Z :ಮತ್ತೆ ಹೋಗಿದ್ಯಾ ?
ನಾನು : what do you mean by ಮತ್ತೆ ಹೋಗಿದ್ಯಾ ?
Z :ಹೋದ ವರ್ಷ ಹೋಗಿದ್ಯಲ್ಲ...
ನಾನು :ವರ್ಷಕ್ಕೆ ಒಂದು ಸರ್ತಿ ಕಾರ್ತೀಕ ಮಾಸದಲ್ಲಿ ನಂಜನಗೂಡಿಗೆ ಹೋಗೋದು ಹೆಂಗೆ compulsory ನೋ, ಹಂಗೆ ವರ್ಷಕ್ಕೊಂದು ಸಲ ನಡೆಯೋ ಪುಸ್ತಕೋತ್ಸವಕ್ಕೆ ಹೋಗೋದು compulsory ನೆ.
Z : ಈ ಸರ್ತಿ ನೂ 150 ರುಪಾಯಿ ತಗೊಂಡು ಹೋಗಿದ್ಯಾ ?
ನಾನು :ಒಂದು ಸಣ್ಣ ಮಿಸ್ಟೇಕ್ ಮಾಡಿದೆ ನೀನು. 150 ಗೆ ಒಂದು ಸೊನ್ನೆ ಸೇರ್ಸು.
Z : !!!!!!!!!!!!!!!!!!!!!!!!!!!!!!!!!!!!!
ನಾನು :ಆದರೆ ಅದಷ್ಟೂ ನನ್ನೊಬ್ಬಳದ್ದೇ ಬಜೆಟ್ ಅಲ್ಲ.
Z :ಅಂದುಕೊಂಡೆ. ಟೆಂಪೋ ಲಾರಿ ಏನು ತಗೊಳ್ಳದೇ ಬರೀ ಬಸ್ಸಲ್ಲಿ ಹೋದಾಗಲೇ ಅನುಮಾನ ಬಂತು ನನಗೆ.
ನಾನು :ಏನಂತ ?
Z : ನೀನು ಒಂದಿಷ್ಟು ಜನರ ಬುಕ್ ಲಿಸ್ಟ್ ಇಟ್ಕೊಂಡೇ ಹೋಗಿದಿಯಾ ಅಂತ. ನಿನ್ನ requirement ಗೆ ಸಾವಿರದ ಐನೂರು ರುಪಾಯಿ ಕಡಿಮೆ. ಏನಿಲ್ಲಾ ಅಂದ್ರೂನೂ ಹತ್ತು ಸಾವಿರದ ಕಡಿಮೆ "ನಿನ್ನ ಸ್ವಂತಾ ಶಾಪಿಂಗ್" ಇರಲ್ಲ. ಪುಸ್ತಕದ ಗಾತ್ರ ದೊಡ್ಡದಾಗಿರತ್ತೆ ಆದ್ದರಿಂದ ಲಾರಿ ಬೇಕು.ಒಂದು ಸಣ್ಣ ಬ್ಯಾಗ್ ತಗೊಂಡು ಬೇರೆ ಹೋದೆ...ನೊ ನೊ...this is so typically not you !
ನಾನು :ಗುಡ್ ಗೆಸ್ಸ್.
Z :ಥ್ಯಾಂಕ್ಸ್.
ನಾನು :You are most welcome.ಕಳೆದ ಬುಧವಾರ ಬೆಳಿಗ್ಗೆ ಹತ್ತು ಹತ್ತಕ್ಕೆ ಮನೆ ಬಿಟ್ಟೆ. ಸ್ವಲ್ಪ ಲೇಟಾಯ್ತು ಅನ್ನೋ ಫೀಲಿಂಗ್ ಬಂತು ನನಗೆ.
Z : ಯಾಕಪ್ಪಾ ?
ನಾನು : ನಾನು ಅಲ್ಲಿಗೆ ಹನ್ನೊಂದಕ್ಕೆ ತಲುಪಿ ಮೂರರ ವರೆಗೂ ಅಲ್ಲೇ ಇರಬೇಕು ಅನ್ನೋ ಪ್ಲಾನ್ ಹಾಕಿದ್ದೆ.ನಾನೆಂಥಾ ದೊಡ್ಡ ಮನುಷ್ಯಳು ಅಂದರೆ, ಹೋಗುವ ಅರ್ಜೆಂಟಲ್ಲಿ ದುಡ್ಡನ್ನು ಡ್ರಾ ಮಾಡುವುದು ಮರೆತಿದ್ದೆ. ಇದು ನೆನಪಾದದ್ದು ಮೆಜೆಸ್ಟಿಕ್ ನಲ್ಲಿ.
Z :ಎಂಥಾ ದೊಡ್ಡ ತಲೆ ಅಂದ್ರೆ ನಿನ್ನದು...
ನಾನು :ಯೆಸ್. ಮೆಜೆಸ್ಟಿಕ್ ತಲುಪಿದ ಕೂಡಲೇ ಅಲ್ಲಿದ್ದ ATM ಗೆ ಧಾವಿಸಿದೆ. ನನ್ನ ಕರ್ಮಕ್ಕೆ, ದುಡ್ಡು ಬಂತು, ಆದರೆ ಕಾರ್ಡು struck ಆಯ್ತು !
Z : Oh my god !
ನಾನು :ಆಮೇಲೆ ನಾನು ಹೊರಗಿರುವವರನ್ನು ಕರೆದು ಹೇಳಿದೆ, ಕಾರ್ಡ್ struck ಆಯ್ತು ಅಂತ. ಅವರು ಪಾಪ ಒಳಬಂದು cancel button press ಮಾಡಿದ ತಕ್ಷಣ ನನ್ನ ಕಾರ್ಡು ಈಚೆ ಬಂತು. ಅವರಿಗೆ ಥ್ಯಾಂಕ್ಸ್ ಹೇಳಿ ಬದುಕಿದೆಯಾ ಬಡಜೀವವೇ ಅಂತ ಅಲ್ಲಿಂದ ಓಡಿದೆ.
Z :Moral of the story is, never use ATMs which take the card inside !
ನಾನು :ಹು. ಅಲ್ಲಿಂದ ಮೇಖ್ರಿ ಸರ್ಕಲ್ಲಿಗೆ ಬಸ್ಸು ಹತ್ತಿದೆ. ನನ್ನ ಪೂರ್ವಜನ್ಮದ ಪುಣ್ಯವಿಶೇಷ, ಅವನು book festival ಹತ್ತಿರ ಇರೋ ಬಸ್ ಸ್ಟಾಪ್ ಬಳಿ ನಿಲ್ಲಿಸಿದ. ಆರ್ಮಿ ಕಮಾಂಡೋ ಹಾಸ್ಪಿಟಲ್ ಇಂದ ನಡೆಯುವ ಕಷ್ಟ ತಪ್ಪಿತು.ಗಂಟೆ ಹನ್ನೊಂದು ವರೆ.
Z : nanograms range ನಲ್ಲಿ ಪುಣ್ಯ ಇಟ್ಟಿದ್ಯಾ ನೀನು.
ನಾನು :yes.ಟಿಕೆಟ್ ತಗೊಂಡು ಒಳ ಬಂದೆ. ಆವತ್ತು ಪ್ರದರ್ಶನದಲ್ಲಿ reverse order ನಲ್ಲಿ entrance. 346th stall ಕನ್ನಡ ಪುಸ್ತಕ ಪ್ರಾಧಿಕಾರದ ಸ್ಟಾಲು. ಅಲ್ಲಿ ಪುಸ್ತಕಗಳನ್ನ ನೋಡುತ್ತಿರಬೇಕಾದರೆ ಹಿಂದೆಯಿಂದ ಯಾರೋ ಬೆನ್ನು ತಟ್ಟಿದರು. ನೋಡಿದರೆ ನನ್ನ ಸೋದರತ್ತೆ ಮಗಳು ಮೀನಾ !ನನಗಿಂತಾ ಸಿಕ್ಕಾಪಟ್ಟೆ ದೊಡ್ಡೋಳು. Naturally, because ಅವಳು ನಮ್ಮ ತಂದೆಯ ದೊಡ್ಡಕ್ಕನ ಮಗಳು. ಅವಳ ಮಕ್ಕಳು ನನ್ನ ತಂಗಿಯ ವಯಸ್ಸು. ಮನೆ, ಕೆಲ್ಸ ಅಂತೆಲ್ಲಾ ಹೊರಗೇ ಕಾಲಿಡದ ಅವಳನ್ನ ನೋಡಿ ನನಗೆ ಒಂದು ನಿಮಿಷ ಆಶ್ಚರ್ಯ ಆಯ್ತು. ನನಗೆ ಇನ್ನೊಂದು ಆಶ್ಚರ್ಯ ಕಾದಿತ್ತು. ನನ್ನ ಇನ್ನೊಬ್ಬ ಸೋದರತ್ತೆ , ನಮ್ಮ ತಂದೆಯ ತಂಗಿ ಕೂಡಾ ಬಂದಿದ್ದರು. ನಾನು ಅವರು ಪುಸ್ತಕದ ಹುಳುಗಳು ಅಂತ ಪ್ರಸಿದ್ಧರು. ಅವರಂತೂ ಹಳೇ ಪುಸ್ತಕಗಳನ್ನು ಸಂಗ್ರಹ ಮಾಡುವಲ್ಲಿ ನಿಪುಣರು.ಅವರು ಹಳೆ ಪುಸ್ತಕವೊಂದನ್ನ ನೋಡುತ್ತಾ ನಿಂತಿದ್ದರು. ನಾವು ಮೂವರೂ ಒಟ್ಟಿಗೆ " ಏನಿಲ್ಲಿ?" ಅಂದೆವು.
Z : ಆಹಾ...ಸಿನೆಮಾ ಥಿಯೇಟರಿಗೆ ಬಂದು " ಸಿನೇಮಾ ನೋಡಕ್ಕೆ ಬಂದ್ರಾ " ಅಂದ ಹಾಗಾಯ್ತು.
ನಾನು : ಹು !ಆಮೇಲೆ ಅವರನ್ನ ಮಾತಾಡಿಸಿದೆ. ನಾನು ಅಮೆ ಗತಿಯಲ್ಲಿ ಪುಸ್ತಕ ನೋಡುವವಳೆ. ಆದರೆ ನನ್ನ ಸೋದರತ್ತೆ snail. ಅಮ್ಮ ಮತ್ತೆ ನನ್ನ ಫಿಸಿಕ್ಸ್ ಪ್ರೊಫೆಸರ್ರು ಇಬ್ಬರೂ ನನ್ನ ಹತ್ತಿರ "ಹಳೆ ಪುಸ್ತಕ ಓದಿ, ನಿನಗೆ dust allergy ಆಗಿ, ಆಮೇಲೆ ಒದ್ದಾಡೋದು ನಮಗೆ ನೋಡಕ್ಕೆ ಆಗೊಲ್ಲ. So no buying old books !"ಅಂತ. ನಾನು ಹಳೇ ಪುಸ್ತಕದ ಸ್ಟಾಲಿಗೆಹೋಗಲ್ಲ ಅಂತ ಭೀಷ್ಮ ಪ್ರತಿಜ್ಞೆ ಮಾಡಿದ್ದೆ. ಅದಕ್ಕೆ" ಅತ್ತೆ, ಮೀನಾ, ನೀವು ನೋಡ್ಕೊಳಿ, ನಾನು ಮುಂದೆ ಹೊರಡ್ತಿನಿ, ನೀವು ನಿಧಾನಕ್ಕೆ ನೋಡ್ಕೊಂಡು ಬನ್ನಿ" ಅಂದದ್ದೇ ನಾನು ಮುಂದೆ ನಡೆದೆ. ಈ ಸರ್ತಿ 346 ಸ್ಟಾಲುಗಳಿದ್ದಿದ್ದು ಗೊತ್ತಾ ?
Z : ಮಿನಿಮಮ್ ಹತ್ತು ಪುಸ್ತಕ ತಗೊಂಡ್ಯಾ ಹಾಗಿದ್ರೆ ?
ನಾನು : ಉಹು. ನಾನು ತಗೊಂಡಿದ್ದು ಮೂರು. ಮಿಕ್ಕಿದ್ದು ಮೂರು ತೇಜಕ್ಕನಿಗೆ.
Z : ಕೈಯಲ್ಲಿ ಹೊರೋದಾಗಿದ್ರೆ ಇಷ್ಟು ಸಾಕು.
ನಾನು : ಯೆಸ್. ಕೈಯಲ್ಲೇ ಹೊತ್ಕೊಂಡ್ ಬಂದೆ.
Z : ಹ್ಮ್ಮ್....
ನಾನು : ಸ್ಟಾಲುಗಳಲ್ಲಿ ಹೆಚ್ಚು ಆಧ್ಯಾತ್ಮಿಕ ಪುಸ್ತಕಗಳು ಕಂಡವು.ಕೆಲವನ್ನು ನಾನು ಕೊಂಡಿದ್ದೆ, ಕೆಲವು ನನಗೆ ಗಿಫ್ಟಾಗಿದ್ದವು, ಇನ್ನು ಕೆಲವನ್ನು ಅಣ್ಣ ಶೃಂಗೇರಿಯಿಂದ ತರುತ್ತೇನೆಂದು ಹೇಳಿದ್ದರು.ಹಾಗಾಗಿ ನನಗೆ ಅಲ್ಲಿ ಕೊಳ್ಳಲು ಹೊಸ ಪುಸ್ತಕಗಳು ಕಂಡರೂ, ಹಳೆಯದನ್ನು ಮುಗಿಸದೇ ಹೊಸದಕ್ಕೆ ಹೋಗಲು ಮನಸ್ಸಾಗಲಿಲ್ಲ.
Z :ನೀನು "ಇನ್ನೂ ಸಮಯ ಇದೆ ಇದಕ್ಕೆಲ್ಲಾ" ಅಂತ ಮುಂದಕ್ಕೆ ಬಂದಿರ್ತಿಯಾ.
ನಾನು : ಹು.ಆಮೇಲೆ ಒಂದಷ್ಟು ಜಲೇಬಿ ಭಾಷೆಯ ಪುಸ್ತಕಗಳ ಸ್ಟಾಲುಗಳಿದ್ದವು.
Z : I see !
ನಾನು : ಕನ್ನಡ ಬುಕ್ ಸ್ಟಾಲುಗಳಲ್ಲಿ ಇರೋ ಪುಸ್ತಕಗಳ ಮೇಲೆ ಕಣ್ಣಾಡಿಸಿದೆ. ಇತ್ತೀಚಿನವುಗಳನ್ನ ನಾನು ಆಗಲೇ ಅಂಕಿತದಲ್ಲಿ ಕೊಂಡಿದ್ದೆ.ಹಳೆಯದು ತೇಜಕ್ಕನ ಬಳಿ ಇದ್ದವು. ಮಿಕ್ಕಿದ್ದು ಅಮ್ಮನ ಮತ್ತು ಅಪರ್ಣಳ "individual library"ಯಲ್ಲಿ ಇದ್ದವು. ಆಂಗ್ಲಪುಸ್ತಕಗಳೆಲ್ಲಾ ನನ್ನ DVD pack ನಲ್ಲಿ ಭದ್ರವಾಗಿದ್ದವು.
Z : ಇನ್ನೇನು ತಗೊಂಡೆ ಮತ್ತೆ !?
ನಾನು : ಅದೇ, ನನ್ನ snail ಸೋದರತ್ತೆ ಇದಾರಲ್ಲಾ, ಅವರೂ ನನ್ನಂತೆಯೇ ಫಿಲಾಸಫಿಕಲ್ ಕಾದಂಬರಿ ಫ್ಯಾನು. ಅವರು ನನಗೆ ಡಾ|| ಎಚ್. ತಿಪ್ಪೆರುದ್ರಸ್ವಾಮಿಯವರ "ಪರಿಪೂರ್ಣದೆಡೆಗೆ" ಕಾದಂಬರಿ ಓದಲು ಹೇಳಿದ್ದರು. world culture library ಲಿ, ಜಯನಗರದ ಸಿಟಿ ಸೆಂಟ್ರಲ್ ಲೈಬ್ರರಿಯಲ್ಲಿ ಇದು ನನಗೆ ಸಿಕ್ಕಿರಲಿಲ್ಲ.ಸಾಹಿತ್ಯ ಭಂಡಾರದ ಸ್ಟಾಲಿನವರು "out of print" ಅಂದುಬಿಟ್ಟರು. ಆದರೆ ಅದು ನವಕರ್ನಾಟಕ ಪಬ್ಲಿಕೇಷನ್ಸ್ ಸ್ಟಾಲಿನಲ್ಲಿ ನನ್ನ ಕಣ್ಣಿಗೆ ಬಿತ್ತು.
Z : :)
ನಾನು : ಹಸಿದ ಹುಲಿ ಜಿಂಕೆ ಮೇಲೆ ಎಗರುವ ಹಾಗೆ ನಾನು ಎಗರಿಬಿದ್ದು ಆ ಪುಸ್ತಕ ತಗೊಂಡೆ.
Z : ಈ ಸಾಧನೆಗೆ ಯಾವ ಅವಾರ್ಡ್ ಬೇಕು ನಿನಗೆ ?
ನಾನು :ಯಾವ್ದಾದ್ರು ನಡಿಯತ್ತೆ.
Z : ಸರಿ. ಇರ್ಲಿ ಅಂತ ರಾಜ್ಯೋತ್ಸವ ಪ್ರಶಸ್ತಿ ಕೊಡ್ತಿದಿನಿ.ತಗೊ.
ನಾನು :thanks.ಇನ್ನೊಂದು ತೇಜಸ್ವಿಯವರ ಪುಸ್ತಕ.
Z : Expected.You never come out of any book stall without buying a book by Tejaswi.
ನಾನು : Yes.ಇನ್ನೊಂದು ಪುಸ್ತಕ ಕಾರಂತರ ಆತ್ಮಕಥೆ- ಹುಚ್ಚು ಮನಸ್ಸಿನ ಹತ್ತು ಮುಖಗಳು. ಅಲ್ಲಿಗೆ ಕನ್ನಡ ಪುಸ್ತಕ್ಕಗಳ ಖರೀದಿ ಮುಗಿತು.
Z : ಇನ್ನೇನು ಬಾಕಿ ಇತ್ತು ?
ನಾನು : M.Phil ಗೆ ಪುಸ್ತಕ ಬೇಕಿತ್ತಮ್ಮಾ ! ನಮ್ಮ ಸರ್ರು ಒಂದು ಪುಸ್ತಕ ತೋರಿಸಿ, " Have it with you before next class" ಅಂದರು. ಆ ಪುಸ್ತಕದ ಪ್ರಕಾಶಕರ ಆಫೀಸು ನಮ್ಮ ತಂದೆಯ ಆಫೀಸಿನ ಹಿಂಭಾಗವೇ. ಆದರೂ ನಾನು ಈ ಪುಸ್ತಕನ ಪುಸ್ತಕೋತ್ಸವದಲ್ಲೇ ಕೊಳ್ಳಬೇಕಂತ ಇದ್ದೆ. ಆ ಸ್ಟಾಲಿಗೆ ಹೋಗಿ ಪುಸ್ತಕದ ಹೆಸರು ಹೇಳಿದೆ. ಪುಣ್ಯಕ್ಕೆ ಎರಡೇ ಪುಸ್ತಕಗಳಿದ್ದವು. ನನಗೊಂದು, ನನ್ನ ಸ್ನೇಹಿತೆಗೊಂದು ಖರೀದಿಸಿ, ಇಪ್ಪತ್ತು ಪರ್ಸೆಂಟ್ ಡಿಸ್ಕೌಂಟು ಕೊಡಲೇಬೇಕು ಅಂತ ಗಲಾಟೆ ಮಾಡಿ ಕಡೆಗೆ ಅವನೂ ಒಪ್ಪಿ, ನನ್ನ ಶಾಪಿಂಗ್ ಮುಗಿಸಿ ತೇಜಕ್ಕನ ಪುಸ್ತಕದ ಲಿಸ್ಟಿನ ಕಡೆಗೆ ಗಮನ ಹರಿಸಿದೆ. ಅವರು ಕೇಳಿದ ಪುಸ್ತಕಗಳನ್ನು ಕೊಂಡು, ಮಿಕ್ಕಿದ್ದೆಲ್ಲಾ ಸ್ಟಾಲುಗಳ ಕಡೆ ಪಕ್ಷಿನೋಟ ಬೀರಿದೆ. ತ.ರಾ.ಸು ಬರೆದಿರುವ ಚಿತ್ರದುರ್ಗ ಸಾಮ್ರಾಜ್ಯದ ಕಾದಂಬರಿಯ ಸೀರೀಸ್ ಪುಸ್ತಕಗಳನ್ನೆಲ್ಲಾ ಮುಂದಿನ ಪುಸ್ತಕೋತ್ಸವದಲ್ಲಿ ಕೊಂಡುಕೋತಿನಿ ಅಂತ ನಿಶ್ಚಯಿಸಿದೆ. ನನಗೆ ಕೆಲವು ವಿಶೇಷ ರೀತಿಯ folders ಬೇಕಿದ್ದವು. ಅದನ್ನು ಕೊಂಡು ಹೊರಗೆ ಹೊರಟೇಬಿಟ್ಟಿದ್ದೆ...
Z : ಆಮೇಲೇನಾಯ್ತು ?
ನಾನು : ನಮ್ಮತ್ತೆ ! ಅವರೆಲ್ಲಿದ್ದಾರೆ ಗೊತ್ತಿರಲಿಲ್ಲ, ಹೊರಡುತ್ತಿದ್ದೇನೆ ಅಂತ ಹೇಳಿ ಹೋಗೋಣ ಅಂತ ಮತ್ತೆ ಒಳಗೆ ತಿರುಗಿದೆ. ಇಸ್ಕಾನ್ ಪುಸ್ತಕ ಮಳಿಗೆಯಲ್ಲಿ ನಮ್ಮತ್ತೆ ಸಿಕ್ಕರು. ನಾನು ಎರಡು ಘಂಟೆಗಳಲ್ಲಿ ಇಡೀ ಪುಸ್ತಕೋತ್ಸವದ ೩೪೬ ಸ್ಟಾಲುಗಳನ್ನು ಸುತ್ತಿದ್ದೆ, ಅವರು ಕೇವಲ ಹತ್ತು ಸ್ಟಾಲು ಮುಗಿಸಿದ್ದರು !
Z : !!!!!!!!!!!!!!!!!!!!!!!!!!!!!!!!!!!!!!
ನಾನು : ಹೂಂ!!! ನನ್ನ ಕಸಿನ್ನು "ಇರು, ನಾವು ಹೊರಡುತ್ತೀವಿ" ಅಂದರು. ಅವರು ನಿಧಾನಕ್ಕೆ ಒಂದೊಂದೇ ಮಳಿಗೆಗೆ ಹೋಗಿ ಇಣುಕುತ್ತಿದ್ದರು, ನಾನು ಮುಂದೆ ನಡೆಯುತ್ತಾ ನನ್ನ ಪುಸ್ತಕಪ್ರೇಮಿ ಮಿತ್ರರಿಗೆಲ್ಲಾ ಫೋನಿಸಿ ಹೊಟ್ಟೆ ಉರಿಸುತ್ತಿದ್ದೆ. ಗಂಟೆ ಎರಡಾಯ್ತು,ಎರಡುವರೆಯಾಯ್ತು, ಇವರು ಹೊರಬರುವ ಲಕ್ಷಣ ಕಾಣಿಸಲಿಲ್ಲ. ನನ್ನ ಬ್ಯಾಗಿನಲ್ಲಿನ ಶ್ಯಾವಿಗೆ ಬಾತಿನ ಕಡೆಗೆ ನನ್ನ ಗಮನವನ್ನು ಹರಿಸದೇ ನನ್ನ ಕೈಯಲ್ಲಿ ಇರಲಾಗುತ್ತಿರಲಿಲ್ಲ. ಕಡೆಗೆ ನನ್ನ ಕಸಿನ್ನು, " ಊಟಕ್ಕೆ ಜಾಗ ಇದೆಯಾ ?" ಅಂತ ಕೇಳಿದಳು. ನಾನು - "ಹೂ...ಕ್ಯಾಂಟೀನ್ ಇದೆ" ಅಂದೆ. ಹೊರಗೆ ಬಂದು ಇವರು ಅಲ್ಲೇ ಸಿಕ್ಕ ತಿಂಡಿ ಕೊಂಡರು, ನಾನು ಶ್ಯಾವಿಗೆ ಬಾತನ್ನು ತಿಂದೆ. ಆಗ ಘಂಟೆ ಮೂರುವರೆ.
Z : ಅಬ್ಬಾ !!
ನಾನು : ಇವರಿಬ್ಬರು, "ನಾವು ಮತ್ತೆ ಒಳಗೆ ಹೋಗುತ್ತೇವೆ" ಅಂದರು. ನಾನು ಹೊರಡುತ್ತೇನೆ ಅಂತ ಹೇಳಿ ಅಲ್ಲಿಂದ ಹೊರಬಿದ್ದೆ.ಡೈರೆಕ್ಟ್ ತೇಜಕ್ಕನ ಮನೆಗೆ ಬಂದು, ಅವರಿಗೆ ಪುಸ್ತಕ ಕೊಟ್ಟು, ಹಾಯಾಗಿ ಕೂತು ಪಟ್ಟಾಂಗ ಹೊಡೆದು, ಅಮ್ಮ ವಹಿಸಿದ ಕೆಲವು ಕೆಲಸ ಮುಗಿಸಿಕೊಂಡು, ನಾನು ಮನೆಯಲ್ಲಿ ಸೆಟಲ್ ಆದಾಗ ಘಂಟೆ ಎಂಟು !
Z : ಉಶ್ಶ್ಶಪ್ಪಆಆಆಆಆಆಆಆಆಆಆಆಆಆಆಆಆಆ !
ನಾನು : ಇದನ್ನ ನಾನು ಹೇಳಬೇಕು.
Z :proxy ಹೊಡೆದೆ.
ನಾನು : ಬೇಕಿರಲಿಲ್ಲ.
Z : ಓಕೆ.
ನಾನು : ಮುಂದಿನ ಬುಕ್ ಫೆಸ್ಟಿವಲ್ ಗೆ ಲಿಸ್ಟ್ ರೆಡಿ ಮಾಡ್ಕೊತಿನಿ. ಹೊರ್ಟೇ.
Z : :) :) :)
ಜೀವನದೊಂದಿಗಿನ ನಮ್ಮ ಮಾತು lifetime ! ಇದರಲ್ಲಿ incoming -ಊ free outgoing -ಊ free !
ನನ್ನ ज़िंदगीಯೊಂದಿಗಿನ nonstop ಗುಸುಗುಸುವನ್ನು ಇಲ್ಲಿ ಬಿಚ್ಚಿಟ್ಟಿದ್ದೇನೆ.
Subscribe to:
Post Comments (Atom)
ಉತ್ತರಾಯಣ ೩
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ನಾನು : There is always a next time. Z : ಹೌದಾ ? ನಾನು : ಹೌದು. Z : ಪ್ರತೀ ಸಲವೂ ಹೀಗೆ ಆದರೆ ಗತಿಯೇನು ? ನಾನು : ಅದಕ್ಕೆ ನಿನ್ನ pessimistic ಅಂತ ಬೈಯ್ಯ...
-
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಬ್ಲಾಗಿನ ಹುಟ್ಟು ಹಬ್ಬ ಮತ್ತು ಹೊಸ ವರ್ಷ ಯಾವಾಗ್ಲು ಒಟ್ಟಿಗೆ ಬರತ್ತೆ. ಆದರೆ, ಮತ್ತೆ ಅದೇ flash back ಗೆ ಹೋಗಿ, ಅದೇ ...
2 comments:
Amoghavada sadhane. 150 rinda 1500..
Mundina varsha innondu sonnena?
ನಾ ಹೋಗೇ ಇಲ್ಲ :(
Post a Comment