Wednesday, February 11, 2009

ಗುಲಾಬಿ ಟಾಕೀಸ್...ಕಡೆಗೂ ನೋಡಿಯೇಬಿಟ್ಟೆ !

Z : Standing ovation ಕೊಡಿ ಪಾ ಎಲ್ಲಾರು ಈ ಸಾಧನೆ ಗೆ !

ನಾನು :yes ! ಇದು ಸಾಧನೆ ನೆ.

Z : In which dimension and from what angle is this a ಸಾಧನೆ ?

ನಾನು :In 3 dimensions and from all angles (from 0-360 degrees).

Z : ಆಹ...ನೀನೋ....ನಿನ್ನ ತಲೆಯೋ....

ನಾನು :ನೋಡು...ಬೈಬೇಡ. ಇದು ಯಾಕೆ ಇಷ್ಟು ದೊಡ್ಡ ಸಾಧನೆ ಅಂತ ನಾನು ನಿನಗೆ ವಿವರಿಸಿ ಹೇಳಬೇಕಿದೆ.

Z : ಪೇಳ್.

ನಾನು :ಗುಲಾಬಿ ಟಾಕೀಸ್ PVR ನಲ್ಲಿ ಇದ್ದಾಗ ನನಗೆ entrance exam ನ tension ಇತ್ತು. ಅದಕ್ಕೆ ಹೋಗಲಾಗಲಿಲ್ಲ. ನಾನು ಪರೀಕ್ಷೆ ಮುಗಿಸುವ ಹೊತ್ತಿಗೆ ಏನಾಯ್ತಪ್ಪಾ ಅಂದ್ರೆ...

Z : ಅಂದ್ರೆ....

ನಾನು :ಅದು PVR ಇಂದ ಹೊರಬಂತು.

Z : :(

ನಾನು : ನಾನು ಫಿಲಂ ಫೆಸ್ಟಿವಲ್ ಗೆ ಕಾಯುತ್ತಿದ್ದೆ. ಅದು ಫಿಲಂ ಫೆಸ್ಟಿವಲ್ ನಲ್ಲೂ ಬರತ್ತೆ ಅಂತ ಗೊತ್ತಾಯ್ತು.ನಾನು, ರೋಹಿಣಿ ಮತ್ತು ಚಂದ್ರಕಾಂತ ಮೇಡಮ್ ಹೊರಡಲು ತಯಾರಾದೆವು.

Z : :)

ನಾನು :just 3 days before, ಸುಶ್ರುತ ಅವರ ಜೊತೆ ಚಾಟ್ ಮಾಡುವಾಗ ಫಿಲಂ ಫೆಸ್ಟಿವಲ್ ಗೆ ಪಾಸ್ ಬೇಕು ಅಂತ ಗೊತ್ತಯ್ತು.ನಮ್ಮ ಹತ್ತಿರ ಪಾಸ್ ಇರಲಿಲ್ಲ ಮತ್ತು ಅದನ್ನು ಪಡೆಯುವ ಬಗೆಯೂ ನಮಗೆ ಗೊತ್ತಿರಲಿಲ್ಲ ಆದ್ದರಿಂದ ಆ programme drop ಆಯ್ತು.

Z : :(

ನಾನು :ನನ್ನ ಗೋಳಾಟ ಮುಗಿಲು ಮುಟ್ಟಿತು. ಎಲ್ಲಾರು ಚಿತ್ರ ನೋಡುವವರೇ, page ಗಳ ಗಟ್ಟಲೆ review ಬರೆಯೋರೆ. ನಾನು review ಬರೆಯೋ ಅಷ್ಟು ದೊಡ್ಡವಳಲ್ಲ ಆದರೂ..."ನೋಡಿದೆ" ಅಂತ ನಾದ್ರೂ ಒಂದು ರೆಕಾರ್ಡ್ ಬೇಡ್ವಾ ?

Z : ಬೇಕಾ ?

ನಾನು :ಬೇಕು.

Z : ಸರಿ. ಅದಕ್ಕೆ ?

ನಾನು :ಏನಾದ್ರೂ ಮಾಡಿ ಚಿತ್ರ ನೋಡಲೇಬೇಕಲ್ಲಾ ಅಂತ ಹಪಹಪಿಸುತ್ತಿದ್ದೆ ನಾನು...ಆಗ ಗೆಳೆಯರೊಬ್ಬರು ಈಮೈಲ್ ಮಾಡಿದರು.feb 8th ರಂದು ಕೆ. ವಿ.ಸುಬ್ಬಣ್ಣ ಆಪ್ತ ರಂಗ ಮಂದಿರದಲ್ಲಿ ಗುಲಾಬಿ ಟಾಕೀಸಿನ ಎರಡು ಶೋಗಳಿವೆ ಅಂತ ಅವಧಿಯಲ್ಲಿ ಹಾಕಿದ ಜಾಹೀರಾತಿನ ಲಿಂಕನ್ನು ಲಿಂಕಿಸಿದ್ದರು.

Z : ಅರ್ರೆ ವಾಹ್ !!!

ನಾನು :ನಾನು ಎಲ್ಲರಿಗೂ ಫೋನ್ ಮಾಡುವ ಕರ್ತವ್ಯವನ್ನು ಬಹಳ ಕಾಳಜಿ ಇಟ್ಟು ಮಾಡಿದೆ. ರೋಹಿಣಿ ಆಗಲ್ಲ ಅಂದಳು. ಚಂದ್ರಕಾಂತ ಮೇಡಂ ಮತ್ತು ನನ್ನ ನ್ಯಾಷನಲ್ ಕಾಲೇಜಿನ ಪ್ರಾಧ್ಯಾಪಕರೂ ಹಾಗೂ ಚಂದರಕಾಂತ ಮೇಡಮ್ ಅವರ ಪತಿಯೂ ಆಗಿರುವ ಕೆ.ಎಮ್.ಕೆ ಸರ್ ಬರಲು ಒಪ್ಪಿದರು.ಮಧ್ಯಾಹ್ನ ಮೂರುವರೆಯ ಶೋ ಗೆ ಟಿಕೆಟ್ಟು ಸಿಗಲಿಲ್ಲ. ಐದುವರೆಗೆ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಮತ್ತು ಎಸ್ ರಾಮಚಂದ್ರ ಅವರೊಂದಿಗೆ ಸಂವಾದ ಇತ್ತು. ಅದಾದ ಮೇಲೆ ಆರು ಮುಕ್ಕಾಲಿಗೆ ಇನ್ನೊಂದು ಶೋ ಇತ್ತು. ನಾವು ಅದಕ್ಕೆ ಹೊರಡಲು ನಿರ್ಧರಿಸಿಇದೆವು. ನಾನಂತು ಕಾಸರವಳ್ಳಿಯವರನ್ನು ಮುಖತಃ ನೋಡುವೆನೆಂಬ ಖುಷಿಯಲ್ಲಿ ಆಗಲೇ ಮೇಲ್ಗಡೆ ಹೋಟೋಗಿದ್ದೆ.

Z :ಹೆಹೆಹೆಹ್ಹೆ...


ನಾನು :ಹೂಂ !!! I was sooooooo happy ! ಸಂವಾದ ಚೆನ್ನಾಗಿ ನಡೆಯಿತು. ನಾನೇನೂ ಪ್ರಶ್ನೆ ಕೇಳಲು ಆಗಲಿಲ್ಲ...ಯಾಕಂದ್ರೆ ನಾನಿನ್ನೂ ಸಿನೆಮಾ ನೋಡಿರಲಿಲ್ಲ. ಅವರು ಹೇಳಿದ ಅಂಶಗಳನ್ನೆಲ್ಲಾ ಗಮನದಲ್ಲಿಟ್ಟುಕೊಂಡು ನೋಟ್ ಕೂಡಾ ಮಾಡಿಕೊಂಡೆ. ರಾಮಚಂದ್ರ ಅವರ ಫೋಟೋಗ್ರಫಿ ಬಗ್ಗೆ ನನಗೆ ಕುತೂಹಲ ಇನ್ನೂ ಸ್ವಲ್ಪ ಜಾಸ್ತಿ ಆಯ್ತು. ಆರುಮುಕ್ಕಾಲಿಗೆ ಕರೆಕ್ಟಾಗಿ ಚಿತ್ರ ಪ್ರಾರಂಭವಾಯ್ತು.

Z :ನಿನಗೆ ಇಷ್ಟವಾದ ಅಂಶ ಏನು ?

ನಾನು :ಮೌನ, ಬೆಳಕು, ಕತ್ತಲು, ವಸ್ತುಗಳ ಮತ್ತು propsಗಳ ಉಪಯೋಗ ಮತ್ತು ಬೆಕ್ಕು.

Z : ಈ ಬೆಕ್ಕು ಎಲ್ಲಿಂದ ಬಂತು ?

ನಾನು :ಅದು ಚಿತ್ರದಲ್ಲಿ ಇದೆ. ಒಂದೊಂದು ಸ್ಟೇಜ್ ನಲ್ಲೂ ಬೆಕ್ಕು ತನ್ನದೇ ಆದ ರೀತಿಯಲ್ಲಿ ತನ್ನ ಆಗಮನದಿಂದ ಗಮನ ಸೆಳೆಯುತ್ತದೆ....

Z : ....depicting what ?

ನಾನು :impact of globalization.

Z : ಹೇಗೆ ಹೇಳ್ತಿಯಾ ನೀನು ?

ನಾನು :ನೋಡು...ನನಗನ್ನಿಸಿದ್ದು ಇಷ್ಟು. ಪ್ರಾರಂಭದಲ್ಲಿ ಗುಲಾಬಿ ತಾನು ಮಾಡಿದ್ದ ಅಡುಗೆಯನ್ನು ಅವಳ ಸವತಿ ತಿರಸ್ಕರಿಸಿದಾಗ, ಅದನ್ನು ಹೊರಗೆ ಬಿಸಾಕುತ್ತಾಳೆ. ಆಗ ಬೆಕ್ಕು ಬಂದು ತಿನ್ನುತ್ತದೆ. ಇದರ ಅರ್ಥ, ಉದ್ಯಮಗಳು ಮುಕ್ತವಾಗಲು ಪ್ರಾರಂಭವಾಗುತ್ತದೆ.

Z : ಆಮೇಲೆ ?

ನಾನು :ಟೀವಿ ನೋಡುತ್ತಾ ಗುಲಾಬಿ ಆ ಬೆಕ್ಕಿಗೆ ಕೂಡ ಊಟವನ್ನು ನಿತ್ಯ ಹಾಕಲು ಪ್ರಾರಂಭಿಸುತ್ತಾಳೆ. ಇದರ ಅರ್ಥ, ನಾವು ಗ್ಲೋಬಲೈಸೇಷನ್ ನ ಸಾಕಲು ತೊಡಗಿದ್ದೇವೆ.

ನಾನು :ಕ್ಲೈಮಾಕ್ಸ್ ನಲ್ಲಿ ಆ ಬೆಕ್ಕು ರಾಜಾರೋಷವಾಗಿ ಟಿವಿ ಮೇಲೆ ಕೂರತ್ತೆ. ಅಂದರೆ, it starts to rule.ಅನ್ನ ಹಾಕಿದ ದಣಿಯೇ ಇಲ್ಲದ ಮನೆಯಲ್ಲಿ ಹಾಯಾಗಿ ಬದುಕತೊಡಗುತ್ತದೆ. globalization ಕೂಡಾ ಹಾಗೇ ಬೆಕ್ಕು ಥರಾ ನೇ ಮೆಲ್ಲಗೆ ಬಂದು...ನಿಧಾನಕ್ಕೆ ಬೆರೆತು, ಕಡೆಗೆ ನಮ್ಮನ್ನೇ ಆಳತೊಡಗಿತು. ಅಲ್ವಾ ?

Z : ಹೌದಾ ?

ನಾನು :ನನಗೆ ಹಾಗೇ ಅನ್ನಿಸತ್ತೆ.

Z : ಸರಿ. ಅನಿಸಲಿ.ಆಮೇಲೆ ಇನ್ನೇನು ಅನಿಸಿತು?

ನಾನು :ಪ್ರತಿಯೊಂದು ವಸ್ತುವೂ ಮಾತಾಡ್ತಿದೆ ಅನಿಸಿತು.

Z :ಅದು ನಿನ್ನ regular feeling ಅಲ್ವಾ ? lab apparatus ಜೊತೆ ಎಲ್ಲಾ ಮಾತಾಡ್ತಿದ್ದೆ ?

ನಾನು :ಹಂಗಲ್ಲ ಕಣೇ..ಅವು ತಮ್ಮದೇ ರೀತಿಯಲ್ಲಿ ಕಥೆಲ್ಲಿ ಮೌನ ಸಂಭಾಷಣೆ ನಡೆಸಿದೆ. ಸಾಂಬ್ರಾಣಿ, ತೆಂಗಿನ ಮರ, ಪೋಸ್ಟರ್ರು, ಲಾಟೀನು, ಡಿಷ್ ಅಂಟೆನಾ...ಎಲ್ಲಾ...

Z :ಹಾಂ....

ನಾನು :ನನಗಂತೂ ಈ ಮೂವೀ ನೋಡಬೇಕೆಂಬ ಆಸೆ ನೆರವೇರಿದ್ದಲ್ಲದೇ ಗಿರೀಶ್ ಕಾಸರವಳ್ಳಿಯವರ ಹಸ್ತಾಕ್ಷರ ದೊರೆತಿದ್ದೇ ನನ್ನ ಜೀವನದ most memorable moment ಅನ್ನಿಸಿತು.

Z : !!!!!!!!!!!!!!!!!!!!!!!!!!!!!!!!!!!

ನಾನು :ಏನಿದು ? ಗಾಬರಿ ನ, ಸಂತೋಷ ನ, ಅಥವಾ ಹೊಟ್ಟೆ ಉರಿ ನಾ ?

Z : ಎಲ್ಲದರ average ತಗೊ.

ನಾನು : :) :) :) ಏನೇ ಇರ್ಲಿ...It was a lovely Sunday evening. Really memorable one.

Z : :)..good !ಸಾಧನೆ ಮಾಡಿದ್ದಕ್ಕೆ congratulations.

7 comments:

Ittigecement said...

ಲಕ್ಷ್ಮೀಯವರೆ..

ನನಗೂ ನೋಡಲಿಕ್ಕಾಗಲಿಲ್ಲ..

ಹೊಟ್ಟೆಕಿಚ್ಚಾಯಿತು..

ಮತ್ತೂ ಕುತೂಹಲ ಜಾಸ್ತಿ ಮಾಡಿಬಿಟ್ಟಿದ್ದೀರಿ...

ಅಭಿನಂದನೆಗಳು..

ಅಂತರ್ವಾಣಿ said...

ಈ ಚಿತ್ರ ತಡವಾಗಿ ಶುರು ಮಾಡಿದ್ದರೆ.. ನನ್ನ ಕವನ "ಬೆಕ್ಕಿಗೆ ಕೋಪ ಬಂದಿದೆ" ಉಪಯೋಗಿಸ ಬಹುದಿತ್ತು.

PaLa said...

ನನಗೆ "ಗುಲಾಬಿ ಟಾಕೀಸ್" ಅಂತ ಒಂದು ಫಿಲ್ಮ್ ಇದೆ ಅಂತಾನೇ ಗೊತ್ತಿರ್ಲಿಲ್ಲ!! ಇದರ ಬಗ್ಗೆ ಕುತೂಹಲ ಮೂಡಿಸಿ, ಉಳಿಸಿದ್ದಕ್ಕೆ ತುಂಬಾ ಧನ್ಯವಾದ.
--
ಪಾಲ

Karthik CS said...

Super ... picture na trailer hagaaytu

Harisha - ಹರೀಶ said...

>> :In 3 dimensions and from all angles (from 0-360 degrees).
3 dimensions ಇರ್ಬೇಕಾದ್ರೆ ಕೋನ ಅಳೆಯೋದು degree ಯಲ್ಲಿ ಅಲ್ಲ.. steradian ಅಲ್ಲಿ :-)

ಚಂದ್ರಕಾಂತ ಎಸ್ said...

ಲಕ್ಷ್ಮಿ ಚಿತ್ರ ಏನೋ ಚೆನ್ನಾಗಿತ್ತು. ಆದರೆ ಅದೇ ದಿನ ಬೆಳಿಗ್ಗೆ ನೂರಾಎಂಟು ಸೂರ್ಯನಮಸ್ಕಾರ ಹಾಕುವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಇಕ್ಕಟ್ಟಾದ ರಂಗಮಂದಿರದಲ್ಲಿ ಕುಳಿತು ನೋಡಿದ ಆಯಾಸದ ಪರಿಣಾಮ ನಿಮ್ಮ ಮನೆಯೊಳಗೆ ಬರಲು ಸಾಧ್ಯವಾಗಲ್ಲಿ ಆದ್ದರಿಂದ ಕ್ಷ್ಮೆಯಿರಲಿ. ನಿಮ್ಮ ಸರ್ ಗಂತೂ ಗಾಳಿಯಿಲ್ಲದ ಆ ಜಾಗದಲ್ಲಿ ಕುಳಿತದ್ದು ತುಂಬಾ ಹಿಂಸೆಯಾಯಿತು. ಆದರೂ.... ಆ ಚಿತ್ರ ನೋಡಲು ಸಾಧ್ಯವಾದದ್ದು ಎಲ್ಲ ಕಷ್ಟಗಳನ್ನೂ ಮರೆಸಿತು. ಅದು ಸಾಧ್ಯವಾದದ್ದು ನಿನ್ನಿಂದ. Thanks

bhadra said...

bahaLa dinagaLaaytu - blog update aagiyE illa [:(]

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...