ಜೀವನದೊಂದಿಗಿನ ನಮ್ಮ ಮಾತು lifetime ! ಇದರಲ್ಲಿ incoming -ಊ free outgoing -ಊ free !
ನನ್ನ ज़िंदगीಯೊಂದಿಗಿನ nonstop ಗುಸುಗುಸುವನ್ನು ಇಲ್ಲಿ ಬಿಚ್ಚಿಟ್ಟಿದ್ದೇನೆ.
Sunday, June 29, 2008
Art of living ಆಶ್ರಮದಲ್ಲಿ ಒಂದು ದಿನ......
Z : ಹೇಳಮ್ಮ....ವ್ಹಾಟ್ ಸಮಾಚಾರ ?
ನಾನು : ಏನಿಲ್ಲ...ನಿಂಗೊಂದ್ ವಿಷಯ ಹೇಳೊದನ್ನ ಮರೆತುಹೋಗಿದ್ದೆ...ಅದೇನಪ್ಪ ಅಂದ್ರೆ....ನಾವೆಲ್ಲ [ಅಣ್ಣ, ಅಮ್ಮ, ನನ್ನ ತಂಗಿ, ಅತ್ತೆ [ಸೋದರತ್ತೆ] ಮತ್ತು ಅವರ ಮಕ್ಕಳು ಮತ್ತೆ ನಾನು] ಮೇ ಒಂಭತ್ತನೇ ತಾರೀಖು art of living ಆಶ್ರಮಕ್ಕೆ ಹೋಗಿದ್ವಿ.
Z : ಮೇ 9th ಹೋಗಿದ್ದರ ಬಗ್ಗೆ ಇವತ್ತು ಹೇಳ್ತಿದ್ಯ ? ಹೋಪ್ಲೆ...
ನಾನು: ಶ್ !!!!!!!! ಶಾಂತಿ. ನಂಗೆಲ್ಲಿ ಟೈಮ್ ಇತ್ತು ಆಗ ? ಈಗ ಟೈಮ್ ಇದೆ, ಹೇಳ್ತಿನಿ, ಕೇಳಿಸಿಕೊಳ್ಳುತ್ತೀಯೋ ಇಲ್ಲವೊ ?
Z : ಕೇಳೊಲ್ಲ ಅಂದ್ರೂ ನೀನ್ ಬಿಡಲ್ವಲ್ಲ....ಆಯ್ತು ಶುರು ಹಚ್ಕೋ.
ನಾನು : ಮೇ ಒಂಭತ್ತನೇ ತಾರೀಖು election ಇತ್ತು. ನಾನಂತು vote ಮಾಡಲೇಬೇಕು ಅಂತ decide ಮಾಡಿ voters ID ನೂ ಮಾಡ್ಸ್ಕೊಂಡಿದ್ದೆ....queue ನಲ್ಲಿ ನಿಂತು ! ಅಮ್ಮ ವೋಟ್ ಮಾಡಲು ಸಾರಸಗಟಾಗಿ ನಿರಾಕರಿಸಿದರು. ಅಣ್ಣ...as usual in his ಯೋಚನಾ ಲಹರಿ. ನಾನಂತು ಹೇಳೇಬಿಟ್ಟೆ.....vote ಮಾಡದೇ ಆಮೇಲೆ ಸರ್ಕಾರ ಸರಿಗಿಲ್ಲ ಅಂತ ಬೈಯ್ಯದು ತಪ್ಪು ! we have to choose our leader. Its our duty. We have no right to rebuke when we have not exercised our powers. I understand the system is totally corrupt. But the change should begin from us only !
ಅಮ್ಮ ಆಕಳಿಸಿದರು. ಅಣ್ಣ ಕೇಳಿಸಿಕೊಂಡಿರೋದಿಲ್ಲ ಅಂತ ನನಗೆ ಮೊದಲೇ ಗೊತ್ತಿತ್ತು. ಚಪ್ಪಲಿ ಹಾಕೊಂಡು ಹೊರಟೇಬಿಟ್ಟೆ ವೋಟ್ ಮಾಡಲು.
Z: very good. lecture ನಂಗೂ ಬೋರ್ ಆಯ್ತು...but still it was nice.
ನಾನು : ಛೆ ! ಎಲ್ಲರೂ ಹೀಗೆ ಆಗೋದ್ರು. ಸರಿ ಮತಗಟ್ಟೆಗೆ ಹೋಗಿ, queue ನಲ್ಲಿ ನಿಂತು ಮತ ಚಲಾಯಿಸಿ ಬಂದೆ. ವಿಷಾದಕರ ಸಂಗತಿ ಏನಪ್ಪ ಅಂದ್ರೆ...ಅವರು ink ಬಳಿತಾರಲ್ಲ ಕೈಗೆ...ಆ ink pot photo ತೆಗಿಯಕ್ಕಾಗ್ಲಿಲ್ಲ .....orange colour ink pot....ಎಷ್ಟ್ ಚೆನಾಗಿತ್ತು ಗೊತ್ತಾ..... It was just so cute....enclosure ಒಂದಿತ್ತು ಅದಕ್ಕೆ.....ಹೊಟ್ಟೆ ಉರಿತಿದೆ photo ತೆಗೆಯಕ್ಕಾಗ್ಲಿಲ್ಲವಲ್ಲ ಅಂತ !!
Z : ಐದೊರ್ಷ ಬಿಟ್ಟಮೇಲೆ ಮತ್ತೆ ತೆಗಿವಂತೆ...don't lose hope !
ನಾನು : hmmm.... vote ಹಾಕಿ ಮನೆಗೆ ಬಂದು ನೋಡಿದರೆ scene totally change !! lazy goose ಗಳ ಥರ ಇದ್ದ ನಮ್ಮ ಮನೆಯವರು busy bee ಆಗೋಗಿದ್ರು all of a sudden !! ಅಣ್ಣ art of living ಆಶ್ರಮದ electrical maintenance job ತಗೊಂಡು ತಿಂಗಳುಗಳೇ ಕಳೆದಿದ್ದವು. ಆವತ್ತು office ಗೆ ರಜೆ ಇತ್ತು. ಅಣ್ಣ ಇಂತಹ ದಿನಗಳಂದು site inspection ಗೆ ಹೋಗವುದು ಅಭ್ಯಾಸ. ಅಮ್ಮ ನಾವು ಬರ್ತಿವಿ ಆಶ್ರಮಕ್ಕೆ ಅಂದರಂತೆ. ಅಣ್ಣ ಥಟ್ಟನೆ ಒಪ್ಪಿದ್ದಾರೆ. ಅಮ್ಮ ನಮ್ಮ ಸೋದರತ್ತೆಗೆ ಫೋನಿಸಿದ್ದಾರೆ. ಅವರು ನಿಂತಕಾಲಲ್ಲಿ ಬರಲು ಒಪ್ಪಿಗೆ ಸೂಚಿಸಿದ್ದಾರೆ. ಆದರಿಂದ ಮನೆ ಇಷ್ಟು ಬುಸ್ಯಿ ಆಗಿದೆ ಅಂತ ತಂಗಿ headlines ಉಸುರಿದಳು. ನಾನು ಸರಿ...outing ಆಯ್ತು ಅಂತ ಹು ಎಂದೆ.
ಇಪ್ಪತ್ತು ನಿಮಿಷದಲ್ಲಿ ಮನೆ ಬಿಟ್ಟೆವು. ಅತ್ತೆಯನ್ನು ಮತ್ತು ನನ್ನಿಬ್ಬರು ಕಸಿನ್ನುಗಳನ್ನು ದಾರಿಯಲ್ಲಿ pick up ಮಾಡಿಕೊಂಡು ಕಾರ್ ಕನಕಪುರ ರಸ್ತೆಯತ್ತ ಧಾವಿಸಿತು. ಬನಶಂಕರಿ ಬಸ್ ನಿಲ್ದಾಣ ಕಾಮಾಗಿದ್ದನ್ನು ನಮ್ಮಮ್ಮ ಹುಬ್ಬೇರಿಸಿ ನೋಡಿದರು. ಬನಶಂಕರಿ ದೇವಿಗೆ eyes right ಮಾಡಿ ಒಂದು salute ಹೊಡೆದು ಹೊರಟೆವು. ಮೆಟ್ರೋ ಆಯ್ತು...ಖೋಡೇಯ್ಸ್ factory ಆಯ್ತು...engineering collegeಗಳ ಹೆಬ್ಬಾಗಿಲುಗಳ ದರ್ಶನವೂ ಆಯ್ತು. ಒಂದು ಘಂಟೆಯಾದ ನಂತರ welcome to art of living ಅನ್ನುವ ಫಲಕ ನಮ್ಮನ್ನು ಸ್ವಾಗತಿಸಿತು. ಅಷ್ಟರಲ್ಲಿ ನಾನು ಕಿಟಕಿಯಿಂದ ಹೊರಗೆ ಇಣುಕಿ ಮೋಡಗಳ ಮತ್ತು ಪ್ರಾಣಿಗಳ ಫೋಟೋ ತೆಗೆಯಲು ಹೋಗಿ ಅಮ್ಮ ಮತ್ತು ಅಣ್ಣನ ಕೈಲಿ ಹತ್ತಿಪ್ಪತ್ತು ಸರ್ತಿ ಬೈಸಿಕೊಂಡಿದ್ದೆ.
Z : correct ಆಗಿ ಮಾಡಿದ್ದಾರೆ. ನೀನು 100 metres ಗೂ " ಅಣ್ಣ ನಿಲ್ಸಿ...ಹಸು ಫೋಟೊ...ಅಣ್ಣಾ ನಿಲ್ಸಿ ಕುರಿ ಫೋಟೊ ಅಂತ ಅಂತಿದ್ರೆ ಹಿಂದೆ ಇರೋ ಗಾಡಿಗಳು ಬಂದು ಗುದ್ದಲ್ವಾ ? ನಿಮ್ಮಂಥವರೆಲ್ಲ ನಡ್ಕೊಂಡು ಓಡಾಡ್ಬೇಕು. ಇನ್ನು ಮೋಡ...ಸದಾ ಕಾಲ ನೋಡ್ತಾನೆ ಇದ್ರೆ ಬಗ್ಗಿ ಬಗ್ಗಿ...ಇಣುಕಿ ಇಣುಕಿ...ಹೇಗೆ ಡ್ರೈವ್ ಮಾಡ್ತಾರೆ ಅಣ್ಣ ? i support him.
ನಾನು : ಮಾತಾಡ್ಬೇಡಾ !! ನಿಂಗೇನ್ ಗೊತ್ತು ಫೋಟೋ ತೆಗಿಯದು ಎಷ್ಟ್ ಮಜಾ ಅಂತ...ಕುರಿಗಳ running race ನಡೀತಿತ್ತು. video ತೆಗಿಯಣಾ ಅಂದ್ರೆ ಆಗ್ಲಿಲ್ಲ....i felt so bad !!! ನೀನ್ ಬೇರೆ !! ಹೋಗೆ, aesthetic sense ಇಲ್ಲ ನಿನ್ಗೆ.
Z : ಸರಿ. ಆಮೇಲೆ ?
ನಾನು : ಆಶ್ರಮಕ್ಕೆ ಬಂದ್ವಿ. ಅಲ್ಲೊಂದು ದೊಡ್ಡ ಮಂಟಪವಿದೆ...ವಿಶಾಲಾಕ್ಷಿ ಮಂಟಪ ಅಂತ ಅದರ ಹೆಸರು. ಒಳಗೆ ನಮಗೆ ಹೋಗಲಾಗಲಿಲ್ಲ...ಯಾಕಂದ್ರೆ ಅಲ್ಲಿ ಪ್ರವಚನ ನಡೀತಿತ್ತು. ಸ್ವಾಮೀಜಿಯವರದಲ್ಲ...ಮತ್ತಿನ್ಯಾರದ್ದೋ. ನಾವು ಕೇಳಲೂ ಹೋಗಲಿಲ್ಲ. ಬರೀ ಪ್ರಕೃತಿ ಸೌಂದರ್ಯ ನ ಆಸ್ವಾದನೆ ಮಾಡ್ತಿದ್ವಿ.ಶಾಂತಿ ನಮಗೆ ಸಿಟಿಯಲ್ಲಿ ಸಿಗದ ವಸ್ತು. ಇಲ್ಲಿ ಭರಪೂರ ಶಾಂತಿ ! ಸೌಂದರ್ಯ ಪಷ್ಚಿಮ ಘಟ್ಟದ ಮುಂದೆ ಸೊನ್ನೆಯಾದರೂ ಕಣ್ಣಿಗೆ ಇಂಪುಕೊಡಲು ಏನೂ ಕಮ್ಮಿ ಇಲ್ಲ. ನಾನಂತೂ ಬರೀ ಫೋಟೋ ಕ್ಲಿಕ್ಕಿಸುತ್ತಲೇ ಇದ್ದೆ. ನಮ್ಮಂಥಾ city ಜನಕ್ಕೆ concrete jungle ಬಿಟ್ಟು one small patch of greenery ಕಾಣಿಸಿದರೆ ಅದೇನೋ ಆನಂದ. ನಾವು ಹೊರಗಡೆ ಜಾಗಗಳಿಗೆ ಹಲವಾರು ಕಾರಣಗಳಿಂದ ಹೋಗಲಾಗುವುದಿಲ್ಲ. western ghats ಅಂತಹ ಜಾಗಗಳನ್ನು ನೋಡಿ ಬಂದವರು ನಿಜ್ವಾಗ್ಲು lucky. ನನಗೆ ಯೋಗವಿಲ್ಲ ಎಂದು ನಾನೆಷ್ಟು ಸಲ ನನ್ನನ್ನೇ ನಾನು ಹಳಿದುಕೊಂಡಿದ್ದೇನೋ !! ದರಿದ್ರ city life...ಏನನ್ನೂ ಮಾಡಲು ಬಿಡುವುದಿಲ್ಲ ಇದು. ಈ city life octopus ಥರ ನಮ್ಮನ್ನು ಬಿಗಿಹಿಡಿದಿರುತ್ತದೆ. ಜಂಜಾಟಗಳನ್ನು ಬಿಡಿಸಿಕೊಳ್ಳುವುಸು ಕಷ್ಟ. ನಮ್ಮಂಥವರಿಗೆ ಅಸಾಧ್ಯ. ಅಣ್ಣಂಗೆ time ಇದ್ದಾಗ ನಮಗೆ exam, ನಮಗೆ free time ಇದ್ದಾಗ ಅಣ್ಣನಿಗೆ ಕೆಲ್ಸ. ಹೀಗೆ...ಆದ್ದರಿಂದ ಬರೀ in and around city ಲೇ ಇರೋ ಜಾಗಗಳನ್ನ ನೋಡುವ ಹಾಗಾಗಿದೆ.
Z : very true...ಆಮೇಲೆ ?
ನಾನು : ಆಶ್ರಮವೆಲ್ಲ ತಿರುಗಿ ಅಲೆದು ಸುಸ್ತಾದ ಮೇಲೆ ಊಟ ಅಲ್ಲೇ ಲಭ್ಯವಿದೆ ಎಂದು ತಿಳಿದುಬಂತು. ಊಟದ ಶಾಲೆಗೆ ಹೋದ್ವಿ. ಅಲ್ಲಿ ಮಕ್ಕಳಿಗೆ summer camp ನಡೀತಿತ್ತು ಅನ್ಸತ್ತೆ...ಅವು ಊಟ ಬಡಿಸಲು ಕಲಿಯುತ್ತಿದ್ದವು. ನಮಗೆಲ್ಲರಿಗೂ ಮಕ್ಕಳೇ ಊಟ ಬಡಿಸಿದ್ದು. ನಮ್ಮಮ್ಮ ಮತ್ತು ಅತ್ತೆ " ನೋಡಿ ಕಲಿತುಕೊಳ್ಳಿರಿ " ಅಂದರು. ನಾವು ಮಕ್ಕಳು ಒಂದು ದಟ್ಟ ದರಿದ್ರ look ಕೊಟ್ಟೆವು. ಸುಮ್ಮನಾದರು. ನಮಗೆ ಮಾಡಲು ಬರುವುದಿಲ್ಲ ಅಂತ ಅಲ್ಲ...ಅವರ ತಾತನ ಥರ ಮಾಡಬಲ್ಲೆವು. ಆದರೆ ಎಲ್ಲೆಲ್ಲೋ talent exhibit ಮಾಡಿ waste ಮಾಡ್ಕೋಬಾರ್ದು ಅನ್ನೋದು ನಮ್ಮ principle.
Z : ಆಹಾ....ಉದ್ಧಾರವಾಗಿ ಹೋಯ್ತು ಜನ್ಮ !
ನಾನು : ಅಲ್ವಾ ? ಇಂತಹಾ principle ಇಂದಲೇ ಜನ್ಮ ಉದ್ಧಾರವಾಗೋದು ತಿಳ್ಕೋ. ಊಟದ ಫೋಟೋ ನೋಡು. ನೋಡಿ ಹೊಟ್ಟೆ ಉರ್ಕೋ...ನಾನ್ permission ಕೊಡ್ತಿನಿ ! ಬೈಯಲ್ಲ !! :P
ಸಖತಾಗಿತ್ತು ಊಟ...ಲಗಾಯಿಸಿದೆ. ಉಪ್ಪಿಟ್ಟಿಗೆ ನಿಂಬೆಹಣ್ಣು ಮುಂದಿತ್ತು...ಅದ್ಭುತವಾಗಿತ್ತು. ಕೋಸಿನ ಪಲ್ಯ, ಕಾಳಿನ ಹುಳಿ...ಅನ್ನ, ತಿಳಿಮಜ್ಜಿಗೆ...ಒಂದನ್ನು ಬಿಡದೇ ತಿಂದೆ. ಊಟವಾದ ಮೇಲೆ ಅಲ್ಲಿಂದ ಹೊರಡಲನುವಾದೆವು. ಅಣ್ಣ site inspection ಅಂದರು. ನಾವು ಮತ್ತೊಂದು ದರಿದ್ರ ಲುಕ್ ಕೊಟ್ಟು ಅವರ ಆಸೆಗೆ ನೀರೆರೆಚಿ ವಾಪಸ್ ಕರೆದುಕೊಂಡುಬಂದೆವು.
ಅಲ್ಲಿಂದ ಸಲ್ಪ ಮುಂದೆಯೇ ತ್ರಿಮೂರ್ತಿ ದೇವಸ್ಥಾನ ಅಂತ ಒಂದು ಜಾಗ ಇದೆ. ಬ್ರಹ್ಮ ವಿಷ್ಣು ಮಹೇಶ್ವರರ ಚಿತ್ರ ಹುಡುಕಬೇಡ ...ಇಲ್ಲಿರೋರು ಕೃಷ್ಣ, ಗಣಪ ಮತ್ತು ಹನುಮಂತ ! ಬಾತುಕೋಳಿಗಳಿದ್ದವು...ಫೋಟೋ ಕ್ಲಿಕ್ಕಿಸಿ ಮುಂದೆ ನಡೆದೆವು.
ಅಲ್ಲಿಂದ ಸುಮಾರು ದೂರ ಹೋದರೆ ವಿಶ್ರಾಂತಿ ಧಾಮ ಅಂತ ಇನ್ನೊಂದು ಜಾಗವಿದೆ. ಅಲ್ಲೊಂದು ದೊಡ್ಡ ಗಣಪತಿಯ ವಿಗ್ರಹವಿದೆ. ಕೆಳಗೆ ದೇವಾಲಯವೂ ಇದೆ. .ಅಲ್ಲಿಯೇ ಮುಂದೆ ಕೆಲವು ಪಕ್ಷಿ ಪ್ರಾಣಿಗಳನ್ನು ಬಂಧಿಸಿಟ್ಟಿದ್ದಾರೆ. ಬೇರೆಯವರಿಗೆ ಸಂತೋಷವಾಗಬಹುದು...ಆದ್ರೆ ನನಗೆ ಬೇಜಾರಾಯ್ತು. naturally ಬದುಕಲು ಬಿಡದೇ ಈ ತರಹ ಪಂಜರದಲ್ಲಿ ಬಂಧಿಸಿಟ್ಟು ಎಷ್ಟು ಚೆನ್ನಾಗಿ ನೋಡಿಕೊಂಡರೇನು ? ನನಗೆ ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರ ಕವನವೊಂದು ನೆನಪಾಯಿತು
ನಿಂತ ನೀರ ಕಲಕಬೇಡಿ ಕಲ್ಲುಗಳೆ
ಹೂದಳಗಳ ಇರಿಯಬೇಡಿ ಮುಳ್ಳುಗಳೇ
ಏನಿವೆಯೋ ನೋವು ಅವಕೆ ತಮ್ಮದೇ
ಬಾಳಲು ಬಿಡಿ ತಮ್ಮಷ್ಟಕೆ ಸುಮ್ಮನೆ
ಪಂಜರದಲಿ ನೂಕಬಹುದೇ ಗಿಳಿಯನು ?
ನೂಕಿ ಸುರಿದರಾಯ್ತೆ ರಾಶಿ ಕಾಳನು ?
ತಿನ್ನುವುದೇ ಗುರಿಯೆ ಹೇಳಿ ಬಾಳಿಗೆ ?
ಪರರ ಬಾಳು ಬಲಿಯೆ ನಮ್ಮ ಲೀಲೆಗೆ ?
Z : ನಿಜ....
ನಾನು : ಸರಿ ಅವೆಲ್ಲದುದರ ವೀಡಿಯೋಗಳನ್ನು ಚಿತ್ರೀಕರಿಸಿ...ಬಾತುಕೋಳಿಯ ವಿಡಿಯೋ ತೆಗೆಯುತ್ತಿದ್ದಾಗ ಅದು ಬಂದು ನನ್ನ ಪಾದಗಳನ್ನು ಕಚ್ಚಿ, ನಾನು ಕೆಳಗೆ ಬಿದ್ದು.. ನನಗೆ ಗಾಯವಾಗಿ, ಅಮ್ಮ ನೀನೇನು ಮಾಡಿದೆ ಅಂತ ರೇಗಿ, ನಾನೇನೂ ಮಾಡ್ಲಿಲ್ಲ...ದೂರದಿಂದ ವಿಡಿಯೋ ತೆಗಿತಿದ್ದೆ....ಅದು ಹಾಗೇ ಹತ್ತಿರ ಬಂತು. ನಾನು ಹಾಗೇ ಹಿಂದೆ ಹೋದೆ...ಅದೇಕೋ sudden ಆಗಿ attack ಮಾಡಿತು ಎಂದು ಅತ್ತು ....ಇವೇ ಮುಂತಾದ ಘಟನೆಗಳು ಘಟಿಸಿದ ನಂತರ ಪಕ್ಷಿಗಳ psychology ನನಗೆ intriguing ಅನ್ನಿಸಿ, ಗುರುಗಳ ಜೊತೆಗೆ ಇದರ ಬಗ್ಗೆ ಚರ್ಚೆ ಮಾಡಲೇಬೇಕು ಎಂದು ನಿರ್ಧರಿಸಿದ ಮೇಲೆ ಇನ್ನೊಂದಷ್ಟು ಫೋಟೋಗಳನ್ನು ತೆಗೆದು ಅಲ್ಲಿಂದ ಹೊರಟೆವು. ಸರಿ...ಸಮಯ ನಾಲ್ಕಾಗಿತ್ತು. ದಾರಿ ಮಧ್ಯದಲ್ಲಿ ಅಣ್ಣ ಏನೋ mood ನಲ್ಲಿ " i will vote" ಎಂದರು ! ಅಮ್ಮ ನಾನು ಮಾಡಲ್ಲ ಅಂದರು. ಅಣ್ಣ ಮಾಡು ಮಾಡು...ನೋಡು ನೀನು ವೋಟ್ ಮಾಡದಿದ್ದರೆ ಬೆರೆಯವರು ನಕಲಿ ಮತ ಹಾಕ್ತಾರೆ, ಅನ್ಯಾಯ ಆಗತ್ತೆ ಅಂತ ಅಂದರು. ಅಮ್ಮ 600 ಸೆಕೆಂಡುಗಳು ಯೋಚನೆ ಮಾಡಿ ಸರಿ ವೋಟ್ ಮಾಡುವ ಅಂದರು. ನಾಲ್ಕು ನಲವತ್ತಕ್ಕೆ ನಮ್ಮನ್ನು ಮನೆಯಲ್ಲಿ ಉದುರಿಸಿ ನಾಲ್ಕು ಮುಕ್ಕಾಲಿಗೆ ಹೋದರು ಮತಗಟ್ಟೆಗೆ. ಏನ್ ಸಾರ್ ಇಷ್ಟೊತ್ತಿಗೆ ಬರ್ತಿದ್ದೀರಿ ...ಇನ್ನೆರಡು ನಿಮಿಷಕ್ಕೆ close ಮಾಡುವುದರಲ್ಲಿದ್ದೆವು ಇವೇ ಮುಂತಾದ ಮಾತುಗಳನ್ನು ಕೇಳಿಸಿಕೊಂಡು ಮತ ಚಲಾಯಿಸಿ ಬಂದರು. ಬಸವನಗುಡಿ ಕ್ಷೇತ್ರ ಇವರಿಬ್ಬರ ಮತ ಪಡೆದು ಪಾವನವಾಯ್ತು.
Z : ಹೆ ಹೆಹೆಹ್...ಬಾತುಕೋಳಿ ಎಪಿಸೋಡ್ ನೈಸ್ !
ನಾನು : ಆಹಾ...ನಿನ್ನಂಥವರನ್ನ ನೋಡಿಯೇ equation ಮಾಡಿದ್ದಾರೆ ದೊಡ್ದವರು.."ಬೆಕ್ಕಿಗೆ ಚೆಲ್ಲಾಟ = ಇಲಿಗೆ ಪ್ರಾಣ ಸಂಕಟ " ಅಂತ !!
Z : sorry ! Anyways...that was a nice outing !!
ನಾನು : And refreshing too... ನನಗಂತೂ ಸಾಕಾಗಿತ್ತು...ಅದೇ ಕಾಲೇಜಿನ ಮೇಜು....ಅದೇ ಪಾಠ, ಅದೇ lab u !!! ಬೇಕು ಇಂಥವು ಒಮ್ಮೊಮ್ಮೆ ! ನಾನು ಕ್ಲಿಕ್ಕಿಸಿದ ಫೋಟೋಗಳ ಸ್ಲೈಡ್ ಶೋ ನೋಡು.
ಸರಿ...ಹೊರ್ಟೆ...ಕೆಲ್ಸ ಇದೆ.
line on hold.
Saturday, June 21, 2008
ऎ ज़िंदगी...यह लम्हा फ़िल्हाल जी लॆने दॆ.....
Z : ನಿನಗಂತೂ ಪ್ರತಿಯೊಂದು situation ಗೆ ಹಾಡುಗಳೇ ಹೊಳೆಯತ್ತಲ್ಲಾ ಯಾಕೆ ?
Z : yes !!! जुनून ಇತ್ತು ನಮಗೆ, ವಿಜ್ಞಾನವನ್ನೇ ಓದಿ ಏನಾದರೂ ಸಧಿಸಿ ತೋರಿಸಲೇ ಬೇಕು ಅಂತ. ಅದಕ್ಕೆ ಸದ್ಯೋಜಾತನ ಸಂಕಲ್ಪವೂ ಇತ್ತೇನೋ....graduation time ನಲ್ಲೇ ಮೂರು ವರ್ಷ jawaharlal nehru centre for advanced scientific research ನಲ್ಲಿ ನಮಗೆ research fellowship ಸಿಕ್ಕಿದ್ದು...
ನಾನು : ಹೌದು ! ಅದೊಂತು ನನ್ನ ಜೀವನದ turning point ! ನಾನು ಅಲ್ಲಿ ಇದ್ದ ಪ್ರತಿಯೊಂದು ಕ್ಷಣ ಆನಂದಮಯ ! ನನಗೆ ಭೌತಶಾಸ್ತ್ರದಲ್ಲಿ ಹೆಚ್ಚು ಆಸಕ್ತಿ ಇತಾದರೂ ನಾನು ರಸಾಯನಶಾಸ್ತ್ರವನ್ನು ಎಂದೂ ಕಡೆಗಾಣಿಸಿರಲಿಲ್ಲ...thats my favourite too ! ಕಣ್ಮುಚ್ಚಿ ಕಣ್ತೆರೆಯುವುದರಲ್ಲಿ ಬಿ ಎಸ್ಸಿ ಮುಗಿದೇಹೋಯ್ತು ! ಆದರೆ, ದುಃಖಗಳ ಉಡುಗೊರೆಯನ್ನು ನೀಡಿ !
Z : ನೆನಪಿಸಿಕೊಳ್ಳಬೇಡ ಬಿಡು ಅದನ್ನ.....
ನಾನು : ಮರೆಯಲಂತೂ ಸಾಧ್ಯವಿಲ್ಲವಲ್ಲ ...ನಾನೆಷ್ಟು ಕಷ್ಟಪಟ್ಟರೂ final year ನಲ್ಲಿ I got the lowest percentage ! ಎಮ್ಮೆಸ್ಸಿ ಸಿಗತ್ತೋ ಇಲ್ವೋ ಅನ್ನೋದೇ doubt ಆಗೋಗಿತ್ತು...ನಾನಂತೂ ನಲುಗಿ ಹೋಗಿದ್ದೆ...ದಿಕ್ಕೇ ತೋಚದಾಗಿತ್ತು...ನಗಲಾರದೇ ಅಳಲಾರದೇ ಜೀವ ನಿಜವಾಗಿಯೂ ತೊಳಲಾಡುತ್ತಿತ್ತು ! ಯಾವಾಗಲೂ ನನಗೆ ಹೀಗೆ, end result is always disappointing ! ಹೇಗೋ ....ಎಮ್ಮೆಸ್ಸಿ ಸಿಕ್ಕಿತು. ಎರಡು ವರ್ಷ ಪ್ರಾಮಾಣಿಕವಾಗಿ physics ಕಲಿತಿದ್ದೇನೆ. ಈಗ ಎಮ್ಮೆಸ್ಸಿ ಏನಾಗತ್ತೋ !!!
Z : ಈಗ ಮುಂದೆ ?
ನಾನು : ನೀನೂ ಈ ಪ್ರಶ್ನೆ ಕೇಳಬೇಡ ! ಎಲ್ಲರೂ ಈ ಪ್ರಶ್ನೆ ಕೇಳಿ ನನ್ನನ್ನು ಹೈರಾಣಾಗಿಸಿದ್ದಾರೆ. ಮುಂದೇನು ಅನ್ನುವ ಸ್ಪಷ್ಟ ಚಿತ್ರಣ ಸದ್ಯಕ್ಕೆ ಇಲ್ಲವಾದರೂ ನಾನು ಸುಮ್ಮನೆ ಮನೆಯಲ್ಲಂತೂ ಕೂರುವುದಿಲ್ಲ. ph.D entrance exam ಒಂದನ್ನು ನಾಳೆ ಕೊಡಬೇಕಿತ್ತು. ಆದರೆ ನಾನು ಅದಕ್ಕೆ ಈ ಸೆಮೆಸ್ಟೆರ್ exam ಗಲಾಟೆಯಲ್ಲಿ ಏನೂ ಓದಲಾಗಲಿಲ್ಲ. ಆದ್ದರಿಂದ ಅದೇ ಪರೀಕ್ಷೆಯನ್ನು ಡಿಸೆಂಬರ್ ನಲ್ಲಿ ತೆಗೆದುಕೊಳ್ಳಬೇಕೆಂದು ನಿರ್ಧರಿಸಿದ್ದೇನೆ. ಈಗಿನ ಈ ಬದುಕನ್ನು ಹೀಗೆ ಬದುಕಲು ಬಿಡು !
ऎ ज़िंदगी...यह लम्हा फ़िल्हाल जी लॆने दॆ.....
Sunday, June 15, 2008
Happy father's day.
Z : ಹೌದು.
Z + head ruled : Happy father's day ! ಅಣ್ಣಾ ! [ನಾವು ನಮ್ಮ ತಂದೆ ನ ಅಣ್ಣ ಅಂತ ನೇ ಕರಿಯೋದು]
ನಾನು : ಇವರೇ ನಮ್ಮ ತಂದೆ....ಅದು ನಾವು ! 1-11-1987 ರಂದು ತೆಗೆದಿದ್ದಂತೆ ಈ ಫೋಟೊ....ಅಮ್ಮ ಹೇಳಿದ್ರು....ಆವತ್ತು ಲಾಲ್ಬಾಗ್ ನಲ್ಲಿ ice cream ಕೊಡ್ಸೋ ತಂಕ ನಾನು ಹೀಗೆ ಮುಖ ಗಂಟಿಟ್ಟುಕೊಂಡಿದ್ದೆನಂತೆ..ಆಗ ನಮಗಿನ್ನೂ ಎರಡು 2 ವರ್ಷ !
Z : he is the best father one can ever get ! we are the luckiest !!!
ನಾನು : of course ! We cant thank him enough for what all he has done to us in bringing us up.
Z : yes ! ಅದರಲ್ಲಿ ಎರಡು ಮಾತಿಲ್ಲ. ತಂದೆಯ ಕರ್ತವ್ಯ ಚಾ ಚೂ ತಪ್ಪದೇ ನಿರ್ವಸಿದ್ದಾರೆ. ನಮ್ಮ ಬೇಡಿಕೆ, ಇಚ್ಛೆಗಳನ್ನ ಜಾಸ್ತಿ ಬೈಯ್ಯದೇ ನೆರವೇರಿಸಿದ್ದಾರೆ. ತಮಗೆ ಏನೆ ಕಷ್ಟ ಬಂದರೂ ಅದನ್ನ ನಮಗೆ ತೋರಗೊಡದೇ ಹಾಗೆಯೇ ಇದ್ದಾರೆ.
ನಾನು : 1994 ನಲ್ಲಿ ನಡೆದ ಅಪಘಾತವೊಂದರಲ್ಲಿ ನಮ್ಮ ತಂದೆಗೆ ಬಲಗಣ್ಣು ಪೆಟ್ಟಾಗಿ ಕಣ್ಣನ್ನೇ ಕಳೆದುಕೊಂಡಾಗ ನನಗೆ ಒಂಭತ್ತು ವರ್ಷ. ನಾನು ನಮ್ಮ ತಂದೆಯನ್ನೇ ಕಳೆದುಕೊಂಡೆನೇನೋ ಎಂಬ ಭಯ ಕಾಡಿದಾಗ...ಅವ್ರೇ ಹೇಳಿದ್ದು ...."where there is a will, there is a way" ನಮ್ಮ ತಂದೆಯ will power ಎಷ್ಟು strong ಅಂತ ಗೊತ್ತಲ್ವಾ Z ? ಹದಿನೈದೇ ದಿನದಲ್ಲಿ ಮೇಲೆದ್ದು ಮುಳುಗುತ್ತಿದ್ದ ನಮ್ಮ ಸಂಸಾರ ಮತ್ತು ಕಂಪನಿಯನ್ನ ಮೇಲಕ್ಕೆತ್ತಲು ಹಗಲೂ ರಾತ್ರಿ ದುಡಿಯುತ್ತಾ ಇದ್ದಾರೆ. .....ಯಾರೊಬ್ಬರ ಬಳಿಯೂ ಕೈಚಾಚದೇ ! ಈಗಲೂ ಎಲ್ಲರ ತಲೆಯ ಮೇಲೆ ಹೊಡೆಯುವ ಹಾಗೆ ಕಾರನ್ನು ಮಳೆ, ಮಂಜು ಮಸುಕು ತುಂಬಿದ ಶಿರಾಡಿ ಘಾಟನ್ನ, ಆಗುಂಬೆ ಘಾಟನ್ನ, ರಾತ್ರಿ ಹಗಲೆನ್ನದೇ , ಒಬ್ಬರೇ ಹತ್ತಿ ಇಳಿಯುವ ಸಾಮರ್ಥ್ಯವನ್ನು ಹೊಂದಿದ್ದಾರೆ...ನಮ್ಮ ತಂದೆ...our father strongest ! ಅವರಷ್ಟು will power, guts and strength ನನಗಿಲ್ಲವಲ್ಲ ಎಂದು ಎಷ್ಟೋ ಬಾರಿ ನನಗನ್ನಿಸಿದೆ...I have to imbibe from him his qualities of patience, tolerance, time management, discipline, dedication...everything !
ಪ್ರಪಂಚದ ಜನರಿಗೆ ಮನ್ನ ತಂದೆ ಮಿತಭಾಷಿ, ಸದಾ tension ನಲ್ಲಿ ಇರುವವರು ಅಂತ ಕಂದರು ನಮ್ಮ ತಂದೆಯ sense of humour ಮಾತ್ರ ultimate and unbeatable ! ಮೊನ್ನೆ ಮೊನ್ನೆ ಬಂದ ಗಾಳಿಪಟ ಚಿತ್ರದ ಹಾಡನ್ನು ಅರ್ಧಮರ್ಧ ಕೇಳಿಸಿಕೊಂಡು ನನಗೆ astrophysics exam ಇದ್ದ ದಿನ ಬೆಳಿಗ್ಗೆ " ಆಕಾಶ ಭೂಮಿಮೇಲಿದೆಯೋ " ಅಂತ ಹಾಡಿ ನನ್ನ tension ಇಳಿಸಿದರು !!!
Wednesday, June 11, 2008
Annie, ಪಿಂಟೂ ಮತ್ತು ನಾವು part 3
ನಾನು :(ಸ್ವಗತ) : ಇಷ್ಟೋಂದ್ ಹೊಗಳ್ತಿರೋದನ್ನ ನೋಡಿದ್ರೆ ಏನೋ ಆಗಿದೆ ಅಂತ ನನ್ನ intuition ಹೇಳ್ತಿದೆ. Z ಗೆ ನನ್ನಿಂದ ಏನೋ ಆಗಬೇಕಿದೆ mostly.
ನಿಮ್ಮ ಹೊಗಳಿಕೆಯಿಂದ ನಮ್ಮನ್ನು ಅಟ್ಟಕ್ಕೇರಿಸುವ ಅವಶ್ಯಕತೆ ಇಲ್ಲ...come to the point !
Z : ಮೂಡ್ ಸರಿ ಇದ್ದಂತಿಲ್ಲ ಮೇಡಮ್ ದು...ಶಾಂತಚಿತ್ತರಾಗಬೇಕೆಂದು ಮನವಿ.
ನಾನು : ಡಬ್ಬಾ, ಡಕೋಟಾ, ದಟ್ಟ ದರಿದ್ರ , crap, ಖಟಾರ, hopeless-ಅತೀತ, ಬೆದರುಬೊಂಬೆ ಸದೃಶ question paper ಗಳನ್ನ answer ಮಾಡಿದ್ರೆ ಯಾರ mood ತಾನೆ ಶಾಂತವಾಗಿರತ್ತೆ ?
Z : ಶಾಂತಿಯಿರಲಿ ರಾಜಕುಮಾರಿಯವರೇ...ತಲೆಇರುವಂಥವರು ತಾವು. ಅಲ್ಲಲ್ಲ...ಸಾಕ್ಷಾತ್ ತಲೆಯೇ ತಾವು. ಮೂಗಿನವರೆಗೂ ಇಳಿದು ಅದರ ತುದಿಗೆ ಕೋಪ ತರಿಸಿಕೊಳ್ಳಬಾರದೆಂದು ಬೇಡಿಕೆ.
ನಾನು : ಸಾಕ್ ಸುಮ್ನೆ ಇರೆ hopeless fellow ! ಸಾಯ್ತಾಯಿದಿನಿ ನಾನಿಲ್ಲಿ...ಬೇಕಂತ್ಲೇ hopeless paper ಗಳನ್ನ
set ಮಾಡೀ ಕಾಡ್ಸಿದಾರೆ ನಮ್ನ ! ಅಷ್ಟರ ಮಧ್ಯ...ನಿಂದ್ ಬೇರೆ...
Z : dont worry ಮಾಡ್ಕೊಳ್ಳೀ...ನೀವಿನ್ನು ಸತ್ತಿಲ್ಲಾ...ಯಾಕಂದ್ರೆ ನಾನಿನ್ನೂ ಬದ್ಕಿದಿನಿ.
ನಾನು : ಓಹೋ...ಇನ್ನು ಬದ್ಕಿದಿರೋ....ಗೊತ್ತಿರ್ಲಿಲ್ಲ.
Z : ತಲೆಯ ಮೇಲಿನ bulb ಇನ switch ಅನ್ನು ಕೃಪೆ ತೋರಿ on ಮಾಡ್ಕೊಳ್ಳಿ.
ನಾನು : ಬೇಡಾ.....ನಂಗೆ ಕೋಪ ತರಿಸ್ಬೇಡಾ !!!!!!!!!!!!!!!!!!!!!!!!!!!!!!!!!!!!!
Z : ಕೋಪವೆಂಬುದನರ್ಥ ಸಾಧನ
ಕೋಪವೇ ಸಂಸಾರ ಬಂಧನ
ಕೋಪದಿಂದಿಹಪರದ ಸುಕೃತವು ಲಯವನೈದುವುದು
ಕೋಪವನು ವರ್ಜಿಸಲು ಬೇಹುದು
ಕೋಪವುಳ್ಳವಳಾವಳಾಗಲಿ
ಕಾಕು"ಮತಿ"ಯು ಇಹಪರಕೆ ಚಿತ್ತೈಸೆಂದಳಾ ಜಿಂದಗೀ.....
ನಾನು : !!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!!
Z : original ಇಂತಿದೆ:
ಕೋಪವೆಂಬುದನರ್ಥ ಸಾಧನ
ಕೋಪವೇ ಸಂಸಾರ ಬಂಧನ
ಕೋಪದಿಂದಿಹಪರದ ಸುಕೃತವು ಲಯವನೈದುವುದು
ಕೋಪವನು ವರ್ಜಿಸಲು ಬೇಹುದು
ಕೋಪವುಳ್ಳವನಾವನಾಗಲಿ
ಕಾಪುರುಷನಿಹಪರಕೆ ಚಿತ್ತೈಸೆಂದನಾ ವಿದುರ
ಗಾಬರಿಯಾಗಬೇಡಿ... anti - ಗಾಬರಿfication formula ಇರುವ syrup ಅನ್ನು ಕಂಡುಹಿಡಿದವರೇ ಈ ರೀತಿ ಗಾಬರಿಯಾದರೆ ಹೇಗೆ ? ಒಂದೆರಡು ಬಾಟಲ್ಲು ಗಂಟಲಿಗೆ ಸುರಿದುಕೊಳ್ಳುವಂಥವರಾಗಿ .....
ನಾನು : what ??????????
Z : ನಾನು ಹೇಳಿದ್ದು ಎರಡು ಬಾಟಲ್ಲು anti ಗಾಬರಿfication syrup ಸುರಿದುಕೊಳ್ಳೀ ಅಂತ.....ಅಪಾರ್ಥ ಕೂಡದು. ಈಗ ವಿಷಯಕ್ಕೆ ಬರಲಿಚ್ಛಿಸುತ್ತೇನೆ.
ನಾನು : ಬಲಗಾಲಿಟ್ಟು ಬಂದು tell-ಉವಂಥವಳಾಗು girl-ಏ.....
Z : Annie ಮತ್ತು ಪಿಂಟು ನನ್ನನ್ನು target ಮಾಡಿ ಹೀನಾ ಮಾನ ಬೈದಿದ್ದಾರೆ.....ನಿಮ್ಮನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ ಎಂದು ಹೇಳಲು ನನಗೆ ಖಂಡಿತಾ ಸಂತೋಷವಾಗುತ್ತಿಲ್ಲ.
ನಾನು : ಸರಿ.
Z : !!!!!!!!!!!!!!!!!!!!!!!!!!!!!!!!!!!!!
ನಾನು : ಈಗ ತಾವು ಒಂದೆರಡು ಬಾಟಲ್ಲು ಸುರಿದುಕೊಳ್ಳುವುದು.
Z : ಕರ್ಮಕಾಂಡ ! ಎಲಾ ವಿಧಿಯೇ !
ವಿಧಿ ವಿಪರೀತ, ವಿಧಿಯಾಘಾತ ವಿಧಿವಿಲಾಸವಿದು ಇದೇನಹಾ ...... head ruled ಆದರೂ ನನ್ನನ್ನ ಬಂದು ಕಾಪಾಡುತಾಳೇ ಎಂದುಕೊಂಡಿದ್ದರೆ ಹೀಗಾಯಿತೇ ? ನಾನು ಎಲ್ಲಿ , ಯಾರ ಬಳಿ ನನ್ನ ಅಳಲಿನ borewell ತೋಡಲಿ ?
ನಾನು : ಬೇರೆ ಗ್ರಹಗಳ ಮೇಲೆ try ಮಾಡು....ಭೂಮಿಮೇಲೆ ಜಾಗ ಇಲ್ಲ ಮತ್ತು ಭೂಮಿ ಮೇಲಿನ ಜನರ ತಲೆಯೆಲ್ಲಾ ಆಗಲೇ ತೂತು ಬಿದ್ದು ಹೋಗಿದೆ. ಯಾಕಂತೆ annie ಪಿಂಟು ಬೈದಿದ್ದು ?
Z : ಆವರ ಬೈಗುಳ ಮತ್ತು ಅದಕ್ಕೆ ನನ್ನ ಮರುಪ್ರಶ್ನೆಯನ್ನು ಒಮ್ಮೆ ಅವಗಾಹಿಸುವುದು.
ನಾನು : ಒಹ್ ಹೋ....ಸಖತ್ ರಾದ್ಧಾಂತವಾಗಿದೆ. ಎಲ್ಲಿಯವರಿಬ್ಬರೂ ?
Z : annie wardrobe ನಲ್ಲಿ.... ಪಿಂಟು curtain rod ಮೇಲೆ.
ನಾನು : ಕರಿ ಅವರನ್ನ.
[enter annie and pintu]
ನಾನು : ಎನ್ರೋ ಇದು ?
annie : ನಮ್ಮ ಕೋಪ.
ನಾನು : Z... ಆ ಪದ್ಯ ನ ಇವರ ಕಿವಿಯಲ್ಲಿ ಓದು ತುತ್ತೂರಿ ಥರ.
Z : ಕೋಪವೆಂಬುದು.........
ಪಿಂಟು : ಇದೆಲ್ಲ ಆಗಲ್ಲ head ruled. ನಮಗೆ ನ್ಯಾಯ ಬೇಕು.
ನಾನು : ಸರಿ...ಶಿಸ್ತುಬದ್ಧ ವಿಚಾರಣೆ ನಡೆದ ಮೇಲೆ ನ್ಯಾಯ ಧರ್ಮ ಎಲ್ಲ ತೀರ್ಮಾನ ಮಾಡಲಾಗತ್ತೆ. Z ....Lewis Carroll ಅವರ Alice in wonderland ಪುಸ್ತಕ ತಗೊಂಡು ಬಾ.
ಪ್ರಮಾಣ ಮಾಡಿ ಇಬ್ಬರು : truth ಅನ್ನೇ speakಕುತ್ತೇವೆ....truth ಅನ್ನಲ್ಲದೇ ಬೇರೇನು speakಕುವುದಿಲ್ಲ...ನಾವು speakಕುವುದೆಲ್ಲಾ truth -ಏ. Z....ನೀನು ಪ್ರಮಾಣ ಮಾಡು.
annie : head ruled...Z ನಮ್ಮನ್ನ ಮರೆತಿದ್ದಾಳೆ.
Z : ಶುದ್ಧ ಸುಳ್ಳು.
ನಾನು : Z...ಗಲಾಟೆ ಮಾಡ್ಬೇಡಾ...ಅವರನ್ನ ಮಾತಾಡೋಕೆ ಬಿಡು.
annie : ನೋಡು head ruled....ನಮ್ಮನ್ನ ನೋಡದೇ ಇಲ್ಲ ಇವಳು ಈಚೀಚೆಗೆ. ನಮಗೆ ಸಿಕ್ಕಾಪಟ್ಟೆ ಕೋಪ ಬಂದಿದೆ ಮತ್ತೆ ಬೇಜಾರೂ ಆಗಿದೆ. glorified ದಿಕ್ಕಿಲ್ಲದವರಾಗೋಗಿದ್ದೇವೆ ನಾವು. ಚಿಕ್ಕ ವಯಸ್ಸಿನಲ್ಲೇ ಚೆನ್ನಾಗಿತ್ತು...ಈಗ...who will listen to us ? who will talk to us... ಬೊಂಬೆಗಳಿಗೂ ವೃದ್ಧಾಶ್ರಮ ಇರ್ಬೇಕು ಅಂತ ನಾನು ಸರ್ಕಾರಕ್ಕೆ ಆಗ್ರಹ ಪಡಿಸುತ್ತೇನೆ.
ನಾನು : ಸರ್ಕಾರನೆಲ್ಲ ತರ್ಬೇಡಾ....ಈಗ್ ಏನ್ problem ? ಊಟ ತಿಂಡಿ ಸರೀಗೆ ಸಿಗ್ತಿಲ್ವಾ ? ಅಥವಾ ನಿಮ್ಮ ಬೇಡಿಕೆಗಳನ್ನು ಪೂರೈಸಿಲ್ವಾ ?
ಪಿಂಟು : ಊಟ ತಿಂಡಿ ಸದ್ಯ ...ಸಿಗ್ತಿದೆ. but gossip ಎಲ್ಲಾ ಮಿಸ್ ಆಗ್ತಿದೆ. ಯಾಕಂದ್ರೆ ಎಲ್ಲ ಹಿರಣ್ಮಯಿ ಹತ್ತಿರ ನೇ ಹೋಗ್ತಿವೆ...ನಮ್ ಹತ್ರ ಏನು ಬರ್ತಿಲ್ಲ.
ನಾನು : ಓಹೋ....ಹಿರಣ್ಮಯಿ ಗೆ competitionನ್ನಾ ? ಇದು j factor. ಇವಾಗ ವಿಷಯ ಗೊತ್ತಾಯ್ತು.
Z : yes yes yes !! ಸರೀಗೆ ಅಂದೆ ನೋಡು ನೀನು head ruled....ನಂದೇನು ತಪ್ಪಿಲ್ಲ.
ನಾನು : excuse me....judgement ಕೊಡಕ್ಕೆ ತಾವ್ಯಾರು ? if you dont know....ನಿಮ್ಮ ವಿಚಾರಣೆ ಇನ್ನು ಶುರು ನೇ ಆಗಿಲ್ಲ...so ಹಾಗೆ ಸುಮ್ಮನೆ silent ಆಗಿ ತೆಪ್ಪಗೆ ಇರಿ.
Z : ok. sorry.
ನಾನು : ಅದ್ ಏನ್ ಹುಚ್ಚೋ ನಿಮ್ಗಳಿಗೆ gossip ದು ? ಹಾ ? ಏನ್ ಮನೆ ಕಟ್ಟ್ತೀರಾ ಅದ್ನ ಇಟ್ಕೊಂಡು ? ಹಿರಣ್ಮಯಿ ಹೊಸಬ್ಬಳು ಪಾಪ...ಅವಳನ್ನ ಒಬ್ಬಳೇ ಬಿಟ್ಟೂ ನಾವೆಲ್ಲ ಗುಂಪು ಕಟ್ಟ್ಕೊಂಡ್ ಗುಸುಗುಸು ಅಂದ್ರೆ ಅವಳಿಗೆ ಬೇಜಾರ್ ಆಗಲ್ವಾ ? ನೋಡಿ....ಹಿರಣ್ಮಯಿಯ ಮೇಲಿನ ಕೋಪಾನ ನೀವು Z ಮೇಲೆ ತೀರಿಸ್ಕೊಳ್ಳೊಕೆ ಈ ಥರ ಬೈದ್ರೆ what ಅರ್ಥ ? ಅವಳು ಮಾನ ನಷ್ಟ ಮೊಕದ್ದಮೆ ಏನಾದ್ರು ಹಾಕಿದ್ದಿದ್ರೆ ನಿಮ್ ಮೇಲೆ ? ಏನ್ ಮಾಡ್ತಿದ್ದ್ರಿ ?
annie : head ruled !!! Dont give ideas !!!
ನಾನು : that was a possibility annie....good it didnt happen. ಬಂದಿರೋ ಹೊಸಬ್ರನ್ನ ಈ ಥರ isolate ಮಾಡಿ ಹಿಂದೆ ಗೊಣಗದು ತಪ್ಪು.
ಪಿಂಟು : judgement ನಮ್ಗೆ ಉಲ್ಟಾನೆ !!! ನೀನಂತೂ ನಮ್ಮ ಹತ್ರ ಬರದೇ ಇಲ್ಲ...ನಮ್ಮ ಮೇಲೆ ಒಂದು ಚೂರು ಪ್ರೀತಿ ಇಲ್ಲ ನಿಂಗೆ....ನಿನ್ನಿಂದ Z ಕೆಟ್ಟಳು. ನಮ್ಮನ್ನ ಮರೆತಳು.
ನಾನು : hey ಬೈಬೇಡ್ರೋ ನಮ್ಮಿಬ್ರನ್ನ ! we are not at fault.
annie : defend yourselves.
ನಾನು : ನಿಮ್ಮನ್ನ ಅಮ್ಮ ಕೆಲ್ಸದವರ ಮನೆಗೆ ಕಳಿಸ್ತಿನಿ ಅಂತ ಹೇಳ್ದಾಗ ನಿಮ್ಮನ್ನ ಕಾಪಾಡಿದ್ದು ಯಾರು ?
annie : Z.
ನಾನು : last moment ನಲ್ಲಿ ಅಮ್ಮ suitcase check ಮಾಡದೇ ಇದ್ದಿದ್ದ್ರೆ ನಿಮ್ಮಿಬ್ಬರನ್ನು IISc ಗೆ ನನ್ನೊಂದಿಗೆ parcel ಮಾಡುವ ಭೀಕರವಾದ sketch ಹಾಕಿದ್ದು ಯಾರು ?
ಪಿಂಟು :Z again.
ನಾನು : annie ಗೆ plastic surgery ಮಾಡಿದ್ದು ಯಾರು ?
ಪಿಂಟು : head ruled.
ನಾನು : ನಿಮಗೆ wardrobe ಏ safe ಜಾಗ ಅಂತ suggest ಮಾಡಿದ್ದು ಯಾರು ?
annie : head ruled.
ನಾನು : ಮತ್ತೆ ? ನಾವ್ ಮರ್ತಿದ್ದೀವಾ ನಿಮ್ನಾ ? ಹಾ ? ಸ್ಪೀಕಿ ಇವಾಗ !
annie ಮತ್ತು ಪಿಂಟು: sorry !!!!!!!!!!!!!!!!!!!!!!!!!!!!!!!!!!!!!!!!!!!!!!!
ನಾನು : ನಮ್ಮಿಬ್ಬರಿಗೆ ಮಾತ್ರ ಅಲ್ಲ...ಹಿರಣ್ಮಯಿ ಗೂ ಕೇಳಿ. no ditto-ing !!!
annie ಮತ್ತು ಪಿಂಟು : we are sorry hiranmayi.... let us be friends.
ನಾನು : yes ಅಂದಿದ್ದಾಳೆ ಅವಳು.
Z : ನಾನು acquitted ಆ ? without interrogation ?
ನಾನು : ಈ case ನಲ್ಲಿ ನೀನು acquitted -ಉ...ಯಾಕಂದ್ರೆ ಮರುಪ್ರಶ್ನೆಯಲ್ಲಿ ನಿನ್ನ points strong ಆಗಿದೆ. ಆದ್ರೆ ಇನ್ನೊಂದು case ಗೆ ನಿನ್ನನ್ನ ವಿಚಾರ್ಸ್ಕೋಬೇಕಾಗಿದೆ ನಾನು.
Z : ನಾನು ತಪ್ಪನ್ನು ಒಪ್ಪಿಕೊಳ್ಳುತ್ತೇನೆ head ruled.... I didn't mean to do it....it just happened.... sorry....very sorry...extremely sorry !!!!
ನಾನು : Z , remember one thing. fools repeat the same mistake...wise make new mistakes. you choose what you want to be. ನಾನು ಹೇಳೋದು ಇಷ್ಟೆ.
annie : judgement please !!!
ನಾನು : case 1: Z acquitted. annie and pintu....both of you.....100 ಭಸ್ಕಿ ಹೊಡೆಯಕ್ಕದ್ದು....for J factor !
case 2: Z ಗೆ ಗೃಹಬಂಧನವನ್ನು ಅನಿರ್ದಿಷ್ಟ ಕಾಲಾವಧಿಯವರೆಗೆ ವಿಸ್ತರಿಸಲಾಗಿದೆ.
Z : ಕ್ಷಮೆ ಇಲ್ವಾ?
ನಾನು : don't even think about it.
Z : i accept. ಆದ್ರೆ phone ಮಾಡದು ನಿಲ್ಲಿಸಬೇಡಾ.... pleeeeaaaaaaaaaassssssssssssssseeeeeeeeeee !!!!!!!!!!!!!!!!!!!!!!!!!!!!!!!!!!!!!!!!!!!!!!
ನಾನು : ok.
Line on hold.
Sunday, June 1, 2008
ತಪ್ಪಾಗಿದೆ
ದಯಮಾಡಿ ತಪ್ಪು ಏನೆಂದು ಯಾರೂ ಕೇಳಬೇಡಿ. ಉತ್ತರಿಸುವ ಪರಿಸ್ಥಿತಿಯಲ್ಲಿ ನಾನಿಲ್ಲ.
ಏಳು ವರ್ಷದ ಹಿಂದೆ head ruled ಬೈದು ಬುದ್ಧಿ ಕಲಿಸಿದ್ದಳು. ನನ್ನನ್ನು ಹೊರಗೆ ಬಿಡದೇ ಹತೋಟಿಯಲ್ಲಿಟ್ಟಿದ್ದಳು. ಈಗ ಒಮ್ಮೆ ಎಂದೋ ಕೊಟ್ಟ ಸ್ವತಂತ್ರ್ಯದ ಸದುಪಯೋಗ ಮಾಡಿಕೊಂಡಿಲ್ಲ ನಾನು ಅನ್ನೋ ಪಾಪ ಪ್ರಜ್ಞೆ ಕಾಡಲು ಶುರುವಾಗಿದೆ. ಅವಳು ಬೈದರೇನೆ ನನಗೆ ತೃಪ್ತಿ . june 22 ಬೇಗ ಆಗಲಿ !
ಸದ್ಯಕ್ಕೆ ನನಗೆ ಇದೊಂದು ಕವಿತೆಯ ನೆನಪಾಗುತ್ತಿದೆ. ಕವಿಯ ಹೆಸರಿನ ನೆನಪಿಲ್ಲ. ಪೂರ್ತಿ ಸಾಹಿತ್ಯವೂ ನೆನಪಾಗುತಿಲ್ಲ.
ಎಲ್ಲ ಮರೆತಿರುವಾಗ ಇಲ್ಲ ಸಲ್ಲದ ನೆವವ
ಹೂಡಿ ಬರದಿರು ಮತ್ತೆ ಹಳೆಯ ನೆನಪೇ
ಕಲ್ಲಿನಂದದಿ ಬಿದ್ದು ತಿಳಿಯಾದ ಎದೆಗೊಳವ
ರಾಡಿಗೊಳಿಸುವೆ ಏಕೆ ಮಧುರ ನೆನಪೇ ?
ಸತ್ತ ಭೂತವನೆತ್ತಿ ಹದ್ದಿನಂದದಿ ತಂದು
ಎನ್ನ ಮನದಂಗಳಕೆ ಹಾಕದಿರು ನೆನಪೇ
ಭವ್ಯ ಭವಿತವ್ಯಕ್ಕೆ ಮೊಗಮಾಡಿ ನಿಂದಿರುವೆ
ಬೆನ್ನಲ್ಲಿ ಇರಿಯದಿರು ಓ ಚೆನ್ನ ನೆನಪೇ
head ruled... ನನ್ನ ತಪ್ಪನ್ನ ನಾನು ಒಪ್ಪಿಕೊಳ್ಳಲು ಸಿದ್ಧಳಿದ್ದೇನೆ. ಶಿಕ್ಷೆಯನ್ನನುಭವಿಸಲೂ ತಯಾರಾಗಿದ್ದೇನೆ. ಸದ್ಯೋಜಾತನ ಆಣೆ.
ಉತ್ತರಾಯಣ ೩
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ನಾನು : There is always a next time. Z : ಹೌದಾ ? ನಾನು : ಹೌದು. Z : ಪ್ರತೀ ಸಲವೂ ಹೀಗೆ ಆದರೆ ಗತಿಯೇನು ? ನಾನು : ಅದಕ್ಕೆ ನಿನ್ನ pessimistic ಅಂತ ಬೈಯ್ಯ...
-
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಬ್ಲಾಗಿನ ಹುಟ್ಟು ಹಬ್ಬ ಮತ್ತು ಹೊಸ ವರ್ಷ ಯಾವಾಗ್ಲು ಒಟ್ಟಿಗೆ ಬರತ್ತೆ. ಆದರೆ, ಮತ್ತೆ ಅದೇ flash back ಗೆ ಹೋಗಿ, ಅದೇ ...