Monday, November 23, 2009

ಮುಂದಿನ ಜನ್ಮಗಳ reservation !

ನಾನು : ಅಂತರಂಗ ಬ್ಲಾಗ್ ನ ಸತೀಶ್ ಅವರು ಬರೆದ ಈ ಲೇಖನವನ್ನು ಓದಿದ ಮೇಲೆ ನನಗೆ ಈ ಐಡಿಯಾ ಬಂದಿದೆ.

Z : ಯಾವ ಲೇಖನ ಮತ್ತು ಎಂಥಾ ಐಡಿಯಾ ?

ನಾನು : ಅವರು ಈ ಜನ್ಮದಲ್ಲಿ ಮಾಡಲಾಗದ ಕೆಲಸಗಳ ಬಗ್ಗೆ ಬರೆದಿದ್ದಾರೆ. ಇದನ್ನ ಮುಂದಿನ ಜನ್ಮದಲ್ಲಿ ಮಾಡುವ ಹಾಗಿದ್ದರೆ ಹೇಗಿರತ್ತೆ ಅಂತಲೂ loud thinking ಮಾಡಿದ್ದಾರೆ.

Z : ಅದಕ್ಕೆ ?

ನಾನು : ನಾನು ನನ್ನ ಮುಂದಿನ ಜನ್ಮಗಳಲ್ಲಿ ಏನೇನು ಮಾಡಬೇಕು ಅನ್ನೋದನ್ನ ಪ್ಲಾನ್ ಮಾಡಿದಿನಿ.

Z : ಆಹ...ಮೊದಲು ಈ ಜನ್ಮದಲ್ಲಿ, ಈ ವಾರದಲ್ಲಿ ಆಗಬೇಕಿರುವ ಕೆಲಸಗಳನ್ನ ನೆಟ್ಟಗೆ ಪ್ಲಾನ್ ಮಾಡುವುದನ್ನು ಕಲಿ.

ನಾನು : ಕಲಿತಿದ್ದೂ ಆಗಿದೆ. ಮಾಡಿದ್ದೂ ಆಗಿದೆ. ಮುಂದಿನ ಆರು ತಿಂಗಳಿಗೆ ನನ್ನ ಪ್ರತಿದಿನದ ಶೆಡ್ಯೂಲ್ ರೆಡಿ ಇದೆ.

Z : ಏನಮ್ಮ ಅದು ?

ನಾನು : ಕಾಲೇಜು, ಪುಸ್ತಕ, ಪಾಠ, ಎಮ್.ಫಿಲ್ಲು, ಲೈಬ್ರರಿ, ಮನೆ !

Z : ಆಹಾ !

ನಾನು : ಹೂಂ ! ಏನ್ ತಿಳ್ಕೊಂಡಿದ್ಯಾ ನನ್ನ ನೀನು ?

Z : ಏನಂತಲೂ ತಿಳ್ಕೊಳಕ್ಕಾಗಲ್ಲ ನಿನ್ನ.

ನಾನು : good realization.

Z : ಈಗ ಅದು ಏನನ್ನ ಪ್ಲಾನ್ ಮಾಡಿ ಕಡೆದು ಕಟ್ಟೆ ಹಾಕಿದಿಯಾ ಅಂತ ಹೇಳು.

ನಾನು : ಹು. ಕೇಳಿಸಿಕೋ.

ನನ್ನ ಇಮ್ಮೀಡಿಯೆಟ್ ಮುಂದಿನ ಜನ್ಮದಲ್ಲಿ ನಾನು ಪುರಾತನ ವಸ್ತು ಸಂಶೋಧಕಿ ಆಗ್ಬೇಕು.

Z : ಯಾಕ್ ಬಂತು ನಿನಗೆ ಇಂಥಾ ಇಡಿಯಾ ?

ನಾನು : ಕೆ. ಎನ್. ಗಣೇಶಯ್ಯ ಅವರ ಕಾದಂಬರಿಗಳ ಪ್ರಭಾವ.

Z : ಆಹಾ !

ನಾನು : ಬೇಲೂರು, ಹಳೇಬೀಡು, ಸೋಮನಾಥಪುರ, ಇವೇ ಮುಂತಾದ ಎಲ್ಲ ದೇವಸ್ಥಾನಗಳನ್ನು, ಗುಹೆಗಳನ್ನು, ಕಾಡು ಮೇಡುಗಳನ್ನು ಅಲೆದು, ಸುತ್ತಿ,ಪ್ರಪಂಚ ಹಿಂದೆಂದೂ ಕಂಡರಿಯದ ಸಂಶೋಧನೆಗಳನ್ನ ಮಾಡಬೇಕು. ಟ್ರೆಕ್ಕಿಂಗು, ರಾಕ್ ಕ್ಲೈಂಬಿಗು, ಎಲ್ಲಾ ಮಾಡ್ಬೇಕು.

Z : ಅಷ್ಟೇ ನಾ ?

ನಾನು : ಆ ಜನ್ಮಕ್ಕೆ ಅಷ್ಟೇ.

Z : ಆಮೇಲೆ ?

ನಾನು : ಅದಾದ ಮೇಲಿನ ಮುಂದಿನ ಜನ್ಮದಲ್ಲಿ ನಾನು dancer ಆಗ್ಬೇಕು.

Z : ಈಗಲೇ ಕುಣಿದಿದ್ದು ಸಾಲದಾ ?

ನಾನು : ಈಗ ನಾನೆಲ್ಲಿ ಕುಣಿತಿದಿನಿ, ಎಲ್ಲರನ್ನು ಕುಣಿಸುತ್ತಿದ್ದೀನಿ.ಆದರೆ ಆ ಜನ್ಮದಲ್ಲಿ ಬರಿ ಕುಣಿಯೋದೆ. ನಾಟ್ಯ ರಾಣಿ ಶಾಂತಲೆ ಮೇಲೆ ಆಣೆ, ಅವಳಂತೆಯೇ ಕುಣಿಬೇಕು ನಾನು.

Z : ಸರಿ. ಆಮೇಲೆ ?

ನಾನು : ಅದರ ಮುಂದಿನ ಜನ್ಮದಲ್ಲಿ ನಾನು photographer ಆಗ್ಬೇಕು. ನನ್ನ ಕ್ಯಾಮೆರಾದ ಚಿತ್ರಗಳು ಅಂದ್ರೆ ಜನ ಮುಗಿಬೀಳಬೇಕು ನೋಡಕ್ಕೆ. ಅಷ್ಟರ ಮಟ್ಟಿಗೆ ಸಾಧನೆ ಮಾಡ್ಬೇಕು.

Z : ಯಬ್ಬಾ !!!ಮುಂದೆ ?

ನಾನು : ಫೋಟೋಗ್ರಫರ್ ಜನ್ಮ ಆದ ಮೇಲೆ ನಾನು ಮನಃ ಶಾಸ್ತ್ರಜ್ಞೆ ಆಗ್ಬೇಕು.

Z : ಇದೊಂದು ಬಾಕಿ ಇತ್ತು ನೋಡು.

ನಾನು : ಹು. ಅದನ್ನು ನೆರವೇರಿಸಿಬಿಡೋಣಾ ಅಂತ. ಮಿದುಳಿನ ಸಮಸ್ತವನ್ನೂ ಅರಿತುಕೊಳ್ಳುವ ವರೆಗೂ ನಾನು ಸುಮ್ಮನಿರೋದಿಲ್ಲ.

Z : ಕರ್ಮಕಾಂಡ. ಮುಂದೆ ?

ನಾನು : ಅದಾದ ಮುಂದಿನ ಜನ್ಮದಲ್ಲಿ ನಾನು ಡಾಕ್ಯುಮೆಂಟರಿಗಳನ್ನು ಡೈರೆಕ್ಟ್ ಮಾಡಬೇಕು.

Z : ಎಂಥವು ?

ನಾನು : ಡಿಸ್ಕವರಿ ಚಾನೆಲ್ ನಲ್ಲಿ ಬರತ್ವಲ್ಲ...ಅಂಥವು.

Z : ಉದ್ಧಾರ. ಮುಂದೆ ?

ನಾನು : ಅದಾದ ಮುಂದಿನ ಜನ್ಮದಲ್ಲಿ ನಾನು ನ್ಯೂಸ್ ರಿಪೋರ್ಟರ್ ಆಗ್ಬೇಕು.

Z : This is lakshmi from ....

ನಾನು : ಹಾಂ.... ಹಂಗೇನೆ.

Z : ಸರಿ. ಮುಂದೆ ?

ನಾನು : ಟೋಟಲ್ ಅನಾಥೆಯಾಗಿ, ಅಲೆಮಾರಿಯಾಗಿ ಅಲೆಯೋದು ನನ್ನ ಲಾಸ್ಟ್ ಬಟ್ ಒನ್ ಜನ್ಮ.ಒಂದು ಕಡೆ ನಿಲ್ಲಬಾರದು, ಹಾಗೆ ಸುಮ್ನೆ ಸುತ್ತುತ್ತಾ, ಇಡೀ ಪ್ರಪಂಚದ ಪರ್ಯಟನೆ ಮಾಡ್ಬೇಕು.

Z : ಯಾಕಪ್ಪ ಇಂಥಾ ಆಸೆ ?

ನಾನು : ಏನೋ ಗೊತ್ತಿಲ್ಲ, ಹಂಗನಿಸಿದೆ ನಂಗೆ.

Z : ನೀನೋ...ನಿನ್ನ ಆಸೆಗಳೋ...ನೀನು ಏರೋಪ್ಲೇನ್ ಆಗೋದು ಒಳ್ಳೇದು ಆ ಜನ್ಮದಲ್ಲಿ.

ನಾನು : ಹೇ...ಇಲ್ಲ ಇಲ್ಲ...ಎಲ್ಲಾ ಜನ್ಮದಲ್ಲೂ ನಾನು ಮನುಷ್ಯಳೇ ಆಗ್ತಿನಿ.

Z : ಹೆಹೆ...ಡೌಟು.

ನಾನು : ಉಹು. ನೋಡ್ಕೋ ಬೇಕಾದ್ರೆ. ನಾನು ಮನುಷ್ಯಳಾಗೆ ಹುಟ್ಟೋದು.

Z : ಸರಿ ನೋಡೇ ಬಿಡೋಣ. ಲಾಸ್ಟ್ ಜನ್ಮ ಏನು ?

ನಾನು : Home maker. ಬೆಳಿಗ್ಗೆ ಏಳು, ಕಾಫಿ ಮಾಡು, ತಿಂಡಿ ಮಾಡು, ಗಂಡ ಮನೆ ಮಕ್ಕಳನ್ನ ನೋಡಿಕೋ, ಸಂಜೆ ದೇವಸ್ಥಾನ ಭಜನೆ ಅಂತ ಹಾಯಾಗಿರು, ರಾತ್ರಿ ಊಟ ಮಾಡಿ ತಾಚ್ಕೊ. ವಾರಕ್ಕೊಂದು ಸಿನಿಮಾ, ತಿಂಗಳಿಗೆ ಒಂದಷ್ಟು ಶಾಪಿಂಗು. ಹೆಂಗೆ ?

Z : ಅದನ್ನ ಎಲ್ಲಾ ಜನ್ಮಗಳಲ್ಲೂ ಮಾಡಬಹುದು.

ನಾನು :ಕರೆಕ್ಟೂ...ಆದರೆ this janma is exclusively for home.No need of striking balance between work and home. ಮಿಕ್ಕಿದ್ದೆಲ್ಲಾ ಜನ್ಮಗಳಲ್ಲೂ ತಲೆಗೆ ಹೆಚ್ಚು ಕೆಲಸ ಕೊಟ್ಟಿರ್ತಿನಿ. ಈ ಜನ್ಮದಲ್ಲಿ ತಲೆಗೆ ಕೆಲಸ ಕಡಿಮೆ ಇರತ್ತೆ.

Z : ಹಂಗೆ.

ನಾನು : ಹು.

Z : ಮುಗಿತಾ ಪ್ಲಾನು ?

ನಾನು : ಸಧ್ಯಕ್ಕೆ ಮುಗ್ದಿದೆ. ಇನ್ನು extend ಆದರೂ ಆಗಬಹುದು.

Z : ಮೊದಲೇ ರಿಸರ್ವ್ ಮಾಡಿಡೋದು ಒಳ್ಳೇದು.

ನಾನು : ಒಳ್ಳೇ ಐಡಿಯಾ. ಇರು, ನನ್ನದು, ನಿನ್ನದು, ಸದ್ಯೋಜಾತನದ್ದು ಒಂದು conference call ಕರಿತಿನಿ.

Hi sadyOjaata ! I hope you are doing fine. ನೋಡಪ್ಪಾ...ನನಗೆ ಇಂಥಿಂಥಾ ಜನ್ಮಗಳನ್ನ ಇದೇ ಆರ್ಡರಿನಲ್ಲಿ ಕರುಣಿಸಿಬಿಡು, ಪ್ಲೀಸ್. ಇಲ್ಲಾ, ಆಗಲ್ಲ, ನೋಡ್ತಿನಿ, ವಿಧಿ ಅಂತೆಲ್ಲಾ ರಾಗ ಎಳಿಬೇಡ, ಟಿಪಿಕಲ್ ದೇವರ ಥರ. Be different. ಸೋ, ಥಟ್ ಅಂತ ಯೆಸ್ ಅಂದುಬಿಡು.

Z : ನೀನ್ ಕೇಳಿದ್ದೆಲ್ಲಾ ಕೊಟ್ಬಿಡ್ತಾನೆ ಅಂತ ಅಂದುಕೊಂಡಿದ್ಯಾ ?

ನಾನು : ಅಲ್ವೆ...ನನ್ನ ಸೈಡ್ ತಗೊಳ್ಳೋದ್ ಬಿಟ್ಟು ಏನೆ ನೀನು ಹಿಂಗಂತ್ಯಾ ? ನನ್ನ ವಕಾಲತ್ತು ವಹಿಸು ನೀನು. Now !

Z : Ok. ನೋಡು ಸದ್ಯೋಜಾತ, For reasons, I support her. I think even you should do the same by granting every wish of hers !

ನಾನು : ಒಳ್ಳೇ ಮಾತಲ್ಲಿ ನನ್ನ ಬೇಡಿಕೆಗೆ ಅಸ್ತು ಅಂದರೆ ಸರಿ...ಇಲ್ಲಾಂದ್ರೆ....

Z : ಇಲ್ಲಾಂದ್ರೆ....

ನಾನು : ಅಮ್ಮಂಗೆ ಹೇಳ್ತಿನಿ !

7 comments:

ವಿ.ರಾ.ಹೆ. said...

ನಾಡಿಗೆ ಅನ್ನ ಕೊಡೋ ರೈತ, ಗಡಿ ಕಾಯೋ ಯೋಧ ಆಗ್ಬೇಕು ಅಂತ ಯಾವ ಜನ್ಮದಲ್ಲೂ ಅನ್ನಿಸದೇ ಇರೋದು ವಿಪರ್ಯಾಸ !

ಏನ್ ತಿಳ್ಕೊಂಡಿದ್ಯಾ ನನ್ನ ನೀನು ಅಂತೀರಾ? :)

ಸದ್ಯೋಜಾತ... ನೀನೆ ಕಾಪಾಡಪ್ಪ ಎಲ್ಲಾ ಜನ್ಮದಲ್ಲೂ ಇವರನ್ನ

ಟಿ ಜಿ ಶ್ರೀನಿಧಿ said...

'ಹಂಡ್ರೆಡ್ ಥಿಂಗ್ಸ್ ಟು ಡು ಬಿಫೋರ್ ಯು ಡೈ' ಅಂತ ಒಂದು ಪುಸ್ತಕ ಇದೆ. ನ್ಯೂ ಸೈನ್ಟಿಸ್ಟ್ ಪ್ರಕಟಣೆ. ಅದೇ ಥರ ನಿಮ್ಮ ಟಾಪಿಕ್ ಬಗ್ಗೆನೂ ಒಂದು ಪುಸ್ತಕ ಮಾಡಿ. ಲಾಭ ಬಂದ್ರೆ ೫೦:೫೦! :)

ತೇಜಸ್ವಿನಿ ಹೆಗಡೆ- said...

ಆಹ್.. ತುಂಬಾ ದೊಡ್ಡ ದೊಡ್ಡ ಪ್ಲಾನ್ಸ್ ಹಾಕಿದ್ದೀರಾ ಬಿಡಿ.. ಆದ್ರೆ ಒಂದು ವಿಷ್ಯ.. ಮುಂದಿನ ಜನ್ಮದಲ್ಲಿ ನೀವು ಪ್ರಾಚೀನ ಸಂಶೋಧಕರಾಗಲು ಅಸಾಧವೆನಿಸುತ್ತಿದೆ... ಕಾರಣ ಅಷ್ಟರೊಳಗೆ ಆ ಯಾವೊಂದು ದೇವಸ್ಥಾನವೂ ಉಳಿದಿರುವುದಿಲ್ಲ :( ಹಾಗೆಯೇ ಅದಕೂ ಮುಂದಿನ ಜನ್ಮದಲ್ಲಿ ಶಾಂತಲೆಯಂತಹ ಡ್ಯಾನ್ಸ್ ಕಲಿಸಲು ಅಂತಹ ಗುರುಗಳು ಸಿಗುವರೋ ಇಲ್ಲವೋ! ಯಾವುದಕ್ಕೂ ಇನ್ನೊಮ್ಮೆ ರಿ ಕನ್ಸಿಡರ್ ಮಾಡಿ ಒಮ್ಮೆ ಪ್ಲೀಸ್..:)

@ ವಿಕ್ಸ್,

ಯೋಧ, ರೈತ ಎಲ್ಲಾ ಖಂಡಿತ ಮುಂದಿನ, ಅದಕೂ ಮುಂದಿನ ಜನ್ಮದಲ್ಲಂತೂ ಇರೋಕೆ ಆಗೊಲ್ಲ.. ಕಾರಣ ಮೆಷಿನ್‌ಗಳದೇ ರಾಜ್ಯವಿರುವಾಗ ಯೋಧನ ಅವಶ್ಯಕತೆ ಬರದೇನೋ... ಇನ್ನು ಬೆಳೆ ಬೆಳೆಯಲು ಜಾಗ ಸಿಗುವ ಭ್ರಮೆಯನ್ನು ಬಿಟ್ಟೇ ಬಿಡು :)

ದಿಲೀಪ್ ಹೆಗಡೆ said...

ಹಹಹ.. ಒಳ್ಳೇ ಐಡಿಯಾ... ಸದ್ಯೋಜಾತ ನಿಮ್ಮ ಫ್ರೆಂಡ್ ಅಂತ ಕಾಣ್ಸುತ್ತೆ.. ಹಾಗೇನಾದ್ರೂ ಇದ್ರೆ ಹೇಳಿ.. ನಂದೂ ಒಂದು ಲಿಸ್ಟ್ ಕಳಿಸಿಕೊಡ್ತೇನೆ... :)

Prithvi said...

:)

PaLa said...

ನಿಮ್ ಮುಂದಿನ್ ಜನ್ಮದಲ್ಲಿ ಇನ್ನೊಂದಿಷ್ಟು ಪ್ರೊಫೇಷನ್ ಬಂದಿರುತ್ತೆ... ಸೋ ನೆಕ್ಸ್ಟ್ ಜನ್ಮದಲ್ಲಿ ಪಟ್ಟಿ ಬೆಳೆಯುವ ಸಾಧ್ಯತೆ ಇದೆ.. ಎಲ್ಲಾ ಜನ್ಮದಲ್ಲೂ ಇದೇ ಬ್ಲಾಗ್ ಉಪಯೋಗಿಸ್ತೀರ.. ಪಾಸ್ವರ್ಡ್ ಹೇಗಾದ್ರೂ ಸೇವ್ ಮಾಡಿಟ್ಕೊಳಿ

ಸುಪ್ತವರ್ಣ said...

ವಿ.ರಾ.ಹೆ. ಯಿಂದಾಗಿ ನಿಮ್ಮ ಬ್ಲಾಗಿಗೆ ಬಂದೆ. ಚೆನ್ನಾಗಿ ಬರೆದಿದ್ದೀರಿ. housewifeಗಳು ತಲೆಗೆ ಕೆಲಸ ಕೊಡಲ್ಲ ಎಂದಿದ್ದು ಯಾರು ನಿಮಗೆ? ತಲೆಗೆ ಜಾಸ್ತಿ ಕೆಲಸ ಕೊಡೋದೇ ಈ ಜನ...ಅವರ ಗಂಡಂದಿರನ್ನ ಕೇಳಿ ಬೇಕಾದ್ರೆ!

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...