ನಾನು : ನಾನ್ ಹೇಳಿದ್ರೆ ನೀನು ಖಂಡಿತಾ ನಂಬಲ್ಲ.
Z : ಏನ್ ಅಂಥಾ ಶಾಕಿಂಗ್ ನ್ಯೂಸು ?
ನಾನು : ಶಾಕಿಂಗ್ ಏ...ನಿಜ್ವಾಗ್ಲು
Z : ಪ್ಲೀಸ್...ಬೇಗ ಹೇಳ್ಬಿಡು.
ನಾನು : ಓಕೆ...ಫೋನ್ ಗಟ್ಟಿಯಾಗಿ ಇಟ್ಕೋ...
Z : ಹೂ....ಇಟ್ಕೊಂಡಿದಿನಿ...
ನಾನು : ಮನಸ್ಸು ಗಟ್ಟಿ ಮಾಡ್ಕೊ.
Z : ಮಾಡ್ಕೊಂಡಿದಿನಿ.
ನಾನು : ವಿಷಯ ಏನಪ್ಪಾ ಅಂದ್ರೆ.... kyunki saas bhi kabhi bahu thi ಸೀರಿಯಲ್ಲು ಮುಗಿದು ಹೋಗಿದೆ.
Z : what ???????
DHUD !!!!!!!!!!!!!!!
SHATTTER !!!!!!!!!!!!!!!!!!!
ನಾನು : ಬಿದ್ಯಾ ಚೇರ್ ಇಂದ ? ಮತ್ತೆ ಏನ್ ಒಡೆದು ಹಾಕ್ದೆ ? ಇನ್ನು ವಿಷಯ ನೇ ಕಂಪ್ಲೀಟ್ ಆಗಿಲ್ಲ.....
Z : ಬಿದ್ದೆ...ಜೋರಾಗೆ ಬಿದ್ದೆ :( ...ಕಾಫಿ ಲೋಟ ಬಿತ್ತು ಕೆಳಗೆ ...ತಿಂಡಿ ತಟ್ಟೆ ಕೂಡಾ...ಇನ್ನೂ ನ್ಯೂಸ್ ಇದ್ಯಾ ?
ನಾನು : ಹೂ...
Z : ಹೇಳ್ಬಿಡು.
ನಾನು : kahaanii ghar ghar kii ನೂ ಮುಗ್ದಿದೆ !
Z : Oh my God !!!!!!!!!!!!!!!!!!!!!!!!!!!!!!!!!!!
ನಾನು : ಆಯ್ತ ಗಾಬರಿ ಆಗಿದ್ದು ?
Z : ಹೂ. But I still cant believe it. ಯಾವಾಗ್ ಶುರುವಾಗಿದ್ದ್ ಹೇಳು ಇವೆರಡು ಸೀರಿಯಲ್ಲು ?
ನಾನು : ಒಂಭತ್ತನೇ ಕ್ಲಾಸಿನಲ್ಲಿದ್ದಾಗ.
Z : ಈಗ ?
ನಾನು : ಎಮ್. ಎಸ್ಸಿ ಮುಗಿಸಿದೆ.
Z :ಅಲ್ಲಿವರ್ಗು ಬರ್ತಿತ್ತು ಈ ಸೀರಿಯಲ್ಲು...
ಯಾಕ್ ಮುಗಿತು ಈ ಸೀರಿಯಲ್ಲು ?
ನಾನು :What do you mean by ಯಾಕ್ ಮುಗಿತು ?
Z : ಅವೆಲ್ಲ ನೆವರ್ ಎಂಡಿಂಗ್ ಸೀರಿಯಲ್ಲು ಕಣೇ...ಅದಕ್ಕೆ ಮುಕ್ತಾಯ ನೆ ಇಲ್ಲ...
ನಾನು : ಹೇಗೆ ಹೇಳ್ತಿಯಾ ?
ನೋಡು...ಕ್ಯುಂಕಿ ಯ ನಾಯಕ (?) ಮಿಹಿರ್ first time ಸತ್ತಾಗ by public demand ಅವನನ್ನ ಬದುಕಿಸ್ಲಿಲ್ವ ? ಆಮೇಲೆ ಅವ್ನಿಗೆ amnesia ಅಂತ ಹೇಳ್ಸಿ ಮಂದಿರಾ ಬೇಡಿ ನ ಕರ್ಸಿಲ್ವಾ ? amnesia season started with this serial. ಅದಾದ್ಮೆಲೆ ಇಪ್ಪತ್ತ್ ವರ್ಷದ advancement. That also began with this serial. ಎಷ್ಟು ಸರ್ತಿ ಮಿಹರ್ ಸತ್ತ ? ಎಷ್ಟು ಸರ್ತಿ ಬದಲಾದ ? ಆ ಅಜ್ಜಿ ನೂರೈವತ್ತ್ ವರ್ಷ ಆದ್ರು ಬದ್ಕಿದ್ರು ? ಇನ್ನು ಕಥಾನಾಯಕಿ ತುಳಸಿ..ಆ ಮಹಾಮಾತೆ ? ಎಷ್ಟು ಕೋಟಿ ಸರ್ತಿ ಕಣ್ಣ್ ಕೆಕ್ಕರಿಸಿದ್ದಾಳೆ ? ಆಮೇಲೆ euthenesia (mercy killing) concept ನ ಜಾರಿಗೆ ತಂದು ಭಾರತದ ಸೀರಿಯಲ್ ಗಳ ರೂಪುರೇಷೆಯನ್ನೇ ಬದಲಿಸಿಬಿಟ್ಟಳಲ್ಲಾ ತುಳಸಿ ಮಾತೆ ? ( Actually Ekta Kapoor) ಇಷ್ಟೆಲ್ಲಾ ಮಾಡಿದ್ಮೇಲೆ ಫೈನಲ್ ಎಪಿಸೋಡ್ ಗೆ ಹತ್ತ್ ಎಪಿಸೋಡ್ ಮುಂಚೆ ಆ ನೂರೈವತ್ತು ವರ್ಷದ ಮುದುಕಿಯನ್ನ ಝಟ್ ಅಂತ ಸಾಯಿಸಿಬಿಟ್ಟ್ರು..ಆ ಆಸ್ತಿ ವಿಷಯ ನ ಕಡೆಗೂ ಬಗೆ ಹರಿಸಲೇ ಇಲ್ಲ...
Z : ಓ...ತಮಗೆ ಆಸ್ತಿ ವಿವಾದ ನೆಟ್ಟಗಾಗ್ಲಿಲ್ಲ ಅಂತ ಬೇಜಾರಾ ?
ನಾನು : ಇಲ್ಲಾ...ಎಂಡಿಂಗ್ ಅರ್ಥ ಆಗ್ಲಿಲ್ಲಾ ಅಂತ ಬೇಜಾರು.
Z : ಯಾಕೆ ?
ನಾನು : ನೋಡೂ...ಫಸ್ಟಫಾಲ್ ನಾನು ಸ್ಟಾರ್ ಪ್ಲಸ್ ಕಡೆ ಮುಖ ಹಾಕಿ ತುಂಬಾ ತಿಂಗಳುಗಳಾಗಿದ್ದವು. ರಿಯಾಲಿಟಿ ಷೋಗಳನ್ನ ಕೂಡಾ ನೋಡೋದು ಬಿಟ್ಟಿದ್ದೆ. ಒಂದಿನ ತಲೆ ಕೆಟ್ಟು ಟಿವಿ ಆನ್ ಮಾಡಿದೆ. ಅಲ್ಲೇ ಹುರುವಾಗಿದ್ದು ಗೋಳು. " ಆಖ್ರೀ ಎಪಿಸೋಡ್...ಕ್ಯೂಂಕಿ ಸಾಸ್ ಭಿ ಕಭೀ ಬಹೂ ಥಿ ಅಂತ ಆಡ್ ಬಂತು. ನಾನು ಕುಸಿದು ಕೂತೆ !! ಏನಾದ್ರು ಆಗ್ಲಿ, ಹೇಗ್ ಮುಗಿಸ್ತಾಳೇ ಈ ಮಹಾರಾಯ್ತಿ ಸೀರಿಯಲ್ ನ ಅಂತ ನೋಡಲು ಆವತ್ತು ರಾತ್ರಿ ನಿದ್ದೆಗೆಟ್ಟೆ. ಎದುರು ಮನೆ ನಂದಿನಿ ಗೆ ನಮ್ಮನೆ ಕಿಟಕಿಯಿಂದಲೇ ಕಿರುಚಿ ವಿಷಯ ತಿಳಿಸಿದೆ. ಅವರು ಕೂಡಾ ಆಸಕ್ತಿಯಿಂದ ನೋಡಲು ಕೂತರು. ನೋಡಿದ್ರೆ...ಅದ್ ಯೇನೋ ಹೇಳಿ ಮುಗ್ಸೇ ಬಿಟ್ಲು ಅರ್ಧ ಘಂಟೆಲೆ...ನನಗೆ ಅದು ಎಂಡಿಂಗ್ ಅನ್ನಿಸಲೇ ಇಲ್ಲ...ನಾಳೆ ಮತ್ತೆ ನೋಡಿದರಾಯ್ತು ಅಂತ ಫೋನಲ್ಲಿ ರಿಮೈಂಡರ್ ಹಾಕೊಂಡೆ.
Z : ಆಮೇಲೆ ?
ನಾನು : ಮಾರನೇ ದಿನದಿಂದ ಮುಂಬೈ ನಲ್ಲಿ ಸೀರಿಯಲ್ ನಿರ್ಮಾಪಕರಿಗೂ ಮತ್ತೆ ಅದೆಂಥದ್ದೋ ಸಂಘಕ್ಕೂ ಸಿಕ್ಕಾಪಟ್ಟೆ ಜಗಳ್ ಶುರು ಆಯ್ತು. ಎಲ್ಲ ಸೀರಿಯಲ್ ಗಳನ್ನ ಮೊದಲನೇ ಎಪಿಸೋಡ್ ಇಂದ telecast ಮಾಡಲು ಶುರು ಮಾಡಿದರು.
Z : ತಮಗೆ ಅದನ್ನ ನೋಡಿ ತಲೆ ಕೆಟ್ಟಿರತ್ತೆ...
ನಾನು : ಕೆಡೋದಾ..ಚೆಲ್ಲಾಪಿಲ್ಲಿ ಚಿಂದಿ ಚಿತ್ರಾನ್ನ ಆಗೋಯ್ತು. ಸರಿ ಮತ್ತೆ ನಾನು ಟಿವಿ ಕಡೆ ಮುಖ ಹಾಕಲೇ ಇಲ್ಲ.
Z : ಆಮೇಲೆ ?
ನಾನು : ಮೊನ್ನೆ ರೋಹಿಣಿ ಗೆ ಫೋನ್ ಮಾಡಿದೆ. ಹಾಗೆ ಮಾತಾಡ್ತಾ ಕ್ಯೂಂಕಿಯ ಕಥೆ ಶುರುವಾಯ್ತು. ನಾನು ಹೇಳಿದೆ ಕ್ಯೂಂಕಿ ಮುಗಿತು ಕಣೆ ಅಂತ. ಅವಳು ನಂಬಲೇ ಇಲ್ಲ. ಆಮೇಲೆ ಅವಳಿಗೆ ಆ ನಿರ್ಮಾಪಕರ ಜಗಳದ ಕಥೆ ಗೊತ್ತೇ ಇರ್ಲಿಲ್ಲ. ಆದರೂ ಅವಳು ಆ ಸೋ ಕಾಲ್ಡ್ "ಕಡೆಯ ಎಪಿಸೋಡ್ " ನೋಡಿದ್ದಳು. ನಾವಿಬ್ಬರೂ ಆ ಎಂಡಿಂಗ್ ನ ಅರ್ಥ ಏನಂತ ಹುಡುಕಲು ಶುರು ಮಾಡಿದ್ವಿ. ಕಡೆಗೆ ರೋಹಿಣಿ..
"ನೋಡು ಲಕ್ಷ್ಮೀ...ಏಕ್ತಾ ಕಪೂರ್ ಸೀರಿಯಲ್ ಗೇ ಅರ್ಥ ಇಲ್ಲ ಅಂದಮೇಲೆ ಇನ್ನು ಮುಕ್ತಾಯಕ್ಕೆ ಅರ್ಥ ಇದ್ಯಾ ?"
ಅಂದಳು.
ನಾನು ದೀಈಈಈಈಈರ್ಘವಾಗಿ ಯೋಚನೆ ಮಾಡಿದೆ. ಸರಿ ಅನ್ನಿಸಿತು. ಹೌದು ಕಣೆ...ನಿಜ ಅಂದೆ. ಆದರೆ ನಮ್ಮಿಬ್ಬರಿಗೂ ಎಂಡಿಂಗ್ ಅಲ್ಲಿ ತೋರಿಸಿದ ಕಹಾನಿ ಘರ್ ಘರ್ ಕೀ ಸೀರಿಯಲ್ಲಿಗೂ ಕ್ಯೂಂಕಿ ಸಾಸ್ ಭಿ ಕಭಿ ಬಹೂ ಥಿ ಸೀರಿಯಲ್ಲಿಗೂ ಏನ್ ಸಂಬಂಧ ಅಂತ ಇನ್ನೂ ಅರ್ಥ ಆಗ್ಲಿಲ್ಲ. ಹೆಚ್ಚು ತಲೆ ಕೆಡಿಸಿಕೊಳ್ಳಲು ನಮ್ಮಿಬ್ಬರಿಗೂ ಸಮಯ ಇರ್ಲಿಲ್ಲ. ಇಲ್ಲಾಂದಿದ್ರೆ ಅದಕ್ಕು ಒಂದು ಅರ್ಥ ಹುಡುಕ್ತಿದ್ವಿ.
Z : ವಾಹ್ ವಾಹ್ !! ಏನ್ detctive agents ನೀವು !
ನಾನು : ಇನ್ನೇನ್ ಮತ್ತೆ ? ;-)
Z : ಥುಥ್! ಇರ್ಲಿ...ಸೋ ಇವಾಗ ಏಕ್ತಾ ಕಪೂರ್ ಅವಳ highest TRP rated serials ನ ಮುಗಿಸಿದ್ದಾಳೆ.
ನಾನು : ಹೂಂ...
Z : ಯಾಕೆ ಅಂತ ಗೊತ್ತಿಲ್ಲ ಯಾರಿಗೂ...
ನಾನು : ಹೂಂ....
Z : ನೀನು ಗೆಸ್ಸ್ ಮಾಡು ನೋಡಣ ?
ನಾನು : ನಾನು ಗೆಸ್ಸ್ ಮಾಡೋದಾದ್ರೆ,
- ತಿರುಪತಿಯಿಂದ ತಿಮ್ಮಪ್ಪನ ಪ್ರಸಾದದ ಕೊರಿಯರ್ ಅಪ್ಪಿ ತಪ್ಪಿ ರಾಹುಕಾಲದಲ್ಲಿ ಬಾಲಾಜಿ ಟೆಲಿಫಿಲಮ್ಸ್ ತಲುಪಿರತ್ತೆ.
- ಸಿದ್ದಿವಿನಾಯಕ್ ದೇವಸ್ಥಾನಕ್ಕೆ ಇವರಿಗೆ ಯಮಗಂಡಕಾಲದಲ್ಲಿ ಪ್ರವೇಶ ಸಿಕ್ಕಿರತ್ತೆ.
- ಅವಳ production unit ನಲ್ಲಿ 118ನೇ ಗಣಪತಿಯನ್ನು ಇಟ್ಟಿದ್ದ ಜಾಗದ ವಾಸ್ತು ಸರಿ ಇರಲ್ಲ.
- ಅವರ studio ವಾಸ್ತು feng shui ಅನುಸಾರ ಇರಲಿಕ್ಕಿಲ್ಲ.
- Director ವಾಸ್ತು ಪ್ರಕಾರ camera ಇಟ್ಟಿರಲ್ಲ.
- actors reality show ಗೆ ಡೇಟ್ಸ್ ಕೊಟ್ಟಿರುತ್ತಾರೆ...ಸಿಗೋದಿಲ್ಲ.
- ಡ್ಯಾನ್ಸ್ ಮಾಡಿ ಮಾಡಿ ಕೈ ಕಾಲು ನೋವು ಬಂದಿರತ್ತೆ...ನ್ಯಾಚುರಲ್ ಸ್ಲೋ ಮೋಷನ್ ನಲ್ಲಿ act ಮಾಡ್ತಿರ್ತಾರೆ, ಆದ್ರೆ ಆಗ chasing scene ನಡಿತಿರತ್ತೆ.
- actors ಗೆ ತಾತನ ಅಜ್ಜಿ ಅತ್ತೆಯ ರೋಲ್ ಮಾಡೊ ಅಷ್ಟು ವಯಸ್ಸೇ ಆಗಿರಲ್ಲ...ತಗಾದೆ ತೆಗ್ದಿರ್ತಾರೆ.
Z : ಉಫ್ಹ್ಹ್ಹ್ಹ್ಹ್ಹ್ !!!!!!!!!!! ಕಷ್ಟ ಈ ಸುದ್ದಿಯನ್ನ ಅರಗಿಸಿಕೊಳ್ಳೋದು.
ನಾನು : ಇದು ನಿಜ Z ...ಪ್ಲೀಸ್ ನಂಬು...ಸತತ ಒಂಭತ್ತು ವರ್ಷಗಳ torture ನಂತರ ಸರಿಯಲ್ ಮುಗಿದಿವೆ.
ಸೀರಿಯಲ್ ಮುಗಿದಿದೆ.....
ನಿಜ್ವಾಗ್ಲೂ....................
ನಿಜ್ ನಿಜ್ವಾಗ್ಲೂ ಮುಗಿದಿದೆ !
8 comments:
ಮತ್ತೇ ಸೀರಿಯಲ್ ವಿಷನಾ...
ನಾನು ಮೆಗಾ (ಹತ್ತು ಲಕ್ಷ)ಸೀರಿಯಲ್ ವಿರೋಧಿ!!!!!
ನಿಜ್ವಾಗ್ಲೂ ಮುಗಿತಾ??! ಇಲ್ಲೂ ರಬ್ಬರ್ ತರಹ ಎಳೆದೂ ಎಳೆದೂ ತೋರಿಸೊ ಧಾರವಾಹಿಗಳು ಇವೆ. ನಾನು ಇಲ್ಲಿಗೆ ಬಂದಾಗಿನಿಂದ ನೋಡ್ತಾನೆ ಇದೀನಿ, ಮಧ್ಯದಲ್ಲಿ ಎರಡು ಸಲ ಊರಿಗೆ ಬಂದಾಗ ಏನಾದರೂ ಕಥೆಗೆ ಟರ್ನಿಂಗ್ ಕೊಟ್ಟಿರುತ್ತಾರೆನೋ ಅಂದುಕೊಂಡರೆ...ಉಹುಂ...ನಾನು ಒಂದೊರ್ಷ ಬಿಟ್ಟು ನೋಡಿದ್ರೂ ಏನೂ ಮಿಸ್ ಆಗಿರುವುದಿಲ್ಲ!
ಬ್ರೇಕಿಂಗ್ ನ್ಯೂಸ್ ಹೇಳಿದ್ದಕ್ಕೆ Zಗೆ ಒಂದು ಥ್ಯಾಂಕ್ಸು.
ಲಕ್ಷ್ಮೀಯವರೆ...
ನನ್ನಾಕೆ ಪ್ರಕಾರ ಮತ್ತೆ ಶುರುವಾಗುತ್ತದೆ...ಮಿಹಿರ್ ಬದುಕಿದ ಹಾಗೆ..!
ನನ್ನಾಕೆ ಬಹಳ ಹಿಂದೆ ತುಂಬಾ ಆಸಕ್ತಿಯಿಂದ ಏಕತಾ ಧಾರವಾಹಿ ನೋಡಿ ಗಂಡಸರಿಗೆ,ಹೆಂಗಸರಿಗೆ ಬೈತಾ ಇದ್ದಳು..
ಒಬ್ಬರಿಗೆ ಎಷ್ಟು ಹೆಂಡತಿಯರೊ..ಎಷ್ಟು ಗಂಡರೊ..(ಮತ್ತೆ ಒಂದು ಗೂಡುತ್ತಿದ್ದರು!!)
ನಾನಂತೂ ಕಿವಿಯಲ್ಲಿ ಹೋ ಇಟ್ಟು ಕೊಂಡು ನೋಡುತ್ತಿದ್ದೆ (ಹೆಂಡತಿ ರೇಗಿಸಲಿಕ್ಕೆ)
ಕೊನೆಪಕ್ಷ ಕಾಗದದ ಪೀಸ್ ಇಟ್ಟುಕೊಳ್ಳುತ್ತಿದ್ದೆ..
ಅಂತೂ ಸಿಹಿ ಸುದ್ಧಿ ಹೇಳಿದ ನಿಮಗೆ ಸಾವಿರಾರು,, ಕೋಟಿ,ಕೋಟಿ.. ಧನ್ಯವಾದಗಳು..
ನೀವು ಸಂಭಾಷಣೆ ತುಂಬಾ ಚೆನ್ನಾಗಿ ಬರೆಯುತ್ತೀರಿ...!
ಇಂಥ ನಿರುಪಯುಕ್ತ ಧಾರಾವಾಹಿಗಳನ್ನು ನೋಡೋದಕ್ಕೆ ನಿಮಗೆ ಮನಸಾದ್ರೂ ಹೇಗೆ ಬರುತ್ತೋ.. ಭಗವಂತಾ.. ಕಾಪಾಡಪ್ಪಾ..
ಹೇ ಸಮಯ ಸಿಕ್ರೆ ಇನ್ನೊಣ್ದು ಕಣ್ಣಿನ ಫೋಟೊ ಹಾಕಿ :)
ಸೀರಿಯಲ್ ಮುಗೀತು ಅಂತ ಸುದ್ದಿ ಕೇಳಿ, youtube ಆಲ್ಲಿ ಹುಡುಕಿ ನೋಡ್ದೆ, ಆದ್ರೆ ಸೀರಿಯಲ್ ಮುಗ್ದಂಗೇ ಇಲ್ಲ. ನನ್ friend ಹೇಳಿದ್ದು- star plus ಅವ್ರೇ TRP ಕಡ್ಮೆ ಆಯ್ತು ಅಂತ ನಿಲ್ಸಕ್ ಹೇಳಿದ್ರಂತೆ, ಯಾವ್ದೋ ಬೇರೆ ಚಾನೆಲ್ ಅಲ್ಲಿ ಪುನಾ ಶುರು ಮಾಡ್ತಾರಂತೆ. ಅದಕ್ಕೇ ಅಂತೆ ಆ ಥರ ನಿಲ್ಸಿದ್ದು.
ನೀವು ಈ ಸೀರಿಯಲ್ಲು ವಿಷ ಬರ್ದೂ ಬರ್ದೂ... ಎಲ್ಲರೂ ಕೂಡ ದೀಈಈಈಈಈಈಈಈರ್ಘವಾಗಿ ಯೋಚಿಸುವಂತೆ ಮಾಡ್ತಿದೀರಿ...
ಇರ್ಲಿ... ಈ ಚೂಯಿಂಗ್ ಗಮ್ ಮುಗಿದು ಕನಿಷ್ಠ ಹತ್ತಾರು ಮನೆಗಳಾದ್ರೂ ನೆಮ್ಮದೀಲಿ ಇರುವಂತಾಗಬಹುದು...
ಈ ಧಾರಾವಾಹಿ ಅಂದ್ರೆ ಕುಮಾರಧಾರಾ ವಾಹಿಗಳು ಆಗಿಬಿಡ್ತಾ ಇವೆ... ಕನ್ನಡಕ್ಕೂ ಈ ಏಕ್ತಾ ಕಪೂರ್ ಯಾಕಾದ್ರೂ ವಕ್ರಿಸಿಕೊಂಡ್ಳೊ...
ಅಂತರ್ವಾಣಿ :
:-)
ನೀಲಗಿರಿ:
ಹೌದು..ನಿಜ್ವಾಗ್ಲು ಮುಗ್ದಿದೆ. ನಿಮ್ಮ ಥ್ಯಾಂಕ್ಸಿಗೆ ವೆಲ್ಕಮ್ಮು :-)
ಪ್ರಕಾಶ್ ಅಂಕಲ್:
ಮತ್ತೆ ಶುರುವಾದ್ರೆ ಗತಿ ಗೋವಿಂದ !! ಆಗಲ್ಲಪ್ಪಾ torture ತಡಿಯಕ್ಕೆ...ಬೇಡಾ...
ಹರೀಶ್:
ಮನಸ್ಸು ಬರ್ಲಿಲ್ಲ...ತಲೆ ಕೆಟ್ಟಿತ್ತು ಅಷ್ಟೇ..
:-)
ಸಂದೀಪ್ ಕಾಮತ್:
:-) ಸಮಯ ನನ್ನ ಕೈಗೆ ಸಿಗ್ಲಿ ಮೊದ್ಲು...ಆಮೇಲೆ ಮುಂದಿನದು :)
ಜ್ಯೋತಿ:
exactly. ನಾನು ಯೂಟ್ಯೂಬ್ ನಲ್ಲಿ ಹುಡುಕಿ ನಾನ್ ನೋಡಿದ ಎಪಿಸೋಡೇ ಕಡೇ ಎಪಿಸೋಡಾ ಅಂತ ಚೆಕ್ ಮಾಡಿದೆ. ಮುಗಿದ ಹಾಗೆ ಇಲ್ಲ. ಇವರು ಹೀಗೆ ಬಿಟ್ಟರೂ ಪರ್ವಾಗಿಲ್ಲ, ಮತ್ತೆ ಇನ್ನೊಂದು ಚಾನಲ್ ನಲ್ಲಿ ಶುರು ಮಾಡಿ ನಮ್ಮನ್ನ ಸಾಯಿಸದಿದ್ದರೆ ಸರಿ :-)
ಆದ್ರು..ಟಿಆರ್ಪಿ ಕಡಿಮೆ ಆಗಿದೆ ಅಂದ್ರೆ ನಾನ್ ನಂಬಲ್ಲ. ಬೇರೆ ಪ್ಲಾನ್ ಇದೆ ಏಕ್ತಾ ದು ಅನ್ಸತ್ತೆ,
ಅನ್ವೇಷಿ:
ಅಲ್ಲಾ ರಿ...ಏಕ್ತಾ ಕಪೂರ್ ಕನ್ನಡದಲ್ಲಿ ಯಾಕೆ ಒಕ್ಕರಿಸಿಕೊಂಡಳು ಅಂತ ಇಲ್ಲಿ ನನ್ನನ್ನು ಕೇಳೋ ಬದ್ಲು...ತಮ್ಮ ಏಕಸದಸ್ಯ ಸರ್ವಸದಸ್ಯ ಬ್ಯೂರೋ ನ ಸುದ್ದಿ ತರಲು ಅಟ್ಟಬಾರದೇ ? ಬೊಗಳೆಗೆ ಒಳ್ಳೆ ನ್ಯೂಸ್ ಐಟಮ್ ಆಗಿರೋದಪ್ಪಾ...ನೀವಿದನ್ನ ಅಪ್ಪಿ ತಪ್ಪಿ ಪಾಲಿಸಿದ್ದೇ ಆದರೆ, ನನಗೆ ಫುಲ್ಲ್ ಕ್ರೆಡಿಟ್ ಬೇಕು, ಇಲ್ಲಾಂದ್ರೆ ನಿಮ್ಮದೇ ಕಮೆಂಟ್ ಬಾಕ್ಸ್ ನಲ್ಲಿ ನಿಮಗೆ ಧಿಕ್ಕಾರ ಕೂಗ್ತಿನಿ :-)
Post a Comment