Tuesday, September 30, 2008

ನಾವು ಏನನ್ನು ಕಳೆದುಕೊಂಡಿದ್ದೇವೆ

ಕರ್ಮಕಾಂಡ ಪ್ರಭುಗಳು ಎರಡು ತಿಂಗಳ ನಂತರ ಬ್ಲಾಗಿಸಲು ಶುರುಮಾಡಿದ್ದಾರೆ. ತಮ್ಮ ತಲೆಯಲ್ಲಿ ಇಷ್ಟು ದಿನ ಕೊರೆಯುತ್ತಿದ್ದ ಹುಳುಗಳನ್ನು ಈಗ ನಮ್ಮ ತಲೆಗೆ ಬಿಡುವ ಮಹಾನ್ ಪುಣ್ಯಕಾರ್ಯ ಮಾಡಿದ್ದಾರೆ.

ಕರ್ಮಕಾಂಡ ಪ್ರಭುಗಳೆ, ನಿಮ್ಮ ಬ್ಲಾಗನ್ನು ನಾನೂ ಓದಿದೆ. ಬೆಂಗಳೂರಿನವರು ಕಥೆಗಳನ್ನು ಏಕೆ ಬರೆಯಲು ಸಾಧ್ಯವಿಲ್ಲ ಎಂಬ ಪ್ರಶ್ನೆ ಸಖತ್ತಾಗಿದೆ. ಇದಕ್ಕೆ ನನ್ನ ಅನಿಸಿಕೆ ಇಷ್ಟು. ನಿಮ್ಮ ಕಮೆಂಟ್ ಬಾಕ್ಸ್ ನಲ್ಲಿ ಏಕೆ ಹಾಕಲಿಲ್ಲ ಅಂತ ಆಮೇಲೆ ಹೇಳುವೆ.

ಹಳ್ಳಿಯವರ ಜೀವನದ ಬಗ್ಗೆ ನಾವು ಅನಭಿಜ್ಞರು. ಬರೀ ಟಿವಿ, ಪುಸ್ತಕದಿಂದ ಮಾತ್ರ ತಿಳಿದುಕೊಳ್ಳಬೇಕಷ್ಟೆ. ನಾವು ಗ್ರಾಮ ವಾಸ್ತವ್ಯ ಹೂಡಿ ಬರೆಯಲು ಸಾಧ್ಯವಾಗತ್ತೆಯಾದರೂ, ಮೂರು ದಿನಗಳಿಗಿಂತಾ ಹೆಚ್ಚಾಗಿ ಅಲ್ಲಿರಲಿಕ್ಕೆ ನಮ್ಮ ಐಷಾರಮಕ್ಕೆ ಒಗ್ಗಿದ ಮೈ ಬಿಡುವುದಿಲ್ಲ. ನೀವು ದೇಹ ದಂಡಿಸಲು ತಯಾರೋ ? ಹಾಗಿದ್ರೆ ಸೂಪರ್.

ಹಳ್ಳಿಯ ಜೀವನದ ತಿರುಳುಗಳನ್ನ ನಾನು ಕಾನೂರು ಹೆಗ್ಗಡತಿ ಪುಸ್ತಕವನ್ನು ಓದುತ್ತಾ ಈಗೀಗ ಸಲ್ಪ ಅರ್ಥ ಮಾಡಿಕೊಳ್ಳುತ್ತಿದ್ದೇನೆ. ನನಗನ್ನಿಸಿದು ಇಷ್ಟು : they live, we survive.



ನಾವು ಬದುಕುತ್ತಿಲ್ಲ, ಬದುಕಲು ಹೋರಾಡುತ್ತಿದ್ದೇವೆ. ಐಸ್ ಥಂಡರ್ ನಲ್ಲಿ ಕಾಫಿ ಕುಡಿಯುತ್ತಿರಬೇಕಾದರೆ ನಿಮಗೆ ಪಾರ್ಕಿಂಗ್ ಲಾಟಲ್ಲಿ ನಿಂತ ನಿಮ್ಮ ಪಲ್ಸರ್ ಬಗ್ಗೆ ಒಂಚೂರು ಭಯವಿಲ್ಲದಿದ್ದರೆ ನೀವು ಪರಮಸುಖಿ ಸಿಟಿಯುವಕ. ಜೆ.ಸಿ.ರೋಡಿನ ಜಂಕ್ಷನ್ನಲ್ಲಿ ನನ್ನ ಬದುಕಿನ ಗತಿಯೇನೆಂದು ನೀವು " ಹಾಗೇ ಸುಮ್ಮನೆ" ಯಾದರೂ ಯೋಚನೆ ಮಾಡಿರುತ್ತೀರಿ . ಪೆಟ್ರೋಲ್ ಬೆಲೆ ಹೆಚ್ಚಾಯ್ತೆಂದು, ಸಂಬಳದಲ್ಲಿ ಇನ್ನು ಉಳಿತಾಯ ಮಾಡುವುದು ಕಡಿಮೆಯಾಗಬಹುದೆಂದು ನೀವು ಒಂದ್ ಸರ್ತಿ ನೂ ಯೋಚ್ನೆ ಮಾಡಿಲ್ಲ ಅಂತ ನನಗೆ ಹೇಳ್ಬೇಡಿ.



ಹಾಗಂತ ಅನ್ಯ ಊರಿನವರು ಬದುಕಲು ಹೋರಾಟ ನಡೆಸುತ್ತಿಲ್ಲ ಅಂತ ಅಲ್ಲ, ಆದರೆ ಅದರ intensity ಬಗ್ಗೆ ನನಗೆ ಗೊತ್ತಿಲ್ಲ. ಅವರಿಗೆ ಏನಾದರಾಗಲಿ, ಪ್ರಕೃತಿ ಮಾತೆ ಜೊತೆಗಿದ್ದಾಳೆ. ಅವರೆಂದೂ ಪ್ರಕೃತಿಗೆ ಅನ್ಯಾಯ ಮಾಡಿಲ್ಲ, ಅದಕ್ಕೆ ನ್ಯೂಟನ್ನಿನ ಮೂರನೆಯ ನಿಯಮವನ್ನು ಪ್ರಕೃತಿಯೂ ಅನುಸರಿಸಿದ್ದಾಳೆ .ಅವಳು ಅಲ್ಲಿ ಶಾಂತ ಸ್ವರೂಪಿ, ಚಿತ್ತಪ್ರಚೋದಕಿ. ಥರಥರದ ಹೊಸ ಕ್ರಿಯಾಶಕ್ತಿ ಪ್ರಚೋದಕ ಸಮಸ್ಯೆಗಳು ಅಲಲ್ಲಿ ಸಿಗುತ್ತವೆ, ಅದನ್ನು ಬಿಡಿಸುತ್ತಾ ಬಿಡಿಸುತ್ತಾ ಅವರ ನೋಟ, ಯೋಚನಾಶಕ್ತಿ, ಎಲ್ಲವೂ ನಮಗಿಂತ ಹೆಚ್ಚು ಚೆನ್ನಾಗಿ ಬೆಳೆಯುತ್ತದೆ ಅಂತ ನನ್ನ ಅನಿಸಿಕೆ. ಇದು ಸರಿಯಿಲ್ಲದಿರಲೂ ಬಹುದು.


ಊಟ ವಸತಿಗಾಗಿ ಹೋರಾಡುವವರನ್ನು ನಾನು ಹಳ್ಳಿಯಲ್ಲಿ ನೋಡಿಲ್ಲ...(ನನ್ನ ಅತ್ಯಲ್ಪ ಪ್ರಯಾಣದ ಅನುಭವಗಳಲ್ಲಿ). ಊಟ ವಸತಿಗಾಗಿ ಇಲ್ಲಿ ನಾವು ಹೋರಾಡುವಾಗ ಕಾವ್ಯಮಯ ಚಿಂತನೆ ಮಾಡಲು ಸಾಧ್ಯವೇ ? ದಿನ ನಿತ್ಯದ ತಾಕಾಟ, ನಮ್ಮ ಅಹಂಕಾರದ ಅಟ್ಟಹಾಸದ ಮಧ್ಯ ನಮ್ಮ ಬದುಕಿನ ಕ್ಷಣಕ್ಷಣವನ್ನು "ಬದುಕು"ವುದು ಶಾಪಿಂಗ್ ಮಾಲಲ್ಲಿ ಚಾಕಲೇಟು ಖರೀದಿಸಿದಷ್ಟು ಸುಲಭವೇ ?

ಅಲ್ಲಿ ನಾನು ಒಳ್ಳೇ ಮನಸ್ಸಿರುವವರನ್ನ ಹೆಚ್ಚು ನೋಡಿದ್ದೇನೆ. ಉದಾತ್ತಚಿತ್ತರನ್ನ ನೋಡಿದ್ದೀನಿ. ಅರಿಷಡ್ವರ್ಗಗಳು ಪ್ರತಿ ಮಾನವನಲ್ಲಿ ಇರುತ್ತದೆಯಾದರೂ, ಅದು ಹೆಚ್ಚು expressive ಆಗದಂತೆ ಅಲ್ಲಿನ ಪ್ರಕೃತಿ ನೋಡಿಕೊಂಡಿದೆ. ಮತ್ತು, ಹಳ್ಳಿಯವರ ಸಂಸ್ಕೃತಿಯಲ್ಲಿ ಸಹಿಷ್ಣುತೆ by default, ಇದೆ. ಇವುಗಳಲ್ಲಿ ಒಂದಾದರೂ ನಿಮಗೆ ಸಿಟಿಯಲ್ಲಿ ಕಾಣಸಿಗುತ್ತದೆಯೆ? ನಾವು ಸಹಿಷ್ಣುಗಳೇ ? ಒಂದು ದಿನವೂ ನಾವು ಗೊಣಗಾಡದೇ ಇದ್ದೇವೆಯೇ ?

ಇನ್ನೊಂದು ಮಹತ್ವಪೂರ್ಣವಾದ ಅಂಶ ಊರಿನಲ್ಲಿರುವವರ ಜೀವನ ಶೈಲಿ. ಈಗೀಗ ಡಿಶ್ಶುಗಳು ಅಲ್ಲಿ ಕಾಲಿಟ್ಟಿದ್ದರೂ, ಜಾನಪದ ಗೀತೆಗಳನ್ನ ಅವರು ಮರೆತಿಲ್ಲ. ಟ್ರಾಕ್ಟರ್ರುಗಳು ಬಂದಿದ್ದರು ಎತ್ತುಗಳು ಅನಾಥವಾಗಿಲ್ಲ. ಹೊಸದನ್ನು ಅವರು ಸ್ವಾಗಿತಿಸಿದ್ದಾರೆ, ಅಳವಡಿಸಿಕೊಂಡಿದ್ದಾರೆ ಹೊರತು ನಮ್ಮಂತೆ ಎಲ್ಲದಕ್ಕೂ ದಾಸರಾಗಿಲ್ಲ. ಅವರ ಸಂಸ್ಕಾರ ನಮ್ಮ ಸಂಸ್ಕಾರದಷ್ಟು ಬಲಹೀನ ಮತ್ತು ಸತ್ವಹೀನವಾಗಿಲ್ಲ.

ನಾವು ಕಥೆ ಬರೆಯಲು ನಮ್ಮ ಜೀವನಶೈಲಿ, ವಾತಾವರಣ ಮತ್ತು ಸಂಸ್ಕಾರ, ಇವು ಮೂರು ಮುಖ್ಯ. ನಮ್ಮ ಬದುಕಿನಲ್ಲಿ ಈಗ ಬಾಳೆಯ ಎಲೆಯ ಸಂಸ್ಕಾರದ ಬದಲು ಬಫೆಟ್ ಕಲ್ಚರ್ ಇದೆ. ಗ್ಲೋವ್ಸ್ ಹಾಕಿ ಸಣ್ಣ ಕೈಮಾಡಿ ಊಟ ಬಡಿಸುವ "sophisticated and hygenic " ಅಡುಗೆಭಟ್ಟರಿದ್ದಾರೆಯೇ ನಲ್ಮೆಯಿಂದ ಇನ್ನೊಂದು ಸ್ವಲ್ಪ ತಿನ್ನು ಎಂದು ಪ್ರೀತಿಯಿಂದ ಬಡಿಸುವ ಬಂಧುಗಳಿಲ್ಲ. ವಿಭಕ್ತ ಕುಟುಂಬಗಳಿಂದಾಗಿ ನಮ್ಮ ಮನಸ್ಸು ವಿಭಾಗಿಸಲ್ಪಟ್ಟಿದೆ. ಪ್ರೀತಿಯ ಬದಲು ನಮ್ಮಲ್ಲಿ ಸ್ವಾರ್ಥ ಮತ್ತು competitive minds ಹೆಚ್ಚಾಗಿದೆ.

ವಾತಾವರಣದಲ್ಲಿ ಶಾಂತಿಯನ್ನು ಕಿತ್ತೊಗೆಯಲು ನಾವು ಟೊಂಕಕಟ್ಟಿ ನಿಂತಿದ್ದೇವೆ. ಮನಶ್ಶಾಂತಿಯ spelling ಅನ್ನು ಮರೆತಿದ್ದೇವೆ. ಮನಸ್ಸಲ್ಲಿ ಶಾಂತಿಯಿಲ್ಲದಿರುವಾಗ, ವಾತಾವರಣ ಅಶುದ್ಧ ಮತ್ತು ಜಿಗುಪ್ಸಾದಾಯಕವಾಗಿರುವಾಗ, ಬದುಕು ದುಸ್ತರವಾಗಿರುವಾಗ ನಾವು ಕಥೆ ಬರೆಯಲು ಸಾಧ್ಯವೇ ?

ಗುರುಗಳು ಡಿವಿಜಿ ಮತ್ತು ಮಾಸ್ತಿಯವರ ಹೆಸರುಗಳನ್ನು ಕಮೆಂಟಿನಲ್ಲಿ ಉಲ್ಲೇಖಿಸಿದ್ದರು. ಗುರುಗಳು ಒಂದನ್ನು ಮರೆತಿದ್ದಾರೆ. ಅವರುಗಳಿದ್ದ ಕಾಲದಲ್ಲಿ ಬೆಂಗಳೂರು " ಉದ್ಯಾನಗಳ ನಗರಿ"ಯಾಗಿದ್ದು, ನವನವೋನ್ಮೇಶಶಾಲಿನಿಯಾಗಿ ಪ್ರಕೃತಿಮಾತೆ ನಳನಳಿಸುತ್ತಿದ್ದಳು. ಈಗ ಬೆಂಗಳೂರು ಬೃಹತ್ತಾಗಿ ಬೆಳೆದು "ಅದ್ವಾನಗಳ ನಗರಿ"ಆಗಿದೆ. ಸ್ಪುರ್ತಿಯ ಸೆಲೆಗಳು ನಾಮಾವಶೇಷವಾಗಿವೆ.

ಅಂಥಾ ಕವಿಪುಂಗವರಿಗೆ ಸ್ಫೂರ್ತಿ ನೀಡಲು ಅವರ ಬಾಲ್ಯ ಚೆನ್ನಾಗಿತ್ತು, ನಮಗಿಂತ ಕೋಟಿ ಪಾಲು ಚೆನ್ನಾಗಿತ್ತು. ಶಾಲೆಯ ಪುಸ್ತಕದ ಭಾರ, ಮಾಥ್ಸ್ ಟೆಸ್ಟಿನ ಭಯ, ಅಪ್ಪನ ಬೆತ್ತ, ಅಮ್ಮನ ವರಾತ, ಆಟದ ಬಯಲುಗಳಿಲ್ಲದ ನಮ್ಮ ಬಡಾವಣೆ ಇವುಗಳ ಮಧ್ಯ ನಮ್ಮ ಬಾಲ್ಯ ನಾಪತ್ತೆಯಾಗಿದೆ. ಕಥೆ ಬರೆಯಲು ಬಾಲ್ಯದ ನೆನಪುಗಳು ಮುಖ್ಯ. ನಮಗೆ ನೆನಪು ಮಾಡಿಕೊಳ್ಳುವಂತಹಾ ನೆನಪುಗಳು ಇವೆಯೇ ? ನನಗಂತೂ ಇಲ್ಲ.

ಚಿಕ್ಕವಯಸ್ಸಿನಲ್ಲಿ ಅವರು ಅವಿಭಕ್ತ ಕುಟುಂಬದಲ್ಲಿದ್ದರು, ಕಥೆ ಹೇಳಲು ಅಜ್ಜಿ ತಾತಂದಿರಿದ್ದರು. ಆಟವಾಡಲು ಅಣ್ಣ ತಮ್ಮ ದಾಯಾದಿಗಳಿದ್ದರು. ನಮಗೀಗ ಯಾರಿದ್ದಾರೆ ಕರ್ಮಕಾಂಡ ಪ್ರಭುಗಳೇ ?

ನಾವಿಲ್ಲಿ ಏನು ಮಾಡುತ್ತಿದ್ದೇವೆ ಗೊತ್ತಾ ಕರ್ಮಕಾಂಡ ಪ್ರಭುಗಳೆ ? ಬುದ್ಧಿವಂತರಾಗಲು ಹೋಗಿ ಹೃದಯಶೂನ್ಯರಾಗುತ್ತಿದ್ದೇವೆ. ನಾವು ಏನನ್ನು ಕಳೆದುಕೊಂಡಿದ್ದೇವೆ ಗೊತ್ತಾ ? ನಮ್ಮನ್ನೇ !!

ಸ್ವಾರ್ಥದಲ್ಲಿ ನಾವು ನಮ್ಮತನ ಮರೆತಿದ್ದೇವೆ. ಮನಸ್ಸನ್ನು ಬೆಳೆಯಲು ಬಿಡದೇ ಮುಠ್ಠಾಳರಾಗಿದ್ದೇವೆ. ನಾವು ಹೃದಯಶೀಲರಾಗದ ಹೊರತು ನಾವು ಉದ್ಧಾರವಾಗುವುದಿಲ್ಲ. ನಾವು ಉದ್ಧಾರವಾಗದೇ ಕಥೆಗಳನ್ನು ಬರೆಯಲು ಸಾಧ್ಯವಿಲ್ಲ.

ಬೇರೆ ಊರುಗಳಿಂದ ಬಂದವರಿಗೆ ನೆನಪಿನ ಸರಕಿದೆ. ಅವರು ಕಥೆ ಬರೀತಾರೆ. ನಾವು ?

ಮತ್ತೆ, ಸುಶ್ರುತರ ಕಮೆಂಟು :

ನಗರದ ಕಥೆಗಲನ್ನು ಜನ ಯಾಕೆ ಸ್ವೀಕರಿಸುವುದಿಲ್ಲ ಅಂತ ಪ್ರತಿಭಾ ನಂದಕುಮಾರ್ ಅವರು ಕೇಳಿದರೆಂದಿದ್ದಾರೆ. ನನಗನ್ನಿಸಿದ್ದು ಇಷ್ಟು :


ಜನಕ್ಕೆ ನಗರದ ಕಷ್ಟಗಳ ನೈಜ ಚಿತ್ರಣಕ್ಕಿಂತ ಕಾಣದ ಹಳ್ಳಿಯ ಕಲ್ಪನೆಯೇ ಹೆಚ್ಚು ಚೇತೋಹಾರಿ. ಕೆಲಕಾಲವಾದರೂ ಕಲ್ಪನಾಛಾಯೆಯಲ್ಲಿ ಮನಸ್ಸು ಶಾಂತವಾಗಿರಬೇಕೆಂದು ಇಚ್ಛೆಪಡುವ ಮಂದಿಯೇ ಜಾಸ್ತಿ ಅಂತ ನನ್ನ ಭಾವನೆ.

ಸಖತಾಗಿ ಕೊರೆದಿದ್ದೇನೆ ಅನ್ನಿಸುತ್ತಿದೆ ಅಲ್ವಾ ? ಅದಕ್ಕೆ ಕಮೆಂಟಿನಲ್ಲಿ ಹಾಕಲಿಲ್ಲ. ನನ್ನ ಕೊರೆತಕ್ಕಂತಲೇ ಇದಿರುವಾಗ ನಾನು ಅಲ್ಲಿ ಯಾಕೆ ಬಂದು ಕೊರೆಯಲಿ ?ಸಖತಾಗಿ ಕೊರೆದಿದ್ದೇನೆ ಅನ್ನಿಸುತ್ತಿದೆ ಅಲ್ವಾ ? ಅದಕ್ಕೆ ಕಮೆಂಟಿನಲ್ಲಿ ಹಾಕಲಿಲ್ಲ. ನನ್ನ ಕೊರೆತಕ್ಕಂತಲೇ ಇದಿರುವಾಗ ನಾನು ಅಲ್ಲಿ ಯಾಕೆ ಬಂದು ಕೊರೆಯಲಿ ?

ಮತ್ತೆ, head ruled ನೆನ್ನೆ "absolutely right" ಅಂತ ಒಂದೆಳೆಯ ಕಮೆಂಟ್ ಕುಟ್ಟಿದ್ದಳು. ಪುಣ್ಯ, ಬ್ಲಾಗರ್ ವರ...ಪಬ್ಲಿಷ್ ಆಗ್ಲಿಲ್ಲ. ಅದಕ್ಕೆ ಇವತ್ತು ನಾನು ಗಲಾಟೆ ಮಾಡಿ, ಅವಳಿಗೂ ಜ್ಞಾನೋದಯ ಮಾಡಿಸಲಿಕ್ಕೆ, ಅವಳನ್ನು ಮಾತಾಡಲು ಬಿಡದೇ, ನಾನು ಮಾತಾಡಿದ್ದೇನೆ. ನಿಮ್ಮ ಅನಿಸಿಕೆಯನ್ನ ಹೇಳಿ ದಯವಿಟ್ಟು.

-------Z

9 comments:

ಅಂತರ್ವಾಣಿ said...

ಸತ್ಯ ಮಾ.

ಕೊರೆದಿರೋದಂತು.........

Sridhar Raju said...

oLLe article -u...nan abhipraaya na savisthaaravaagi bardideera..goodh :-)

ಕಥೆ ಬರೆಯಲು ಬಾಲ್ಯದ ನೆನಪುಗಳು ಮುಖ್ಯ. ನಮಗೆ ನೆನಪು ಮಾಡಿಕೊಳ್ಳುವಂತಹಾ ನೆನಪುಗಳು ಇವೆಯೇ ?
nange bejjjjjjjan idhe..aadre baree concrete kaadinde nenpu...

ಬೇರೆ ಊರುಗಳಿಂದ ಬಂದವರಿಗೆ ನೆನಪಿನ ಸರಕಿದೆ. ಅವರು ಕಥೆ ಬರೀತಾರೆ. ನಾವು ?
namge baryakke aagalla ri..sarakilla..illirodanne saraku ankondu bardre kathe savakalaagbidutte

oLLe post -u....."absolutely relevant points" idhe ee nimme article nalli...

Harisha - ಹರೀಶ said...

>> ನವನವೋನ್ಮೇಶಶಾಲಿನಿಯಾಗಿ ಪ್ರಕೃತಿಮಾತೆ

ಈ comparison ನಿಮಗೆ ಹೇಗೆ ಹೊಳೆಯಿತೋ ಕಾಣೆ. "ನವನವೋನ್ಮೇಷಶಾಲಿನೀ ಪ್ರತಿಭಾ" ಎಂಬುದು ಕಾಳಿದಾಸ ಪ್ರತಿಭ(talent)ಗೆ ಕೊಟ್ಟಿರುವ definition. ಅದು ಹೇಗೆ ಪ್ರಕೃತಿಗೆ ಹೊಂದಿಕೆಯಾಗುತ್ತದೋ ಕಾಣೆ.

>> ಮನಸ್ಸಲ್ಲಿ ಶಾಂತಿಯಿಲ್ಲದಿರುವಾಗ, ವಾತಾವರಣ ಅಶುದ್ಧ ಮತ್ತು ಜಿಗುಪ್ಸಾದಾಯಕವಾಗಿರುವಾಗ, ಬದುಕು ದುಸ್ತರವಾಗಿರುವಾಗ ನಾವು ಕಥೆ ಬರೆಯಲು ಸಾಧ್ಯವೇ?

ನನ್ನ ಅನುಭವ, ಅನಿಸಿಕೆಗಳ ಪ್ರಕಾರ ಸಾಧ್ಯ. ಕಥೆ, ಕವನ ಇವೆಲ್ಲ ಭಾವನೆಗಳಿಗೆ ಸಂಬಂಧಿಸಿದವು. ಆಯಾ ಭಾವನೆಗೆ ತಕ್ಕಂತೆ ಹುಟ್ಟುತ್ತವೆ. ಬೇಂದ್ರೆಯವರು "ನೀ ಹೀಂಗ ನೋಡಬ್ಯಾಡ ನನ್ನ" ಎಂದಾಗ ಅವರ ಮನಸ್ಸಿನಲ್ಲಿ ಶಾಂತಿಯಿತ್ತೇ? ಬದುಕು ಹಸನಾಗಿತ್ತೇ?

ಅಂದ ಹಾಗೆ, ಕೊರೆದಿದ್ದೇನೆ ಅಂತ ಎರಡೆರಡು ಸಾರಿ ಹೇಳುವ ಅವಶ್ಯಕತೆಯಿರಲಿಲ್ಲ ಎನಿಸುತ್ತದೆ.. ನಮಗೆ ಹೇಗೂ ಅರ್ಥವಾಗಿತ್ತು, ನೀವು ಕೊರೆದಿದ್ದೀರಿ ಎಂದು :-)

Parisarapremi said...

ನೀನು ಜಾತೀಯತೆಯನ್ನು ಎತ್ತಿ ಹಿಡಿಯುತ್ತಿದ್ದೀಯ. ಇದಕ್ಕಾಗಿ ನಿನ್ನ ಈ ಪೋಸ್ಟನ್ನು ನಾನು ಖಂಡಿಸುತ್ತೇನೆ. ನಿನಗೆ ಸಾಮಾಜಿಕ ಕಳಕಳಿ ಇಲ್ಲ. ಪರಭಾಷಾವ್ಯಾಮೋಹ ಕೂಡ ಬಹಿರಂಗವಾಗಿದೆ. ಇನ್ನೂ ಏನೇನು ಬಹಿರಂಗವಾಗಿದೆಯೋ ಈ ಲೇಖನದಲ್ಲಿ ಯಾರಿಗ್ ಗೊತ್ತು!! ;-)

Lakshmi Shashidhar Chaitanya said...

@antarvaani :

sari

@sridhar :

:-)

@harish:

nammanthavarige bhaavanegaLu nettage develop aagidya ? aagidre eShTu intense aagide annodara bagge nange doubt ide. naan idara bagge koreyolla :-)

@parisarapremi :

I dont want to talk to you gurugaLE ;-) :-P

Shree said...

ಇದನ್ನು ಓದುತ್ತಿದ್ದರೆ Our sweetest songs are those that tell of saddest thought ಅಂತ Shelley ಹೇಳಿದ ಮಾತು ನೆನಪಾಯ್ತು.. ಹಾಗೇ ವಸುಧೇಂದ್ರ, ನಾಗರಾಜ್ ವಸ್ತಾರೆ ಬರೆವ ಕಥೆಗಳು ನೆನಪಾಯ್ತು... ಕಥೆಗೆ ನಗರ-ಹಳ್ಳಿ ಅನ್ನುವ ಬೇಧವಿಲ್ಲವೇನೋ... ಅದು ಎಲ್ಲಾದರೂ ಹುಟ್ಟಿಕೊಳ್ಳಬಹುದು... ಸುತ್ತಲ ಬದುಕಿಗೆ ಸ್ಪಂದನ, ಕಥೆ ಕಟ್ಟುವ ತುಡಿತ ಬೇಕು, ಅಷ್ಟೆ ಅಂತ ನನಗನಿಸುತ್ತದೆ.

Lakshmi Shashidhar Chaitanya said...

@ಶ್ರೀ,

ನಿಮ್ಮ ಮಾತನ್ನು ನಾನು ಒಪ್ಪುತ್ತೇನೆ. ಆದರೆ ಸಿಟಿ ಬದುಕಿನಲ್ಲಿ ಸ್ಪಂದನ ಕಡಿಮೆ. ನೆರೆಮನೆಯವರನ್ನೇ ಮಾತಾಡಿಸದೇ ವರ್ಷಾನುಗಟ್ಟಲೆ ಬದುಕಿರುವ ಜನರಿದ್ದಾರೆ ಇಲ್ಲಿ. ಇನ್ನು ಕಥೆ ಬರೆಯುವ ತುಡಿತಕ್ಕೆ ಪ್ರೋತ್ಸಾಹ ಇಲ್ಲ, ಯಾಕಂದ್ರೆ ಎಲ್ಲರೂ ಇಲ್ಲಿ "tensed" !! ನೀವೆಂದಂತೆ ಇವೆರಡಕ್ಕು ಅವಕಾಶ ಸಿಟಿ ಲೈಫಲ್ಲಿ ಸಿಕ್ಕರೆ ಸೂಪರ್!! ಎಲ್ಲಾರೂ ಕಥೆ ಬರಿಬಹುದು ಆಗ !

PaLa said...

>>ಆದರೆ ಸಿಟಿ ಬದುಕಿನಲ್ಲಿ ಸ್ಪಂದನ ಕಡಿಮೆ. ನೆರೆಮನೆಯವರನ್ನೇ ಮಾತಾಡಿಸದೇ ವರ್ಷಾನುಗಟ್ಟಲೆ ಬದುಕಿರುವ ಜನರಿದ್ದಾರೆ ಇಲ್ಲಿ.
ಕರೆಕ್ಟು, ನಾನು ಊರಿಗೆ ಹೋದ್ರೆ ಬಸ್ ಸ್ಟಾಪಿಂದ ಹಿಡ್ದು ಮನೇವರೆಗೂ ದಾರೀಲಿ ಸಿಕ್ಕೋರೆಲ್ಲಾ "ಬೆಂಗ್ಳೂರಿಂದ್ ಈಗ್ ಬಪ್ಪುದ, ಕೆಲ್ಸ ಎಲ್ಲ ಹ್ಯಾಂಗಿತ್" ಅಂತ ಕೇಳೆ ಕೇಳ್ತಾರೆ. ನನ್ನಂತವರನ್ನ ಮಾತಾಡ್ಸಿ ಅವ್ರಿಗೆ ಏನೂ ಆಗಬೇಕಾದ್ದಿಲ್ಲ, ಆದ್ರೂ ಏನೋ ಮಮತೆ..

ಮತ್ತೆ ನಮ್ಮೂರ ಸಮುದ್ರಕ್ಕೆ ಹೋದ್ರೆ ನನ್ನ ಗರ್ಲ್ ಫ್ರೆಂಡ್ ಒಬ್ರಿದಾರೆ.. ಸೂಮಾರು ೫೦ ವರ್ಷ ಆಗಿದೆ ಅವ್ರಿಗೀಗ.. ನಮ್ಮನೆ ಹತ್ರಾನೆ ಅದು ಇರೋದ್ರಿಂದ ನಾನು ಊರಲ್ಲಿದ್ರೆ ಹೆಚ್ಚು ಕಡಿಮೆ ದಿನಾ ಹೋಗ್ತೀನಿ ಅಲ್ಲಿಗೆ.. ಚಿಕ್ಕವ್ನಿರಬೇಕಾದ್ರೆ ಕಪ್ಪೆ ಚಿಪ್ಪನ್ನೆಲ್ಲಾ ಹುಡ್ಕೊಂಡು ಹೋಗ್ತಿದ್ದೆ. ಹೀಗೆ ಒಂದು ದಿನ ಪರಿಚಯ ಆದ ಅವ್ರು ಪ್ರತೀ ವರ್ಷ ಕಪ್ಪೆ ಚಿಪ್ಪು ಸಂಗ್ರಹಿಸಿ ನನಗೆ ಕೊಡ್ತಾ ಇದ್ರು.. ತೀರಾ ಒಂದು ವರ್ಷದ ಕೆಳಗೆ ಮತ್ತೆ ಇನ್ನೊಮ್ಮೆ ಸಿಕ್ಕಿದ್ರು.. "ಅಯ್ಯೋ ನಂ ಮಗು, ಹೆಂಗಿದ್ದಿ" ಅಂತ ಗಲ್ಲ ಸವರಿ, ೪ ಚಾಕಲೇಟ್ ಕೊಡ್ಸಿ, ಬಾಯ್ತುಂಬ ಮಾತಾಡ್ಸಿ ಕಳ್ಸಿದ್ರು.. ನಂಗೆ ಅವ್ರು ನನ್ನ ಮೇಲಿಟ್ಟ ಮಮತೆ ಹೇಳೋಕೆ ಏನೂ ಸಾಕಾಗ್ತ ಇಲ್ಲ..

ಹೋಗ್ಲಿ ಬಿಡಿ, ಆದ್ರೂ ಒಂದು ವಿಷ್ಯ ನಿಜ ಪಟ್ಟಣದ ಜೀವನ ಒಗ್ಗಿದ ಮೇಲೆ ಮತ್ತೆ ಹಳ್ಳಿಯ ಜೀವನ ನಿಧಾನವಾಗಿ, ಕಷ್ಟಕರವಾಗಿ, ಊರಿನವರೆಲ್ಲಾ ಅಧಿಕ ಪ್ರಸಂಗಿಗಳ ತರ ಕಾಣಿಸಬಹುದು.. ಕಾರಂತರ ಬಾಲವನಕ್ಕೆ ಬಂದು ಗುಡ್ಡ ಕಾಡನ್ನೆಲ್ಲ ನೋಡಿದ ಮೂರ್ತಿರಾಯರು "ಎಷ್ಟು ರಮಣೀಯವಾಗಿದೆ, ನಂಗೂ ಇಂತಾದ್ದೊಂದು ಗುಡ್ಡ ಕೊಡ್ಸಿ" ಅಂತ ಕೇಳ್ಕೊಂಡ್ರಂತೆ,, ಅದಕ್ಕೆ ಕಾರಂತ್ರು "೨-೩ ದಿನ ರಮಣೀಯವಾಗಿ ಕಂಡಿದ್ದು, ವರ್ಷ ಪೂರ್ತಿ ಇಲ್ಲೇ ಇದ್ರೆ ಮರಣೀಯವಾಗಿ" ಕಾಣಿಸಬಹುದು ಅಂತ ಹೇಳಿದ್ರಂತೆ..

ಮತ್ತೆ ನಂಗೆ ಹಳ್ಳಿ ಜೀವನಾನೇ ಇಷ್ಟ, ಯಾಕಂದ್ರೆ ನಾನೂ ನಿಧಾನ.. ಅದಿಕ್ಕೆ ಮತ್ತೆ ನಮ್ಮುರಿಗೇ ವಾಪಾಸ್ ಹೋಗ್ತೀನಿ, ಇನ್ನೈದು ವರ್ಷದಲ್ಲಿ.. ತುಂಬಾ ಜನ ಚಾಲೆಂಜ್ ಹಾಕಿದಾರೆ ನೀನು ಹೋಗೊಲ್ಲಾ ಅಂತ, ಆದ್ರೆ ನಾನು ಹೋಗೇ ಹೋಗ್ತೀನಿ..

ವಿ.ರಾ.ಹೆ. said...

they live, we survive.- its so true annisibidthu...

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...