Tuesday, August 5, 2008

ಗ್ರಹಣ

ನಾನು : ಆಗಸ್ಟ್ ಮೊದಲನೇ ತಾರೀಖು ಖಂಡಗ್ರಾಸ ಸೂರ್ಯಗ್ರಹಣ ಇತ್ತು.

Z : ಗೊತ್ತು.

ನಾನು : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಾನು ಹುಟ್ಟಿದ ರಾಶಿಗೆ ಸೂರ್ಯಗ್ರಹಣದ ಸಕಲ ಪ್ರಭಾವಗಳೂ ಯದ್ವಾ ತದ್ವಾ ಬೀಳಲಿದ್ದವು. ನಮ್ಮಮ್ಮ ದೇವಸ್ಥಾನಕ್ಕೆ ಹೋಗಿ ನನ್ನ ಹೆಸರಿನಲ್ಲಿ ನವಗ್ರಹಶಾಂತಿ ಹೋಮಕ್ಕೆ ಕೊಟ್ಟು ಬಂದರು.

Z: ಆಗ ತಾವೇನು ಮಾಡುತ್ತಿದ್ದಿರಿ ?

ನಾನು : planetarium ನಲ್ಲಿ ಗ್ರಹಣ ನೋಡುವ ವ್ಯವಸ್ಥೆ ಇದೆಯಾ ಅಂತ ತಿಳಿದುಕೊಳ್ಳಲು website browse ಮಾಡುತ್ತಿದ್ದೆ. ಅಷ್ಟೊತ್ತಿಗೆ ಸರಿಯಾಗಿ ನಮ್ಮಜ್ಜಿಯ ಫೋನ್ ಬಂತು ನಮ್ಮಮನ ಮೊಬೈಲಿಗೆ.

ಅಮ್ಮ:" ....ಹು ಕಣಮ್ಮ...ಲಕ್ಷ್ಮಿ ಗೆ ಗ್ರಹಣ ಹಿಡ್ದಿದೆ.... "

ನಾನು : ಅಮ್ಮ...ಗ್ರಹಣ ಹಿಡ್ದಿರೋದು ನಂಗಲ್ಲ...ಸೂರ್ಯಂಗೆ ! ಇನ್ನು ಹಿಡಿದಿಲ್ಲ...ಐದು ಘಂಟೆಗೆ ಹಿಡಿಯತ್ತೆ, once again, ಸೂರ್ಯಂಗೆ, ನಂಗಲ್ಲ.

Z : ಹೆ ಹೆ ಹೆಹೆ ......ಲಕ್ಷ್ಮೀ ಗೆ ಗ್ರಹಣ ! ಜಬರ್ದಸ್ತ್ dialogue !

ನಾನು :Grrrrrrrrrrrrrr !!!!!!!!!!!!!!!!!!!!!

Z : uhahahahahahah !!!!!!!!!!! Continue.

ನಾನು : ಅಮ್ಮ ಅಜ್ಜಿಗೆ ವರದಿ ಕೊಡ್ದ್ತಿದ್ರು...... "ಈಗ್ ತಾನೆ ಇವ್ರ ಕೈಲಿ ಜ್ಯೋತಿರ್ಭೀಮೇಶ್ವರ ವ್ರತ ಮಾಡ್ಸ್ದೆ. ಹತ್ತು ಘಂಟೆಯಾದ ಮೇಲೆ ಗ್ರಹಣ ಮುಗಿಯುವ ವರೆಗೂ ಏನೂ ತಿನ್ನಬಾರದು ಬೇರೆ. ಇವ್ರಿಬ್ಬ್ರು ಗ್ರಹಣದ ಟೈಮ್ ಗೆ ನೋಡು ಏನ್ ಮಾಡ್ತಿವಿ ಅಂತ ಹೆದರ್ಸ್ತಿದಾರೆ. ನೋಡಮ್ಮ... ಅಕ್ಕ ತಂಗಿ ಇಬ್ರು ಎಗರಿ ಎಗರಿ ಕುಣಿತಿದ್ದಾರೆ planetarium ಗೆ ಹೋಗಿ ಗ್ರಹಣ ನೋಡ್ತಿವಿ ಅಂತ..."
ಅಜ್ಜಿ ಮಾತಾಡಿದ್ದೇನೂ ಗೊತ್ತಾಗ್ಲಿಲ್ಲ. ಅಮ್ಮ ಬರೀ ಹೂಗುಟ್ಟುತ್ತಿದ್ದರು. ಅವರಿಬ್ಬರ secret ಮಾತುಕಥೆ ನನಗೆ ಮತ್ತಷ್ಟು ಕೋಪ ತರಿಸಿತು. ಅಮ್ಮ ಮಾತು ಮುಗಿಸಿದ ಮೇಲೆ ನಾನು ವಾದಕ್ಕಿಳಿಯಲು ಎದ್ದೆ.

Z : tittidiiidiiiiii..tiiiiiiiiiiitittiiidiididiiiiiiiiiii....

ನಾನು : ಏನಿದು ?

Z : bugle. sound effect ಗೆ.

ನಾನು : silent ಆಗಿ ಕಥೆ ಕೇಳಿದ್ರೆ ಸರಿ !

Z : ok ok !

ನಾನು : " ಅಮ್ಮಾ !!!!!!!" ಗುಡುಗಿದೆ.

ಅಮ್ಮ :" silent ಆಗಿ ಸುಮ್ನಿದ್ದ್ರೆ ಸರಿ. ಹೊರ್ಗಡೆ ಎಲ್ಲಾದ್ರು ತಲೆ ಹಾಕ್ತಿನಿ ಅಂತ ಚಕಾರ ಎತ್ತ್ಬೇಕಲ್ಲ.....ಅಷ್ಟೆ ! ಯಾವ್ದ್ ಮೂಢ ನಂಬಿಕೆ, ಯಾವುದು ಅಲ್ಲ ಅಂತ ನಮ್ಗೂ ಗೊತ್ತಿದೆ...ಸುಮ್ನೆ ವಾದ ಮಾಡಕ್ಕ್ ಬರ್ಬೇಡ. ಹೋಗಿ ಕೀಬೋರ್ಡ್ ಕುಟ್ಟ್ಕೋ !"

ನಾನು ಸೈಲೆಂಟಾಗಿ ರೂಮಿಗೆ ವಾಪಸ್ ಬಂದೆ.

Z : ಹ ಹ ಹಹ !!! all gathered energy wasted !!! ಚೆ ಚೆ...ಹುಲಿ ಥರ ಹೋದೋಳು ಇಲಿ ಥರ ವಾಪಸ್ ಬಂದ್ಯಲ್ಲೇ !!

ನಾನು : ಸುಮ್ನೆ ಉರ್ಸ್ಬೇಡ. ನಾನು ವಾಪಸ್ ಬಂದಿದ್ದೇನೋ ನಿಜ. ಆದ್ರೆ ನನ್ನ ತಲೆ ಲಿ ಒಂದು ಭೀಕರವಾದ ಪ್ಲಾನ್ ಹೊಳಿತಿತ್ತು.

Z : ಅದೇ compound ಹಾರಿ escape ಆಗೋದು ! ನೀನೋ...ನಿನ್ನ ಹೋಪ್ಲೆಸಾತೀತ ಐಡಿಯಾಗಳೋ !!

ನಾನು : shut up ! ಅಂಥಾ ಐಡಿಯಾಗಳೆಲ್ಲ fail ಆಗತ್ತೆ ಅಂತ ಗೊತ್ತಿತ್ತು ಕಣೆ ಲೆ ! ಇದೊಂದು ಮಹಾ ಇಡಿಯಾ...ಹಿಂದೆ ಯಾರ್ಗೂ ತೋಚಿರ್ಲಿಲ್ಲ, ಮುಂದಕ್ಕೆ ಯಾರ್ಗೂ ತೋಚಲ್ಲ.

Z: ಏನಮ್ಮ ಅದು ಅರಿಭಯಂಕರವಾದ ಐಡಿಯಾ ?

ನಾನು : ಇದು outline ಮಾತ್ರ. exact idea is top secret. ಗ್ರಹಣ ಸ್ಟಾರ್ಟ್ ಆಗೋ ಟೈಮ್ ಗೆ ಹೇಗಾದ್ರು ಮಾಡಿ ಬಾಗಿಲು ತೆಗಿಯಬೇಕು. ಮನೆಯವರು ಹೊರಗೆ ಹೋದ ಹಾಗೆ ನಾನು ಹಿಂದೆ ಓಡಿ ಹೋಗಿ, for a second, pin hole ನಲ್ಲಿ ಗ್ರಹಣ ನೋಡಿ ಜನ್ಮ ಸಾರ್ಥಕ ಮಾಡಿಕೊಳ್ಳೋದು ಅಂತ full fledged ಆಗಿ sketch ಹಾಕಿದ್ದೆ. ಐಡಿಯಾ ನ execute ಮಾಡಲು ready ನೂ ಆದೆ. ಅಣ್ಣ ಮೀಟಿಂಗ್ ಗೆ ಹೋಗಿದ್ದರು, ಹೊಸಕೋಟೆಗೆ. ಅವರು ಬರುತ್ತಲೇ ಯಾರಿಗೂ ತಿಳೀಯದ ಹಾಗೆ ಕೆಲ್ಸ ಮುಗಿಸ್ಬೇಕು ಅಂತ ಪ್ಲಾನ್ ಮಾಡಿದೆ. ಕರೆಂಟ್ in the pond on the bank ಆಟ ಆಡುತ್ತಿದ್ದ ಕಾರಣ ನಾನು ಕೀಬೋರ್ಡ್ ನ ಕುಟ್ಟಿ ಕಂಪ್ಯೂಟರ್ ನ ಉದ್ಧಾರ ಮಾಡಲಾಗದೇ, ಏನೂ ತೋಚದೇ ಹಾಗೆ ಮಲಗಿದೆ. ಕನಸ್ಸಿನಲ್ಲೇ ನಾನು ಗ್ರಹಣ ನೋಡುತ್ತಿದ್ದೆ. ಆಗ ನನ್ನನ್ನು ಫೋನ್ ಮಾಡಿ ಎಬ್ಬಿಸಿದವರು ಕರ್ಮಕಾಂಡ ಪ್ರಭು ಶ್ರೀಧರ್ .

ಫೋನ್ ಮಾಡಿದ್ದೇ, " ರೀ ಲಕ್ಷ್ಮೀ, ಗ್ರಹಣದ ಟೈಮ್ ನಲ್ಲಿ ಊಟ ತಿಂಡಿ ತಿಂದರೆ ಏನಾದ್ರು ಆಗತ್ತಾ ?" ಅಂದರು. ನಾನು " ಏನೂ ಆಗಲ್ಲ ರೀ...ಮಸ್ತ್ ಮಜಾ ಮಾಡಿ ತಿಂದುಕೊಂಡು ಊಟ ನಾ ! " ಅಂದೆ. ಅದಕ್ಕೆ ಅವರು " ಮತ್ತೆ ತಿನ್ನಬಾರದು ಏನೂ ಅಂತ ಯಾಕ್ ಹೇಳ್ತಾರೆ ಮತ್ತೆ ?" ಅಂದ್ರು . ನಾನಂದೆ " ಅದು ಗ್ರಹಣ ಆಗೋ ಟೈಂ ಮೇಲೆ depend ಆಗತ್ತೆ ಕರ್ಮಕಾಂಡ ಪ್ರಭುಗಳೆ. ಊಟ digest ಆಗೋಕೆ 4 hours ಬೇಕು. ಗ್ರಹಣಕ್ಕೆ 4 hours ಮುಂಚೆ ಗಡತ್ತಾಗಿ ತಿಂದಿದ್ದರೆ, ಮಧ್ಯ ಮಧ್ಯ ನೀರು ಕುಡಿದು ಗ್ರಹಣ ಮುಗಿಯೋ ತನಕ ಕಾಯಬಹುದು. irregular food habits ಇದ್ರೆ normal days ನಲ್ಲೇ ಹೊಟ್ಟೆ ಕೆಡತ್ತೆ. ಸುಮ್ನೆ ಗ್ರಹಣದ ಮೇಲೆ ಗೂಬೆ ಕೂರ್ಸ್ತಾರೆ ಜನ ಅವತ್ತು ತಿಂದು ಹೊಟ್ಟೆ ಕೆಟ್ಟರೆ.ಗ್ರಹಣದ ಟೈಮ್ ನಲ್ಲಿ ಹೊಟ್ಟೆ ಹಸಿವಾದರೆ ಮಾತ್ರ ತಿನ್ನಿ. ನನ್ನಾಣೆ, ಹೊಟ್ಟೆ ಕೆಡಲ್ಲ, ಸುಮ್ ಸುಮ್ನೆ ತಿಂದ್ರೆ ಕೆಡತ್ತೆ, ಅದಕ್ಕೆ ಗ್ರಹಣ ನ ಬೈಬೇಡಿ, ಪಾಪದಂಥದ್ದು ಗ್ರಹಣ " ಅಂದೆ. ಪಾಪಗುಟ್ಟಿದರು ಅವರು.

ಅವರು ನ್ಯಾಷನಲ್ ಕಾಲೇಜು ಬಸವನಗುಡಿಯಲ್ಲಿ ಓದಿದಂಥವರು,ನಾನು ನ್ಯಾಷನಲ್ ಕಾಲೇಜು ಜಯನಗರದ product, ನಮ್ಮಿಬ್ಬರ common link Dr. H. Narasimhaiah. ಅವರು ಗ್ರಹಣದ ಮೂಢನಂಬಿಕಗಳ ಮೇಲೆ ಮಾಡಿದ ಭಾಷಣಗಳನ್ನೆಲ್ಲಾ, ನಾವು ನೋಡಿದ ಡಾಕ್ಯುಮೆಂಟರಿಗಳನ್ನೆಲ್ಲಾ ನೆನಪಿಸಿಕೊಂಡೆವು. ಆಗ ಕರ್ಮಕಾಂಡ ಪ್ರಭುಗಳು " ಅಲ್ಲಾ ರಿ...ಇದನ್ನೆಲ್ಲ ನೋಡಿದ ಮೇಲೆ , ಅದು ಮೂಢನಂಬಿಕೆ ಅಂತ ಗೊತ್ತಿದ್ದರೂನೂ ನಾವು blind ಆಗಿ ಕೆಲವು ಆಚರಣೆಗಳನ್ನ follow ಮಾಡ್ತಿವಲ್ಲ, ನಾವೇಕೆ ಹೀಗೆ ? ಅಂತ ಬ್ಲಾಗ್ ಬರೀರಿ...ಇದು ನನ್ನ ಕೋರಿಕೆ, ಖಂಡಿತಾ ಇಲ್ಲಾ ಅನ್ನಬೇಡಿ, ಪ್ಲೀಸ್ " ಅಂತ ಕೇಳಿಕೊಂಡರು.

Z : ತಾವು ಟೋಟಲಿ ರೈಲ್ ಹತ್ತಿದಿರಿ.

ನಾನು : ಏನಿಲ್ಲ. ಅವರೇನು ರೈಲ್ ಹತ್ತಿಸಲಿಲ್ಲ. ನಿಜವಾಗಲೂ ಕೇಳಿಕೊಂಡರು. ನಾನಂದೆ -
" ಇಲ್ಲ. ಇದನ್ನ ನಾವೇಕೆ ಹೀಗೆ ಲಿ ಹಾಕೊಲ್ಲ. ಕುತೂಹಲಿ ನಲ್ಲಿ ಹಾಕ್ತಿನಿ "

ಅವರು : "ಎಲ್ಲಾದ್ರು ಹಾಕಿ...ಆದ್ರೆ ಬರಿರಿ ಮಾತ್ರ...ಬಿಡ್ಬೇಡಿ. ಓಳ್ಳೇ ವಿಷಯ ನ ತಿಳ್ಸೋ ನಿಮ್ಮಂಥವರು ಬೇಕು ರೀ ಲೋಕಕ್ಕೆ" ಅಂತ ಸಿಕ್ಕಾಪಟ್ಟೆ ದೊಡ್ಡ dialogue ಹೊಡೆದರು. ನಾನು ಆ ಡೈಲಾಗ್ ಭಾರನ ತಡಿಯಕ್ಕಾಗದೇ ಒಪ್ಪಿಕೊಂಡೆ.

Z : ಏನಂತ ಬರೀಬೇಕಿತ್ತಂತೆ ನೀನು ?

ನಾನು : ಅದೇ...ಈ ಗ್ರಹಣದ ಟೈಮ್ ನಲ್ಲಿ ದರ್ಭೆ ಇಡೋದು, pregnant women ನ ಕತ್ತಲೆ ಕೋಣೆ ಲಿ ಕೂಡಿ ಹಾಕೋದು, ಅವರಿರುವ ಕೋಣೆಯ ಬಾಗಿಲ key hole ಗೂ ಬಟ್ಟೆ ತುರ್ಕೋದು, ಗ್ರಹಣ ಆದ್ಮೇಲೆ ದೇವರನ್ನ ತೊಳೆಯೋದು, ಹಳೆ ನೀರೆಲ್ಲ ಚೆಲ್ಲೋದು, ಊಟ ಮಾಡದೇ ಇರೋದು, ಆಮೇಲೆ ಇನ್ನೆಷ್ಟೋ ಆಚರಣೆಗಳು !

Z : ಹೌದಾ ? ಇಷ್ಟೆಲ್ಲಾ ಮಾಡ್ತಾರ ಜನ ? ಯಾಕೆ ?

ನಾನು : ನೋಡು. ಈ problem ನ ಎರಡು ರೀತಿಯಲ್ಲಿ analyze ಮಾಡಬಹುದು. ಒಂದು, ನಮಗೆ ನಿಜವಾಗಲೂ ಕಾಣುವ ಸತ್ಯ, ಇನ್ನೊಂದು ನಮಗೆ ಕಾಣದೇ ಇರುವ ಕೆಲವು ಅಂಶಗಳು.

Z : ನಮಗೆ ಕಾಣದೇ ಇರುವ ಕೆಲವು ಅಂಶಗಳು ಅಂದರೆ ?

ನಾನು : ಇದನ್ನು ಹೇಳಬೇಕೆಂದರೆ ಮೊದಲು ನಮ್ಮ ಕಾಣಿಗೆ ಕಾಣುವ ಕೆಲವು ಅಂಶಗಳ ಬಗ್ಗೆ ತಿಳ್ಕೋಬೇಕು.
ಈಗ ನೋಡು ಗ್ರಹಣ ಆದಾಗ ಏನಾಗತ್ತೆ ? temporary darkness create ಆಗತ್ತೆ. Sudden ಆಗಿ ಕತ್ತಲಾಗಿದುದರ ಪರಿಣಾಮವಾಗಿ ಪ್ರಾಣಿ ಪಕ್ಷಿಗಳು ಒಂದೆರಡು ಸೆಕೆಂಡು ಗಾಬರಿಗೊಳ್ಳಬಹುದು. ಕೀಟಗಳು ರಾತ್ರಿಯಾಯ್ತೆಂದು ಭಾವಿಸಿ ಹೊರಬರಬಹುದು. ನೋಡು, ಆಗಿನ ಕಾಲದಲ್ಲಿ ಬಲ್ಬಾಗಲಿ, ಟ್ಯೂಬ್ ಲೈಟಾಗಲಿ ಇರಲಿಲ್ಲ. ಕತ್ತಲಾದ ಬಳಿಕ ಮೇಣದ ಬತ್ತಿಯನ್ನೋ, ಸೀಮೆಯೆಣ್ಣೆಯ ದೀಪವನ್ನೋ, ಪಂಜನ್ನೋ ಹಚ್ಚುತ್ತಿದ್ದರು. ಇವೆರಡನ್ನೂ ಹಚ್ಚಿಟ್ಟ ತಕ್ಷಣ ರಾತ್ರಿಯೇ ಎಂದು ಭಾವಿಸುವ ಹೆಗ್ಗಣಗಳು ಮತ್ತಿತರ ಪ್ರಾಣಿಗಳು ಅಡುಗೆಮನೆಗೆ ದಾಳಿಯಿಡಬಹುದು. ಅವು ಓಡುವ ರಭಸದಲ್ಲಿ ಹಾಲಿನ ಪಾತ್ರೆಗೆ ಮೊಸರು ಚೆಲ್ಲಬಹುದು, ಅಗ್ಗಿಷ್ಟಿಕೆಗಳು ಅಲ್ಲೋಲ ಕಲ್ಲೋಲವಾಗಬಹುದು. ವಸ್ತು ಕೆಡಬಹುದು. ಇದು ಗ್ರಹಣದ ತೀಕ್ಷ್ಣ ಪ್ರಭಾವವಲ್ಲ, ಆಗಿರಬಹುದಾದ ವಸ್ತು ಸ್ಥಿತಿ.
ದರ್ಭೆಗಳನ್ನು ಏಕೆ ಇಡುತ್ತಿದ್ದರಪ್ಪಾ ಎನ್ನುವುದರ ಬಗ್ಗೆ ಇನ್ನೂ ವೈಜ್ಞಾನಿಕ ಸಂಶೋಧನೆ ಮಾಡಬೇಕಾಗಿದೆಯಾದರೂ, ದರ್ಭೆಯನ್ನು ಉಪಯೋಗಿಸುವುದರ ಹಿಂದಿನ ಉದ್ದೇಶದ ಬಗ್ಗೆ ನನ್ನ ಅನಿಸಿಕೆ ಇಷ್ಟು :
೧. ದರ್ಭೆಯ ರುಚಿ ಕಹಿಯಿರಬಹುದು.
೨. ದರ್ಭೆಗಳನ್ನು ಒಟ್ಟು ಗೂಡೆಹಾಕಿದರೆ ಮೂಡುವ ಕಗ್ಗತ್ತಲು ಆ ಕ್ಷಣಕ್ಕೆ ಅಭೇದ್ಯ ಎಂದು ಪ್ರಾಣಿಗಳಿಗೆ ಅನ್ನಿಸಬಹುದು. ಏಕೆಂದರೆ ಹೊರಗಾಗಲೇ ಕತ್ತಲೆಯಾಗಿರುತ್ತದೆ. ಪ್ರಾಣಿಗಳ ದಿಕ್ಕುತಪ್ಪಿಸಲು ಇದೊಂದು ಮಾರ್ಗ ಹುಡುಕಿರಬಹುದು ಹಿಂದಿನಕಾಲದವರು.
೩. ದರ್ಭೆಗಳನ್ನು ಒತ್ತು ಒತ್ತಾಗಿ ಕೂಡಿಹಾಕಿದರೆ ಅವು ಸುತ್ತುವರಿದ ಗಾಳಿಯ ಶಾಖವನ್ನು ಹೊರಬಿಡದೇ ತಮ್ಮಲ್ಲಿಯೇ ಉಳಿಸಿಕೊಳ್ಳಬಹುದು. they might be insulators. ಆ ಶಾಖವು ಆಹಾರದಲ್ಲಿ ಆಗಬಹುದಾದ ಸಹಜ microbial activity ಯನ್ನು ಕಡಿಮೆ ಮಾಡಬಹುದು. ಇದು ಹೇಗೆ ಸಾಧ್ಯ ಅಂದರೆ microbes are very temperature specific. ಅವು ತಮ್ಮ ಕೆಲಸಗಳನ್ನು ಸರಿಯಾಗಿ ಮಾಡಲು ಹವೆಯ ಉಷ್ಣಾಂಶ ಬಹು ಮುಖ್ಯ. ದರ್ಭೆಗಳಿಗೆ " thermos flasks" ನಂತೆ temperature maintain ಮಾಡುವ ಶಕ್ತಿ ಇರಲಿಕ್ಕೂ ಸಾಧ್ಯ. ನಾನಂದುಕೊಂಡದ್ದು ಸರಿಯೂ ಇರಬಹುದು, ತಪ್ಪೂ ಇರಬಹುದು.

ಇನ್ನು ಗ್ರಹಣದ ಸಮಯದಲ್ಲಿ ಊಟ ತಿನ್ನುವುದರ ಬಗ್ಗೆ ನಾನು ಆಗಲೇ ಹೇಳಿದ್ದೇನೆ. ಹೋದ ತಿಂಗಳು ಜುಲೈ ಹದಿನಾಲ್ಕನೇ ತಾರೀಖು ಬೆಂಗಳೂರು ವಿಜ್ಞಾನ ವೇದಿಕೆಯಲ್ಲಿ ನಡೆದ ವಿಜ್ಞಾನೋತ್ಸವದಲ್ಲಿ ಮಾತನಾಡಿದ ಜವಾಹರ್ಲಾಲ್ ನೆಹ್ರೂ ತಾರಾಲಯದ ಹಿರಿಯ ವೈಜ್ಞಾನಿಕ ಅಧಿಕಾರಿ ಡಾ||ಬಿ.ಎಸ್. ಶೈಲಜಾ ಅವರು "ಗ್ರಹಣವನ್ನು ಏಕೆ ಅಧ್ಯಯನ ಮಾಡಬೇಕು " ಎನ್ನುವುದರ ಬಗ್ಗೆ ಮಾತಾಡುತ್ತಾ ಕೆಲವು ಮುಖ್ಯವಾದ ಅಂಶಗಳನ್ನು , ಪ್ರಯೋಗದ ಫಲಿತಾಂಶಗಳನ್ನು ಬೆಳಕಿಗೆ ತಂದರು.
ಸೂರ್ಯಗ್ರಹಣ ಯಾವಾಗಲೂ ಅಮಾವಾಸ್ಯೆಯಂದು ಆಗುತ್ತದೆ. ಅಮಾವಾಸ್ಯೆ ದಿನ ಹುಚ್ಚರಿಗೆ ಹುಚ್ಚು ಹೆಚ್ಚಾಗುತ್ತದೆಂದು ಎಲ್ಲರೂ ನಂಬಿದ್ದಾರೆ. ಗ್ರಹಣಾ್ದ ದಿನ ಅದು ವೈಪರೀತ್ಯ ಮುಟ್ಟುತ್ತದೆ ಎಂದು ಎಲ್ಲರ ನಂಬಿಕೆ. ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯೆಯೊಬ್ಬರು ಅಂದು ಯಾವ ರೋಗಿಗೂ ಅಮಾವಾಸ್ಯೆ ಆವತ್ತು ಎಂದು, ಅವತ್ತು ಗ್ರಹಣ ಸಂಭವಿಸುತ್ತದೆ ಎಂದೂ ಕೂಡಾ ತಿಳಿಸದೇ, extra dose of medicines administer ಮಾಡದೇ ಹಾಗೆಯೇ ಸುಮ್ಮನಿದ್ದಾರೆ. ಯಾವ ರೋಗಿಯೂ ಪ್ರತಿಕೂಲವಾಗಿ ವರ್ತಿಸಲಿಲ್ಲ, ಗ್ರಹಣ ಸಂಭವಿಸಿದಾಗಲೂ ! That was a negative result ! ಆದ್ದರಿಂದ, ರೋಗಿಗಳಿಗೆ ಅಮಾವಸ್ಯೆ ಎಂದು ಹೇಳಿದರೆ ಮಾತ್ರ violent ಆಗಿ react ಮಾಡ್ತಾರೆ ಎಂಬುದು ಸಾಬೀತಾಯ್ತು.

Z : ಅರೆ ವಾಹ್ !

ನಾನು : ಹೂ ! ಇನ್ನು ಗರ್ಭಿಣಿಯರ ವಿಷಯ. ಖ್ಯಾತ ವಿಜ್ಞಾನಿ , ಪ್ರಸ್ತುತ ಬೆಂಗಳೂರು ವಿಜ್ಞಾನ ವೇದಿಕೆಯ ಕೋಶಾಧಿಕಾರಿಯಾಗಿರುವ ಡಾ|| ಎಚ್.ಆರ್. ರಾಮಕೃಷ್ಣ ರಾವ್ ಅವರು ನಮಗೆ ಒಮ್ಮೆ ಪಾಠ ಮಾಡುತ್ತಾ ಕುತೂಹಲಕರವಾದ ಒಂದು ವಿಷಯವನ್ನು ಹೇಳಿದರು. ಬಹಳ ವರ್ಷಗಳ ಹಿಂದಿನ ಮಾತಂತೆ ಇದು. ಪೂರ್ಣ ಸೂರ್ಯಗ್ರಹಣ ಯೂರೋಪ್ ಖಂಡದ ನಾರ್ವೇ ದೇಶದಲ್ಲಿ ಸಂಭವಿಸಲಿತ್ತು. ಗ್ರಹಣಗಳ ಅಧ್ಯಯನದಲ್ಲಿ ಆಸಕ್ತರಾದ ಇವರು ನಾರ್ವೇ ದೇಶಕ್ಕೆ ಗ್ರಹಣ ನೋಡಲು ಹೋದರು. ಬೆಟ್ಟವೊಂದರ ಮೇಲೆ ಗ್ರಹಣ ವೀಕ್ಷಿಸಲು ಸಕಲ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಅಲ್ಲಿ ಕಿಕ್ಕಿರಿದಿದ್ದ ನೋಡುಗರಲ್ಲಿ ನವಮಾಸ ತುಂಬಿದ ಗರ್ಭಿಣಿ ಸ್ತ್ರೀಯೂ ಇದ್ದಳು. ಎಹ್.ಆರ್.ಆರ್. ಹೀಗೆ ಯೋಚನೆ ಮಾಡಿದರಂತೆ: ಭಾರತದಲ್ಲಿ ಗ್ರಹಣವನ್ನು ನೋಡಲು ಗರ್ಭಿಣಿಯರಿಗೆ ಬಿಡದಿರುವ ಕಾರಣವೇನೆಂದರೆ ಹುಟ್ಟುವ ಮಕ್ಕಳು ಅಂಗವಿಕಲರಾಗುತ್ತಾರೆ ಎನ್ನುವ ಭಯ. ಭೂಮಿಗೆ ಸೂರ್ಯ ಒಬ್ಬನೇ, ಪ್ರತೀಸಲ ಗ್ರಹಣ ಸಂಭವಿಸಿದಾಗ ಆಗುವ ವಿದ್ಯಮಾನ ಒಂದೇ. ಅದಕ್ಕೆ ದೇಶಕಾಲಗಳ ಹಂಗಿಲ್ಲ. ಆದ್ದರಿಂದ ಈ ಗರ್ಭಿಣಿಯು ಇಲ್ಲಿ ಗ್ರಹಣವನ್ನುವೀಕ್ಷಿಸಿದಳೇ ಆದರೆ ಇವಳ ಮಗುವಿಗೂ ಏನಾದರು ಊನವಾಗಲೇ ಬೇಕು. ಇದನ್ನು ಹೇಗಾದರೂ ಮಾಡಿ ಪತ್ತೆ ಹಚ್ಚಬೇಕೆಂದುಕೊಂಡು, ಆ ಗರ್ಭಿಣಿಯ ಪರಿಚಯ ಮಾಡಿಕೊಂಡು, ಇವರ ಮನೆ ವಿಳಾಸ ಕೊಟ್ಟು, ಮಗು ಹುಟ್ಟಿದ ತಕ್ಷಣ ಫೋಟೋ ಒಂದನ್ನು ತೆಗುದು ಅತೀ ತುರ್ತಾಗಿ ಭಾರತಕ್ಕೆ ಕಳಿಸಬೇಕೆಂದು ಮನವಿ ಮಾಡಿಕೊಂಡರು. ಅವರೂ ಒಪ್ಪಿದರು. ಇವರು ವಾಪಸ್ಸು ಬಂದ ಎರಡೇ ವಾರಕ್ಕೆ ಕಾಗದ ಬಂತು.The child was born with no defects ! It was as fit as a fiddle !

Z : wow !!

ನಾನು : ನೋಡು....ಇವೆಲ್ಲ ಪ್ರಯೋಗ ಮಾಡಿ ತಿಳಿದ ಸತ್ಯಗಳು. ಇನ್ನು ದೇವರನ್ನು ತೊಳೆಯುವುದು ಅವರವರ ಇಷ್ಟ ಕಷ್ಟಗಳಿಗೆ ಬಿಟ್ಟಿದ್ದು. ಟೈಮ್ ಪಾಸಿಗಂತಲೋ ಏನೋ...ಮಾಡಲಿ ಪಾಪ. ದೇವರನ್ನು ತೊಳೆಯದಿದ್ದರೆ ದೇವರು ಖಂಡಿತಾ ಶಾಪ ಕೊಡುವುದಿಲ್ಲ. I can guarantee that. :-)

Z : ಹಂಗಂತೀಯ ?

ನಾನು : ಹೂ...ಇದು ಡೌಟಾತೀತ ಸತ್ಯ !! ಆದರೆ ನೀರನ್ನು ಚೆಲ್ಲುವುದನ್ನು ಕಂಡರೆ ನನಗೆ ತಡಿಯಕ್ಕಾಗ್ದೇ ಇರೋ ಅಷ್ಟು ಕೋಪ ಬರತ್ತೆ ! ಅಲ್ಲಾ...ಇವರು ಮನೆಲಿರೋ ನೀರ್ ಚೆಲ್ಲಿ ಬರೋ ಕಾರ್ಪೋರೇಷನ್ ನೀರ್ ನ ಹಿಡ್ಕೋತಾರೆ...ಗ್ರಹಣ ಕಾರ್ಪೋರೆಷನ್ ನೀರನ್ನ affect ಮಾಡಲ್ವಾ ? ಗ್ರಹಣ ಭೂಮಿಮೇಲೆ ಆಗ್ತಿರ್ಬೇಕಾದ್ರೆ ನದಿಗಳ ಮೇಲೂ ಅದರ ಪ್ರಭಾವ ಬಿದ್ದಿರತ್ತೆ...ಇವ್ರು ನದಿ ನೀರ್ನೆಲ್ಲ ಚೆಲ್ಲಿ ಸಮುದ್ರಕ್ಕೆ ಹಾಕ್ತಾರ ? ಯೋಚನೇ ನೇ ಮಾಡದೇ ಸುಮ್ಮನೆ ಈ ಥರ ಆಚರಣೆಗಳನ್ನೆಲ್ಲ ಮಾಡಿದ್ರೆ ಏನನ್ನೋದು ?

Z : ಹೌದು...ಹೌದು...ಆಚರಣೆಗೆ ಒಂದು ಅರ್ಥ ಬೇಕು. ಹಿಂದಿನ ಕಾಲದವರು ನೀರೂ ಕೂಡ ಈ ಪ್ರಾಣಿಗಳ ಹಾವಳಿಗೆ ತುತ್ತಾಗಿರಬಹುದೆಂದು ಭಾವಿಸಿ ಚೆಲ್ಲುತ್ತಿದ್ದರೇನೋ...ಆಗ ಈಗಿನಷ್ಟು facilities ಇರ್ತಿರ್ಲಿಲ್ಲ...aqua guard, refrigerator ಇತ್ಯಾದಿ. ಈಗ ಅವೆಲ್ಲ ಇದೆ ಅಲ್ವ ? ದರ್ಭೆ, ನೀರು ಚೆಲ್ಲುವಿಕೆಯ ಅವಶ್ಯಕತೆನೇ ಇಲ್ಲ ತಾನೆ ?

ನಾನು : ಹೌದು...ಆದರೆ ಕೆಲವರು ಫ್ರಿಡ್ಜ್ ಮೇಲೂ ದರ್ಭೆ ಇಡ್ತಾರೆ ! :-)

Z : ಹೆ ಹೆ...ಇದಿಷ್ಟೂ ಕಣ್ಣಿಗೆ ಕಾಣುವಂಥವು...ಕಣ್ಣಿಗೆ ಕಾಣದ್ದು ಏನು ?

ನಾನು : ಮನಸ್ಸು...Z ...ಮನಸ್ಸು. ಈ ಮನಸ್ಸು ಒಂದು multi-dimensional entity. It responds very quickly to vibrations. ಗ್ರಹಣದ ಟೈಮ್ ನಲ್ಲಿ ಏನೂ ಆಗಲ್ಲ ಅಂತ ಪಾಸಿಟಿವ್ vibrations ನ induce ಮಾಡಿದ್ರೆ ಏನೂ ಆಗಲ್ಲ...for example, that pregnant woman. ಆಗತ್ತೆ ಅಂದ್ರೆ ಏನ್ ಬೇಕಾದ್ರೂ ಆಗತ್ತೆ. ನಂಬಿಕೆ ಅನ್ನೋದು ಒಂದು vibration-ನ್ನೆ. ಇಂಥದ್ದು ಓದಿ ಏನೂ ಆಗಲ್ಲ ಅಂತ ನಂಬಿಸಿದರೆ ಏನೂ ಆಗಲ್ಲ. ಹಾಗೇ ಗ್ರಹಣ ನೋಡಿ ಏನೂ ಆಗಲ್ಲ ಅಂತ ನಂಬಿದರೆ ನಿಜ್ವಾಗ್ಲೂ ಏನೂ ಆಗಲ್ಲ. ಈ ಮಂತ್ರವಾದಿಗಳೂ, ಅಂಥಿಂಥವರು exploit ಮಾಡೊದು ಇದೇ vibration-ಅನ್ನೇ ! ಇದಾಗತ್ತೆ ಅದಾಗತ್ತೆ ಅಂತ ನೆಗೆಟಿವ್ ವೈಬ್ಸ್ ನ induce ಮಾಡಿ ಹೆದರಿಸುತ್ತಾರೆ. ನಾವ್ ಹೆದ್ರುಕೊಂಡ್ರೆ ದೇಹ ಕೂಡಾ respond ಮಾಡತ್ತೆ. ಗ್ರಹಣಕ್ಕೂ ಇದಕ್ಕೂ ಸಂಬಂಧವೇ ಇಲ್ಲ. ಪಾಪ ಎಲ್ಲಾರು ಗ್ರಹಣದ ಮೇಲೆ ಗೂಬೆ ಕೂರ್ಸ್ತಾರೆ.

Z : oh ! very true. ಮನೇಲಿ ಕಥೆ ಏನಾಯ್ತು ?

ನಾನು : ಹಾ...ಯೆಸ್...ಕಮಿಂಗ್ ಬ್ಯಾಕ್ ಟು ದ ಸ್ಟೋರಿ, ಅಣ್ಣ ಕಾರ್ ನ ಮನೆ ಒಳಗೇ ಪಾರ್ಕ್ ಮಾಡಿಬಿಟ್ಟರು !! so, plan flopped ! ಅಮ್ಮ ಫ್ರಿಡ್ಜ್ ಮೇಲೆ ದರ್ಭೆ ಇಡಲಿಲ್ಲ, ಅಣ್ಣ ಗ್ರಹಣ ಆದ ಮೇಲೆ ದೇವರು ತೊಳೆಯಲಿಲ್ಲ.ನಾನು ಜ್ವರದಿಂದ ಎದ್ದು exactly 86400 seconds ಆಗಿತ್ತು. ಆದ್ದರಿಂದ ನನಗೆ ಒಂದೇ ಚೊಂಬು ತಲೆ ಮೇಲೆ ನೀರು ಹಾಕಿಕೊಳ್ಳಲು ಹೇಳಿದರು. ಇಲ್ಲಾಂದ್ರೆ ಸ್ಪರ್ಶಕ್ಕೊಂದು ನೀರು, ಮೋಕ್ಷಕ್ಕೊಂದು ನೀರು ಹಾಕಿಕೊಂಡಿದ್ದಿದ್ದರೆ ನಾನು ಆಸ್ಪತ್ರೆಯಲ್ಲಿರುತ್ತಿದ್ದೆ. ಅವರು ನನ್ನ ವಿಜ್ಞಾನ ಸಿದ್ಧಾಂತಕ್ಕೆ ಬೆಲೆ ಕೊಟ್ಟರು. ನಾನು ಗ್ರಹಣದ ಕಾಲದಲ್ಲಿ ಮಹಾಮೃತ್ಯುಂಜಯ ಮಂತ್ರ ಜಪ, ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದೆ ಅವರ " vibrations" ಗೆ ಬೆಲೆ ಕೊಡಲು. ಅವರೂ ನನ್ನ ಎಡಬಲದಲ್ಲಿ ಕೂತಿದ್ದರು, ತಮ್ಮ ಮಗಳು ಕ್ಷೇಮವಾಗಿರಲಪ್ಪ ಅಂತ ಕೇಳ್ಕೋತಿದ್ರು ಸದ್ಯೋಜಾತನ್ನ. ಅವರ ಆ strong feeling of possessiveness, care and compassion ನ overlook ಮಾಡೋಕೆ ನನಗೆ ಇಷ್ಟ ಇರಲಿಲ್ಲ. ನಾನು blind ಆದೆ, vibration ಗೆ ! ಆದ್ರೆ ಅವರು ಕೆಲವು ಆಚರಣೆಗಳನ್ನು ಮಾಡದೆ ನನ್ನ ವಿಜ್ಞಾನಕ್ಕೆ ಬೆಲೆ ಕೊಟ್ಟರು." ಜ್ಞಾನಂ ವಿಜ್ಞಾನ ಸಹಿತಂ" ಎಂಬ ಮಾತಿಗೆ ಪೂರಕವಾಗಿ, ನಾವು ಮಾಡಿದ ಪ್ರತಿಯೊಂದು ಆಚರಣೆಗೂ ಒಂದು ಆರ್ಥವಿತ್ತು. vibration part ಅವರದ್ದು...science part ನನ್ನದು !

Z : :-) nice ! ಗ್ರಹಣ ನೋಡಿದ್ಯ ?

ನಾನು : ಏನ್ ನೋಡೋದು ಮಣ್ಣಾಂಗಟ್ಟಿ !ಮಳೆ ! ಆಕಾಶವೇ ಕಿತ್ತೋಗೋ ಮಳೆ ! :-(

Z : there is always a next time !

ನಾನು : ಹೂ ! ಹಂಗಂದುಕೊಂಡು ಕಾಯಬೇಕು....ಕಾಯ್ತಿನಿ !

7 comments:

ಅಂತರ್ವಾಣಿ said...

fine :)

sachidananda K.N said...

e grahana dindha 12hours upavasa and 2 days fever

Unknown said...

quite knowledgeable post

Lakshmi Shashidhar Chaitanya said...

@antarvani and padma:

thanks !

@sacchidananda:

fever yaage ? nimgaa athva suryanga ?

Srikanth - ಶ್ರೀಕಾಂತ said...

ಗ್ರಹಣದ ವಿಷಯದಲ್ಲಿ ಎಲ್ಲಾ ಒಪ್ಪಿದೆ, ಆದರೆ ನೀವು ಮಾಡೋ ಪ್ರತಿಯೊಂದು ಆಚರಣೆಗೂ ಕಾರಣ ಗೊತ್ತಾ ನಿಮಗೆ?

ಕೆಲವು ಆಚರಣೆಗಳಿಗೆ ವೈಜ್ಞಾನಿಕ ಕ್ಕಾರಣ ಇರಬಹುದು, ಆದರೆ ಎಲ್ಲಾ ಆಚರಣೆಗಳಿಗೂ ವೈಜ್ಞಾನಿಕ ಕಾರಣ ಇರೋದಿಲ್ಲ.

Lakshmi Shashidhar Chaitanya said...

ಶ್ರೀಕಾಂತ್:

ಪ್ರತಿಯೊಂದು ಆಚರ್ಣೆಗ್ಯ ಕಾರಣಾ, ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲವಾದರೂ, ಅದನ್ನು ಕಂಡುಹಿಡಿಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ.

ಎಲ್ಲ ಆಚರಣೆಗಳಿಗೂ ವೈಜ್ಞಾನಿಕ ಕಾರಣ ಇರೋದಿಲ್ಲ, ಒಪ್ಪಿದೆ.

Rohini Joshi said...

Chennaagide lekhana...

Aadre yellaadakkinta LAKSHMI~ge GRAHANA maatra sooooooooooper=)):-D

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...