Thursday, February 14, 2008

ಬರಬಾರದೇ ?

ನಾನು : ಇವತ್ತು ಒಂದು ಕವನ ಬರೀಬೇಕು ಅಂತ ಅಂದುಕೊಂಡಿದಿನಿ.

Z : ಓದುಗರೇ ಒಂದು ಮುನ್ನೆಚ್ಚರಿಕೆ. amrutaanjan, aspirin, ನೀರು ಇವು ಮೂರನ್ನೂ ನಿಮ್ಮ ಬಳಿ ಇಟ್ಟುಕೊಳ್ಳದೇ ಖಂಡಿತ ಮುಂದಕ್ಕೆ ಓದಬೇಡಿ !!ಆಮೇಲೆ ನಾನು warn ಮಾಡಲಿಲ್ಲ ಅಂತ ಬೈಬೇಡಿ !!

ನಾನು : you are such a cynic !! ಜೀವನದಲ್ಲಿ first time, ಅದೂ valentine's day ದಿನ ಕವನ ಬರಿಬೇಕು ಅಂತ ಅನ್ನಿಸಿತಪ್ಪ....try ಮಾಡೋದ್ರಲ್ಲಿ ಏನ್ ತಪ್ಪು ?

Z : ನಿಮ್ಮಂಥ head ruled people ಗೆಲ್ಲಾ ಆಗೊಲ್ಲ ಕವನ ಕವಿತೆ ಬರೆಯೋದು ಎಲ್ಲ !! ಅದಕ್ಕೆ ಹೃದಯ ಬೇಕು ಹೃದಯ !! ನೀನೋ...ಹೃದಯದ ಯೋಚನೆಗೆಳಿಗೆ 7 lever navtal lock ಹಾಕಿದ್ದೀಯ.ಭಾವನೆಗಿಂತ ನಿನಗೆ ಕರ್ತವ್ಯ ಮುಖ್ಯ. Heart is an organ that pumps blood. Dont make it think ...It strains it !! ಅಂತೆಲ್ಲ ವಾದಿಸುವವಳು. ತೊಂದ್ರೆ ತಗೋಬೇಡ...ನಿನ್ನ ಕೈಯಲ್ಲಿ ಕವನ ಬರೆಯೋಕೆ ಆಗೊಲ್ಲ. ಪ್ರೀತಿ ಪ್ರೇಮ ಪ್ರಣಯದ ಬಗ್ಗೆ ಅಂತೂ...chance-ಏ ಇಲ್ಲ !!!

ನಾನು : ಆಯ್ತಾ ? ಮುಗಿತಾ ? ಇನ್ನು ನಿಶ್ಶಬ್ದ. ಇವತ್ತು ಬೀಗ ತೆಗಿತಿನಿ. ನೋಡೋಣ ಅದು ಏನಾಗತ್ತೋ !

ಹೊಂಗಿರಣ ನೀ ಬಾರದೇ
ಈ ಮನಕಮಲವು ಅರಳದು.
ವರಶಿಲ್ಪಿ ನೀ ಉಳಿಯಿಡದೇ
ಈ ಕಲ್ಲು ಶಿಲೆ ಆಗದು.

ನಿನ್ನ ದೃಷ್ಟಿ ಬೀಳದೇ
ನನ್ನ ಬದುಕು ವ್ಯರ್ಥವು.
ನಿನ್ನ ಒಲುಮೆಯಿಂದಲೇ
ಬಾಳಿಗೊಂದು ಅರ್ಥವು.

ನನ್ನೀ ಪ್ರೀತಿ ಲತೆಗೆ
ನೀನೆ ತಾನೆ ಆಸರೆ ?
ಇನ್ನೆಷ್ಟು ದಿನ ನಾನಾಗಲಿ
ಕಹಿ ವಿರಹದ ಕೈಸೆರೆ ?

ಕಾದಿದೆ ನನ್ನ ಮನದಾಗಸ
ಶಿಖಿ ನಿನ್ನ ಬೆಳದಿಂಗಳಿಗೆ !
ನಿನ್ನ ದರ್ಶನ ಭಾಗ್ಯವದು
ಎಂದುಂಟೋ ಈ ಕಂಗಳಿಗೆ ?

ಬಸವಳಿದು ಹೋದೆ ನಾನು
ನಿನ್ನ ಮೊಗವ ನೋಡದೇ..
ಉಸಿರು ಉಡುಗಿ ಹೋಗುವ ಮುನ್ನ
ಒಮ್ಮೆಯಾದರೂ ಬರಬಾರದೇ ?

ಜಿಂದಗಿ ??? ಜಿಂದಗಿ ?? ...ಮಾತಾಡದೇ ಎಲ್ಲೋ ತಪ್ಪಿಸಿಕೊಂಡಿದ್ದಾಳೆ ಕಳ್ಳಿ!!ಅವಳು ಸಾವರಿಸಿಕೊಂಡು ಬರುವ ವರೆಗೂ...line on hold !

14 comments:

Parisarapremi said...

z ಕಳ್ದೋಗಿರ್ಬೇಕು!!

ಸೊಗಸಾಗಿದೆ ಕವನ...!! :-)

ವರಶಿಲ್ಪಿ ಅಂತ ಬರೆದಿರೋದು ಸ್ವಲ್ಪ ನಗು ತರ್ಸ್ತು. 'ವರ' ಪದದ ಅರ್ಥ ನಮ್ಮಲ್ಲಿ ಬೇರೆ ರೀತಿಯಲ್ಲಿ ಬಳಕೆಯಿದೆ ಅದಕ್ಕೆ.

ಅತ್ಯುತ್ತಮ ಪ್ರಯತ್ನ. ಏನು ಎಲ್ಲರೂ ಒಬ್ಬರಾದಮೇಲೊಬ್ಬರು ಸೂಪರ್ ಕವನಗಳನ್ನು ಬರೀತಾ ಇದ್ದೀರ.. ಗುಡ್ ಗುಡ್..

Parisarapremi said...

z ಕಳ್ದೋಗಿರ್ಬೇಕು!!

ಸೊಗಸಾಗಿದೆ ಕವನ...!! :-)

ವರಶಿಲ್ಪಿ ಅಂತ ಬರೆದಿರೋದು ಸ್ವಲ್ಪ ನಗು ತರ್ಸ್ತು. 'ವರ' ಪದದ ಅರ್ಥ ನಮ್ಮಲ್ಲಿ ಬೇರೆ ರೀತಿಯಲ್ಲಿ ಬಳಕೆಯಿದೆ ಅದಕ್ಕೆ.

ಅತ್ಯುತ್ತಮ ಪ್ರಯತ್ನ. ಏನು ಎಲ್ಲರೂ ಒಬ್ಬರಾದಮೇಲೊಬ್ಬರು ಸೂಪರ್ ಕವನಗಳನ್ನು ಬರೀತಾ ಇದ್ದೀರ.. ಗುಡ್ ಗುಡ್..

Bhargava said...

Amrutanjan, Aspirin enu illade odi mugiside. Thumba chennagi kavanisiddiri.

Jayashankar said...

ನಿಮ್ಮ ಮೊದಲ ಪ್ರಯತ್ನ ತುಂಬಾ ಚೆನ್ನಾಗಿದೆ. ಹೀಗೆ ಮುಂದುವರಿಸಿ.

Srikanth - ಶ್ರೀಕಾಂತ said...

ಸುರಸುಂದರಾಂಗನವ ಸೋತು ಬರುವನು
ಸೊಗಸಾದ ಈ ಕವಿತೆಯನ್ನೋದಲು!
ದರುಶನವು ಮಾತ್ರವೇನೆಲ್ಲವನು ಕೊಡುವನು
ಸೊಗಸಾದ ಈ ಕವಿತೆಯನ್ನೋದಲು!

Sridhar said...

modala kavana praytnadalle zindagi na vodd odsbitrallri...... ;-)
oLLe kavana.... super -u...

Sridhar said...

puLak antha ond doubt banthu...
ಕಹಿ ವಿರಹದ ಕೈಸೆರೆ ?
virahadalli kahi sihi antha iratta???
quick re-comment is highly appreciated -u....

ಗಂಡಭೇರುಂಡ said...

modala prayatnakke idu bahaLa chennagide.. tumba chennagide.. bahaLa sogasaagide.. :-) heege bareetaa iramma.. Odi tumba khushi aaytu..

arun heLdhaage elru ee sala (actually, ee onde dinadandu) oTTige kavana bardbiTTidivi.. ha ha.. super-u.. elru heege continue maaDbodalla? :D

Anonymous said...

ಕಾದಿದೆ ನನ್ನ ಮನದಾಗಸ
ಶಿಖಿ ನಿನ್ನ ಬೆಳದಿಂಗಳಿಗೆ !
ನಿನ್ನ ದರ್ಶನ ಭಾಗ್ಯವದು
ಎಂದುಂಟೋ ಈ ಕಂಗಳಿಗೆ

wowwwwwwww varnAthithavAgidhe the above 4 lines kane omme summane kannumuchkondu yAvdo lokakke hogbittide i lines odhi thank u so much ma for taking me to another world for almost 10 min

super duper che che no words to express bidu

keep writing!

ithi sahye
pushpa

Lakshmi S said...

@ ಎಲ್ಲರಿಗೂ : ನೀವು ನನ್ನ ಮೊದಲ ಕವನಕ್ಕೆ ಕೊಟ್ಟ ಈ ಅಭೂತಪೂರ್ವ ಪ್ರೋತ್ಸಾಹಕ್ಕೆ ನಾನು ತುಂಬಾ ಕೃತಜ್ಞಳು !!

@PP : thanks !! nimma "vara" da artha nange gottu ;-)...but idu bere !!!

@bhargava : good. zindagi maatu kelade olle kelsa maadidri !!

@srikanth : nimma ee kavana superr-u !! nimma kavanada haaraike aadashtu bega nijavaagali !! ;-)

@jayashankar : thanks ri !!

@sridhar : thanks so much karmakaanda prabhugaLe....Z na naanu odisalilla...avaLE odi hOdalu !! Its not my fault appa !! ;-)

ri...viraha yaavattu kahi ne ri...yaakandre adu manassige ruchisodilla nodi !! ;-)

@ GB : thanks ri...tumbaa thanks !! nimagellarigu khushi aaytu andre nangu khushi ne !! :)

PP heLida haage khaNditaa maadabahudu naavu. hegu namma naadu team valentine's day dina ottige kavanagaLannu baredu record sthaapisi aagide !! Let us see how we can continue and maintain it !!

@pushpalatha : thanks maa...nan kavana ee thara ella trance ge ElkoNd hogatte janaranna antha nange gotte irlilla !! I am honoured !!

ಶ್ರೀನಿಧಿ.ಡಿ.ಎಸ್ said...

ellaroo kavanad mel kavana bareetidarallapa!:) chanagide kavana, expecting more from u!

ಸುಶ್ರುತ ದೊಡ್ಡೇರಿ said...

ವ್ಹೋವ್! ಸೂಪರ್ರಾಗ್ ಬರ್ದಿದೀಯಾ.. ಮೊದಲ ಕವನಾನೇ ಇಷ್ಟ್ ಚನಾಗ್ ಬರ್ದಿದೀಯಾ ಅಂದ್ಮೇಲೆ ಇನ್ನು ಮುಂದಿನ್ ಕವನಗಳೂ... ಹ್ಮ್, ಕಂಟಿನ್ಯೂ!

Lakshmi S said...

@ srinidhi and sushrutha :

nimma commentugaLAnnu padedu nanna blog paavanavaaytu !! Thank you soooooo much !! nimma busy schedule gaLa madhyadalli nanna putta kavanada mele krupaadrushTi beeriddakke !!

rohini said...

Lakshmi tumaba tumba iSTa aaitu nange neen bardiro kavana..Manada bhAvanegaLanna padagaLalli heLalikkaagade oddADtirorige uttamavaad dAri kalpisi koTTiddiya..soooooper kaNe;-)
Heege barita iru..:-)

Rohini

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...