Saturday, February 16, 2008

ವಾಹ್ !! ಮಂಗಳೂರು !! ಭಾಗ ೩

ನಾನು : ಹೇಗಿದೆ ನನ್ನ ಮೊದಲ ಕವಿತೆ ?

Z : chloroform ಥರ ಇದೆ!! 48 hours ಪ್ರಜ್ಞಾರಹಿತಳಾಗಿದ್ದೆ ನಾನು !!

ನಾನು : ಸಾಕು ಸಾಕು ...ಒಬ್ಬರನ್ನ ನಾವು ಎಷ್ಟು under-estimate ಮಾಡ್ತಿವೋ ಅಷ್ಟೇ dosage ನಲ್ಲಿ ನಾವು ನಮಗೇ chloroform ಕೊಟ್ಟುಕೋತೀವಿ ಅವರು ನಮ್ಮ ನಿರೀಕ್ಷೆ ಮೀರಿದಾಗ !! ನಿನಗಾಗಿದ್ದೂ ಇದೇ !! ಸದಾ ಬದುಕನ್ನು ಕುಹಕ ಮತ್ತು ನಕಾರಾತ್ಮಕ ದೃಷ್ಟಿಯಿಂದ ನೋಡಿದರೆ...ಹೀಗೆ ಪ್ರಜ್ಞಾರಹಿತರಾಗೇ ಇರುತ್ತೀಯಾ..ಮೊದಲು ನೀನು ನಿನ್ನ ಅತೀ ಕುಹಕ,under estimation ಅನ್ನು ನಿಲ್ಲಿಸು !! ಆಯ್ತಾ ?

Z : yes boss !!

ನಾನು : very good ! ಹೇಳಿದ ಮಾತನ್ನ ಕೇಳುವವರು ತುಂಬಾ ಒಳ್ಳೆಯವರು !! ಈಗ ಮಂಗಳೂರು ಕಥೆಯನ್ನ continue ಮಾಡ್ತಿನಿ.

Z : ಹಾ !! yes !! ಮಾಡು ಮಾಡು !!

ನಾನು : ಜನವರಿ ೧೭ ನೆ ತಾರೀಖು ಕಣ್ಣು ಬಿಟ್ಟಾಗ ಗಡಿಯಾರ ೭ ಗಂಟೆ ತೋರಿಸುತ್ತಿತ್ತು. ಎದ್ದೆ...ನನ್ನಿಬ್ಬರು ಸ್ನೇಹಿತೆಯರು ಇನ್ನೂ ನಿದ್ದೆಯ ಸೆರಗಲ್ಲೇ ಇದ್ದರು . ಎಬ್ಬಿಸಲು ಮನಸ್ಸಾಗದೇ ಹಾಗೆ ನಡೆದೆ. ಅಂಕಲ್ ಪ್ರಾತಃ ಸಂಧ್ಯಾವಂದನೆ ಮಾಡುತ್ತಿದ್ದರು. ಅದಕ್ಕೇ coffee ನಾನೇ ಮಾಡಿಕೊಂಡೆ. ಅವರ ಮನೆಯ terrace ಮೇಲೆ ಹತ್ತಿ coffee ಯ ಸವಿಯನ್ನು ಸವಿಯುತ್ತಾ ಸುತ್ತ ಮುತ್ತ ಕಣ್ಣಾಡಿಸಿದೆ. ಬೆಂಗಳೂರಂಥಾ concrete ಕಾಡಿನಲ್ಲಿ one patch of greenery ನೋಡೋದು ಎಷ್ಟು ಅಪರೂಪ !! ಅಲ್ಲೆಲ್ಲಾ ಎಲ್ಲರ ಮನೆಗಳ ಮುಂದೆಯೂ ಮರಗಳು, ಗಿಡಗಳ ಸಾಲು...ಕಣ್ಣಿಗೆ ತುಂಬಾ ತಂಪನ್ನು ನೀಡಿತು !! ಮಂಗಳೂರು ಎಷ್ಟೇ industrialise and cosmopolitan ಆದರೂ ಬೆಂಗಳೂರಷ್ಟು ಕೆಡದಿರಲಿ ಅಂತ ನಾನು ಪ್ರಾರ್ಥನೆ ಮಾಡಿದೆ !! ಅರ್ಧಾ ಗಂಟೆ ಅಲ್ಲೇ ನಿಂತು ಕಾಫಿಯನ್ನು ಗುಟುಕುಗಳಲ್ಲಿ ಹೀರಿದೆ. ನಂತರ ಕೆಳಗೆ ಬಂದಾಗ ನನ್ನ ಸ್ನೇಹಿತೆಯರಿಬ್ಬರೂ ಎದ್ದಿದ್ದರು. ಸ್ನಾನ, ತಿಂಡಿ ಎಲ್ಲಾ ಮುಗಿಸಿ ಮಂಗಳೂರು ಸುತ್ತಲು ಸಜ್ಜಾದೆವು.

Z : ಎಷ್ಟೊತ್ತಿಗೆ ಹೊರಟಿರಿ ?

ನಾನು : ೧೦.೩೦ ಗೆ !! ಊರಲ್ಲಿ ತಾನೇ ಸುತ್ತೋದು, ಏನ್ ಮಹಾ ಅಂತ ನಿಧಾನಕ್ಕೆ ready ಆದ್ವಿ. ಮೊದಲು ಕುದ್ರೋಳಿಯಲ್ಲಿರುವ ಗೋಕರ್ಣಾಥೇಶ್ವರ ದೇವಸ್ಥಾನಕ್ಕೆ ಹೋದೆವು. ಮಂಗಳೂರಿನ ಅತ್ಯಂತ "ಶ್ರೀಮಂತ " ದೇವಸ್ಥಾನವಾದ ಇಲ್ಲಿ ಎಲ್ಲಾ ದೇವರುಗಳಿಗೂ ಚಿನ್ನದ ಕವಚಗಳನ್ನು ತೊಡಿಸಿದ್ದರು !! ಮುತ್ತು ರತ್ನ ಹವಳಗಳಿಂದ ಅಲಂಕರಿಸಿದ್ದರು. ಆಕರ್ಷಕ ಕೆತ್ತನೆಗಳು ಪ್ರಶಂಸನೀಯ ಮತ್ತು ಶುಚಿತ್ವ ನಿಜಕ್ಕೂ ಅನುಕರಣೀಯ !! ಕಳಶದ ಆಕಾರದಲ್ಲೊಂದು ಬಾವಿಯಿದೆ. very cute !! ಕೃಷ್ಣ-ಅರ್ಜುನರ ರಥವಂತು ನಮಗೆ ನಿಜವೆನ್ನಿಸುವ ಹಾಗೆ ಕೆತ್ತಿದ್ದಾರೆ !!ಉದ್ಯಾನ ವನದಲ್ಲಿರುವ ಪ್ರಾಣಿಗಳ ಬೊಂಬೆಗಳು ಬೊಂಬೆ ಅಂತ ಅನ್ನಿಸೋದೇ ಇಲ್ಲ !! ಅಲ್ಲೊಂದು "ಗಂಗಾವತರಣ " ಎನ್ನುವ ಬೃಹತ್ ಕಾರಂಜಿ ಇದೆ. ಅದು ಏಷ್ಯಾ ಖಂಡದ ಅತಿ ದೊಡ್ದ ಕಾರಂಜಿ. ಶಿವನ ಜಟೆಯಿಂದ ಹೊರ ಬರುವ ಗಂಗೆ ಕಣ್ಣಿಗೆ ಹಬ್ಬವೇ ಸರಿ !! ಆದರೆ ಅದನ್ನು ನೋಡುವ ಭಾಗ್ಯ ನಮಗೆ ಇಲ್ಲವಾಯ್ತು. ಯಾಕಂದೆರೆ ಅದನ್ನು ಹಾಕುವುದೇ ಸಂಜೆ ವೇಳೆಗೆ!!ಅದನ್ನು ನೋಡಲಿಕ್ಕೇ ನಾನು ಮತ್ತೊಮ್ಮೆ ಮಂಗಳೂರಿಗೆ ಹೋಗಲೇ ಬೇಕು !!

Z : ಇಷ್ಟೋಂದು ಹೊಗಳುತ್ತಿದ್ದೀಯ ಅಂದಮೇಲೆ ಹೋಗೋಣ !! ನನಗೂ ಆಸೆ ಆಗ್ತಿದೆ !!

ನಾನು : ಮುಗಿಲಿ M.Sc !! ಆಮೇಲೆ ಹೋಗೋಣ !! ಅಲ್ಲಿಂದ ideal ice creams ಅನ್ನುವ famous ice cream parlour ಗೆ ಬಂದು ಕವಡೆ ಆಟ ಆಡಿ ice cream ಗಳನ್ನ choose ಮಾಡಿ ತಿಂದ್ವಿ !!

Z : ಯಾರೂ ನೋಡಿ "ಯಾರಪ್ಪ ಈ ಗಲಾಟೆ ಗಂಗಮ್ಮಂದಿರು ?" ಅಂದುಕೊಳ್ಳಲಿಲ್ವಾ ?

ನಾನು : no chance !! ಯಾಕಂದ್ರೆ ಅಲ್ಲಿ ಇದ್ದಿದ್ದು ನಾವು ಮೂವರೇ !! ;-) ಸಖತ್ ಮಜ ಮಾಡಿದ್ವಿ !! ನಂತರ St. Aloysius chapel ಗೆ ಬಂದ್ವಿ. ಮಂಗಳೂರಲ್ಲಿ ನೋಡಲೇ ಬೇಕಾದ ಜಾಗ ಅದು !! ಗೋಡೆಯ ಮತ್ತು ತಾರ್ಸಿಯ ಮೇಲೆ ಒಂದು ಇಂಚನ್ನೂ ಬಿಡದೇ ಏಸು ಕ್ರಿಸ್ತನ ಜೀವನವನ್ನು paint ಮಾಡಿದ್ದಾರೆ !!! ನೋಡೋಕೆ ನಿಜವಾಗಲೂ ಎರಡು ಕಣ್ಣೂ ಸಾಲದು !! ಎಂತಹಾ ಶಾಂತಿ ಅಲ್ಲಿ !! ನಿಜವಾಗಲೂ ಕಲೆ, ಚರಿತ್ರೆ ಮತ್ತು ಅಭಿರುಚಿಯ ದೃಷ್ಟಿಯಿಂದ "must see " ಜಾಗ !!

Z : ಹೌದಾ ? ಫೊಟೋ ಪ್ಲೀಸ್ !!

ನಾನು : ತೋರ್ಸಲ್ಲ !! ಅದನ್ನ ಖುದ್ದಾಗಿ ಹೋಗಿ ನೋಡಿದರೇನೆ ಚೆಂದ !! ಇದೊಂದೇ ಏನು...ನಾನು ಯಾವ ಜಾಗದ ಫೋಟೋ ನೂ ತೋರ್ಸಲ್ಲ !! ಅವನ್ನೆಲ್ಲ ಹೊಗಿಯೇ ನೋಡಬೇಕು !! ನಾನೇ ಕರ್ಕೋಂಡು ಹೋಗ್ತಿನಿ ನಿನ್ನ...ಅಲ್ಲಿ ತಂಕ wait !!

Z : ದೇವರೇ...M.Sc ಬೇಗ ಮುಗಿಯಲಿ ಇವಳದ್ದು !!

ನಾನು : ಗಡಿಬಿಡಿ raani !! ಜೀವನದಲ್ಲಿ ಸ್ವಲ್ಪ ತಾಳ್ಮೆ ಇರ್ಬೇಕು !!

Z : hmm...... !!!!!!! continue !!

ನಾನು : ಅಲ್ಲಿಂದ ಅತ್ರಿ book stall ಅಂತ ಒಂದು ಜಾಗಕ್ಕೆ ಬಂದು ನಾನು ದೇವುಡು ಅವರ ಮಹಾ ಬ್ರಾಹ್ಮಣ, ಮಹಾ ಕ್ಷತ್ರಿಯ ಮತ್ತು ಮಹಾದರ್ಶನ ಹಾಗೂ ಪೂಚಂತೇಯವರ ಕರ್ವಾಲೋ ಖರೀದಿಸಿದೆ. ಹೋದ ಕಡೆಯಲ್ಲೆಲ್ಲ ನಾನು ಪುಸ್ತಕಗಳನ್ನೇ ಖರೀದಿಸೋದು. Show piece ಗಳೆಲ್ಲಾ ನಶ್ವರ . ಜ್ಞಾನವೊಂದೇ ಶಾಶ್ವತ ಅನ್ನೋ principle ನ ನಾನು ardent ಆಗಿ follow ಮಾಡ್ತಿನಿ.

Z : ಜೀವನದಲ್ಲಿ ಇದೊಂದೇ ಒಳ್ಳೇ ಕೆಲ್ಸ ಮಾಡೋದು ನೋಡು ನೀನು !!

ನಾನು : ಲಟ್ಟಣಿಗೆ ಇಂದ ಒಂದು ಕುಟ್ಟಿತೀನಿ ನೋಡು ತಲೆ ಮೇಲೆ !! ಅತಿ ಆಯ್ತು !!

Z : sorry sorry sorry !! ಅವೆಲ್ಲ ಬೇಡ !! continue please, continue !!!

ನಾನು : Now that's better !! ಅಲ್ಲಿಂದ ಕದ್ರಿ ಗೆ ಹೋದ್ವಿ. ಕದ್ರಿಯಲ್ಲಿ ಮಂಜುನಾಥೇಶ್ವರ ದೇವಸ್ಥಾನ ಪುರಾಣ ಪ್ರಸಿದ್ಧ.ಕಾಶಿಯಿಂದ ಗಂಗೆಯು ಗುಪ್ತಗಾಮಿನಿಯಾಗಿ ಹರಿದು ಗೋಮುಖ ಗಣಪತಿಯ ಪಾದದಿಂದ ಕದ್ರಿಗೆ ಧುಮುಕುತ್ತಾಳೆ. ಅಲ್ಲಿಯೇ ಒಂದು ಲಿಂಗವಿದೆ.ಭಕ್ತಾದಿಗಳು ಸ್ವತಃ ಈ ಗಂಗೆಯನ್ನು "plastic" ಚೊಂಬುಗಳಲ್ಲಿ ಕೊಂಡೊಯ್ದು ಈಶ್ವರನಿಗೆ ಅಭಿಷೇಕ ಮಾಡಬಹುದು!! ಏನು ಚೆನ್ನಾಗಿತ್ತು ಗೊತ್ತಾ ? ನಾನು ಮಹಾ ಮೃತ್ಯುಂಜಯ ಮಂತ್ರವನ್ನು ಪಠಣ ಮಾಡುತ್ತಾ ಧಾರಾಪಾತ್ರೆಗೆ ನೀರು ಹಾಕಿ ಪುನೀತಳಾದೆ !!

Z : nice... very nice !!! ಆದರೆ plastic ಬದಲು ಹಿತ್ತಾಳೆಯೋ ಕಂಚೋ ಇಟ್ಟಿದ್ದಿರೆ ಚೆನ್ನಾಗಿ ಇರ್ತಿತ್ತು !!

ನಾನು : ಈ plastic ಎಂಬ ಪೆಡಂಭೂತ ಬೇಗ ತೊಲಗುವುದು ಅನುಮಾನ !!ಆದರೂ ನಾವೆಲ್ಲ ನಮ್ಮ ಕೈಲಾದಷ್ಟು ಪ್ರಯತ್ನ ಮಾಡಬೇಕು ಇದನ್ನ ಓಡಿಸೋಕೆ !!

ಅಲ್ಲಿ ಜಾತ್ರೆ ಇದ್ದಿದ್ದರಿಂದ ಒಂದು ವಾರ special ಅನ್ನ ಸಂತರ್ಪಣೆ ಇತ್ತು. ನಮಗೂ ಸುತ್ತಾಡಿ ಸುತ್ತಾಡಿ ಆದ ಆಯಾಸದಿಂದ ಜಠರಾಗ್ನಿ ಪ್ರಜ್ವಲಿಸುತ್ತಿತ್ತು. ಒಂದೂ ಬಿಡದೇ ಹಾಕಿದ್ದೆಲ್ಲ ತಿಂದೆವು. ಎಲೆಯೊಂದನ್ನೇ ಬಿಡಬೇಕಲ್ಲಾ ಅಂತ ಬಿಟ್ಟು ಬಂದೆವು. ಊಟ ಮಾತ್ರಾ... high class !! ಕ್ಷೇತ್ರ ಮಹಿಮೆ ನೋಡು !! ಪ್ರಸಾದ super !!

ಅಲ್ಲಿಂದ ಮನೆಗೆ ಬಂದು, one stage of packing ಮುಗಿಸಿ ಪೆಣಂಬೂರು ಬೀಚಿಗೆ ತೆರಳಿದೆವು. ನಮಗೆ ಸೂರತ್ಕಲ್ಲಿಗೆ ಹೋಗುವ ಆಸೆ ಇತ್ತಾದರೂ ರಾತ್ರಿಯ ರೈಲಿಗೆ reservation ಇದ್ದಿದ್ದರಿಂದ ಈ ಬೀಚಿಗೆ ಹೋಗಬೇಕಾಗಿ ಬಂತು !!

Z : ಹೇಗಿದೆ ?

ನಾನು : not so clean...But tolerable. it did not matter to me in any way. ನಾನು ನೀರಿನಲ್ಲೆಲ್ಲಾ ಇಳಿಯುವುದಿಲ್ಲ ಅಂತ ಅಮ್ಮಂಗೆ promise ಮಾಡಿದ್ದೆ. ಆದರೆ ನನ್ನ ಕಾಲಿಗೆ ಬರುತ್ತಿದ್ದ ಸಣ್ಣ ಸಣ್ಣ ಅಲೆಗಳು ನನ್ನ ಕಾಲಿಗೆ ಕಚಗುಳಿಯನ್ನಿಟ್ಟು ಕೀಟಲೆ ಮಾಡಿದವು !! ಲೋಕವನ್ನೇ ಮರೆಯುವ ಹಾಗೆ ಮಾಡಿದವು. ನನ್ನ ಸ್ನೇಹಿತೆಯರು ನಡೆದು ಮುಂದೆ ಹೋಗುತ್ತಿದ್ದರು. ನೋಡಿದಷ್ಟುದ್ದಕ್ಕೂ ಸಮುದ್ರವೇ !! ಅಪೂರ್ವ !! ರಮಣೀಯ !! ಮನೋಹರ !! ನಂತರ ನಾನೂ ಮೆಲ್ಲನೆ ನಡೆದು ನನ್ನ ಸ್ನೇಹಿತೆಯರನ್ನು ಸೇರಿಕೊಂಡೆ. shadow photographs ಮತ್ತು " foot prints on the sands of penambur", ಮುಂತಾದ ಮಹತ್ಸಾಧನೆಗಳ ನಂತರ ಆಟೋ ಲಿ ಮನೆ ತಲುಪಿದೆವು.ನಮಗೆ ಮಂಗಳೂರು ಬಿಡಲು ಮನಸ್ಸೇ ಇರಲಿಲ್ಲ...ಆದರೆ ಬೇರೆ ವಿಧಿಯೇ ಇರಲಿಲ್ಲ. ಎರಡು ದಿನಗಳಲ್ಲಿ ನಾವು ಇಷ್ಟೆಲ್ಲ ಜಾಗಗಳನ್ನ ನೋಡಿ ಬಂದಿದ್ದು ಮಂಗಳೂರಿನವರ ಪ್ರಕಾರ ಮಹತ್ಸಾಧನೆ !! ನಮಗೆ ಪರಮಾನಂದ !! ಎಲ್ಲರಿಗೂ bye ಹೇಳಿ taxi ಲಿ station ತಲುಪುವ ವೇಳೆಗೆ traffic jam !!

Z : what ????? !!!! ಮಂಗಳೂರಲ್ಲಿ traffic jam ಆ ?

ನಾನು : ಹು !! unbelievable, but true !! ೭.೪೦ ಕ್ಕೆ train. naavu 7.25 ಆದ್ರೂ station ತಲುಪಲಿಲ್ಲ. jab we met case ಆಗಬಹುದೆಂದು ನಾವು ಅಂದುಕೊಂಡೆವು. ಆದರೆ ೭.೩೫ ಗೆ station ತಲುಪಿ ನೋಡಿದರೆ ..exact jab we met ಥರ passage seat !!! unfortunately for us, ಯಾವ shahid kapoor - ಊ ನಮ್ಮೆದುರು ಇರ್ಲಿಲ್ಲ !! train ಹೊಸದಾಗಿತ್ತಾದ್ದರಿಂದ ಶುಚಿಯಾಗಿತ್ತು. ಆದರೆ berth ಗಳು ಹತ್ತಲು ಕಷ್ಟ ಪಡಬೇಕು. ನಾವಿಬ್ಬರೂ ಅದಕ್ಕೆ ready ಇರಲಿಲ್ಲ.TC annu ಕೇಳಿ ಹಿಂದಿದ್ದ lower berth ಗೆ ನನ್ನ ಸ್ನೇಹಿತೆ shift ಆದಳು. ನಾವು aunty ಕೊಟ್ಟ ಚಪಾತಿಯನ್ನು ತಿಂದು,ನಮ್ಮ ನಮ್ಮ berth ಗೆ ತೆರಳಿದೆವು. ಮಹಾದರ್ಶನ ಕಾದಂಬರಿಯಲ್ಲಿ ಕೆಲ ಕಾಲ ತಲ್ಲೀನಳಾಗಿದ್ದೆ. ಮುಸುಕು ಹೊದ್ದಿ ಮಲಗಿದ್ದೆ.ಆದರೆ ನಂಗೆ ನಿದ್ದೇ ನೆ ಬರ್ಲಿಲ್ಲ. ಕನ್ನಡಕ ಬ್ಯಾಗ್ ನಲ್ಲಿ ಅತೀ ಜೋಪಾನವಾಗಿ ಇಟ್ಟಿದ್ದ ಕಾರಣ ಮತ್ತೆ ಹುಡುಕಿದರೂ ಅದು ಸಿಕ್ಕಲಿಲ್ಲ,even with lights on !! ಆದ್ದರಿಂದ ನನಗೆ ರಾತ್ರಿಯಲ್ಲಿ ಪಶ್ಚಿಮ ಘಟ್ಟಗಳ ಸೌಂದರ್ಯ ಕಾಣಲಿಲ್ಲ !! ಹಾಗೇ ಯಾವಾಗಲೋ ಮಂಪರು ಹತ್ತಿತ್ತು. ಮೈಸೂರು ನಿಲ್ದಾಣದಲ್ಲಿ ರೈಲು ಬಹಳ ಕಾಲ ನಿಂತಿತ್ತಾದ್ದರಿಂದ ನನಗೆ ಎಚ್ಚರವಾಯ್ತು. ಆಮೇಲೆ ರಾಮನಗರದಲ್ಲಿ ಅರ್ಧ ಗಂಟೆ ನಿಲ್ಲಿಸಿ, ಕಡೆಗೂ ಬೆಂಗಳೂರು ತಲುಪಿತು. ನಾವು ಓಕಳಿಪುರಮ್ ಬಳಿ ಇಳಿದಿದ್ದೇವೆ ಎಂದು ತಿಳಿಯುವಷ್ಟರಲ್ಲಿ ಅರ್ಧ ಗಂಟೆಯಾಗಿತ್ತು. ನಮ್ಮ ತಂದೆಗೆ ಫೋನಿಸಿ ಅಲ್ಲಿಗೇ ಬರಲು ಹೇಳಿ ಕಾರಲ್ಲಿ ಮನೆಗೆ ತಲುಪಿದೆವು. ಮಂಗಳೂರಿನ ವರ್ಣನಾತೀತ ಅನುಭವಗಳನ್ನು ಮನಸ್ಸೆಂಬ ಬೃಹತ್ ಹಾಳೆಯ ಮೇಲೆ ವರ್ಣಮಯವಾಗಿ ಚಿತ್ರಿಸಿ, ಅದರ ನೆನಪಿನಲ್ಲೇ ಮನೆಗೆ ಹೊರಟೆವು.

Z : ವಾಹ್ !! nice !! very nice !! ಮಂಗಳ ಹಾಡೋಣವಾ ? " ಇತಿ ನಾನು + zindagi ವಿರಚಿತ zindagi calling ಪುರಾಣೇ ವಾಹ್ !! ಮಂಗಳೂರು !! ನಾಮ ಅಧ್ಯಾಯ: ಸಂಪೂರ್ಣಮ್ " !!

8 comments:

ಅಂತರ್ವಾಣಿ said...

dEvaru thumbaa buddivantha.!!!
neevu St. Aloysius chapel nnu nODali antha nimage naalku kaNNugaLu koTTirOdu. ;-)

Srinivasa Rajan (Aniruddha Bhattaraka) said...

shubham.... :-) elli, ellaru eddu nintkoLLi... aarti aagutte eega :p

btw, chennagittu nimmellara trip-u... enjoy maaDi

Parisarapremi said...

ಮಂಗಳೂರಿನಲ್ಲಿ ಟ್ರಾಫಿಕ್ ಜ್ಯಾಮ್ ಆದ್ರೆ ಅದು ಅನ್‍ಬಿಲೀವಬಲ್ ಯಾಕೆ?

Lakshmi Shashidhar Chaitanya said...

@jayashankar : :-)

@ GB : aarti eddu nillOdu yeShtu mukhya nO dakshine haakOdu ashtE mukhya !! elli duddu ? ;-)

@ PP : mangalore nalli bengaloorashtu vehicles illa pp...bengaloorige compare maadidre enenu illa. adakke traffic jam aadaaga namage nambakke aaglilla !:O

Parisarapremi said...

ಹಾಳು ಹಾದಿಯ ಹಿಡಿದು ಹೊರಟಿದೆ ಮಂಗಳೂರೂ ಸಹ.

Sridhar Raju said...

chennagittu nim mangaLore trippu.... travelogue baryakke hosa aayaama... :-) heege innellaadru pavadisidre illi iLsi..oodtheeni....Bye bye.... :-)

Shrinidhi Hande said...

I am scheduled to travel in Bangalore-Mangalore train this 16th...

PaLa said...

ಅಷ್ಟು ಹತ್ರ ಇದ್ರೂ ಮಂಗ್ಳೂರಲ್ಲಿ ನಾನೇ ಇದನ್ನೇಲ್ಲಾ ನೋಡಿಲ್ಲ, ಈಗ ನೋಡಿದ ಹಾಗೆ ಆಯ್ತು. ನಿಮ್ಮ ಸಮುದ್ರಾನುಭವ ಚೆನ್ನಾಗಿ ಬರ್ದಿದೀರ.
ಮತ್ತೆ ಬೆಂಗ್ಳುರು ಮಂಗ್ಳೂರು ಟ್ರೈನ್ ರೂಟ್ ಮಿಸ್ ಮಾಡ್ಕೊಂಡಿದ್ದಕ್ಕೆ ವಿಷಾದ. ತುಂಬಾ ಚೆಂದದ ಸೀನರಿಗಳಿದ್ವು.
ನಾನು ೨೦೦೬, ನನ್ನ ಕ್ಯಾಮರಾ ತಗೊಂಡ ಹೊಸತ್ರಲ್ಲಿ ಅಲ್ಲಿಗೆ ಚಾರಣಕ್ಕೆ ಹೋಗಿದ್ದೆ. ಎಡಕುಮೇರಿಯಿಂದ ಸುಬ್ರಮಣ್ಯದವರೆಗೂ ಸುಮಾರು ೨೬ ಕಿ.ಮಿ. ಕೆಲವು ಫೋಟೋ ಇಲ್ಲಿವೆ: http://picasaweb.google.co.in/palachandra/Edakumeri#

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...