Saturday, July 26, 2008

ಸತ್ತ ಲಕ್ಷ್ಮಿ ನಾನಲ್ಲ !

ನಾನು : ನಾನು ಬದುಕಿದ್ದೇನೆ...ಚೆನ್ನಾಗೇ ಇದ್ದೇನೆ. ನೆನ್ನೆ ಬ್ಲಾಸ್ಟ್ ನಡೆದ ಯಾವ ಜಾಗದಲ್ಲೂ ನಾನಿರಲಿಲ್ಲ.

Z : ಇದನ್ನ ಇಷ್ಟು explicit ಆಗಿ proclaim ಮಾಡುತ್ತಿರುವ ಕಾರಣ, ಉದ್ದೇಶ ?

ನಾನು : ಕಾರಣ ಇದೆ. ಕೇಳಿದರೆ ನಿನಗೆ ಏನನ್ನಿಸತ್ತೋ ಗೊತ್ತಿಲ್ಲ. ಮತ್ತೆ ಇನ್ಯಾರೂ ನನಗೆ ಫೋನ್ ಮಾಡಿ "ಎಲ್ಲಿದಿಯಾ ? ಬದುಕಿದ್ದೀಯ ಸತ್ತಿದ್ದೀಯ ? " ಅಂತ ಮತ್ತೊಮ್ಮೆ ಕೇಳದಿರಲಿ ಅಂತ ಹೀಗ ಘೋಷಣೆ ಮಾಡುತ್ತಿದ್ದೇನೆ.

Z : ಏನಂಥಾ ಕಾರಣ ?

ನಾನು : ನೆನ್ನೆ ನನಗೆ ಕಾಲೇಜಿನಲ್ಲಿ ಸಲ್ಪ ಕೆಲಸವಿತ್ತು. ಹೋಗಿದ್ದೆ. ಹೋದವಳು ಜಯನಗರ ನಾಲ್ಕನೇ ಬ್ಲಾಕಿಗೆ ಹೋಗದೇ ಇರಲಾಗಲಿಲ್ಲ. ತಿರುಗಾಡಲು ಹೋದೆ. ಅಚಾನಕ್ಕಾಗಿ ಬಿ.ಎಸ್ಸಿ ಯ ಗೆಳೆಯನೊಬ್ಬ, ಅವನೂ ಕ್ರೈಸ್ಟ್ ಕಾಲೇಜಿನಲ್ಲಿ ಭೌತಶಾಸ್ತ್ರ ಎಮ್.ಎಸ್ಸಿ ಮಾಡಿ ಮುಗಿಸಿದ್ದ ಇದೇ ವರ್ಷ...ಅವನು ಸಿಕ್ಕಿದ. ನಾವಿಬ್ಬರೂ ನಮ್ಮ ಎಮ್ಮೆಸ್ಸಿಯ ಸುಖ ದುಃಖ ಹಂಚಿಕೊಳ್ಳುತ್ತಾ fourth block ನಲ್ಲಿ ಎರಡು ಗಂಟೆಗಳ ಕಾಲ ನಿಂತೇ ಮಾತಾಡಿದೆವು. ನಂತರ ಕಾಂಪ್ಲೆಕ್ಸಿನಲ್ಲಿ ಬಂದಿರುವ ಹೊಸ ವಸ್ತುಗಳನ್ನೆಲ್ಲಾ ವೀಕ್ಷಿಸಿ, ಹಣದುಬ್ಬರದಿಂದ ದೇಶ ಕೆಟ್ಟು ಕುಲಗೆಟ್ಟು ಹಾಳಾಗೋಗಿದೆ ಅನ್ನೋ conclusion ಗೆ ಬಂದ ನಂತರ ಸೌತ್ ಎಂಡ್ ಸರ್ಕಲ್ಲಿನ ಸಿಟಿ ಸೆಂಟ್ರಲ್ ಲೈಬ್ರರಿ ಗೆ ಪಾದ ಬೆಳೆಸಿದೆ, ಮೆಂಬರ್ ಆಗಲಿಕ್ಕೆ ಅಪ್ಲಿಕೇಷನ್ ಫಾರಂ ಬೇಕಿತ್ತು, ನನಗೆ ಮತ್ತು ನನ್ನಿಬ್ಬರು ಸ್ನೇಹಿತೆಯರಿಗೆ . ಆ ಕೆಲಸವೂ ಹತ್ತು ನಿಮಿಷದಲ್ಲಿಯೇ ಮುಗಿಯಿತು. ನಂತರ ನಾನು ವರ್ಲ್ಡ್ ಕಲ್ಚರ್ ಲೈಬ್ರರಿಗೆ ಪುಸ್ತಕಗಳನ್ನು ಹಿಂದಿರುಗಿಸಲು ಅಲ್ಲಿಗೆ ಹೋದೆ. ಅಲ್ಲಿದ್ದ ಲೈಬ್ರರಿಯನ್ ಆಂಟಿ ನನಗೆ ತುಂಬಾ ಚೆನ್ನಾಗಿ ಪರಿಚಯ. ನಾನು ಬಂದದ್ದೇ ಅವರು, ಹುಷಾರಾಗಿ ಮನೆಗೆ ಹೋಗು, ಮನೆಗೆ ಹೋದ ಮೇಲೆ ಫೋನ್ ಮಾಡು, ಬಾಂಬ್ ಬ್ಲಾಸ್ಟ್ ಆಗಿದೆ ನಾಯಂಡಹಳ್ಳಿಯಲ್ಲಿ...ನಿಮ್ಮ ಮನೆ ಕಡೆ ಜಾಮ್ ಆಗಿರತ್ತೆ...ಜೋಪಾನ ಅಂದರು. ಅವರು ಸದಾಕಾಲ ತಮಾಷೆ ಮಾಡುತ್ತಿದ್ದರು. ನಾವಿಬ್ಬರು ಪಿಸುಮಾತಿನಲ್ಲೆ ಗಂಟೆಗಟ್ಟಲೆ ಪಟ್ಟಾಂಗ ಹೊಡೆಯುವಂಥವರು. ಇವತ್ತೂ ಹಾಗೆ ಮಾಡುತ್ತಿದ್ದಾರೆಂದು ಭಾವಿಸಿದ ನಾನು ನಕ್ಕೆ. ಅವರು ನಗದಿದ್ದದ್ದು ನನಗೆ ಆಶ್ಚರ್ಯ ತಂತಾದರೂ ನಾನು ಏನಾದರೂ ಸರಿ ಇವತ್ತು ಲಂಕೇಶರ ಮುಸ್ಸಂಜೆಯ ಕಥಾ ಪ್ರಸಂಗನ್ನು ಹುಡುಕಿ ತೆಗೆದುಕೊಳ್ಳಲೇಬೇಕೆಂದು ಧೃಡನಿರ್ಧಾರ ಮಾಡಿದ್ದೆನಾದ್ದರಿಂದ ಆ ಕಡೆ ಗಮನ ಹರಿಸಿದೆ. ಸದ್ಯ ಪುಸ್ತಕ ಸಿಕ್ಕಿತು. ಪಕ್ಕದಲ್ಲೇ ಕುವೆಂಪುರವರ ಕಾನೂರು ಹೆಗ್ಗಡತಿಯೂ ಕಣ್ಣಿಗೆ ಬಿತ್ತಾದ್ದರಿಂದ ಎರಡನ್ನೂ ಇಷ್ಯೂ ಮಾಡಿಸಿಕೊಂಡ ನಾನು ಅಲ್ಲಿಂದ ಅವರ ಮತ್ತೊಂದು ಜೋಪಾನ ಎಂಬ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸದೇ ಹೊರಬಿದ್ದೆ. ನಾನು ನನ್ನದೇ ಲಹರಿಯಲ್ಲಿ ಇದ್ದೆನಾದ್ದರಿಂದ, ಲೈಬ್ರರಿಯ ಹೊರಗೆ ಜನರು ಗುಂಪುಕಟ್ಟಿಕೊಂಡು ಪಿಸುಗುಟ್ಟುತ್ತಿದ್ದುದ್ದು ಹೆಚ್ಚು ಕುತೂಹಲಕಾರಿಯಾಗಿ ನನಗನ್ನಿಸದೇ, ಗಾಂಧಿ ಬಜಾರಿನ ಟ್ರಾಫಿಕ್ ಜಾಮು ನನ್ನ ಗಮನ ಸೆಳೆಯದೇ ಹೋದವು. ರಾಮಕೃಷ್ಣ ಆಶ್ರಮದ ಬಸ್ ಸ್ಟಾಪ್ನಲ್ಲಿ ಹಿರಣ್ಮಯಿ ಗಲಾಟೆ ಶುರುಮಾಡಿದಳು. ನೋಡಿದರೆ ಅಣ್ಣನ ಫೋನ್. ಅದೂ ಅವರು ಎಂದೂ ಉಪ್ಯೋಗಿಸದ ಆಫೀಸಿನ airtel landline number ಇಂದ. ನನಗೆ ಎತ್ತಿದ್ದೇ ಗಾಬರಿಯಾಯ್ತು. ಅಣ್ಣ ಯಾವತ್ತು ನನಗೆ ಫೋನ್ ಮಾಡಿದವರೇ ಇಲ್ಲ...ಅದೂ ಇಳಿ ಸಂಜೆ ನಾಲ್ಕಕ್ಕೆ ! ಯಾವಾಗಲೂ ನಾನೇ ಅಣ್ಣನಿಗೆ ಫೋನ್ ಮಾಡುತ್ತಿದ್ದವಳು. ನಮ್ಮ ಮನೆಯಲ್ಲಿ ಒಂದು ಅಲಿಖಿತ ನಿಯಮವಿದೆ. ಹೊರಗಿರುವಾಗ ಯಾರು ಯಾರಿಗೂ ಫೋನ್ ಮಾಡದೇ ಇದ್ದರೆ ಎಲ್ಲರೂ ಕ್ಷೇಮ ಎಂದು ಅರ್ಥ. ಫೋನ್ ಮಾಡಿದರೆ ತೊಂದರೆ ಎಂದು ಅರ್ಥ ಮಾಡಿಕೊಳ್ಳಬೇಕು. ಫೋನ್ ರಿಸೀವ್ ಮಾಡಿದೆ.

ಅಣ್ಣ: " ಎಲ್ಲಿದ್ದೀಯಾ ?"

ನಾನು : ರಾಮಕೃಷ್ಣ ಆಶ್ರಮ.

ಅಣ್ಣ : ಸರಿ ಬೇಗ ಹೋಗಿ ಮನೆ ಸೇರ್ಕೊ.

ನಾನು : ಯಾಕೆ ?

ಅಣ್ಣ : ಏನಿಲ್ಲ, ಸುಮ್ನೆ.

ನಾನು : ಆಫೀಸಿನಲ್ಲಿ ಏನಾದ್ರೂ ಕೆಲ್ಸ ಇದ್ಯಾ ನಂಗೆ ?

ಅಣ್ಣ : ಇಲ್ಲ. ಬೇಗ ಸಿಗೋ ಬಸ್ಸು ಹತ್ತಿ ಮನೆ ಸೇರ್ಕೊ.

ನಾನು ಮುಂದೆ ಮಾತಾಡುವ ಮೊದಲೇ ಫೋನ್ ಇಟ್ಟರು.

Z : ಅಣ್ಣ ಹೀಗೆ ಹೇಳಿದ್ದು ತುಂಬಾ ಆಶ್ಚರ್ಯಕರ ಅಲ್ವ ?

ನಾನು : ಹೂ...ಇವರೇಕೆ ಇಷ್ಟು ಗಾಬರಿಯಾದರೆಂದು ಯೋಚಿಸುತ್ತಿರುವಾಗಲೇ ನನ್ನ ಕಸಿನ್ನಿಂದ ಎಸ್ ಎಮ್ಮೆಸ್ ಬಂತು.
" lakshmi where are you ? didn’t you get the news ? bomb exploded near richmond circle and mysore road..please reach home wherever you are. be careful yaar " ಅಂತ. ನಾನಿದೊಂದು ಜೋಕಿನ ಫಾರ್ವರ್ಡ್, hoax message ಎಂದು ಮತ್ತೆ ignore ಮಾಡಿದೆ. ನನಗೆ ಅಣ್ಣನ ಫೋನಿನ ಉದ್ದೇಶ ಅರ್ಥ ಆಗದೇ ಆಗಲೇ ತಲೆ ಕೆಟ್ಟಿತ್ತು. ಸಾಲದೆಂಬಂತೆ ನನ್ನ ಕಸಿನ್ನಿಗೆ ನಾನೇನೂ ರಿಪ್ಲೈ ಮಾಡದಿದ್ದುದನ್ನು ನೋಡಿ ನನ್ನ ಸೋದರಮಾವ ಫೋನೇ ಮಾಡಿಬಿಟ್ಟರು. ಅಣ್ಣನ ಫೋನೇ ಅರ್ಥವಾಗದ ಕಗ್ಗಂಟಾಗಿದ್ದಾಗ ಮಾವನ ಫೋನ್ ನೋಡಿ ನನಗೆ ಎರಡು ಅನುಮಾನ ಬಂದಿತು : ಒಂದು - ಅಮ್ಮನಿಗೇನೋ ಆಗಿದೆ, ಎರಡು- ಅಮ್ಮನಿಗೇನೋ ಆಗಿದ್ದು ಕೇಳಿ ದಾವಣಗೆರೆಯ ನನ್ನ ಹಾರ್ಟ್ ಪೇಷೆಂಟ್ ಅಜ್ಜಿಗೇನೋ ಆಗಿದೆ ಎಂದು ವಿಪರೀತ ಗಾಬರಿ ಆಯ್ತು. ಅದಕ್ಕೆ ಅಣ್ಣ ನನ್ನನ್ನ ಬೇಗ ಮನೆ ಸೇರ್ಕೋ ಅಂದರೋ? ಏನಾದರೂ ಆಗಿದ್ದಿದ್ದರೆ ಅಣ್ಣ ಮೊದಲೇ ಮನೆ ಸೇರಿ ಮನೆಗೆ ಬಾ ಎಂದು ಕರೆಯುತ್ತಿದ್ದರು. ಸೇರ್ಕೋ ಎಂಬ ಪದ ಯಾಕೆ ಉಪಯೋಗಿಸಿದರು ? ಇಷ್ಟೆಲ್ಲ ಯೋಚನೆಗಳು ತಲೆಯಲ್ಲಿ ಗಿರ್ಕಿ ಹೊಡಿಯುತ್ತಿರುವಾಗಲೇ ಫೋನ್ ಎತ್ತಿದೆ.

ನಾನು : ಹಲೋ ಮಾವ ? ಏನಾಯ್ತು ?

ಅವರು : ಎಲ್ಲಿದಿಯ ?

ನಾನು : ಈಗ ಬಸ್ಸು ಹತ್ತುತ್ತಿದ್ದೇನೆ ರಾಮಕೃಷ್ಣ ಆಶ್ರಮದಲ್ಲಿ.

ಅವರು: ಏನ್ ಬಂತು ನಿಂಗೆ ಅಲ್ಕೊಂಡು ಈಥರ ? ಗೊತ್ತಿಲ್ಲ ? ಬಾಂಬ್ ಬ್ಲಾಸ್ಟ್ ಆಗಿದೆ. TV9 ನಲ್ಲಿ ಲಕ್ಷ್ಮಿ ಮೃತಪಟ್ಟ ಮಹಿಳೆ ಅಂತ ತೋರ್ಸಿದ್ದನ್ನ ನೋಡಿ ದಾವಣಗೆರೆಯಲ್ಲಿ ಅಜ್ಜಿ ಮತ್ತು ನಿನ್ನ ಸೋದರ ಮಾವ ವಿಪರೀತ ಗಾಬರಿಯಾಗಿದ್ದಾರೆ. ಅಮ್ಮ ಅಣ್ಣನ ಫೋನ್ ಸಿಕ್ತಿಲ್ಲ. ಎಲ್ರೂ ಗಾಬ್ರಿಯಾಗಿದ್ದಾರೆ...ಎಲ್ಲಿ ಎಲ್ಲಾರು ?

ನಾನು : ನಾನು ಬದುಕಿದ್ದೇನೆ ಮಾವ. ನನಗೇನೂ ಆಗಿಲ್ಲ. ಚೆನ್ನಾಗೇ ಇದ್ದೇನೆ. ಬ್ಲಾಸ್ಟ್ ಆದ ಜಾಗದಲ್ಲಿ ನಾನಿರಲಿಲ್ಲ. ಈಗ ಬಸ್ಸಿನಲ್ಲಿ ಕೂತಿದ್ದೇನೆ. ಅಣ್ಣ safe. ಈಗಷ್ಟೆ ಫೋನ್ ಮಾಡಿದ್ದರು. ಅಮ್ಮಂಗೆ try ಮಾಡಿ ನಿಮಗೆ ಫೋನ್ ಮಾಡಲು ಹೇಳುವೆ.

ಅವರು : ಎಲ್ಲಿಗೆ ಹೋಗಿದ್ದೆ ? ಪಿ ವಿ ಆರ್ ನಲ್ಲಿ ಪಿಕ್ಚರ್ ನೋಡಕ್ಕೆ ಹೋಗಿದ್ಯ ?ಅಪ್ಪಿ ತಪ್ಪಿ ನೂ ಇನ್ನು ಮೂರ್ ತಿಂಗಳು ಅಲ್ಲಿ ಕಾಲ್ ಇಡ್ಬೇಡಾ...ಕೆಂಗೇರಿಯ ನಿನ್ನ ಡೆಪಾರ್ಟ್ಮೆಂಟ್ ಕಡೆ ದಿಂಬು ಹಾಕಿಕೊಂಡು ಮಲಗಬೇಡಾ...ಗೊತ್ತಾಯ್ತು ? ಶಾಪಿಂಗ್, ಸೈಟ್ ಸೀಯಿಂಗ್ ಅಂತ ಎಲ್ಲು ಹೊರಗೆ ಕಾಲಿಡ್ಬೇಡಾ ಒಂದು ವಾರ. ತಿಳ್ಕೋ... ಸರಿ ನಿಮ್ಮಮ್ಮನ ಕೈಲಿ ನನಗೆ ಫೋನ್ ಮಾಡಿಸು ಮೊದ್ಲು...

ಎಂದು ಆಜ್ಞೆ ಮಾಡಿದ್ದೇ ಫೋನ್ ಇಟ್ಟರು. ನಾನು ಅವರ ಪ್ರಶ್ನೆಗೆ ಉತ್ತರಿಸುವ ಮೊದಲೇ.

ನಾನು ಬಿದ್ದೂ ಬಿದ್ದೂ ನಗುತ್ತಿದ್ದುದನ್ನು ಬಸ್ಸಿನವರೆಲ್ಲಾ ವಿಚಿತ್ರ ನೋಟದಿಂದ ನೋಡುತ್ತಿದ್ರು !

Z : uhahahahahahaha !!!!!!!!!!!!!!!!!!!!!!!!!!!!!!!!!!!!!

ನಾನು : :=))

ಅಮ್ಮನ ಮೊಬೈಲ್ ಕನೆಕ್ಟಾಗದಿದ್ದದ್ದು ನನಗೀಗ ಭಯ ತರಿಸಿತು. ಮನೆಗೆ ಫೋನ್ ಮಾಡಿದೆ., ನನ್ನದೇ ದನಿಯ answering machine ಮಾತಾಡಿತು . ನಾನು ಒದರಿದೆ..."ಎಲ್ಲಿದ್ದೀರಿ ಎಲ್ಲಾರು ? ಅಣ್ಣ ಬೇರೆ ಫೋನ್ ಮಾಡಿದ್ದರು. ಏನೂ ಹೇಳ್ತಿಲ್ಲ ಅವ್ರು ಬೇರೆ. ಏನಾಯ್ತು ಅಂತ ಮನೆಗೆ ಬಂದ ತಕ್ಷಣ ಫೋನ್ ಮಾಡೀ. ಬೇಗ !

ಫೋನ್ ಇಟ್ಟ ಮೇಲೆ ಫ್ಲಾಷಾಯ್ತು ಮಾವ ಫೋನ್ ಮಾಡಿದ್ದೂ ಹೇಳಬೇಕಿತ್ತು ಅಂತ. ಮನೆಯಲ್ಲಿ ಯಾರೂ ಇಲದಿದ್ದರೆ ಬೀಗಕ್ಕೇನು ಮಾಡುವುದು ? ತೋಚಲಿಲ್ಲ. ಅಷ್ಟೊತ್ತಿಗಾಗಲೇ ನಾನು ಮನೆಯ ಹತ್ತಿರ ತಲುಪಿದ್ದೆ. ಬಸ್ ಸ್ಟಾಪ್ ನಲ್ಲಿ ಎಲ್ಲರ ದುಗುಡದ ಮುಖಗಳು ನನಗೆ ಆಗ ಗೋಚರಿಸಲು ಪ್ರಾರಂಭವಾದವು...ಮಕ್ಕಳೆಲ್ಲ ಸ್ಕೂಲಿನಿಂದ ಮನೆಗೆ ದಾಪುಗಾಲು ಹಾಕಿಕೊಂಡು ಹೋಗುತ್ತಿದ್ದವು. ಪೋಲೀಸರು ರಸ್ತೆಯಲ್ಲೆಲ್ಲ ಬೀಟು ಹೊಡೆಯುತ್ತಿದ್ದರು. ಅಮ್ಮ ತಂಗಿ ಎಲ್ಲಿದ್ದರೂ ಮನೆಗೆ ತಲುಪಿರಲಪ್ಪಾ ಎಂದು ಪ್ರಾರ್ಥಿಸುತ್ತಾ ಮನೆ ಸೇರಿದೆ.

ಮನೆಯ ಬೀಗ ಹಾಕಿರಲಿಲ್ಲ. ಬಾಗಿಲು ಮುಚ್ಚಿತ್ತಷ್ಟೆ. ಕರೆಘಂಟೆಗೆ ಬಾಗಿಲು ತೆಗೆದವಳು ಅಪರ್ಣ, ನನ್ನ ತಂಗಿ.

ನಾನು : ಫೋನ್ ನ answering machine mode nalli ಇಟ್ಟು ಮನೆಲಿ ಏನ್ ಮಾಡ್ತಿದ್ದ್ರಿ ?

ಅವಳು : ನಿದ್ದೆ ಮಾಡ್ತಿದ್ವಿ.

Z : uhahahahahahahahahahahahahahaaha !!!!!!!!!!!!!!!!!!!!!!!!!!!!!!!!!!!!!!

ನಾನು : ನಗ್ಬೇಡಾ ನೀನು ! ನನಗೆ ವಿಪರೀತ ರೇಗತ್ತಿತು. ಅಷ್ಟೊತ್ತಿಗೆ ಅಮ್ಮ ಮೇಲಿಂದ ಕೆಳಗಿಳಿದರು..ಕಾರ್ಡ್ಲೆಸ್ಸ್ ಫೋನ್ ಕೈಯಲ್ಲಿ ಹಿಡಿದು.

ಲೇ ಅಣ್ಣ ಫೋನ್ ಮಾಡಿದ್ರು ನೀನೆಲ್ಲಿ ಅಂತ ಕೇಳ್ಕೊಂಡು...ಏನ್ ವಿಷ್ಯ ?

ನಾನು : ಎಷ್ಟ್ ಸರ್ತಿ ಮಾಡಿದ್ದರು ?

ಅಪರ್ಣ : answering machine ನಲ್ಲಿ ಎರಡು ಸರ್ತಿ ಮೆಸೇಜು ಬಿಟ್ಟಿದ್ದಾರೆ. ಈಗ ನಮಗೆ ಎಚ್ಚರ ಆಯ್ತು. ಮೊದಲು ನಿನ್ನ ಮೆಸೇಜು ಕೇಳಿದೆವು. ನಿನಗೆ ಟ್ರೈ ಮಾಡಲು ಹೋದರೆ ನಮ್ಮ ಮೊಬೈಲಿಂದ ಕನೆಕ್ಟ್ ಆಗ್ತಿಲ್ಲ.ಅಷ್ಟೊತ್ತಿಗೆ ಅಣ್ಣಾಮತ್ತೆ ಫೋನ್ ಮಾಡಿದರು. ಲ್ಯಾಂಡ್ ಲೈನಿಂದ ಫೋನ್ ಮಾಡುವ ಹೊತ್ತಿಗೆ ನೀನೇ ಬಂದೆ.

ನಾನು ನಡೆದ ಕಥೆ ಎಲ್ಲಾ ಕೂಲಂಕಷವಾಗಿ ಹೇಳಿದೆ.

ಅಮ್ಮ ನಾನು ಕಣ್ಣೂ ಮುಂದೆ ಇದ್ದರೂ ಗಾಬರಿ ಆದರು. ಸದ್ಯ ನಿನಗೇನು ಆಗಲಿಲ್ಲವಲ್ಲ. ಮಾವಂದಿರು ಫೋನ್ಗೆ ನಾನು ಏನಾದರೂ ಸಿಕ್ಕಿದ್ದಿದ್ದರೆ ನಾನು ವಿಷಯ ಕೇಳಿ ನೀನು ಹೋಗೇ ಬಿಟ್ಟೆಯೆಂದು ಗಾಬರಿ ಆಗಿ ನಾನೂ ಹೋಗೇ ಬಿಡುತ್ತಿದ್ದೆ ! ಸದ್ಯ ದೇವರು ಕಾಪಾಡಿದ !!

ನಾನು ಮತ್ತು ಅಪರ್ಣಾ ನಮ್ಮ ರೂಮಿನ ಬಾಗಿಲು ಹಾಕಿಕೊಂಡು ಬಿದ್ದೂ ಬಿದ್ದೂ ನಕ್ಕು, ಅಮ್ಮಂದಿರೆಲ್ಲಾ ಇಷ್ಟೆ ಎಂಬ universal law ಅನ್ನು ಮತ್ತೆ prove ಮಾಡಿ ಹೊರಬಂದೆವು. ಬಂದೊಡನೆ ಅಮ್ಮ...

" ಗೊತ್ತು ಕಂಡ್ರೆ ನೀವ್ ಬಿದ್ದೂ ಬಿದ್ದೂ ನಗ್ತೀರಿ ಅಂತ..ನಿಮಗೂ ಮಕ್ಕಳಾಗತ್ತಲ್ಲ...ಆಗ ಗೊತ್ತಾಗತ್ತೆ ನಿಮ್ಗೆ ನನ್ನ ಟೆನ್ಷನ್ನು !!!

ಅಣ್ಣನ airtel landline ಗೆ ಫೋನ್ ಮಾಡಿ ನಾನು ಮನೆ ಸೇರಿದ್ದೇನೆ ಎಂದು ಹೇಳಿ ಅಮ್ಮ ಸಮಾಧಾನದ ನಿಟ್ಟುಸಿರು ಬಿಟ್ಟರು. ಅಣ್ಣನೂ ಸಮಾಧಾನಗೊಂಡಿರುತ್ತಾರೆಂದು ನಮಗೆ ಖಾತ್ರಿಯಾಯ್ತು. ಅಮ್ಮನಿಗೆ ರಾಗಿಗುಡ್ಡದಲ್ಲಿ ಕಾವ್ಯ ವಾಚನ ಕಾರ್ಯಕ್ರಮವಿತ್ತು. ಫೋನ್ ಗೆ ಸಿಗುತ್ತಿದ್ದುದು ನಾನೊಬ್ಬಳೆ. ಸರಿ ನಾನೂ ಹೊರಟೆ, ಹನುಮನ ನೋಡಿದ ಹಾಗೂ ಆಯ್ತು, ಅಮ್ಮನ ಕಾದ ಹಾಗೂ ಆಯ್ತು...ಟೈಮ್ ಪಾಸೂ ಆಯ್ತು ಅಂತ. ಆದರೂ ನಾನು ನಗುತ್ತಲೇ ಇದ್ದೆ...

Z : ha hahah !!!

ನಾನು : ನಾನು, ಲಕ್ಷ್ಮೀ, ಬದುಕಿದ್ದೇನೆ, ಸತ್ತ ಲಕ್ಷ್ಮೀ ನಾನಲ್ಲ !

Z :ನಾನೂ ಹೇಳ್ಬೇಕಾ ಇದನ್ನ ?

ನಾನು : ನಿನ್ನಿಷ್ಟ.

Z : to be on a safer side, ನಾನೂ ಹೇಳಿಬಿಡುವೆ.

ಸತ್ತ ಲಕ್ಷ್ಮೀ ನಾನೂ ಕೂಡಾ ಅಲ್ಲ !!!

5 comments:

ಸುಧೇಶ್ ಶೆಟ್ಟಿ said...

ನನ್ ಫ್ರೆ೦ಡೂ ಫೋನ್ ಮಾಡಿ ಬೆ೦ಗಳೂರಿನಲ್ಲಿ ಬ್ಲಾಸ್ಟ್ ಆಯ್ತು ಅ೦ತಲ್ಲ. ನೀನು ಬದುಕಿದ್ದೀಯ? ಅ೦ತ ಕೇಳ್ದ. ನಾನು ’ಇಲ್ಲ ನಾನು ಸತ್ತಿದ್ದೇನೆ. ನನ್ನ ದೆವ್ವ ಈಗ ನಿನ್ನ ಜೊತೆ ಮಾತಾಡ್ತಿದೆ’ ಅ೦ತ ಗುರಾಯಿಸಿದೆ.
ನಿಮ್ಮ ಪೇಚಾಟ ಕ೦ಡು ನಗು ಬ೦ತು.

Anonymous said...

ಹಮ್ಮ ನಿನಗೆ ನಿನ್ನದೆ ಲೋಕ ಕಣೆ... ಎಲ್ಲಾ ಕೆರ್ಲೆಸ್ ಆಗಿ ತಗೊಬೇಡಮ್ಮ ಪ್ಲೀಸ್......
ನನಗೆ ಮೊದಲು ಅಮ್ಮ ಪೋನ್ ಮಾಡಿ ಬೇಗ ಮನೆಗೆ ಬಾ.. ಅಂದ್ರು ಯಾಕಮ್ಮ ಅಂದ್ರೆ?ನಾನಾ ಕಡೆ ಬಾಂಬ್ ಬ್ಲಾಸ್ಟ್ ಆಗಿದೆ ಹೋಸುರು ರೋಡ್ನಲ್ಲೆಲ್ಲ ಅಂತ ಹಾಗೆ ಅಂದಿದ್ದೆ ತಡ ಮೊದಲು ನೆನಪಾಗಿದ್ದೆ ಅಪ್ಪ...ಸರಿ ಅಮ್ಮ ಈಗ ಪೋನ್ ಇಡ್ತಿನಿ,ಅಂದು ಅಪ್ಪಂಗೆ ಪೋನ್ ಮಾಡ್ತಿದ್ದಿನಿ ಮಾಡ್ತಿದ್ದಿನಿ ಆ ಕ್ಷಣಗಳು ಭಯಂಕರವಾಗಿತ್ತು ಅಬ್ಬಾ ಕೊನೆಗು ಅಪ್ಪ ಹಲೋ ಹೇಳೊ ಪುಟ್ಟ ಅಂದ್ರು ಒಂದು ನಿಮಿಷ ನಿಟ್ಟುಸಿರುಬಿಟ್ಟೆ.ಅಪ್ಪಂಗೆ ಗಾಬರಿಆಗಿ ಹೇ ಏನು ಹುಶಾರಾಗಿದ್ದಿಯಾ ತಾನೆ ವಾಯ್ಸ್ ಯಾಕೆ ಹಾಗಿದೆ ಅಂದ್ರು.ಅದಿಕ್ಕೆ ಅಪ್ಪ ನನ್ನ ಬಗ್ಗೆ ಚಿಂತೆ ಬಿಡು ಮೊದಲು ನೀ ಎಲ್ಲಿದ್ದೀಯಾ ಅಂದೆ ..ಹಾಗ ಅಪ್ಪ ಎಲ್ಲಾ ವಿವರಿಸಿದರು ಆ ಬಾಂಬ್ ಬ್ಲಾಸ್ಟ್ ಆಗಿದ್ದಕ್ಕಿಂತ ೫೦೦ಮಿ ದೂರದಲ್ಲಿ ನಾನು ಸಾಗ್ತಿದ್ದೆ ಅಂದಿದ್ದೆ,ಮನಸಲ್ಲೇ ಎಲ್ಲಾ ದೇವ್ರುಗಳಿಗೆ ನಮಸ್ಕಾರ ಹಾಕೊಂಡೆ..

ಒಟ್ಟಿನಲ್ಲಿ "LIFE IS UNPREDICTABLE"ಆದರೆ ಸ್ವಲ್ಪ ದಿನದ ಮಟ್ಟಿಗೆ ನಿನ್ನ ತಿರುಗಾಟ ಕಡಿಮೆ ಮಾಡು ಪ್ಲೀಸ್.......

sachidananda K.N said...

yenri maneyavaru asshttu gabari yagiddhare neevu nodidre awara gabari nodi enjoy padtha iddirallari..che papa nimma ajji maneyawara gabari nodake aggalla..

Lakshmi S said...
This comment has been removed by the author.
Lakshmi S said...

@ಸುಧೀಶ್ ಶೆಟ್ಟಿ:

ಓಹ್ ! ನಿಮ್ಮನ್ನು ಕೇಳಿದರೋ !! ಸದ್ಯ ನಾನೊಬ್ಬಳೇ ಅಲ್ಲ ಪೇಚಾಟಕ್ಕೆ ಸಿಕ್ಕಾಕೊಂಡಿದ್ದು ! ನಿಮಗೆ ನಗು ಬಂತಾ ನನ್ನ ಪೇಚಾಟ ನೋಡಿ ? :)

@ಪುಷ್ಪಲತ :

ಇಲ್ಲಮ್ಮ... i thought bangalore is a very safe city and ignored all info about bomb blasts...ಅಷ್ಟೆ...

ನಿನ್ನ ಕಥೆ ಕೇಳಿ ನಂಗೆ ಈಗ ಗಾಬರಿ ಆಗ್ತಿದೆ...ಸದ್ಯ ಏನೂ ಆಗ್ಲಿಲ್ಲವಲ್ಲ...

ತಿರುಗಾಟ್ ಕಮ್ಮಿಮಾಡೊಕೆ ಆಗಲ್ಲ...ಅವ್ರುಗಳಿಗೆ ಹೆದರಿಕೊಂಡು ನಾನು ಲೈಬ್ರರಿ ಗೆ ಹೋಗೋದನ್ನ ನಿಲ್ಲಿಸಲ್ಲ...ಆದ್ರೆ careful ಆಗಿರ್ತಿನಿ...i promise !

@sacchidananda :

ನಮ್ಮಜ್ಜಿ ಎಲ್ಲಾದಕ್ಕೂ ಗಾಬ್ರಿ ರಿ...ಅಜ್ಜಿ ಅಲ್ವ ಅದಕ್ಕೆ ! :) ಇಲ್ಲ ನಾನು situation ನ enjoy ಮಾಡ್ತಿರ್ಲಿಲ್ಲ...ಇವರಿಗೆ ನಾನೇ ಫೋನ್ ನಲ್ಲಿ ಮಾತಾಡ್ತಿದ್ರು ನಾನು ಸತ್ತಿದಿನೋ ಬದ್ಕಿದಿನೋ ಅಂತ ಕೇಳ್ದ್ರಲ್ಲ...ಅದಕ್ಕೆ ನಗು ಬಂತಷ್ಟೆ !!

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...