊಟ್ಟಿದಾನೆ ಅಂತ ಯಾರು ಹೇಳಿದ್ದು?
ಅದಿರಲಿ, ಜನರ ಬೆಂಬಲವಿಲ್ಲದೆ ಈ ಭಯೋತ್ಪಾದನೆಗೆ ತಡೆ ಹಾಕುವುದು ಅಸಾಧ್ಯ. ನಾವೇ ನಮ್ಮ ಕರ್ತವ್ಯ ಅರಿತು ಇದರ ಬಗ್ಗೆ ಕಾಳಜಿ ವಹಿಸಿಕೊಂಡು, ನಮ್ಮ ಕೈಲಾದಷ್ಟು ಸಹಕರಿಸಬೇಕು. ನನಗೂ ಈ ವ್ಯವಸ್ಥೆಯ ಬಗ್ಗೆ ಬಹಳ ಕೋಪ ಬಂದಿದೆ. ಸದ್ಯದಲ್ಲೇ ಬ್ಲಾಗಿನಲ್ಲಿ ಹೊರಬರಲಿದೆ...
ನಮ್ ದೇಶದ problemsಉ ಒಂದಾ ಎರಡ. ರಾಜಕಾರಿಣಿಗಳು ತಮ್ಮ ವೋಟಿಗೋಸ್ಕರ ಅಫಜಲ್ ಗುರು ಅಂಥವರಿಗೆ supreme court order ಆಗಿದ್ರೂ ನೇಣ್ ಹಾಕಕ್ಕೆ ತಡೀತಾರೆ. ಅಂಥ ದರಿದ್ರ hard core terrorists ಗಳಿಗೆ ಲಕ್ಷಾಂತರ ಹಣ ಸುರಿದು legal ಆಗಿ support ಕೊಡ್ತಾರೆ. so called ಅಲ್ಪ ಸಂಖ್ಯಾತರು ಬಾಂಗ್ಲಾ/ ಪಾಕ್ ಗಡಿಗಳಿಂದ್ ನಮ್ ದೇಶದೊಳಗೆ ನುಸುಳಿಕೊಂಡು ಬರೋದನ್ನ ನಮ್ಮೋರು ದೂರ್ದಲ್ಲಿ ಕೂತ್ಕೊಂಡು ನೋಡಿ ಮಜಾ ತಗೋತಾರೆ. Infact ಹಾಗೆ ಬರೋರಿಗೆ, ration card, voters ID, Driving Licence ನಮ್ ದೇಶದವರಿಗಿಂತ ಬೇಗ ಕೊಡಿಸ್ತಾರೆ. ಯಾಕೆ .. ದರಿದ್ರ ವೋಟ್ ಗೋಸ್ಕರ. ನಮ್ಮ ದೇಶದ so called ಅಲ್ಪ ಸಂಖ್ಯಾತರು "no more" ಅಲ್ಪ ಸಂಖ್ಯಾತರಾಗುವ ಸಮಯ ದೂರ ಉಳಿದಿಲ್ಲ.
ಇಲ್ಲೇ ಹುಟ್ಟಿ ಬೆಳೆದು ದೊಡ್ಡವರಾದ್ರೂ, ಅವರಿಗೆ ನಮ್ಮ ದೇಶದ ಮೇಲೆ ಕಿಂಚಿತ್ತೂ ಅಭಿಮಾನ ಇರಲ್ಲ. ಅಲ್ಲೆಲ್ಲೋ ಸದ್ದಾಂ ಸತ್ರೆ ಇಲ್ಲಿ ನಮ್ ಶಿವಾಜಿ ನಗರದಲ್ಲಿ ಪ್ರತಿಭಟಣೆ ಮಾಡ್ತಾರೆ. ಪಾಕಿಸ್ತಾನ cricket ನಲ್ಲಿ ಗೆದ್ರೆ ಪಟಾಕಿ ಹೊಡೆದು ಕುಣಿದಾಡ್ತಾರೆ. ಯಾಕೆ ಇದೆಲ್ಲ ನಮ್ಮವರಿಗೆ ಕಾಣಿಸೋಲ್ವ ? ಅಥವಾ ಜಾಣ ಕುರುಡಾ ?
ಮೊನ್ನೆ ನುಸುಳಿದ terrorists ಗಳು ಇಲ್ಲಿಯವರ ಬೆಂಬಲ ಇಲ್ಲದೆ ಅಷ್ಟೆಲ್ಲ accurate ಆಗಿ ತಾಜ್/ಓಬಿರಾಯ್ ನ ಮೂಲೆ ಮೂಲೆ ಸೇರಿ ನೂರಾರು ಜನನ್ನ ಕೊಲ್ಲಕ್ಕೆ ಸಾಧ್ಯ ಆಗ್ತಿತ್ತ ?
ಇದಕ್ಕೆಲ್ಲ ಉತ್ತರ, ಲಕ್ಷ್ಮಿ ನೀವ್ ಸರಿಯಾಗಿ ಹೇಳಿದ ಹಾಗೆ revolution. ಜನ ಎದ್ದರೆ ದೇಶ ಉಳಿದೀತು.
ಸ್ವಾಮಿ ವಿವೇಕಾನಂದರು ಆವತ್ತು ಹೇಳಿದ್ ಮಾತು: "ಏಳಿ ಎದ್ದೇಳಿ" ಅಂಥ. ಅದನ್ನ ನಾವು ಈವಾಗ್ಲಾದ್ರು ಮಾಡ್ಬೇಕು.
ಇತ್ತೀಚೆಗಷ್ಟೇ ಬಾಂಬುಗಳು ಬೆಂಗಳೂರಿನಲ್ಲೂ ಬಿತ್ತಲ್ಲ... ನನಗೂ ಹಾಗೆ ಅನಿಸುತ್ತೆ..ಯಾವಾಗ ಉಗ್ರರು ಧಾಳಿ ಮಾಡುತ್ತಾರೋ ಅಂತಾ?
ನಾವೇನು ಕಮ್ಮಿ? ನಾವೇನೂ ಸುಮ್ನೆ ಕೂತಿದ್ದೇವಾ? ನಾವು ಉಗ್ರರು ಸ್ಫೋಟಿಸಿದ ಬಾಂಬಿಗಿಂತಲೂ ಅತ್ಯುಗ್ರವಾಗಿ, ಗರಿಗರಿ ಕೋಟು ಸರಿಪಡಿಸಿಕೊಳ್ಳುತ್ತಾ ಈ ಘಟನೆಯನ್ನು ಖಂಡಿಸಲಿಲ್ಲವೇ? ಕಳೆದ ಆರೇಳು ತಿಂಗಳಲ್ಲಿ ದೇಶದಲ್ಲಿ 70ರಷ್ಟು ಸ್ಫೋಟ/ಭಯೋತ್ಪಾದಕ ವಿಧ್ವಂಸಕ ಕೃತ್ಯಗಳು ಘಟಿಸಿವೆ. ಯಾರಾದ್ರೂ ರಾಜಕಾರಣಿ ಇದಕ್ಕೆ ಬಲಿಯಾಗಿದ್ದಾರಾ? ಆದ್ರೂ ರಾಜಕಾರಣಿಗಳಾದ ನಾವು ಖಂಡಿಸುತ್ತಿಲ್ಲವೇ? ಅವರು ಬೋಟಿನಲ್ಲಿ ಬರೋ ಉಗ್ರರಾದರೆ, ನಾವು ಓಟಿನಿಂದಲೇ ಮೇಲೆ ಬರೋರು ಅಂತ ತಿಳ್ಕೋಬೇಡ್ವೇ?
Post a Comment