Thursday, March 26, 2009

ಸಂವತ್ಸರದ ಹೆಸರೇ ವಿರೋಧಿ ಆಗಿರೋದ್ರಿಂದ...

Z :ಯಾರೋ ಹೇಳಿದ್ರು ಎರಡು ತಿಂಗಳು ಮುಖಾ ತೋರಿಸಲ್ಲಾ ಅಂತೆಲ್ಲಾ...

ನಾನು :ಯಾರು ಹೇಳಿದ್ರು ?

Z :ಯಾರೋ ತಲೆ ಇರೋರು.

ನಾನು :ಪ್ಲೀಸ್...ಆಡ್ಕೋಬೇಡಾ..

Z :ಇನ್ನೇನ್ ಮತ್ತೆ ? ಎಲೆಕ್ಷನ್ ಟೈಮು ಅಂತ ಎಷ್ಟ್ ಚೆನ್ನಾಗಿ ತೋರ್ಸ್ದೆ ನೋಡು...ಹೇಳೋದ್ ಒಂದು, ಮಾಡೋದ್ ಒಂದು.

ನಾನು :ಹಂಗಲ್ಲಾ...ನಾನು ಬರಿಬಾರ್ದು ಅಂತ ನೇ ಇದ್ದೆ.

Z :ಮತ್ತೆ ? ಹೆಂಗೆ ತೋಚ್ತು ಬ್ಲಾಗ್ ಕುಟ್ಟಕ್ಕೆ ?

ನಾನು :ಹೊಸ ಸಂವತ್ಸರದ ಹೆಸರು ವಿರೋಧಿ ಅಂತ.

Z :I see. ಅದಕ್ಕೆ ?

ನಾನು :ಹೊಸ ವರ್ಷನ ಏನನ್ನಾದ್ರೂ ವಿರೋಧಿಸುತ್ತಲೇ ಆರಂಭಿಸಿದರೆ ಅದೊಂಥರಾ different ಆಗಿರತ್ತೆ ಅಂತ ಅನ್ನಿಸಿತು. ಆದ್ದರಿಂದ ನನ್ನ ಮಾತನ್ನೇ ನಾನು ಯಾಕೆ ವಿರೋಧಿಸಬಾರದು ಅನ್ನೋ ಐಡಿಯಾ ತಲೆಯಲ್ಲಿ ಬಲ್ಬಿನ ಥರಾ ಫ್ಲಾಷ್ ಆಯ್ತು ಆದ್ದರಿಂದ, ಅದನ್ನು ಪಾಲಿಸತೊಡಗಿದ್ದೇನೆ. ಇದೇ ನನ್ನ ಹೊಸ ವರ್ಷದ ಸಂಕಲ್ಪ.

Z :ಈ ಐಡಿಯಾ ನ ನಾನು ವಿರೋಧಿಸುತ್ತೇನೆ.

ನಾನು :ಶಭಾಷ್ ! ಇದು ...ಇದು ವಿರೋಧ ಅಂದ್ರೆ.

Z :ರಾಮಾ ! ಏನ್ ಹೇಳೋದು ಈ ಹುಡುಗಿ ಗೆ ?

ನಾನು :ಏನೂ ಹೇಳ್ಬೇಡ. ನೀನು ಏನನ್ನು ಹೇಳಿದರೂ ನಾನು ವಿರೋಧಿಸುತ್ತೇನೆ.

Z : ಸಿಕ್ಕ್ ಸಿಕ್ಕಿದ್ದನ್ನೆಲ್ಲಾ ವಿರೋಧಿಸಬೇಡ್ವೇ !!!!

ನಾನು :ಇಲ್ಲಾ....ವಿರೋಧಿಸಬಲ್ ವಿಷಯಗಳನ್ನ ವಿರೋಧಿಸಬೇಕು ಅಂತ decide ಮಾಡಿದ್ದೇನೆ.

Z : ಯಾವ್ಯಾವ್ದು ವಿರೋಧಿಸಬಲ್ ವಿಷಯಗಳು ?

ನಾನು : ಎರ್ರಾ ಬಿರ್ರಿ price rise, ಆಟೋನವರ ಆಟಾಟೋಪ...ಇತ್ಯಾದಿ ಇತ್ಯಾದಿ.

Z : ಹ್ಮ್ಮ್....

ನಾನು : ನೀನು ಎಲ್ಲಾದಕ್ಕೂ ಹ್ಮ್ಮ್...ಅಂದ್ರೆ ನಾನು ಅದನ್ನೂ ವಿರೋಧಿಸುತ್ತೀನಿ !

Z :ಎಲ್ಲಾದಕ್ಕೂ ಇಲ್ಲ ಅಂದ್ರೆ ಸುಮ್ಮನೆ ಇರ್ತ್ಯಾ ?

ನಾನು :Definitely not. ಅದನ್ನೂ ವಿರೋಧಿಸುತ್ತೇನೆ.

Z :ಮತ್ತೆ ಏನ್ ಮಾಡ್ಬೇಕ್ ನಾನು ? ಅದನ್ನ ಹೇಳೋದಕ್ಕೂ ವಿರೋಧ ಇದೆ ಅನ್ನಬೇಡ...

ನಾನು :ಇಲ್ಲ ಅನ್ನಲ್ಲ. ನಾನು ತುಂಬಾ ಯೋಚ್ನೆ ಮಾಡಿ ಒಂದು ನಿರ್ಧಾರಕ್ಕೆ ಬಂದಿದಿನಿ.

Z : ಬಾ ಬಾ...ಬಲಗಾಲಿಟ್ಟು ಬಾ...

ನಾನು :ಬಂದೆ. ನಿರ್ಧಾರ ಏನಪ್ಪಾ ಅಂದ್ರೆ, ಹದಿನೈದು ದಿನಕ್ಕೊಮ್ಮೆ ಈ ಬ್ಲಾಗನ್ನು ಅಪ್ಡೇಟ್ ಮಾಡ್ಬೇಕು ಅಂತ.

Z :ಇದನ್ನ ನಾನು ವಿರೋಧಿಸುತ್ತೇನೆ. ವಾರಕ್ಕೆ ಒಂದು ಅಪ್ಡೇಟ್ ಬೇಕು.

ನಾನು :ನೋಡೋಣ.

Z :ನೀನು ಎಲ್ಲಾದಕ್ಕೂ ನೋಡೋಣ ಅನ್ನೋದನ್ನ ನಾನು ವಿರೋಧಿಸಲಾ ?

ನಾನು : ಏನನ್ನ ಬೇಕಾದರೂ ವಿರೋಧಿಸಿಕೊಂಡು ಮಜಾ ಮಾಡು.
Happy ವಿರೋಧಿ...I mean ...Happy ಯುಗಾದಿ !

7 comments:

Unknown said...

ಈಗ ನಾನು ಏನನ್ನು ವಿರೋಧಿಸಬೇಕು? :D
ಹೀಗೆ ನೀವು ನಿಮ್ಮ ಜೊತೇನೇ ಮತಾಡೋದನ್ನ ವಿರೋಧಿಸಿದರೆ ಹೇಗೆ? ;)

ಅಂತರ್ವಾಣಿ said...

ಯುಗಾದಿ ಹಬ್ಬದ ಶುಭಾಶಯಗಳು.

abhi said...

ಹೊಸ ಸಂವತ್ಸರದ ಹಾರ್ದಿಕ ಶುಭಾಶಯಗಳು.

bhadra said...

ಹ ಹ ಹ! ಸ್ವಗತ ಬರಹ ಬಹಳ ಸೊಗಸಾಗಿದೆ - ಮನ ಮುದಗೊಂಡಿತು :)

ವಿರೋಧಿ ನಾಮ ಸಂವತ್ಸರವನ್ನು ಒಲಿಸಿಕೊಂಡವರಿಗೆ ವಿರೋಧಿಗಳಿರೋಲ್ಲ [ಅಂತೆ] - ಈ ಸಂವತ್ಸರದಲ್ಲಿ ನಿಮ್ಮ ಏಳ್ಗೆ ದಿಗಂತದೆಡೆಗೆ ಓಡಲಿ ಎಂದು ಸರ್ವಶಕ್ತನಲಿ ಬೇಡಿಕೊಳ್ಳುವೆ

ಒಳ್ಳೆಯದಾಗಲಿ

ಗುರುದೇವ ದಯಾ ಕರೊ ದೀನ ಜನೆ

Shrinidhi Hande said...

Happy Yugaadi...

PaLa said...

ಅದಿಕ್ಕೆ ಎಲ್ಲರ್ ತರ ಯುಗಾದಿ ದಿನ ವಿಷ್ ಮಾಡದೇ ಇವತ್ತು ಮಾಡ್ತಾ ಇದೀನಿ.. ಯುಗಾದಿ ಶುಭಾಷಯ :)

Dynamic Divyaa said...

ond vaarakke ond article - idunna naanu virOdsteeni...
namge salpa time koDe mayaaaaarti.. nin bombaat comedy cum sarcasm na Odi nagakke...
ond vaarakkond kuTkonD hodre hengeeeeee.......

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...