ನಾನು : ಪಾಪ ! ಪಾಪ ! ಪಾಪ !!!!!!!!!!
Z : ಏನಾಯ್ತು ? ಪಾಪಗುಟ್ಟುತ್ತಿದ್ದೀಯಾ ?
ನಾನು : ಮೊನ್ನೆ ಮಂಗಳೂರಿನ ಬಳಿ ಪಾಪ ಪುಟ್ಟ ಪಾಪುಗಳು ಹೋಗುತ್ತಿದ್ದ ಬಸ್ಸು ನದಿ ನೀರಿಗೆ ಉರುಳಿ ಎಲ್ಲಾ ಪಾಪುಗಳು ನೀರುಪಾಲಾದವಂತೆ Z !
Z : ಛೆ ! ಅನ್ಯಾಯ !
ನಾನು : ಇದು ಒಂಥರಾ ವಿವವರಿಸಲು ಆಗದ, ತರ್ಕಕ್ಕೆ ನಿಲುಕದ ಸಂಗತಿ. ಅನ್ಯಾಯ...ಅವೇನು ಮಾಡಿದ್ದವು ಪಾಪ...ಪಾಪದಂಥವು, ಶಾಲೆಗೆ ಹೊರಟಿದ್ದವು...ಕುಂಭದ್ರೋಣ ಮಳೆಯನ್ನೂ ಲೆಕ್ಕಿಸದೇ...ತಮ್ಮದೇ ಲೋಕದಲ್ಲಿ ಕುಣಿದಾಡುತ್ತಾ, ಅವರದ್ದೇ ಕನಸಿನ ಸಮುದ್ರದಲ್ಲಿ ತೇಲುತ್ತಾ ಇದ್ದವು...ಛೆ ! ಮುಳುಗಿ ಹೋದವು ! ಪ್ರಳಯ ರೂಪ ತಾಳಿದ ನದಿನೀರಿನಲ್ಲಿ ! ನನಗಂತೂ tv9ನಲ್ಲಿ ನ್ಯೂಸ್ ನೋಡಿದ್ದೇ ವಿಪರೀತ ಸಂಕಟವಾಯ್ತು. ಕಣ್ಣಿಂದ ಧುಮುಕಲು ಯತ್ನಿಸುತ್ತಿದ್ದ ನೀರನ್ನು ಅದು ಹೇಗೆ ತಡೆದೆನೋ ನನಗಿನ್ನೂ ಅರ್ಥವಾಗುತ್ತಿಲ್ಲ. ಆ ಮೂವತ್ತು ಮಕ್ಕಳಲ್ಲಿ ಎಷ್ಟು ವಿಜ್ಞಾನಿಗಳಿದ್ದರೋ, ಎಷ್ಟು ವೈದ್ಯರಿದ್ದರೋ, ಯಾರು ಅವರಲ್ಲಿ ವಿಶ್ವೇಶ್ವರಯ್ಯನಾಗಬಹುದಿತ್ತೋ, ಯಾರು ಕಾರಂತರಂಥವರೋ, ಯಾರು ರಾಧಕೃಷ್ಣರಾಗುತ್ತಿದ್ದರೋ ? ಅನ್ಯಾಯ Z ... ಭವಿಷ್ಯ ರೂಪುಗೊಳ್ಳಬೇಕಿದ್ದ ಮಕ್ಕಳ ಈ ತರಹದ ಸಾವು ನಿಜವಾಗಿಯೂ ನನ್ನನ್ನು ಏನೂ ಹೇಳಲಾಗದ ಮೌನ ಸ್ಥಿತಿಗೆ ನೂಕಿತ್ತು ಎರಡು ದಿನ ! ನೆನ್ನೆ ಹಬ್ಬ ಇತ್ತಾದರೂ, ಒಂದು ಕ್ಷಣ ಆ ಮಕ್ಕಳ ಮನೆಯಲ್ಲಿರಬಹುದಾದ ಸೂತಕದ ಛಾಯೆ ನನ್ನ ಕಣ್ಣು ಮುಂದೆ ಹಾಗೇ ಹಾದು ಹೋಯ್ತು .
ಆಗುವುದನ್ನು ತಡೆಯಲಸಾಧ್ಯವಾದಾಗಲೇ ಪ್ರಾಯಶಃ ಅಪಘಾತ ಸಂಭವಿಸುವುದು. ಅಪಘಾತದ ಹಿಂದಿನ ನೋವಿನ ಅರಿವು ನನಗಿದೆ. ಆಗಬಾರದಿತ್ತು...ಆಗಿಹೋಯ್ತು. ಆ ಮಕ್ಕಳ ತಂದೆ ತಾಯಿಗಳಿಗೆ ಮತ್ತೆ ಅವರ ಕಂದಮ್ಮಗಳನ್ನು ಮರಳಿ ದೊರಕಿಸಿಕೊಡಲು ನಮ್ಮ ಬಳಿ ಸಂಜೀವಿನಿ ಪರ್ವತವಾಗಲಿ, ದ್ರೋಣಗಿರಿಯಾಗಲಿ, ಚಿಂತಾಮಣಿಯಾಗಲಿ ಇಲ್ಲ ! ಇದು ಭರಿಸಲಾಗದ ನಷ್ಟ. ನಾವು ನಮ್ಮ ಸಹಾನುಭೂತಿ ಮತ್ತು ಶೋಕವನ್ನು ವ್ಯಕ್ತಪಡಿಸಬಹುದಷ್ಟೇ ವಿನಃ ಇನ್ನೇನೂ ಸಾಧ್ಯವಿಲ್ಲ. ಆ ಕಂದಮ್ಮಗಳ ಅಕಾಲ ಮೃತ್ಯುವಿಗೆ ಇದು ಭಾವಪೂರ್ಣ ಅಶ್ರುತರ್ಪಣ.
Z : sniff ! ನನ್ನದೂ ಶ್ರಧ್ಧಾಂಜಲಿ !
ಜೀವನದೊಂದಿಗಿನ ನಮ್ಮ ಮಾತು lifetime ! ಇದರಲ್ಲಿ incoming -ಊ free outgoing -ಊ free !
ನನ್ನ ज़िंदगीಯೊಂದಿಗಿನ nonstop ಗುಸುಗುಸುವನ್ನು ಇಲ್ಲಿ ಬಿಚ್ಚಿಟ್ಟಿದ್ದೇನೆ.
Saturday, August 16, 2008
Subscribe to:
Post Comments (Atom)
ಉತ್ತರಾಯಣ ೩
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ನಾನು : There is always a next time. Z : ಹೌದಾ ? ನಾನು : ಹೌದು. Z : ಪ್ರತೀ ಸಲವೂ ಹೀಗೆ ಆದರೆ ಗತಿಯೇನು ? ನಾನು : ಅದಕ್ಕೆ ನಿನ್ನ pessimistic ಅಂತ ಬೈಯ್ಯ...
-
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಬ್ಲಾಗಿನ ಹುಟ್ಟು ಹಬ್ಬ ಮತ್ತು ಹೊಸ ವರ್ಷ ಯಾವಾಗ್ಲು ಒಟ್ಟಿಗೆ ಬರತ್ತೆ. ಆದರೆ, ಮತ್ತೆ ಅದೇ flash back ಗೆ ಹೋಗಿ, ಅದೇ ...
7 comments:
adhu aagidhu namma college road alle Luck.. keLi bejaar aithu.. :-(
hmm... there is always a different way to look at every happening
this is very cruel face of nature
'Paapaguttuvudu' -Huh! adellinda invent madtheerree hosa shabdagaLu? :O
@ ರಾಧೆ :
:( :( :(
@ಶ್ರೀಕಾಂತ್ ಮತ್ತು ಸಚ್ಚಿದಾನಂದ:
ಹೌದು.
ಸುಶ್ರುತ:
ವಿಜ್ಞಾನಿಯಾಗಿ ಏನೂ invent ಮಾಡದೇ ಇದ್ದ್ರೆ ಮರ್ಯಾದೆ ಹೋಗತ್ತೆ! atleast ಪದಗಳನ್ನಾದ್ರೂ invent ಮಾಡಿದ್ರೆ ಸಲ್ಪ ಮರ್ಯಾದೆ ಇರತ್ತೆ ನೋಡಿ ! ;-)
ನಿಮ್ಮ Z ಪಾತ್ರವನ್ನು ಬಹಿರಂಗಪಡಿಸುವಂಥವರಾಗಿ....
ಯಾಕೆಂದ್ರೆ,,, ನಮ್ಮ ಬ್ಯುರೋಗೂ ಸಂದರ್ಶನಕ್ಕೆ ಅವಶ್ಯಕಕತೆ ಬರಬಹುದು...
ಅಸತ್ಯ ಅನ್ವೇಷಿ :
Z ಗೆ ಈ ವಿಷಯವನ್ನು ತಿಳ್ಸಿದೆ. ಬೊಗಳೆಯ ಬ್ಯೂರೋ ಗೆ ಸಂದರ್ಶನ ಕೊಟ್ಟು ರಗಳೆಗೆ ಒಳಗಾಗಲು ಅವಳು ಇಚ್ಛಿಸುವುದಿಲ್ಲವೆಂದು ಕೀಲಿಮಣೆಯನ್ನು ಕುಟ್ಟಿ ಕುಟ್ಟಿ ಹೇಳಿದ್ದಾಳೆ. ಅಲ್ಲದೇ, ಅವಳು ಬ್ಲಾಗ್ ಪ್ರಪಂಚಬಿಟ್ಟು ಹೊರಬರುವುದು ಈ ಜನ್ಮದಲ್ಲಿ ಸಾಧ್ಯವಿಲ್ಲ, ಇಲ್ಲ ಎಂಬ ಪದವನ್ನು ಒತ್ತಿ ಒತ್ತಿ ಹೇಳಿದ್ದಾಳೆ !
Post a Comment