Sunday, August 3, 2008

Friends

ನಾನು : Z ಇವತ್ತು friendship day .

Z : Happy friendship day !

ನಾನು : ನನ್ನ ಸ್ನೇಹಿತರಿಗೆಲ್ಲರಿಗೂ "Happy Friendship day " !
ಇವತ್ತು ಟಿವಿಯಲ್ಲೆಲ್ಲ, ರೇಡಿಯೋದಲ್ಲೆಲ್ಲ ಏನ್ ಎಲ್ಲರೂ wish ಮಾಡಿದ್ದೇ ಮಾಡಿದ್ದು. ಭಾಷಣಗಳನ್ನ ಬಿಗಿದ್ದಿದ್ದೇ ಬಿಗಿದಿದ್ದು, ಸ್ನೇಹ ಎಷ್ಟು ಸುಂದರ, ಸ್ನೇಹ ಎಷ್ಟು ಆನಂದದಾಯಕ ಅಂತೆಲ್ಲ.

Z : ನಿಜ ಅಲ್ವ ಅದು ? friendship is a strong bondage, it is the nicest feeling one can ever have. Friends support us, encourage us, help us and what not ? ಸ್ನೇಹಿತರಿರದ ಬದುಕು ಬದುಕೇ ಅಲ್ಲ head ruled....

ನಾನು : ಹ ಹ ಹ !

Z : Please sarcastic ಆಗಿ ನಗಬೇಡ.

ನಾನು : ನೀನ್ ಯೆಷ್ಟ್ innocent Z ! ಪಾಪ ಅನ್ನಿಸತ್ತೆ ನಿನ್ನ ಮಾತು ಕೇಳಿದ್ರೆ. ಪ್ರಪಂಚದ ಘೋರ ಸ್ವರೂಪ ನಿನಗೆ ಗೊತ್ತೇ ಇಲ್ಲ. I honestly pity you.

Z : why do you say so?

ನಾನು : I stand testimony for all the adversities friendships can put one into, Z ! ನಿನ್ನ ಮಾತನ್ನ ಪೂರ್ತಿ ಅಲ್ಲಗಳೀತಿಲ್ಲ ಅಥವಾ ಹೀಯಾಳಿಸುತ್ತಿಲ್ಲ ನಾನು, ಸ್ನೇಹದ ಇನ್ನೊಂದು ಮುಖದ ಬಗ್ಗೆ ನಿನಗೆ ಹೇಳಲೋ ಬೇಡ್ವೋ ಅನ್ನೋದರ ಬಗ್ಗೆ ನಾನು ಯೋಚನೆ ಮಾಡುತ್ತಿದ್ದೇನೆ ಅಷ್ಟೆ.

Z : Go ahead and tell me.

ನಾನು : ನಂಬಿ ಕಡೆಗೆ ಸಹಿಸಲಾರದ ಕೊಡಲಿಪೆಟ್ಟು ತಿಂದಿದ್ದೇನೆ ನಾನು ಸ್ನೇಹದಲ್ಲಿ. ಜೀವಕ್ಕೆ ಜೀವ ಕೊಡುವೆವೆಂದು ಹೇಳಿಕೊಳ್ಳುತ್ತಾ ನಂಬಿಸಿ ಕಡೆಗೆ ಜೀವನವೇ ಸಾಕಪ್ಪಾ ಎನ್ನುವಷ್ಟು ಜಿಗುಪ್ಸೆ ತರಿಸಿದ್ದಾರೆ ಕೆಲವರು. ಬೇಕಾದಾಗ ಬೆಣ್ಣೆಯಂತೆ ಮಾತಾಡಿ, ಬೇಡದಿರುವಾಗ ಬೀದಿಯಲ್ಲಿ ಒಬ್ಬರೇ ಬಿಟ್ಟೂಹೋಗಿರುವವರೂ ಇದ್ದಾರೆ ನನ್ನ "ಸ್ನೇಹಿತ/ತೆ" ರ ಪೈಕಿ. ಫೋನ್ ನಲ್ಲೇ ಘಂಟೆಗಟ್ಟಲೇ ಮಾತಾಡುತ್ತಿದ್ದ ಕೆಲವರು ಈಗ ಫೋನ್ ಮಾಡಿದ್ರೆ " I am busy " ಎಂದು " ಅರೆಘಳಿಗೆಯಲ್ಲೇ ಫೋನಿಟ್ಟವರಿದ್ದಾರೆ. ಮುಂದೆ ಒಳ್ಳೆಯ ಮಾತಾಡಿ, ಹಿಂದೆ ಅಷ್ಟೆ ವಿಷ ಕಾರಿ, ಅಪಪ್ರಚಾರ ಮಾಡಿ, ಆಡಿಕೊಂಡವರ ಸಂಖ್ಯೆ ಬಹಳ. ಎಲ್ಲಾ ಕೆಲಸಗಳನ್ನು ಕದ್ದು ಮುಚ್ಚಿ ಮಾಡಿ, ಕಡೆಗೆ ಅದು ನನಗೆ ಗೊತ್ತಾದಾಗ..." sorry, I just forgot to tell you...I didnt mean to hide things...but it just slipped out of my mind" ಎಂದು ಜಾರಿಕೊಳ್ಳೂವವರೂ ಇದ್ದಾರೆ. ಎಲ್ಲಿ ನಾವು ಅವರ ಸಮಕ್ಕೆ ನಿಲ್ಲುವೆವೋ? ಎಲ್ಲಿ ನಾವವರಿಗೆ ಸ್ಪರ್ಧೆ ಒಡ್ಡುವೆವೋ ಅನ್ನುವ ಭಯ. ಅವರಿಗಿಂತ ಹೆಚ್ಚು ನಾವು ಪ್ರಸಿದ್ಧರಾದರೆ ? ಅವರಿಗೆ ಬೇಕಾದದ್ದು ನಮಗೆ ಸಿಕ್ಕರೆ ? ಈ ಲೋಕದಲ್ಲಿ ಸ್ವಾರ್ಥ ಹೆಚ್ಚು Z !

Z : Oh my god !

ನಾನು : such is the world, Z ! you have no other choice but to wonder at the magic it conjures up every moment, and grieve and endure the pains it gives you.

Z : ತಪ್ಪು ನಿನ್ನದೂ ಇರತ್ತೆ. ಎರಡು ಕೈ ಸೇರಿದರೇನೆ ಚಪ್ಪಾಳೆ.

ನಾನು : ಆಯ್ತಮ್ಮ..ಒಪ್ಪೋಣ. ಆದರೆ ಯಾರು ಎಲ್ಲಿ ತಪ್ಪು ಮಾಡಿದ್ದಾರೆ ಎಂದು ಕೂತು ಮಾತಾಡುವ ಬದಲು, ಏನೂ ಮಾತಾಡದೇ, ಕಣ್ಣಿನಲ್ಲಿ ಕಣ್ಣಿಟ್ಟು ನೋಡದೇ ಕಣ್ಣು ತಪ್ಪಿಸಿಕೊಂಡರೆ ನಿನಗೇನನ್ನಿಸತ್ತೆ ? ನಾನು ಕೂತು ವಿಷಯಗಳನ್ನು ಬಗೆಹರಿಸಿಕೊಳ್ಳಲು ತಯಾರಿದ್ದರೂ ಅವರೇ ಮಾತಾಡದಿದ್ದರೇ ಕಳ್ಳನ ಮನಸ್ಸು ಹುಳ್ಳಹುಳ್ಳಗೆ ಎಂದು ಅಂದುಕೊಳ್ಳದೇ ನನಗೆ ಬೇರೆ ದಾರಿಯಿಲ್ಲ. ನಾನೇ ಫೋನ್ ಮಾಡಿ ಮಾತಾಡುವ ಎಂದು ಹೇಳಿದ್ದು ತಪ್ಪಾ ? ಮೂರಿಂದ ಆರು ತಿಂಗಳಿಗೊಂದು ಸಲ ಫೋನ್ ಮಾಡಿ ಯಾವಾಗಲೂ ನಾನೇ ಕ್ಷೇಮಸಮಾಚಾರ ವಿಚಾರಿಸಿಕೊಂಡದ್ದು ತಪ್ಪ ? ಗೊತ್ತಿರುವವರೆಲ್ಲರೂ " ಹೇಗಿದ್ದೀರಿ ನೀವು best friends ಈಗ ?" ಎಂದು ಕೇಳಿದಾಗಲೆಲ್ಲ, ನಮ್ಮ rift ಅನ್ನು ಮುಚ್ಚಿಟ್ಟು ಗೊತ್ತಿದ್ದಷ್ಟೇ ಅವರಿಗೆ ಹೇಳಿ ಅವರ ಕುತೂಹಲ ಶಾಂತಗೊಳಿಸಲು ಪ್ರಯತ್ನ ಪಟ್ಟಿದ್ದು ತಪ್ಪಾ ? ಅವರಿಗೆ ಗೊತ್ತಿರುವವರು ನನ್ನನ್ನು ಮಾತಾಡಿಸಿದರೆ ಅದು ನನ್ನ ತಪ್ಪಾ ಅಥವಾ ಮಾತಾಡಿಸಿದವರ ತಪ್ಪಾ ?

Z : er.....

ನಾನು : ಏನೂ ಮಾತಾಡೊ ಸ್ಥಿತಿಯಲ್ಲಿಲ್ಲ ನೀನು ಅಲ್ಲ ? ಗೊತ್ತು ನಂಗೆ. I have suffered and endured enough Z. ಈ ವರ್ಷದ friendship day ದಿನ ನಾನೊಂದು ಮಹತ್ವಪೂರ್ಣ ನಿರ್ಧಾರ ಮಾಡಿದ್ದೇನೆ, ಬಹಳ ಯೋಚನೆ ಮಾಡಿದ ನಂತರ.

Z : ಏನದು ?

ನಾನು : ಸ್ನೇಹದ ಅರ್ಥ ಮತ್ತು ಬೆಲೆ ಗೊತ್ತಿಲ್ಲದೇ ಅವಕಾಶವಾದಿಗಳಂತೆ ವರ್ತಿಸಿದವರನ್ನು, ಒಳ್ಳೆಯದನ್ನೆಲ್ಲ ನನ್ನಿಂದ ಬಾಚಿಕೊಂಡು, ನನ್ನಿಂದ ಎಲ್ಲಾ ಕಲಿತು ನನಗೇ ಬತ್ತಿಯಿಟ್ಟು ಏನೂ ಅರಿಯದಂತಿರುವ ನರಿಯಂತವರನ್ನು, ಬೆನ್ನಿಗೆ ಚೂರಿ ಹಾಕುವ ಮಿತ್ರರ ಸೋಗಿನಲ್ಲಿರುವ ಮಿತ್ರದ್ರೋಹಿಗಳನ್ನು ನನ್ನ ಜೀವನ, ಫೋನ್ ಮತ್ತು friend list ಇಂದ ಶಾಶ್ವತವಾಗಿ ಉಚ್ಛಾಟಿಸುತ್ತಿದ್ದೇನೆ. ನನಗವರ ಸ್ನೇಹವೂ ಸಾಕು, ಅನುಭವಿಸಿದ ಯಾತನೆಯೂ ಸಾಕು. ಇನ್ನವರು ತಿಪ್ಪರ್ಲಾಗ ಹಾಕಿದರೂ, ಮುಗಿಬಿದ್ದರೂ, ಬಿಕ್ಕಿ ಬಿಕ್ಕಿ ಅತ್ತರೂ, ಬೇಡಿಕೊಂಡರೂ ನಾನು entertain ಮಾಡೋಲ್ಲ. The end !

Z : Oh my god ! how can you live without friends ?

ನಾನು : ಅಯ್ಯೊ ಮಹತಾಯಿ, ಹಾಗಂತ ನನಗೆ ಸ್ನೇಹಿತರೇ ಇಲ್ಲ, ಇರುವವರೆಲ್ಲರೂ ಹೀಗೆ ಎಂದು ಅರ್ಥ ಅಲ್ಲ. ಸ್ಮಿತೆಯಂಥಾ, ಭವ್ಯಳಂತಾ , ಚೈತ್ರಳಂತಾ, ಅಕ್ಷಜಾಳಂಥಾ, ನಮ್ಮ ನಾಡಿನ ಸದಸ್ಯರಂಥಾ, ಪ್ರಣತಿಯ team members ಅಂಥಾ, ರಾಧೆಯಂಥಾ , ಆಶಾಳಂಥಾ, ರೋಹಿಣಿಯಂಥಾ, ಶೃತಿಯಂಥಾ, ಹಾಗೆಯೇ ಮತ್ತಷ್ಟು ನಿಜವಾದ ಒಳ್ಳೆ ಸ್ನೇಹಿತರು ನನ್ನ ಪಾಲಿಗಿದ್ದಾರೆ. ಅವರೆಲ್ಲರೂ ನನಗಾದ ನೋವನ್ನ ಮರೆಯುವಂತೆ ಮಾಡಿದ್ದಾರೆ. All thanks to them !

Z : :) Good to know, but still, wont people think you are headstrong when they see you act tough ?

ನಾನು : They weren't nice to me when I was nice to them, Z ! There is a saying " you cannot have a choice of relatives, but you can have a choice of friends ".

And I have done mine.

If people think I am headstrong, rude, tough, stupid and what not... I care a damn ! My true friends have accepted me as I am and I have accepted them as they are. ಅಷ್ಟೆ.

Z : ಸರಿ.

9 comments:

Anonymous said...

avra moogige sariyaagi maathadavru, thamma swarthakke sariyaagi nadkoLavrella friends ankondirthvi Luck.. Adakke haage ansodu.. eega adhru ninge nija gothaithalla antha nange kushi idhe.. :-) May You never meet such "So called BEST Friends" :-) neenu heLiro every single word nija.. We both had same bad experience ansuthe.. :-) He he he.. Inmele aathara aagalla antha nangu gothu.. :-) Good Decisio.. :-)

Have a great Friendly year ahead..

Anveshi said...

ನಿಜ ನಿಜ...

ಜೀವನಪೂರ್ತಿ ಸ್ನೇಹಿತರಾಗಿರೋಣ ಅಂತಂದವರು, ಬೇರೆ ಕಡೆಯ ಆಮಿಷ ಹೆಚ್ಚಾದಾಗ ಒಂದೇ ವಾರದಲ್ಲಿ ಎಷ್ಟೊಂದು ಚೆನ್ನಾಗಿ ಮರ್ತು ಬಿಡ್ತಾರಲ್ಲ... ಅಂಥ ಸ್ಥಿತಿ ಮರೆತುಬಿಡೋದು ಹೇಗೆ ಅಂತ ನಾವು ಅಂಥವರಿಂದಲೇ ಕಲ್ತ್‌ಕೋಬೇಕು... ಸ್ನೇಹದಲ್ಲಿ ಈ ರೀತಿಯ ಒಂದು ತಳಿಯೂ ಇರುತ್ತದೆ ಎಂದು ಗೊತ್ತಾದಾಗ ಆಗಬಾರದ್ದು ಆಗ್ಹೋಗಿರುತ್ತೆ....

ಜಿಂದಗೀ ಇಸ್ ರಿಯಲೀ ಕಾಲಿಂಗ್...

Unknown said...

ಸ್ನೇಹ ಕ್ಕೆ ಇನ್ನೂಂದು ಅರ್ಥ ಕರ್ಣ ಮತ್ತು ದುರ್ಯೋಧನ ! But eega intha friends siguthara? Eganthu friendship nalli competations jasti aste they are just like competators than friends.
sneha da artha, bele yaradu gothilla aste.

Lakshmi Shashidhar Chaitanya said...

@ ರಾಧೆ :

ನಿಜ..ನನಗೂ ನಿನಗೂ ಒಂದೇ ಥರದ ಅನುಭವ ಆಗಿದೆ ! thanks ನಿನ್ನ wishes ಗೆ ! hope I get "really good" friends like you !

:)

@ಅಸತ್ಯ ಅನ್ವೇಷಿ :

"ಅಸತ್ಯ ಅನ್ವೇಷಿ" ಯವರ ಕೀಲಿಮಣೆಯಿಂದ "ನಿಜ" ಅನ್ನುವ ಪದ ಕುಟ್ಟಲ್ಪಟ್ಟಿರುವುದನ್ನು ಕಂಡು ಬೊಗಳೆ ರಗಳೆಯ ಅಭಿಮಾನಿ ವರ್ಗ ಆಶ್ಚರ್ಯ ಚಕಿತರಾಗಿ, ದಿಕ್ಕೆಟ್ಟು, ಕಂಗೆಟ್ಟು, ದಿಗ್ಭ್ರಾಂತರಾಗಿಹೋಗಿದ್ದಾರೆ. ಈ ಪದ ಎರಡು ಸಲ ಕುಟ್ಟಲ್ಪಟ್ಟಿರುವುದು ತೀರ ಸೋಜಿಗವೆನಿಸಿ ಇದರ ರಹಸ್ಯ ಭೇದಿಸಲೇಬೇಕೆಂದು ದಿಕ್ಕಾಪಾಲಾಗಿ ಹುಡುಕಹೋಗಿದ್ದಾರೆ.ನಾನೂ ಸೇರಿ !!!!! :) :) :)

jokes apart, thanks a lot for your comment.ನಿಮ್ಮ ಮಾತು ತೀರಾ ನಿಜ. ಇಂತಹಾ ತಳಿಗಳ ಬಗ್ಗೆ ನಮಗೆ ತಿಳಿಯುವಷ್ಟೊತ್ತಿಗೆ ತುಂಬಾ ತಡವಾಗಿರುತ್ತದೆ.

really ಅನ್ನೋ ಪದದ ಕುಟ್ಟುವಿಕೆ ಗಾಬರಿ ತರಿಸಿದೆ ಎಂದು ಬೊಗಳೆ ರಗಳೆಯ ಸಕಲ ಅಭಿಮಾನಿ ವರ್ಗ ಒಮ್ಮತದಿಂದ ಬಾಲವೆತ್ತಿ ನುಡಿದಿದ್ದಾರೆ !!

Lakshmi Shashidhar Chaitanya said...

@ padma :

100 percent nija aunty...friendship nalli eega irodu eradE...unhealthy competition and show off !

ಅಂತರ್ವಾಣಿ said...

hmmmm
nin ichcheyanthe maaDu... naanu eshto varshada hindinindalU ide policy use maaDtha bandiddEne. tumbaa araamaagiddene.. :D

Lakshmi Shashidhar Chaitanya said...

@ಅಂತರ್ವಾಣಿ :
ನೋಡಿ...ನೀವ್ ದೊಡ್ಡೋರು..ಬಹಳ ವರ್ಷಗಳ ಹಿಂದೆ realize ಮಾಡ್ಕೊಂಡಿದೀರ. ನಂಗೆ ಈಗ tube light ಮಿಣುಕು ಮಿಣುಕು ಅಂತಿದೆ ! ನೀವ್ ಆರಾಮಾಗಿದ್ದೀರ ? decision work ಆಗತ್ತೆ ಅಂತ ಆಯ್ತು ಹಾಗಾದ್ರೆ ! ನಾನು ಸೀರಿಯಸ್ಸಾಗಿ ಫಾಲೋ ಮಾಡುವೆ !

Sridhar Raju said...

Hmmm..Every Friendship has an expiry date...in broader every relationshiop will have an expiry date...expire aagbaardu andre adunna kaapaadkoLLo niyattu, nishTe irbeku...illandre aaykoLatte...

Lakshmi Shashidhar Chaitanya said...

@sridhar :

lakshakkondu maatu karmakaanda prabhugaLE !

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...