Sunday, October 5, 2008

ಕೊಲ್ಲುವ ಮೌನ ಅಂತೆ...ಹೇಗಿರತ್ತೆ ಅದು ?

Z : ನಿಂಗೆ ಜನ್ಮದಲ್ಲಿ ಗೊತ್ತಾಗಲ್ಲ ಬಿಡು ಇದು.

ನಾನು : ನೋಡು ಪ್ಲೀಸ್ ಈ ಥರ ಎಲ್ಲಾ under- estimate ಮಾಡ್ಬೇಡ ನನ್ನನ್ನ.

Z : ಎನ್ನೇನ್ ಮತ್ತೆ? ನಿಂಗೆ ಸೈಲೆಂಟಾಗಿ ಇರಕ್ಕೆ ಎಲ್ಲ್ ಬರತ್ತೆ?

ನಾನು : ನನಗೆ ಸೈಲೆಂಟಾಗಿರಕ್ಕೆ ಬರತ್ತೆ.

Z : ಭ್ರಮೆ.

ನಾನು : ಶಟಪ್ !ನೋಡು...ಈಗ ನಾನು ಈ "ಕೊಲ್ಲುವ ಮೌನ" ದ ಬಗ್ಗೆ ರಿಸರ್ಚು ಮಾಡ್ಲೇ ಬೇಕು. ಅದ್ ಹೇಗಿರತ್ತೆ ...ಯಾರ್ ಯಾರನ್ನ ಎಲ್ಲೆಲ್ಲಿ ಹೇಗ್ ಹೇಗೆ ಯಾವ್ ಯಾವ್ ಥರ ಕೊಲ್ಲತ್ತೆ ಅಂತ ನಾನ್ ನೋಡ್ಬೇಕ್.

Z : ನೀನು "ಕೊಲ್ಲುವ ಮೌನ" ನ action movie ಅಂದುಕೊಂಡಿದ್ಯಾ ಮಾ ಮಹತಾಯಿ ? ಭ್ರಮೆ !
ನೋಡು...ನೀನು ಆ ಬಿಗ್ ಬ್ಯಾಂಗ್ ಸ್ಫೋಟನ imitate ಮಾಡೋ experiment ನ ಮತ್ತೆ ಮಾಡ್ತಿನಿ ಅಂದ್ರೂ ನಾನ್ ಬೇಡಾ ಅನ್ನಲ್ಲ....ನಿನ್ನ ಕೈಲಿ ಆಗ್ದೇ ಇರೋ ಇಂಥಾ ಕೆಲ್ಸ ಎಲ್ಲ ಮಾಡ್ಬೇಡಾ....

ನಾನು : ನೋಡು ಎಂಥಾ hopeless negative approach ನಿಂದು! ಇನ್ನು ಶುರು ನೇ ಮಾಡಿಲ್ಲ experiment ನ...ಅಷ್ಟರಲ್ಲಿ ಶಕುನ ನುಡಿದುಬಿಟ್ಟಳು ದೊಡ್ಡ್ ಶಕುನದ ಪಕ್ಷಿ ಥರ. ಆಗಲ್ವಂತೆ ನನ್ನ ಕೈಲಿ. ಏನಾದ್ರು ಸರಿ ...ನಾನ್ ಸೈಲೆಂಟಾಗಿರೋದನ್ನ ಕಲಿಲೇ ಬೇಕು.

Z : ಮಕ್ಕಳು ಲಾಲಿಪಪ್ಪು ಬೇಕೇ ಬೇಕ್ ಅಂತ ಹಠ ಹಿಡ್ಯೋ ಹಾಗೆ ಹಠ ಹಿಡಿಬೇಡ.

ನಾನು :ಯಾಕೆ ಹಠ ಹಿಡಿಬಾರ್ದು ?

Z : ಲೋಕದ ಆರೋಗ್ಯಕ್ಕೆ ಒಳ್ಳೇದಲ್ಲ !

ನಾನು : ಅದು ಲೋಕದ ಕರ್ಮ ! ನನ್ನದಲ್ಲ.

Z : ನೋಡು head ruled... ಮಾತಾಡದೂ ಒಂದು ಟಾಲೆಂಟು.

ನಾನು : ಇರ್ಬಹುದು. ಹಾಗೇ ಸೈಲೆಂಟಾಗಿರೋದು ಒಂದು ಟಾಲೆಂಟಂತೆ.

Z : ಇರ್ಲಿ...ಅದಕ್ಕೆ ?

ನಾನು : ನಾನು ಆ ಟಾಲೆಂಟ್ ನ develop ಮಾಡ್ಕೋಬೇಕು ಈಗ. ನಾನು ಯಾವಾಗ್ ಬೇಕೋ ಆವಾಗ ನನ್ನ ಒರಿಜಿನಲ್ ಇಮೇಜ್ ಗೆ ವಾಪಸ್ ಬರ್ಬಹುದು. ಆದ್ರೆ ಈಗ...ಐ ವಾಂಟ್ ಟು ಟ್ರೈ ದ ಇಮೇಜ್ ಆಫ್ ಎ ಸೈಲೆಂಟ್ ಗರ್ಲ್.

Z : ಅಂಗಡಿಗೆಲ್ಲ ಹೋಗ್ಬೇಕಾದ್ರೆ ಮಾತಾಡ್ಬೇಕಾಗತ್ತಲ್ಲ....

ನಾನು : ಶಾಪಿಂಗ್ ಮಾಲ್ ಗೆ ಹೋಗೋದು. ಅಲ್ಲೆಲ್ಲ ನೋ ಮಾತು ನೋ ಕಥೆ. ಜಸ್ಟ್ ಕ್ಯಾಶ್ ಅಂಡ್ ಕ್ಯಾರಿ.

Z : ಮನೆಗೆ ಯಾರಾದ್ರು ಬಂದ್ರೆ ?

ನಾನು : ಸುಮ್ನೆ ಎಲ್ಲಾದಕ್ಕು ಒಂದು ಸ್ಮೈಲು, ಮತ್ತೆ ಮುಖದಲ್ಲೊಂದು ಕನ್ ಫೂಸ್ಡ್ ಲುಕ್ ಕೊಡೋದು. ಮಿಕ್ಕಿದ್ದನ್ನೆಲ್ಲ ಅಮ್ಮ ಮಾತಾಡ್ಕೋತಾರೆ. ಬರೋರೆಲ್ಲಾ ಒಂದೇ ಪ್ರಶ್ನೆ ಕೇಳ್ತಾರೆ. ನಂಗೆ ಆ ಪ್ರಶ್ನೆ ಕೇಳಿದರೆ ಇರಿಟೇಟ್ ಆಗತ್ತೆ ಅಂತ ಅಮ್ಮಂಗೆ ಗೊತ್ತಿದೆ. ಅದಕ್ಕೆ ಮೊದ್ಲಿಂದಲೂ ಆ ಪ್ರಶ್ನೆಗಳನ್ನ ಅಮ್ಮ ನೇ ಉತ್ತರಿಸುತ್ತಿದ್ದರು. ಈಗ್ಲೂ ಹಾಗೇ continue ಆಗತ್ತೆ ಅಷ್ಟೇ.

Z : ಫೋನ್ ಕಥೆ ?

ನಾನು : ಯೆಸ್. ಹಿರಣ್ಮಯಿ...ನೆನ್ನೆ ಇದರ ಬಗ್ಗೆ ನಾನು ಯೋಚ್ನೆ ಮಾಡ್ತಿದಿನಿ ಅಂತ ಗೊತ್ತಾಗಿ, ನಾನು ಇನ್ನು ಮಾತಾಡೊದು ದುರ್ಲಭ ಅಂತ ಮನಗಂಡು ಅವಳು ನೇಣು ಹಾಕೊಂಡ್ ಬಿಟ್ಲು. ಶ್ರದ್ಧಾಂಜಲಿ ಮತ್ತು ಶೋಕ ಸಭೆ ನಡಿಯುತ್ತದೆ ಮೂರ್ ದಿನ. ಆಮೇಲೆ ಮುಂದಿನ ಕಾರ್ಯಗಳ ಬಗ್ಗೆ ಯೋಚನೆ.

Z : ಬ್ಲಾಗು ?

ನಾನು : ಮಿಕ್ಕಿದ್ದೆಲ್ಲ ಬ್ಲಾಗ್ ಗಳು ವರ್ಕ್ ಆಗ್ತವೆ. ನಿನ್ನ ಜೊತೆ ಮಾತಾಡಲ್ಲ ಅಷ್ಟೇ.

Z : ಇವೆಲ್ಲ ಸ್ಕೋಪ್ ಬೇಡಾ...

ನಾನು : ನನ್ನನ್ನ discourage ಮಾಡೋರ್ ಹತ್ರ ನಾನ್ ಮಾತಾಡಲ್ಲ.

Z : ಇಲ್ಲ...ಸಾರಿ, ತಪ್ಪಯ್ತು. ಬೇರೆಯೋರ್ ಹತ್ರ ಎಲ್ಲ ಸೈಲೆಂಟಾಗಿರು ಬೇಕಾದ್ರೆ...ಆದ್ರೆ ನಿನ್ನ ಸೈಲೆನ್ಸು "ಕೊಲ್ಲುವ ಮೌನ" ಟಾರ್ಗೆಟ್ ರೀಚಾಯ್ತ ಇಲ್ವಾ ಅಂತ ಪ್ಲೀಸ್ ಹೇಳು.

ನಾನು : ....


Z : ಏನ್ ಲುಕ್ ಕೊಡ್ತ್ಯ ?

ನಾನು : ....


Z : ಮಾತಾಡೇ !!!

ನಾನು : .......


Z : ಅಯ್ಯೋ...ಹಠಕ್ಕೆ ಬಿದ್ಲಲ್ಲಪ್ಪಾ.....ಮಾತೇ ನಿಲ್ಲಿಸಿಬಿಟ್ಟಳಲ್ಲ...ಲೇ ಪ್ಲೀಸ್ ಮಾತಾಡು. ನನ್ನ ಜೊತೆ ಮಾತ್ರ ಮಾತಾಡು ! ಇನ್ಯಾರ್ ಜೊತೆ ಮಾತಾಡದಿದ್ರೂ ಓಕೆ !

ನಾನು : :-)

Z : ದರಿದ್ರ ಸ್ಮೈಲ್ ಬೇರೆ...ಹೇಳು ಮಾತಾಡ್ತ್ಯೋ ಇಲ್ವೋ ?

ನಾನು : ...........

Z : ಛೆ !

8 comments:

Harisha - ಹರೀಶ said...

ಇದೊಂದು ಕಡಿಮೆ ಇತ್ತು...

ಚೆನ್ನಾಗಿದೆ ನಿಮ್ಮ ಕಲ್ಪನೆ.. ಆದ್ರೆ ನಾನೂ Z ಕಡೆ.. ನಿಮ್ಮಿಂದಾಗಲ್ಲ ಅದು. ಸುಮ್ನೆ ಬೇರೆ ಏನಾದ್ರೂ ಯೋಚಿಸಿ

Sridhar Raju said...

maaatu beLLi...mouna kaage bangaara...so silent aag maatadbidi.... :-)

ಅಂತರ್ವಾಣಿ said...

ಮಾ,

ಬೆಳ್ಳಿಗ್ಗಿಂತ ಚಿನ್ನಕ್ಕೆ ಬೆಲೆ ಜಾಸ್ತಿ. ಇದು ನನ್ನ policy.

Anveshi said...

ಶಟಪ್ ಅಂದ ತಕ್ಷಣ ಕೊಲ್ಲುವ ಮೌನ ಆರಂಭವಾಗುತ್ತದೆಯಲ್ಲಾ.... ಅದು ಯಾರನ್ನು ಕೊಲ್ಲುವುದು? ಮೌನವನ್ನೋ (ಜೋರಾಗಿ ಸಿಡಿಯುವ ಮೂಲಕ ಅಥವಾ ಜೋರಾಗಿ ಅಳುವ ಮೂಲಕ!)

sachidananda K.N said...

in mele full sailentaa?

Anveshi said...

ಮೌನ ಕೊಲ್ತಾ ಇದೇ........... ಬೇಗ್ಬನ್ನೀ.....
ಉಫ್.....!!!!

Parisarapremi said...

ನೀನ್ ಸೈಲೆಂಟಾಗೋದೂ ಉಂಟಾ ಪ್ರಪಂಚದಲ್ಲಿ?? ಪ್ರಳಯಕಾಲ ಸಮೀಪಿಸುತ್ತಿದೆಯೆಂದರ್ಥ.

PaLa said...

ಈ ತರದ ಭಯಾನಕ ಪ್ರಯೋಗ ಎಲ್ಲಾ ಮಾಡ್ತೀರ ನೀವು?

ಉತ್ತರಾಯಣ ೩

ನಾನು: ಬೃಂದಾವನಕ್ಕೆ ಹೊರಡಲು ನಾಲ್ಕು ಘಂಟೆಯಷ್ಟೊತ್ತಿಗೆ ರೆಡಿ ಇರಬೇಕು ಎಂದು ಮ್ಯಾನೇಜರ್ ವೆಂಕಟೇಶ್ ಅವರು ಹೇಳಿದ್ದರು. ಇವರೆಲ್ಲರೂ ಊಟ ಮಾಡಿ, ಮಲಗಿ, ಎದ್ದು ರೆಡಿಯಾಗು...