Z : ಏನಿದು ಸಡನ್ ವೈರಾಗ್ಯ ? !
ನಾನು : ಗೊತ್ತಿಲ್ಲ...
Z :ಯಾಕೆ ಹಿಂಗಾಗೋಗಿದ್ಯಾ...
ನಾನು : ಯಾಕೋ ಹಿಂಗೆ ಅನ್ಸಕ್ಕೆ ಶುರುವಾಗೋಗಿದೆ.
Z :ಅದೆ ಯಾಕೆ ಅಂತ.
ನಾನು : ಇವತ್ತ್ ಏನಾಯ್ತಪ್ಪ ಅಂದ್ರೆ...ಸಾಯಂಕಾಲ ನಾನು ನನ್ನ ರೂಮಲ್ಲಿ "ನಾಯಿ ನೆರಳು" ಪುಸ್ತಕ ಓದೋಣ ಅಂತ ಒಳಗೆ ಬಂದೆ. ಸಿಕ್ಕಾಪಟ್ಟೆ ಸೆಖೆ ಅಂತ ಕಿಟಕಿ ತೆಗೆದೆ.
Z : ಸರಿ. ಮುಂದೆ ?
ನಾನು : ಮನೆಯ ಹಿಂದಿನ ರಸ್ತೆಯಲ್ಲಿ ಒಂದು ತೆಂಗಿನ ಮರ ಇದೆ. ಇತ್ತೀಚೆಗೆ ಅಲ್ಲಿ ಹದ್ದುಗಳ ವಾಸ ಶುರುವಾಗಿದೆ.
Z : ತೆಂಗಿನಮರದ ಮೇಲೆ ಹದ್ದುಗಳಾ ?
ನಾನು : yes. strange, but true. ಪ್ರತಿದಿನ ಸಾಯಂಕಾಲ ಮೂರು ಹದ್ದುಗಳು ಬರತ್ವೆ...around 6 pm.
Z : ಅದಕ್ಕೆ ?
ನಾನು : ಸರಿ ಇವುಗಳ ಫೋಟೋ ತೆಗೆಯಬೇಕು ಅಂತ ನನಗೆ ಬಹಳ ದಿನಗಳಿಂದ ಆಸೆ ಇತ್ತು. ಇವತ್ತು ಅದನ್ನ ಪೂರೈಸಿಕೊಳ್ಳೋ ಆಸೆ ಆಗಿ ಪುಸ್ತಕ ಮುಚ್ಹಿಟ್ಟು ಕ್ಯಾಮೆರಾ ತಗೊಂಡು ಸೀದಾ ಟೆರೇಸಿಗೆ ಓಡಿದೆ.
Z : ಹ್ಮ್ಮ್ಮ್...
ನಾನು : ಅಷ್ಟೊತ್ತಿಗೆ ಎರಡು ಹದ್ದುಗಳು ಪರಾರಿ.
Z : sad.
ನಾನು : ಸಾಯಂಕಾಲ ಬೇರೆ.ಲೈಟಿಂಗ್ ಕೈ ಕೊಡ್ತಿತ್ತು...ಪೂರ್ತಿ zoom ಮಾಡಿದರು ಚಿತ್ರ ನೆಟ್ಟಗೆ ಬರುವುದು ಡೌಟಾಯ್ತು. ಆದರೂ ಸಿಂಗಲ್ ಹದ್ದುವಿನ ಚಿತ್ರ ತೆಗೆದೆ. ಆದರೆ ಕಾಗೆಗೂ ಅದಕ್ಕೂ ವ್ಯತ್ಯಾಸವೇ ಕಾಣಲಿಲ್ಲ.
Z : ಹೆಹೆ !
ನಾನು : ನಗಬೇಡ. ಅನ್ಯಾಯ ಆಯ್ತಲ್ಲ ಅಂತ ವಾಪಸ್ ಹೊರಡಲು ರೆಡಿಯಾದೆ. ಅಷ್ಟೊತ್ತಿಗೆ ನನಗೆ ಒಂದು ದೃಶ್ಯ ಕಣ್ಣಿಗೆ ಕಂಡಿತು. ಪೇಪರ್ ಆಯುವ ಹೆಂಗಸೊಬ್ಬಳು ಬಂದು ತನ್ನ ಮಗುವನ್ನ ಕೆಳಗಿಳಿಸಿ ಬಿದ್ದಿದ್ದ cartons ನ ತೆಗೆದುಕೊಳ್ಳಲು ಶುರು ಮಾಡಿದಳು. ನಾನು ಅವಳನ್ನು ಹಾಗೇ ನೊಡುತ್ತಾ ನಿಂತೆ. ಯಾರಾದರು ಬೇರೊಬ್ಬರು ಬಂದು ಅದನ್ನ ತೆಗೆದುಕೊಳ್ಳಬಹುದು, ಇವಳು ಮಗುವನ್ನ ಕರೆದುಕೊಂಡು ಹೋಗಬಹುದು ಎಂದು ಅತ್ತಿತ್ತ ನೋಡಿದೆ. ಉಹೂ...ಯಾರೂ ಇಲ್ಲ.
Z : interesting...ಆಮೇಲೆ ?
ನಾನು : ಅವಳು ತನ್ನ ತಲೆಯ ಮೇಲೆ ಎಲ್ಲ ಪೇರಿಸಿಕೊಂಡು ಮಗುವನ್ನು ಎತ್ತಿಕೊಳ್ಳುವ ಹೊತ್ತಿಗೆ ಅವೆಲ್ಲ ಅವಳ ತಲೆಯಿಂದ ಬಿದ್ದುಹೋಯ್ತು.
Z :ಪಾಪ.
ನಾನು : ಮಗು ಅಳಲು ಶುರುಮಾಡಿತು. ಇವಳು ಅದಕ್ಕೆ ಸಮಾಧಾನ ಮಾಡಿದಳು. ನನಗೆ ಇವಳು ಇಷ್ಟೆಲ್ಲಾ ಸಾಮಾನನ್ನ ಹೇಗೆ ಹೊರುತ್ತಾಳೆ ನೊಡಬೇಕೆಂಬ ಆಸೆ ಆಯ್ತು. Involuntarily, ನನ್ನ ಕೈ ನನ್ನ ಕ್ಯಾಮೆರಾವನ್ನು video mode ನಲ್ಲಿ ಇಟ್ಟು ವಿಡಿಯೋ ತೆಗೆಯಲು ಪ್ರಾರಂಭಿಸಿತು.
Z : ನಿನ್ನ ಕೈಗೆ ಕ್ಯಾಮೆರಾ ಬಂದಿದ್ದೇ ದೊಡ್ಡ ತಪ್ಪು.ಅದು ಬಂದ ಮೇಲೆ ನನ್ನ ಬಗ್ಗೆ ಒಂದು ಚೂರು attention ಕೊಡಲ್ಲ ನೀನು !
ನಾನು : ಹೊಟ್ಟೆ ಉರ್ಕೊಳ್ಳೋದು ಬಿಟ್ಟು ಮೊದಲು ವಿಡಿಯೋ ನೋಡು.
Z : ಹ್ಮ್ಮ್....
ನಾನು : ನನಗೆ ಒಂದು ಕ್ಷಣ ಎಲ್ಲರ ಜೀವನಾನೂ balancing act ಅಲ್ಲದೇ ಮತ್ತಿನ್ನೇನು ಅನ್ನಿಸಿಬಿಡ್ತು.
Z : ತ್ಚು ತ್ಚು ತ್ಚು....
ನಾನು : ಆಯ್ತ ಲೊಚಗುಟ್ಟಿದ್ದು ?
Z : ಹೂಂ...continue.
ನಾನು : ಅವಳು ಡಬ್ಬಗಳನ್ನ balance ಮಾಡ್ತಿದ್ಲು..ನಾವು ಜೀವನದಲ್ಲಿ ನಮ್ಮ priorities, requirements and commitments ನ balance ಮಾಡ್ತಿದಿವಿ ಅಲ್ವಾ ?
Z : ಒಹ್ಹೋ....ಇದು ನೀನು ಈ ರೂಟ್ ನಲ್ಲಿ ಬರ್ತಿದ್ಯಾ ?
ನಾನು : ಹೂಂ...
Z : ನಿಜ. life is all about maintaining balance...including bank balance !
ನಾನು : ಹೆಹೆಹೆ ! ನಾನು ಹೇಳಿದ್ದು ಹಂಗಲ್ಲ...
Z : ಗೊತ್ತು...ನಾನು ಸುಮ್ಮನೆ ಹೇಳ್ದೆ ಅಷ್ಟೆ. ನೀನು ಮುಂದುವರೆಸು.
ನಾನು : ನಾನು ಹಂಗೇ ಯೋಚನೆ ಮಾಡತೊಡಗಿದೆ. ಮುಂದೆ ನಾನು ಏನೇನೆಲ್ಲಾ balance ಮಾಡ್ಬೇಕಾಗತ್ತೆ..ಮನೆ, ಕೆಲಸ, ರಿಸರ್ಚು, ಬ್ಲಾಗು..ಯೋಚನೆ ಮಾಡ್ತಾ ಮಾಡ್ತಾ mild ಆಗಿ ಭಯ ಆಯ್ತು.
Z : ಎಷ್ಟಿತ್ತು Richter scale ನಲ್ಲಿ ?
ನಾನು : ನಾನು ಭೂಕಂಪ ಆಯ್ತು ಅಂದೆನಾ ? Richter scale ಅಂತೆ !
Z : ಭಯ ಆದ್ರೆ ಜನ ನಡುಗುತ್ತಾರೆ. ಭೂಮಿ ನಡುಗುವುದನ್ನ ಅಳೆಯುವುದಕ್ಕೆ ಮಾಪಕ ಇದೆ ಅಂತ ಆದ್ರೆ, ಮನುಷ್ಯರ ಭಯ ಅಳೆಯಲು ಅದನ್ನೇ ಬಳಸಬಾರದೇಕೆ ?
ನಾನು : ತಾಯಿ ಜಗಜ್ಜನನಿ ದುರ್ಗಾಪರಮೇಶ್ವರಿ !!!!!!!!!! Z..ದಯವಿಟ್ಟು ನಿನ್ನ ಅದ್ವಿತೀಯ ತಲೆ ನ ಉಪಯೋಗಿಸುವುದನ್ನ ನಿಲ್ಲಿಸುತ್ತೀಯಾ ?
Z : ಯಾಕೆ ?
ನಾನು : ಲೋಕದ ಆರೋಗ್ಯಕ್ಕೆ ಒಳ್ಳೆದಲ್ಲ.
Z : ಓಹ್...ಹೋಗ್ಲಿ ಬಿಡು..ಏನೋ ಪಾಪ ನೀನು ಕೇಳ್ತಿದ್ದೀಯಾ ಅಂತ ನಾನು ತಲೆ ಉಪಯೋಗಿಸೊಲ್ಲ.
ನಾನು : ಧನ್ಯೋಸ್ಮಿ. ಒಟ್ಟಿನಲ್ಲಿ ಮುಂದಿನ balancing act ನೆನಸಿಕೊಂಡು ಈಗಲೆ ತಲೆ ಭಾರವಾಗಿದೆ.
Z : Physics ಓದಿದ್ಯಲ್ಲಾ..ಉಪಯೋಗಿಸು ಅದನ್ನ. ಕಲಿ balance ಮಾಡೋದನ್ನ...ಅಷ್ಟೇ !
ನಾನು : ಕಷ್ಟ !
Z :ಅಸಾಧ್ಯ ಅಲ್ವಲ್ಲ...ನಿಧಾನಕ್ಕೆ ಎಲ್ಲಾ ಸಿದ್ಧಿಸತ್ತೆ. ನೀನು impatience ನ ಸ್ವಲ್ಪ ಕಡಿಮೆ ಮಾಡಿಕೊಂಡರೆ ಆಯ್ತು.
ನಾನು : :-(
Z :ಹ್ಯಾಪ್ ಮೋರೆ ಹಾಕೊಂಡ್ರೆ ಏನೂ ಪ್ರಯೋಜನ ಇಲ್ಲ.
ನಾನು : ಹಂಗಂತಿಯಾ ?
Z :ಹೂಂ..
ನಾನು : ಓಕೆ. balance ಮಾಡೋಕೆ, ಖುಷಿಯಾಗಿ ಇರೋಕೆ ಪ್ರಯತ್ನ ಪಡ್ತಿನಿ.
Z : :-)
ಜೀವನದೊಂದಿಗಿನ ನಮ್ಮ ಮಾತು lifetime ! ಇದರಲ್ಲಿ incoming -ಊ free outgoing -ಊ free !
ನನ್ನ ज़िंदगीಯೊಂದಿಗಿನ nonstop ಗುಸುಗುಸುವನ್ನು ಇಲ್ಲಿ ಬಿಚ್ಚಿಟ್ಟಿದ್ದೇನೆ.
Subscribe to:
Post Comments (Atom)
ಉತ್ತರಾಯಣ ೩
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ನಾನು : There is always a next time. Z : ಹೌದಾ ? ನಾನು : ಹೌದು. Z : ಪ್ರತೀ ಸಲವೂ ಹೀಗೆ ಆದರೆ ಗತಿಯೇನು ? ನಾನು : ಅದಕ್ಕೆ ನಿನ್ನ pessimistic ಅಂತ ಬೈಯ್ಯ...
-
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಬ್ಲಾಗಿನ ಹುಟ್ಟು ಹಬ್ಬ ಮತ್ತು ಹೊಸ ವರ್ಷ ಯಾವಾಗ್ಲು ಒಟ್ಟಿಗೆ ಬರತ್ತೆ. ಆದರೆ, ಮತ್ತೆ ಅದೇ flash back ಗೆ ಹೋಗಿ, ಅದೇ ...
5 comments:
balancing ಬಗ್ಗೆ ಯಾಕೆ ಕೇಳ್ತೀಯಮ್ಮ...
ವಿಪರೀತ ಕೆಲಸಗಳು ಇರುತ್ತವೆ. ಎಲ್ಲಾ balance ಆಗಬೇಕು.. ಈ ನಡುವೆ..bank balance ಕಡಿಮೆ ಆಗ್ತಾಯಿದೆ...ಹಳ್ಳಕ್ಕೆ ಬಿದ್ದಿದ್ದಕ್ಕೆ.. :)
ಹುಂ. ಎಲ್ಲರ ಜೀವನನೂ ಇಷ್ಟೇ .
ಇದೇ ಘಟನೆ ಹಳ್ಳೀಲಿ ನಡೆದಿದ್ರೆ, ನೋಡಿದೋರು ವೀಡಿಯೋ ತೆಗೆಯುವ ಬದಲಾಗಿ ರಟ್ಟನ್ನ ತಲೆ ಮೇಲೆ ಇಡೋದಕ್ಕೋ, ಮಗುವನ್ನು ಎತ್ತಿಕೊಳ್ಲಿಕ್ಕೋ ಆಕೆಗೆ ಸಹಾಯ ಮಾಡ್ತಾ ಇದ್ರು.
ಹೂಂ ಮತ್ತೆ,,
ಪಾಪ, ಆ ಹೆಂಗ್ಸಿಗೆ ಸಹಾಯ ಮಾಡೋದ್ಬಿಟ್ಟು... ಟೆರೇಸ್ ಮೇಲಿಂದ ಫೋಟೋ....
ಆಕಿಗೆ ಹೇಳ್ತೀನಿ...
I second Pala. ಆದ್ರೆ ಒಂದು modification: "ಹಳ್ಳೀಲಿ ನಡೆದಿದ್ರೆ" ಬದಲು "ಕರುಣೆ ಇರುವವರ ಮುಂದೆ ನಡೆದಿದ್ರೆ" :-P
ಜಯ್: ಹಳ್ಳದ ಹೆಸರೇನು? ನಂಗೆ ಹೇಳೇ ಇಲ್ಲ!!
Post a Comment