ನಮಸ್ಕಾರ. ವಾರ್ತೆಗಳು. ಓದುತ್ತಿರುವವರು Z .
Head ruled ಅವರ ಕೊಲ್ಲುವ ಮೌನದ research ಭರ್ಜರಿಯಾಗಿ ಸಾಗುತ್ತಿದೆ.ಆದರೆ ಬೊಂಬೆಗಳ ವಿಡಿಯೋ ತೆಗೆಯುವಾಗ ಮಾತ್ರ ಕೊಟ್ಟ ಬ್ರೇಕ್ ಸಾರ್ಥಕವಾಗಿದೆ.
Head ruled ಅವರ ಮೌನ ಅರ್ಥಗಳಿಗಿಂತ ಅನರ್ಥ ಹಾಗೂ ನಾನಾರ್ಥಗಳಿಗೆ ಎಡೆಮಾಡಿಕೊಟ್ಟಿದೆ ಎಂಬುದು ಅವರ sudden ಮೌನದ ತನಿಖೆ ನಡೆಸಿದವರ ವರದಿ. ಕೆಲವರು "ಇವಳು ನಮ್ಮ ಲಕ್ಷ್ಮೀ ಅಲ್ಲವೇ ಅಲ್ಲ " ಎಂದು ನಮ್ಮನ್ನೂ ಸೇರಿಸಿ ಸಾರಾಸಗಟಾಗಿ ಆಪಾದಿಸಿ ಅನರ್ಥಕ್ಕೆ ಎಡೆ ಮಾಡಿಕೊಟ್ಟರೆ, ಇನ್ನು ಕೆಲವರು "ph.D entrance tension ಇರಬೇಕು", "mood ಸರಿಗಿಲ್ಲ ಅನ್ಸತ್ತೆ...ಯಾವ್ದಾದ್ರು ಪುಸ್ತಕವನ್ನು ಕೊಂಡುಕೋಬೇಡಾ ಅಂದ್ರಾ ಯಾರಾರು ? ", "ಮಳೆಗೆ ಕಾರಣ ಇವಳ ಮೌನವೇ " ಮತ್ತು "ಏನೋ ಪಾ...ಇತ್ತೀಚೆಗೆ ನಮ್ಮನ್ನೆಲ್ಲ ಮರ್ತೇ ಹೋಗಿದಾಳೆ" ಇತ್ಯಾದಿ ವ್ಯಾಖ್ಯಾನಗಳು ಕೇಳಿಬರುತ್ತಿವೆ. ph.D ವಿಷಯಕ್ಕೆ ಮಾತ್ರ ತಲೆಯಲ್ಲಾಡಿಸಿ ನಕ್ಕು ಸಮ್ಮತಿ ಸೂಚಿಸಿರುವ head ruled ಮಿಕ್ಕೆಲ್ಲದಕ್ಕೂ confused looks ಮತ್ತು ಅನರ್ಥದ ಕಾರಣಕ್ಕೆ ದರಿದ್ರವಾದ ಲುಕ್ ಒಂದನ್ನು ಎಸೆದಿದ್ದಾರೆ.
ಇದರ ಮಧ್ಯೆ ನಮ್ಮಿಬ್ಬರ ಸಖಿ ಹಿರಣ್ಮಯಿಯು [ Nokia phone ] ನೇಣುಹಾಕಿಕೊಂಡುದರ ಶೋಕ ತಡಿಯಲಾಗದೇ, ಸದ್ಯೋಜಾತನ ಮೊರೆ ಹೋಗಲಿಕ್ಕೆ ಪತಿ ಸಂಜೀವಿನಿ ವ್ರತದಂತೆ "ಸಖಿ ಸಂಜೀವಿನಿ ವ್ರತ" ದ ಮಂತ್ರಗಳನ್ನು ತಾವೇ ಕಂಡುಹಿಡಿದು,[ಪತಿಸಂಜೀವಿನಿ ವ್ರತದ ಮಂತ್ರಗಳ modification] ಬಾಯ್ಬಿಟ್ಟು ಮಂತ್ರ ಹೇಳುವ ಅಧಿಕಾರವಿಲ್ಲವಾದ್ದರಿಂದ ಮೌನವಾಗಿಯೇ ಓದಿ, ವ್ರತವನ್ನು ಮಾಡಿ, ಶಿವನ ಮೆಚ್ಚಿಸಿ ಹಿರಣ್ಮಯಿಗೆ ಜೀವ ತರಿಸಿದ್ದಾರೆ. ನೋಕಿಯಾ ಡೀಲರ್ ಬಳಿ ಭಾರೀ ಜಗಳವನ್ನೇ ನಿರೀಕ್ಷಿಸಿದ್ದ ನಮ್ಮ ತಂದೆ ಇವರು ಮನೆಯ ಹೊರಗೆ ಕಾಲಿಡದಿರುವುದನ್ನು ನೋಡಿ ಆಶ್ಚರ್ಯದಿಂದ ಹುಬ್ಬೇರಿಸಿದ್ದಾರೆ. ನಮಗೆ ವ್ರತದ ಬಗ್ಗೆ ಹೇಳಿ ಎಂದರೆ ಯಥಾ ಪ್ರಕಾರ blank look.
"ಯಾಕೆ ಈಥರ silent ಆಗಿದ್ದುಕೊಂಡು ಕೊಲ್ತಿಯಾ ?" ಅಂತ ಮನೆಯವರು ಸಿಕ್ಕಾಪಟ್ಟೆ ಕೂಗಾಡುವುದನ್ನು ಇವರು ಕೇಳಿದರೆ ಮೌನ ಮುರಿಯುವ ಸಾಧ್ಯತೆ ಇದೆ ಎಂದು ನಮ್ಮ ನಂಬಿಕೆ. ನಮ್ಮ ಅಂದಾಜಿನ ಪ್ರಕಾರ ಇನ್ನೆರಡು ತಿಂಗಳಾದರೂ ಈ ರಿಸರ್ಚು ನಡೆಯಲಿದೆ.ಆದರೆ ನಮ್ಮ ಅಂದಾಜಿನ ಸತ್ಯಾಸತ್ಯತೆಗಳ ಬಗ್ಗೆ ತಲೆಯಲ್ಲಾಡಿಸಲೂ ಸಹ ಇವರು ನಿರಾಕರಿಸಿದ್ದಾರೆ.
ಏತನ್ಮಧ್ಯೆ head ruled ಆಂಗ್ಲವನ್ನು ಮರೆತುಹೋಗಿದ್ದಾರೆ ಎಂಬ ಆಪಾದನೆಯನ್ನು ಮೌನವಾಗಿ ಸಹಿಸಿ ಎಲ್ಲರಿಗೂ ಆಶ್ಚರ್ಯದ shock ಕೊಟ್ಟು ಆಂಗ್ಲದ ಹೊಸದೊಂದು ಬ್ಲಾಗನ್ನು ಪ್ರಾರಂಭಿಸಿದ್ದಾರೆ[ನಮಗೆ ಹೇಳದೇ]. ಆದರೆ, ಅವರಿಗಿಂತ ನಾವೇ ಹೆಚ್ಚಾಗಿ ನೆಟ್ಟಿನಲ್ಲಿ ಬಿದ್ದಿರುತ್ತೇವೆಯಾದ್ದರಿಂದ ಅದರ ಲಿಂಕನ್ನು ಪತ್ತೆ ಮಾಡುವುದರಲ್ಲಿ ಯಶಸ್ವಿಯಾಗಿದ್ದೇವೆ. ಅದರ ಲಿಂಕ್ ಇಲ್ಲಿದೆ. ಲಿಂಕಿಗೆ ಭೇಟಿಕೊಟ್ಟಾಗ landline ನಲ್ಲಿ ಆದ ಮಾತುಕತೆಗಳು ನೋಡಸಿಗುತ್ತವೆ. ಅದೂ ಎರಡೇ ವಾಕ್ಯ ! [ಇದನ್ನು ಕೇಳಿಸಿಕೊಂಡವರು ತಲ್ಲಣಿಸಿಹೋಗಿದ್ದಾರೆ ಎಂಬುದು ಸೀಕ್ರೆಟ್ ಬ್ಯೂರೋ ರೆಪೋರ್ಟು] . ಅವರಿಗೆ ಆಕಸ್ಮಿಕವಾಗಿ ಹುಶಾರು ತಪ್ಪಿ, ವಿಧಿವಿಪರೀತದ ಆಟದಲ್ಲಿ ಸೋತಿರುವುದನ್ನೂ ನಾವು ಈ ಬ್ಲಾಗಿನಲ್ಲಿ ಕಾಣಬಹುದು.
ಇಲ್ಲಿಗೆ ವಾರ್ತಾಪ್ರಸಾರ ಮುಕ್ತಾಯವಾಯ್ತು. ನಮ್ಮ ಮುಂದಿನ ಭೇಟಿ ಎರಡು ತಿಂಗಳಾದ ಮೇಲೆ (ಪ್ರಾಯಶಃ), head ruled ಅವರ research analysis ಜೊತೆಗೆ. ಧನ್ಯವಾದಗಳು.
ಜೀವನದೊಂದಿಗಿನ ನಮ್ಮ ಮಾತು lifetime ! ಇದರಲ್ಲಿ incoming -ಊ free outgoing -ಊ free !
ನನ್ನ ज़िंदगीಯೊಂದಿಗಿನ nonstop ಗುಸುಗುಸುವನ್ನು ಇಲ್ಲಿ ಬಿಚ್ಚಿಟ್ಟಿದ್ದೇನೆ.
Subscribe to:
Post Comments (Atom)
ಉತ್ತರಾಯಣ ೩
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ನಾನು : There is always a next time. Z : ಹೌದಾ ? ನಾನು : ಹೌದು. Z : ಪ್ರತೀ ಸಲವೂ ಹೀಗೆ ಆದರೆ ಗತಿಯೇನು ? ನಾನು : ಅದಕ್ಕೆ ನಿನ್ನ pessimistic ಅಂತ ಬೈಯ್ಯ...
-
ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...
-
ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ಬ್ಲಾಗಿನ ಹುಟ್ಟು ಹಬ್ಬ ಮತ್ತು ಹೊಸ ವರ್ಷ ಯಾವಾಗ್ಲು ಒಟ್ಟಿಗೆ ಬರತ್ತೆ. ಆದರೆ, ಮತ್ತೆ ಅದೇ flash back ಗೆ ಹೋಗಿ, ಅದೇ ...
4 comments:
ಸರಿ ಮ (ಮುಂದೆ ಏನು ಹೇಳ್ತೀನಿ (ಹಾಡ್ತೀನಿ) ಅಂತ ನಿನಗೇ ಗೊತ್ತಿದೆ.)
ವಾರ್ತೆ ಥರಹ ಬರೆದರುವುದು ಚೆನ್ನಾಗಿದೆ :)
ATB :)
ವರಾತ ವಾಚಕೋತ್ತಮರಾದ Z ಅನ್ನೇ ಕೊಲ್ಲುವ ಮನಸ್ಸಾಗಿದೆ. ನಮ್ಮ ರಿಸರ್ಚ್ ಅನಾಲಿಸಿಸ್ ಪ್ರಕಾರ, ಶೋಕಿಯಾಗಿಯೇ ಇದ್ದ ನೋಕಿಯಾ, ಆಗಾಗ ಶಾಕ್ಇಯಾ ಆಗುತ್ತಾ, ಶೋಕಇಯಾ ಕೂಡಾ ಆಗುತ್ತಿರುವುದೇ ಪಿಹೆಚ್ಚುಡಿಗೆ ಕಾರಣ ಅಂತ ತಿಳಿದುಬರತೊಡಗಿದೆ.
ದೀಪಾವಳಿಗೆ ಶುಭಾಶಯಗಳು
@ ಅಂತರ್ವಾಣಿ :
ನಿಮ್ಮ ಆಶಯಗಳನ್ನು head ruled ಗೆ ತಿಳಿಸಲಾಗುತ್ತದೆ.
@ಅಸತ್ಯ ಅನ್ವೇಷಿ :
ವರಾತ ವಾಚಕೋತ್ತಮರಾದ Z ಅನ್ನೇ ಕೊಲ್ಲುವ ಮನಸ್ಸಾಗಿದೆ. -----> ನಮ್ಮ ವರಾತ ಕಂಡು ಅಸೂಯೆಯಿಂದ ಈ ಮಾತನ್ನು ಹೇಳಿದ್ದೀರಿ ಎಂದು ನಮ್ಮ ದಿವ್ಯ ದೃಷ್ಟಿಗೆ ಗೋಚರವಾಗಿದೆ ;-) ಮತ್ತೂ,ಆತ್ಮಕ್ಕೆ ಸಾವಿಲ್ಲ ಎಂಬ ಸಾರ್ವಕಾಲಿಕ ಸತ್ಯವನ್ನು ತಾವು ಅನ್ವೇಷಿಸಬೇಕೆಂದು ನಾವು ನಿಮ್ಮ ಏಕಸದಸ್ಯ ಬ್ಯೂರೋದ ಸರ್ವಸದಸ್ಯರಲ್ಲಿ ಆಗ್ರಹಪಡಿಸುತ್ತೇವೆ. for a change, ಸತ್ಯವನ್ನು ಅನ್ವೇಷಿಸಿ...:) :) :)
ತಮ್ಮ ರಿಸರ್ಚು ನಮಗೆ ಅರ್ಥವಾಗದು.ಇದಕ್ಕೆ head ruled ಅವರ ಪ್ರತಿಕ್ರಿಯೆಯನ್ನು ಎರಡು ತಿಂಗಳು ಬಿಟ್ಟು ನೋಡಬೇಕೆಂದು ಹೇಳಲಿಚ್ಛಿಸುತ್ತೇವೆ.
ತಮಗೂ ಸಹ ದೀಪಾವಳಿಯ ಶುಭಾಶಯಗಳು.
neevu nimma barahadalli vibhinnathe na yathecchavaagi pradarshisiddeera... :-) oLLe vaarthe..
All the best for ur studies.. :-)
Post a Comment