ನಾನು : ಏರ್ಟೆಲ್, ಸ್ಪೈಸ್, ಹಚ್, ರಿಲೈಯನ್ಸ್, ಟಾಟಾ ಇಂಡಿಕಾಮ್, ಐಡಿಯಾ ಮತ್ತು ವರ್ಜಿನ್ ಮೊಬೈಲ್ ಕಂಪನಿಗಳ ಓನರ್ಸು ಸಾರಾಸಗಟಾಗಿ, ಸಂಪದ್ಭರಿತವಾಗಿ ಹೊಟ್ಟೆ ಉರ್ಕೊಂಡಿದ್ದಾರೆ ಅಂತ ಹೇಳಲು ನಗೆ ಅತೀವ ಸಂತೋಷವಾಗುತ್ತಿದೆ.
Z : ಹೆ ಹೆ ? ಯಾಕೆ ?
ನಾನು : just imagine...ನಮ್ಮ ಮಾತಿನ length ಗೆ ಐವತ್ತು ಕಾಲ್ ಗಳನ್ನ !!! as such crorepatis ಅವ್ರು... ನಾವು ಅವರ ಕನೆಕ್ಷನ್ ನಲ್ಲಿ ಮಾತಾಡಿದ್ದಿದ್ದ್ರೆ ಇನ್ನೂ ಉದ್ಧಾರ ಆಗಿ multi-billionaires ಆಗಿರ್ತಿದ್ರು...ಅವರನ್ನ millionaires ಆಗೇ ಉಳಿಸಿದೀವಲ್ಲ ಅವರ್ಯಾರಿಗೂ business ಕೊಡದೇ...ಅದೇ ದೊಡ್ಡ ಸಾಧನೆ ನಾವ್ ಮಾಡಿರೋದು .
Z : commendable.... ಅಲ್ವ ?
ನಾನು : undoubtedly. ಬ್ಲಾಗರ್ ಬಿಟ್ಟಿಯಾಗಿರೋದ್ರಿಂದ, ಬರಹ ಐ . ಎಮ್. ಈ. ಮತ್ತು ಬರಹ ಡೈರೆಕ್ಟ್ ಇರೋದ್ರಿಂದ, ಗೂಗಲ್ ಡಾಕ್ಯುಮೆಂಟ್ ಆಫ್ಲೈನಲ್ಲೂ ವರ್ಕ್ ಆಗತ್ತೆ ಆದ್ದರಿಂದ, ಮತ್ತು ಬಿ.ಎಸ್.ಎನ್ .ಎಲ್ ಇತ್ತೀಚೆಗೆ ಕಡಿಮೆ ವರಗಳನ್ನ ಕೊಡ್ತಿರೋದ್ರಿಂದ ನಾವು ಈಮಟ್ಟಿಗೆ ಮಾತಾಡಲು ಸಾಧ್ಯವಾಗಿದೆ. ಅವರಿಗೆಲ್ಲ ಒಂದೊಂದ್ ಥ್ಯಾಂಕ್ಸನ್ನು ಈ ಸಂದರ್ಭದಲ್ಲಿ ನಾವು ಹೇಳಲೇ ಬೇಕು.
ಥ್ಯಾಂಕ್ಸ್ ಆಲ್ ಆಫ್ ಯೂ ! ಥ್ಯಾಂಕ್ಸ್ ಫಾರ್ ಆಲ್ ದ ಹೆಲ್ಪ್ !
Z : ಡಿಟ್ಟೊ !
ನಾನು : ಮತ್ತು, ನಮ್ಮ ಮಾತನ್ನು ಕೇಳಿಸಿಕೊಂಡು, ತುಂಬಾ ಜನ ಸಿಕ್ಕಾಪಟ್ಟೆ ನಕ್ಕಿದ್ದಾರಂತೆ...
Z : ಯಾಕಂತೆ ?
ನಾನು : ಗೊತ್ತಿಲ್ಲ...ನಿಜ್ವಾಗ್ಲೂ ಗೊತ್ತಿಲ್ಲ. ಇವ್ರೆಲ್ಲಾ ಯಾಕ್ ನಕ್ಕಿದ್ರು ಅನ್ನೊದರ ಬಗ್ಗೆ ರಿಸರ್ಚ್ ಮಾಡಬೇಕಿದೆ.
Z : ಮಾಡ್ಬೇಕ್ ಮಾಡ್ಬೇಕ್. ನನಗನ್ನಿಸತ್ತೆ, ಅವರಿಗೆ ನಿನ್ನ ಪಾಡನ್ನು ನೋಡಿಯೇ ನಗು ಬಂದಿದೆ ಅಂತ.
ನಾನು : ಸೈಲೆನ್ಸ್ ಐ ಸೇ !
Z : (ನ ಬ್ರೂಯಾತ್ ಸತ್ಯಂ ಅಪ್ರಿಯಂ )...ಹೋಗ್ಲಿ ಬಿಡು. ಮಾತು ಕೇಳಿಸಿಕೊಂಡು ನಕ್ಕಿದವರಿಗೆಲ್ಲ ನಾನು ಥ್ಯಾಂಕ್ಸ್ ಹೇಳ್ತಿನಿ. ಎಲ್ಲಾರ್ಗೂ ಥ್ಯಾಂಕ್ಸು !!
ನಾನು : ನಮ್ಮನಾಡಿನ ಸದಸ್ಯರು, ಪ್ರಣತಿ ಟೀಮ್ ಮೆಂಬರ್ಸು, ಮತ್ತೆ ಮಾತ್ ಕೇಳ್ಸ್ಕೊಂಡು ತಮ್ಮ ಅಮೂಲ್ಯ ಕಮೆಂಟನ್ನು ನಮ್ಮ ಫೋನಿನ ಕಮೆಂಟೆಂಬ ಇನ್ ಬಾಕ್ಸ್ ನಲ್ಲಿ ಹಾಕಿರೋ ಸಮಸ್ತರಿಗೂ ನನ್ನ ಅನಂತಾನಂತ ವಂದನೆಗಳು.
Z : ಸಿಕ್ಕಾಪಟ್ಟೆ ದೊಡ್ಡ್ ಸೆಂಟೆನ್ಸು...ರಿಪೀಟ್ ಮಾಡಕ್ಕಾಗಲ್ಲ,ಅದಕ್ಕೆ---> ಡಿಟೋ !!
ನಾನು : ಇನ್ನೊಂದ್ ಆಶ್ಚರ್ಯಕರ ವಿಷಯ ಏನಪ್ಪಾ ಅಂದರೆ, ಇಲ್ಲೊಬ್ಬರಿಗೆ ನಮ್ಮ ಮಾತು ಕೇಳಿ ಹೊಟ್ಟೆಕಿಚ್ಚಾಗಿದೆಯಂತೆ ! ಯಾಕೆ ಅಂತ seriously ನನಗೆ ಅರ್ಥ ಆಗಿಲ್ಲ ! ಅಲ್ಲ, ಅಂಥಾ ಅಥಿರಥ ಮಹಾರಥರ ಹೆಸರುಗಳ ಮಧ್ಯ ನಮ್ಮ ಹೆಸರು ಇರೋದನ್ನ ನೋಡಿಯೇ ನನ್ನ ಹುಬ್ಬು ಹೈ ಜಂಪ್ ಹೊಡಿತಿದೆ.
Z : ಕರೆಕ್ಟ್ ! ಅಂಥವರ ಲಿಸ್ಟಲ್ಲಿ ನಮ್ಮ ಹೆಸರನ್ನ ಸೇರ್ಸಿರೋದು ಒಂಥರಾ ನಡುಕ ತರಿಸ್ತಿಲ್ವಾ ನಿನಗೆ ?
ನಾನು : sort of . ಅಲ್ಲ, ಹೊಟ್ಟೆ ಕಿಚ್ಚು ಪಟ್ಟುಕೊಂಡಿರೋರನ್ನೂ ಸೇರ್ಸಿ ಆ ಲಿಸ್ಟ್ ನಲ್ಲಿರೋರೆಲ್ಲ ಸಿಕ್ಕ್ ಸಿಕ್ಕಾಪಟ್ಟೆ ದೊಡ್ಡ್ ಮನುಷ್ಯರು. established bloggers-u. ಅತ್ಯದ್ಭುತ ಬರಹಗಾರರು. ಆ ಲಿಸ್ಟ್ನಲ್ಲಿರೋರ ಥರಾ ಎಲ್ಲ ನಾವು ಕಥೆ ಕವನ ಬರಿತಿವಾ ? ಅಥ್ವಾ ಅವರ ಥರ ವಿಧ ವಿಧ angle ಗಳಲ್ಲಿ ವಿಷಯಗಳನ್ನೆಲ್ಲಾ ವಿಮರ್ಶೆ ಎಲ್ಲಾ ಮಾಡ್ತಿವಾ ? ಬರೀ ಹರಟೆ ಕೊಚ್ಚ್ತೀವಿ ! ಅದಕ್ಕೆ ಇವರು ನಮ್ಮ ಮಾತನ್ನ ಆ ಲಿಸ್ಟಿಗೆ ಸೇರ್ಸಿದ್ದು ತೀರಾ ಆಶ್ಚರ್ಯ ತಂದಿದೆ !
Z : i know....I am very very surprised !
ನಾನು : ಯಾವತ್ತಾದರೂ ಅವರು ನನ್ನೆದುರು ಕಾಣಿಸಿಕೊಂಡರೆ, ಈ ವಿಷಯದ ಬಗ್ಗೆ ಪ್ರಸ್ತಾಪ ಮಾಡಿ, ದ್ರೋಣಾಚಾರ್ಯ ಯಾರು, ಏಕಲವ್ಯ ಯಾರು ಅನ್ನೋದನ್ನ ನಿರ್ಧರಿಸಬೇಕಿದೆ. ನಾವು ಹುಲುಮಾನವರು, ಅವರೆಲ್ಲರ ಥರ ಪವಾಡಪುರುಷರಲ್ಲ ಅಂತ emphasize ಮಾಡಬೇಕಿದೆ.
Z : ಹೌದ್ ಹೌದ್ ! ಮಾಡ್ಬೇಕ್ . ನಾನು ಬರ್ತಿನಿ ಆಗ !
ನಾನು : you are most welcome.
Once again, thank you all !
ಜೀವನದೊಂದಿಗಿನ ನಮ್ಮ ಮಾತು lifetime ! ಇದರಲ್ಲಿ incoming -ಊ free outgoing -ಊ free !
ನನ್ನ ज़िंदगीಯೊಂದಿಗಿನ nonstop ಗುಸುಗುಸುವನ್ನು ಇಲ್ಲಿ ಬಿಚ್ಚಿಟ್ಟಿದ್ದೇನೆ.
Tuesday, September 23, 2008
Subscribe to:
Post Comments (Atom)
ಉತ್ತರಾಯಣ ೩
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ನಾನು : There is always a next time. Z : ಹೌದಾ ? ನಾನು : ಹೌದು. Z : ಪ್ರತೀ ಸಲವೂ ಹೀಗೆ ಆದರೆ ಗತಿಯೇನು ? ನಾನು : ಅದಕ್ಕೆ ನಿನ್ನ pessimistic ಅಂತ ಬೈಯ್ಯ...
-
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಬ್ಲಾಗಿನ ಹುಟ್ಟು ಹಬ್ಬ ಮತ್ತು ಹೊಸ ವರ್ಷ ಯಾವಾಗ್ಲು ಒಟ್ಟಿಗೆ ಬರತ್ತೆ. ಆದರೆ, ಮತ್ತೆ ಅದೇ flash back ಗೆ ಹೋಗಿ, ಅದೇ ...
5 comments:
ಅತಿರಥರು ಯಾರು? ಮಹಾರಥರೂ ಯಾರು? ಹೆಸರಿಸಿ. ವಿವರಿಸಿ. ೧೦ ಅಂಕಗಳು.
ಇದಿನ್ನು ೪೯ನೇ Post ಕಣಮ್ಮ...
ಹೋಗಲಿ advance ಆಗಿ ಶುಭಾಶಯಗಳು :)
ज़िंदगी Calling. . .ನ ನಿಮ್ಮ Concept ತುಂಬಾ ಚನ್ನಾಗಿದೆ.. ಮೊದಲೇ ಮೊಬೈಲ್ ಬಗ್ಗೆ ನನಗೆ ಆಸಕ್ತಿ ಜಾಸ್ತಿ ಇನ್ನುಏರ್ಟೆಲ್, ಸ್ಪೈಸ್, ಹಚ್, ರಿಲೈಯನ್ಸ್, ಟಾಟಾ ಇಂಡಿಕಾಮ್, ಐಡಿಯಾ ಮತ್ತು ವರ್ಜಿನ್ ಮೊಬೈಲ್ ಹೆಸರು ಹೇಳಿ ಬಿಟ್ರೆ ಮುಗ್ದೆ ಹೋಯ್ತು...ನೀವು ನಿಮ್ಮ ज़िंदगीಯೊಂದಿಗೆ ಮಾತನಾಡುವುದು ಕೇಳ್ತಾ ಇದ್ರೆ ಟೈಮ್ ಹೋಗಿದ್ದೆ ಗೊತ್ತಾಗಲ್ಲ
ತುಂಬಾ ಚನ್ನಾಗಿದೆ ನಿಮ್ಮ ಮಾತು ಕಥೆ
ಸುಬಾಸಯ ಕಣಮ್ಮೋ.. ಆದ್ರೆ ಇದಿನ್ನೂ ನಲ್ವತ್ತೊಂಭತ್ನೇ ಪೋಸ್ಟು.. ಎಲ್ಲಾ ಟಕೀಲಾ ಮಹಿಮೆ.. ಲೆಕ್ಕ ತಪ್ಪುತ್ತೆ.. ಇರ್ಲಿ.. :)
@parisarapremi :
ನನ್ನನ್ನ ಬಿಟ್ಟು ಮಿಕ್ಕ ೭೦೦ ಬ್ಲಾಗರ್ ಗಳು ಅತಿರಥರು, ಹೆಸರಿಗಾಗಿ http://kannadabala.blogspot.com ನೋಡ್ಬಿಡಿ.
ಪ್ರಣತಿಯ ಟೀಮ್ ಮೆಂಬರ್ಸು ಮಹಾರಥರು..ಅವರ ಹೆಸರನ್ನು ಹೇಳ್ಬೇಕಿಲ್ಲ ಅಲ್ವ ಗುರುಗಳೇ ? :P
ಅಂತರ್ವಾಣಿ :
ಥ್ಯಾಂಕ್ಸ್ ನನ್ನ ಕಣ್ಣು ತೆರೆಸಿದ್ದಕ್ಕೆ ! ಇದರಿಂದ ಜ್ಞಾನೋದಯ ಆಯ್ತು !
ಮನಸ್ವಿ :
ತುಂಬಾ ಸಂತೋಷ ಆಯ್ತು ಕೇಳಿ !
ಸುಷ್ರುತ :
ಅಲ್ವಾ ? ಇರ್ಲಿ :-)
Post a Comment