ನಾನು : ನನ್ನ ತಲೆ ಕೆಟ್ಟೋಗಿದೆ.
Z :ಅದೇನು ಹೊಸ ವಿಷಯ ಅಲ್ಲ.
ನಾನು : ಆದ್ರೂ...ಸುಮ್ನೆ ಗೊತ್ತಿರ್ಲಿ ಅಂತ ಹೇಳ್ದೆ.
Z : ಓದ್ತಿದ್ದೀಯಾ ?
ನಾನು : ಪ್ರಯತ್ನ ಪಡ್ತಿದಿನಿ.
Z : ಇಷ್ಟೇ...
ನಾನು : ಹಾಗೇನಿಲ್ಲ. ತಕ್ಕ ಮಟ್ಟಿಗೆ ಓದಿದ್ದೀನಿ.
Z : ಓಕೆ.
ನಾನು : ನನ್ನ ತಲೆ ಎಷ್ಟು ಕೆಟ್ಟಿದೆ ಅಂದ್ರೆ ಪರೀಕ್ಷೆ ಆದ್ಮೇಲೆ ಏನೆಲ್ಲಾ ಮಾಡ್ಬೇಕು ಅಂತ ಸ್ಕೆಚ್ ಹಾಕಿದಿನಿ.
Z : ನಾನು ಮಹಾಮೃತ್ಯುಂಜಯ ಜಪ ಮಾಡೋ ಲೆವೆಲ್ ಗೆ ಸ್ಕೆಚ್ ಹಾಕಿದ್ದೀಯಾ ?
ನಾನು : ಯೆಸ್.
Z : ಶಿವ ಶಿವ .....
ನಾನು : ಉಹಹಹಹಹಾಆಆಆಆ....
Z : ನೀನ್ ಈ ಥರ ರಾಕ್ಷಸಿ ನಗು ನಕ್ರೆ ನನಗೆ ಸಖತ್ ಭಯ ಆಗತ್ತೆ.
ನಾನು : ಹೇ...ಎಲ್ಲಾ ಭಯ ನೂ ಈಗ್ಲೆ ಪಟ್ಕೊಂಡ್ ಸ್ಟಾಕ್ ಖಾಲಿ ಮಾಡ್ಕೋಬೇಡ.ಒಂದೊಂದು ಐಡಿಯಾ ಕೇಳಿ installment ನಲ್ಲಿ ಭಯ ಪಟ್ಕೋ.
Z :ಓಕೆ.
ನಾನು : ಭಯಪಟ್ಕೊಂಡಾದ್ಮೇಲೆ...ನೆಕ್ಸ್ಟ್ ಅನ್ನಬೇಕು...ಓಕೆ ?
Z : ಓಕೆ.
ನಾನು : ಐಡಿಯ ೧. ಅಡುಗೆ ಮನೆಗೆ ಹೋಗಿ ಸ್ಟೀಲ್ ಪಾತ್ರೆನೆಲ್ಲಾ ಹೊರಗಡೆ ಇಟ್ಟು ಲ್ಯಾಬ್ ಥರ ಪಿಂಗಾಣಿ ಪಾತ್ರೆಗಳನ್ನ ಇಡ್ಬೇಕು;without bothering about ಮಡಿ.
Z : ಅಮ್ಮ ಒದ್ದು ಓಡಿಸ್ತಾರೆ. ನಿನ್ನ ಮನೆ ನ ಪಿಂಗಾಣಿ ಲೆ ಕಟ್ಟಿಸಿಕೋ...ನನ್ನ ಅಡಿಗೆಮನೆ ಬಿಟ್ಟು ಬಿಡು ಅಂತ ಬೈದು, ಒದಿತಾರೆ.
ನಾನು :ಇದು ಬರೀ ಐಡಿಯಾ ಅಷ್ಟೆ. ಕಲ್ಪನೆ.
Z : ನಿನ್ನ ಒದಿಯೋ ಕಲ್ಪನೆ ಚೆನ್ನಾಗಿದೆ ನಿಜ್ವಾಗ್ಲು.
ನಾನು : ನಿಜ್ವಾಗ್ಲು ಒದಿತಿನಿ ನಿಂಗೆ.
Z : ಬೇಡಾ....ನೆಕ್ಸ್ಟ್.
ನಾನು : ಐಡಿಯಾ ೨ .ಆಗುಂಬೆ ಘಾಟ್ ನ ಮಳೆಲಿ ಒಬ್ಬಳೇ ನಡ್ಕೊಂಡ್ ಇಳಿಬೇಕು...ವಿಥೌಟ್ ಛತ್ರಿ.
Z : ವ್ಹಾಟ್ ?????????????? !!!!!!!!!!!!!!!!!!!!!!!!!!!!!!!!!!!! ನಿನಗೆ ಬದುಕೋ ಆಸೆ ಇಲ್ವಾ ?
ನಾನು : ಇಲ್ಲ.
Z : ಲೇ...ನಿನಗಿಲ್ದೆ ಇರ್ಬಹುದು..ಆದ್ರೆ ನನಗಿದೆ.
ನಾನು : ಸರಿ. ಇಟ್ಕೋ.
Z : ನಿಜ್ವಾಗ್ಲೂ ಈ ಥರ ಖತರ್ನಾಕ್ ಐಡಿಯಾ ಎಲ್ಲಾ ಯಾಕ್ ಹೊಳಿತಿದೆ ನಿಂಗೆ ?
ನಾನು : ಗೊತ್ತಿಲ್ಲ.
Z : ದೇವ್ರೆ...ಪ್ಲೀಸ್ ಕಾಪಾಡು.
ನಾನು : any reply from God ?
Z : Not reachable at the moment ಅಂತೆ....
ನಾನು : ಹೆ ಹೆ ನಂಗೊತ್ತಿತ್ತು....
Z : ಗ್ರ್ರ್ರ್ರ್ರ್ರ್ರ್ರ್ರ್ರ್ರ್...ನೆಕ್ಸ್ಟ್
ನಾನು : ಐಡಿಯಾ ೩ . ಅಣ್ಣ ಚಿಕ್ಕೋರಾಗಿದ್ದಾಗ ಒಂದು ಮೋಟರ್ ಸೈಕಲ್ ನ ಪೂರ್ತಿ ಬಿಚ್ಚಿ ಮತ್ತೆ ಅಸ್ಸೆಂಬಲ್ ಮಾಡಿದ್ರು...ನಾನು ಅಟ್ ಲೀಸ್ಟ್ ಒಂದು ಸೈಕಲ್ ನಾದ್ರೂ ಡಿಸ್ಮಾಂಟಲ್ ಮಾಡ್ಬೇಕಲ್ಲಾ....
Z : ಬೋಲೋ ಮೆಕಾನಿಕ್ ಲಕ್ಷ್ಮೀ ಕಿ..
ನಾನು : ಓಯ್....ಆಡ್ಕೋಬೇಡಾ....
Z : ಇಲ್ಲ...ಜೈಕಾರ ಹಾಕ್ತಿದಿನಿ. ನಿಜ್ವಾಗ್ಲು...ಸಿಕ್ಕಾಪಟ್ಟೆ ಖತರ್ನಾಕ್ ಐಡಿಯಾ ಇದು. ನೆಕ್ಸ್ಟ್.
ನಾನು : ಐಡಿಯಾ ೪. ಲೈಬ್ರರಿ ಒಂದರಲ್ಲಿ ಬಚ್ಚಿಟ್ಕೋಬೇಕು. ರಾತ್ರಿ ಲೈಬ್ರರಿ ಮುಚ್ಚಿದ್ಮೇಲೆ ನಾನು ಒಳಗಿಂದ ಲೈಟ್ ಹಾಕಿ, ಪುಸ್ತಕ ಓದಿ..ಹೊರಗಿರೋರನ್ನೆಲ್ಲಾ ಹೆದರಿಸಿ, ಕಿಟಕಿಯಿಂದ ಹಾರಿ ತಪ್ಪಿಸ್ಕೋಬೇಕು. ಮಾರನೆಯ ದಿನ ಪೇಪರ್ ನಲ್ಲಿ " ಲೈಬ್ರರಿಯಲ್ಲಿ ದೆವ್ವ? " ಅನ್ನೋ ಹೆಡ್ ಲೈನ್ಸ್ ಓದ್ಬೇಕು.
Z : ವಾಆಆಆ ವಾ ವಾಹ್ !!!! ಗುಮ್ ನಾಂ ಹೈ ಕೊಯಿ....
ನಾನು : ಹೆ ಹೆ...ಸಖತ್ತಾಗಿದೆ ಅಲ್ವಾ ?
Z : ನಿಜ್ವಾಗ್ಲು...ಏಕ್ ದಂ ಖತರ್ನಾಕ್ ! ನೆಕ್ಸ್ಟ್.
ನಾನು : ಐಡಿಯಾ ೫. ಒಂದು ದಿನ ಸಿಕ್ಕ್ ಸಿಕ್ಕಿದ ಬಸ್ಸು ಹತ್ತಿ ಎಲ್ಲೆಲ್ಲೋ ಕಳೆದು ಹೋಗಿ...ಆಮೇಲೆ ನಾನೇ ರಸ್ತೆ ಕಂಡು ಹಿಡಿದುಕೊಂಡು ಮನೆಗೆ ಬರ್ಬೇಕು.
Z : ಯಾಕ್ ವಾಪಸ್ ಬರ್ತೀಯಾ ? ಹೊಟೋಗು ಅತ್ಲಗೆ .
ನಾನು : ಅಲ್ವಾ ? ನಂಗೂ ಹಾಗೆ ಅನ್ಸಿತ್ತು. ಆದ್ರೆ, for reasons , ಹಾಗೆ ಮಾಡಕ್ಕೆ ಆಗಲ್ಲ.
Z : ಥುತ್ ! ನೀನೋ...ನಿನ್ನ ಐಡಿಯಾಗಳೋ....
ನಾನು : ಸಖತ್ ಖತರ್ನಾಕ್ ಅಲ್ವಾ ?
Z :ಹೌದ್ ಹೌದ್.
ನಾನು :ಇನ್ನೊಂದಿಷ್ಟ್ ಇವೆ...ಹೇಳಿಬಿಡ್ಲಾ ?
Z : ತಾಯಿ....ಪ್ಲೀಸ್...ಬೇಡ.
ನಾನು : ಯಾಕೆ ?
Z : ಭಯದ ಸ್ಟಾಕ್ ಖಾಲಿ ಆಗಿದೆ.
ನಾನು : ಓಹ್...sad. ಸರಿ, Replenish your depleted stocks and I will tell you more !
Z : [ದೇವ್ರೆ..ಕಾಪಾಡು..ಪ್ಲೀಸ್...ಬೇಗ !] Yeah sure, why not ?
ನಾನು : ಅಲ್ಲಿಯವರೆಗೂ line on hold.
ಜೀವನದೊಂದಿಗಿನ ನಮ್ಮ ಮಾತು lifetime ! ಇದರಲ್ಲಿ incoming -ಊ free outgoing -ಊ free !
ನನ್ನ ज़िंदगीಯೊಂದಿಗಿನ nonstop ಗುಸುಗುಸುವನ್ನು ಇಲ್ಲಿ ಬಿಚ್ಚಿಟ್ಟಿದ್ದೇನೆ.
Subscribe to:
Post Comments (Atom)
ಉತ್ತರಾಯಣ ೩
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ನಾನು : There is always a next time. Z : ಹೌದಾ ? ನಾನು : ಹೌದು. Z : ಪ್ರತೀ ಸಲವೂ ಹೀಗೆ ಆದರೆ ಗತಿಯೇನು ? ನಾನು : ಅದಕ್ಕೆ ನಿನ್ನ pessimistic ಅಂತ ಬೈಯ್ಯ...
-
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಬ್ಲಾಗಿನ ಹುಟ್ಟು ಹಬ್ಬ ಮತ್ತು ಹೊಸ ವರ್ಷ ಯಾವಾಗ್ಲು ಒಟ್ಟಿಗೆ ಬರತ್ತೆ. ಆದರೆ, ಮತ್ತೆ ಅದೇ flash back ಗೆ ಹೋಗಿ, ಅದೇ ...
6 comments:
ದಯವಿಟ್ಟು ನಮ್ಮ ಬೊಗಳೂರಿನ ಲೈಬ್ರರಿಗೆ ಕಾಲಿಡ್ಬೇಡಿ...
ಆ ಮೇಲೆ ನಮ್ಮೂರಿನ ಮನೆಯಡುಗೆಮನೆಗೂ ನಿಮ್ಮ ಪಿಂಗಾಣಿ ಯುಗದ ಪಾತ್ರೆಗಳನ್ನೆಲ್ಲಾ ತರುವ ಯೋಚನೆಯನ್ನು ಕನಸಿನಲ್ಲೂ ಮಾಡ್ಬೇಡಿ...
ಪಿಂಗಾಣಿ ಕಲೆಗಳನ್ನೆಲ್ಲಾ ನಿಮ್ಮ ಲ್ಯಾಬಿನಲ್ಲೇ ಪುನಃ ಪುನಃ ಸರ್ಚ್ (Re-Search) ಮಾಡಿ ನೋಡಿ ಅಂತ ಕೇಳಿಕೊಳ್ಳುತ್ತೇವೆ.
ಇಟ್ಟಿಗೆ ಸಿಮೇಂಟು:: ನಿಜವಾಗಿಯೂ ದೇವರೆ ಕಾಪಾಡ ಬೇಕು....!
ಮರಳು ::: ಯಾರನ್ನ..??
ಇಟ್ಟಿಗೆ ಸಿಮೆಂಟು :: ಆ ಪೂಣ್ಯಾತ್ಮ.., ಬಡಪಾಯಿ... " Z " ಆನ್ನು...!! ??
ಐಡಿಯಾಗಳೆಲ್ಲಾ ಚೆನ್ನಾಗಿವೆ. ಒಮ್ಮೆ ಟ್ರೈ ಮಾಡೇಬಿಡಿ. ಹಾಗೆಯೇ ತಲೆಯಲ್ಲಿದ್ದರೆ ಸಾಲದು, ಒಮ್ಮೆ ಕಾರ್ಯರೂಪಕ್ಕೆ ಇಳಿಸಿ, ಅವಕ್ಕೆಲ್ಲಾ ಒಂದು ಗತಿ ಕಾಣಿಸಿದರೇನೇ ಸಮಾಧಾನ :D
"ಒಂದು ದಿನ ಸಿಕ್ಕ್ ಸಿಕ್ಕಿದ ಬಸ್ಸು ಹತ್ತಿ ಎಲ್ಲೆಲ್ಲೋ ಕಳೆದು ಹೋಗಿ...ಆಮೇಲೆ ನಾನೇ ರಸ್ತೆ ಕಂಡು ಹಿಡಿದುಕೊಂಡು ಮನೆಗೆ ಬರ್ಬೇಕು."
-ಇದು ಬ್ಯಾಡಿತ್ತು! ಸರಿಯಾದ ಬಸ್ ಹತ್ತಿದ್ರೇನೇ ನಿಮ್ಗೆ ದಾರಿ ಮರ್ತೋಗತ್ತೆ.. ಇನ್ನು ಸಿಕ್ ಸಿಕ್ಕಿದ್ ಹತ್ತಿದ್ರೆ, ದೇವ್ರೇ ಗತಿ!!
ಓದಿ, ನಕ್ಕು ನಕ್ಕು ಸಾಕಾಯ್ತು.. :D
ಖಥರ್ಬಾಕ್ -> ಇದು ನಿನ್ನ ತಪ್ಪಲ್ಲ. ನಿನ್ನ ಬೆರಳು ಹಾಗು ಕಣ್ಣಿನ ತಪ್ಪು. B ಹಾಗು N ಅಕ್ಕ ಪಕ್ಕ ಇವೆ ಅಂತ ನಮಗೆ ಗೊತ್ತು :)
ಲೈಬ್ರರಿ ಒಂದರಲ್ಲಿ ಬಚ್ಚಿಟ್ಕೋಬೇಕು. ರಾತ್ರಿ ಲೈಬ್ರರಿ ಮುಚ್ಚಿದ್ಮೇಲೆ ನಾನು ಒಳಗಿಂದ ಲೈಟ್ ಹಾಕಿ, ಪುಸ್ತಕ ಓದಿ..ಹೊರಗಿರೋರನ್ನೆಲ್ಲಾ ಹೆದರಿಸಿ, ಕಿಟಕಿಯಿಂದ ಹಾರಿ ತಪ್ಪಿಸ್ಕೋಬೇಕು. (ನೀನು ಕಿಟಿಕಿಯಿಂದ ಹಾರೋಕೆ ಆಗುತ್ತೆ ಅನ್ನೋದಕ್ಕೆ ಈ ರೀತಿ ಯೋಚನೆ ಮಾಡಿದ್ದೀಯ)
ಇದು ತೀರ ಆಡು ಭಾಷೆಯಾಯ್ತು. Eg: "ನಂಗೆ" ಹಾಗು ಇನ್ನು ಅನೇಕ ಪದಗಳು
ಆಂಗ್ಲ ಭಾಷೆಯ ಪದಗಳನ್ನು ಆಂಗ್ಲ ಭಾಷೆಯಲ್ಲೇ ಬರಿಯಮ್ಮ. ಏನೂ ತಪ್ಪಿಲ್ಲ. ದೊಡ್ಡ ದೊಡ್ಡ ಆಂಗ್ಲ ಸಂಭಾಷಣೆ ಬರಿತೀಯ..
ಪರೀಕ್ಷೆ ಮುಗಿದ ಮೇಲೆ ಏನಾದರೂ ಮಾಡ್ಕೊಂಡ್ ಹಾಳಾಗ್ ಹೋಗಿ... ಆದ್ರೆ ಪರೀಕ್ಷೆಗೆ "ಆಳ ದ ಬೆಸ್ತ"
ಆಳ ದ ಬೆಸ್ತ <---- ಇದು ನನ್ನ ತಪ್ಪಲ್ಲ. Google Transliterator ದು...
Post a Comment