Saturday, September 20, 2008

Definition of ಅಹಿತಕರ ಘಟನೆ

Z : ನೋಡೂ...ಪ್ಲೀಸ್ definitionಗಳನ್ನೆಲ್ಲ ಹೇಳಿ ನನ್ನ ಗೋಳುಹೊಯ್ಕೋಬೇಡ.

ನಾನು : ಇಲ್ಲ...ನಾನು ನಿನಗೆ definition ಹೇಳುತ್ತಿಲ್ಲ, ಕೇಳ್ತಿದಿನಿ, ನಿಂಗೆ ಗೊತ್ತಾ ಅಹಿತಕರ ಘಟನೆ ಅನ್ನೋ ನುಡಿಗಟ್ಟಿನ ಅರ್ಥ ಏನು ಅಂತ ?

Z : ಗೊತ್ತು.

ನಾನು : ಅಪ್ಪಣೆ ಕೊಡಿಸಿ.

Z : ಹಿತ ಅಂದರೆ ಏನು ? ಮನಸ್ಸಿಗೆ ಸಂತೋಷ ಉಂಟು ಮಾಡಿ, ಇಂದ್ರಿಯಗಳನ್ನು ಸಂತೋಷ ಪಡಿಸುವಂಥವು. ಅಹಿತ ಅದರ ವಿರುದ್ಧ ಪದ. ಯಾರ್ಗೂ ಸಂತೋಷ ಆಗದಿರುವ ಘಟನೆಯನ್ನು ಅಹಿತಕರ ಘಟನೆ ಅಂತ ಕರೀತಾರೆ.

ನಾನು : ಹೌದಾ ?

Z : ನಂಗೆ ಹಾಗನ್ನಿಸತ್ತೆ.

ನಾನು : ನಂಗೂ ಹಾಗೇ ತೋಚಿತ್ತು actually.

Z : ಮತ್ತೆ ಏನ್ ತೊಂದ್ರೆ ನಿಂದು ?

ನಾನು : ಮೊನ್ನೆ ಮಂಗಳೂರು ಬಂದ್ ಆಯ್ತಲ್ಲ...

Z : ಹೂ...

ನಾನು : ....ಆಗ ನ್ಯೂಸ್ ನವರು ಕೊಡುತ್ತಿದ್ದ ವರದಿ ನೋಡಿ, ನನಗೆ ಗೊತ್ತಿದ್ದ definition ಮೇಲೆ, for the first time ಅನುಮಾನ ಬಂತು.

Z : ಹೌದಾ ? ಏನಂದ್ರು ?

ನಾನು : ನ್ಯೂಸ್ ರೀಡರ್ ಹೀಗೆ ಹೇಳಿದ್ದು - " ಮತಾಂತರದ ಪ್ರಕರಣದಿಂದ ಎದ್ದ ಗಲಾಟೆಯಿಂದ ಶ್ರೀ ರಾಮ ಸೇನೆಯವರು ಮಂಗಳೂರಿನಲ್ಲಿ ಕರೆ ನೀಡಿದ್ದ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಂಗಳೂರು ಸಂಪೂರ್ಣ ಶಾಂತವಾಗಿದ್ದು, ಜನಜೀವನ ವಾಹನ ಸಂಚಾರವಿಲ್ಲದೇ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅಲ್ಲಲ್ಲಿ ಕಲ್ಲುತೂರಾಟ ಮತ್ತು ಒಬ್ಬರ ಮೇಲೆ ಮಾರಕಾಸ್ತ್ರದಿಂದ ಹಲ್ಲೆಯಾಗಿದೆ. ಯಾವ ಅಹಿತಕರ ಘಟನೆಯೂ ಸಂಭವಿಸಿಲ್ಲ "

ಇದರ ಅರ್ಥ ಏನು ?

Z : ಅಂದ್ರೆ...ಇವೆರಡೂ ಅಹಿತಕರ ಘಟನೆ ನೆ...ಆದ್ರೆ intensely ಅಹಿತಕರ ಘಟನೆ ಅಲ್ಲ.

ನಾನು : what ? ಅಹಿತಕರ ಘಟನೆ ಗೂ intensity ಗೂ ಏನ್ ಸಂಬಂಧ ?

Z : ನೋಡು, ಕಲ್ಲು ತೂರಾಟ ಆಯ್ತು...ಇದರಿಂದ ಅಂಗಡಿಯ ಮಾಲೀಕ ಸಾಯಲ್ಲ, ಬರೀ ಹಾರ್ಟ್ ಅಟಾಕ್ ಆಗತ್ತೆ. ಆದ್ದರಿಂದ ಅದು ಕಡಿಮೆ ಆಘಾತ ಮತ್ತು less intense ಅಹಿತಕರ ಘಟನೆ. ಆಮೇಲೆ ಮಾರಕಾಸ್ತ್ರದಿಂದ ಬರೀ ಇರಿದರು, ಕೊಚ್ಚಲಿಲ್ಲವಲ್ಲ ! ಆ ಘಟನೆಯಲ್ಲೂ ಏನೂ ದಮ್ಮಿಲ್ಲ.

ನಾನು : ಆಹಾ ! ಪಾಪ...ಕಲ್ಲು ತೂರಾಟದಿಂದ ಅಂಗಡಿಯವನು ಸಾಲ ಸೋಲ ಮಾಡಿ ಮತ್ತೆ ಗಾಜು ಹಾಕಿಸ್ಬೇಕಲ್ಲ...ಅದು ಕಡಿಮೆ ಅಹಿತಕರ ನ ? ಮಾರಕಾಸ್ತ್ರದಿಂದ ಇರಿದರೆ ಅವನು ಪಾಪ ಸಾವು ಬದುಕಿನ ಮಧ್ಯ ಹೋರಾಡುವುದು ಕಡಿಮೆ ಅಹಿತಕರ ನ ?

Z : ಶ್ !!!!!!!!! fundamental questions ಕೇಳ್ಬೇಡ.

ನಾನು : ಯಾಕೆ ಅಂತ ?

Z : ಹಾಗೆ !


ನಾನು : ನೋಡು...ಇವೆಲ್ಲ ಆಗಲ್ಲ. definition ಗೆ specific ಅರ್ಥ ಇರ್ಬೇಕು. ಇಷ್ಟ ಬಂದ ಹಾಗೆ ಪದಗಳನ್ನ ಉಪಯೋಗಿಸಿದರೆ ನಮ್ಮಂಥವರಿಗೆ ಅರ್ಥ ಮಾಡ್ಕೊಳ್ಳೊದು ಕಷ್ಟ. ಮೊದ್ಲೆ...ಕನ್ನಡದಲ್ಲಿ ನನ್ನ ಲೆವೆಲ್ಲು ಅಷ್ಟಕ್ಕಷ್ಟೇ! ಈಗ ಅಹಿತಕರ ಘಟನೆ ನ ಇವರು ಈ ಥರ ಡಿಫೈನ್ ಮಾಡಿದ್ರೆ, ನಾವು ಹೈಸ್ಕೂಲಲ್ಲಿ " ಈ ನುಡಿಗಟ್ಟನ್ನು ವಾಕ್ಯಗಳಲ್ಲಿ ಬಳಸಿ " exercise ಮಾಡ್ತಿದ್ವಲ್ಲಾ...ಅದು ನೆನ್ಪಾಗತ್ತೆ.

Z : ಒಹೋ !

ನಾನು : ಅಹಿತಕರ ಘಟನೆಯನ್ನು ವಾಕ್ಯದಲ್ಲಿ ಬಳಸೋದಾದ್ರೆ " ಜಗತ್ತಿನ ಜಲಪ್ರಳಯವಾಗುತ್ತಿದ್ದು ಎಲ್ಲಾ ಖಂಡಗಳೂ ನೀರಿನಿಂದ ಆವೃತವಾಗಿದೆ. ಪರಿಸ್ಥಿತಿ ಎಲ್ಲ ಖಂಡಗಳಲ್ಲೂ ಶಾಂತವಾಗಿದ್ದು, ಪರಿಸ್ಥಿತಿ ಹತೋಟಿ ಮೀರಿದೆ. ನಮ್ಮ ಖಂಡ ನಿಧಾನಕ್ಕೆ ಮುಳುಗುತ್ತಿದೆ. ಬೇರೆ ಯಾವ ಅಹಿತಕರ ಘಟನೆ ಸಂಭವಿಸಿಲ್ಲ !

Z :ನೋಡು....


ನಾನು : ನೋಡಲ್ಲ. ಯಾವ್ಯಾವ ಘಟನೆ ನ, ಎಂಥೆಂಥಾ ಘಟನೆಗಳನ್ನ ಅಹಿತಕರ ಅಂತ ಕ್ಲಾಸಿಫೈ ಮಾಡ್ತಾರೆ ಅಂತ ನನಗೆ ಗೊತ್ತಗ್ಬೇಕ್.

Z :ಯಾರಾದ್ರೂ ಇವಳಿಗೆ ತಿಳಿಸಿ ಪುಣ್ಯ ಕಟ್ಟಿಕೊಳ್ಳಿ ಪ್ಲೀಸ್ !!

3 comments:

Srikanth - ಶ್ರೀಕಾಂತ said...

ಇದನ್ನೆಲ್ಲಾ ಓದ್ತಿದ್ರೆ ನಡೆದದ್ದೆಲ್ಲಾ ಭ್ರಮೆ ಎಂದುಕೊಳ್ಳುವುದು ಸೂಕ್ತ ಎನ್ನಿಸುತ್ತದೆ.

ಅಂತರ್ವಾಣಿ said...

as unusual amruthanjan bottle huDuki pakkadalle tandu iTkoNDe... sadya chikka article aadarinda adannu upayOgisalilla.. mundina salakke use maada bahudu...

Lakshmi Shashidhar Chaitanya said...

ಶ್ರೀಕಾಂತ್ ಮತ್ತು ಅಂತರ್ವಾಣಿ:

ಸರಿ.

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...