ನಾನು : ಟ್ರೈನ್ ಇಂದ ಕೆಲಗಿಳಿದ ಮೇಲೆ ನಮಗೆ ನಾವು ಹೋಗಿದ್ದ ಟ್ರಾವೆಲ್ಸ್ ಆದ ಹನ್ಸಾ ಟ್ರಾವೆಲ್ಸ್ ನ ಮ್ಯಾನೇಜರ್ ವೆಂಕಟೇಶ್ ಅವರು ಕಾಣಿಸಿಕೊಂಡರು.
Z : ಬೆಂಗಳೂರಿನಿಂದ ನಿಮ್ಮೊಟ್ಟಿಗೆ ಯಾರೂ ಬರಲಿಲ್ಲವಾ ?
ನಾನು : ಇಲ್ಲ.
Z : ಟ್ರಾವೆಲ್ಸ್ ಅಂದ ಮೇಲೆ ಹೊರಡುವಾಗಿನಿಂದಲೇ ಜವಾಬ್ದಾರಿ ತೆಗೆದುಕೊಳ್ಳಬೇಕಲ್ಲವಾ ?
ನಾನು : ಹೌದು.ಆದರೆ ಇವರದ್ದು ಸ್ವಲ್ಪ ಡಿಫರೆಂಟ್ ಸ್ಟೈಲ್. ಅವರು ನಮಗಿಂತ ಒಂದು ದಿನ ಮುಂಚೆ ಆಗ್ರಾ ತಲುಪಿ, ಅಲ್ಲಿ ಮುಂದಿನ ಪ್ರಯಾಣಕ್ಕೆ ವ್ಯವಸ್ಥೆ ಮಾಡಿ ನಮಗಾಗಿ ಕಾಯುತ್ತಿದ್ದರು.
Z : ಐ ಸೀ. ಏನು ವ್ಯವಸ್ಥೆ ಮಾಡಿದ್ದರು ?
ನಾನು : ಬಂದೆ, ಅದನ್ನೇ ಹೇಳಕ್ಕೆ ಬರ್ತಿದಿನಿ.ಬೆಂಗಳೂರು ಬಿಡುವ ಮುಂಚೆ ಹನ್ಸಾ ಟ್ರಾವಲ್ಸ್ ನವರು ಒಂದು ಮೀಟಿಂಗ್ ಕರೆದಿದ್ದರು. ಅಲ್ಲಿ ಎಲ್ಲರೂ ಆಗ್ರ ಇಂದ ನಮ್ಮ ಪ್ರಯಾಣ ಮುಂದುವರೆಸಲು ಏಸಿ ಇರುವ ಬಸ್ ಮಾಡಿಸಿ, ದುಡ್ಡು ಹೆಚ್ಚು ಬೇಕಿದ್ದರೆ ಎಲ್ಲರೂ ಅಲ್ಲಿಯೇ ಕೊಡುತ್ತೇವೆ ಎಂದು ಹೇಳಿದ್ದರು. ಈ ಟ್ರಾವೆಲ್ಸ್ ನವರೂ ಹೂಂಗುಟ್ಟಿದ್ದರು.ಆದರೆ ಆಗ್ರಾದಲ್ಲಿ ಇಳಿದ ತಕ್ಷಣ ಎಲ್ಲಾ ಉಲ್ಟಾಪಲ್ಟಾ.ಈ ಮ್ಯಾನೇಜರ್ ವೆಂಕಟೇಶ್ ಅವರು "ಏಸಿ ಬಸ್ಸು ಮಾಡಿಸಬೇಕು ಅಂತ ನಮಗೆ ಬೆಂಗಳೂರಿನವರು ಹೇಳೇ ಇರಲಿಲ್ಲ. ಈಗ ಏಸಿ ಬಸ್ಸು ಮಾಡಿಸಲಾಗುವುದಿಲ್ಲ. ಆದ್ದರಿಂದ ನಾವು ಮಾಡಿಸಿರುವ ಬಸ್ಸಿಗೆ ಬಂದು ಕುಳಿತುಕೊಳ್ಳಿ. ಈಗ ಹೇಗೆ ಬೇಕಾದರೂ ಕುಳಿತುಕೊಳ್ಳಿ, ಹೋಟೆಲ್ ಗೆ ಹೋಗಿ ಮೊದಲು ತಿಂಡಿ ತಿಂದು ನೀವು ಎಲ್ಲರೂ ವಿಶ್ರಾಂತಿ ತೆಗೆದುಕೊಳ್ಳಿ.ಆಮೇಲೆ ಸೀಟ್ ನಂಬರ್ ಅನ್ನು ಕೊಡಲಾಗುತ್ತದೆ, ಎಲ್ಲರೂ ಕಡ್ಡಾಯವಾಗಿ ಅದರಲ್ಲಿಯೇ ಕೂರತಕ್ಕದ್ದು." ಎಂದರು.ನಮಗೆ ಅವರು ಈ ಮಾತನ್ನು ಹೇಳಿದ ಶೈಲಿ ಯಾಕೋ ಸರಿಬರಲಿಲ್ಲ. ಒಬ್ಬ ಮ್ಯಾನೇಜರ್ ಗೆ ಇರಬೇಕಾದ ಸಹಜ managerial skills ,effective communication ಇರಲಿಲ್ಲ. ಧ್ವನಿಯಲ್ಲಿ ಉಡಾಫೆ ಮತ್ತು ಅಲ್ಲಲ್ಲಿ ಧೋರಣೆ ಕಾಣುತ್ತಿತ್ತು. ಇವರ ಮಾತನ್ನು ಕೇಳಿ ನಾನು ಅಣ್ಣ ಇಬ್ಬರು ಹುಬ್ಬು ಗಂಟಿಕ್ಕಿದೆವು.ಅಮ್ಮ," ನೋಡೋಣ ಮುಂದೆ, ಬಂದಿಳಿದ ತಕ್ಷಣ ಏನೂ ಮಾತಾಡೋದು ಬೇಡ . ಹೋಟೆಲ್ ನಲ್ಲಿ ವ್ಯವಸ್ಥೆ ನೋಡಿ ನಂತರ ಮಾತಾಡೋಣ" ಅಂದರು. ನಾವು ಸೂಟ್ಕೇಸ್ ಗಳನ್ನ ತಳ್ಳುವ ಗಾಡಿಗೆ ಹಾಕಿಸುವ ಕಡೆ ಗಮನ ಹರಿಸಿದೆವು. ಕೂಲಿಯವರು ಆಗಲೇ ತಮ್ಮ ಬುದ್ಧಿ ತೋರಿಸಲು ಶುರುಮಾಡಿದರು. ಏಳುನೂರು ರುಪಾಯಿಗಳಿಂದ ನಾನೂರು ರುಪಾಯಿಗೆ ದರವನ್ನು ಇಳಿಸಿ, ನಾಲ್ಕು ಪರಿವಾರಗಳ ಲಗೇಜನ್ನು ಹೊರಿಸಿಕೊಂಡು ಬಸ್ಸಿನಲ್ಲಿ ತುಂಬಿಸಿದ್ದಾಯ್ತು.ಬಸ್ ನಲ್ಲಿ ಕುಳಿತುಕೊಳ್ಳುವಷ್ಟರಲ್ಲಿ ಆಗಲೇ ಎಲ್ಲರಿಗೂ ಬೆವರಿಳಿಯುತ್ತಿತ್ತು. ಅಲ್ಲಿನ ಬೆಳಿಗ್ಗೆ ಏಳುವರೆಯ ಬಿಸಿಲು, ಬೆಂಗಳೂರಿನ ಬೇಸಿಗೆಗಾಲದ ಮಧ್ಯಾಹ್ನ ಹನ್ನೆರಡುಘಂಟೆಯ ಬಿಸಿಲಿಗೆ ಸಮ.
Z : ಐಸೀ.
ನಾನು : ಹು. ಬಸ್ ನಿಂದ ಆಗ್ರಾ ನಗರಿ ಬಹಳ ಚೆಂದ ಕಾಣ್ತಿತ್ತು. ಅಲ್ಲಿನ ಗಾಳಿಗೆ ಒಂಥರಾ ಗಾಂಭೀರ್ಯ. ಮೊಘಲರ ಗಾಂಭೀರ್ಯ ಅಂತ ಇಟ್ಕೊ.
Z : ಒಹ್ಹೋ...
ನಾನು : ನಾವು ಹೋಟೆಲ್ ತಲುಪಿದಾಗ ಒಂಭತ್ತುವರೆ. ನಮ್ಮ ರೂಂ ಗಳೆಲ್ಲ ಅಲ್ಲಾಟ್ ಆಗುವ ಹೊತ್ತಿಗೆ ಹತ್ತು ಕಾಲು.ನಾನು ಆಗಲೇ ನನ್ನ ಕೆಲ್ಸ ಶುರು ಹಚ್ಕೊಂಡಿದ್ದೆ.
Z : ಏನ್ ಮಾಡಿದೆ ?
ನಾನು : ನಮ್ಮ ರೂಮಿದ್ದಿದ್ದು ಟಾಪ್ ಮೋಸ್ಟ್ ಫ್ಲೋರ್ನಲ್ಲಿ. ಅಲ್ಲಿಂದ ನಾನು ಸುತ್ತಮುತ್ತಲಿನ ಫೋಟೋಸ್ ತೆಗೆಯಕ್ಕೆ ಶುರು ಮಾಡಿದೆ.
Z : ಶೆಟ್ಟಿ ಬಿಟ್ಟಲ್ಲೇ ಪೊಟ್ಟಣ ಕಟ್ಟಕ್ಕೆ ಶುರು ಮಾಡ್ತಾನೆ ಅಂತ ಗಾದೆ.
ನಾನು : ಹು. ಹಂಗೇನೆ. ನೋಡು ಒಂದೆರಡು ಸ್ಯಾಂಪಲ್ ಗೆ.
ಆಗ್ರಾದಲ್ಲಿ ನಮ್ಮ ಹೋಟೆಲ್ ಇದ್ದ ರಸ್ತೆ.
ನಮ್ಮ ಫ್ಲೋರ್ ನಿಂದ ತಾಜ್ ಕಂಡದ್ದು ಹೀಗೆ :)
Z : ಹಾ..............
ನಾನು : ಸಾಕು. ಅಷ್ಟೋಂದ್ ಜೋರಾಗಿ ಬಾಯ್ಬಿಡ್ಬೇಡ. ನಿನಗೆ ಇನ್ನೊಂದ್ ಫೋಟೋ ತೋರ್ಸ್ಬೇಕು.
Z : yes please.
Z : ಒಹ್ಹೊಹೊಹೊಹೊಹೊ.....
ನಾನು : ನಾವಿದ್ದ ರೂಮಿನ ಕಿಟಕಿಯ ಪಕ್ಕದಲ್ಲಿ ಇವು ವಾಸ್ತವ್ಯ ಹೂಡಿದ್ದವು.ನಮ್ಮ ನಿದ್ದೆ ಹೋದಂಗೆ ಅಂತ ನಾನು ಅಪರ್ಣ ನಿಟ್ಟುಸಿರಿಟ್ಟೆವು.ಅಮ್ಮನ ರೂಮಿಗೆ ಬಂದು ಇರೋ ವಿಷಯ ಹೇಳಿದೆವು. ಅದಕ್ಕೆ ಅಮ್ಮ, "ನಿಮ್ಮ ಥರಾನೆ ಅಲ್ವಾ ಅವು, ಈಗ್ಲಾದ್ರು ಗೊತ್ತಾಗ್ಲಿ ಎಂಥವ್ರು ನೀವು ಅಂತ..." ಅಂತ ಅಂದು ನಮ್ಮ ಹೊಟ್ಟೆ ಉರಿಸಿದರು.
Z : ಎಷ್ಟೇ ಆಗಲಿ....
ನಾನು : ನೀನು ಅಮ್ಮನ ತರಹ ಆಡ್ಬೇಡ. ಅಮ್ಮನೂ ಇದೇ ಡೈಲಾಗ್ ಹೊಡೆದಿದ್ದರು.
Z : :) :) :)
ನಾನು : ರೂಮಲ್ಲಿ ಸೆಟಲ್ ಆಗುವ ಹೊತ್ತಿಗೆ ಟ್ರಾವೆಲ್ಸ್ ನವರು ನಮ್ಮನ್ನ ತಿಂಡಿಗೆ ಕರೆದರು. ನಾನು ಅಪರ್ಣ ಕಿಟಕಿ ತೆಗೆಯಲಾಗುವುದಿಲ್ಲ ಎಂದು ಕೈ ಕೈ ಹಿಸುಕಿಕೊಳ್ಳುತ್ತಿದ್ದೆವು. ಪುಣ್ಯಕ್ಕೆ, ಇವಕ್ಕೆ ನಮ್ಮ ಕಷ್ಟ ತಿಳಿದು, ನೀಟಾಗಿ ಪಕ್ಕದ ಬಿಲ್ಡಿಂಗ್ ಗೆ ಹಾರಿದವು. ನಾವು ನೆಮ್ಮದಿಯಾಗಿ ಕಿಟಕಿ ತೆಗೆದಿಟ್ಟು ತಿಂಡಿ ದಿನ್ನಲು ಹೋದೆವು.
ತಿಂಡಿ ತಿನ್ನೋವಾಗ ನಂಗೆ ಕೆಲವು ವಿಷಯಗಳು ಜ್ಞಾನೋದಯವಾದ್ವು.
Z : ತಿಂಡಿ ಏನು ಅನ್ನೋದನ್ನ ಹೇಳು ಮೊದ್ಲು.
ನಾನು : ಇಡ್ಲಿ, ಚಟ್ನಿ, ಉಪ್ಪಿಟ್ಟು, ಕೇಸರಿಬಾತು.
Z : ಲಗಾಯ್ಸಿದ್ಯಾ ?
ನಾನು : ಅಷ್ಟೋಂದ್ ಏನು ತಿನ್ನಲಿಲ್ಲ.
Z : ನ್ಯಾನೋಗ್ರಾಮ್ಸ್ ?
ನಾನು : ಅದಕ್ಕಿಂತ ಜಾಸ್ತಿ.
Z : ಮತ್ತೆ ?
ನಾನು : ಗ್ರಾಮ್ಸ್.
Z : ಗ್ರಾಮ್ಸ್ ಲೆವೆಲ್ಲಲ್ಲಿ ಊಟ ಮಾಡಿದ್ದಕ್ಕೆ ಏನೆಲ್ಲಾ ಜ್ಞಾನೋದಯ ಆಯ್ತು ಅಂತ ?
ನಾನು : ಆಗ್ರ ಇಂದ ಫತೇಹ್ ಪುರ ಸಿಕ್ರಿ ಅರ್ಧ ಘಂಟೆಯ ಪ್ರಯಾಣ. ಹೇಗೂ ಮಥುರೆಗೆ ಒಂದುವರೆ ಘಂಟೆಗೆ ಬಿಡುವುದೆಂದು ವೆಂಕಟೇಶರವರು ಅಪ್ಪಣೆ ಕೊಡಿಸಿದರು. ನಾವೇ ಕಾರು ಮಾಡೀಕೊಂಡು ಹೋಗಿ ಬಂದುಬಿಡಬಹುದಲ್ಲಾ ಅಂತ ಜ್ಞಾನೋದಯವಾಯ್ತು.
Z : ಏನಿದು ಫತೇಹ್ ಪುರ್ ಸಿಕ್ರಿ ?
ನಾನು : ಅದು ಬಾದ್ ಶಾಹ್ ಅಕ್ಬರನು ಕಟ್ಟಿಸಿದ ಮೊದಲ ಕೋಟೆ. ಅವನು ಜೈತ್ರಯಾತ್ರೆಯಲ್ಲೆಲ್ಲ ವಿಜಯಶಾಲಿಯಾದ ಮೇಲೆ ಕಟ್ಟಿಸಿದ್ದು. ಉರ್ದು ಅಲ್ಲಿ ಫತೇಹ್ ಅಂದರೆ " to conquer " ಅಂತ. ಅವನು ಭಾರತವನ್ನೆಲ್ಲ ಗೆದ್ದಮೇಲೆ ಕಟ್ಟಿಸಿದ ಕೋಟೆಯದು. ತನ್ನ ಸಾಮ್ರಾಜ್ಯ ಬುಲಂದ್ (ಸದೃಢ)ವಾಗಿರಲೆಂದು, ಅಲ್ಲಿನ ಮಸೀದಿಯ ಬಾಗಿಲಿಗೆ "ಬುಲಂದ್ ದರ್ವಾಜಾ" ಎಂದು ಹೆಸರಿಟ್ಟ.
ಸಲೀಮ..
Z : ಅದೇ ಅನಾರ್ಕಲಿ ಸಲೀಮ !
ನಾನು : ಹಾಂ...ಅದೇ ಸಲೀಮ. ಅವನು ಹುಟ್ಟಿದ್ದು ಇಲ್ಲಿಯೇ.
Z : ನನಗೊಂದು ಡೌಟು.
ನಾನು : ಕೇಳುವಂಥವಳಾಗು ಬಾಲೆ !
Z : ಮೊಘಲರ ರಾಜಧಾನಿ ಆಗ್ರಾ ಅಲ್ವ ? ಅದೇಕೆ ಅಕ್ಬರ್ ಫತೇಪುರ್ ಸಿಕ್ರಿ ಕಟ್ಟಿಸಿದ ?
ನಾನು : ಏನಿಷ್ಟೆಲ್ಲಾ ತಿಳ್ಕೊಂಡಿದ್ಯಾ ?
Z : ನಾವು ನಾಲ್ಕಕ್ಸರ ಓದಿದೀವಿ ಅಮ್ಮಾವ್ರೆ...
ನಾನು : Oh yes, I know :) ಒಳ್ಳೆ ಪ್ರಶ್ನೆ. ಕೇಳು, ಕಥೇನ. ಅಕ್ಬರನಿಗೆ ಮೊದಲು ಅವಳಿ ಮಕ್ಕಳು ಜನಿಸಿದವು. ಆದರೆ ಅವು ತೀರಿಕೊಂಡವು ಮಕ್ಕಳಾಗಲಿಲ್ಲ. naturally, ಅಕ್ಬರನಿಗೆ ಸಖತ್ ಬೇಜಾರ್ ಆಯ್ತು. ದೇವರು, ದಿಂಡರುಗಳ ಪಾದಕ್ಕೆ ಎರಗಿದ. ಆಗ, ಆಗ್ರಾದಿಂದ ಸ್ವಲ್ಪ ದೂರ ಸಿಕ್ರಿ ಎಂಬ ಊರಿನಲ್ಲಿ ಸಲೀಮ ಎಂಬ ಸನ್ಯಾಸಿಯೊಬ್ಬನು ವಾಸಿಸುತ್ತಾನೆ. ಅವನು ಹೇಳಿದ್ದೆಲ್ಲಾ ನಿಜ ಆಗತ್ತೆ, ಸಿಕ್ಕಾಪಟ್ಟೆ ಜನರ ದುಃಖನೆಲ್ಲಾ ಚಿಟ್ಪಟ್ ಅಂತ ನಿವಾರಿಸಿಬಿಟ್ಟಿದ್ದಾನೆ ಅಂತೆಲ್ಲಾ ಒಂದಿಷ್ಟು ಜನ ಅಕ್ಬರನಿಗೆ ಹೇಳಿದರು. ಅದಕ್ಕೆ ಅಕ್ಬರು ಸಲೀಮರ ಬಳಿ ಹೊರಟ.
Z : ಮಾರ್ಚ್ ಪಾಸ್ಟಾ ?
ನಾನು : ಹು, by the left, quick march !
Z : ಆಮೇಲೆ ?
ನಾನು : ಸಲೀಮರು, ಅಕ್ಬರ ಆಗ್ರಾ ಬಿಟ್ಟು, ಇಲ್ಲಿ ಸಿಕ್ರಿಯಲ್ಲಿ ಕೋಟೆ ಕಟ್ಟಿಸಿ ರಾಜನು ಇರಬೇಕೆಂದು ಹೇಳಿದರು. ಆಗ ಅವನ ಪರಿವಾರ ಇಲ್ಲಿ ಶಿಫ್ಟ್ ಆಯ್ತು. ಆಗ ಕಟ್ಟಿಸಿದ ಕೋಟೆಯೇ ಈ ಫತೇಹ್ಪುರ್ ಸಿಕ್ರಿ.
Z : packers and movers ಗೆ contract ಕೊಟ್ಟಿದ್ನಂತಾ ಅಕ್ಬರ್ರು ? ಪುಳಕ್ ಅಂತ ರಾಜಧಾನಿನೆ ಎತ್ತಂಗಡಿ ಮಾಡಿಸ್ಬಿಟ್ನಲ್ಲಾ ?
ನಾನು : ಇಲ್ಲಮ್ಮಾ...ಜನ ಪಾಪ ತಮ್ಮ ಮನೆ ಬಿಟ್ಟು, ಹಸು ಕರುಗಳನ್ನ ಹೊಡೆದುಕೊಂಡು ನಡ್ಕೋಂಡ್ ಹೋಗಿರ್ತಾರೆ. ಇವ್ರು ಆನೆ, ಕುದುರೆ ಅಂಥಿಂಥವುಗಳಲ್ಲಿ ಹೋಗಿರ್ತಾರೆ.
Z : ಏನ್ ಸೆಖೆ ಅಲ್ವಾ ಆ ಜಾಗ ಎಲ್ಲ ? ನಡೆಯೋಕೆ ಎಷ್ಟ್ ಕಷ್ಟ. ವೋಲ್ವೋ ಬಸ್ಸಿರ್ಬೇಕಿತ್ತು ನೋಡು...ನೆಮ್ಮದಿಯಾಗಿ ಹೋಗ್ಬಹುದಿತ್ತು.
ನಾನು : ನಾವು ರಾಜ್ಯ ಸಂಸ್ಥಾಪನೆ ಮಾಡಿ ಆಳ್ತಿವಲ್ಲಾ, ಯಾವ್ದಾದ್ರು ಒಂದು ಜನ್ಮದಲ್ಲಿ..ಆಗ ನಮ್ಮ ರಾಜ್ಯದಲ್ಲಿ ಇಡ್ಸ್ಕೊಳ್ಳೋಣಂತೆ. ಇದು ಅಕ್ಬರನ ರಾಜ್ಯ ಅಲ್ವಾ ? ಅವನೇನ್ ಬೇಕಾದ್ರು ಮಾಡ್ಕೊಳ್ಳಲಿ.ಬಿಡು. Let us not interfere.
Z : yes yes. ಅದಿರ್ಲಿ, ಇದಕ್ಕೆ ಫತೇಹ್ ಪುರ್ ಎಂದು ಕರೆಯಲು ಕಾರಣ ಏನಿರ್ಬಹುದು ?
ನಾನು :ಅಕ್ಬರ ಸಿಕ್ಕಾಪಟ್ಟೆ ರಾಜ್ಯಗಳನ್ನೆಲ್ಲಾ ಗೆದ್ದಿದ್ದನಲ್ಲಮ್ಮಾ,, ಆ ಸಂತೋಷಕ್ಕೆ ಆ ಹೆಸರಿಟ್ಟಿರಬಹುದು. ಅಲ್ಲಿ ಕೋಟೆ ಕಟ್ಟಿಸಿದ,ರಾಜಧಾನಿಯನ್ನ ಅಲ್ಲಿಗೆ ವರ್ಗಾಯಿಸಿದ. ಅಲ್ಲಿ ಅಕ್ಬರನಿಗೆ ಮೊದಲನೇ ಮಗ ಹುಟ್ಟಿದ. ಅದಕ್ಕೆ ಅಕ್ಬರ ಸಲೀಮ ಅಂತಲೇ ಹೆಸರಿಟ್ಟ. ಆಮೇಲೆ ಸಲೀಮ ಅದನ್ನ ಜಹಂಗೀರ್ ಅಂತ ಬದಲಾಯ್ಸಿಕೊಂಡ.
Z : Without an affidavit ?!
ನಾನು :ನಾನು ಹೇಳಿದೆನಲ್ಲಾ...This was the time of Akbar's reign ಅಂತ ?
Z : ಓಕೆ ಓಕೆ.
ನಾನು : ಸಲೀಮ ಹುಟ್ಟಿ ಎರಡು ಮೂರು ವರ್ಷಕ್ಕೆ ಸಿಕ್ರಿಯಲ್ಲಿ ನೀರಿನ ಅಭಾವ ಹೆಚ್ಚಾಗಿ, ಅಕ್ಬರ ಮತ್ತೆ ತನ್ನ ರಾಜಧಾನಿಯನ್ನು ಯಮುನಾ ನದಿಯ ದಂಡೆಯ ಮೇಲಿದ್ದ ಆಗ್ರಾವೇ ಎಂದೆಂದಿಗೂ ಎಂದು ಘೋಷಿಸಿ, ರಾಜಧಾನಿಯನ್ನು ಎತ್ತಂಗಡಿ ಮಾಡಿದ. ಅಂದಿನಿಂದ ಸಿಕ್ರಿ ನಿರ್ಜನವಾಗಿ "ghost city" ಎಂದು ಪ್ರಸಿದ್ಧವಾಯ್ತು.
Z : ಮನೆ ಮಠ ?
ನಾನು :ಎಲ್ಲ ಶಿಫ್ಟ್.
Z : ಆಗೇನಾದ್ರು ಎಲ್. ಐ. ಸಿ, ಕೆ. ಈ. ಬಿ, ಬಿ.ಡಬ್ಲ್ಯೂ.ಎಸ್.ಎಸ್.ಬಿ ಎಲ್ಲಾ ಇದ್ದಿದ್ದ್ರೆ, address change ಮಾಡೋಕೆ ಎಷ್ಟ್ ಪರ್ದಾಡಿರ್ತಿದ್ರು ಜನ !
ನಾನು :ಪುಣ್ಯ, ಅವೆಲ್ಲ ಇರ್ಲಿಲ್ಲ ಆಗ.
Z : ಸೋ, ನೀನು ಫತೇಹ್ ಪುರ್ ಸಿಕ್ರಿ ಗೆ ಹೋಗುವ ಪ್ಲಾನ್ ಹಾಕ್ದೆ.
ನಾನು :ಹು. ಹೋಟೆಲ್ ನವರನ್ನ ಕೇಳ್ದೆ.ಅವರು ಕಾರಿನ ವ್ಯವಸ್ಥೆ ಮಾಡಿಕೊಡ್ತಿವಿ ಅಂತ ಹೇಳಿದ್ರು. ನಾನು ಅಣ್ಣನ ಹತ್ತಿರ permission ಕೇಳಲು ಹೋದೆ.ಅಣ್ಣ ಯೋಚಿಸತೊಡಗಿದರು.
Z : as usual.
ನಾನು :ಆದ್ರೆ ಅಮ್ಮ ಸುತರಾಮ್ ಆಗಲ್ಲ ಅಂದುಬಿಟ್ಟರು.
Z : ನೀನು ಸಿಟ್ಟು ಮಾಡ್ಕೊಂಡಿರ್ತ್ಯ.
ನಾನು :ಇನ್ನೇನ್ ಮತ್ತೆ. ಸಿಕ್ಕಿರೋ ಎರಡು ಘಂಟೆಯನ್ನು ಉಪಯುಕ್ತವಾಗಿ ಬಳಸಿಕೊಳ್ಳೋಣ ಅಂದರೆ ಇವರು ಉಸ್ಸಪ್ಪಾ ಅಂತ ಮಲ್ಕೊತಿನಿ ಅಂದ್ರೆ ಕೋಪ ಬರಲ್ವಾ ?
Z : ನೋಡು, ಟ್ರೈನ್ ನಲ್ಲಿ ನೀನು ನಿದ್ದೆ ಮಾಡಿಲ್ಲ. courtesy, ಕಾಣದೆ ಇರೋ, ಬರ್ದೆ ಇರೋ ಕಳ್ಳ. ಅವರೂ ನಿದ್ದೆ ಮಾಡಿರಲ್ಲ. ಮುಂದಿನ ಪ್ರಯಾಣದ ಯೋಚನೆ, ಲಗೇಜ್ ತೆನ್ಷನ್ನು. ಸುಧಾರ್ಸ್ಕೊಳ್ಳೋದ್ ಬೇಡ್ವಾ ?
ನಾನು :ಇವ್ರಿಬ್ರು ಅದನ್ನೇ ಹೇಳಿದ್ದು.ನಾನು ಬೇರೆ ದಾರಿ ಇಲ್ಲದೇ ಹು ಅಂದೆ.ಕಡೆಗೆ ನಮ್ಮನ್ನು ಬಿಟ್ಟು, ಸುಧಾ ಆಂಟಿ, ಅನಂತ್ ಅಂಕಲ್ ಮತ್ತು ಪರಿವಾರ, ಹೋಟೆಲ್ ನವರು ಮಾಡಿಕೊಟ್ಟ ಕಾರಿನಲ್ಲಿ ಹೋಗಿ ಫತೇಹ್ ಪುರ್ ಸಿಕ್ರಿ ನೋಡ್ಕೊಂಡ್ ಬಂದ್ರು. ದೀಪು ಸಂಪದ್ಭರಿತವಾಗಿ ಫೋಟೋಸ್ ತೆಕ್ಕೊಂಡ್ ಬಂದ.
Z : ಆಗ ತಾವು ಇಲ್ಲಿ ಕೂತ್ಕೊಂಡ್ ಏನ್ ಮಾಡ್ತಿದ್ರಿ ?
ನಾನು : "Conducting polymers-Theory and Applications" ಪುಸ್ತಕ ಓದ್ತಿದ್ದೆ.
Z : ಅಪರ್ಣ ?
ನಾನು : ಮಿಕ್ಕಿದ್ದವರೆಲ್ಲರೂ ಸಾಂಗವಾಗಿ ತಾಚ್ಕೊಂಡಿದ್ರು.
Z : ಏನು ಡೆಡಿಕೇಷನ್ನು ಏನ್ ಕಥೆ...
ನಾನು : ಅಲ್ವಾ ?
Z : ನೀನು ಫತೇಹ್ ಪುರ್ ಸಿಕ್ರಿ ಗೆ ಹೋಗದೇ ಇದ್ದಿದ್ದು ಒಂಥರಾ ಒಳ್ಳೆದೇ ಆಯ್ತು.
ನಾನು : ಯಾಕೆ ?
Z : ಅಲ್ಲಿ ನೀನು ಅನಾರ್ಕಲಿ ಗೋರಿಯನ್ನ ನೋಡೋದು, ನಿನ್ನ ಮಹಾನ್ ಚತ್ರಿ ತಲೆ ಉಪಯೋಗಿಸಿ ಗೋರಿಯ ಒಂದೇ ಒಂದು ಕಲ್ಲು ಅಲ್ಲಾಡಿಸಿ,ಈಚೆತೆಗದು, ಊಊಊಊದ್ದ ಕೋಲಲ್ಲಿ ಅನಾರ್ಕಲಿಯನ್ನ ತಿವಿದು ಅವಳನ್ನ ಗೋರಿಯಿಂದ ಎಚ್ಚರಿಸೋದು, ಇಂಟರ್ವ್ಯೂ ತಗೊಳ್ಳೋದು, ಹೀಗೂ ಉಂಟೆ ಸ್ಟೈಲಲ್ಲಿ ಅದನ್ನ ರೆಕಾರ‍್ಡ್ ಮಾಡ್ಕೊಳ್ಳೋದು, ಪಾಪ, ಅವಳು ತನ್ ಸ್ಥಿತಿಯನ್ನು ನೋಡ್ಕೊಂಡು ಅಳೋದು, ನಿನ್ನಲ್ಲಿ ಇರೋ ಸ್ತ್ರೀವಾದಿ ಎಚ್ಚರ ಆಗೋದು, ನೀನು ಅವಳು ಪ್ಲಕಾರ್ಡ್ ಇಟ್ಕೊಂಡು "ಡೌನ್ ಡೌನ್ ಎಂಪೆರರ್ ಅಕ್ಬರ್ !" ಅಂತ ಕಿರ್ಚ್ಕೊಳ್ಳೋದು, ಅವಳನ್ನ ಉಪವಾಸ ಇಟ್ಟು, ಜೀವಂತವಾಗಿ ಹೂಳಿದರು ಅಂತ ನೀನು ಊಟ ನಿದ್ದೆ ಬಿಡೋದು, ಅಣ್ಣ ಅಮ್ಮ ಗಾಬರಿ ಆಗೋದು, ನೀನು ಅವಳು ಮಧ್ಯರಾತ್ರಿಲಿ ಟೈಂ ಪಾಸಿಗೆ ಅಂತ "ಪ್ಯಾರ್ ಕಿಯಾ ತೋ ಡರ್ನಾ ಕ್ಯಾ" ಅಂತ ಹಾಡ್ ಹೇಳ್ಕೊಂಡ್ ಡ್ಯಾನ್ಸ್ ಮಾಡೋದು, ಮಾರನೇ ದಿನ ಪೇಪರ್ ನಲ್ಲಿ "ಭೂತಗಳ ಊರು ಫತೇಹ್ ಪುರ್ ಸಿಕ್ರಿಯಲ್ಲಿ ಎರಡು ಭೂತಗಳ ನರ್ತನ" ಅಂತ ಹೆಡ್ ಲೈನ್ಸ್ ಬರೋದು....
ನಾನು : FYI, ಅನಾರ್ಕಲಿ ಗೋರಿ ಇರೋದು ಇಲ್ಲಲ್ಲ, ಪಾಕಿಸ್ತಾನದಲ್ಲಿ.
Z : ಅಯ್ಯೋ !
ನಾನು : ಅದಕ್ಕೇ ಹೇಳೋದು, ಸುಮ್ನೆ ಅರ್ಧಂಭರ್ದ ತಿಳ್ಕೊಂಡು ಏನೇನೋ imagine ಮಾಡ್ಕೋಬಾರ್ದು ಅಂತ.
Z : :( :( :(
ನಾನು :ಕಮಿಂಗ್ ಬ್ಯಾಕ್ ಟು ಕಥೆ, ಹೋದವರೆಲ್ಲರೂ ವಾಪಸ್ ಬಂದ ಮೇಲೆ ಊಟದ ಕಾರ್ಯಕ್ರಮ ಸಾಂಗವಾಗಿ ಜರುಗಿತು. ಸಾರು ಸಕತ್ತಾಗಿತ್ತು. ಆಮೇಲೆ ಎಲ್ಲರೂ ರೆಡಿ ಆಗಿ ಬೃಂದಾವನಕ್ಕೆ ಹೊರಟ್ವಿ ಅದರ ಕಥೆ ಸಿಕ್ಕಾಪಟ್ಟೆ ಇದೆ, ಆಮೇಲೆ ಹೇಳ್ತಿನಿ :)
Z : :)
ಜೀವನದೊಂದಿಗಿನ ನಮ್ಮ ಮಾತು lifetime ! ಇದರಲ್ಲಿ incoming -ಊ free outgoing -ಊ free !
ನನ್ನ ज़िंदगीಯೊಂದಿಗಿನ nonstop ಗುಸುಗುಸುವನ್ನು ಇಲ್ಲಿ ಬಿಚ್ಚಿಟ್ಟಿದ್ದೇನೆ.
Friday, November 5, 2010
Subscribe to:
Post Comments (Atom)
ಉತ್ತರಾಯಣ ೩
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ನಾನು : There is always a next time. Z : ಹೌದಾ ? ನಾನು : ಹೌದು. Z : ಪ್ರತೀ ಸಲವೂ ಹೀಗೆ ಆದರೆ ಗತಿಯೇನು ? ನಾನು : ಅದಕ್ಕೆ ನಿನ್ನ pessimistic ಅಂತ ಬೈಯ್ಯ...
-
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಬ್ಲಾಗಿನ ಹುಟ್ಟು ಹಬ್ಬ ಮತ್ತು ಹೊಸ ವರ್ಷ ಯಾವಾಗ್ಲು ಒಟ್ಟಿಗೆ ಬರತ್ತೆ. ಆದರೆ, ಮತ್ತೆ ಅದೇ flash back ಗೆ ಹೋಗಿ, ಅದೇ ...
1 comment:
Interesting! Very Informative too. Thanks to 'z'
Post a Comment