Wednesday, September 24, 2008

ನಿಜವಾದ ಐವತ್ತನೇ ಪೋಸ್ಟ್ !

Z : ಏನ್ ಅರ್ಥ ? ಹಿಂದೆ ಬರ್ದಿದ್ದು ಐವತ್ತನೇದಲ್ವ ?

ನಾನು : ಅಲ್ಲ.

Z : ಮತ್ತೆ....

ನಾನು : ಬ್ಲಾಗರ್ ಗೆ ಕೌಂಟಿಂಗ್ ಬರಲ್ಲ ಅಂತ ನಂಗೆ ಗೊತ್ತಿರ್ಲಿಲ್ಲ. ನಲವತ್ತೊಂಭತ್ತನ್ನ ಐವತ್ತು ಅಂತ ಹೇಳಿ ನನಗೆ ಮೋಸ ಮಾಡಿದೆ...ನಾನು ಯಾವ ಕೋರ್ಟಲ್ಲಿ ಕೇಸ್ ಫೈಲ್ ಮಾಡಲಿ ಅಂತ ಯೋಚ್ನೆ ಮಾಡ್ತಿದಿನಿ.

Z : ಬ್ಲಾಗರ್ ಗೆ ಕೌಂಟಿಂಗ್ ಬರಲ್ವ ?

ನಾನು : unfortunately, yes. Blogger does not know how to count.

Z : ನೀನು ಬ್ಲಾಗರ್ ಅನ್ನು ಬೈಯ್ಯುವ ಮುನ್ನ ನಿನಗೆ ಕೆಲವು ಜ್ಞಾನೋದಯವನ್ನು ಮಾಡಿಸಬೇಕಿದೆ.

ನಾನು : ಸುಮ್ನೆ ತೊಂದ್ರೆ ತಗೋಬೇಡ.

Z : ಇಲ್ಲ, ತೊಂದ್ರೆ ತಗೋತಿನಿ. ಇಲ್ಲಾಂದ್ರೆ, ನೀನು "ಬ್ಲಾಗರ್ ನ ಬೈಯಕ್ಕೆ ನನ್ನ ಹತ್ರ ಶಬ್ದ ಗಳೇ ಇಲ್ಲ, ಅದಕ್ಕೆ characters ನಲ್ಲಿ ಬೈತಿನಿ" ಅಂತ 10 ! (ten factorial ) ways ನಲ್ಲಿ ಬೈತೀಯಾ.

ನಾನು : ಇಷ್ಟ ಪಟ್ಕೊಂಡ್ ತೊಂದ್ರೆ ತಗೋಳೋದ್ರಲ್ಲಿ ನಿಸ್ಸೀಮೆ ! ಸರಿ, ತೊಂದ್ರೆ ತಗೊ.

Z : ನೋಡು, ಬ್ಲಾಗರ್ ನಲ್ಲಿ ಆಟೋ ಸೇವ್ ಆಪ್ಶನ್ ಇದೆ. ಅದು ಡ್ರಾಫ್ಟ್ ಗಳನ್ನ ಆಟೋ ಸೇವ್ ಮಾಡತ್ತೆ. ನೀನು ಪ್ರತೀ ಸಲ ಟೈಪ್ ಮಾಡಿ ಸೇವ್ ಮಾಡಿದ್ದ್ ಮೇಲೆ microsoft word ನಲ್ಲಿ ಒಂದು ಕಾಪಿ ಇಟ್ಟುಕೊಳ್ಳೊ ಅವಶ್ಯಕತೆ ಇಲ್ಲ.

ನಾನು : !!!!!!!

Z : ವೈಟ್...ಇಷ್ಟ್ ಬೇಗ ಗಾಬ್ರಿ ಆಗ್ಬೇಡ. ಇನ್ನೊಂದಿಷ್ಟ್ ಇದೆ. ನೀನು ಖಾಲಿ ಪೋಸ್ಟ್ ನ ಸ್ವಲ್ಪ ಹೊತ್ತು ಹಾಗೆ ಬಿಟ್ಟಿದ್ದರೆ ಅದು ಒಂದು ಹೊಸಾ ಪೋಸ್ಟ್ ಆಗಿ ಸೇವ್ ಆಗತ್ತೆ.

ನಾನು : !!!!!!!!!!!!!!!!!!!!

Z : ಬ್ಲಾಗರ್ ಪೋಸ್ಟ್ ಗಳನ್ನ published, unpublished ಅಂತ categorize ಮಾಡಲ್ಲ. ಡ್ರಾಪ್ಟ್ ಸಮೇತ ಕೌಂಟ್ ಮಾಡಿರತ್ತೆ.

ನಾನು : ಅದೇ ತಪ್ಪು. ಏನ್ ಧಾಡಿ ಅದಕ್ಕೆ ವಿಭಾಗೀಕರ್ಸಕ್ಕೆ ?

Z : ಬ್ಲಾಗರ್ ಪಾಪ ನಿಧಾನಕ್ಕೆ ಬೆಳಿತಿದೆ. ನೀನು growth ನ accelerate ಮಾಡ್ಬೇಡ.

ನಾನು : ಅನ್ಯಾಯ !!!!!!!!!!!!!!!!!!!!!!!!!!!!!!!

Z : ಶ್ !!!!!!!! ಕಿರ್ಚ್ಬೇಡ !! ಒಮ್ಮೊಮ್ಮೆ ಮೊಬೈಲಲ್ಲಿ ನಮಗೆ ನಮಗೆ ಗೊತ್ತಿರೋರಿಂದ್ಲೇ ಪೋನ್ ಬಂದಿರತ್ತೆ...ನಾವ್ ಹಲೋ ಹಲೋ ಅಂತ ಹೊಡ್ಕೋತಿರ್ತಿವಿ...ಅವ್ರಿಗೆ ಕಾಲ್ ಬಟನ್ ಪ್ರೆಸ್ ಆಗಿದೆ ಅಂತ ಗೊತ್ತೇ ಇರಲ್ಲ...ಆಮೇಲೆ ನಾವ್ ಫೋನ್ ಮಾಡಿ ಯಾಕ್ ಏನು ಮಾತಾಡ್ತಿಲ್ಲ ಅಂದ್ರೆ ನಾವ್ ಫೋನ್ ಮಾಡಿದ್ವಾ ಅಂತ ಅವ್ರು ನಮ್ಮನ್ನೇ ಕೇಳಲ್ವಾ....ಹಾಗೆ ಇದು ನು !!!

ನಾನು : ಗ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್ರ್.............

Z : ಶಾಂತಿ ಸಹನೆ ಧೈರ್ಯ ತಾಳ್ಮೆ !!!

ನಾನು : ಇವರು ಯಾರೂ ನನಗೆ ಗೊತ್ತಿಲ್ಲ !!!

Z : ಇವ್ರು ಮನುಷ್ಯರಲ್ವೆ ಹೋಪ್ಲೆಸ್ಸ್ ಫೆಲ್ಲೋ...

ನಾನು : ಓಹ್ !! ಅದಕ್ಕೆ ಗೊತ್ತಿಲ್ಲ.

Z : ಅದ್ ಹೋಗ್ಲಿ...ಹಿಂದೆ ತಾವು ಒಂದು ಬ್ಲಾಂಕ್ ಪೋಸ್ಟನ್ನು ಸೇವ್ ಮಾಡಿ ಅದನ್ನ ನೋಡದೇ ಇದ್ದುದರ ಪರಿಣಾಮವಾಗಿ, ನಲವತ್ತೊಂಭತ್ತು published ಪೋಸ್ಟ್ ಗಳು, ಒಂದು unpublished ಪೋಸ್ಟ್ ಸೇರಿ ಐವತ್ತಾಗಿದೆ.
ಜ್ಞಾನೋದಯ ಆಯ್ತ ?

ನಾನು : pling !!! ಆಯ್ತು.

Z : ನಲವತ್ತೊಂಭತ್ತನೇ ಪೋಸ್ಟ್ ನಲ್ಲಿ ಬರೆದಿದ್ದನ್ನ ಇಲ್ಲಿಗೆ carry forward ಮಾಡ್ಕೊಂಬಿಡಿ ಎಲ್ಲಾರು ದಯವಿಟ್ಟು... ಧನ್ಯವಾದಗಳು !!

5 comments:

Anveshi said...

ನಮ್ಮಗೂ ಈ ಪೋಸ್ಟ್ ನೋಡಿದ್ಮೇಲೇ ಜ್ಞಾನೋದಯ ಮಾಡ್ಸಿದ್ರಿ....

ಸರಿ... ಪೋಸ್ಟ್‌ಗಳು ತುಂಬಾ ತುಂಬಾ ಚೆನ್ನಾಗಿವೆ ಅಂತ ಒಂದು ಕಂಗ್ರಾಟ್ಸ್ ಹೇಳೋಣವೆಂದ್ರೆ.... ನ ಬ್ರೂಯಾತ್ ಅಸತ್ಯಂ ಪ್ರಿಯಂ!!!!

Harisha - ಹರೀಶ said...

Z : ಶಾಂತಿ ಸಹನೆ ಧೈರ್ಯ ತಾಳ್ಮೆ !!!
ನಾನು : ಇವರು ಯಾರೂ ನನಗೆ ಗೊತ್ತಿಲ್ಲ !!!
Z : ಇವ್ರು ಮನುಷ್ಯರಲ್ವೆ ಹೋಪ್ಲೆಸ್ಸ್ ಫೆಲ್ಲೋ...

LOL!!!
ನಿಮಗಿಂಥಾ ideaಗಳು ಎಲ್ಲಿಂದ ಹೊಳೀತಾವೆ ಅಂತ...

Lakshmi Shashidhar Chaitanya said...

ಅಸತ್ಯ ಅನ್ವೇಷಿ :

ಜ್ಞಾನೋದಯ ಆದ್ಮೇಲೆ...ಪ್ಲಿಂಗ್ ಅಂತ ಬರಿಬೇಕು ಕಮೆಂಟಿನಲ್ಲಿ :) ನೀವು ಅಸತ್ಯವನ್ನು ಹೇಳದಿದ್ದರೂ ಪರ್ವಾಗಿಲ್ಲ, ನಾವು ನಮ್ಮ ದೂರ(ನಿದ್ರಾ)ದೃಷ್ಟಿಯಿಂದ ಎಲ್ಲವನ್ನೂ ತಿಳಿದುಕೊಂಡಿದ್ದೇವೆ :P

ಹರೀಶ್ :

ನಿಜ್ವಾಗ್ಲು ಗೊತ್ತಿಲ್ಲ ! :C...ಇನ್ನೊಮ್ಮೆ ಜ್ಞಾನೋದಯ ಆದಾಗ ಇದು ತಿಳೀದರೆ ನಿಮಗೂ ತಿಳಿಸುವೆ !

sachidananda K.N said...

congrates re pls continue ur work.
i liked tht 4 lines
shanthi,sahane,dirya,thalme addikke nevu kottiro response..adhanna odhi sakath nagu banthu.

Sridhar Raju said...

nimma shathakoTi blog article gu heege naanu comment maadbeku antha ishTa padtheeni... :-) bega bega bardbidi...

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...