Z : ಛೆ ಛೆ ಛೆ ಛೆ ಛೆ ಛೆ !!!!!!!!!!!!!
ನಾನು : ನಾನು ಪಾಪಗುಟ್ಟಿದ್ದೇನೆ ಎಂದು ನೀನು competition ಮೇಲೆ ಛೆಗುಟ್ಟೋದು ಸರಿಯಲ್ಲ ನೋಡು !
Z : competition ಅಲ್ಲ... I am very much disappointed.
ನಾನು : ಯಾಕೆಂದು ಪೇಳುವಂಥವಳಾಗು !
Z : ನೋಡು,ಎಷ್ಟೋಂದ್ ಜನ bloggers ಮಳೆ ಮೇಲೆ blogs ಬರ್ದಿದಾರೆ ! ಕವಿತೆಗಳು ಬೇರೆ ! ನಾನು ಏನಾದರೂ ಬರೆಯೋಣಾ ಅಂತ ನನ್ನ ನೆನಪಿನ ಕಂತೆನೆಲ್ಲಾ ತೆಗ್ದು ತಿರ್ಗ್ಸಿ ಮುರ್ಗ್ಸಿ ನೋಡಿದೆ...ನಾನ್ ಮಳೆಲಿ ನೆನೆದಿದ್ದಾಗಲೀ, ಸಿಕ್ಕಾಕೊಂಡಿದ್ದಾಗಲೀ, ಮಳೆ ನೀರು ನೋಡುತ್ತಾ ಕಾಫಿ, ಪಕೋಡಾ, ಬೋಂಡಾ ತಿಂದಿದ್ದಾಗಲಿ....ಒಂದೂ ಮಾಡೆ ಇಲ್ಲ ಅನ್ನೋದು ನನಗೆ ಆಗ ಜ್ಞಾನೋದಯವಾಯ್ತು ! ಈ ನಷ್ಟ ಆಗಿದ್ದು ನಿನ್ನಿಂದಲೇ !!
ನಾನು : ನಾನೇನು ಮಾಡಿದೆ ?
Z : ಏನ್ ಮಾಡ್ಲಿಲ್ಲ ಅಂತ ಕೇಳು !
ನಾನು : ಸರಿ. ಏನು ಮಾಡಲಿಲ್ಲ ?
Z : ಮಳೆ ಲಿ ನೀನು ನೆನೆಯದೇ ಇರುವುದು ನಿನ್ನ ಮೊದಲನೇ ದೊಡ್ಡ ತಪ್ಪು. ಮಳೆ ಇರಲಿ, ಚಳಿ ಇರಲಿ, ಗಾಳಿ ಇರಲಿ, ಯಾವುದನ್ನೂ ಲೆಕ್ಕಿಸದೇ, ಹೊಂವರ್ಕ್, ಅಸ್ಸೈನ್ಮೆಂಟ್ ಮತ್ತು ಪ್ರಾಜೆಕ್ಟುಗಳ ಮೇಲೆ ಗಮನ ಹರಿಸಿದ್ದು ಅತೀ ಭೀಕರವಾದ ಎರಡನೆಯ ತಪ್ಪು. ಎಲ್ಲದಕ್ಕಿಂತಾ ದೊಡ್ಡ ಪ್ರಮಾದವೆಂದರೆ, ಮಳೆ ಬಂದಾಗ ನೀಬು " ಯಾಕೋ weather change ಆಯ್ತು, ನಿದ್ದೆ ಮಾಡುವ " ಅಂತ ರಗ್ ಹೊದ್ದಿಕೊಂಡು ಮಲಗುವುದು !
ನಾನು : ನೋಡು , ಇದರಲ್ಲಿ ನನ್ನದು 0.001 % ಅಷ್ಟೂ ತಪ್ಪಿಲ್ಲ. ನಾನು ಮಳೆಯಲ್ಲಿ ನೆನೆಯಲು ಹೋದಾಗಲೆಲ್ಲ ಅಣ್ಣ ಅಥವಾ ಅಮ್ಮ " ಜ್ವರ ಬರತ್ತೆ ! ಒಳಗೆ ನಡಿ ! " ಅಂತ ದರ ದರ ಎಳೆದುಕೊಂಡು ಹೋಗಿಬಿಡುತ್ತಿದ್ದರು. ಊರಿನಲ್ಲಿ ಅಜ್ಜಿ ಮನೆಯಿದೆಯಾ ? ಅದೂ ಇಲ್ಲ ! ಎಲ್ಲಾ ಬೆಂಗಳೂರಿನಲ್ಲೇ ಸ್ಥಿತರು! ಅಲ್ಲಾದರೂ ಹೋಗಿ ನೆನೆಯೋಣಾ ಅಂದರೆ ಅದೂ ಸಾಧ್ಯವಿಲ್ಲ. ಇನ್ನು ಸ್ಕೂಲಿನಲ್ಲಾಗಲೀ, ಕಾಲೇಜಿನಲ್ಲಾಗಲೀ ಮಳೆ ನಿಲ್ಲುವ ತನಕ ಹೊರಗೇ ಬಿಡುತ್ತಿರಲಿಲ್ಲ. ಅಣ್ಣ ಅಮ್ಮ ನಡೆಯದೇ, ಆಟೋ ಅಥವಾ ಕಾರಿನಲ್ಲಿ ಬಂದು ನನಗೆ ಹನಿಯನ್ನೂ ಸೋಕಿಸದೇ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಎಮ್. ಎಸ್ಸಿಗೆ ಬರುವ ಹೊತ್ತಿಗೆ " ನೆನೆಯುವಂಥಾ, ಸಿಕ್ಕಿಹಾಕಿಕೊಳ್ಳುವಂಥಾ ಮಳೆ" ನಾನಂತೂ ನೋಡಲೇ ಇಲ್ಲ !! ಸಿಟಿ ಮನೆಗಳಲ್ಲಿ ಟೆರೇಸು ದಂಡ... ಎಲ್ಲರ ಮನೆಗಳೂ ನಾಕಂತಸ್ತು...ಯಾರಿಗೂ ಹೇಳದೇ ಟೆರೇಸಿನ ಮೇಲೆ ನೆನೆಯುವಾ ಅಂದರೆ ಮೂರನೆಯ ಅಂತಸ್ತಿನವರು ನಮ್ಮ ಮನೆಗೆ ಫೋನಿಸಿ, " ನಿಮ್ಮ ಮಗಳು ಮಳೆಯಲ್ಲಿ ನೆನೆಯುತ್ತಿದ್ದಾಳಲ್ಲ....ಯಾಕೆ ?" ಎಂದು ಪ್ರಶ್ನೆ ಕೇಳುವ ಮೂಲಕ ಅವರ ಸಮಾಜ ಸೇವಾ ಕಳಕಳಿಯನ್ನು ತೋರಿಸಿಕೊಳ್ಳುತ್ತಾರೆ ! ಈಗ ಹೇಳು ಇದರಲ್ಲಿ ನನ್ನ ತಪ್ಪೇನು ಇದೆ ?
Z : ನೀನು ಕೊಟ್ಟ ಕಾರಣಗಳು ಪರಿಗಣಿಸಲು ಅರ್ಹವಾದರೂ, ನೀನು ಇವೆಲ್ಲವನ್ನೂ ಮೀರಿ ಮಳೆಯಲ್ಲಿ ನೆನೆಯಲು ಪ್ರಯತ್ನಿಸಬಹುದಿತ್ತು. ಚಿಕ್ಕವಯಸ್ಸಿನಲ್ಲಿ ಅಪ್ಪ ಅಮ್ಮನ ಎಲ್ಲಾ ಮಾತು ಕೇಳಿ " ಮಾತಾಪಿತೃವಿಧೇಯ ಮಗಳು " ಅನ್ನುವ ಕೆಲಸಕ್ಕೆ ಬಾರದ ಸರ್ಟಿಫಿಕೇಟನ್ನು ಸಂಪಾದಿಸುವ ಬದಲು ಚಂಡಿ ಚಾಮುಂಡಿ ಥರ ಗಲಾಟೆ ಮಾಡಿದ್ದಿದ್ದರೆ ನಿನ್ನನ್ನು ಊಟಿಯ ಬೋರ್ಡಿಂಗ್ ಸ್ಕೂಲ್ ಗೆ ಸೇರಿಸುತ್ತಿದ್ದರು.ನನ್ಗೆ ಅದೇ ಬೇಕಿತ್ತು ! ಯಾರಿಗೂ ಕಾಣಿಸಿಕೊಳ್ಳದೇ ನಾನು ನಿನ್ನ ಜೊತೆ ಬಂದುಬಿಡುತ್ತಿದ್ದೆ . ಏನ್ ಸಖತ್ತಾಗಿರ್ತಿದ್ದೆ ಆಗ ! ಮಳೆಲಿ ಆಟ ಆಡ್ಕೊಂಡ್, nature ನ enjoy ಮಾಡ್ಕೊಂಡ್.....ಆ ಆಸೆ ಮಣ್ಣುಪಾಲಾಗಿದ್ದು ನಿನ್ನ ವಿಧೇಯತೆಯಿಂದ. ಇನ್ನು ನಿನ್ನ ಎಮ್ಮೆಸ್ಸಿ ಮುಗಿದ ಮೇಲೆ ನಾನು ಶೃಂಗೇರಿಯಲ್ಲಿ ಸೆಟ್ಟ್ಲಾಗಲು ಎಂಥಾ foolproof plan ಮಾಡಿದ್ದೆ. ಅನ್ಯಾಯ ಅದು workout ಆಗಲಿಲ್ಲ !! ಇಲ್ಲಾಂದಿದ್ದ್ರೆ....ಏನ್ ಸೈಲೆಂಟಾಗೋದೆ ?
ನಾನು : ತಾವು ಮಾತಾಡಿ. happy independence day.
Z : thanks. But I will not wish you the same ! ಎಂಥಾ ಒಳ್ಳೆ ಮೆಮೋರಿಗಳು ಕಾಣಸಿಗ್ತಾವೆ ಒಬ್ಬೊಬ್ಬರ ಬ್ಲಾಗಿನಲ್ಲು ! ಏನ್ ಮಜಾ ಮಾಡಿದ್ದಾರೆ ಒಬ್ಬೊಬ್ಬರೂ !!! ನಾನು ಇದ್ದೀನಿ....ಪ್ಲಸ್ ನೀನು ಇದ್ದೀಯ... ಶುದ್ಧ ನಿಷ್ಪ್ರಯೋಜಕರು ! ಅವರೆಲ್ಲ ಮಳೆನೀರಲ್ಲಿ ದೋಣಿ ಮಾಡಿಬಿಟ್ಟಿದ್ದಾರೆ, ನೀನು ಅದನ್ನ ಕೆ.ಜಿ. ಕಾರ್ಡ್ಬೋರ್ಡ್ ಮೇಲೆ ಅಂಟಿಸಿ, "this is a boat which sails on water " ಅಂತ ಬರ್ದಿದೀಯ ಅಷ್ಟೆ ! ಛತ್ರಿ ಜಗಳ ಎಲ್ಲಾ ಆಡಿದಾರೆ ...ನೀನು ? ಛತ್ರಿ ಹಿಡ್ಕೊಂಡು school ನಲ್ಲಿ dance ಮಾಡಿದ್ಯ ಅಷ್ಟೆ ! ಮಳೆ ನೋಡ್ಕೊಂಡ್ ಕಾಫಿ ನ ಎಂಜಾಯ್ ಮಾಡಿದ್ದಾರೆ..ನೀನು ಮಲ್ಕೊಂಡಿರ್ತೀಯ !! ನಾನು stranded ಆಗ. ಎಷ್ಟ್ ಕಷ್ಟಪಟ್ಟರೂ ನೀನಂತೂ ಎದ್ದೇಳೊಲ್ಲ !! ನಿನ್ನಿಂದ ನನಗೆ ಒಂದು ಬ್ಲಾಗ್ ಪೋಸ್ಟ್ ನಷ್ಟವಾಗಿದೆಯಾದ್ದರಿಂದ ಆ ನಷ್ಟವನ್ನು ನೀನು ಭರಿಸಿಕೊಡಬೇಕು. ನನಗೆ ಮಳೆ ಬೇಕು...ಎಲ್ಲರು ಬಹಳ ಇಷ್ಟ ಪಟ್ಟು, enjoy ಮಾಡಿ, cherish ಮಾಡಿದ್ದಾರಲ್ಲ, ಅದೇ....same to same ಅದೇ ಮಳೆ ಬೇಕು. ಎಲ್ಲಿಂದನಾದ್ರು ಸರಿ...ಅದನ್ನ ತಂದುಕೊಡು !!
ನಾನು : ನೋಡು...ನಾನು ಎಲ್ಲಾರನ್ನೂ "ನಿಮ್ ಹತ್ರ ಮಳೆ ಇದ್ದ್ರೆ ಕೊಡಿ ..." ಅಂತ ಕೇಳಕ್ಕಾಗಲ್ಲ. ಅದು ತೀರಾ ಕಷ್ಟ ಆಗತ್ತೆ.
Z : ಬೇರೆ ಎಲ್ಲಾದ್ರು try ಮಾಡು.
ನಾನು : ಪೆಟ್ಟಿಗೆ ದಿನಸಿ ಅಂಗಡಿಯಿಂದ ಹಿಡಿದು ದೊಡ್ಡ ದೊಡ್ಡ shopping malls ವರೆಗೂ ಎಲ್ಲಾ ಕಡೆ ಬೀಟ್ ಹೊಡೆದು ಬಂದಾಯ್ತು. ಎಲ್ಲೂ ಮಳೆ ಸಿಗ್ಲಿಲ್ಲ.
Z : ಎಂಟೆಂಟು ಫ್ಲೋರ್ ಕಟ್ಟ್ತಾರೆ...." ಮಳೆ sold here." ಅಂತ ಟೆರೇಸ್ ಮೇಲೆ ಒಂದು ಬೋರ್ಡ್ ಹಾಕಿದ್ರೆ ಮಾಲ್ ಯಜಮಾನ ಅರ್ಧರಾತ್ರಿಯಲ್ಲಿ ಕರೋಡ್ಪತಿಯಾಗ್ತಾನೆ ತಿಳ್ಕೋ !! ಹೀಗೆ ಮಾಡಿ ಟೆರೇಸಿಗೆ entry allow ಮಾಡ್ಬಾರ್ದ ? hopeless fellows !
ನಾನು : ನಿಂಗೆ ಬೇಕಾಗಿದ್ದು ಸಿಗ್ಲಿಲ್ಲ ಅಂತ ಅನ್ಯಾಯ ಅವ್ರನ್ನೆಲ್ಲ ಯಾಕ್ ಬೈಯುತ್ತೀಯ ? ಮಳೆ ಎಲ್ಲಾ ಸಿಗಲ್ಲ...ಸಿಟಿ ಹುಡುಗಿಯಾದ ನಿನಗೆ ಮಳೆಯಲ್ಲಿ ನೆನೆಯೋ ಅದೃಷ್ಟ ಇಲ್ಲ...face the fact and accept the truth. ಅದೂ ಎಲ್ಲಾರು enjoy ಮಾಡೋ ಅಂಥಾ ಮಳೆ ಇಲ್ಲೆಲ್ಲೂ ಸಿಗಲ್ಲ....ಇಲ್ಲೆಲ್ಲಾ ಬರೀ ಜನ ಕೊಚ್ಚಿಕೊಂಡು ಹೋಗುವಂಥಾ, ಗೋಡೆ ಬಿದ್ದು ಆಸ್ತಿ ಪಾಸ್ತಿ ನಷ್ಟವಾಗುವಂಥಾ ಮಳೆ ಮಾತ್ರ ಸಿಗೋದು.
Z : ಇಲ್ಲಾ ನನಗೆ ಮಳೆ ಬೇಕೇ ಬೇಕು...ಅವರೆಲ್ಲ ಎಂಜಾಯ್ ಮಾಡಿ ಬ್ಲಾಗ್ ನಲ್ಲಿ ಉಲ್ಲೇಖಿಸಿದ ಮಳೆನೇ ಬೇಕು. ಒಂದು ಹನಿನೂ change ಇರಬಾರದು.
ನಾನು : ಏನ್ ಮಳೆ ಅಂದ್ರೆ ಸೀರೆ ಶಾಪಿಂಗ್ ಅಂದುಕೊಂಡೆಯಾ ? "same type ಕೊಡಿ " ಅಂತ ಕೇಳೋಕೆ ? ನೋಡು...ದಯವಿಟ್ಟು ಹಠ ಮಾಡ್ಬೇಡಾ . ನಿಂಗೆ ಭೇಲ್ ಪುರಿ ಕೊಡ್ಸ್ತಿನಿ.
Z : ಬೇಡ.
ನಾನು : ಪಾನಿ ಪುರಿ ? ಬೀದಿ ಪಾನಿಪುರಿ ಅಂಗಡಿಯ ಸಕಲ ಚಾಟ್ಸ್ ನ ನೈವೇದ್ಯ ಮಾಡ್ತಿನಿ.
Z : ಬೇಡ.
ನಾನು : ದ್ವಾರಕಾ ಭವನದ ಖಾಲಿ ದೋಸೆ ?
Z : ಬೇಡ.
ನಾನು : ಉಪಹಾರ ದರ್ಶಿನಿ ಶಾವಿಗೆ ಬಾತ್ ?
Z : ಉಹು.
ನಾನು : ವಿದ್ಯಾರ್ಥಿ ಭವನದ ಮಸಾಲೆ ದೋಸೆ ? ಇದಕ್ಕಾದ್ರೂ ಒಪ್ಕೊ.
Z : no chance.
ನಾನು : ಶ್ರೀನಿವಾಸ ಬೇಕರಿಯಲ್ಲಿ ಸಕಲ ಬೇಕರಿ ತಿಂಡಿ ? capsicum puff ?
Z : ಬೇಡ ಬೇಡ ಬೇಡ.
ನಾನು : k.c. das ನ ಸಕಲ ಬಂಗಾಳಿ ಸ್ವೀಟ್ಸು ?
Z : ಇಲ್ಲ ಬೇಡ.
ನಾನು : ಬ್ಯೂಗಲ್ ರಾಕ್ ಭೇಲ್ ಪುರಿ ಗಾಡಿಯ ಸಕಲ ಖಾದ್ಯಗಳು ?
Z : ನೊ.
ನಾನು : cane-o-la ಜ್ಯೂಸ್ ?
Z : ಸಾಲ್ದು !
ನಾನು : ಕದಂಬದ ಸಕ್ಕರೆ ಪೊಂಗಲ್ಲು, ಪುಳಿಯೋಗರೆ, ಬಿಸಿಬೇಳೇಬಾತ್ ? ಕಾಫಿ ?
Z : ಬೇಡ.
ನಾನು : ಗಾಂಧಿಬಜಾರ್ ಬೋಂಡಾ ಅಂಗಡಿಯ ಆಲೂ ಬೊಂಡಾ ?
Z : ಮಳೆಲಿ ನೆನೆಯುತ್ತಾ ಕೊಡಿಸುವುದಾದರೆ ಮಾತ್ರ ಒಕೆ.
ನಾನು : ಮಳೆಲಿ ಆಗಲ್ಲ ಪುಟ್ಟ...ಅದ್ ಬಿಟ್ಟ್ ಇನ್ನೇನ್ ಬೇಕಾದ್ರು ಕೇಳು.
Z : ಇಲ್ಲಾ ನಂಗೆ ಇದೇ ಬೇಕು !
ನಾನು : national high school ಹಿಂಭಾಗದ ಗಾಡಿಯಲ್ಲಿನ ಹೆಸರು ಬೇಳೆ ? ಬೇಡ್ವಾ ?
Z : ಬೇಡ.
ನಾನು : vishwesharapuram chat street ನಲ್ಲಿ ಒಂದು round? pleeeeeeeease ಒಪ್ಕೊ !
Z : ಬೇಡ. ನಾನ್ ಬರಲ್ಲ !
ನಾನು : kamat minerva ಜೋಳದ ರೊಟ್ಟಿ ?
Z : ನೊ.
ನಾನು : MTR ನಲ್ಲಿ ದೋಸೆ, ರವೆ ಇಡ್ಲಿ, ಊಟ, fruit mixture, ಬಾದಾಮಿ ಹಾಲು , ಖಾರದ cashew ?
Z : ಇಲ್ಲ ಇಲ್ಲ...ನಂಗೆ ಮಳೆ ನೇ ಬೇಕು.
ನಾನು : ಪ್ಲೀಸ್ ಹಠ ಮಾಡ್ಬೇಡ...ನೋಡು ಗುರುರಾಜ ಖಾರ ಸ್ಟಾಲಿನ ಬೇಸನ್ ಲಾಡು, ಕೋಡ್ಬಳೆ, ಚಕ್ಕುಲಿ, ಕೊಬ್ರಿಮಿಠಾಯಿ, ಕುಂದಾ, ಕರದಂಟು ....ಇದೆಲ್ಲಾ ನೂ ಬೇಡ್ವಾ ?
Z : ಬೇಡ ಬೇಡ ಬೇಡ.
ನಾನು : ಧಾರವಾಡದ ಪೇಡಾ ?
Z : ಉಹು.
ನಾನು : uffffffffffffffffff !!!!!!!!!!!!!!!!!!!!!! atleast ಸುಖ್ ಸಾಗರ್ ಜ್ಯೂಸ್ ಗಾದ್ರೂ ಒಪ್ಕೊಳ್ಳೆ !!
Z : ಒಪ್ಪಲ್ಲ. ಯಾವ್ದೂ ಬೇಡ. ನನಗೆ ಮಳೆನೇ ಬೇಕು ಒಂದ್ ಸರ್ತಿ, ನಂಗೆ ಮಳೆನೇ ಬೇಕು ಎರಡ್ ಸರ್ತಿ, ನಂಗೆ ಮಳೆ ನೇ ಬೇಕು ಮೂರ್ ಸರ್ತಿ !
ಗಲಾಟೆ ಜಾಸ್ತಿಯಾಯ್ತು ನಿಂದು. ಮಳೆ ಎಲ್ಲ ಸಿಗಲ್ಲ. ನನ್ನ ಮಾತು ಕೇಳ್ತ್ಯೋ ಇಲ್ವೊ ?
Z : ವಾಆಆಆಆಆಆಆಆಆಆಆಆಆಆಆಆಆಆಆಆಆಆಆ !!!!!!!!!!!!!!!!!!!!!!!!!!!!!!!!!boo hoooooooooooooooo !!!!!!!!!!!!!!!!!!!!!!!!!!!!!!!!!!!!!!!!!!!!!
ಮಾತ್ ಕೇಳೆ hopeless fellow !!
ವಾಆಆಆಆಆಆಆಆಆಆಆಆಆಆಆಆಆಆಆಆಆಆಆಆಆಅ !!!!!!!!!!!!!!!!!!!!!!!!!!!!!!!!!!!!!!!!!!!!!!
ಅತ್ತು ಅತ್ತು ಅದ್ ಎಷ್ಟ್ ಬಕೆಟ್ ಕಣ್ಣೀರು ತುಂಬಿಸ್ತಾಳೋ ನಾನು ನೋಡೇಬಿಡ್ತಿನಿ. ಎಲ್ಲ್ ಹೋಗ್ತಾಳೆ.. ಆಮೇಲೆ sorry ಅಂತ ಅಂದೇ ಅಂತಾಳೆ. ಅವಳು sorry ಅಂತ ಕೇಳೋವರ್ಗೂ...
line on hold.
ಜೀವನದೊಂದಿಗಿನ ನಮ್ಮ ಮಾತು lifetime ! ಇದರಲ್ಲಿ incoming -ಊ free outgoing -ಊ free !
ನನ್ನ ज़िंदगीಯೊಂದಿಗಿನ nonstop ಗುಸುಗುಸುವನ್ನು ಇಲ್ಲಿ ಬಿಚ್ಚಿಟ್ಟಿದ್ದೇನೆ.
Subscribe to:
Post Comments (Atom)
ಉತ್ತರಾಯಣ ೩
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ನಾನು : There is always a next time. Z : ಹೌದಾ ? ನಾನು : ಹೌದು. Z : ಪ್ರತೀ ಸಲವೂ ಹೀಗೆ ಆದರೆ ಗತಿಯೇನು ? ನಾನು : ಅದಕ್ಕೆ ನಿನ್ನ pessimistic ಅಂತ ಬೈಯ್ಯ...
-
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಬ್ಲಾಗಿನ ಹುಟ್ಟು ಹಬ್ಬ ಮತ್ತು ಹೊಸ ವರ್ಷ ಯಾವಾಗ್ಲು ಒಟ್ಟಿಗೆ ಬರತ್ತೆ. ಆದರೆ, ಮತ್ತೆ ಅದೇ flash back ಗೆ ಹೋಗಿ, ಅದೇ ...
14 comments:
ಈ ಊರಲ್ಲಿ ಮಳೆ ಇದ್ದಾಗ ಮೆಮೋರಿ ಎಲ್ಲಿಂದ ಬಂತು, ಬರೀ ಮೋರಿ.
ಮತ್ತೆ, ಆ ಹೋಪ್ಲೆಸ್ ತಿಂಡಿ ಎಲ್ಲಾ ತಿನ್ಬೇಡ, ಮನೆಗೆ ಬಾ, ಕೆಂಪಕ್ಕಿ ಅನ್ನ ಸಾರು ಊಟ ಮಾಡುವಂತೆ.
ಆರೋಗ್ಯವೇ ಭಾಗ್ಯ. ನಿಂಗೆ ಒಳ್ಳೇದ್ ಆಗ್ಲಿ. ದೀರ್ಘಾಯುಷ್ಮಾನ್ ಭವ.
ಒಳ್ಳೆ ಮಳೆ! ಇಲ್ಲಂತೂ ಇವತ್ತು ಮಧ್ಯಾಹ್ನದಿಂದ ಶುರು ಆಗಿದೆ. ಒಂದೇ ಸಮನೆ ಸುರೀತಿದೆ.
:) maLeli neniyodu mOjirbOdu. aadre aarOgyakara alla.
ವಿಪರೀತ ಮಳೆ ಬರುತ್ತಾಯಿದೆ. ಒಮ್ಮೆ ನಿನ್ನ ಮನೆ ಆಚೆ ನೋಡಿ ಬಾ... ಪ್ರವಾಹ ಆಗ್ತಾಯಿದೆ
@srinivasa, maLe li nenyO antha mOjina mundhe yaakO aarOgya ashtu important ansalla nange... ;-)
ಶ್ರೀನಿವಾಸ, ನೀನು ಚಾರಣಿಗನಾಗಿ ಹಿಂಗಾ ಹೇಳೋದು? ಏನಾಗಿದೆ ನಿನಗೆ? ಸುರಿಯೋ ಮಳೆಯಲ್ಲಿ ಯಾವುದಾದರೂ ಬೆಟ್ಟ ಹತ್ತಿ ಬರೋಣ ಬಾ. ಆಮೇಲೆ ಮತ್ತೆ ಹೊಸದಾಗಿ, ಸರಿಯಾಗಿ ಕಮೆಂಟ್ ಮಾಡು.
amma mahAtAyi yeSTu suLLu heLtiya Z~ge:-o.......sigtiyalla yaavaaglaadru vichaaraskotini ninna..x-(...neen yella maLe sukhaanu anubhavisi papa Z~ge yenu sigde iro tara mADidiyalla mahAn pApi neenu..
Z~ge heLtini iru neen ondina maLeli nenkonDu vaDa-pAv,bajji tindiddu bisi bisi strooooong kaapi kuDdiddu;)
ಗುರುಗಳೆ,
ಸರಿ. ಯಾವತ್ತ್ ಬರ್ಲಿ ?
ಶ್ರೀಕಾಂತ್:
ನೀವು ಉಡುಪಿಯಲ್ಲಿದ್ದೀರಿ, ನಾನು ಬೆಂಗಳೂರಲ್ಲಿದ್ದೇನೆ. ಬೆಂಗಳೂರಿನಲ್ಲಿ ಉಡುಪಿಯ ಥರ ಮಳೆ ಬರ್ತಾಯಿಲ್ಲ..
ಗಂಡಭೇರುಂಡ :
ಹಾಗಾ ? ಸರಿ. ಮತ್ತು ಶ್ರೀಕಾಂತ್ ಹಾಗೂ ಗುರುಗಳು ನಿಮ್ಮನ್ನು ಕುರಿತು ಮಾಡಿರುವ ರೀಕಮೆಂಟಿಗೆ ನನ್ನ ರಿ ರಿ ಕಮೆಂಟು: ಪಾಪ !
ಅಂತರ್ವಾಣಿ :
ಎಲ್ಲಿ ? ಒಂಧ್ ಹನಿ ನೂ ಇರ್ಲಿಲ್ಲ ನೀವ್ ಕಮೆಂಟ್ ಮಾಡಿದ ದಿನ ! ಈಗ್ ಸ್ವಲ್ಪ ಶುರುವಾಗಿದೆ !
ರೋಹಿಣಿ :
ಶ್!!!!!!!!!!!!! ಸುಮ್ನೆ ಇದ್ಬಿಡು ರೋಹಿಣಿ...ಜಾಣ ಮರಿ ಅಲ್ವಾ ? ಶುಂಟಿ ಪೆಪ್ಪೆರ್ಮಿಂಟ್ ಕೊಡ್ಸ್ತಿನಿ.....ನಿಜ ಎಲ್ಲ Z ಗೆ ಹೇಳ್ಬೇಡ ! ;-)
ನೀವು ನಿಮ್ಗೆ ಗೊತ್ತಾಗ್ದೇನೇ Z...ಗೆ ಮಳೇಲಿ ಗಟ್ಟಿಯಾಗಿ ಹೊದ್ದುಕೊಂಡು....zzzzz ಮಾಡುವಷ್ಟು ಮತ್ತು ಮಳೆಯಲ್ಲಿ ನೆನೆಸೋವಷ್ಟು ಕಣ್ಣೀರು ತರಿಸಿದ್ದೀರಿ.
ಇರ್ಲಿ, ನೀವು ಥೂ... ಅನ್ನದಿದ್ರೆ ಮತ್ತೊಂದು ಮಾತಿದೆ. ಅಷ್ಟೆಲ್ಲಾ ತಿಂಡಿ-ತೀರ್ಥಗಳ ಹೆಸರು ಹೇಳಿ...ಹೇಳಿ.... ಬಾಯಲ್ಲಿ ನೀರೂರಿಸಿ, ಮಳೆಯೇನು.... ಪ್ರವಾಹವನ್ನೇ ಸೃಷ್ಟಿಸಿಬಿಟ್ಟಿದ್ದೀರಿ....
ಇದಕ್ಕಾಗಿ ನಿಮಗೆ 10 ಬಕೆಟ್ ಮಳೆ ನೀರಿನ ಶಿಕ್ಷೆ.
ಅಸತ್ಯ ಅನ್ವೇಷಿ :
ಹ್ಮ್ಮ್....Z ಗೆ ನಾನು ಕಣ್ಣೀರು ತರಿಸಲಿಲ್ಲ...ಅವಳೇ ಸ್ವತಃ ಸ್ವಯಂ ಸಾಕ್ಷಾತ್ ಖುದ್ದಾಗಿ ತರ್ಸಿಕೊಂಡಿದ್ದು...ಸ್ವಯಂಕೃತ !!
ಪ್ರವಾಹ ನಾ ? ಎಲ್ಲಿ ? ಯಾವಾಗ ? ನೀವು ಮುಳುಗಿರಲ್ಲ ಗೊತ್ತು...ಯಾಕಂದ್ರೆ ----- ಸಮುದ್ರಕ್ಕೆ ಹೋದರೂ,--------- ನೀರು ! [kindly fill in the blanks ಮಾಡ್ಕೊಳ್ಳಿ]
ಬರೀ ಹತ್ತು ಬಕೆಟ್ ಮಳೆ "ನೀರು" ಮಾತ್ರ ಶಿಕ್ಷೆ ನ ? ಸಂತೋಷವಾಗಿ ಒಪ್ಪಿಕೊಂಡಿದ್ದೇನೆ. ಸದ್ಯ ಮಳೆ ನೀರನ್ನ ’ಹೊರು’ವ ಶಿಕ್ಷೆ ಕೊಡಲಿಲ್ಲವಲ್ಲ !! :-) :-)
hmmmm....shishu sambhaashaNe....
thanks re! because nevvu blorealli enen chennagiro thindi elli sigotte antha thilisi kotiddhira.
>>ಅಣ್ಣ ಅಮ್ಮ ನಡೆಯದೇ, ಆಟೋ ಅಥವಾ ಕಾರಿನಲ್ಲಿ ಬಂದು ನನಗೆ ಹನಿಯನ್ನೂ ಸೋಕಿಸದೇ ಮನೆಗೆ ಕರೆದುಕೊಂಡು ಹೋಗುತ್ತಿದ್ದರು.
ರಾಜಕುಮಾರಿ,, ನಿಮ್ಮ ಬರಹ ನನ್ನ ಹಳೇ ಹಳೇ ನೆನಪೆಲ್ಲಾ ಕೆದಕ್ತಾ ಇದೆ,, ಅದಕ್ಕೆ ಹಳೇದಾದ್ರೂ ಒಂದೊಂದೇ ಓದ್ಕೊಂಡ್ ಬರ್ತಾ ಇದೀನಿ.. ಒಂಥರಾ ನನ್ನ ಡೈರಿ ಓದಿದಹಾಗೆ ಆಗ್ತಾ ಇದೆ.. ನನ್ನ ನೆನಪೂ ಹಂಚಿಕೊತೀನಿ, ಕೊರೀತಾ ಇದಾನೆ ಅಂತ ತಿಳ್ಕೊಬೇಡಿ.. ನಾವು ಶಾಲೆಗೆ ಸೈಕಲಲ್ಲಿ ಹೋಗ್ತಿದ್ವಿ, ಮಳೆ ಬಂದ್ರೆ ಒಂದು ಕೈಯಲ್ಲಿ ಕೊಡೆ ಹಿಡ್ಕೊಂಡು. ಅದೂ ನಮ್ದು ೫ ಜನರದ್ದೊಂದು ಗ್ಯಾಂಗ್ ಇತ್ತು.. ಒಂದು ಸೋಮಾರಿ ಕಟ್ಟೆಲಿ ಅಲ್ಲಿ ಎಲ್ಲಾರೂ ಸೇರಿ ಗಂಟೆ ಹೊಡಿಯೋಕೆ ೫ ನಿಮಿಶ ಇರ್ಬೇಕು ಅಂತ ಇದ್ದಾಗ ಹೊರ್ಡ್ತಾ ಇದ್ವಿ.. ಮಳೆಗಾಲದಲ್ಲಿ ತಲೆ ಒಂದು ಬಿಟ್ಟು ಮತ್ತೆಲ್ಲಾ ಚಂಡಿ (ಒದ್ದೆ).. ಅದು ನಿಂತ ನೀರಿನ ಮೇಲೆ ಸೈಕಲ್ ಓಡಿಸೋ ಮಜಾನೇ ಬೇರೆ..
ಮಳೇಲಿ ನೆನದ್ರೆ ಜ್ವರ, ಸೀತ ಏನೂ ಬರಲ್ಲ, ಬಟ್ಟೆ ಒಗಿಯೋಕೆ ತೊಂದ್ರೆ ಅಂತ ಮನೇಲಿ ಸುಳ್ಳೇ ಹೇಳೋದು, ಈ ಜುಲೈಯಲ್ಲಿ ನಮ್ಮೂರಿಗೆ ಬನ್ನಿ, ಮಳೆ, ನೆರೆ ನಿಮಗೆ ಕಿರಿ ಕಿರಿ ಹಿಡಿಯುವಷ್ಟು ಕಾಣಬಹುದು..
ಒಂಥರಾ ಬೇಜಾರಾಯ್ತು. ಸಿಟಿ ಮಕ್ಕಳು ಮಳೆಯಂತಹ ಸಹಜತೆಯನ್ನೂ ಹೇಗೆ ಮಿಸ್ ಮಾಡ್ಕೋತ್ತಿದ್ದಾರೆ ಅಂತ ಇದ್ರಲ್ಲಿ ಗೊತ್ತಾಗತ್ತೆ. ಇದರ ಬಗ್ಗೆ ನಿಮಗೆ ವಿಷಾದವಿದೆ ಅನ್ನುವುದೇ ಇಲ್ಲಿ ಸಮಾಧಾನಕರ ಅಂಶ.
bn.. foolproof plan fail ಆಗ್ಬಾರ್ದಲ್ಲ! fail ಆದ್ರೆ ಅದು foolproof ಅಲ್ಲವೇ ಅಲ್ಲ :)
Post a Comment