Z : hiccup !! 1...2..3..sniff !! 4..5..6..7..8..9..10..sob !!!! 11..12...13..14...sniff !!! 15..16...17..18..19..20 !
ಇಪ್ಪತ್ತು ಬಕೆಟ್ ಆಯ್ತು.
ನಾನು : ನೆನ್ನೆ ಯಾವ ವಾರ ?
Z : ಬುಧವಾರ.
ನಾನು : ನಾಳೆ ಯಾವ ವಾರ ?
Z : ಶುಕ್ರವಾರ
ನಾನು : ಇವತ್ತು ?
Z : ಗುರುವಾರ.
ನಾನು : ಅಶಶ್ಶೋ !!!!
Z : ಯಾಕಮ್ಮ ಏನಾಯ್ತು ?
ನಾನು : ನಿನ್ನನ್ನ ಈಡಿಯಟ್ ಅಂತ ಕರಿಯೋ ಹಾಗಿಲ್ಲ ಇನ್ನು ನಾನು ! ಯಾಕಂದ್ರೆ ನಿನಗೆ ೧-೨೦ ರವರೆಗೆ ಎಣಿಸಲು ಬರುತ್ತದೆ ! ಮತ್ತು ವಾರಗಳು ನೆನಪಿನಲ್ಲಿದೆ ! Idiot is not the word for you !
Z : sorry ಅಂತ ಬೇಡ್ಕೊತಿದಿನಲ್ಲ.....ಮತ್ತೆ ಯಾಕ್ ಈ ಥರ ಅವಮಾನ ಮಾಡ್ತಿದ್ಯಾ ?
ನಾನು : ಅವಮಾನ ಮಾಡ್ತಿಲ್ಲ...ನಿಜ್ವಾದ್ ಸತ್ಯ ಹೇಳ್ತಿದಿನಿ. ಇನ್ಮೇಂದ ಇಷ್ಟ ಬಂದಾಗೆಲ್ಲ ಯಾರ್ಯಾರ್ನು ಈಡಿಯಟ್ ಅಂತ ಕರಿಯೋ ಹಾಗಿಲ್ಲ.
Z : ಹೌದಾ ?
ನಾನು : ಹು !
Z : ಅನ್ಯಾಯ ಒಂದು ಬೈಗುಳ ಕಮ್ಮಿಯಾಗೊಯ್ತಲ್ಲ ನಮ್ dictionary ಲಿ !
ನಾನು : ಹು....ಬಿಡು ಒಂದು ಹೊಸ ಪದ ನ coin ಮಾಡಿದ್ರೆ ಆಯ್ತು. more than that,ನನಗಿದ್ದ ಕಿರೀಟ ಗೊತ್ತಲ್ಲ ? ಅದು ಕಳಚಿ ಬಿತ್ತು !! :( :( :(
Z : ಹೌದಾ ? ಅದೆ " invincible bargain queen " ಕಿರೀಟ ? ಬಿದ್ದೊಯ್ತ ? ಎಲ್ಲಿ ? ಯಾವಾಗ ? ಹೇಗೆ ?
ನಾನು : answer to question number 1: N.R colony market ನಲ್ಲಿ
answer to question number 2:ಸೋಮವಾರ ಬೆಳಿಗ್ಗೆ.
answer to question number 3: ಹೇಗ್ ಬಿತ್ತಪ್ಪಾ ಅಂದ್ರೆ....
ಠೊಪ್ !!
ಕಿಲಿಕಿಲಿಕಿಲಿಕಿಲಿಕಿಲಿಕಿಲಿಕಿಲಿಕಿಲಿಕಿಲಿಕಿಲಿ.......
ಕಿಲ್
ಕಿಲಿ ಕಿಲಿ
ಕಿಲ್ ಕಿಲ್ ಕಿಲಿ
ಕ್ಲುಂಗ್ ಕ್ಲಿಂಗ್ ಕ್ಲೆಂಗ್
ಕಿಲ್ ಕಿಲ್ ಕಿಲಿ
ಚಿಳ್ಳ್ಳ್......
ಅಂತ ಬಿತ್ತು.ಟಿಣ್!
Z : ಯಾಕೋ ನೋಟ್ ಮತ್ತು ಚಿಲ್ಲರೆ ಬಿದ್ದ ಶಬ್ದ ಕೇಳಿಸುತ್ತಿದೆಯಲ್ಲಾ ?
ನಾನು : ಮತ್ತೆ ? ನಾನು bargain ಮಾಡಿ ಉಳಿಸಿದ್ದ ದುಡ್ಡನ್ನೆಲ್ಲಾ ಸೇರಿಸಿ ಮಾಡಿದ ಕಿರೀಟ ಅದು ! ಸಾವಿರದ ನೋಟು ನವಿಲ್ಗರಿ ಥರ ಇತ್ತು ನನ್ ಕಿರೀಟದ ಮೇಲೆ. ಅದರ ಕೆಳಗೆ, ಮಿಕ್ಕೆಲ್ಲಾ denomination ಗಳ ಒಂದ್ part. base ನಲ್ಲಿ ನಾಣ್ಯಗಳ ಎಲ್ಲಾ ಡಿನಾಮಿನೇಷನ್ ಗಳೂ ಇದ್ದವು. ಥಳ ಥಳ ಹೊಳಿತಿತ್ತು ನನ್ನ ಕಿರೀಟ !! ಓಡೆದು ಹೋಯ್ತು !!! ವಾಆಆಆಆಆಆಆಆಆಆಆಆಆಆಆಆಆಆಆಆಆ !!!!!!!!!!!!!!!!!!!!!!!!
Z : ಆದದ್ದಾಯ್ತು. ಅಳಬೇಡ. ಕಿರೀಟ ಬಿದ್ರೆ ಬೀಳಲಿ, ಮತ್ತೆ ಮಾಡಿಸ್ಕೋಬಹುದು. ನಿನಗೆ ಒಂದು ಇಷ್ಟು ಬಿರುದುಗಳಿತ್ತಲ್ವ ? "ಜಿಪುಣ ಸಾಮ್ರಾಜ್ಯ ಸಂಸ್ಥಾಪಕಿ, ಜಿಪುಣ ಸಾಮ್ರಾಜ್ಯಏಕಚಕ್ರಾಧಿಪತ್ನಿ, ಸ್ನೇಹಿತರಿಗೆ ಗಿಫ್ಟ್, ಪುಸ್ತಕ, ನಾಟಕ ಮತ್ತು ಕಾಪಿ ಮತ್ತು ಭೇಲ್ ಪುರಿಗೆ ಮಾತ್ರ ದುಡ್ಡು ಖರ್ಚು ಮಾಡಲು ಯೋಚಿಸದೇ, ಮಿಕ್ಕಿದ್ದೆಲ್ಲಕ್ಕೂ ಮಿನಿಮಮ್ ಒಂದು ಲಕ್ಷ ಸರ್ತಿ ಯೋಚನೆ ಮಾಡುವ ಏಕಮೇವಾದ್ವಿತೀಯ ಏಕಮಾತ್ರ ವ್ಯಕ್ತಿ....ಅಂತೆಲ್ಲ !!!
ನಾನು : ಪ್ಲೀಸ್ ನೆನಪಿಸಿ ಹೊಟ್ಟೆ ಉರ್ಸ್ಬೇಡ....ಆ ಬಿರುದುಗಳೂ ಬಿದ್ದುಹೋದವು !!!
Z : ಛೆ ಛೆ ಛೆ !!! ಅನ್ಯಾಯ...ಹೀಗಾಗ್ಬಾರ್ದಿತ್ತು. ಈ ಬಿರುದುಗಳನ್ನ ಮತ್ತೆ ಸಂಪಾದಿಸೋದು ಸ್ವಲ್ಪ ಕಷ್ಟ. ಇರ್ಲಿ...ಹೇಗಾಯ್ತು ಇದೆಲ್ಲ ?
ನಾನು : ಕೇಳ್ಸ್ಕೋ ಕಥೆ ನ.
Z : ಹೇಳಮ್ಮ...
ನಾನು : ಸೋಮವಾರ ಬೆಳಿಗ್ಗೆ ಅಮ್ಮ ಕೊಟ್ಟ 200 cms long list ಅನ್ನು ಹಿಡಿದು ಶಾಪಿಂಗ್ ಹೊರಟೆ. ಮೊದಲು ದಿನಸಿ ಅಂಗಡಿಯವನಿಗೆ one part of the list ಕೊಟ್ಟು, ಸಾಮಾನೆಲ್ಲ ಹಾಕಿಟ್ಟಿರಿ, ಬೇರೆ ಶಾಪಿಂಗ್ ಮುಗಿಸಿ ಬಂದು ತೆಗೆದುಕೊಳ್ಳುವೆ ಎಂದು ಹೇಳಿದೆ. ಅವನೂ ಒಪ್ಪಿದ. ಅಲ್ಲಿಂದ ಸೀದಾ n.r.colony market ಗೆ ಹೋದೆ. ನಾನು, ನನ್ನ ಹಿಂದೆ ನಮ್ಮ ಡ್ರೈವರ್...ಸಾಮಾನೆಲ್ಲಾ ಹಿಡಿದುಕೊಳ್ಳಕ್ಕೆ ಹೆಲ್ಪ್ ಮಾಡಬೇಕೆಂದು ಅಣ್ಣ ಅಮ್ಮ ಅವನಿಗೆ ಹೇಳಿಬಿಟ್ಟಿದ್ದರು. ಅವನು ಬಹಳ ಶಿಸ್ತಿನ ಆಜ್ಞಾಪಾಲಕ. ಹಿಂದೆಯೇ ಬ್ಯಾಗ್ ಹಿಡಿದು ಬಂದ. ಕಾರಲ್ಲಿ ಹೋಗಿ ಗಾಡಿ ಮುಂದೆ ಇಳಿದರೆ ರೇಟು ಯದ್ವಾ ತದ್ವಾ ಏರಿಸುತ್ತಾರೆಂದು ನನಗೆ ಗೊತ್ತಿತ್ತು. ಆದ್ದರಿಂದಲೆ, ಕಾರನ್ನು ಒಂದು ಗಲ್ಲಿಯಲ್ಲಿ ನಿಲ್ಲಿಸಿ ನಡೆದು ಹೋದೆವು. ನನ್ನ ಕಿರೀಟಕ್ಕೆ ಮೊದಲ ಹೊಡೆತ ಬಿದ್ದಿದ್ದು ಹೂವಿನವಳಿಂದ.
ಮಲ್ಲಿಗೆ ಹೂವಿನ ಒಂದು ಮಳಕ್ಕೆ ಮಾರಿನ ರೇಟು ಹೇಳಿದಂತೆ ಆಯ್ತು ನನಗೆ. ಕನ್ಫರ್ಮ್ ಮಾಡಿಕೊಳ್ಳಲು ಮತ್ತೆ ಕೇಳಿದರೆ " ಮೇಡಮ್...ಇದು ಹಬ್ಬದ ಸೀಸನ್ನು...ಒಂದು ಮಾರಿಗೆ ನೂರಿಪ್ಪತ್ತು ರುಪಾಯಿ. ಮೊಳಕ್ಕೆ ಮೂವತ್ತು. ತೆಗೆದುಕೊಳ್ಳುವ ಹಾಗಿದ್ದರೆ ತೆಗೆದಿಕೊಳ್ಳಿ...ಇಲ್ಲಾಂದ್ರೆ ಬಿಡಿ."
ಸರಿ, ಮಲ್ಲಿಗೆಯ ಆಸೆ ಬಿಟ್ಟಿದ್ದಾಯಿತು. ಸೇವಂತಿಗೆ ರೇಟ್ ಕೇಳಿ ನನಗೆ ತಲೆ ಕೆಟ್ಟು ಹೋಯ್ತು. ನೂರು ಗ್ರಾಮ್ ಇಪ್ಪತ್ತು ರೂಪಾಯಿ !! "oh my god ! " ಅಂತ ನನಗರಿವಲ್ಲದೆಯೇ ನನ್ನ ಬಾಯಿಂದ ಹೊರಬಂತು. ಸುಧಾರಿಸಿಕೊಂಡು ಕೇಳಿದೆ..."ವರಮಹಾಲಕ್ಷ್ಮಿ ಹಬ್ಬದ ಹಿಂದಿನ ದಿನ ಕಾಲು ಕೆ.ಜಿ.ಗೆ ಇಪ್ಪತ್ತು ರುಪಾಯಿತ್ತಲ್ವಾ ? "
ಅವಳು: "ಮೇಡಮ್...ಇದು ಗೌರಿ ಗಣೇಶ...ಸಿಕ್ಕಾಪಟ್ಟೆ ದೋಡ್ಡ್ ಹಬ್ಬ . ಈಗಲ್ದೆ ಇನ್ಯಾವಾಗ್ ನಾವ್ ಯಾವಾಗ್ ಕಾಸ್ ಮಾಡದು ? ನಾವೇನ್ ನಿಮ್ ತಲೆ ಮೇಲೆ ಹೊಡಿತಿದಿವಿ ಅಂದುಕೊಂಡ್ರಾ ? ನಾವು ಒಂದಕ್ಕ್ ಡಬಲ್ ರೇಟು ಕೊಟ್ಟು ತರ್ತೀವಿ ಮಾರ್ಕೆಟ್ ಇಂದ ತಿಳ್ಕೊಳಿ ನೀವೂನು. ಹೂವುಗಳೆ ಸಿಗ್ತಿಲ್ಲ ಈವಾಗ ಗೊತ್ತಾ ನಿಮ್ಗೆ ? ನೀವ್ ನಮ್ ಹೊಟ್ಟೆ ಮೇಲೆ ಹೊಡಿಬೇಡಿ ಚೌಕಾಸಿ ಮಾಡಿ. ದುಡ್ಡ್ ಕೊಡ್ತಿರೋ ಇಲ್ವೊ ?
ಬೇರೆ ಕಡೆಯೆಲ್ಲಾ ಸುತ್ತಾಡಿದರೂ ಒಳ್ಳೆ ಹೂವುಗಳು ಕಾಣಿಸದಿದ್ದುದರ ಕಾರಣ ಅಲ್ಲೇ ಕೊಳ್ಳಬೇಕಾಯ್ತು. ಬೇರೆ ಕಡೆ ಸುತ್ತಾಡಿದರೂ ನೂರು ರುಪಾಯಿಗಿಂತ ಕಡಿಮೆ ನೋಟನ್ನು ತೆಗೆಯುವ ಭಾಗ್ಯ ನನ್ನದಾಗಲಿಲ್ಲ. ಮಲ್ಲಿಗೆ ಮಾರನ್ನು ಹೂವಿನವರು ಅಳೆಯುತ್ತಿದ್ದನ್ನು ನೋಡಿ ನನಗೆ ಗೊತ್ತಿದ್ದ ಮೇಟರ್ ಸ್ಕೇಲಿನ ಉದ್ದಳತೆ, clarke's tables conversion units ಎಲ್ಲಾ ಮರ್ತೋಯ್ತು..ನನಗೆ ಇದನ್ನು ತಡೆಯಲಾಗಲಿಲ್ಲ...that too as a physicist !! ನಮ್ಮ ಡ್ರೈವರ್ ಇದನ್ನು ನೋಟಿಸ್ ಮಾಡಿ " ಅಮ್ಮಾವ್ರೆ...ನಾವು ಮಾತಾಡುವ ಹಾಗಿಲ್ಲ , ಮಾತಾಡಿದ್ರೆ ಏನೂ ಸಿಗಲ್ಲ. " ಅಂದ. ನಾನು ನನ್ನ ಬೀಳುತ್ತಿದ್ದ ಕಿರೀಟವನ್ನು ಸಂಭಾಳಿಸುತ್ತಾ ತಲೆಯಲ್ಲಾಡಿಸಿದೆ.
ನನ್ನ ಕಿರೀಟಕ್ಕೆ ಎರಡನೆಯ ಪೆಟ್ಟು ಬಿದ್ದಿದ್ದು ತೆಂಗಿನಕಾಯಿಂದ. 3 cms diameter,17-18 cms length ಇರೊ ಒಂದು ಚಿಲ್ಟಾರಿ ಕಾಯಿಗೆ ಏಳು ರೂಪಾಯಿ ಹೇಳಿದ ಅವ. ನನಗೆ ಬಂದ ಕೋಪಕ್ಕೆ ಅದೇ ತೆಂಗಿನ ಕಾಯನ್ನು ಅವನ ತಲೆ ಮೇಲೆ ಹೊಡೆಯಬೇಕು ಅಂತ ತೋಚಿತು.
Z : ತೋಚಿದ್ದನ್ನ ಮಾಡ್ಬಿಡ್ಬೇಕು head ruled !! ಅವನ ತಲೆ ಮೇಲೆ ಹೊಡೆದ ಹಾಗೂ ಆಗ್ತಿತ್ತು, ಕಾಯಿಯ quality check ಮಾಡಿದ ಹಾಗೂ ಆಗ್ತಿತ್ತು !
ನಾನು : I thought so. ಆದರೆ ಅದು ಕಾಯಿಗೆ ಅವಮಾನ ಅನ್ನಿಸಿತು....ಬಿಟ್ಟುಬಿಟ್ಟೆ...ಅಕಸ್ಮಾತ್ ಆ ಕಾಯಿ ಸೂಪರ್ರಾಗಿದ್ದು, ಅದು " ನನ್ನನ್ನ ಇವನ ತಲೆ ಮೇಲೆ ಯಾಕ್ ಹೊಡೆದೆ" ಅಂತ ಒಂದು ಪ್ರಶ್ನಾರ್ಥಕ ಲುಕ್ ಕೊಟ್ಟಿದ್ದಿದ್ರೆ ನಾನ್ ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ. ಆದ್ರೆ ಕಾಯಿಯ quality check ಮಾಡಲೇ ಬೇಕಿತ್ತು. ನಾನು ಸ್ವಲ್ಪ ಕುಟ್ಟಿ ನೋಡಿದೆ. ಶಬ್ದ ಓಕೆ. ನೀರು ಇತ್ತು. ನನ್ನ ಬಾರ್ಗೈನ್ ಶುರು ಮಾಡಿದೆ . " ನೋಡಿ, ಐದು ರುಪಾಯಿ ಮಾಡ್ಕೊಳ್ಳಿ , ಇಪ್ಪತ್ತೈದು ತೆಂಗಿನಕಾಯಿ ಹಾಕಿ" ಅಂದೆ. ಅವ " ಆಗಲ್ಲ ಮೇಡಮ್, ನೋಡಿ, ಇದು ಐದು ರುಪಾಯಿ ಕಾಯಿ, ನೋಡಿ. ಇದನ್ನ ತಗೊಳ್ಳಿ " ಅಂತ ಕಡ್ಲೆಕಾಯಿ ಪರ್ಷೆ ಆಟದ ಸಾಮಾನಿನಂಥಾ ಒಂದು ಪುಟ್ಟ ಕಾಯನ್ನು ತೋರಿಸಿದ. ನನ್ನ ಕಣ್ಣಲ್ಲಿ ಕಾಣುತ್ತಿದ್ದ ಕೋಪ ನೋಡಿ ನಮ್ಮ ಡ್ರೈವರ್ ಎಂಥಹಾ ಅನಾಹುತವಾಗಬಹುದು ಇನ್ನೊಂದು ಕ್ಷಣದಲ್ಲಿ ಎಂದು ಊಹಿಸಿ ಮಧ್ಯಪ್ರವೇಶಿಸಿದ. " ನೋಡಿ, ನಿಮಗೂ ಬೇಡ ನಮಗೂ ಬೇಡ, ಆರು ರುಪಾಯಿ ಮಾಡ್ಕೊಳ್ಳಿ " ಅಂದ. ಅವನು ಅದಕ್ಕೂ ಒಪ್ಪಲಿಲ್ಲ. ನಾನಂದೆ " ನೋಡಿ ಅಂಕಲ್, ಕೊಡೊ ಹಾಗಿದ್ರೆ ಆರು ರುಪಾಯಿಗೆ ಕೊಡಿ...ಇಲ್ಲಾಂದ್ರೆ ನಾನ್ ಬೇರೆ ಕಡೆ ಹೋಗ್ತಿನಿ" ಅಂದೆ. ಅವನು "ಮೇಡಮ್...ಹಾಗನ್ನಬೇಡಿ..ನೀವೆ ಮೊದಲನೆಯ ಗಿರಾಕಿ . ಸರಿ ಆರು ರುಪಾಯಿಗೆ ಕೊಡ್ತಿನಿ ಬನ್ನಿ" ಅಂದ. ಇಪ್ಪತ್ತದು ರೂಪಾಯಿ ಯಲ್ಲಿ ಎರಡು ಭೇಲ್ ಪುರಿ ಮತ್ತೊಂದು ಡೈರಿ ಮಿಲ್ಕು ಬರ್ತಿತ್ತು. ಅನ್ಯಾಯ ಆಯ್ತು ಅಂತ ಶಪಿಸುತ್ತಲೇ ಆರು ರುಪಾಯಿಗೆ ಒಪ್ಪಿದೆ. ಇದು ಎರಡನೆಯ ಪೆಟ್ಟು ನನ್ನ ಕಿರೀಟಕ್ಕೆ.
ನನ್ನ ಕಿರೀಟ ಕಳಚಿ ಬಿದ್ದಿದ್ದು ಹಣ್ಣು ತರಕಾರಿ ಅಂಗಡಿಯಲ್ಲಿ. ಐದು ಥರದ ಹಣ್ಣುಗಳನ್ನು ಪ್ಯಾಕ್ ಮಾಡಿ ಅಂದೆ. " ಅವನು ಎಲ್ಲಾ ಒಂದೊಂದು ಕೆ.ಜಿ ನಾ ಮಾ...ಐನೂರು ರುಪಾಯಿ ಕೊಡಿ " ಅಂದ ! ನನ್ನ ಕೈಯಲ್ಲಿದ್ದ ಬ್ಯಾಗುಗಳು ಥಪ್ಪನೆ ನೆಲಕಚ್ಚಿದವು. ಡ್ರೈವರ್ ಪಾಪ ಅದನ್ನ ಎತ್ತಿ ಹಿಡಿದುಕೊಂಡ. ನಾನಂದೆ "ಎಲ್ಲಾ ಒಂದೊಂದು ಕೆ.ಜಿ ಅಲ್ಲ, ಎಲ್ಲಾ ಒಂದೊಂದು." ಅವನು ಸೊಪ್ಪೆ ಮೋರೆ ಮಾಡಿಕೊಂಡ. ಆಪಲ್ ಮುಟ್ಟಿದೆ ಅಷ್ಟೆ..."ಕೆ.ಜಿ ನೂರಿಪ್ಪತ್ತು" ಅಂದ. ನಾನಂದೆ "ಮೊನ್ನೆ ತೊಂಭತ್ತಿತ್ತಲ್ಲ ? " ಅವನು " ಮೇಡಮ್...ಸಿಮ್ಲಾದಲ್ಲಿ ಆಪಲ್ಗಳೇ ಬಿಡುತ್ತಿಲ್ಲ ಇತ್ತೀಚೆ ಗೆ...ನಮಗೆ ಹಣ್ಣುಗಳೇ ಸಿಗುತ್ತಿಲ್ಲ...ಎಲ್ಲಾದರೂ ಹೋಗಿ ನೋಡಿ ಬನ್ನಿ...ನೂರಿಪ್ಪತ್ತಕ್ಕಿಂತ ಕಡಿಮೆ ಕೊಟ್ಟರೆ ನಾನು ನನ್ನ ಮೂಗು ಮುರಿದುಕೊಳ್ಳುವೆ " ಎಂದು ಪ್ರತಿಜ್ಞೆ ಬೇರೆ ಮಾಡಿದ. ನಾನು ಎರಡು ಆಪಲ್ ಹಾಕಿಸಿದೆ. ಬಾಳೇಹಣ್ಣಿನ ಕಡೆ ದೃಷ್ಟಿ ಹಾಯಿಸಿದ್ದೇ ತಡ, " ಮೂವತ್ತೈದು ಮೇಡಮ್, ನೋ ಬಾರ್ಗೈನ್ " ಅಂದ. ನಾನು ನನ್ನ ಜೀವನದಲ್ಲಿ ಇಪ್ಪತ್ತು ರುಪಾಯಿಗಿಂತ ಹೆಚ್ಚು ಕೊಟ್ಟಿದ್ದೇ ಇಲ್ಲ ಒಂದು ಕೆ.ಜಿ. ಬಾಳೇಹಣ್ಣಿಗೆ. ಹದಿನೈದು ರೂಪಾಯಿ ಹೆಚ್ಚು ಕೊಟ್ಟು ಕಾಂತಿ ಸ್ವೀಟ್ಸಿನ ಬಾದಾಮಿ ಹಾಲನ್ನು ಕಳೆದುಕೊಳ್ಳಲು ನಾನು ಸುತಾರಾಂ ತಯಾರಿರಲಿಲ್ಲ . It would be too high a price to pay !! ಆದರೂ ಏಕ್ದಮ್ ಇಳಿಸಬಾರದೆಂದು ಇಪ್ಪತ್ತೈದಕ್ಕೆ ಕೇಳಿದೆ. ಅವನು " ನೋಡಿ ಮೇಡಮ್, ಇನ್ ಫ್ಲೇಷನ್ ಎಷ್ಟು ಏರಿದೆ ಗೊತ್ತಾ ? ಪಾಪ...ನಿಮಗೇನು ಗೊತ್ತಿಲ್ಲ ಬಿಡಿ. ಆದರೆ ಒಂದು ಮಾತು . ಬಾರ್ಗೈನ್ನ್ ಮಾಡೋದಿದ್ದರೆ ದಯವಿಟ್ಟು ಬೇರೆ ಅಂಗಡಿ ಗೆ ಹೋಗಿ. ನೀವಲ್ಲದಿದ್ದರೆ ನಮಗೆ ಬೇಕಾದಷ್ಟು ಜನ ಕಸ್ಟಮರ್ಸ್ ಸಿಗ್ತಾರೆ. " ಅಂದ. inflation ಅರ್ಥ ಇರಲಿ, spelling ಆದ್ರೂ ಗೊತ್ತ ನಿನಗೆ ಅಂತ ನಾನು ಕೇಳಿ, ಅವನು ಇನ್ನೇನೋ ಅಂದು, ನಾನು ಮತ್ತಿನ್ನೇನೋ ಅಂದು, ಜಗಳ ವಿಪರೀತಕ್ಕೆ ಹೋಗಿ, ಡ್ರೈವರ್ ಅಣ್ಣನಿಗೆ ಫೋನ್ ಮಾಡಿ, ಅಣ್ಣ ಬಂದು ನನ್ನನು ತುಂಬಿದ ಮಾರ್ಕೆಟ್ ನಲ್ಲಿ ದರದರ ಎಳೆದುಕೊಂಡು ಹೋಗುವ ದೃಶ್ಯ ಯಾಕೋ ಹಾಗೆ ಕಣ್ಣ ಮುಂದೆ ಬಂತು ನನಗೆ. ಇದರ ಕಲ್ಪನೆಯಲ್ಲಿ ಮುಳುಗಿದ್ದ ನನ್ನನ್ನು ವಾಸ್ತವಕ್ಕೆ ತಂದಿದ್ದು ನನ್ನ ಬೀಳುತ್ತಿದ್ದ ಕಿರೀಟದ ಶಬ್ದ. ಇನ್ನೇನು ಮಾತನಾಡದೇ, ಬಾಳೆಹಣ್ಣು ಒಂದು ಕೆ.ಜಿ ಖರೀದಿಸಿ, ಮಿಕ್ಕಿದ್ದೆಲ್ಲಾ ಹಣ್ಣನ್ನು ಒಂದೊಂದೇ ಹಾಕಿಸಿ ಅದು ಕೆ.ಜಿ ಎಪ್ಪತ್ತು !! ಮಾತಿಲ್ಲದೇ ಕೊಟ್ಟು ನಡೆದೆ. ಜೀವನದಲ್ಲಿ ನಾನು ಬಾರ್ಗೈನ್ ನಲ್ಲಿ ಸೋತಿರಲಿಲ್ಲ...ಛೆ !
Z : i know ! M.G road ನಲ್ಲಿ chess set ಗೆ 250 rupees ಅಂದವನ ಜೊತೆ ಮುಕ್ಕಾಲು ಘಂಟೆ bargain ಮಾಡಿ 100 rupees ಗೆ ಇಳಿಸಿ ಸ್ನೇಹಿತೆಯರಿಂದ ಹಾಕಿಸಿಕೊಂಡಿದ್ದ ಕಿರೀಟ ಅಲ್ಲವೇನೆ ಅದು ?
ನಾನು : ಹೂ !!!
Z : ಅಲಂಕಾರ್ ಪ್ಲಾಜಾ ಐನೂರು ರುಪಾಯಿ ಬಟ್ಟೆಗೆ ಇನ್ನೂರು ರುಪಾಯಿ ಇಟ್ಟು ಮಾತಾಡದೇ ಬಟ್ಟೆ ತೆಗೆದುಕೊಂಡು ಬಂದು ಹೊಸ ಥರ ಬಾರ್ಗೈನ್ ಸ್ಟೈಲ್ ಬೇರೆ ಕಂಡು ಹಡಿದಿದ್ದೆ ನೀನು....
ನಾನು : ಯೆಸ್ !
Z : ಮನೆಯ ಹತ್ತಿರ ನೀನು ತರಕಾರಿ ವ್ಯಾಪಾರ ಮಾಡಲು ಹೋದರೆ ಅಂಗಡಿಯವರಿಗೆ ಮೈಲ್ಡ್ ಆಗಿ ಭಯ ಇರುತ್ತಿತ್ತಲ್ಲವಾ ?
ನಾನು : ಯಾ. ಈಗ ಎಲ್ಲಾ ಹೊಟೋಯ್ತು Z ...ನನ್ನ ಕಿರೀಟ..ನನ್ನ ಬಿರುದುಬಾವಲಿಗಳು...ಎಲ್ಲಾ !!!! ವಾಆಆಆಆಆಆಆಆ......!!!
Z : ಅಳಬೇಡ.
ನಾನು : ಮತ್ತಿನ್ನೇನು ಮಾಡಲಿ ? ಇದಕ್ಕಿಂತ ದೊಡ್ಡ ಆಘಾತ ಕಾದಿದ್ದು ನನಗೆ ದಿನಸಿ ಅಂಗಡಿಯಲ್ಲಿ. ನಾನಲ್ಲಿಗೆ ಹೋಗುವ ಮುಂಚೆಯೇ ಅಣ್ಣ ದಾರಿಯಲ್ಲಿ ಸಿಕ್ಕಿ ನನ್ನ ಕೋಪಗ್ರಸ್ಥ ಮುಖವನ್ನು ನೋಡಿ, ನನ್ನ ಬದಲು ಅವರು ದಿನಸಿ ಅಂಗಡಿಗೆ ಹೋಗುವೆನೆಂದರೂ, ನಾನೇ ಹೋಗಿ, ಅಲ್ಲಿನ ರೇಟುಗಳನ್ನು ನೋಡಿ ನನ್ನ ಬಿಪಿ ಏರಿ, ಕೆಲವು ಎಕ್ ಸ್ಟ್ರಾ ಸಾಮಾನುಗಳನ್ನು ಹಾಕಿದ್ದನೆಂದು ಸ್ವಲ್ಪ ಲೋ ಟೋನಲ್ಲಿ ಜಗಳವಾಡಿದೆ. ಯಾಕಂದರೆ ನಾನು ಕಿರುಚಿದ್ದರೆ ಡ್ರೈವರ್ ಅಣ್ಣನಿಗೆ ಫೋನ್ ಮಾಡುತ್ತಿದ್ದ ಗ್ಯಾರಂಟೀ. ಅವನು ಕಡೆಗೆ ತಪ್ಪೊಪ್ಪಿಕೊಂಡ. ನಾವು expect ಮಾಡಿದ್ದಕ್ಕಿಂತ double ದುಡ್ಡು ಕೊಟ್ಟು ಎಲ್ಲಾ ಕಾರಿನಲ್ಲಿ ಹಾಕಿಸಿಕೊಂಡು ಮನೆಗೆ ಮ್ಲಾನವದನಳಾಗಿ ಮರಳಿದೆ.
Z : very sad !!
ನಾನು : really ! ಮನೆಗೆ ಬಂದ ಮೇಲೆ ಅಮ್ಮನ 200 cms long list ತರಲು ನಾನು ಕೊಟ್ಟ ದುಡ್ಡಿನ ಮೊತ್ತ ತೋರಿಸಿದೆ. ಒಂದು ರುಪಾಯಿಯೂ ಇಲ್ಲದ ಖಾಲಿ ಪರ್ಸು ನೋಡಿ, ಸ್ವಲ್ಪವೇ ಸ್ವಲ್ಪ ಸಾಮಾನು ನೋಡಿ ಗಾಬರಿಯಾಗುವ ಸರದಿ ಅಮ್ಮನದ್ದಾಗಿತ್ತು !
Z : :-)
ನಾನು : ಇಷ್ಟು ಸೋಮವಾರ ನಡೆದ ಕಥೆ !
6 comments:
Ganesha price keLididre, maarthiravrne neeralli visarjane maadbeku anstithu.. Thenginkaayi size measure maadidya???? Super aagidhe Luck.. Adre nin kireeta.. :-( :-( :-(
Hmm yEnu mADakkAgalla dear:( habbagaLu bandu biTre ee hoovinavaru,haNNinavaru,tarakAriyavare RAjA-RANi-Mantri-Kantri yella..x-(. Avra munde nAvu mAtADuva hAge illa:-| nimage bekAdre togoLi illa ry8 heLi antaa aaraamaagi heLibiDtAre..X-(
Hmm hogli biDu eegle avru duDDu mADkoLodu antAre mADkoLli..nimmantOru konDkonDu habbaa mADtira..nAvu mane munde beLdiro yeraDu sajeev hoovu, hittalalliro seebe marada yeraDu haNNu devarige arpisi mikkiddu kAgadada hoovu-Plastic haNNu-kaDabu naivedya torisi habba mugastivi:-|
Hei Gouri-GaNesha habbada shubhAshayagaLu...manege baa:-)
ನಮ್ಮ ಕಿರಿ-ಕಿರೀಟ ತಲೆಗೇರಿಸಿಕೊಳ್ಳಲು ಹೋದ್ರೆ, ಖಂಡಿತವಾಗಿಯೂ ಅದು ಜಾರಿ ಬೀಳುತ್ತೆ ಅನ್ನೋದು ನೆನಪಿರ್ಲಿ. ಹುಷಾರ್!
ಹೂಂ... ನಿಮ್ಮ ಮನೆಯಿರೋ ಬೀದಿ ಬದಿಯ ವ್ಯಾಪಾರಿಗಳು/ತರಕಾರಿ ಅಂಗಡಿ ಮಾಲೀಕರು/ಹಣ್ಣು ಹಂಪಲುವಾಲಾಗಳೆಲ್ಲರೂ ಒಂದೊಂದು ಸಲ ಭಯಗ್ರಸ್ಥರಾಗಿ ಕೂತಿರೋದು ಯಾಕೆಂಬುದು ಈಗ ಗೊತ್ತಾತು. ಅದು ಭಯ-ಉತ್ಪಾದಕಿ ಬರೋ ಟೈಮೂಂತ ಊಹಿಸಬಹುದೇ?
ಅದೆಲ್ಲಾ ಇರ್ಲಿ... ಯಾವುದೇ ಲೇಖನದ ಮಧ್ಯೆ, ಭೇಲ್ ಪುರಿ. ಬಾದಾಮಿ ಮಿಲ್ಕ್ ಇತ್ಯಾದಿ ಸಿಗೋ ತಾಣವನ್ನು ಸೇರಿಸಿಯೇಬಿಡ್ತೀರಲ್ಲ... ಎಲ್ಲ ನೆನಪಿಟ್ಕೊಳೋದು ಕಷ್ಟ ಆಗುತ್ತೆ.
ನಾವು ಕೂಡ ಈಗೀಗ ಚೀಲ ತುಂಬಾ ಹಣ ತೆಗೆದುಕೊಂಡು ಹೋಗಿ, ಜೇಬು ತುಂಬಾ ಸಾಮಾನು ತರೋ ಪ್ರಕ್ರಿಯೆ ನಾರ್ಮಲ್ ಆಗ್ಬಿಟ್ಟಿದೆ.
ನನ್ನ ಚಿಕ್ಕಮ್ಮ ಚೌಕಾಸಿ ಮಾಡೋಕ್ಕೆ ಶುರು ಮಾಡಿದ್ರೆ ನಂಗೆ ಅವರ ಜೊತೆ ನಿಂತ್ಕೊಳ್ಳೋಕ್ಕೆ ಹೆದರಿಕೆ ಆಗುತ್ತೆ.. ಯಾವ ಕ್ಷಣದಲ್ಲಿ ಆ ವ್ಯಾಪಾರಿ ಬಂದು ಗುದ್ದಿಬಿಡ್ತಾನೋ ಅಂತ :) ಆದ್ರೂ ಸ್ವಲ್ಪ ಹೊತ್ತಲ್ಲೇ ಸಕ್ಕತ್ತಾಗಿ ಚೌಕಾಸಿ ಮಾಡಿ ಸಾಮಾನು ಖರೀದಿ ಮಾಡೋ ಪ್ರತಿಭೆ ಅವ್ರಿಗಿದೆ. ಎಷ್ಟಾದ್ರೂ ಬಿಹಾರಲ್ಲಿದ್ದವರು.. ಬೆಂಗ್ಳೂರಲ್ಲಿ ಜೀವಮಾನ ಎಲ್ಲ ಸವೆಸಿದ್ರೂ ಇಲ್ಲಿನ ವ್ಯಾಪಾರಿಗಳು ಅಲ್ಲಿನವರ ಬಾಯಿಗೆ ಸಿಕ್ಕಿಹಾಕ್ಕೊಳ್ಳೋದು ಅಂದ್ರೆ ತಮಾಷೆನಾ? he he he
habba mugitalva... kaLachi bidda kireeTa Erisiko :)
ರಾಧೆ :
ಹೌದೇ...ನಮ್ಮಮ್ಮ ಅದೇ ಅಂತಿದ್ರು...:)ಯಾರ್ನ ವಿಸರ್ಜನೆ ಮಾಡೋದು ಅಂತ ಅವ್ರು ಯೋಚ್ಸಿಂಗ್ !! ತೆಂಗಿನಕಾಯಿ size measure ಮಾಡ್ಲಿಲ್ಲ...estimate ಮಾಡಿದೆ ಅಷ್ಟೇ !
ರೋಹಿಣಿ:
ನಿಮ್ಮ ಮನೆಲಿ ಗಿಡ ಹಾಕಕ್ಕೆ ಜಾಗ ಇದೆ...ನಮ್ಮನೇಲಿ ಇಲ್ಲ ! :( :( ಕೊಂಡುಕೊಳ್ಳದೇ ಬೇರೆ ದಾರಿಯಿಲ್ಲ :(
plastic idea ಚೆನ್ನಾಗಿದೆ. ನಾವೂ try ಮಾಡುವೆವು !
ಅಸತ್ಯ ಅನ್ವೇಷಿ :
ನಿಮ್ಮ ಎಚ್ಚರಿಕೆ ಬಗ್ಗೆ ನಾವು ಎಚ್ಚರ ವಹಿಸುತ್ತೇವೆ.
ಊಹನೆ ನ ? kindly carry on ಮಾಡಿ. ಹೇಗೂ ಅದೇ ತಾನೆ ನಿಮ್ಮ ಬ್ಯೂರೋದವರ ಕೆಲಸ ? ;-)
ತಿಂಡಿಗಳೆಲ್ಲ ನೆನಪಿಟ್ಟುಕೊಳ್ಳಕ್ಕಾಗಲ್ವಾ ? ಬೇಡ ಬಿಡಿ ! ನಾನಾಗಲಿ z ಆಗಲಿ ನಾವು ಬೆಂಗಳೂರಿನಲ್ಲಿ ತಿನ್ನುವ ತಿಂಡಿಗಳ ಬಗ್ಗೆ ನಿಮ್ಮ ಮೆಮೋರಿ ಟೆಸ್ಟ್ ಮಾಡ್ತಿವಿ ಅಂತ ಹೇಳಿದಿವಾ ?
ಬೊಗಳೂರಿನ ಜನತೆಯೂ, ಬೊಗಳೂರಿನ ಏಕಚಕ್ರಾಧಿಪತಿಯೂ ನಮ್ಮಂತೆಯೇ ಚೀಲ ತುಂಬ ದುಡ್ಡು, ಜೇಬು ತುಂಬಾ ಸಾಮಾನು ತರುವುದನ್ನು ಕೇಳಿ ಅತಿಸಮಾಧಾನ ತರುವ ಆತ್ಮತೃಪ್ತಿಯಾಯ್ತು !
ಗಂಡಭೇರುಂಡ :
ನಾನು ನಿಮ್ಮ ಚಿಕ್ಕಮ್ಮ ಅವರ ಹತ್ತಿರ ಶಿಷ್ಯತ್ವ ಸ್ವೀಕಾರ ಮಾಡ್ಬೇಕು ಅನಿಸುತ್ತಿದೆ. ಕೇಳಿ ಅವರು ಶಿಷ್ಯರನ್ನ ಸ್ವೀಕರಿಸೋಕೆ ರೆಡಿ ನಾ ಅಂತ. ನಾನ್ ರೆಡಿ ಶಿಷ್ಯೆ ಆಗಕ್ಕೆ!
ಅಂತರ್ವಾಣಿ:
ಕಿರೀಟ ಒಡೆದುಹೋಯ್ತು ! irrepairable state . ಇಲ್ಲಾಂದಿದ್ರೆ ಮಾಡ್ತಿದ್ದೆ ಈ ಕೆಲ್ಸಾ ನ ! :(
Post a Comment